ಹೆಣ್ಮಕ್ಕಳೆಲ್ಲಾ ’ಹೋಮ್‌’ ಮಿನಿಸ್ಟರ್‌ ಆದ್ರೆ ಸಮಸ್ಯೆ ಇರಲ್ಲ
ತುಂಟರಗಾಳಿ
ಹರಿ ಪರಾಕ್‌
ಸಿನಿಗನ್ನಡ
ಕನ್ನಡದಲ್ಲಿ ದೊಡ್ಡ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗುತ್ತವೆ ಎಂದು ಕನ್ನಡ ಪ್ರೇಕ್ಷಕರು ಕಾದು ಕುಳಿತಿದ್ದೇ ಬಂತು. ಓಟಿಟಿಗಳಲ್ಲಾಗಲೀ, ಚಿತ್ರಮಂದಿರ ಗಳಲ್ಲಾಗಲೀ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಅತ್ತ ಪರಭಾಷೆಯ ಸಾಲು ಸಾಲು ಚಿತ್ರಗಳು ಓಟಿಟಿಯಲ್ಲಿ ದರ್ಶನ ಕೊಡುತ್ತಿದ್ದರೆ ಇತ್ತ ಚಿತ್ರಮಂದಿರದ ಪ್ರದರ್ಶನವನ್ನೇ ನಂಬಿಕೊಂಡಿರುವ ಕನ್ನಡ ಸಿನಿಮಾಗಳು ಬಿಡುಗಡೆಗೆ ಹಿಂದೇಟು ಹಾಕುತ್ತಿವೆ.
ಕೆಜಿಎಫ್ 2 ಅಂತೂ ತೀರಾ ಮುಂದಿನ ವರ್ಷದ ಏಪ್ರಿಲ್ ಗೆ ಮುಂದೂಡಿರೋದು ನೋಡಿ ಇಫ್ ಯೂ ಕಮ್ ನೆಕ್ಸ್ಟ್ ಇಯರ್ ಇಟ್ಸ್ ಟೂ ಲೇಟ್ ಅಂತಿದ್ದಾನೆ ಪ್ರೇಕ್ಷಕ. ಇದರ ಜತೆಗೆ ಕೋಟಿಗೊಬ್ಬ 3 ಚಿತ್ರ ಕೂಡ ಬಿಡುಗಡೆಯ ಸದ್ದು ಮಾಡುತ್ತಿಲ್ಲ. ಇದ್ದುದರಲ್ಲಿ ದುನಿಯಾ ವಿಜಯ್ ಅಭಿನಯದ ಸಲಗ ಈಗ ಬರ್ತೀನಿ ಆಗ ಬರ್ತೀನಿ ಎನ್ನುತ್ತಿತ್ತು. ಆದರೆ ಈಗ ಅದನ್ನು ಓವರ್ ಟೇಕ್ ಮಾಡಿ ಅದಕ್ಕೂ ಮುನ್ನ ಬಿಡುಗಡೆ ಆಗಲು ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಚಿತ್ರ ಸಿದ್ಧವಾಗಿದೆ.
ಸೆಪ್ಟೆಂಬರ್ 1 ರಂದು ಟ್ರೈಲರ್ ಬಿಡುಗಡೆ, ಸೆಪ್ಟೆಂಬರ್ 10ಕ್ಕೆ ಸಿನಿಮಾ ಬಿಡುಗಡೆ ಎಂದು ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ ಚಿತ್ರತಂಡ. ಆದರೆ ಭಜರಂಗಿ 2 ಚಿತ್ರದ್ದು ತೀರಾ ಅವಸರ ಆಯ್ತು ಅನ್ನಿಸೋದಿಕ್ಕೆ ಕಾರಣ, ಚಿತ್ರದ ಬಗೆಗಿನ ಪ್ರಚಾರದ ಕೊರತೆ. ಶಿವರಾಜ್ ಕುಮಾರ್ ಅವರಂಥ ಸ್ಟಾರ್ ನಟನ ಸಿನಿಮಾವನ್ನು ಇನ್ನು ಹನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿರುವ ಚಿತ್ರತಂಡ ಪ್ರಚಾರವನ್ನು ಸಂಪೂರ್ಣ ಕಡೆಗಣಿಸಿದೆ ಎಂದರೆ ತಪ್ಪಿಲ್ಲ.
