ಅಳಿದು ಹೋಗುವವರು ಅಳುವಂತೆ ಮಾಡಿ ಹೋಗಬೇಡಿ
ವಿರಾಜಯಾನ
ವಿರಾಜ್ ಕೆ.ಅಣಜಿ
@.
ಅವರು ದೊಡ್ಡವರು, ಅವರ ಸಹವಾಸ ಬೇಡ ಎಂದು ಮಗಳಿಗೆ ಬುದ್ಧಿ ಹೇಳಿದ್ದೆ. ಆದರೂ ಆತನನ್ನೇ ಮದುವೆ ಆಗುತ್ತೇನೆ ಎಂದು ಹಟ ಹಿಡಿದಿದ್ದಳು. ನಾವೂ ಕೂಡ ಸರಿ ಆಯ್ತಮ್ಮ ಎಂದಿದ್ದೆವು. ಯಾಕಂದ್ರೆ ಅವ್ರೂ ಕೂಡ ದೊಡ್ಡವರಾಗಿರ‍್ತಾರೆ.
ನಾವು ಕೂಡ ಫೋರ್ಸ್ ಮಾಡೋದು ಸರಿಯಲ್ಲ ಅಂದಿದ್ವಿ. ಸೋಮವಾರ ಕರೆ ಮಾಡಿದಾಗ ಚೆನ್ನೈನಲ್ಲಿದ್ದೇನೆ, ಆಫೀಸ್ ಮುಗಿತು ಎಂದು ಹೇಳಿದ್ದಳು. ಬೆಳಗ್ಗೆ ಎದ್ದು ಟಿವಿ ನೋಡಿದಾಗಲೇ ಮಗಳು ಮೃತಪಟ್ಟ ಸುದ್ದಿ ಗೊತ್ತಾಯಿತು. ಎಲ್ಲ ನಮ್ಮ ಗ್ರಹಚಾರವಷ್ಟೇ… ಬೆಂಗಳೂರಿನ ಕೋರಮಂಗಲದಲ್ಲಿ ಮಂಗಳವಾರ ಮಧ್ಯ ರಾತ್ರಿ ಎರಡು ಗಂಟೆಗೆ ಅಪಘಾತವಾದ ಕಾರಿನಲ್ಲಿದ್ದ ಯುವತಿಯ ತಂದೆ ಕಣ್ತುಂಬಿಕೊಂಡು ಹೇಳಿದ ಮಾತಿದು. ಎಂಥ ತಂದೆ-ತಾಯಿಗಾದರೂ ತಾವು ಹೆತ್ತ ಮಕ್ಕಳು ತಮ್ಮ ಮುಂದೆ ಹೆಣವಾಗಿ ಮಲಗುವುದನ್ನು ನೋಡಿ ಸಹಿಸಲು ಸಾಧ್ಯವೇ? ಹೋದವರೇನೋ ಐದು ಸೆಕೆಂಡ್ ನರಳಾಡಿ, ಕೊನೆಗೆ ಕಣ್ಮುಚ್ಚಿ ಹೋದರು.
ಆದರೆ, ಆಯುಷ್ಯ ಇರುವಷ್ಟು ದಿನ ಕಣ್ಣೀರು, ನೋವಲ್ಲೇ ಜೀವನ ದೂಡುವ ಶಿಕ್ಷೆಯನ್ನು ತಂದೆ-ತಾಯಿರಿಗೆ ನಾವೇಕೆ ಕೊಡುತ್ತೇವೆ ಎಂದು ಯಾವಾಗಲಾದರೂ ಯೋಚಿಸಿದ್ದೇವಾ? ಇಲ್ಲ. ಏಕೆಂದರೆ, ಬಹುತೇಕ ನಾವೆಲ್ಲ ಯೂಥ್ಸ್, ಓಲ್ಡ್ ಜನರೇಷನ್‌ನವರಿಗೆ ಏನ್ ಗೊತ್ತಾಗಲ್ಲ ಎಂಬ ಹುಚ್ಚು ನಂಬಿಕೆ ಮೂಡಿಸಿಕೊಂಡಿದ್ದೇವೆ. ಅದಕ್ಕಾಗಿಯೇ ಆಗಾಗ ನಮಗೆ, ಓವರ್ ಸ್ಪೀಡ್‌ನಲ್ಲಿ ಬಂದು ಅಪಘಾತ, ನಶೆಯಲ್ಲಿ ಬಂದು ಅಪಘಾತ ಎಂಬ ಸುದ್ದಿಗಳು ಆಗಾಗ ರಾಚುತ್ತಲೇ ಇರುತ್ತವೆ. ಸುದ್ದಿ ಕೇಳಿ ಅಲರ್ಟ್ ಆದವರಂತೆ ಮಾಡಿ ಮತ್ತೆ ಮೈಮರೆತು ಬಿಡುತ್ತೇವೆ.
