ಜಲಜೀವನ್ ಮಿಷನ್ – ಮನೆ ಮನೆಗೂ ಕೊಳಾಯಿ ನೀರು
ವಿಶ್ಲೇಷಣೆ
ಪ್ರಕಾಶ್ ಶೇಷರಾಘವಾಚಾರ್
@.
ಇಳಿದು ಬಾ ತಾಯಿ ಇಳಿದು ಬಾಹರನ ಜಡೆಯಿಂದಹರಿಯ ಅಡಿಯಿಂದ,ನುಸುಳಿ ಬಾ.ಅಂಬಿಕಾತನಯದತ್ತನೆ ಬಾ..
ಭಗೀರಥ ಮಹಾರಾಜ ತನ್ನ ಪೂರ್ವಜರಿಗೆ ಮೋಕ್ಷ ಕೊಡಿಸಲು ಗಂಗೆಯನ್ನು ಭೂಮಿಗೆ ತರಲು ಅವಿರತವಾಗಿ ಶ್ರಮ ಪಡುವನು. ಅಂತಿಮವಾಗಿ ಗಂಗೆಯನ್ನು ಧರೆಗೆ ಕರೆತಂದು ತನ್ನ ಪೂರ್ವಜರಿಗೆ ಮೋಕ್ಷ ಕೊಡಿಸುತ್ತಾನೆ. ಇವನ ಮಹಾನ್ ಕಾರ್ಯವು ಭಗೀರಥ ಪ್ರಯತ್ನ ಎಂದೇ ಮನೆಮಾತಾಗಿದೆ.
ಈ ಕಲಿಯುಗದಲ್ಲಿ ಮೋದಿ ಸರಕಾರವು ‘ಜಲಜೀವನ ಮಿಷನ್’ ಹೆಸರಲ್ಲಿ ಗ್ರಾಮೀಣ ಭಾಗದ 19.29 ಕೋಟಿ ಮನೆಗಳಿಗೂ ಕೊಳಾಯಿ ಮೂಲಕ ನೀರು ಕೊಡುವ ಮತ್ತೊಂದು ಭಗೀರಥಪ್ರಯತ್ನವನ್ನು ಕಳೆದ ಎರಡು ವರ್ಷದಿಂದ ಕೈಗೊಳ್ಳುತ್ತಿದೆ. ಮೋದಿಯವರು 2019ರ ಸ್ವಾತಂತ್ರೋತ್ಸವದ ದಿನ ಕೆಂಪುಕೋಟೆಯಿಂದ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ 2024ರೊಳಗೆ ಕೊಳಾಯಿ ಮೂಲಕ ಕುಡಿಯುವ ನೀರು ನೀಡಲಾಗುವುದು ಎಂದು ಘೋಷಿಸಿದರು. ಈ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯಗಳು 3.6ಲಕ್ಷ ಕೋಟಿ ರು. ಹಣವನ್ನು ವೆಚ್ಚ ಮಾಡುತ್ತಿದೆ.
