ಏಡ್ಸ್’ಗೆ ವ್ಯಾಕ್ಸೀನ್ ಬರಲಿದೆಯೇ ?
ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
@.
ಏಡ್ಸ್ ಕಾಯಿಲೆ 1980ರ ದಶಕದಿಂದಲೂ ಮಾನವನಿಗೆ ವಿಪರೀತ ತೊಂದರೆ ಕೊಟ್ಟು ಕಾಡಿದ ಕಾಯಿಲೆ. ತಮಗೆಲ್ಲಾ ಗೊತ್ತಿರುವಂತೆ ಜಗತ್ತಿನಾದ್ಯಂತ ಲಕ್ಷಾಂತರ ಜನರ ಮರಣಕ್ಕೆ ಕಾರಣವಾದುದೇ ಅಲ್ಲದೇ, ಹಲವರು ವಿಧ ವಿಧದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾ ಬದುಕುತ್ತಿದ್ದಾರೆ.
ಇತ್ತೀಚಿನ ರಿಟ್ರೋವೈರಲ್ ಚಿಕಿತ್ಸೆಯು ಸ್ವಲ್ಪ ಸಮಾ ಧಾನಕರವಾಗಿ ರೋಗಿಗಳಿಗೆ ಅನುಕೂಲವಾಗುತ್ತಿದೆ, ಹಾಗೆಯೇ ಅವರ ಜೀವಿತ ಕಾಲ ಜಾಸ್ತಿ ಆಗುತ್ತಿದೆ.ಅತ್ಯಂತ ಸಂತೋಷದ ವಿಚಾರ ಎಂದರೆ ಈ ಎಚ್ ಐ ವಿ ವೈರಸ್‌ಗೆ ವಿಜ್ಞಾನಿಗಳು ವ್ಯಾಕ್ಸೀನ್ ಕಂಡು ಹಿಡಿಯುವ ದಿಸೆಯಲ್ಲಿದ್ದಾರೆ. ಎಚ್ ಐ ವಿ ವೈರಸ್ ರಿಟ್ರೋವೈರಸ್. ಅದರ ಜೆನೆಟಿಕ್ ವಸ್ತು ಆರ್ ಎನ್ ಏ, ಡಿಎನ್‌ಏ ಅಲ್ಲ. ಹಾಗಾಗಿ ವಿಜ್ಞಾನಿಗಳು ಈ ವೈರಸ್ ಗೆ  ವ್ಯಾಕ್ಸಿನ್ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿದ್ದಾರೆ. ಕೋವಿಡ್ ಕಾಯಿಲೆಗೆ ಕಂಡು ಹಿಡಿಯಲಾದ ಎಂ ಆರ್ ಎನ್ ಏ ವ್ಯಾಕ್ಸೀನ್‌ಗಳಾದ ಮಾಡೆರ್ನಾ ಮತ್ತು ಫೈಜರ್ ಲಸಿಕೆಗಳ ಸಫಲತೆ ವಿಜ್ಞಾನಿಗಳಿಗೆ ಈ ರೀತಿಯ ವ್ಯಾಕ್ಸೀನ್ ಗಳನ್ನು ಅಭಿವೃದ್ಧಿ ಪಡಿಸಲು ಪ್ರೇರೇಪಿಸಿತು.
ಮಾಡೆರ್ನಾ ಮತ್ತು ಹಲವು ವಿಶ್ವವಿದ್ಯಾಲಯಗಳು ಒಟ್ಟಾಗಿ ಅಮೆರಿಕದ ಸ್ಯಾನ್ ಆಂಟೋನಿಯಾದ ಟೆಕ್ಸಾಸ್ ವಿಶ್ವವಿದ್ಯಾನಿಲಯಗಳು ಕ್ಲಿನಿಕಲ್ ಟ್ರಯಲ್  ಮಾಡಲು ಉತ್ಸುಕವಾಗಿವೆ. -  1644 ಎಂದು ಕರೆಯ ಲಾಗುವ ಈ ಲಸಿಕೆ ಕೋವಿಡ್ ಕಾಯಿಲೆಯಲ್ಲಿ ಈಗ ಉಪಯೋಗವಾಗುತ್ತಿರುವ ಮಾಡೆರ್ನಾ ಮತ್ತು ಫೈಜರ್‌ ಗಳ ರೀತಿಯಲ್ಲಿಯೇ ಕೆಲಸ ಮಾಡುತ್ತದೆ ಎನ್ನಲಾಗಿದೆ. ಈ ವ್ಯಾಕ್ಸೀನ್‌ನ ಇಂಜೆಕ್ಷನ್, ವೈರಸ್‌ಗೆ ನಿರ್ದಿಷ್ಟವಾದ ಪ್ರೋಟೀನ್ ಉತ್ಪಾದಿಸಲು ದೇಹಕ್ಕೆ ಸೂಚನೆ ಕೊಡುತ್ತದೆ.