ಎಲ್ಲರೊಂದಿಗೆ ನಗುತ್ತ ತುಂಬ ಸಹಜವಾಗಿಯೇ ಇದ್ದ ಅಜ್ಜ, ರಾತ್ರಿ ಅರಾಮವಾಗಿಯೇ ಊಟ ಮಾಡಿ, ಎಲ್ಲರಿಗೂ ಗುಡ್ ನೈಟ್ ಹೇಳಿ ಮಲಗಿರುತ್ತಾರೆ. ಆದರೆ, ಬೆಳಗ್ಗೆದ್ದು ನೋಡಿದಾಗ, ಇನ್ನೆಂದೂ ತಿರುಗಿ ಬಾರದ ಲೋಕಕ್ಕೆ ಹೋಗಿಬಿಟ್ಟಿರೆ, ಮನೆಯಲ್ಲಿದ್ದವರಿಗೆ ಹೇಗಾಗಿರಬೇಡ? ಅಜ್ಜನ ಬೆನ್ನ ಮೇಲೆ ಕುಳಿತು ಆನೆಮರಿ ಆಟವಾಡಿದ ಮೊಮ್ಮಕ್ಕಳಿಗೆ ಎಂಥ ದಿಗ್ಭ್ರಮೆ ಆಗಿರಬೇಡ. ಇದಕ್ಕೆ ಸುಖದ ಸಾವು ಎನ್ನುತ್ತೇವೆ. ನರಳಲಿಲ್ಲ, ನೋವು ನೀಡಲಿಲ್ಲ, ಗಿಡದಿಂದ ಹೂವು ಉದುರಿ ಹೋದಷ್ಟೇ ಸಲೀಸಾಗಿ ತಮ್ಮ ಬಾಳ ಯಾನ ಮುಗಿಸಿರುತ್ತಾರೆ.
ಇಂಥದ್ದೊಂದು ಸಾವಿಗೆ ಅರ್ಥವಿದೆ, ಸಾರ್ಥಕತೆಯಿದೆ. ಹುಟ್ಟಿದ ಜೀವ ಒಮ್ಮೆ ಉಸಿರು ಚೆಲ್ಲಲೇಬೇಕು, ಇದು ವಿಧಿ ಲಿಖಿತ. ಆದರೆ, ಮನೆಯ ಬೆಳಕಾಗುತ್ತಾರೆ, ಕುಟುಂಬದ ಕೀರ್ತಿ ಬೆಳಗುತ್ತಾರೆ ಎಂದು ಕೊಂಡವರೇ ಇದ್ದಕ್ಕಿಂದ್ದಂತೆ ಮನೆಯಲ್ಲಿಟ್ಟ ಹಣತೆಯ ಮುಂದೆ ಭಾವಚಿತ್ರದ ನೆನಪಾಗುತ್ತಾರೆ ಎಂದರೆ ಹೆತ್ತವರ ಹೃದಯ ಎಷ್ಟು ಚೂರಾಗಬೇಡ, ನೊಂದುಕೊಂಡಿರಬೇಡ ಎಂದು    ಆದ ನಾವೊಮ್ಮೆ ಯೋಚಿಸ ಬೇಕಲ್ಲವೇ?     ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಭಾರತದಲ್ಲಿ ಯುವಜನರು ಹೆಚ್ಚಾಗಿ ಮೃತಪಡಲು ಕಾರಣಗಳು, ಆತ್ಮಹತ್ಯೆ ಮತ್ತು ರಸ್ತೆ ಅಪಘಾತ. ಒಂದು ಸಣ್ಣ ಸೋಲನ್ನು ಒಪ್ಪಿಕೊಳ್ಳಲಾಗದೇ, ಪ್ರೀತಿಯನ್ನು ಕಳೆದುಕೊಂಡೆ, ಪ್ರೀತಿಯಿಂದ ಮೋಸವಾಯಿತು ಎಂಬ ಹುಂಬುತನಕ್ಕೆ ತಮ್ಮ ಜೀವಕ್ಕೇ ತಾವೇ ಕೊಳ್ಳಿ ಇಟ್ಟುಕೊಂಡು ಬಿಡುತ್ತಿದ್ದಾರೆ.
