ತಾಲಿಬಾನಿಗಳನ್ನು ತಬ್ಬಲಿ ಮಾಡುತ್ತಿರುವ ಇಲ್ಲಿನ ಡೋಂಗಿಗಳು!
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ಇಲ್ಲಿನ ಮುಸಲ್ಮಾನರು ಬಿಡಿ, ಒಬ್ಬನೇ ಒಬ್ಬ ವಿಚಾರವ್ಯಾಧಿಯಾಗಲಿ, ಡೋಂಗಿ ಬುದ್ಧಿಗೇಡಿ ಜೀವಿಯಾಗಲಿ, ಮತಿಗೆಟ್ಟ ಸಿನಿಮಾ ನಟರುಗಳಾಗಲಿ, ಮಾತೆತ್ತಿದ್ದರೆ ಜಾತ್ಯತೀತತೆಯ ಬಗ್ಗೆ ಪರಚಿಕೊಳ್ಳುವ ರಾಜಕಾರಣಿಗಳಾಗಲಿ ಯಾವೊಬ್ಬನಾದರೂ ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಧರ್ಮಾಧಾರಿತ ಮಾನವ ವಿರೋಽ ದೌರ್ಜನ್ಯ ಹಿಂಸಾಚಾರವನ್ನು ಪ್ರತಿಭಟಿಸಿದನೇ ಎಂದು ನೋಡಿದರೆ ಹುಹೂಂ ಅಂತ ಗುಂಡಿಗೆ ಇರುವ ಒಬ್ಬ ಮಗನೂ ನಮ್ಮ ದೇಶದಲ್ಲಿ ಕಾಣುತ್ತಿಲ್ಲ. ಎಲ್ಲರೂ ನುಂಗಬಾರದ್ದು ನುಂಗಿದವರಂತೆ ಮೌನವಾಗಿದ್ದಾರೆ.
ಅದೇ ಆಫ್ಘಾನಿಸ್ತಾನದ ಒಂದು ಊರಿನಲ್ಲಿ ಆರ್‌ಎಸ್‌ಎಸ್ ಸ್ಥಾಪನೆಗೊಂಡು ದಂಡ ಹಿಡಿದು ಪಥಸಂಚಲನ ಮಾಡಿದ್ದರೆ ಇದೇ ಇಲ್ಲಿನ ಎಡಗೈ ನೆಕ್ಕುವ ಅಯೋ ಗ್ಯರು ‘ಅಯ್ಯೋ ಹಿಂದೂ ಭಯೋತ್ಪಾದನೆ’ ಎಂದು ಎದೆಬಡಿದುಕೊಂಡು ಪ್ರತಿಭಟಿಸಿ ಹೇಳಿಕೆ ಕೊಡುತ್ತಿದ್ದರು ಮತ್ತು ಅದು ಜಗತ್ತಿಗೆ ಕೇಳಿಸುವಂತೆ ಕೆಲದರಿದ್ರ ಮಾಧ್ಯಮಗಳು ಪ್ರಚಾರಮಾಡುತ್ತಿದ್ದವು. ಆದರೆ ತಾಲಿಬಾನ್ ಗಳೆಂಬ ಮನುಷ್ಯರೂಪಿ ರಕ್ಕಸರು ಬಂದೂಕು ಹಿಡಿದು ರಿಯಲ್ ವಿಡಿಯೊ ಗೇಮ್ ಆಡುತ್ತಿದ್ದರೆ ಇಲ್ಲಿನ ಸ್ವಯಂಘೋಷಿತ ಪ್ರಗತಿಪರರು ವಿಚಾರವಾದಿಗಳು ಜಾತ್ಯತೀತರು ಮೂರನ್ನೂ ಮುಚ್ಚಿಕೊಂಡು (ಕಣ್ಣು ಕಿವಿ ಬಾಯಿ) ಮೂರ್ಛೆ ಹೋಗಿದ್ದಾರೆ.
ಕೆಲವರು ಅದೆಷ್ಟು ಜಾಣ ಹೇಳಿಕೆಗಳನ್ನು ನೀಡುತ್ತಿದ್ದಾರೆಂದರೆ, ತಾಲಿಬಾನ್‌ಗಳನ್ನು ನೇರವಾಗಿ ಖಂಡಿಸಲು ಧೈರ್ಯವಿಲ್ಲದೆ ಸಂಘ ಪರಿವಾರವನ್ನು ಮಧ್ಯದಲ್ಲಿ ಎಳೆತಂದು ತಾಲಿಬಾನ್ ರಕ್ಕಸರೊಂದಿಗೆ ಹೋಲಿಸಿ ‘ನಮ್ಮ ದೇಶದಲ್ಲೂ ತಾಲಿಬಾನ್‌ಗಳಿದ್ಧಾರೆ, ಆರ್‌ಎಸ್‌ಎಸ್, ಬಿಜೆಪಿ ತಾಲಿಬಾನ್ ಮನಸ್ಥಿತಿಯ ಸಂಘಟನೆ’ ಎಂದು ನರಿಪ್ರಸಾದನೊಬ್ಬ ಅರಚುತ್ತಾನೆ.
