ಗೆಲುವಿನ ತಿಳಿನಗೆಯಲಿ ತೇಲುತಿರುವ ಸರಳ ಸುಂದರಿ ಗುಪ್ತಗಾಮಿನಿ ನೀನಾ…
ಯಶೋ ಬೆಳಗು
ಯಶೋಮತಿ ಬೆಳಗೆರೆ
ದಿಲ್ ಹಿ ತೊ ಹೈನ ಸಂಗೊ ಖಿಷ್ತ್ದರ್ದ್ ಸೆ ಭರ್ ನ ಆಯೆ ಕ್ಯುರೋಯೆಂಗೆ ಹಮ್ಹಜಾರ್ ಬಾರ್ಕೋಯಿ ಹಮೆ ಸತಾಯೆ ಕ್ಯು…..
ಅನ್ನುವ ಮುದುರಿದ, ಅಲ್ಲಲ್ಲಿ ಹರಿದು ಹೋದ, ಅರ್ಧದಲ್ಲೇ ಉಳಿದು ಹೋದ ಸಣ್ಣ ಕಾಗದದ ತುಂಡೊಂದರಲ್ಲಿ ಶಾಯರೋಂಕಾ ಶೆಹನ್ ಷಾ ಜನಾಬ್ ಮಿರ್ಜಾ ಗಾಲಿಬ್ ರ ಪುಟ್ಟ ಕವಿತೆಯ (ಶೇರ್) ಯ ಸಾಲುಗಳನ್ನು ಕಂಡು ಭಾವುಕಳಾಗಿ ಹಾಡುವಾಗ ಏಳು ತಿಂಗಳ ತುಂಬು ಗರ್ಭಿಣಿ.
1988ರಲ್ಲಿ ಮಿರ್ಜಾ ಗಾಲಿಬ್ ಅನ್ನುವ ಆಜಿಟmಜ್ಚಿ ನ್ನು ಮತ್ತೊಬ್ಬ ಮಹಾನ್ ಕವಿ ಗುಲ್ಜಾರ್ ತಮ್ಮದೇ ಸ್ಕ್ರಿಪ್ಟ್ ಹಾಗೂ ನಿರ್ದೇಶನದಲ್ಲಿ ದೂರದರ್ಶನಕ್ಕಾಗಿ ನಿರ್ಮಿಸಿದಾಗ ನಾಸಿರುದ್ದೀನ್ ಶಾ, ತನ್ವಿ ಅಜ್ಮಿ, ಸುಽರ್ ದಳವಿಯವರೊಂದಿಗೆ ನವಾಬ್ ಜಾನ್ ಅನ್ನುವ ವಿಶೇಷವಾದ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದರು ನೀನಾ ಗುಪ್ತ. ಎಂಟು ಅಕಾಡೆಮಿ ಅವಾರ್ಡುಗಳನ್ನು ಗಳಿಸಿದ ಹಾಲಿವುಡ್‌ನ ಗಾಂಧಿ ಸಿನೆಮಾದಲ್ಲಿ ಸದಾ ಗಾಂಧಿಯ ನೆರಳಾಗಿರುವ ಆಭಾ ಬೆಹನ್ ಪಾತ್ರದಲ್ಲಿ ನಟಿಸಿದವರು, ಬಾಲಿವುಡ್‌ನ ಹೆಸರಾಂತ ನಿರ್ದೇಶಕರಾದ ಶ್ಯಾಮ್ ಬೆನಗಲ್ ಹಾಗೂ ಸತ್ಯಜಿತ್ ರೇ ಅವರ ಸಿನೆಮಾಗಳಲ್ಲಿ ನಟಿಸುತ್ತಾ ಅವರಿಂದ ಸಾಕಷ್ಟು ಕಲಿತವರು.