ಇದ್ದಕ್ಕಿದ್ದಂತೆ ಬಿಡುಗಡೆಯ ದಿನಾಂಕ ಫಿಕ್ಸ್ ಮಾಡಿರುವ ಭಜರಂಗಿ ಎಲ್ಲೂ ಸದ್ದು ಮಾಡುತ್ತಿಲ್ಲ, ನಿರ್ಮಾಪಕರು ಪ್ರಚಾರದ ಬಗ್ಗೆ ಗಮನ ಹರಿಸಿಲ್ಲ ಅನ್ನೋದು ಶಿವರಾಜ್ ಕುಮಾರ್ ಅಭಿಮಾನಿಗಳ ಆರೋಪ ಮತ್ತು ಅಸಮಾಧಾನ. ಅದು ಸರಿಯೇ. ಜನ ಚಿತ್ರಮಂದಿರಗಳತ್ತ ಬರಲು ಹಿಂಜರಿಯುತ್ತಿರುವ ಸಮಯದಲ್ಲಿ ಅಪರೂಪಕ್ಕೆ ಬಿಡುಗಡೆ ಆಗುತ್ತಿರೋ ಚಿತ್ರವೊಂದರ ಬಗ್ಗೆ ಅಬ್ಬರದ ಪ್ರಚಾರ ಮಾಡಬೇಕಿತ್ತು ಚಿತ್ರತಂಡ. ಆದರೆ ಅದು ಹಾಗಾಗುತ್ತಿಲ್ಲ. ಹೆಂಗಿದ್ದರೂ ಬೇರೆ ಸಿನಿಮಾಗಳು ಬರ್ತಾ ಇಲ್ಲ. ಹಾಗಾಗಿ, ನಮಗೆ ಕಾಂಪಿಟೇಷನ್ ಇಲ್ಲ ಅನ್ನೋ ಅಂಶವೇ ನಿರ್ಮಾಪಕರ ಈ ಅನಾಸಕ್ತಿಗೆ ಕಾರಣ ಎಂದರೆ ತಪ್ಪಿಲ್ಲ. ಆದರೆ ತಮ್ಮ ನೆಚ್ಚಿನ ನಟನ ಮಾಸ್ ಚಿತ್ರವೊಂದು ಈ ರೀತಿ ಪೇಲವವಾಗಿ ಬಿಡುಗಡೆ ಆಗುತ್ತಿರೋದು ಶಿವಣ್ಣನ ಅಭಿಮಾನಿಗಳಿ ಗಂತೂ ಖುಷಿ ತಂದಿಲ್ಲ.
ನಿರ್ಮಾಪಕರಿಗೆ ಪಾಪ ಬಡತನ, ಅವರು ಹಣ ಹಾಕದಿದ್ದರೆ ನಾವೇ ಖರ್ಚು ಮಾಡಿ ಬಿಡುಗಡೆಯವರೆಗೂ ಪ್ರಚಾರ ಮಾಡೋಣ ಬನ್ನಿ ಎಂದು ಹೇಳುವ ಮೂಲಕ ಶಿವಣ್ಣನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನವನ್ನು ಹೊರಗೆ ಹಾಕುತ್ತಿರೋದಂತೂ ಒಳ್ಳೆಯ ಬೆಳವಣಿಗೆ ಅಲ್ಲ.
ಲೂಸ್ ಟಾಕ್ಆರಗ ಜ್ಞಾನೇಂದ್ರ (ಕಾಲ್ಪನಿಕ ಸಂದರ್ಶನ)ಏನ್ ಸಾರ್, ರೇಪ್ ಆಗಿರೋ ಸೂಕ್ಷ್ಮ ಸಮಯದಲ್ಲಿ ನೀವು ಕಾಂಗ್ರೆಸ್ ನೋರು ನನ್ನರೇಪ್ ಮಾಡ್ತಿದ್ದಾರೆ ಅಂತೆಲ್ಲಾ ಹೇಳಿಕೆ ಕೊಡೋದು ಎಷ್ಟ್ ಚೆನ್ನಾಗಿರುತ್ತೆ?ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸ್ಪೀಕರ್ ರಮೇಶ್ ಕುಮಾರ್ ಅವರೂ ಇದೇ ಥರ ಹೇಳಿಕೆ ಕೊಟ್ಟಿದ್ರು ಗೊತ್ತಾ ನಿಮಗೆ. ಸ್ಪೀಕರ್‌ನಲ್ಲಿ ಬಂದ್ರೆ ಸೌಂಡ್ ಚೆನ್ನಾಗಿರುತ್ತೆ, ನಾನು ಹೇಳಿದ್ರೆ ತಪ್ಪಾ?