ಅವನ್ಯಾವನೋ ಒಬ್ಬ ಸದಾ ಅಂಡು ಸುಟ್ಟುಕೊಂಡಿರುವವನಂತೆ ವರ್ತಿಸುವ ಹಿಂಸಾತ್ಮಕ ನಟನೊಬ್ಬ ‘ಅಸಹಿಷ್ಣುಗಳಿಗೆ ಭಾರತದಲ್ಲಿ ಇರಲಾಗದಿದ್ದರೆಆಫ್ಘಾನಿಸ್ತಾನಕ್ಕೆ ಹೋಗಬಹುದು’ ಎಂದು ಚಾಟಿ ಬೀಸಿದ ಹಿರಿಯನಟ ಅನಂತ್‌ನಾಗ್ ಅವರಿಗೇ ಬುದ್ಧಿ ಹೇಳುತ್ತಾನೆ. ಹೊರತು ತಾಲಿಬಾನ್‌ಗಳನ್ನು ದೆವ್ವ ಮೆಟ್ಟಿದವನಂತೆ ಖಂಡಿಸಲಾರ. ಇಂಥ ಹೇಳಿಕೆಗೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ‘ಆರ್‌ಎಸ್‌ಎಸ್ ಮತ್ತು ತಾಲಿಬಾನ್‌ಗಳನ್ನು ಹೋಲಿಸುವುದು ತನ್ನ ತಾಯಿಯನ್ನು ವೇಶ್ಯೆಯೊಂದಿಗೆ ಹೋಲಿಸಿದಂತೆ’ ಎಂದು ಉತ್ತರಿಸಿದ್ದರು. ಮತ್ತೊಬ್ಬ ತಿಕ್ಕಲು ಕಾವಿಧಾರಿಯೊಬ್ಬ ತುಪ್ಪ ತಿನ್ನುವವರಿಂದ ದೇಶಹಾಳು ಎಂದು ಬೊಬ್ಬೆಹಾಕುತ್ತಾನೆ. ಈಗ ಹಾಳಾಗುತ್ತಿರುವ ಆಫ್ಘಾನಿಸ್ತಾನದ ತಾಲಿಬಾನ್‌ಗಳ ಯಾವ ಬ್ರ್ಯಾಂಡಿನ ತುಪ್ಪ ತಿನ್ನುತ್ತಾರೆಂದು ಆತನೇ ಹೇಳಬೇಕು.
ಇಂಥವರಿಗೆ ಭಯೋತ್ಪಾದಕರನ್ನು ಖಂಡಿಸುವುದಕ್ಕಿಂತ ಇಲ್ಲಿನ ಹಿಂದುತ್ವದ ಮೇಲೆ ಅದರಲ್ಲೂ ಬ್ರಾಹ್ಮಣತ್ವದ ಮೇಲೆ ಎರಗುವುದೇ ಕಜ್ಜಿಗಾಯವನ್ನು ಕೆರೆದು ಕೊಂಡಷ್ಟು ಮಜಾ ಸಿಗುತ್ತದೆ. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎನ್ನುವ ದೇವೇಗೌಡರು, ಭಯೋತ್ಪದಾದಕರ ಹೆಣ ಉರುಳಿಸಿ ಸಂಭ್ರಮಿಸಿ ದರೆ ಇಲ್ಲಿನ ಮುಸಲ್ಮಾನರಿಗೆ ನೋವಾಗುತ್ತದೆ ಎನ್ನುವ ಕುಮಾರಸ್ವಾಮಿ, ಬ್ರದರ್ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ರಾಮಲಿಂಗಾರೆಡ್ಡಿ, ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ, ಲಲಿತಾ ನಾಯಕ್, ದಿನೇಶ್ ಗುಂಡೂರಾವ್, ನಟರುಗಳ ಪೈಕಿ ಪ್ರಕಾಶ್ ರೈ, ಧನಂಜಯ, ಚೇತನ್, ಬಿ.ಸುರೇಶ್, ಜಿ.ಕೆ.ಗೋವಿಂದರಾವ್, ರಘುಽಕ್ಷಿತ್. ಕೆ.ಎಸ್ ಭಗವಾನ್, ಚಂಪಾ. ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ಸ್ವಾಮೀಜಿ.