ನಂತರ24-48ಗಂಟೆಗಳಲ್ಲಿ ಹೊರಗಿನ ವಸ್ತು ಎಂದು ಗುರುತಿಸಿ ದೇಹದಲ್ಲಿ ಪ್ರತಿರೋಧ ಶಕ್ತಿ ಹುಟ್ಟು ಹಾಕು ತ್ತದೆ. ಮುಂದಿನ ಬಾರಿ ಪ್ರೋಟೀನ್ ( ಅಂದರೆ ಇಲ್ಲಿ ಎಚ್ ಐ ವಿ ವೈರಸ್ ) ದೇಹವನ್ನು ಪ್ರವೇಶಿಸಿದಾಗ ದೇಹದ ಪ್ರತಿರೋಧ ವ್ಯವಸ್ಥೆಯು ತಕ್ಷಣ ಅದನ್ನು ಗುರುತಿಸಿ ನ್ಯೂಟ್ರಲೈಸ್ ಮಾಡುತ್ತದೆ. ಈ ವ್ಯಾಕ್ಸೀನ್‌ನ ಈಗ ನಡೆಯುತ್ತಿರುವ ಮೊದಲ ಫೇಸ್ಟ್ರಯಲ್‌ನಲ್ಲಿ ಈ ವ್ಯಾಕ್ಸೀನ್ ಪ್ರತಿರೋಧ ಪ್ರತಿಕ್ರಿಯೆಯನ್ನು ಹುಟ್ಟು ಹಾಕುವುದೇ ಎಂದು ನೋಡಲಾಗುತ್ತದೆ. ಇದು ಸಫಲ ವಾದರೆ ಮುಂದಿನ ಟ್ರಯಲ್‌ಗಳಲ್ಲಿ ಇದರ ಸಫಲತೆಯನ್ನು ಪರೀಕ್ಷಿಸಲಾಗುತ್ತದೆ.
ಮಾಡೆರ್ನಾ ಕಂಪನಿಯು ಇತ್ತೀಚೆಗೆ ಎಂದರೆ ಆಗಸ್ಟ್19ರಿಂದ ಈ ಲಸಿಕೆಯ ಫೇಸ್1 ಟ್ರಯಲ್ ಆರಂಭಿಸಿದೆ. ಮೊದಲ ಹಂತದ ಈ ಟ್ರಯಲ್ ನಲ್ಲಿ18-50ವರ್ಷದ ಒಳಗಿನ  ಇಲ್ಲದ ಆರೋಗ್ಯವಂತ56ವಯಸ್ಕರಲ್ಲಿ ಪರೀಕ್ಷಿಸಲಾಗುತ್ತದೆ. ಮುಖ್ಯವಾದ ಉದ್ದೇಶ ಅಂದರೆ ವ್ಯಾಕ್ಸೀನ್ ನ ಸುರಕ್ಷತೆ ಮತ್ತು ಪ್ರತಿ ರೋಧ ಪ್ರಕ್ರಿಯೆಯನ್ನು ಪರೀಕ್ಷಿಸಲಾಗುತ್ತದೆ. ಈ ವ್ಯಾಕ್ಸೀನ್ ಕಾರ್ಯ ಚಟುವಟಿಕೆಯಲ್ಲಿ ಕೋವಿಡ್ ಕಾಯಿಲೆಯಲ್ಲಿ ಯಶಸ್ವಿಯಾಗಿ ಉಪಯೋಗವಾಗುತ್ತಿರುವ ವ್ಯಾಕ್ಸೀನ್ ರೀತಿಯಲ್ಲಿಯೇ ಇದೆ.