ಅಷ್ಟೇ ಅಲ್ಲ ಶಶಿಕಪೂರ್ ನಿರ್ಮಿಸಿದ ಉತ್ಸವ್ ಅನ್ನುವ ಹಿಂದಿ ಸಿನೆಮಾವನ್ನು ನಮ್ಮ ಕನ್ನಡ ನೆಲದ ಪದ್ಮ ಶ್ರೀ, ಪದ್ಮಭೂಷಣ ಹಾಗೂ ಜ್ಞಾನಪೀಠ ಪ್ರಶಸ್ತಿಪುರಸ್ಕೃತರಾದಂಥ ಹೆಸರಾಂತ ನಾಟಕಕಾರ, ನಿರ್ದೇಶಕ ಹಾಗೂ ನಟರಾದ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ಸುಮಾರು ಐದನೇ ಶತಮಾನದ ಕಾಲಘಟ್ಟ ದಲ್ಲಿ ನಡೆದ ಮೃಚ್ಛಕಟಿಕ ಅನ್ನುವ ಸಂಸ್ಕೃತ ನಾಟಕವನ್ನು ಸಿನೆಮಾ ರೂಪಕ್ಕಿಳಿಸುವ ಸಾಹಸದಲ್ಲಿ ತಾವೊಂದು ಪಾತ್ರವಾಗಿ ಜನರ ಮನದಲ್ಲುಳಿದವರು.
ಕಲಾತ್ಮಕತೆಯ ದೃಷ್ಟಿಕೋನವಿದ್ದವರಿಗೆ ಮಾತ್ರ ಗ್ರಹಿಕೆಯ ನಿಲುಕಿಗೆ ಸಿಗುವಂಥ ಚಿತ್ರಗಳು ಸಾಮಾನ್ಯ ಜನರಿಂದ ದೂರವೇ ಉಳಿದು ಹೋಗುವ ಕಾರಣ ದಿಂದಾಗಿ ಕಮರ್ಷಿಯಲ್ ಚಿತ್ರಗಳಿಗಿಂತ ವಿಭಿನ್ನವಾದ ಉತ್ಸವ್ ಸಿನೆಮಾ ಬಾಕ್ಸಾಫೀಸಿನಲ್ಲಿ ಅಂಥ ಸದ್ದು ಮಾಡಲಿಲ್ಲವಾದರೂ ಕಲಾತ್ಮಕತೆಯ ಲೇಪದಲ್ಲಿ ಅತ್ಯದ್ಭುತವಾಗಿ ಮೂಡಿಬಂದಂಥ ಚಿತ್ರವದು. ಮೇರು ನಟಿಯಾದ ರೇಖಾ, ಅಮ್ಜದ್ ಖಾನ್, ಅನುರಾಧಾ ಪಟೇಲ್ ಹಾಗೂ ಶೇಖರ್ ಸುಮನ್ ರ ನಡುವೆ ನಮ್ಮ ಕನ್ನಡದ ನಟರಾದ ಶಂಕರ್ ನಾಗ್ ಕೂಡ ಒಬ್ಬರು ಅನ್ನುವುದು ವಿಶೇಷ.
ಸಜ್ಜಲ್ ಅನ್ನುವ ಕಳ್ಳನ ಪಾತ್ರದಲ್ಲಿ ಶಂಕರ್ ನಾಗ್ ಎದುರು ಮದನಿಕೆಯ ಪಾತ್ರದಲ್ಲಿ ನೀನಾ ಗುಪ್ತ ಬಹಳ ರೋಚಕವಾದ ನಟನೆಯಲ್ಲಿ ಪಾಲ್ಗೊಳ್ಳುವಷ್ಟರ ಲ್ಲಾಗಲೇ ಮಗಳು ಮಸಾಬಾ ಗುಪ್ತಾಗೆ ತಾಯಿಯಾಗಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಪಡ್ಡೆ ಹುಡುಗರ ಬಾಯಲ್ಲಿ ಗುನುಗುವ ‘ಚೋಲಿ ಕೆ ಪೀಛೆ ಕ್ಯಾ ಹೈ‘ ಅನ್ನುವ ದ್ವಂದ್ವಾರ್ಥದ ಹಾಡಿನಲ್ಲಿ ಎಲ್ಲ ಹಿಂಜರಿಕೆಯ ನಡುವೆಯೂ ಮಾಧುರಿ ದೀಕ್ಷಿತ್‌ರ ಜತೆಯಲ್ಲಿ ದಿಟ್ಟವಾಗಿ ನಟಿಸಿದವರು. ನಿರ್ದೇಶಕಿಯಾಗಿ, ನಿರ್ಮಾಪಕಿ ಯಾಗಿ ಹಾಗೂ ವೊ ಚೋಕ್ರಿ ಸಿನೆಮಾದ ಬಾಲ ವಿಧವೆಯ ಪಾತ್ರಕ್ಕಾಗಿ ರಾಷ್ಟ್ರಪ್ರಶಸ್ತಿಗಳಿಸಿಯೂ ಸಹ ಯಾವುದೇ ಅಹಂ ಇಲ್ಲದೆ ಅದೇ ಸರಳ ನಗುವಿ ನೊಂದಿಗೆ ಎಲ್ಲರೊಡನೆ ಬೆರೆಯುವ ಸರಳ ಸಹಜ ಚೆಲುವಿನ ನೀನಾ ಸದಾ ಹೊಳೆಯುವ ತಾರೆಗಳ ನಡುವ ಹಿಂದೆಯೇ ಉಳಿದು ಹೋದವರು. ಸಿಕ್ಕ ಪಾತ್ರಗಳಲ್ಲೇ ತೃಪ್ತಿ ಪಟ್ಟವರು.