ರಾಜ್ಯದ ಪಾಲು 1,51,248 ಕೋಟಿ ರು. ಆಗಿದೆ. ಕಳೆದ 70 ವರ್ಷದಲ್ಲಿ ಗ್ರಾಮೀಣ ಭಾಗದಲ್ಲಿ ಕೇವಲ 3.5 ಕೋಟಿ ರು. ಅಂದರೆ ಶೇ.16 ರಷ್ಟು ಮನೆಗಳಿಗೆ ಮಾತ್ರ ಕೊಳಾಯಿ ಮುಖಾಂತರ ನೀರು ಪಡೆಯುವ ಅದೃಷ್ಟವಿತ್ತು. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರು ಗ್ರಾಮೀಣ ಭಾಗದ ಮನೆಗಳಿಗೆ ಬ್ಯಾಂಕ್ ಅಕೌಂಟ್ ಇಲ್ಲ, ನೀರು ಇಲ್ಲ, ಶೌಚಾಲಯವಿಲ್ಲ ಮತ್ತು ಅಡುಗೆ ಮಾಡಲು ಗ್ಯಾಸ್ ಇಲ್ಲ ಅನ್ನುವ ದುಃಸ್ಥಿತಿಯಿಂದ ಪಾರು ಮಾಡಲು ಮೋದಿ ಸರಕಾರವು ಕೇಂದ್ರದಲ್ಲಿ ಬರಬೇಕಾಯಿತು. ಸಮರೋಪಾದಿಯಲ್ಲಿ ಕೈಗೊಳ್ಳುತ್ತಿರುವ ಈ ಎಲ್ಲಾ ಬಹು ಉಪಯೋಗಿ ಯೋಜನೆಗಳ ಅನುಷ್ಠಾನದಿಂದ ಗ್ರಾಮೀಣ ಜನತೆಯ ವಿಶೇಷವಾಗಿ ಮಹಿಳೆಯರ ಬದುಕನ್ನು ಬದಲಾಯಿಸಿ ಹಸನು ಮಾಡುತ್ತಿರುವುದು.
ಕೃಷಿ ಚಟುವಟಿಕೆಗಾಗಿ ಶೇ.69 ರಷ್ಟು ನೀರು ಬಳಕೆಯಾಗುತ್ತಿದೆ. ಭಾರತ ಕಬ್ಬು,ಗೋಧಿಮತ್ತು ಭತ್ತ ಬೆಳೆಯುವುದರಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಆದರೆ ಈ ಬೆಳೆಗಳನ್ನು ಬೆಳೆಯಲು ಗರಿಷ್ಠ ನೀರು ಬಳಕೆಯಾಗುತ್ತಿರುವುದು ಅಷ್ಟೇ ಕಟು ಸತ್ಯ. ಶುದ್ಧ ಕುಡಿಯುವ ನೀರು ದೊರೆಯದ ಕಾರಣ ಶೇ.21ರಷ್ಟು ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ. ಶೇ.80ರಷ್ಟು ಕಾಯಿಲೆಗಳಿಗೆ ಕಲುಷಿತ ನೀರಿನ ಉಪಯೋಗವೇ ಕಾರಣ. ಟೈಫಾಯ್ಡ್, ಅತಿಸಾರ ರೋಗ, ಕಾಲರ, ಅಮಿಬಿಯಾಸಿಸ್ ಮತ್ತು ಹೆಪಟೈಟಿಸ್ ಎ ಮತ್ತು ಇ ಕಾಯಿಲೆಯು ಸಂಭವಿಸುವುದೇ ಕಲುಷಿತವಾಗಿರುವ ನೀರು ಸೇವನೆಯಿಂದ ವಿಶೇಷವಾಗಿ ಅತಿಸಾರ ರೋಗಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು ಬಲಿಯಾಗುತ್ತಿದ್ದಾರೆ.
ವರ್ಷಂಪ್ರತಿ 3.7ಕೋಟಿ ಜನ ಶುಚಿಯಿಲ್ಲದ ನೀರು ಸೇವನೆಯಿಂದ ಕಾಯಿಲೆ ಬೀಳುತ್ತಿದ್ದಾರೆ ಮತ್ತು ಒಂದು ಲಕ್ಷಕ್ಕೂ ಹೆಚ್ಚು ಶಿಶುಗಳು ಕಲುಷಿತ ನೀರಿನ ಕಾರಣ ಮರಣ ಹೊಂದುತ್ತಿದ್ದಾರೆ. ನಮ್ಮ ಕಣ್ಣಿಗೆ ಕರೋನಾ ಸಾವು ದಿನವೂ ದಾಖಲಾಗುತ್ತಿರುವ ಕಾರಣ ಗೊತ್ತಾಗುತ್ತಿದೆ, ಆದರೆ ಕಲುಷಿತ ನೀರು ಕುಡಿದು ಸಾವನ್ನಪ್ಪು ತ್ತಿರುವ ಮಕ್ಕಳು ಸುದ್ದಿಯೇ ಆಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ನೈರ್ಮಲ್ಯದ ಕೊರತೆ ಮತ್ತು ಶೌಚಾಲಯದ ಉಪಯೋಗ ಮಾಡದೆ ಅಂತರ್ಜಲವು ಕಲುಷಿತ ವಾಗಿದೆ. ಹೀಗಾಗಿಯೇ ಮೋದಿಯವರು ತಮ್ಮ ಮೊದಲಅವಽಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಒತ್ತು ಕೊಟ್ಟ ಪರಿಣಾಮ ದೇಶದಲ್ಲಿ ಈಗ ಶೇ.98ರಷ್ಟು ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿದೆ.