ಅವ್ರ್ ವಿಷ್ಯ ಬಿಡಿ, ಈಗ ಅಧಿಕಾರದಲ್ಲಿರೋದು ನೀವಲ್ವಾ, ನೀವು ಮಾಡಿದ್ದು ಸರಿನಾ?ನೋಡಿ, ಕಾಂಗ್ರೆಸ್ ನೋರು ನಮ್ಮನ್ನ ಬ್ಲೂಜೆಪಿ ಅಂತ ಅಣಕಿಸ್ತಾ ಇರ್ತಾರೆ. ಅದಕ್ಕೇ ಈ ಸಲ ನಾನು ಅವರನ್ನ ರೇಪಿಸ್ಟ್ ಗಳಿಗೆ ಹೋಲಿಸಿದೆ ಅಷ್ಟೇ.
ಓಹ್, ಸರಿ ಬಿಡಿ, ನಿಮ್ಮ ಬಿಜೆಪಿಯವರ ಎಲ್ಲಾ ಕಥೆಗಳು “ಒಂದಾನೊಂದು ಕಾಲದಲ್ಲಿಕಾಂಗ್ರೆಸ್” ಅಂತಲೇ ಶುರುವಾಗ್ತವೆ. ಹೋಗ್ಲಿ, ಆ ಮಾತಾಡಿದ ಮೇಲೆ ನನ್ನ ಮಾತನ್ನವಾಪಸ್ ಪಡೀತೀನಿ ಅಂದ್ರಲ್ಲ, ಅದೇನು ಪೊಲೀಸ್ ಸ್ಟೇಷನ್‌ನಲ್ಲಿ ಕಂಪ್ಲೇಂಟ್ ವಾಪಸ್ತಗೊಂಡ ಹಾಗಾ ?– ನೋಡ್ರೀ, ಕಾಂಗ್ರೆಸ್ ಶಾಸಕರು ನಮ್ಮ ಸರಕಾರಕ್ಕೆ ತಮಗೆ ಬೇಕಾದಾಗ ಬೆಂಬಲ ಕೊಟ್ಟು, ಮಿನಿಸ್ಟರ್‌ಗಿರಿ ಸಿಗದೇ ಇದ್ದಾಗ ಬೆಂಬಲ ವಾಪಸ್ ತಗೋತೀನಿ ಅನ್ನಲ್ವೇ? ಇದೂ ಹಂಗೇನೇ..
ಓಹ್, ನೀವು ಕಾಂಗ್ರೆಸ್ ಬಿಟ್ಟು ಈ ಕಡೆ ಬರಲ್ಲ ಅನ್ಸುತ್ತೆ, ಸರಿ. ಆದ್ರೂ ಹೋಮ್ ಮಿನಿಸ್ಟರ್ ಆಗಿ ನಿಮ್ಮ ಹೇಳಿಕೆ ಜವಾಬ್ದಾರಿಯುತವಾದದ್ದಲ್ಲ ಅಂತ ಎಲ್ಲರ ಅನಿಸಿಕೆ. ಇದರ ಬಗ್ಗೆ ಏನ್ ಹೇಳ್ತೀರಾ?– ಹೋಮ್ ಮಿನಿಸ್ಟರ್ರಾ.. ಅಯ್ಯೋ, ಇಷ್ಟ್ ದಿನ, “ಗೃಹ” ಸಚಿವ ಅಂದ್ರೆ ನಾನು ಮನೆ ಕಟ್ಟಿಸಿ ಕೊಡೋ “ವಸತಿ” ಖಾತೆ ಅಂದ್ಕೊಂಡಿದ್ದೆ. ಸಾರಿ, ಸರಿ ಈಗ ಕೇಳಿ, ಹೋಮ್ ಮಿನಿಸ್ಟರ್ ಆಗಿ ಮಾತಾಡ್ತೀನಿ.