ಸಣ್ಣ ವಯಸ್ಸಿಗೇ ಮದುವೆಯಾಗಿ ವರುಷ ತುಂಬುವ ಮೊದಲೇ ವಿಚ್ಛೇದಿತರಾದವರು. ಉತ್ತರವೇ ಸಿಗದೆ ಮುರಿದು ಬಿದ್ದ ಮದುವೆಯೆಡೆಗೆ ಮೂಕರಾದವರು, ಬದುಕು ಬಂದಂತೆ ಸ್ವೀಕರಿಸಿ ತಣ್ಣಗೆ ನಕ್ಕವರು. ಮದುವೆಯೇ ಆಗದೆ ಹೆಣ್ಣುಮಗುವಿಗೆ ಜನ್ಮಕೊಟ್ಟು, ಹಳಿಯುವ ಜನರ ನಡುವೆ ತಲೆಯೆತ್ತಿ ಬದುಕಿದವರು. ಟಿಪ್ಪು ಸುಲ್ತಾನ್ ಚಿತ್ರೀಕರಣದ ನಡುವೆ ಅಗ್ನಿ ದುರಂತದಲ್ಲಿ ಮಗಳು ಮಸಾಬಾಳಿಂದಾಗಿ ಬದುಕಿ ಉಳಿದ
ವರು. ಯಾರಿಗೂ ಹೊರೆಯಾಗದೆ ತಮ್ಮ ಬದುಕನ್ನು ತಾವೇ ಕಟ್ಟಿಕೊಂಡು ಮಾದರಿಯಾಗಿ ನಿಂತವರು. ನಿಜ ಹೇಳಬೇಕೆಂದರೆ ನೀನಾ ಗುಪ್ತ ನಮ್ಮೆಲ್ಲರಂತೆಬಹಳ ಸಾಮಾನ್ಯರಲ್ಲಿ ಅತಿ ಸಾಮಾನ್ಯದ ಮಧ್ಯಮ ವರ್ಗದ ಹುಡುಗಿಯಾಗಿದ್ದವರು. ಮಧ್ಯಮ ವರ್ಗದ ಮನೆಗಳಲ್ಲಿ ಅದರಲ್ಲೂ ಹೆಣ್ಣುಮಕ್ಕಳಿಗೆ ಇರುವ ನಿಬಂಧ ಗಳ ನಡುವೆಯೇ ಬೆಳೆದವರು. ಬಾಲ್ಯದಿಂದ ಪ್ರೌಢಾವಸ್ಥೆಗೆ ಕಾಲಿಟ್ಟಾಗ ಹರೆಯದ ಸಹಜ ಕುತೂಹಲಗಳೆಡೆ ಇಣುಕಿದವರು. ಮನೆಯ ಮಾಳಿಗೆಯ ಮೇಲೆ ತನ್ನದೇ ಓರಗೆಯ ಹುಡುಗ ನೊಂದಿಗೆ ನಗುತ್ತಾ ಹರಟುತ್ತಿದ್ದಾಗ ಅಮ್ಮನ ಕೈಯಲ್ಲಿ ಸಿಕ್ಕುಬಿದ್ದು ಬೈಗುಳ ತಿಂದವರು.