ಇನ್ನೊಂದೆಡೆ, ಜೀವನದಲ್ಲಿ ಗುರಿ, ಜೀವದ ಮೇಲೆ ಸೆಯೇ ಇಲ್ಲದವರಂತೆ ವಾಹನ ಚಲಾಯಿಸಿ ರಸ್ತೆಯಲ್ಲಿ ಹೆಣವಾಗಿ ಬಿಡುತ್ತಿದ್ದಾರೆ.2019ರ ವರದಿ ಹೇಳು ವಂತೆ, ಭಾರತದಲ್ಲಿ1.39ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದು ಅದರಲ್ಲಿ93061ಜನರು (ಶೇ.67.45) ವರ್ಷದೊಳಗಿನವರು ಎಂಬುದು ಆತಂಕ ಕಾರಿ ವಿಚಾರ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಕ್ರಮೇಣವಾಗಿ ಏರಿಕೆ ಕಾಣುತ್ತಿದೆಯೇ ವಿನಾ ಇಳಿಕೆ ಎಂದೂ ಆಗಿಯೇ ಇಲ್ಲ. ಈ ಸಂಖ್ಯೆಯಲ್ಲಿ ಸಾಮಾನ್ಯರು, ಶ್ರೀಮಂತರು, ಸೆಲಿಬ್ರಿಟಗಳು ಎಂಬ ಭೇದವಿಲ್ಲ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪುತ್ ಅವರಂಥವರ ಸಾವು ಕೂಡ ಆತ್ಮಹತ್ಯೆ ಎಂದೇ ಪ್ರಾಥಮಿಕ ತನಿಖೆಗಳು ಹೇಳುತ್ತವೆ. ಅಂದರೆ, ಪ್ರಾಣ ಕಳೆದುಕೊಂಡರೆ, ಎಲ್ಲದಕ್ಕೂ ಪರಿಹಾರ ಸಿಕ್ಕೇ ಬಿಟ್ಟಿತು ಎಂಬ ಬಿಟ್ಟಿ ಉತ್ತರವನ್ನು ಯುವ ಜನತೆ ಕಂಡು ಕೊಳ್ಳುತ್ತಿರು ವುದು ಸ್ಪಷ್ಟ.
ಇದರಲ್ಲಿ ಮಾನಸಿಕ ಆರೋಗ್ಯ, ಕುಟುಂಬದ ಬೆಂಬಲ, ಸ್ನೇಹಿತರ ಸಹಕಾರ, ಸಮಾಜದ ಒತ್ತಡ ಎಲ್ಲವೂ ಅಡಕವಾಗಿದೆ ಎಂಬುದೂ ಅಷ್ಟೇ ಸತ್ಯ.  ನೀಡಿದ ವರದಿಗಳನ್ನು ಇನ್ನಷ್ಟು ಹರವಿಕೊಳ್ಳುತ್ತ ಹೋದಂತೆ, ನಮ್ಮ ಆತಂಕದ ಪ್ರಮಾಣವೂ ಹೆಚ್ಚಾಗುತ್ತಲೇ ಹೋಗುತ್ತದೆ.2017-19ರ ಸಾಲಿನಲ್ಲಿ14ರಿಂದ18ವರ್ಷದೊಳಗಿನ ಮಕ್ಕಳು ಆತ್ಮಹತ್ಯೆಗೆ ಶರಣಾದ ಸಂಖ್ಯೆಯೇ ಭೀಕರವೆನ್ನಬೇಕು. ಕನಿಷ್ಠ24ಸಾವಿರ ಮಕ್ಕಳು ಪರೀಕ್ಷಾ ಭಯ, ಹದಿಹರೆಯದ ಪ್ರೀತಿ, ಡ್ರಗ್ಸ್‌ನಂಥ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ!