ಹಲವಾರು ವರ್ಷಗಳಿಂದ ಸಂಶೋಧಕರು  ಲಸಿಕೆಗಳ ಉಪಯುಕ್ತತೆಯನ್ನು ಪರೀಕ್ಷಿಸುತ್ತಲೇ ಇದ್ದಾರೆ. ಫೈಜರ್ ಮತ್ತು ಮೊಡೆರ್ನಾಗಳ ಕೋವಿಡ್ ಲಸಿಕೆಗಳು ಮನುಷ್ಯರಲ್ಲಿ ಪ್ರಯೋಗಿಸಿದ ಮೊಟ್ಟ ಮೊದಲ mRNAಲಸಿಕೆಗಳು. ಅವೆರೆಡೂ ಮನುಷ್ಯರಲ್ಲಿ ಸುರಕ್ಷಿತ. ಹಾಗೂ ಕರೋನಾ ಸೋಂಕಿನ ತೀವ್ರತೆ ಕಡಿಮೆ ಮಾಡಲು ಮತ್ತು ಕೋವಿಡ್ ಬರದಿರುವಂತೆ ಮಾಡುವಲ್ಲಿ ತುಂಬಾ ಸಫಲತೆ ತೋರಿಸಿವೆ.
ಈ ವ್ಯಾಕ್ಸೀನ್ ಕೆಲಸ ಮಾಡುವ ವಿಧಾನ ಹೇಗೆ ?
ಈಗಾಗಲೇ ತಿಳಿಸಿರುವಂತೆ - 1644ಎಂದು ಕರೆಯಲ್ಪಡುವ ಈ ವ್ಯಾಕ್ಸೀನ್ ನಮ್ಮ ದೇಹದ ಪ್ರತಿರೋಧ ವ್ಯವಸ್ಥೆಯ  ಜೀವಕೋಶಗಳನ್ನು ಪ್ರಚೋದಿಸುತ್ತದೆ.  ಬಿ ಜೀವಕೋಶಗಳೆಂದರೆ ಆಂಟಿಬಾಡಿಗಳನ್ನು (ಪ್ರತಿಕಾಯಗಳು) ಉತ್ಪಾದಿಸುವ ಬಿಳಿ ರಕ್ತ ಕಣಗಳು. ಇವು ಹೊರಗಿನಿಂದ ಆಕ್ರಮಣ ಮಾಡುವ ಬ್ಯಾಕ್ಟೀರಿಯಾ, ವೈರಸ್ ಗಳಿಗೆ ಅಂಟಿಕೊಳ್ಳುತ್ತವೆ. ಈ ಬಿ ಜೀವಕೋಶಗಳನ್ನು ಪ್ರಚೋದಿಸುವ ಮುಖ್ಯ ಉದ್ದೇಶ ಎಂದರೆ ಬ್ರಾಡ್ ಲೀ ನ್ಯೂಟ್ರ ಲೈಸಿಂಗ್ ಆಂಟಿಬಾಡಿಗಳನ್ನು (   ) ಹುಟ್ಟು ಹಾಕಲು. ಈ   ಹೆಚ್ ಐ ವಿ ಯ ಪ್ರೋಟೀನ್‌ನ ಹೊರಭಾಗದಲ್ಲಿ ಅಂಟಿಕೊಳ್ಳುವ ವಿಶಿಷ್ಠ ವಾದ ರಕ್ತದ ಪ್ರೋಟೀನ್ ಗಳು.