ತಮ್ಮ ಮನೆಯ ಓಣಿಯಲ್ಲಿ ತಮ್ಮದೇ ಓರಗೆಯ ಹುಡುಗಿ ಯಾರ ಜೊತೆಗೋ ಓಡಿ ಹೋದಾಗ ಅದರಿಂದ ಆ ಕುಟುಂಬ ಕೇಳಬೇಕಾಗಿ ಬಂದ ಚುಚ್ಚು ಮಾತುಗಳು, ಅನುಭವಿಸಬೇಕಾಗಿ ಬಂದ ನೋವಿನ ಘಟನೆಗಳು ಹಾಗೂ ಹೋದ ಹುಡುಗಿ ಗರ್ಭಿಣಿಯಾಗಿ ಒಂದೇ ವರ್ಷದಲ್ಲಿ ತಾನು ಪ್ರೀತಿಸಿದ ಹುಡುಗನಿಂದಹೊರಗಟ್ಟಲ್ಪಟ್ಟು ಮತ್ತೆ ಮನೆಗೆ ಮರಳಿದ ಮಗಳ ಸಂಕಷ್ಟ ನೋಡಲಾಗದೆ, ಅನುಭವಿಸಲಾಗದೆ ಕೊನೆಗೆ ಇದ್ದ ಮನೆಯನ್ನು ಮಾರಿ ಮತ್ತೆಲ್ಲಿಗೋ ಜೀವನ ವನ್ನರಸಿ ಹೊರಟು ಹೋದ ಕುಟುಂಬವನ್ನು ಕಂಡು, ನೀನು ಮಾತ್ರ ಯಾವ ಕಾರಣಕ್ಕೂ ನಮ್ಮನ್ನು ಈ ಪರಿಸ್ಥಿತಿಯಲ್ಲಿ ನಿಲ್ಲಿಸಬೇಡ ನೀನಾ.
ನಿನ್ನ ಗುರಿಯೇ ನಿದ್ದರೂ ಉತ್ತಮ ವ್ಯಾಸಂಗ ಮಾಡಿ ಐಅಖ ಆಫೀಸರ್ ಆಗುವ ಹಾಗೂ ಉತ್ತಮ ಗೃಹಿಣಿಯಾಗುವ ಕಡೆಗಿರಲಿ ಅನ್ನುವ ತಾಯಿಯ ಕಾಳಜಿ ತುಂಬಿದ ಆತಂಕದ ಮಾತುಗಳು ಮನದಲ್ಲಿಳಿಯುತ್ತದಾದರೂ ಅವರು ಸದಾ ತಮ್ಮ ಮನಸಿಗನುಗುಣವಾಗಿಯೇ ನಡೆದು ಇಂದು ಎಲ್ಲರಿಗಿಂತ ವಿಭಿನ್ನವಾಗಿ ನಿಂತಿದ್ದಾರೆ. ಗಣಿತವೊಂದನ್ನು ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಉತ್ತಮ ಅಂಕಗಳನ್ನುಗಳಿಸಿ, ಹೋಮ್ ಸೈನ್ಸ್ ಜತೆಗೆ ಸಂಸ್ಕೃತದಲ್ಲಿ . ಮಾಡಿಕೊಂಡ ರಾದರೂ ಯಾಕೋ.dಅರ್ಧಕ್ಕೇ ಉಳಿದು ಹೋಗಿದ್ದರೆಡೆಗೆ ಯಾವುದೇ  ಇಲ್ಲದೆ ಬಹುಶಃ ನಾನೇನಾದರೂ ಅಂದುPHdಮಾಡಿಕೊಂಡಿದ್ದಿದ್ದರೆ ಇಂದು ಒಬ್ಬ ಶಿಕ್ಷಕಿಯಾಗಿಯೋ ಅಥವಾ ಯಾವುದಾದರೂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೋ ಎಲ್ಲರಂತೆ ಜೀವನ ನಡೆಸುತ್ತಿದ್ದೆನೇನೋ ಆದರೆ ಆಗುವುದೆಲ್ಲ ಒಳ್ಳೆಯದಕ್ಕೇ ಅನ್ನುವ ನಂಬಿಕೆ ನನ್ನ ಕೈ ಬಿಡಲಿಲ್ಲ ಅಂತಲೇ ನಿರುಮ್ಮಳರಾಗುತ್ತಾರೆ.