ಸ್ವಚ್ಛ ಭಾರತ ಯೋಜನೆಯಲ್ಲಿ ವೈಜ್ಞಾನಿಕವಾಗಿ ಕಸದ ವಿಲೇವಾರಿಗೂ ಅನುದಾನ ನೀಡಿ ಗ್ರಾಮಗಳ ಸ್ವಚ್ಛತೆಯನ್ನು ಕಾಪಾಡಲು ಸಹಾಯ ಕಲ್ಪಿಸಲಾಗಿದೆ. ಜಾಗತಿಕ ತಾಪಮಾನ ಹೆಚ್ಚಾ ಗಿರುವ ಕಾರಣ ಇದರಿಂದ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ಮಳೆಯ ಪ್ರಮಾಣವು ಕುಸಿಯುತ್ತಿದೆ. ಹೀಗಾಗಿ ಅಂತರ್ಜಲ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ದೇಶದ 7187 ಬ್ಲಾಕ್‌ಗಳ ಪೈಕಿ 1580 ಬ್ಲಾಕ್‌ಗಳಲ್ಲಿ ಅಂತರ್ಜಲ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗವಾಗಿ ನೀರಿಗಾಗಿ ಸಾವಿರಾರು ಅಡಿ ಕೊರೆಯಬೇಕಾಗಿದೆ.
ಮನಸೋಇಚ್ಛೆ ಕೊಳವೆ ಬಾವಿಗಳನ್ನು ಕೊರೆದು ಅಂತರ್ಜಲದ ಲಭ್ಯತೆಯು ಪಾತಾಳ ತಲುಪಿದೆ. ಸಾವಿರಾರು ಅಡಿಯಿಂದ ನೀರು ತೆಗೆಯುತ್ತಿರುವ ಕಾರಣ ನೀರಿನಲ್ಲಿ ಫ್ಲೋರಿನ್ಬೆರೆತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಹಲ್ಲುಗಳ ಮತ್ತು ಮೂಳೆಯ ಬೆಳವಣಿಗೆಗೆ ಮಾರಕವಾಗಿದೆ. ನಮ್ಮ ರಾಜ್ಯದಲ್ಲಿ ನೀರಾವರಿ ಸೌಲಭ್ಯವಿಲ್ಲದ ಕೋಲಾರ ಜಿಲ್ಲೆಯಲ್ಲಿ ಈ ಕಾಯಿಲೆಗೆ ಹಲವರು ತುತ್ತಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಕುಡಿಯುವ ನೀರು ಪ್ರತಿನಿತ್ಯ ತರುವುದೇ ದೊಡ್ಡ ಕೆಲಸ. ದಿನದ ಕೆಲವು ಗಂಟೆಗಳು ಇದಕ್ಕಾಗಿ ಮೀಸಲಿಡ ಬೇಕು.