ಇವು ಎಚ್ ಐ ವಿ ಪ್ರೋಟೀನ್‌ನ್ನು ನಿಷ್ಕ್ರಿಯಗೊಳಿಸುತ್ತವೆ. ಪ್ರಯೋಗಾಲಯಗಳ ವಿಶ್ಲೇಷಣೆ ಹಾಗೂ ಪ್ರಾಣಿಗಳಲ್ಲಿ ಕೈಗೊಂಡ ಪ್ರಯೋಗಗಳು, ಮೇಲಿನ ನಿರ್ದಿಷ್ಟ ಸ್ಥಳಗಳ ಮಾಹಿತಿಯು ಇಮ್ಯುನೋಜೆನ್ ಉತ್ಪಾದಿಸಲು ಸಹಾಯವಾಗಿವೆ. ಲ್ಯಾಬ್‌ನಲ್ಲಿ ಡಿಸೈನ್ ಮಾಡಿದ ಒಂದು ಇಮ್ಯುನೋಜೆನ್ ಎಂದರೆ -GT8 60mer. ಫೇಸ್ 1ರ ಟ್ರಯಲ್‌ನಲ್ಲಿ ಮಾನವ ಪ್ರತಿರೋಧ ವ್ಯವಸ್ಥೆಯನ್ನು ಪ್ರಚೋದನಗೊಳಿಸಿ ಈ   ಆಂಟಿಬಾಡಿಗಳನ್ನು ಹುಟ್ಟು ಹಾಕಲು ಪ್ರಯತ್ನಿಸ ಲಾಗುತ್ತದೆ.
ಮಾಡೆರ್ನಾ ಟ್ರಯಲ್ ನಲ್ಲಿmRNAತಾಂತ್ರಿಕತೆ ಬಳಸಿ - 8 60  ಎಂಬ ಇಮ್ಯುನೋಜೆನ್‌ನ್ನು ಪರಿಣಾಮಕಾರಿಯಾಗಿ ಸಾಗಿಸಲು ಯೋಜನೆ ರೂಪಿಸಲಾಯಿತು. ನಂತರ ಈ ಇಮ್ಯುನೋಜೆನ್   ಆಂಟಿಬಾಡಿಗಳನ್ನು ಮಾಡುವಂತೆ ಜೀವಕೋಶಗಳಿಗೆ ನಿರ್ದೇಶನ ಕೊಡುವಂತೆ ಮಾಡಲಾಯಿತು. ಈ ಆಂಟಿಬಾಡಿಗಳು  ವೈರಸ್ ವಿರುದ್ಧ ಪ್ರತಿರೋಧ ಪ್ರಕ್ರಿಯೆಯನ್ನು ಹುಟ್ಟು ಹಾಕುತ್ತವೆ. ಈ ಟ್ರಯಲ್‌ಗೆ ಮಾಡೆರ್ನಾ ಕಂಪನಿಯು  ವೈರಸ್ ದೇಹದಲ್ಲಿ ಹೊಂದಿರದ56ಆರೋಗ್ಯವಂತ ವಯಸ್ಕರನ್ನು ನಿಯೋಜಿಸಿ ಈ ವ್ಯಾಕ್ಸೀನ್ ನ ಸುರಕ್ಷತೆ ಮತ್ತು ಮೂಲಭೂತ ಪ್ರತಿರೋಧ ಪ್ರಕ್ರಿಯೆಯನ್ನು ತಿಳಿಯಲು ಉದ್ದೇಶಿ ಸಿದೆ.
ಈ ರೀತಿಯ ವಿಧಾನ ಆಶಾದಾಯಕವೇ ? ಏಕೆ ?
ಎಚ್ ಐ ವಿ ಗೆ ವ್ಯಾಕ್ಸೀನ್ ಕಂಡು ಹಿಡಿಯುವುದು ವೈಜ್ಞಾನಿಕ ಸಂಶೋಧನೆಯಲ್ಲಿ ಪ್ರಮುಖ ವಿಚಾರ ಎಂದು ವಿಜ್ಞಾನಿಗಳ, ಸಂಶೋಧಕರ ಅಭಿಮತ. ಆಂಟಿ ರಿಟ್ರೋವೈರಲ್ ಚಿಕಿತ್ಸೆಯು ಏಡ್ಸ್ ಪೀಡಿತ ವ್ಯಕ್ತಿಗಳ ಆಯುಷ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಆದರೆ ಇದನ್ನು ಜೀವಮಾನವಿಡೀ ತೆಗೆದುಕೊಳ್ಳ ಬೇಕಾಗುತ್ತದೆ.