ಕ್ರಿಯಾಶೀಲ ಮನಸುಗಳು ಸದಾ ಸ್ವಾತಂತ್ರ್ಯವನ್ನು ಬಯಸುತ್ತವೆ. ಮುಚ್ಚಿಟ್ಟಷ್ಟೂ ಅದು ಹೆಚ್ಚೆಚ್ಚು ಎತ್ತರೆತ್ತರಕ್ಕೆ ಹಾರುವ ಪ್ರಯತ್ನ ಒಳಗೊಳಗೇ ಮಾಡು ತ್ತಿರುತ್ತದೆ. ನೀನಾ ಗುಪ್ತಾರಿಗೆ .Philಗೂ ಮುನ್ನವೇ ಪರಿಚಯವಾಗುವ ಅಮ್ಲನ್ ಅನ್ನುವ ಯುವಕನೊಂದಿಗಿನ ಒಡನಾಟ, ಅದಕ್ಕೆ ಕುಟುಂಬದಲ್ಲಿ ನಡೆಯುತ್ತಿದ್ದ ಘರ್ಷಣೆಗಳ ನಡುವೆಯೇ ತನ್ನ ಗೆಳೆಯನೊಡನೆ ಶ್ರೀನಗರ್ ಪ್ರವಾಸದ ಕನಸಿಗೆ ತಡೆಒಡ್ಡಿದ ತಾಯಿಯೆಡೆ ತಿರುಗಿ ಬೀಳುತ್ತಾರೆ. ನಮ್ಮನ್ನು ಬಿಟ್ಟು ಬೇರೆಯವ ರೊಂದಿಗೆ ನೀನು ಪ್ರವಾಸ ಮಾಡುವುದಿದ್ದರೆ ಅದು ನಿನ್ನ ವಿವಾಹದ ನಂತರ ಮಾತ್ರ. ನಮ್ಮಿಂದ ಯಾವುದೇ ಕಾರಣಕ್ಕೂ ಅದಕ್ಕೆ ಸಮ್ಮತಿ ಸಿಗುವುದಿಲ್ಲ. ಅಂದ ಕೂಡಲೇ, ಹೌದಾ? ಹಾಗಾದರೆ ಮದುವೆಯಾದ ಮೇಲೆ ನಾನು ಎಲ್ಲಿಗೆ ಬೇಕಾದರೂ ಹೋಗಬಹುದು.
ಅಷ್ಟೆ ತಾನೆ? ಅಂತ ಕೆರಳಿದ ಆವೇಶದ ಭರದಲ್ಲಿ ತನ್ನ ಗೆಳೆಯ ಅಮ್ಲನ್ ನೊಂದಿಗೆ ಆರ್ಯಸಮಾಜದ ಪದ್ಧತಿಯಲ್ಲಿ ಕೇವಲ ನಾಲ್ಕು ಜನರ ಸಮ್ಮುಖದಲ್ಲಿ ಮದುವೆಯಾಗಿ ಬಿಡುತ್ತಾರೆ. ಆದರೆ ಅಮ್ಲನ್ ಕಡೆಯಿಂದ ಯಾರೊಬ್ಬರೂ ಈ ಮದುವೆಗೆ ಹಾಜರಾಗುವುದಿಲ್ಲ. ಜೀವನವೆಂದರೇನೆಂದು ಅರಿಯದ ಅತ್ಯಂತ ಕಿರಿಯ ವಯಸ್ಸು. ಆರಂಭದಲ್ಲಿ ಮಾತುಕತೆ, ಸುತ್ತಾಟ ಎಲ್ಲವೂ ಖುಷಿ ಕೊಟ್ಟವಾದರೂ ಕೇವಲIITಮಾಡಿಕೊಂಡು ಉದ್ಯೋಗದ ಸ್ಥಿರತೆಗಾಗಿ ಹುಡುಕಾಟ ದಲ್ಲಿದ್ದ ಅಮ್ಲನ್ ಗೆ ತನ್ನನ್ನು, ತನ್ನ ಕುಟುಂಬವನ್ನು ಪೋಷಣೆ ಮಾಡುತ್ತ ಪೊರೆಯುವ, ಅದರಲ್ಲೆ ತೃಪ್ತಿ ಕಾಣುವಂಥಾ ಸಂಗಾತಿಯ ಅವಶ್ಯಕತೆ ಯಿತ್ತು. ಆದರೆ ನೀನಾ ಹುಟ್ಟು ಕನಸುಗಾರ್ತಿ.