ನಮ್ಮ ಬದುಕನ್ನು ಸುಲಭ ಮಾಡಲು ಆವಿಷ್ಕರಿಸಲಾದ ಇಂಟರ್‌ನೆಟ್‌ನಿಂದಲೇ ಸಾಯುವುದು ಹೇಗೆ ಎಂಬುದನ್ನು ಹುಡುಕಿ, ಮಕ್ಕಳು ಸಾವನ್ನು ತಂದು ಕೊಳ್ಳುತ್ತಿದ್ದಾರೆ. ಮನೆಯಲ್ಲಿ ಅಪ್ಪ-ಅಮ್ಮ ಸಿಟ್ಟಿನಲ್ಲಿ, ಅವರ ಒತ್ತಡದಲ್ಲಿ ಜೋರಾಗಿ ಬೈದ ಒಂದು ಮಾತಿಗೆ, ರೈಲಿಗೆ ತಲೆಕೊಟ್ಟು ಮಲಗುವವರು ಹಲವರಿದ್ದಾರೆ. ರಸ್ತೆ ಅಪಘಾತಗಳ ಬಗ್ಗೆ   Department2021ರ ಮಾರ್ಚ್ ನಲ್ಲಿ ಕೆಲ ಕುತೂಹಲಕಾರಿ ಅಂಶ ಉಲ್ಲೇಖಿಸಿ ವರದಿ ಬಿಡುಗಡೆ ಮಾಡಿತ್ತು.
2019ರಲ್ಲಿ ಭಾರತದಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಕನಿಷ್ಠ ಒಂದೂವರೆ ಲಕ್ಷ. ಪ್ರಪಂಚದ ಒಟ್ಟು ವಾಹನಗಳ ಸಂಖ್ಯೆಯಲ್ಲಿ ಭಾರತದ ಪಾಲು ಕೇವಲ ಶೇಕಡ ಒಂದರಷ್ಟು ಮಾತ್ರ. ಆದರೆ, ವಿಶ್ವದ ಒಟ್ಟು ಅಪಘಾತಗಳ ಸಂಖ್ಯೆಯಲ್ಲಿ ಭಾರತ ಪಾಲು ಶೇಕಡ ಆರರಷ್ಟು! ಅದರಲ್ಲೂ ಶೇಕಡ ೭೦ರಷ್ಟು ಮೃತರು ಭಾರತದ ಯುವ ಜನರು. ವಿಶ್ವಬ್ಯಾಂಕ್ ವರದಿಯ ಪ್ರಕಾರ, ಅದು ಈ ವರ್ಷ ಶೇಕಡ ಹನ್ನೊಂದಕ್ಕೆ ಏರಿಕೆಯಾಗಿದೆ. ಇಷ್ಟೆಲ್ಲ ಅಪಘಾತಗಳಲ್ಲಿ ಟೂ-ವೀಲರ್‌ಗಳಲ್ಲಿ ಬಿದ್ದು ಮೃತಪಟ್ಟವರೇ ಬಹುತೇಕ ಮಂದಿ.