ಇನ್ನು ದೇಶದಲ್ಲಿ ಕಮಲಹಾಸನ್, ಸೂರ್ಯ, ವಿಜಯ, ತಾಪ್ಸಿ, ಪ್ರಿಯಾಂಕಾ, ದೀಪಿಕಾ ಪಡುಕೋಣೆ, ಮಹೇಶ್ ಭಟ್, ಖಾನ್‌ಗಳು, ನಾಝೀರುದ್ದೀನ್ ಶಾ, ಜಾವೇದ್ ಅಖರ್, ಶಬನಾ ಅಜ್ಮಿ ಇನ್ನೂ ಅನೇಕ ಮಂದಿ ಒಂದ ಒಂದು ಸಮಯದಲ್ಲಿ ಭಾರತವನ್ನು ಅಸಹಿಷ್ಣು ದೇಶ ಎಂಬಂತೆ ಬಿಂಬಿಸಿದವರು, ಬಹುಸಂಖ್ಯಾತ ಹಿಂದೂಗಳನ್ನು ದೂಷಿಸಿದವರು, ಹಿಂದೂಗಳ ನಂಬಿಕೆ ಭಾವನೆಗಳನ್ನು ಅವಮಾನಸಿದವರು ಮತ್ತು ಹಿಂದೂ ಭಯೋತ್ಪಾದನೆ ಎಂಬ ಅನೈತಿಕ ಪದವನ್ನು ಬಳಸಿದವರು. ಇವರುಗಳ ಬಾಯಲ್ಲಿ ‘ಜೈಭಾರತಮಾತೆ, ಜೈ ಭುವನೇ ಶ್ವರಿದೇವಿ, ವಂದೇ ಮಾತರಂ’ ಎಂಬ ಘೋಷಣೆ ಕೂಗಿ ತೋರಿಸಲಿ ನೋಡೋಣ! ಸಂತಸ ಪಡುವ ವಿಚಾರ ವೆಂದರೆ ಇಂಥವರ ಸಮಯ ಸಾಧಕತನಗಳು, ಪಲಾಯನವಾದಗಳು ಸಾರ್ವಜನಿಕರಿಗೆ ಮನದಟ್ಟಾಗುತ್ತಿದೆ.
ಆದರೂ ಹಿಂದೂಗಳು ಇವರಿಗೆ ಜೈಕಾರ ಹಾಕಲೇಬೇಕು. ಇಂಥವರನ್ನು ಹಿಂದೂ ವಿರೋಽಗಳೆ ನ್ನುವುದಕ್ಕಿಂತ ಹಿಂದೂಗಳ ಹಿತಚಿಂತಕರೆನ್ನಬೇಕು. ಹೇಗೆ ಗೊತ್ತೇ? ಇವರುಗಳು ಹಿಂದೂಗಳು ಸಣ್ಣ ತಪ್ಪುಮಾಡಿದಾಗಲೂ ದಿಢೀರ್ ಮೇಲೆದ್ದು ನಿಲ್ಲುತ್ತಾರೆ. ಹಿಂದೂಗಳು ಎಂದೂ ತಪ್ಪು ಮಾಡದಂತೆ ಎಚ್ಚರ ವಹಿಸುವ ಸೈದ್ಧಾಂತಿಕತೆ ಹೊಂದಿzರೆ. ನೊಡಿ, ದಶಕಗಳ ಕಾಲ ದೇಶದಲ್ಲಿ ಭಯೋತ್ಪಾದನೆ ಇದ್ದರೂ ಹಿಂದೂಗಳು ಭಯೋತ್ಪದಕರಾಗದಂತೆ ತಡೆಹಿಡಿದಿದ್ದಾರೆ.
ಇವರುಗಳಿಗೆ ಹಿಂದೂಗಳ ಮೇಲೆ ಮಾತ್ರ ಮಮಕಾರ. ಹಿಂದೂಗಳು ಮಾತ್ರ ತಪ್ಪು ಮಾಡದೇ ಸರಿಯಾದ ಮಾರ್ಗದಲ್ಲಿ ನಡೆಯಬೇಕು, ಹಿಂದೂ ಭಯೋತ್ಪಾ ದನೆಗೆ ಅವಕಾಶ ನೀಡಕೂಡದು, ಹಿಂದೂಗಳು ಅನ್ಯಧರ್ಮದವರ ಮೇಲೆ ಎರಗಬಾರದು, ಮಸೀದಿ ಚರ್ಚ್‌ಗಳ ಮೇಲೆ ದಾಳಿ ಮಾಡಕೂಡದು ಮತ್ತು ಇದನ್ನೆ ತಡೆಯುವ ನೈತಿಕತೆ ಹೊಣೆಗಾರಿಕೆ ಇವರಿಗಿದೆ. ಆದರೆ ಮುಸಲ್ಮಾನರು ಯಾವುದೇ ದುಷ್ಕೃತ್ಯ ಎಸಗಬಹುದು, ಭಯೋತ್ಪಾದಕರಾಗಿ ಹಾಳಾಗಬೇಕು. ಬಾಂಬುಗಳನ್ನಿಟ್ಟು ಸಾಯಿಸಿ ಸಾಯುತ್ತಿರಬೇಕು ಮತ್ತು ಅದನ್ನೆ ಸಹಿಸಿಕೊಂಡು ಬಾಯಿಮುಚ್ಚಿಕೊಂಡಿರಬೇಕು. ಇವರ ಪ್ರಕಾರ ಹಿಂದೂಗಳೆ ಸಮಾಜದಲ್ಲಿ ಸಜ್ಜನರಾಗಿ ಬಾಳಬೇಕು. ಅಲ್ಪಸಂಖ್ಯಾತರು ಮಾತ್ರ ಸದಾ ಕಳಂಕಿತರಾಗಿ ಬದುಕಬೇಕು.