ಅನೇಕ ಹಳ್ಳಿಗಳಲ್ಲಿ ಎರಡು ಬಿಂದಿಗೆ ನೀರಿಗಾಗಿ ಸಾಕಷ್ಟು ದೂರವನ್ನು ಕ್ರಮಿಸಬೇಕಾಗಿದೆ. ಬರಗಾಲದ ವೇಳೆ ನೀರಿಗಾಗಿ ಪರದಾಡುವ ಪರಿಸ್ಥಿತಿ. ಇದರ ಜತೆಗೆ ಬೋರ್ ವೆಲ್ ನಲ್ಲಿ ನೀರು ಹೊಡೆಯುವ ತ್ರಾಸ ಹೆಣ್ಣು ಮಕ್ಕಳಿಗೆ. ಅನಾರೋಗ್ಯವಿದ್ದರು ಮನೆಗೆ ನೀರು ತರಬೇಕಾದ ಅನಿವಾರ್ಯತೆಯೂ. ಹಳ್ಳಿಗಳಲ್ಲಿ ನೀರಿನ ಬವಣೆ ಹೇಳ ತೀರದು. ಆರೋಗ್ಯದ ದೃಷ್ಟಿಯಿಂದ ನೈರ್ಮಲ್ಯತೆಯ ಕಾರಣಕ್ಕೆ ಮತ್ತು ಗ್ರಾಮೀಣ ಮಹಿಳೆಯರ ಬವಣೆ ನಿವಾರಿಸುವ ‘ಜಲ ಜೀವನ್ ಮಿಷನ್’ ಯೋಜನೆಯು ಮನೆಮನೆಗೂ ಕೊಳಾಯಿ ನೀರು ಸಂಪರ್ಕ ಒದಗಿಸುತ್ತಿದೆ. ಇದರ ಪ್ರಭಾವ ಉಪಯುಕ್ತತೆಯು ಹಳ್ಳಿಗಳ ಮಹಿಳೆಯರನ್ನು ಪ್ರಶ್ನಿಸಿದರೆ ಮೋದಿಯವರ ಮುಂದಾಲೋಚನೆಗೆ ತಲೆದೂಗದವರು ವಿರಳ.
ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ರವರು ಕೇಂದ್ರ ಸರಕಾರ ‘ಜಲಜೀವನ್ ಮಿಷನ್’ ನಡಿಯಲ್ಲಿ ರಾಜ್ಯಗಳ ಸಹಕಾರದೊಂದಿಗೆ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಲಾಗುತ್ತಿದೆ2024ರ ಗಡವಿನೊಳಗೆ19.2ಕೋಟಿ ಮನೆಗಳಿಗೂ ನೀರು ಸಂಪರ್ಕ ಕೊಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.‘ಜಲಜೀವನ ಮಿಷನ್’ ಆರಂಭವಾದ ತರುವಾಯ ಕಳೆದ ಎರಡು ವರ್ಷದಲ್ಲಿ 4,81,07,626 ಅಂದರೆ ಶೇ.25.06ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ದೊರೆತಿದೆ. ಈಗ ಶೇ.41.91ಮನೆಗಳಿಗೆ ಕೊಳಾಯಿ ಮೂಲಕ ಕುಡಿಯುವ ನೀರು ಲಭ್ಯವಾಗುತ್ತಿದೆ.
ಈಗಾಗಲೇ78ಜಿಲ್ಲೆ53,644ಗ್ರಾಮ ಪಂಚಾಯಿತಿ106000ಹಳ್ಳಿಗಳಿಗೆ ನೀರು ಸಂಪರ್ಕ ನೀಡಲಾಗಿದೆ.ಇದಲ್ಲದೆದೇಶದ ಶೇ.72.85 ರಷ್ಟು ಸರಕಾರಿ ಶಾಲೆಗಳಿಗೆ ಮತ್ತು ಶೇ.64.9ರಷ್ಟು ಅಂಗನವಾಡಿಗಳಿಗೆ ಮತ್ತು ಶೇ.69.41ಪಂಚಾಯಿತಿ ಹಾಗೂ ಸಮುದಾಯ ಕೇಂದ್ರಗಳಿಗೆ ಶುದ್ಧ ನೀರು ದೊರೆಯುವ ಹಾಗೆ ಮಾಡಲಾಗಿದೆ. ಹಾಗೆಯೇ5ರಾಜ್ಯಗಳ61ಜಿಲ್ಲೆಗಳು ಜಪಾನೀಸ್ಎನ್ಸೆ-ಲೈಟಿಸ್‌ಗೆತುತ್ತಾಗಿದ್ದವು ಅಲ್ಲಿ ಒಂದು ಕೋಟಿ ಮನೆಗಳಿಗೆ ಕೊಳಾಯಿ ಮೂಲಕ ನೀರು ಕೊಡಲಾಗುತ್ತಿದೆ.