ಅಜಾಗರೂಕ ವಾಹನ ಚಾಲನೆ, ಪೊಲೀಸರನ್ನು ತಪ್ಪಿಸಿ ಹೆಲ್ಮಟ್ ಇಲ್ಲದೇ ಬೈಕ್ ಚಾಲನೆ, ಇತ್ತೀಚಿನ ದಿನಗಳಲ್ಲಿ ಹಬ್ಬುತ್ತಿರುವ ವೀಲಿಂಗ್ ಹುಚ್ಚಿನಿಂದಾಗಿಎಳೆಯ ಹುಡುಗರೆಲ್ಲ ರಸ್ತೆಗೆ ರಕ್ತ ಚೆಲ್ಲುತ್ತಿದ್ದಾರೆ. ಶೇಕಡ 65 ಅಪಘಾತಗಳು ನೇರ ರಸ್ತೆಯಲ್ಲೇ ಆಗುತ್ತಿವೆ ಎಂದರೆ, ನಮ್ಮವರ ಅಸಡ್ಡೆ ಎಷ್ಟಿರಬೇಕು ಊಹಿಸಿ ಕೊಳ್ಳಿ. ಭಾರತದಲ್ಲಿ ಪ್ರತಿ ಒಂದು ಗಂಟೆಗೆ ನಮ್ಮ ದೇಶದಲ್ಲಿ ೫೩ ಅಪಘಾತ ಸಂಭವಿಸುತ್ತವೆ, ಅದರಲ್ಲಿ 17 ಜನರು ಮೃತಪಡುತ್ತಾರೆ. ಅಂದರೆ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ವ್ಯಕ್ತಿಗೆ ಆ ಪ್ರಯಾಣವೇ ಕೊನೆಯ ಪ್ರಯಾಣವಾಗಿರುತ್ತದೆ. ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಬರೋಬ್ಬರಿ 13 ಲಕ್ಷ ಜನರುದುರ್ಮರಣಕ್ಕೆ ಈಡಾಗಿದ್ದು, 50 ಲಕ್ಷಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂಬುದು ಸರಕಾರವೇ ಕೊಡುವ ಅಧಿಕೃತ ಮಾಹಿತಿ.
ಇಷ್ಟೆಲ್ಲ ದೊಡ್ಡ ಸಂಖ್ಯೆಯಲ್ಲಿ ಅಪಘಾತಗಳ ಸಂಖ್ಯೆಯ ಕಂಡು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಒಂದು ಅಧ್ಯಯನ ನಡೆಸಿದ್ದು, ಇದರಲ್ಲಿ ಎಚ್ಚರಿಕೆ ಮತ್ತುಆತಂಕಕಾರಿ ವಿಚಾರವೊಂದು ಹೊರಬಿದ್ದಿದೆ. ಅದರ ಅನ್ವಯ, ರಸ್ತೆ ಅಪಘಾತದಿಂದಾಗಿ ದೇಶಕ್ಕೆ5.96ಲಕ್ಷ ಕೋಟಿ ಲುಕ್ಸಾನವಾಗಿದ್ದು, ಇದು ನಮ್ಮ ಜಿಡಿಪಿಯ ಶೇಕಡ3.14ರಷ್ಟಕ್ಕೆ ಸಮ ಎಂಬುದು ವರದಿಯ ಸಾರ.
ಈ ಪಾಟಿಯಾಗಿ ಭಾರತದಲ್ಲಿ ಆಗುವ ಅಪಘಾತಗಳ ಬಗ್ಗೆ ವಿಶ್ವಬ್ಯಾಂಕ್ ಕೂಡ ೨೦೧೬ರಲ್ಲಿ ಅಧ್ಯಯನ ನಡೆಸಿ, ಒಂದು ವರದಿ ಕೊಟ್ಟಿತು. ಅದರ ಪ್ರಕಾರ ಅಪಘಾತ ಸಂಭವಿಸಿದ ಕಾರಣದಿಂದಲೇ, ಭಾರತಕ್ಕೆ 12.9ಲಕ್ಷ ಕೋಟಿ ಹಣ ನಷ್ಟವಾಗಿದ್ದು, ಇದು ದೇಶದ ಜಿಡಿಪಿಯ 7.5ರಷ್ಟು ಭಾಗಕ್ಕೆ ಸಮವಂತೆ. ಇಲ್ಲಿ ಇನ್ನೊಂದು ಬಹುಮುಖ್ಯ ವಿಚಾರವೆಂದರೆ, ಭಾರತದ ಬಡ ಜನರು, ರಸ್ತೆಗಳ ಗುಣಮಟ್ಟ ಮತ್ತು ಅಪಘಾತಕ್ಕೂ ಇರುವ ನಂಟು. ತಮ್ಮ ಕಡಿಮೆ ಆದಾಯದ ಮಿತಿಯಿಂದಾಗಿ, ಕಾರ್ಮಿಕ ವರ್ಗದಲ್ಲಿನ ಬಹುತೇಕ ಜನರು ಸುರಕ್ಷಿತವಲ್ಲದ ಪ್ರಯಾಣ ಆಯ್ಕೆ ಮಾಡಿಕೊಳ್ಳುತ್ತಾರೆ.