ಇದಾ ಇವರುಗಳು ಮುಸಲ್ಮಾನರ ಮೇಲೆ ತೋರಿಸುತ್ತಿರುವ ಅಕ್ಕರೆ, ಮಮಕಾರ, ಪ್ರೀತಿ?. ಹಿಂದುಗಳೆಂಬ ಸ್ವಂತ ಮಕ್ಕಳುಗಳು ಮಾತ್ರ ಸಂಭಾವಿತರಾಗಿರ ಬೇಕು. ಅನ್ಯಮಕ್ಕಳು ಹೇಗಾದರೂ ಹಾಳಾಗಿ ಹೋಗಲಿ ಎಂಬ ಉಡಾಫೆ, ನಿರ್ಲಕ್ಷ್ಯತನ ತೋರುವುದು ಯಾವ ಜಾತ್ಯತೀತ?. ಈಗ ನೋಡಿ ತಾಲಿಬಾನ್‌ಗಳ ಹಿಂಸಾಚಾರವನ್ನು ಇವರುಗಳು ದೊಡ್ಡ ಮಟ್ಟದಲ್ಲಿ ಖಂಡಿಸಿ ಪ್ರತಿಭಟನೆ ಮಾಡಿದ್ದರೆ ಆ ಒಂದು ಕೂಗು ಅವರ ಮನಸ್ಸನ್ನು ಮೀಟುತಿತ್ತು. ಆಗ ಒಂದು ಪೈಸೆಯ ಷ್ಟಾದರೂ ಅವರಲ್ಲಿ ಪರಿವರ್ತನೆಯ ಸೆಲೆ ಅರಳುತಿತ್ತು. ಆದರೆ ಇವರುಗಳ ಪಾಲಿಗೆ ಭಯೋತ್ಪಾದಕರು ತಾಲಿಬಾನ್‌ಗಳು ಅಲ್ಲವೇ ಅಲ್ಲ. ಅವರುಗಳೂ ಇಲ್ಲಿನ ವೊಟ್‌ಬ್ಯಾಂಕ್ ವೃದ್ಧಿಸುವ ಅಘೋಷಿತ ‘ದೇವರುಗಳು’.
ಇವರ ಮೌನಸಮ್ಮತಿಯ ಕುಡಿಗಳು. ಹೀಗಾಗಿ ತಾಲಿಬಾನ್‌ಗಳನ್ನು ಖಂಡಿಸದೇ ಅವರನ್ನು ಬೌದ್ಧಿಕ ತಬ್ಬಲಿಗಳನ್ನಾಗಿ ಮಾಡಿದ್ದಾರೆ. ಆಗಲಿ, ಖಂಡಿಸದಿದ್ದರೂ ಪರವಾಗಿಲ್ಲ. ಇವರೆಲ್ಲರೂ ಒಗ್ಗೂಡಿ ಕೇಂದ್ರ ಸರಕಾರದಿಂದ ವಿಶೇಷ ವಿಮಾನವನ್ನು ಪಡೆದು ಆಫ್ಘಾನಿಸ್ತಾನಕ್ಕೆ ತೆರಳಿ ಅಲ್ಲಿನ ಶಾಮಿಯಾನ ಹಾಕಿ ಉಪವಾಸ ಸತ್ಯಗ್ರಹ ಕುಳಿತು ತಾಲಿಬಾನಿಗಳ ಮನಪರಿವರ್ತನೆ ಮಾಡುವ ಒಂದು ಪ್ರಯತ್ನಕ್ಕಿಳಿಯ ಬಹುದಲ್ಲವೇ?. ಆ ಮೂಲಕ ಆ ದೇಶದಲ್ಲಿ ಮಹಾತ್ಮ ಗಾಂಽಜೀಯವರಂತೆ ಶಾಂತಿ ಸ್ಥಾಪಿಸುವ ಮಹಾ ಕಾರ್ಯವನ್ನು ಖಂಡಿತಾ ಮಾಡಬಹುದಲ್ಲವೇ? ಹಾಗೊಮ್ಮೆ ಮಾಡಿದರೆ ಇವರುಗಳು ಜಗತ್ತಿನ ಗಮನ ಸೆಳೆಯಬಹುದು ಮತ್ತು ನಮ್ಮ ದೇಶಕ್ಕೆ ದೊಡ್ಡ ಶಾಂತಿದೂತ ಪುರಸ್ಕಾರವನ್ನು ತರಬಹುದು.