ಇದು ಹಲವರಿಗೆ ವೆಚ್ಚದ ಚಿಕಿತ್ಸೆ ಎನಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ2020ರ ಹೊತ್ತಿಗೆ ಸುಮಾರು37.7ಮಿಲಿಯನ್ ವ್ಯಕ್ತಿಗಳು ಇದ್ದಾರೆ. ಅದರಲ್ಲಿ ಕೆಲವರು ತೀವ್ರ ರೀತಿಯ ಸೋಂಕಿಗೆ ಒಳಗಾಗಿದ್ದಾರೆ.  ಮೂಲದ ಇಮ್ಯುನೋಜೆನ್‌ಗಳು ಆಶಾದಾಯಕ ಚಿಕಿತ್ಸೆ ಎಂದು ಒಂದು ನಂಬಿಕೆ. ಏಕೆಂದರೆ ಇವು ಜೀವಂತ ವೈರಸ್ ಗಳನ್ನು ಹೊಂದಿಲ್ಲ, ಬಹಳ ಸುಲಭವಾಗಿ ಹುಟ್ಟು ಹಾಕಬಹುದು, ಬಹಳ ಬೇಗ ಸಾಗಿಸಬಹುದು. ಹಾಗೂ ಸುರಕ್ಷತ ವಾಗಿ ಲಸಿಕೆ ಕೊಡಬಹುದು. ಇದರ ಮುಖ್ಯ ಅವಗುಣ ಎಂದರೆ ಇವು ಸಹಜವಾದ ತಾಪಮಾನದಲ್ಲಿ ಸ್ಥಿರವಾಗಿರುವುದಿಲ್ಲ.
ಆದರೆ ಕರೋನಾ ವೈರಸ್‌ಗೆ ಅಭಿವೃದ್ಧಿ ಪಡಿಸಿದ ಈ ರೀತಿಯ ಲಸಿಕೆಗಳು ವಿಜ್ಞಾನಿಗಳಿಗೆ ವರವಾಗಿ ಪರಿಣಮಿಸಿದೆ. ಫೈಜರ್ ಮತ್ತು ಮೊಡೆರ್ನಾ ಲಸಿಕೆಗಳುವ್ಯಕ್ತಿ ಆಸ್ಪತ್ರೆಯಲ್ಲಿ ದಾಖಲಾಗಬೇಕಾದ ಸಂದರ್ಭ ಗಳನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಈ ರೀತಿಯ ಲಸಿಕೆಗಳ ಮೇಲೆ ವಿಜಾನಿಗಳಿಗೆ ನಂಬಿಕೆ ಬಂದಿದೆ.
ಮುಂದಿನ ಸವಾಲುಗಳು ಏನು ?
 ಸೋಂಕಿತರಲ್ಲಿ 2/3 ಭಾಗದಷ್ಟು ವ್ಯಕ್ತಿಗಳು ಆಫ್ರಿಕಾದಲ್ಲಿದ್ದಾರೆ.  ಕಡಿಮೆ ಮಾಡುವುದೆಂದರೆ ಆಫ್ರಿಕಾದಲ್ಲಿ ಹರಡುವ ವೇಗವನ್ನು ಕಡಿಮೆ ಮಾಡಬೇಕು. ಈಗಿನ ಕರೋನಾ ಲಸಿಕೆಯ ಹಂಚಿಕೆಯನ್ನು ಗಮನಿಸಿದಾಗ ಯಾರಿಗೆ ಈ ಲಸಿಕೆಗಳು ಅಗತ್ಯವಿದೆಯೋ ಅಲ್ಲಿ ಲಭಿಸುವಂತೆ ಮಾಡುವುದು ಬಹಳ ದೊಡ್ಡ ಸವಾಲು. ಹಾಗೆಯೇ ಈ ರೀತಿಯ - ಲಸಿಕೆಗಳನ್ನು ತೀರಾ ಕೆಳಗಿನ ತಾಪಮಾನದಲ್ಲಿ ದಾಸ್ತಾನು ಮಾಡಬೇಕಾದ್ದರಿಂದ ಅದು ಅಭಿವೃದ್ಧಿಯ ಹಂತದ ದೇಶಗಳಿಗೆ ತುಂಬಾ ಕಷ್ಟವಾಗುತ್ತದೆ.   ವೈರಸ್‌ ಹಲವು ಬಾರಿ  ಆಗಿದೆ. ಹಾಗಾಗಿmRNAತಾಂತ್ರಿಕತೆಯ ಮೂಲಕ ಈ ವ್ಯಾಕ್ಸೀನ ನ್ನು ಉತ್ಪಾದಿಸಲು ಸಾಧ್ಯ ಎಂದು ಹೇಳಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು ಎಂದು ವಿಜ್ಞಾನಿಗಳ ಅಭಿಮತ.