ಇದರ ಜತೆಗೆ, ಭಾರತದ ರಸ್ತೆಗಳ ಸಾಮರ್ಥ್ಯಕ್ಕಿಂತ ಅಧಿಕವಾಗಿ ಇರುವ ವಾಹನಗಳ ಸಂಚಾರ, ಕೆಲವೆಡೆ ಅವೈಜ್ಞಾನಿಕ ರಸ್ತೆ, ಇನ್ನು ಕೆಲವರ ಬೇಜವಾಬ್ದಾರಿ ವಾಹನ ಚಾಲನೆಯಿಂದಾಗಿ ಬಡವರ ಪ್ರಾಣಕ್ಕೆ ಸಂಚಕಾರ ಬರುತ್ತಿದೆ ಎಂಬ ಅಂಶಗಳನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಇಷ್ಟೆಲ್ಲ ವರದಿಗಳನ್ನು, ಎಚ್ಚರಿಕೆ ಗಳನ್ನು ಸರಕಾರ ಆಗಾಗ ಜನರ ಕಣ್ಣಿಗೆ ರಾಚುವಂತೆ ಮಾಡಿದರೂ ಕೂಡ, ಜನರಲ್ಲಿ ಪ್ರಾಣದ ಮೇಲಿನ ಭಯವಿನ್ನೂ ಮೂಡಿಲ್ಲ ಎಂಬುದು ವಿಪರ್ಯಾಸ. ಎಷ್ಟೋ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ, ಎದುರಿನಿಂದ ಬಂದವರು ಮಾಡಿದ ವಿದ್ವಂಸಕ್ಕೆ ಸಿಲುಕಿ ಅಮಾಯಕರು ಜೀವವೇ ದ್ವಂಸವಾಗುತ್ತಿದೆ. ಒಂದು ಕುಟುಂಬದತುತ್ತಿನ ಚೀಲವನ್ನು ತುಂಬಿಸುತ್ತಿದ್ದವರೇ ಇದ್ದಕ್ಕಿದ್ದಂತೆ ಇಲ್ಲವಾದಾಗ ಅವರಿಗೆ ಅವಲಂಬಿತರಾದರ ಬದುಕೇ ಅಸ್ತವ್ಯಸ್ಥವಾಗುತ್ತದೆ.
ಇದರಿಂದ ತಲಾ ಆದಾಯವೂ ಕುಂಟಿತವಾಗುವ ಜತೆಗೆ ದೇಶದ ಆದಾಯಕ್ಕೂ ಹೊಡೆತ ಬೀಳುತ್ತಿದೆ. ಮೈಮೇಲೆ ಎಚ್ಚರ ತಪ್ಪಿ ಯಾರೋ ಮಾಡಿದ ಅಪಘಾತಕ್ಕೆ ಕುಟುಂಬವೊಂದು ಬೀದಿಗೆ ಬೀಳುತ್ತದೆ. ಅಥವಾ, ಮನೆಯವರ ಕಣ್ತಪ್ಪಿಸಿ  ನೆಯಿಂದ ಹೊರ ಹೋದ ಹದಿಹರಿಯದ ಯುವಕರು ರಸ್ತೆಗೆ ಆಹಾರವಾಗುತ್ತಿದ್ದಾರೆ. ತುಂಬಾ ದೂರ ಎಲ್ಲೂ ಹೋಗುವುದೇ ಬೇಡ, ರಾಜ್ಯ ರಾಜಧಾನಿಯಲ್ಲಿ ಆಗುವ ಅಪಘಾತಗಳ ಪ್ರಕರಣಗಳ ಸಂಖ್ಯೆಯನ್ನೊಮ್ಮೆ ನೋಡಿ.2018ಮತ್ತು 19ರಲ್ಲಿ ಬೆಂಗಳೂರಿನಲ್ಲಿ ರಸ್ತೆ ಅವಘಡಗಳ ವರದಿ ಮೈ ಜುಮ್ ಎನಿಸದೇ ಇರದು.