ಜತೆಗೆ ಸಾಮೂಹಿಕ ನೊಬೆಲ್ ಪ್ರಶಸ್ತಿ ಯನ್ನು ಪಡೆಯುವ ದೊಡ್ಡ ಅವಕಾಶವಿದೆ. ಒಂದೊಮ್ಮೆ ಹೀಗಾಗದೆ ಭಯೋತ್ಪಾದಕರ ಗುಂಡಿಗೆ ಬಲಿಯಾದರೆ ಅದೊಂದು ರೀತಿ ‘ಶಾಂತಿಮರಣ’. ಹಾಡುವುದಕ್ಕೆ ‘ನೀನೇ ಸಾಕಿದಾ ಗಿಣಿ..’ ಹಾಡು ಇದ್ದೇ ಇದೆ. ಛೇ..ಹಾಗೆ ಇವರು ಗಳು ಎಂದೂ ಮಾಡಲಾರರು. ಇವರುಗಳಿಗೆ ಹೋಗಿ ಬಂದು ಮೂಗಿಯನ್ನು ಕಾಡಿದ ಎಂಬಂತೆ ಎದ್ದರೆ ಕೂತರೆ ಹಿಂದುತ್ವವನ್ನು ಬ್ರಾಹ್ಮಣರನ್ನು ಮತ್ತು ಸಂಘ ಪರಿವಾರವನ್ನು ತಿವಿಯುವುದರ ಪರಮ ಸುಖ.ನೋಡಿ, ಆಫ್ಘಾನಿಸ್ತಾನದಲ್ಲಿ ಬಡಪಾಯಿ ಬ್ರಾಹ್ಮಣರಿಲ್ಲ, ದೇವಸ್ಥಾನಗಳಿಲ್ಲ, ವಿವಾದಿತ ಅಯೋಧ್ಯ ರಾಮಮಂದಿರವಿಲ್ಲ, ಅಲ್ಲಿ ಮೋದಿ, ಯೋಗೀಜೀಯಂಥ ನಾಯಕರಿಲ್ಲ, ಸಂಘಪರಿವಾರ, ಬಜರಂಗದಳದಂಥ ಹಿಂದೂಪರ ಸಂಘಟನೆಗಳು, ಕೋಮುವಾದಿಗಳಿಲ್ಲ.
ಸಾವರ್ಕರ್, ಶಿವಾಜಿ ವಂದೇ ಮಾತರಂ ಘೋಷಣೆಗಳಿಲ್ಲ, ಕೃಷಿ ಕಾನೂನುಗಳಿಲ್ಲ, ಸಿ.ಎ.ಎ, ಎನ್‌ಆರ್‌ಸಿ, ಸಮಾನ ನಾಗರಿಕ ಸಂಹಿತೆ ಕಾಯ್ದೆಗಳಿಲ್ಲ, ಗೋಹತ್ಯೆ ನಿಷೇಽಸಬೇಕೆನ್ನುವವರಿಲ್ಲ. ಹಿಂದೂ ದೇಶ ಬೇಕೆಂಬ ಕೂಗುಗಳಿಲ್ಲ. ತ್ರಿವಳಿ ತಲಾಖ್ ನಿಷೇಧವಿಲ್ಲ. ಕನ್ಹಯ್ಯನಂಥ ದೇಶದ್ರೋಹಿ ತುಕಡೆ ಸಂತಾನಿಗಳಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ಮನೆಹಾಳು ಸೆಕ್ಯುಲರ್ ಡೋಂಗಿಗಳೆಂಬ ನಟರು ರಾಜಕಾರಣಿಗಳು ಬುದ್ಧಿಜೀವಿ ಗಳೆಂಬ ಪೀಡೆಗಳಿಲ್ಲ.  ಆದರೆ ಮುಸಲ್ಮಾನರಿ ಗಾಗಿಯೇ ಶರಿಯತ್ ಕಾನೂನು ಇದೆ. ಸಂಪೂರ್ಣ ದೇಶ ಕಟ್ಟರ್ ಇಸ್ಲಾಂ ಆಡಳಿತವಿದೆ. ಆದರೂ ಅಲ್ಲಿರುವ ಏಕೈಕ ಇಸ್ಲಾಂ ಧರ್ಮದ ಜನ ತಮ್ಮ ಹೆಂಡತಿ ಮಗು ಕುಟುಂಬ ರಕ್ತಸಂಬಂಧ ಆಸ್ತಿಪಾಸ್ತಿ ಮನೆ ಮಹಲುಗಳನ್ನು ಬಿಟ್ಟು ಜೀವ ಉಳಿದರೆ ಸಾಕು ಎಂದು ತೊಟ್ಟಬಟ್ಟೆಯಲ್ಲಿ ದೇಶ ಬಿಟ್ಟು ಹೋಡಿಹೋಗುತ್ತಿದ್ದಾರೆ.