   ಸಂಕೀರ್ಣತೆ:ಹಾಗಾದರೆ    ವೈರಸ್ ಗೆ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಲು ಕಷ್ಟವಾಗುತ್ತಿದೆ ಏಕೆ ? ಈ ವೈರಸ್ ನ ಅಂಗರಚನಾ ಗುಣಗಳು ಯಾವವ್ಯಾಕ್ಸಿನ್ ಸಹಿತ ಇದರ ವಿರುದ್ಧ ಸಫಲವಾಗಲು ಸಾಧ್ಯವಾಗದ ಹಾಗಿದೆ. ಹಾಗಾದರೆ ಆ ಗುಣಗಳೇನು? – ಮುಖ್ಯವಾದ ಗುಣವೆಂದರೆ ಈ ವೈರಸ್ ಅವಿರತವಾಗಿವೃದ್ದಿಸುತ್ತಾ ಹೋಗುತ್ತದೆ. ಅದಕ್ಕೆ ಸ್ವಲ್ಪ ಕಾಲು ಚಾಚಲು ಅವಕಾಶ ಸಿಕ್ಕಿದರೂ ಅದನ್ನು ಗರಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ ಲೆಕ್ಕಕ್ಕೆ ಸಿಗಲಾರದಷ್ಟು ತನ್ನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ ಯಾವುದೇ ಲಸಿಕೆಯೂ ಸೋಂಕು ಬರುವುದನ್ನು ತಪ್ಪಿಸುವುದಿಲ್ಲ. ಆದರೆ ಅದು ವೈರಸ್ ವೃದ್ಧಿಯಾಗುವುದನ್ನು ನಿಲ್ಲಿಸಿ ಕಾಯಿಲೆ ಹೆಚ್ಚಾಗದಂತೆನೋಡಿಕೊಳ್ಳುತ್ತದೆ. ಆದರೆ  ವಿರುದ್ಧದ ಲಸಿಕೆಯು ಹೀಗೆ ಮಾಡಿದರೆ ಸಾಕಾಗುವುದಿಲ್ಲ. ಅದು ವೈರಸ್ ನ ವೃದ್ಧಿ ನಿಲ್ಲಿಸಿದರೆ ಸಾಕಾಗುವುದಿಲ್ಲ. ವೈರಸ್ ನ ವಿರುದ್ಧ ಸಂಪೂರ್ಣ ಸೋಂಕು ರಹಿತ ಕವಚವನ್ನೇ ನಿರ್ಮಿಸಬೇಕಾಗುತ್ತದೆ.
 ವೈರಸ್ ಹಲವು ರೀತಿಯಲ್ಲಿ ತನ್ನ ಜೆನೆಟಿಕ್ ವಸ್ತುವಿನ ಮ್ಯುಟೇಷನ್ ಹೊಂದುವ ಸಾಮರ್ಥ್ಯ () ಹೊಂದಿದೆ. ಹಾಗಾಗಿ ವೈರಸ್‌ನ ವಿಧಗಳಲ್ಲಿ ಬಹಳಷ್ಟು ವೈವಿಧ್ಯತೆಗಳಿವೆ. ಇವು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಯಲ್ಲಿ ಮಾತ್ರವಲ್ಲ. ಒಂದೇ ವ್ಯಕ್ತಿಯಲ್ಲೂ ನಾವು ವಿಭಿನ್ನ  ನ ವೈರಸ್ಕಾಣಬಹುದು. ಉದಾ: ಇನ್ ಫ್ಲುಯೆಂಜಾವೈರಸ್ ತನ್ನ ವಿಧವನ್ನು ಬದಲಾಯಿಸುವುದರಿಂದ ಪ್ರತಿಯೊಂದು ಭಿನ್ನ ಸೀಸನ್‌ಗೆ ಬೇರೆ ವ್ಯಾಕ್ಸೀನ್ ತೆಗೆದುಕೊಳ್ಳಬೇಕಾಗುತ್ತದೆ. ಇನ್ ಫ್ಲುಯೆಂಜಾವೈರಸ್ ಒಂದು ಸೀಸನ್ ನಲ್ಲಿ ಜಗತ್ತಿನಾದ್ಯಂತ ಎಷ್ಟು Sequenceಬದಲಾಯಿಸುತ್ತದೆಯೋ ಅಷ್ಟು ಭಿನ್ನತೆ ಒಂದೇ ವ್ಯಕ್ತಿ ಯಲ್ಲಿನHIVವೈರಸ್ ನ ಭಿನ್ನತೆಯಲ್ಲಿದೆ.