ಸಾಮಾನ್ಯ ಗೃಹಿಣಿಯಾಗಿ ಜೀವನ ನಿರ್ವಹಣೆ ಮಾಡುತ್ತಾ ಜೀವನ ಸಾಗಿಸುವುದು ಅವರಿಂದ ಒಪ್ಪಿಕೊಳ್ಳಲಾಗುವುದಿಲ್ಲ. ಹೀಗೆ ಇಬ್ಬರ ನಿರೀಕ್ಷೆಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತ ಎಂದಿಗೂ ಒಂದಾಗಲು ಸಾಧ್ಯವಿಲ್ಲವೆನಿಸಿದಾಗ, ಪರಸ್ಪರರ ಒಪ್ಪಿಗೆಯ ಮೇರೆಗೆ ಡಿವೊರ್ಸ್ ಪಡೆದು ಕೊಳ್ಳುತ್ತಾರೆ. ಆದರೆ ಒಂದು ಸಂಬಂಧವನ್ನು ಗೌರವದಿಂದ ಕಳಚಿಕೊಂಡ ಮೇಲೆ ಯೂ ಅದರೆಡೆಗೆ ಅಷ್ಟೇ ಪ್ರೀತಿಯಿಂದ ಮಾತಾಡು ವುದು ಅವರ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ.
ಮುಂದೆ ಸಂಸ್ಕೃತದಲ್ಲಿ .  ನಂತರ, . ಮಾಡಿ ಡಾಕ್ಟರೇಟ್ ತೆಗೆದುಕೊಳ್ಳುವ ಕನಸು ತಮಗೆ ನಿಯೋಜಿಸಿದ್ದ ಜ್ಠಜಿbಛಿನೊಂದಿಗೆ ಉಂಟಾದಭಿನ್ನಾಭಿಪ್ರಾಯದಿಂದಾಗಿ ಅದನ್ನು ಅಲ್ಲಿಗೇ ಬಿಟ್ಟು ನಾಟಕಗಳೆಡೆಗಿದ್ದ ನಿರಂತರ ಸೆಳೆತದಿಂದಾಗಿ ದೆಹಲಿಯ (   )ಸೇರುತ್ತಾರೆ. ಅಲ್ಲಿಂದ ಅವರ ಬದುಕು ಕವಲೊಡೆಯುತ್ತದೆ. ತಾವು ಬಯಸಿದ ಹಾದಿ ಇದೇ ಅನ್ನುವ ತೃಪ್ತಿಯಲ್ಲಿ ಬೀಗುತ್ತಾರೆ. ಬಟ್ವಾರಾ ಸಿನೆಮಾ ಶೂಟಿಂಗ್‌ನ ಬಿಡುವಿನ ವೇಳೆಯಲ್ಲಿ ಜೈಪುರದ ಮಹಾರಾಣಿ ನೀಡಿದ ಡಿನ್ನರ್ ಪಾರ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಕೆಲವು ಕ್ರಿಕೆಟ್ ತಾರೆಯರೂ ಪಾಲ್ಗೊಂಡಿದ್ದರು. ಅದರಲ್ಲಿ ತಂಡದ ನಾಯಕನಾದ ವಿವಿಯನ್ ರಿಚರ್ಡ್ಸ್ ಕೂಡ ಒಬ್ಬರು.