ಕಣ್ಣೆದುರಿಗೇ ಅತ್ಯಾಚಾರ ನಡೆದರೂ ತಮ್ಮ ಮನೆಯ ಹೆಣ್ಣು ಮಕ್ಕಳನ್ನೇ ಬಿಟ್ಟು ಪಲಾಯನಗೊಳ್ಳುತ್ತಿದ್ದಾರೆ. ಹೆಣ್ಣೆಂಬುದು ಅಲ್ಲಿ ಮೂಕಪ್ರಾಣಿಗಳಂತೆ ಆಗಿಹೋಗಿದ್ದಾರೆ. ಇದೆಂಥಾ ನಾಗರಿಕತೆ?.
ಏನಾದರು ಆಗು, ಮೊದಲು ಮಾನವನಾಗು ಎಂಬ ಮಾತು ಅರ್ಥಕಳೆದುಕೊಳ್ಳುತ್ತಿದೆ. ಏಕೆಂದರೆ ಪಾಕಿಸ್ತಾನ ದಲ್ಲೂ ಆಫ್ಘಾನಿಸ್ತಾನದಲ್ಲೂ ಕ್ರೂರ ತಾಲಿಬಾನ್‌ ಗಳೂ ಮನುಷ್ಯರೆನಿಸಿಕೊಂಡಿದ್ದಾರೆ. ವ್ಯತ್ಯಾಸ ಮಾತ್ರ ಅಜಗಜಾಂತರವಿದೆ. ಆದರೆ ‘ಏನಾದರು ಆಗು ಮೊದಲು ಭಾರತೀಯನಾಗು’ ಎಂಬುದು ಅಪ್ಪಟ ಸತ್ಯ. ಏಕೆಂದರೆ ಅತಿಥಿ ದೇವೋಭವ, ಸರ್ವೋಜನೋ ಸುಖಿನೋಭವಂತು, ವಸುಧೈವ ಕುಟುಂಬಕಂ, ಅಹಿಂಸೋ ಪರಧರ್ಮ, ದಯವೇ ಧರ್ಮದ ಮೂಲವಯ್ಯ ಎಂಬ ಮಹಾಮಂತ್ರಗಳನ್ನು ಜಗತ್ತಿಗೆ ನೀಡಿದರವರು ಭಾರತೀಯರು.
ಹೆಣ್ಣನ್ನು ಮಾತ್ರವಲ್ಲ ಭೂಮಿಯ ಮೇಲಿನ ಪ್ರತಿಯೊಂದನ್ನೂ ಹೆಣ್ಣಿಗೆ ಹೋಲಿಸಿ ಪೂಜಿಸುವವರು ಭಾರತೀಯರು. ಹೋಗಿ ನೋಡಿ ಆಫ್ಘಾನಿಸ್ತಾನ ಪಾಕಿಸ್ತಾನದಲ್ಲಿ ಹೆಣ್ಣಿನ ಗತಿ ಏನಾಗಿದೆ ಎಂದು. ತಾಯಿಯನ್ನು ತಾಯಿಯಂತೆ, ಹೆಂಡತಿಯನ್ನು ಹೆಂಡತಿಯಂತೆ, ಇಡೀ ಜಗತ್ತನ್ನು ಸಹಿಷ್ಣುತೆಯಿಂದ ಕಾಣುವುದು ಭಾರತೀಯ ರಾದ ನಾವುಗಳು ಮಾತ್ರ. ಒಬ್ಬ ಸಂಪೂರ್ಣ ಭಾರತೀಯ ನಾದವನು ಮಾತ್ರ ಪರಿಪೂರ್ಣ ಮನುಷ್ಯನಾಗಲು ಸಾಧ್ಯವೆಂಬುದು ಈ ಮಣ್ಣಿನ ಬಹುದೊಡ್ಡ ಅನುಭೂತಿ ಮತ್ತು ಹೆಮ್ಮೆ. ಆದರೆ ಇಲ್ಲಿನ ಮನೆದ್ರೋಹಿಗಳೇ ನಮ್ಮ ದೇಶಕ್ಕೆ ದೊಡ್ಡ ಕಂಟಕರಾಗಿದ್ದಾರೆ. ಅ ರೀ ಸ್ವಾಮೀ, ಇತಿಹಾಸದಲ್ಲಿ ಯಾವ ಹಿಂದೂ ರಾಜರುಗಳೂ ಸ್ವಯಂಪ್ರೇರಿತರಾಗಿ ಅನ್ಯಧರ್ಮದ ಮೇಲೆ ಆಕ್ರಮಣ ಮಾಡಿದ್ದಿಲ್ಲ. ಸಾವಿರಾರು ದೇವಾಲಯಗಳನ್ನು ದಾಳಿಗಳಿಂದ ಕಳೆದುಕೊಂಡಿದ್ದಾರೆಹೊರತು ಒಂದು ಮಸೀದಿ ಚರ್ಚ್‌ನ ಗೋಡೆಯನ್ನೂ ಕೆಡವಿದವರಲ್ಲ.