ಮಹಾನಗರದಲ್ಲಿ ಯಾವಾಗಲೂ ಟ್ರಾಫಿಕ್ ಜಾಮ್, ಓಡಾಡಲೂ ಜಾಗವೇ ಇಲ್ಲ ಎಂಬ ದೂರಿನ ಕೆಳಗಡೆಯೇ, 2018ರಲ್ಲಿ 846 ಅಪಘಾತ ದಾಖಲಾಗಿದ್ದು, ಅದರಲ್ಲಿ ಮೃತಪಟ್ಟವರ ಸಂಖ್ಯೆ 870. 2019 ಮತ್ತು 2020ರಲ್ಲಿ ಕ್ರಮವಾಗಿ 214 ಮತ್ತು 213 ಜನರು ಅಪಘಾತದಿಂದ ಮೃತಪಟ್ಟಿದ್ದಾರೆ. ಇದು ಸಂಚಾರಿ ಟ್ರಾಫಿಕ್ ಪೊಲೀಸರಲ್ಲಿ ದಾಖಲಾದ ಮಾಹಿತಿ. ಇನ್ನು ಅರ್ಧಕ್ಕರ್ಧ ಅವಘಡಗಳು ವರದಿಯೇ ಆಗುವುದಿಲ್ಲ. ಅದನ್ನು ಸೆಟಲ್‌ಮೆಂಟ್ ಹೆಸರಿನಲ್ಲಿ ಮುಚ್ಚಿ ಹಾಕಲಾಗುತ್ತದೆ. ಅಂದರೆ, ನಮ್ಮ ಜಾಗೃತಿಯಲ್ಲಿ ನಾವು ರಸ್ತೆ ಮೇಲೆ ಹೊರಟರೂ, ಜೀವಂತವಾಗಿ ಮನೆಗೆ ಹಿಂದಿರುಗಬಹುದು ಎಂಬುದಕ್ಕೆ ನೂರರಷ್ಟು ಖಾತ್ರಿಯಿಲ್ಲ, ಒಟ್ಟಿನಲ್ಲಿ ದಾರದ ಮೇಲಿನ ನಡೆಗೆಯಂತಾಗಿದೆ ಬೆಂಗಳೂರಿನ ಬದುಕು.
ಕೆಲ ತಿಂಗಳ ಹಿಂದಷ್ಟೇ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಬೈಕ್ ಅಪಘಾತ ಪ್ರಕರಣ ನಮ್ಮ ಕಣ್ಮುಂದಿದೆ. ಹೆಲ್ಮೆಟ್ ಹಾಕಿದ್ದರೆ ವಿಜಯ್ಬದುಕುವ ಸಂಭವ ಹೆಚ್ಚಿತ್ತು ಎಂಬ ವಿಶ್ಲೇಷಣೆ ಮಾಡುತ್ತೇವೆ. ಇಂಥ ಘಟನೆಗಳನ್ನು ನೋಡಿದಾಗ ಎಚ್ಚರವಾದವರಂತೆ ಎರಡು ದಿನ ಅತ್ಯಂತ ನಾಜೂಕಾಗಿವಾಹನ ಓಡಿಸುತ್ತೇವೆ. ನಂತರ ಅದೇ ಹಾಡು, ಅದೇ ರಾಗ. ಮನುಷ್ಯ ಪ್ರಾಣಿಗೆ ಇರುವ ಶಾರ್ಟ್ ಟರ್ಮ್ ಮೆಮೋರಿಯ ಲಾಭ ಪಡೆದು ಮತ್ತೆ ಎಂದಿನಂತೆಹೆಲ್ಮೆಟ್ ಇಲ್ಲದೇ ರಸ್ತೆಗಿಳಿವ ಸಾಹಸ ಮಾಡುತ್ತೇವೆ.