ಕ್ರಿಕೆಟ್ ಅಂದರೆ ಯಾರಿಗಿಷ್ಟವಿಲ್ಲ? ಅದರಲ್ಲೂ ಕಾಲೇಜಿನ ದಿನಗಳಲ್ಲಿ ತರಗತಿಯಲ್ಲಿ ಟ್ರಾನ್ಸಿಸ್ಟರ್ ರೇಡಿಯೋವನ್ನು ಕಿವಿಗೆ ಸಿಕ್ಕಿಸಿಕೊಂಡು ಅದರ ಮೇಲೆದುಪ್ಪಟ್ಟಾ ಹೊದ್ದು ಮೆಲ್ಲಗೆ ಕ್ರಿಕೆಟ್ ಕಾಮೆಂಟ್ರಿ ಕೇಳುತ್ತಿದ್ದುದೇ ಅವರಿಗೆ ಕ್ರಿಕೆಟ್ ಮೇಲಿನ ಸೆಳೆತ ಎಷ್ಟಿತ್ತೆಂಬುದನ್ನು ತಿಳಿಯಬಹುದು. ನಮ್ಮ ಇಂಡಿಯಾಟೀಮು ವೆಸ್ಟ್ ಇಂಡೀಸನ್ನು ಒಂದೋ ಎರಡೋ ರನ್ನುಗಳ ಅಂತರದಲ್ಲಿ ಸೋಲಿಸಿ ಗೆಲುವಿನ ನಗೆ ಬೀರುವಾಗ, ಕಣ್ಣಂಚು ತುಂಬಿಕೊಂಡು ಗದ್ಗದಿತ ನಾಗಿಮಾತನಾಡುತ್ತಿದ್ದ ವಿವಿಯನ್ ರಿಚರ್ಡ್ ರನ್ನು ನೋಡಿದಾಗ ‘   !’ ಅನ್ನುವ ಮೆಚ್ಚುಗೆ ಮನದಲ್ಲೇ ಮೂಡಿದಾಗ ತಮಗೇ ಅರಿವಿಲ್ಲ ದಂತೆ ಅವರೆಡೆಗೆ ಆಕರ್ಷಿತರಾಗಿದ್ದು ಹಾಗೂ ಅವರನ್ನು ಭೇಟಿಯಾಗುವ ಸಂದರ್ಭಗಳು ಪದೇಪದೆ ಉಂಟಾಗಿ ಪ್ರೀತಿಯ ಸೆಳೆವಿನಲ್ಲಿ ಸಿಕ್ಕು, ಮದುವೆಗೆಮುನ್ನವೇ ಗರ್ಭಿಣಿಯಾದಾಗ… ಏನು ಮಾಡುವುದು ಮುಂದೆ? ಅನ್ನುವ ಪ್ರಶ್ನೆಗೆ ಎಲ್ಲರಿಂದಲೂ ಅದನ್ನು ತೆಗೆಸಿಬಿಡು.
ಇದರಿಂದ ನಿನ್ನ ಕೆರಿಯರ್‌ಗೆ ತೊಂದರೆಯಾಗಬಹುದು ಅಂದಾಗ ಹೌದನ್ನಿಸಿದರೂ, ಎಲ್ಲರಿಂದ ಕಳಚಿಕೊಂಡು ಒಬ್ಬಳೇ ಕೂತು ಆಲೋಚಿಸಿದಾಗ ಅದರಿಂದ ನಾನೆಷ್ಟು ಖುಷಿಯಾಗಿದ್ದೇನೆ. ತಾಯಿಯಾಗಲು ನನ್ನ ದೇಹ ತಯಾರಾಗಿದೆ. ಅದರಿಂದಾಗಿಯೇ ನನ್ನಲ್ಲಿ ನಮ್ಮ ಕನಸಿನ ಪ್ರತಿಬಿಂಬ ಮೂಡಿನಿಂತಿದೆ ಅನ್ನಿಸಿದಾಗಏನಾದರಾಗಲಿ ಒಂದು ಮಾತು ರಿಚರ್ಡ್‌ರನ್ನೂ ಕೇಳಿ ಬಿಡೋಣ ಅನ್ನಿಸಿ ಕೇಳಿದಾಗ ಅವರಿಂದಲೂ ಅದಕ್ಕೆ ಖುಷಿಯಿಂದ ಸಮ್ಮತಿ ಸಿಕ್ಕಾಗ ಮತ್ಯಾರ ಮಾತೂಲೆಕ್ಕಿಸದೇ ನಾನು ಮಸಾಬಾ ಅನ್ನುವ ಮುದ್ದು ಮಗು ವಿಗೆ ಜನ್ಮ ನೀಡಿದೆ ಅಂತ ಬರೆದುಕೊಳ್ಳುತ್ತಾರೆ ನೀನಾ.