ಹಿಂದೂಗಳು ಧರ್ಮಾಂಧರಾಗಿ ರಕ್ತಪಾತ ಹಿಂಸಾಚಾರ ನಡೆಸಿದ ಘಟನೆ ಚರಿತ್ರೆಯಲಿಲ್ಲ. ಯಾವ ದೇಶದ ಮೇಲೂ ದಂಡೆತ್ತಿ ಯುದ್ಧ ಮಾಡಿದವರಲ್ಲ. ಯಾವ ಧರ್ಮವನ್ನೂ ಹೀಯಾಳಿಸಿ ಅವಮಾನಿಸಿದರವರಲ್ಲ. ದಾಳಿಕೋರರಾಗಿ ಬಂದ ಇಸ್ಲಾಂ, ವ್ಯಾಪಾರದ ಸೋಗಿನಲ್ಲಿ ಬಂದ ಕ್ರಿಶ್ಚಿಯನ್ನರು ಈ ಎರಡೂ ಧರ್ಮಕ್ಕೆ ಇಲ್ಲಿ ನೆಲೆ ಬೆಳೆ ಬೆಲೆಯನ್ನು ಕೊಟ್ಟು ಸಂವಿಧಾನಾತ್ಮಕ ಹಕ್ಕುಗಳನ್ನು ಕೊಟ್ಟು ಸೋದರತ್ವವನ್ನು ಸಾರಲಾಗಿದೆ. ಅದರಲ್ಲೂ ಇಸ್ಲಾಂ ಧರ್ಮಕ್ಕೆ ಎರಡು ದೇಶಗಳನ್ನೇ ಕಟ್ಟಿಕೊಟ್ಟ ಉದಾರಿಗಳು ಹಿಂದೂಗಳು.
ನಿರಂತರ ಮಿಷನರಿಗಳ ಮತಾಂತರಕ್ಕೆ ಕುರುಡಾಗಿ ಸಹಕರಿಸಿ ಕೋಟ್ಯಂತರ ಮತಾಂತರಿಗಳನ್ನು ತಮ್ಮೊಂದಿಗೇ ಇಟ್ಟುಕೊಂಡವರು ಮುಗ್ಧ ಹಿಂದೂಗಳು.ಇಂಥ ‘ಪಾಪಿ’ ಹಿಂದೂಗಳು ಯಾವಜನ್ಮದಲ್ಲಿ ಏನು ಪಾಪಮಾಡಿದ್ದರು? ಈ ಡೋಂಗಿಗಳು ಸ್ವಧರ್ಮಗಳಿಗೇ ಶಾಪಗಳಾಗಿ ಬೆಳೆಯುತ್ತಿದ್ದಾರೆ. ಯಾವ ಬ್ರಾಹ್ಮಣರು ಯಾರ ಮನೆಗಳಿಗೆ ನುಗ್ಗಿ ಯಾರದ್ದನ್ನು ಕಿತ್ತುಕೊಂಡು ತಿಂದು ತೇಗಿದ್ದಾzರೆ?. ಯಾವುದೋ ಕಾಲಘಟ್ಟದಲ್ಲಿದ್ದ ಅಸ್ಪೃಶ್ಯತೆ ಅಸಮಾನತೆ ಶೋಷಣೆ ಎಂಬ ಸವೆದು ಹೋದ ಪದಗಳನ್ನು ಇಟ್ಟುಕೊಂಡು ಇಂದಿನ ನ್ಯಾಯಾಂಗ ಕಾನೂನು ಸಂವಿಧಾನದ ಕಾಲದಲ್ಲೂ ತನ್ನ ಐಡೆಂಟಿಟಿ ತೆವಲಿಗೆ ಬಳಸಿಕೊಳ್ಳುವ ಅಸಹ್ಯ ಚಿತ್ರನಟರು, ಕೇವಲ ಅಧಿಕಾರ ಪದವಿ ವಂಶರಾಜಕಾರಣದ ದುರಾಸೆಗಾಗಿ ಹಿಂದೂಗಳನ್ನು ದೂಷಿಸುವ ರಾಜಕಾರಣಿಗಳು. ತಾನು ಮಹಾ ಮಾನವತಾ ವಾದಿ ವಿಚಾರವಾದಿ ಎಂದು ತೋರಿಸಿಕೊಳ್ಳಲು ಜಾತಿವಿಷಬೀಜಗಳನ್ನು ಬಿತ್ತುವ ತೀಟೆ ಸ್ವಾಮೀಜಿಗಳು ನಮ್ಮ ಇದ್ದಾರೆ.