6,40,000ಮಹಿಳೆಯರನ್ನು ನೀರಿನ ಗುಣಮಟ್ಟ ಪರೀಕ್ಷಿಸಲು ತರಬೇತಿ ನೀಡಿದ್ದಾರೆ.3000ಸಮುದಾಯ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ ಹಾಗೆಯೇ2000ನೀರು ಪರೀಕ್ಷಿಸುವ ಲ್ಯಾಬೋರೇಟರಿಗಳನ್ನು ತೆರೆಯಲಾಗಿದೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಈ ಪ್ರಯೋಗಶಾಲೆಗಳು ಈಗಾಗಲೇ ಕಾರ್ಯನಿರತವಾಗಿದೆ. ಇದರ ಜತೆಗೆ ಕೊಳಾಯಿ ಕೆಲಸ ಮಾಡುವವರಿಗೆ ಸ್ಕಿಲ್ ಇಂಡಿಯಾ ಯೋಜನೆಯಲ್ಲಿ ತರಬೇತಿಯನ್ನು ನೀಡಿ ನೀರು ಸಂಪರ್ಕ ಪಡೆದ ಮನೆಗಳಲ್ಲಿ ಸಮಸ್ಯೆಯುಂಟಾದರೆ ಅದನ್ನು ಸ್ಥಳೀಯ ಮಟ್ಟದಲ್ಲಿಯೇ ರಿಪೇರಿ ಮಾಡು ವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಗೋವಾ, ತೆಲಂಗಾಣ, ಪುದುಚೇರಿ ಮತ್ತು ಅಂಡಮಾನ್ ನಿಕೋಬಾರ್‌ಗಳಲ್ಲಿ ಈಗಾಗಲೇ ಶೇ.100ರಷ್ಟು ಗ್ರಾಮೀಣ ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ನೀಡಲಾಗಿದೆ ಹಾಗೆಯೇ ಒರಿಸ್ಸಾದ ಪುರಿ ನಗರದ ಪ್ರತಿಯೊಂದು ಮನೆಗಳಿಗೂ ಕೊಳವೆ ನೀರಿನ ಮೂಲಕ ನೀರು ಸರಬರಾಜು ಮಾಡುತ್ತಿರುವ ಮೊದಲ ನಗರವಾಗಿದೆ. ಕರ್ನಾಟಕದಲ್ಲಿ ‘ಮನೆ ಮನೆಗೆ ಗಂಗೆ’ ಹೆಸರಿನಲ್ಲಿ ‘ಜಲಜೀವನ್ ಮಿಷನ್’ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯದ ಒಟ್ಟು94ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ2020ರ ಮಾರ್ಚ್‌ನ ತಿಂಗಳಲ್ಲಿ ಒಟ್ಟು24.72ಲಕ್ಷ ಮನೆಗಳಿಗೆ ಕೊಳಾಯಿ ಮೂಲಕ ನೀರು ದೊರೆಯುತ್ತಿತ್ತು. ಕಳೆದ ಒಂದು ವರ್ಷದಲ್ಲಿ8.17ಕೋಟಿ ಮನೆಗಳಿಗೆ ಈ ಯೋಜನೆಯಡಿಯಲ್ಲಿ ನೀರಿನ ಸಂಪರ್ಕ ಕೊಡಲಾಗಿದೆ ಮತ್ತು 2021-22ರಲ್ಲಿ25ಲಕ್ಷ ಮನೆಗಳಿಗೆ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ.