ಸರಿ ಹೋಯ್ತು, ಆಗ್ಲಿ, ಈಗ ಹೋಮ್ ಮಿನಿಸ್ಟರ್ ಆಗಿ ಈ ಗ್ಯಾಂಗ್ ರೇಪ್ಪ್ರಕರಣಗಳಿಗೆ ನಿಮ್ಮ ಪರಿಹಾರ ಏನು?– ವೆರಿ ಸಿಂಪಲ್, ಹೆಣ್ಣು ಮಕ್ಕಳೆಲ್ಲ ನನ್ನ ಥರ ಹೋಮ್ ಮಿನಿಸ್ಟರ್ ಆಗಿಬಿಡಿ. ಮನೆ ಬಿಟ್ಟು ಹೊರಗೆ ಬರಲೇಬೇಡಿ. ಪ್ರಾಬ್ಲಂ ಸಾಲ್ವ್ಡ್.
ನೆಟ್ ಪಿಕ್ಸ್ಖೇಮು ಒಂದು ದಿನ ಸಂಜೆ ಆಫೀಸಿನಿಂದ ಮನೆಗೆ ಬಂದ. ಮನೆಯ ಹೊರಗೆ ಅಂಗಳದಲ್ಲಿ ಕಸದ ರಾಶಿ ರಾಶಿ ಬಿದ್ದಿತ್ತು. ರಂಗೋಲಿ ಇರಲಿ, ಹೊಸ್ತಿಲನ್ನೂ ಕೂಡ ತೊಳೆದಿರಲಿಲ್ಲ. ಎಲ್ಲಾ ಧೂಳು ಮಯ. ಮನೆಯೊಳಗೆ ಅಡಿ ಇಡುತ್ತಿದ್ದಂತೆ ಖೇಮುಗೆ ಮಕ್ಕಳು ಆಟವಾಡುವ ಸದ್ದು ಕೇಳಿಸಿ ಆ ಕಡೆ ತಿರುಗಿ ನೋಡಿದ. ಮಕ್ಕಳು ಮನೆಯ ಸಾಮಾನುಗಳನ್ನೆಲ್ಲಾ ಎಲ್ಲಂದ್ರಲ್ಲಿ ಹರಡಿ ಕಿತ್ತು ಹಾಕಿ ರಾಡಿ ಮಾಡಿಟ್ಟಿದ್ದರು. ಮೊದಲು ನೀರು ಕುಡಿಯೋಣ ಅಂತ ಅಡುಗೆ ಮನೆಗೆ ಹೋದ ಖೇಮುಗೆ ಅಲ್ಲೂ ಶಾಕ್ ಕಾದಿತ್ತು. ಬೆಳಗ್ಗೆ ಮಾಡಿದ ತಿಂಡಿ ಪಾತ್ರೆಗಳು, ತಿಂಡಿ ತಿಂದ ಪ್ಲೇಟ್, ಕಾಫಿ ಗ್ಲಾಸ್ ಎಲ್ಲವೂ ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಖೇಮುಗೆ ಏನಾಯ್ತು ಅಂತ ಒಂದು ಕ್ಷಣ ಗಾಬರಿ ಆಯ್ತು. ಬೆಡ್ ರೂಮಿಗೆ ಹೋಗಿ ನೋಡಿದರೆ ಅಲ್ಲಿ ಖೇಮುಶ್ರೀ ಇರಲಿಲ್ಲ. ಅದರ ಬದಲಾಗಿ ಇಡೀ ರೂಮ್ ತುಂಬಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಬಟ್ಟೆಗಳು ಬಿದ್ದಿದ್ದವು. ಹಾಸಿಗೆಯ ಮೇಲಿನ ದಿಂಬು, ಬೆಡ್ ಶೀಟ್‌ಗಳು ಅಗಸರ ಅಂಗಡಿಯನ್ನು ನೆನಪಿಸುತ್ತಿದ್ದವು. ಹಾಲಿನಲ್ಲಿ ಹಾಕಿದ ಟಿವಿ ಹಾಗೇ ಇತ್ತು. ಯಾರೂ ನೋಡುತ್ತಿರಲಿಲ್ಲ. ದೇವರ ಮನೆಯ ದೀಪ ಹಚ್ಚಿರಲಿಲ್ಲ. ಬಚ್ಚಲು ಮನೆಯ ನಲ್ಲಿಯಿಂದ ನೀರು ಸೋರಿ ಹೋಗುತ್ತಿತ್ತು.