ಹಾಗಾದರೆ ಈ ರೀತಿಯ  ಭಿನ್ನತೆಯ ಸಮಸ್ಯೆ ನಿಭಾಯಿಸುವುದು ಹೇಗೆ ?ಈ ವೈರಸ್ ಆಂಟಿಬಾಡಿಗಳಿಂದ ಗುರುತಿಸುವಿಕೆಯನ್ನು ತಪ್ಪಿಸಿಕೊಳ್ಳುವ ಚಾಕಚಕ್ಯತೆ ಕಲಿತಿದೆ. ಕರೋನಾ ವೈರಸ್ ಮತ್ತು ಹರ್ಪಿಸ್ ವೈರಸ್ ಗಳು ತಮ್ಮ ಹೊರಪದರದ ಮೇಲೆ ಒಂದು ವಿಶಿಷ್ಟ ಗುರುತು ಇಟ್ಟುಕೊಳ್ಳುತ್ತವೆ. ಅದರ ಮೂಲಕ ಮಾನವ ಜೀವಕೋಶಗಳ ಒಳ ಸೇರುತ್ತವೆ. ಇದನ್ನು ಗ್ಲೈಕೋಪ್ರೋಟೀನ್‌ ಗಳೆಂದು ಕರೆಯುತ್ತಾರೆ. ಅಂದರೆ ಇದರಲ್ಲಿ ಸಕ್ಕರೆ ಮತ್ತು ಪ್ರೋಟೀನ್ ಎರಡೂ ಇರುತ್ತವೆ. ಆದರೆHIVಯ ಸುತ್ತುವರಿದ ಗ್ಲೈಕೋಪ್ರೋಟೀನ್ ತುಂಬಾ ವಿಶಿಷ್ಠ ವಾಗಿದೆ. ಎಲ್ಲಾ ವೈರಸ್‌ಗಳ 22 ಕುಟುಂಬದ ವೈರಸ್ ಗಳಲ್ಲಿ ಇದು ಭಾರವಾದ ಸಕ್ಕರೆ ಮತ್ತು ಪ್ರೋಟೀನ್‌ಗಳನ್ನು ಹೊಂದಿದೆ. ಈ ವೈರಸ್ ನ ಅರ್ಧಕ್ಕಿಂತ ಹೆಚ್ಚು ತೂಕ ಸಕ್ಕರೆಯದೇ.