ಸಂಚಾರಿ ವಿಜಯ್ ಮಾತ್ರವಲ್ಲದೇ ನಟ ಜಗ್ಗೇಶ್ ಪುತ್ರನ ಅಪಘಾತ, ಚಿತ್ರರಂಗದ ಸೂರ್ಯೋದಯ್ ಪೆರಂಪಲ್ಲಿಯವರ 20 ವರ್ಷದ ಪುತ್ರನ ಸಾವು, ನಟದರ್ಶನ್ ಕಾರು ಅಪಘಾತ, ವಿಜಯಲಕ್ಷ್ಮೀ ಸಿಂಗ್ ಅವರ ಪುತ್ರಿಯರಿದ್ದ ಕಾರಿನ ಅಪಘಾತ ಎಂಬ ಸುದ್ದಿಗಳು ಬಂದು ಅಪ್ಪಳಿಸುತ್ತಲೇ ಇರುತ್ತವೆ. ಸಾಮಾನ್ಯರ ಮತ್ತು ಸೆಲೆಬ್ರಿಟಗಳ ಅಪಘಾತಕ್ಕೆ ಕಾರಣ ಬೇರೆಯದ್ದೇ ಇದ್ದರೂ ಪ್ರಾಣವಂತೂ ಎಲ್ಲರಿಗೂ ಅಮೂಲ್ಯವೇ ಆಗಿದೆ. ಇದಕ್ಕೆಲ್ಲ ಹತ್ತಿರದ ಪರಿಹಾರವೆಂದರೆ ಎಚ್ಚರಿಕೆ ಮತ್ತು ಸಮಯಪ್ರಜ್ಞೆ (ಹೇಳಿದ ಸಮಯಕ್ಕಿಂತ ತುಸು ಬೇಗನೇ ಹೊರಡುವುದು).
ಗ್ರಹಚಾರ ಕೆಟ್ಟರೆ ಯಾರೂ ಏನೂ ಮಾಡಲಾಗದು ಎಂಬ ಮಾತು ನಿಜವಾದರೂ ಗ್ರಹಚಾರ ಕೆಡದಂತೆ ಮುಂಜಾಗ್ರತೆ ವಹಿಸಬಹುದು. ಮುಖ್ಯವಾಗಿ,ಮನೆಯಿಂದ ಎಲ್ಲಿಗೇ ಹೊರಟಾಗಲೂ, ನಮ್ಮವರು  ನಮಗಾಗಿ ದಾರಿ ಕಾಯುತ್ತಿರುತ್ತಾರೆ ಎಂಬ ಕನಿಷ್ಠ ಅರಿವಿದ್ದರೆ ಹಲವು ಅವಘಡ ತಪ್ಪಿಸಬಹುದು. ಕಾರಿ ನಲ್ಲೋ, ಬೈಕಿನಲ್ಲೋ ಕುಳಿತಾಗ ಕಪಿಯಂತೆ ಮಾಡದಂತೆ ಎಚ್ಚರವಿದ್ದರೆ ನಮಗೂ, ನಮ್ಮ ಕುಟುಂಬಕ್ಕೂ, ಇನ್ನೊಬ್ಬರ ಕುಟುಂಬಕ್ಕೂ ಒಳ್ಳೆಯದು. ಯಾವು ದಾದರೂ ಅಪಘಾತವಾಗಿದೆ ಎಂದರೆ,ಯಾಕ್ ಬಂದು ಇಲ್ಲಿ ಸತ್ತು, ನಮ್ಮನ್ನೂ ಸಾಯಸ್ತಾರೋ ಎಂದು ಅಂಬ್ಯುಲೆನ್ಸ್ ಡ್ರೈವರ್‌ಗಳು, ಪೊಲೀಸರು ಹೇಳುವಂತೆ ಆಗುವುದು ಬೇಡ.
ಪ್ರತಿ ಬಾರಿ ವಾಹನದಲ್ಲಿ ಕುಳಿತಾಗಲೂ            ಎಂಬುದನ್ನು ನೆನಪಿಸಿಕೊಳ್ಳಿ. ಅಕಾಲಿಕವಾಗಿ ಅಳಿದು ಹೋಗುವ ಮುನ್ನ ಇದ್ದವರಿಗೆಲ್ಲ ಅಳುವಂತೆ ಮಾಡಿ ಹೋಗಬೇಡಿ.