ಆಫ್ ಮಾಡುವವರೇ ಇರಲಿಲ್ಲ. ಇದನ್ನೆಲ್ಲಾ ನೋಡಿದ ಖೇಮುಗೆ ಪಿತ್ತ ನೆತ್ತಿಗೇರಿತು. ಮನೆಯನ್ನು ಹೀಗೆ ಅಧ್ವಾನ ಮಾಡಿ ಖೇಮುಶ್ರೀ ಎಲ್ಲಿಗೆ ಹೋದಳು ಅಂತ ಹುಡುಕಿಕೊಂಡು ಹೊರಟ. ಆಗ ಹೆಂಡತಿ ಲಿವಿಂಗ್ ರೂಮ್ ನಲ್ಲಿ ಇದ್ದಾಳೆ ಅಂತ ಗೊತ್ತಾಯ್ತು. ಅಲ್ಲಿಗೆ ಹೋಗಿ ನೋಡಿದರೆ ಖೇಮುಶ್ರೀ ಯಾವುದೋ ಹಳೆಯ ನೈಟಿ ಹಾಕಿಕೊಂಡು ಒಂದು ಮ್ಯಾಗಜೀನ್ ಹಿಡಿದುಕೊಂಡು ಓದುತ್ತಾ ಅಡ್ಡಾದಿಡ್ಡಿಯಾಗಿ ಮಲಗಿದ್ದಳು. ಖೇಮುಗೆ ಸಿಟ್ಟು ಇನ್ನಷ್ಟು ಜಾಸ್ತಿಯಾಗಿ, “ಏನಿದು, ಮನೆ ಹೀಗಿದೆ, ಏನಾಗಿದೆ ನಿಂಗೆ?” ಅಂತ ಜೋರು ದನಿಯಲ್ಲಿ ಅವಳನ್ನು ಕೇಳಿದ. ಅದಕ್ಕೆ ಖೇಮುಶ್ರೀ ಶಾಂತವಾಗಿ ಕೇಳಿದಳು, “ಪ್ರತಿದಿನ ನೀನು ಆಫೀಸಿನಿಂದಮನೆಗೆ ಬಂದಾಗ, ನಂಗೆ ಆಫೀಸಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಎಷ್ಟ್ ಕೆಲಸ ಇರುತ್ತೆ ಗೊತ್ತಾ.
ಎಷ್ಟು ಸುಸ್ತಾಗಿರ್ತೀನಿ, ನೀನೇನು ಇಡೀ ದಿನ ಮನೆಯಲ್ಲಿ ಕಡಿದು ಕಿತ್ತಾಕುವಂಥ ಕೆಲಸ ಮಾಡ್ತೀಯಾ?” ಅಂತ ಕೇಳ್ತೀಯ ಅಲ್ವಾ ಅಂತ ಕೇಳಿದಳು. ಅದಕ್ಕೆ ಖೇಮು,“ಹೌದು ಕೇಳ್ತೀನಿ ಅದಕ್ಕೇನೀಗ?” ಅಂದ. ಅದಕ್ಕೆ ಖೇಮುಶ್ರೀ ಹೇಳಿದಳು, “ಇವತ್ತು ನಾನು ಏನೂ ಕಡಿದು ಕಿತ್ತಾಕಲಿಲ್ಲ”