ಆಂಟಿಬಾಡಿಗಳಿಂದ ಗುರುತಿಸುವಿಕೆಯನ್ನು ತಪ್ಪಿಸಿಕೊಳ್ಳಲು ಇದು ಈ ಸಕ್ಕರೆಯನ್ನು ತನ್ನ ಕವಚವಾಗಿ ಉಪಯೋಗಿಸುತ್ತದೆ. ಆಗ ವ್ಯಕ್ತಿಯ ಜೀವಕೋಶವು ಈಸಕ್ಕರೆಯನ್ನು ತನ್ನ ದೇಹದ್ದೇ ಇರಬೇಕೆಂದು ತಪ್ಪು ತಿಳಿದು ತನ್ನ ಕೋಶದೊಳಗೆ ಸೇರಿಸಿಕೊಂಡು ಬಿಡುತ್ತದೆ. ಲಸಿಕೆಯನ್ನು ಅಭಿವೃದ್ಧಿಪಡಿಸಲು ಈ ಮೇಲಿನಗುಣಗಳು ಮುಖ್ಯವಾದ ಸಂಬಂಧ ಹೊಂದಿವೆ. ಏಐ ಸೋಂಕಿತ ವ್ಯಕ್ತಿ ಉಂಟುಮಾಡುವ ಆಂಟಿಬಾಡಿಯು ತುಂಬಾ ಶಕ್ತಿಹೀನವಾಗಿರುತ್ತದೆ. ಅಲ್ಲದೆ ಈ ಆಂಟಿ ಬಾಡಿಗಳು ಒಂದು ನಿರ್ದಿಷ್ಟ  ಗೆ ಮಾತ್ರ ಸೀಮಿತವಾಗಿ ನ್ಯೂಟ್ರಲೈಸ್ ಮಾಡಬಲ್ಲವು. ಜನಾಂಗದಲ್ಲಿರುವ ಉಳಿದ  ಗಳ ಬಗ್ಗೆ ಇವು ಏನೂಮಾಡಲಾರವು. ಸಂಶೋಧಕರಿಗೆ ಒಂದು  ಗಳ ಬಗ್ಗೆ ನ್ಯೂಟ್ರಲೈಸ್ ಮಾಡುವ ಆಂಟಿಬಾಡಿ ಉತ್ಪದಿಸುವುದು ಗೊತ್ತಿದೆ.
ಉಳಿದ ಸಾವಿರಾರು ಪ್ರಭೇದಗಳಿಗೆ ಆಂಟಿಬಾಡಿಗಳನ್ನು ಉಂಟುಮಾಡಲು ಸಾಧ್ಯವಿಲ್ಲದಿರುವುದೇ ಲಸಿಕೆಯ ಅಭಿವೃದ್ಧಿಗೆ ತೊಡಕಾಗಿರುವುದು. ಸೋಂಕಿತ ವ್ಯಕ್ತಿಯ ಜೀವಕೋಶ ದಲ್ಲಿ ಆತನ ಈ ಹೆಚ್ ಐ ವಿ ಪ್ರತಿರೋಧ ಪ್ರಕ್ರಿಯೆಗಿಂತ ಒಂದು ಹೆಜ್ಜೆ ಮುಂದಿರುತ್ತದೆ. ಈ  ವೈರಸ್ ವ್ಯಕ್ತಿಯ ಜೀವಕೋಶ ಛೇದಿಸಲು ಒಂದು ನಿರ್ದಿಷ್ಟ ಪ್ರತಿರೋಧ ಪ್ರಕ್ರಿಯ ತೋರಿಸುತ್ತದೆ. ಆದರೆ  ಯ ಭಿನ್ನ ಭಿನ್ನ ಮ್ಯುಟೇಶನ್ ಹೊಂದಿದ ವಿಧಗಳಿಗೆ ಈ ಪ್ರತಿರೋಧ ಪ್ರಕ್ರಿಯೆ ಏನೂ ಸಾಕಾಗದೆ ಅದು ತನ್ನ ವಂಶಾಭಿವೃದ್ಧಿಯನ್ನು ಅವಿರತವಾಗಿ ಮುಂದುವರಿಯುತ್ತದೆ.
ಏಐ ವೈರಸ್‌ಗೆ ಲಸಿಕೆ ಅಭಿವೃದ್ಧಿ ಪಡಿಸಲು ಇದುವರೆಗೆ 5 ದೊಡ್ಡ ಮಟ್ಟದ ಫೇಸ್   ವಿಜ್ಞಾನಿಗಳು ಕೈಗೊಂಡಿದ್ದಾರೆ. ಇದಕ್ಕೆ ಸುಮಾರು 100 ಮಿಲಿಯನ್ ಅಮೆರಿಕನ್ ಡಾಲರುಗಳು ಖರ್ಚಾಗಿರಬಹುದೆಂದು ಅಂದಾಜಿಸಲಾಗಿದೆ. ಇವೆಲ್ಲವೂ ಪ್ರಯೋಜನವಾಗದೆ ಈ ವೈರಸ್ ಬೆಳಕಿಗೆ ಬಂದು 37 ವರ್ಷ ಗಳಾದರೂ ವ್ಯಾಕ್ಸೀನ್ ಕಂಡು ಹಿಡಿಯಲು ಸಾಧ್ಯವಾಗಿಲ್ಲ.