ನಡೆಯಲಿ. ಎಲ್ಲಿಯವರೆಗೂ ನಡೆಯುತ್ತದೆಯೋ ಅಲ್ಲಿವರೆಗೆ ನಡೆಯಲಿ. ಭಾರತೀಯರಲ್ಲಿ ಒಂದು ನಂಬಿಕೆ ಇದೆ. ಅದು ‘ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ’ ಎಂಬ ಭರವಸೆಯ ವಾಣಿ. ‘ಎಲ್ಲಿ ಅಧರ್ಮ ಅನ್ಯಾಯ ಅನೀತಿ ಹೆಚ್ಚಾಗಿ ದುರ್ಜನರ ಅಟ್ಟಹಾಸ ಮಿತಿಮೀರುವುದೋ ಅಂದು ಮಹಾವಿಷ್ಣು ಅವತರಿಸಿ ಇದನ್ನೆ ಮುಳುಗಿಸಿ ತಮ್ಮನ್ನು ಮೇಲೆತ್ತುತ್ತಾನೆ. ಒಂದೊಮ್ಮೆ ಆತ ಬರುವುದು ತಡವಾಗಬಹುದು ಆದರೆ ಬರುವುದಂತೂ ಪಕ್ಕಾ’ ಎಂಬ ನಂಬಿಕೆ ಯನ್ನಿರಿಸಿಕೊಂಡು ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದಾರೆ. ಈ ನಂಬಿಕೆಯ ಕುರುಹು ಆಗಿ ನಮ್ಮ ದೇಶದ ಮೇಲೆ ಹೊರಗಿನವರಿಂದ ಸಾವಿರಾರು ವರ್ಷ ಗಳಷ್ಟು ನಿರಂತರ ಆಕ್ರಮಣಗಳು, ಒಳಗಿನ ಕಂತ್ರಿಗಳಿಂದ ಸಂಚುಗಳು ನಡೆಯುತ್ತಿದ್ದರೂ ಭಾರತೀಯರು ಈಗಲೂ ವಿಶ್ವಕ್ಕೆ ಗುರುವಾಗೇ ಮುಂದುವರೆಯುತ್ತಿದೆ.
ಆದರೆ ಆಫ್ಘಾನಿಸ್ತಾನದಲ್ಲಿ ಒಂದೇ ಧರ್ಮವಿದ್ದರೂ ವರದಿಯೊಂದರ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಎಂಟು ಲಕ್ಷ ಮುಸ್ಲಿಂಮರು ಹತರಾಗಿದ್ದಾರೆ. ಅಲ್ಲಿ ಒಂದೇ ಧರ್ಮವಿದ್ದರೂ ಇಡೀ ದೇಶವೇ ನರಕಸ್ವರೂಪದಲ್ಲಿದೆ. ಅವರನ್ನು ಇಸ್ಲಾಂ ದೇಶಗಳೇ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ನೆನಪಿಟ್ಟುಕೊಳ್ಳಿ, ಅಲ್ಲಿ ಹಿಂದೂ ಭಯೋತ್ಪಾದನೆಗಳಿಲ್ಲ, ಆರ್‌ಎಸ್‌ಎಸ್, ಹಿಂದೂ ಸಂಘಟನೆ, ಕೋಮುವಾದಿಗಳಿಲ್ಲ. ಆದರೆ ಭಾರತದಲ್ಲಿನ ಮುಸಲ್ಮಾನರು ಜಗತ್ತಿನ ಇನ್ನಾವುದೇ ಇಸ್ಲಾಮಿಕ್ ದೇಶಗಳಿಗಿಂತ ಸ್ವಾತಂತ್ರ ಸುರಕ್ಷಿತ ಮತ್ತು ಗೌರವದಿಂದ ಬಾಳುತ್ತಿದ್ದಾರೆ. ಆದರೆ ಅವರನ್ನು ಉದ್ರೇಕಿಸಿ ಪ್ರಚೋದಿಸಿ ದಾರಿತಪ್ಪಿಸುತ್ತಿರುವುದು ಮಾತ್ರಹಿಂದೂಧರ್ಮದ ಜನಿಸಿದ ಈ ಪೀಡೆ ಡೋಂಗಿಗಳು. ಇವರಿಗೆ ಭಾರತವೇ ಅಸಹನೀಯ ದೇಶವಾಗಿಹೋಗಿದೆ. ಥೂ.. ಇವರ ಜನ್ಮಕ್ಕೆ.