ಲೈನ್ ಮ್ಯಾನ್ಎಲ್ಲದಕ್ಕೂ ಲಾಜಿಕ್ ಅಪ್ಲೈ ಮಾಡಬಾರದುಕಾಲು ಕುಂಟು ಅನ್ನೋ ಕಾರಣಕ್ಕೆ ಕುಂಟಾಬಿಲ್ಲೆ ಆಡೋದು ಸುಲಭ ಅಂತಲ್ಲ.ಮನುಷ್ಯನ ಜೀವನಎಲ್ಲಾ ಚೆನ್ನಾಗಿದ್ರೆ ಜಂಬೂ ಸವಾರಿಎಲ್ಲಾ ಮುಗಿದ ಮೇಲೆ ಬಂಬೂ ಸವಾರಿಲೂಸ್ ಮೋಷನ್ ರಾಗಗಳುಗೂಡು ಬಿಟ್ಟುಏನೇನನ್ನೋ ಅರಸಿಅಲೆಯುವ ಆಸೆಬುರುಕ ಮನುಷ್ಯನಿಗೆ ಇದೆಲ್ಲ ಏನೂ ಬೇಡ, ಮತ್ತೆ ಗೂಡು ಸೇರಿದರೆ ಸಾಕಪ್ಪಾ ಅನ್ನಿಸೋದುಲೂಸ್ ಮೋಷನ್ ಸಮಸ್ಯೆ ಇದ್ದಾಗ-ನನಗೆ ಗೊತ್ತು, ನಿನಗೆ ನನ್ನನ್ನು ಬಿಟ್ಟಿರೋಕೆ ಕಷ್ಟ ಆಗ್ತಿದೆ ಅಂತ. ನಿನಗೆ ಯಾವಾಗ ನನ್ನಅವಶ್ಯಕತೆ ಇದೆ ಅನಿಸಿದರೂ ಬರಬಹುದು. ನಿನಗೋಸ್ಕರ ನನ್ನ ಬಾಗಿಲು ಸದಾ ತೆರೆದೇಇರುತ್ತದೆ.-ಇಂತಿಟಾಯ್ಲೆಟ್ರಾಜಕಾರಣಿಯ ಮಾಸ್ ಡೈಲಾಗ್ನಾನೆಷ್ಟು ಕ್ಲೀನ್ ಹ್ಯಾಂಡ್ ಅಂದ್ರೆ, ಜೇಬಲ್ಲಿ ಕರ್ಚೀ- ಕೂಡಾ ಇಟ್ಕೊಳ್ಳಲ್ಲಮುಖ್ಯಮಂತ್ರಿಗಳು “ತುಂಟ”ತನ ಮಾಡಿದ್ರೆ, ಅವರು“ಮಿಸ್-ಚೀಫ್” ಮಿನಿಸ್ಟರ್ಅತ್ಯಾಚಾರಗಳು ನಡೀತಾ ಇರುತ್ವೆ. ಇದೆಲ್ಲಾ ಕಾಮನ್, ಏನೂ ಮಾಡೋಕಾಗಲ್ಲ-ಉಮೇಶ್ ಕತ್ತಿಹಿಂಗೇ ಬಿಟ್ರೆ, ಏನ್ ಮಾಡೋಕಾಗುತ್ತೆ, ರೇಪ್ ಆದ್ರೆ, “ಆಪರೇಶನ್ ಕಮಲ” ಥರ“ಅಬಾರ್ಷನ್ “ಕಮಲ” ಮಾಡಿಸೋಣ ಬಿಡಿ ಅಂತಾರೆ.ಅತ್ಯಾಚಾರಗಳ ಬಗ್ಗೆ “ಹಗುರ”ವಾಗಿ ಮಾತಾಡುವವರು“ಲೈಟ್” ಮೈಂಡೆಡ್ ಪೀಪಲ್ಯಾರಿಗೂ ಗೊತ್ತಿಲ್ಲದ ವಿಷಯಗಳ ಮೇಲೆ “ಬೆಳಕು” ಚೆಲ್ಲುವವರುಅವರೂ “ಲೈಟ್” ಮೈಂಡೆಡ್ ಪೀಪಲ್ಆಟೋ ರಿಕ್ಷಾಗಳಿಂದ ಆಗೋ ಟ್ರಾಫಿಕ್ ಜಾಮ್ರಿಕ್ಷಾ ಬಂಧನರನ್ನಿಂಗ್ ರೇಸ್ ನಲ್ಲಿ ಫಸ್ಟ್ ಬರಬೇಕು ಅಂದ್ರೆ ಏನ್ ಮಾಡಬೇಕು?ಕಾಲಿಗೆ ಬುದ್ಧಿ ಹೇಳಬೇಕು