ಆದರೆ ಒಂದೆಡೆ ನಿಲ್ಲಲಾಗದ ಕ್ರಿಕೆಟ್ ಆಟದಿಂದಾಗಿ ಅವರಿಬ್ಬರ ನಡುವೆ ಸಾಮರಸ್ಯ ಕಡಿಮೆಯಾಗಿ ಕಡೆಗೆ ತಮ್ಮ ತಮ್ಮ ಬದುಕಿನೆಡೆಗೆ ಮತ್ತೆ ಮರುಳುತ್ತಾರೆ. ಈಗ ಮಗಳು ಮಸಾಬಾ ಹಾಗೂ ಪತಿ ವಿವೇಕ್‌ರೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿರುವ ನೀನಾ Netfllixಸೀರೀಸ್ ನಲ್ಲಿ ಮಸಾಬಾ ಮಸಾಬಾ ಅನ್ನುವ ತನ್ನದೇ ಬದುಕಿನ ಚಿತ್ರಕತೆಗಳನ್ನು ಹೆಣೆದು ಪ್ರೇಕ್ಷಕರ ಮುಂದಿಟ್ಟು ಅದರಲ್ಲೂ ಗೆಲುವಿನ ನಗೆ ಬೀರಿದ್ದಾರೆ. ತಮ್ಮ ಬದುಕಿನಲ್ಲಿ ನಡೆದು ಹೋದ ಘಟನೆಗಳೆಲ್ಲ ವನ್ನೂ ಬಂದಂತೆ ಸ್ವೀಕರಿಸುತ್ತಾ ಅದರಲ್ಲಿ ಸಂತೋಷವನ್ನು ಕಾಣುತ್ತಾರೆ. ಸಿಗದ ಹಣ್ಣು ಹುಳಿ ಅನ್ನುತ್ತಾ ದೂರುವುದೂ ಇಲ್ಲ. ಯಾಕೆ ಬದುಕು ನನ್ನೊಡನೆ ಹೀಗೆ ನಡೆದುಕೊಂಡಿತು? ಅನ್ನುತ್ತಾ ಕೊರಗುವುದೂ ಇಲ್ಲ. ಎಲ್ಲರೂ ಬಯಸುವುದು ಒಂದು ಚೌಕಟ್ಟಿನಲ್ಲಿರುವ ಉತ್ತಮ ಚಿತ್ರವನ್ನೇ ಆದರೂ ಬೆಳೆಯುತ್ತ ಬೆಳೆಯುತ್ತ ಬದುಕಿನ ತಿರುವು ಗಳಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳು ಅವರ ಮುಂದಿನ ಹಾದಿಯನ್ನು ನಿರ್ಧರಿಸುತ್ತದೆ.
ಬದುಕು ಯಾವಾಗಲೂ ಎರಡೂ ರೀತಿಯ ಆಯ್ಕೆಗಳನ್ನು ನಮ್ಮ ಮುಂದಿಟ್ಟಿರುತ್ತದೆ. ಆದರೆ ಆಯ್ಕೆ ಮಾಡಿಕೊಳ್ಳುವವರು ನಾವೇ ತಾನೇ? ಹಾಗಿದ್ದ ಮೇಲೆ ಮತ್ಯಾಕೆ ಅದರ ಬಗ್ಗೆ ಕಂಪ್ಲೇಂಟು? ಪ್ರತಿಯೊಂದು ಹಾದಿಯಲ್ಲೂ ಅದರದೇ ಆದ ಕಷ್ಟ-ನಷ್ಟಗಳಿರುತ್ತವೆ. ಅದೆಲ್ಲವನ್ನೂ ದಾಟಿ ಮುಂದೆ ಸಾಗಲೇ ಬೇಕಲ್ಲ?ಅನ್ನುವ ನೀನಾ ಯಾವುದೇ ಗಾಡ್ ಫಾದರ್ ನ ಆಸರೆಯಿಲ್ಲದೆ ಎಲ್ಲ ಸ್ಟೀರಿಯೋ ಟೈಪ್ ಜನರಿಂದ ವಿಭಿನ್ನ ರೀತಿಯಲ್ಲಿ ಬದುಕು ಕಟ್ಟಿಕೊಂಡು ಹೀಗೂಬದುಕಬಹುದು ಅನ್ನುವುದಕ್ಕೆ ಮಾದರಿಯಾಗಿದ್ದಾರೆ.
ತಮ್ಮ ಬದುಕಿನಲ್ಲಿ ನಡೆದ ಘಟನೆಗಳೆಲ್ಲವನ್ನೂ ನಿಸ್ಸಂಕೋಚವಾಗಿ ಸಚ್ ಕಹೂ ತೊ ಅನ್ನುವ ತಮ್ಮ Autobiographಯಲ್ಲಿ ತೆರೆದಿಡುತ್ತಾರೆ.