ಈಗಾಗಲೇ ಕೇಂದ್ರ ಸರಕಾರ ಯೋಜನೆಯ ಜಾರಿಗೆ ರಾಜ್ಯಕ್ಕೆ10ಸಾವಿರ ಕೋಟಿ ರು. ಬಿಡುಗಡೆ ಮಾಡಿದೆ. ‘ಜಲಜೀವನ್ ಮಿಷನ್’ ಯೋಜನೆಯು ಕೆಂಪುಗಂಬಳಿಯ ನಡಿಗೆಯ ಮೇಲೆ ನಡೆದ ಹಾಗೆ ಇಲ್ಲ ಅನೇಕ ತೊಂದರೆಗಳನ್ನು ಸವಾಲುಗಳನ್ನು ಎದುರಿಸುತ್ತಿದೆ. ಯೋಜನೆಯ ಕಾಮಗಾರಿ ಕೈಗೊಳ್ಳುವ ನುರಿತ ಗುತ್ತಿಗೆದಾರರು ಅವಶ್ಯವಿರುವ ಸಾಮಗ್ರಿಗಳ ಸರಬರಾಜು ಮತ್ತು ಕೇಂದ್ರ ಸರಕಾರ ಬಿಡುಗಡೆ ಮಾಡುವ ಅನುದಾನಕ್ಕೆ ತಕ್ಕ ಹಾಗೆ ರಾಜ್ಯ ಸರಕಾರಗಳು ತಮ್ಮ ಪಾಲಿನ ಮೊತ್ತವನ್ನು ನೀಡಲು ಉಂಟಾಗುತ್ತಿರುವ ವಿಳಂಬ ಕಾಮಗಾರಿಗೆ ಅಡ್ಡ ಗಾಲಾಗುತ್ತಿದೆ.
ಆದರೆ ಗ್ರಾಮೀಣ ಪ್ರದೇಶದಲ್ಲಿ ಈ ಯೋಜನೆಯಿಂದ ಉಂಟಾಗುವ ಲಾಭ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಮಹತ್ತರ ಸುಧಾರಣೆಯು ಪ್ರಮುಖವಾಗಿರುವ ಕಾರಣ ಸರಕಾರವು ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಪ್ರತಿನಿತ್ಯ ಹೊಸದಾಗಿ ಒಂದು ಲಕ್ಷ ಮನೆಗಳಿಗೆ ಕೊಳಾಯಿ ಮೂಲಕ ನೀರಿನ ಸಂಪರ್ಕ ಕೊಡುತ್ತಿದ್ದಾರೆ. ಮೋದಿ ಸರಕಾರ ಮಹಿಳಾ ಆರ್ಥಿಕ ಸಬಲೀಕರಣ, ಆರೋಗ್ಯ, ಸಶಕ್ತಿಕರಣ ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗೆ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳು ಗ್ರಾಮೀಣ ಬದುಕಿನಲ್ಲಿ ಹೊಸ ಭಾಷ್ಯವನ್ನು ಬರೆಯುತ್ತಿದೆ.
ದೇಶದ ರಾಜಕೀಯ ದಿಕ್ಕನ್ನೇ ಬದಲಿಸ ಬಹುದಾದ ಬೃಹತ್ ಯೋಜನೆಯನ್ನು ಮೋದಿಯವರ ದೂರದೃಷ್ಟಿಯಿಂದ ಜಾರಿಗೆ ಬರುತ್ತಿದೆ. ಕಳೆದ7ವರ್ಷದಲ್ಲಿ ಯೋಜನೆಗಳು ಘೋಷಣೆಗೆಸಿಮೀತವಾಗದೆ ನಿಗದಿತಅವಧಿಯಲ್ಲಿ ಜಾರಿಗೊಳಿಸುವ ವೃತ್ತಿಪರತೆಯನ್ನು ಸರಕಾರ ತೋರುತ್ತಿರುವುದು ದೇಶದಲ್ಲಿ ಅಪರೂಪದ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗಿದೆ.