ತಾಲಿಬಾನ್, ಐಸಿಸ್‌: ಭಾರತಕ್ಕೀಗ ಕ್ಯಾಚ್ -೨೨ ಇಕ್ಕಟ್ಟು !
ಪ್ರಚಲಿತ
ವಿಜಯ್ ದಡಾರ‍್
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಆಡಳಿತ ನಡೆಸಿದರೂ ಸರಿ, ಇಸ್ಲಾಮಿಕ್ ಸ್ಟೇಟ್ ಉಗ್ರರು ಶಕ್ತಿಶಾಲಿಗಳಾದರೂ ಸರಿ, ಎರಡೂ ಭಾರತಕ್ಕೆ ಅಪಾಯ ಕಾರಿಯೇ. ಭಾರತವೀಗ ಕ್ಯಾಚ್-22 ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಆದ್ದರಿಂದಲೇ ನಾವೀಗ ಬಹಳ ಎಚ್ಚರಿಕೆಯಿಂದ ವ್ಯವಹರಿಸಬೇಕು. ನೆನಪಿಡಿ, ಐಸಿಸ್‌ ನಿಂದ ನಮಗೆ ದೊಡ್ಡ ಅಪಾಯವೇ ಇದೆ.
ಅಫ್ಘಾನಿಸ್ತಾನವು ಈಗ ಸಂಪೂರ್ಣವಾಗಿ ತಾಲಿಬಾನ್ ತೆಕ್ಕೆಗೆ ಹೋಗಿದೆ. ಬೇಡ ಬೇಡ ಅಂದರೂ ಭಾರತದ ಮೇಲೆ ಇದರ ಪರಿಣಾಮ ಉಂಟಾಗಿಯೇ ತೀರು ತ್ತದೆ. ಹಾಗೆಯೇ ನಮ್ಮ ಮೇಲೂ ಇದು ಪರಿಣಾಮ ಬೀರುತ್ತದೆ. ಈಗ ತಾಲಿಬಾನ್ ಮಾತ್ರವಲ್ಲ, ಇಸ್ಲಾಮಿಕ್ ಸ್ಟೇಟ್ ಅಥವಾ ದಯೇಶ್ ಬಗ್ಗೆಯೂ ಜಗತ್ತು ತಲೆ ಕೆಡಿಸಿಕೊಳ್ಳುವ ಸಂದರ್ಭ ಬಂದಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು 150ಕ್ಕೂ ಹೆಚ್ಚು ಮುಗ್ಧ ಜನರನ್ನು ಬಾಂಬ್ ಸ್ಫೋಟಿಸಿ ಕೊಂದಿದ್ದಾರೆ. ಭಾರತದ ಬಗ್ಗೆ ಈ ಸಂಘಟನೆಗಿರುವ ದ್ವೇಷವಂತೂ ಈಗ ರಹಸ್ಯವಲ್ಲ. ಕಾಶ್ಮೀರದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಇರುವುದು ಹಲವಾರು ಬಾರಿ ಬೆಳಕಿಗೆ ಬಂದಿದೆ. ಅಲ್ಲಿ ಅವರ ಧ್ವಜಗಳು ಕೂಡ ಕಾಣಿಸುತ್ತವೆ. ಆದರೂ ಐಎಸ್(ಇಸ್ಲಾಮಿಕ್ ಸ್ಟೇಟ್)ಗೆ ಈವರೆಗೆ ಭಾರತದಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಲು ಸಾಧ್ಯವಾಗಿಲ್ಲ. ದಕ್ಷಿಣ ಭಾರತದಲ್ಲಿ ಕೆಲ ಸಮಯದ ಹಿಂದೆ ಒಂದಷ್ಟು ಯುವಕರು ಐಎಸ್ ಸೇರಿದ ಬಗ್ಗೆ ವರದಿಯಾಗಿದ್ದು ನಿಜ.
ಆದರೆ, ಅವರು ಸೇರಿದ್ದು ಸಿರಿಯಾ ಹಾಗೂ ಇರಾಕ್‌ನ ಐಸಿಸ್ ಸಂಘಟನೆಯನ್ನು. ಆದರೂ ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಎಸ್, ಐಸಿಸ್) ಉಗ್ರರು ಶಕ್ತಿಶಾಲಿಯಾದರೆ ಖಂಡಿತ ಅದರ ದುಷ್ಪರಿಣಾಮ ಭಾರತದ ಮೇಲೆ ಆಗಿಯೇ ಆಗುತ್ತದೆ. ನಮ್ಮ ದೇಶದ ಸೇನೆ, ಸರಕಾರ, ತಜ್ಞರು, ಅಂತಾರಾಷ್ಟ್ರೀಯರಾಜಕೀಯ ಪಂಡಿತರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದ್ದರೂ, ಸದ್ಯದ ಪರಿಸ್ಥಿತಿಯೇ ಸಂಕೀರ್ಣವಾಗಿದೆ. ತಾಲಿಬಾನ್ ಹಾಗೂ ಇಸ್ಲಾಮಿಕ್ ಸ್ಟೇಟ್‌ಗೆ ಹೇಗೆ ಇದು ಸವಾಲಿನ ಘಟ್ಟವೋ ಹಾಗೆಯೇ ಭಾರತಕ್ಕೂ ಕೂಡ.
ಅಫ್ಘಾನಿಸ್ತಾನ ನಮಗೆ ಯಾವಾಗಲೂ ಸ್ನೇಹಿತ ರಾಷ್ಟ್ರವಾಗಿತ್ತು. ಹಾಗಂತ ಅಲ್ಲೀಗ ಅಸ್ತಿತ್ವಕ್ಕೆ ಬಂದಿರುವ ತಾಲಿಬಾನ್ ಆಡಳಿತದ ಜತೆಗೆ ನಾವು ಸ್ನೇಹಿತರಾಗಿ ಮುಂದುವರೆಯಲು ಸಾಧ್ಯವಿಲ್ಲ. ಕಾಶ್ಮೀರದ ವಿಷಯದಿಂದ ನಾವು ಹೊರಗಿರುತ್ತೇವೆ ಎಂದು ತಾಲಿಬಾನಿ ಗಳು ಬಹಿರಂಗವಾಗಿ ಹೇಳುವ ಮೂಲಕ ಈಗಾಗಲೇ ಭಾರತದ ಜತೆಗೆ ಸ್ನೇಹಶೀಲ ಸಂಬಂಧ ಇರಿಸಿಕೊಳ್ಳುವ ಸಂದೇಶವನ್ನೇನೋ ರವಾನಿಸಿದ್ದಾರೆ. ಆದರೆ ಅವರನ್ನು ನಂಬುವುದು ಹೇಗೆ? ತಾಲಿಬಾನ್ ಈಗ ಸಂಪೂರ್ಣವಾಗಿ ಪಾಕಿಸ್ತಾನ ಮತ್ತು ಚೀನಾದ ಹಿಡಿತದಲ್ಲಿದೆ. ಆ ಎರಡೂ ದೇಶಗಳು ಭಾರತದ ಶತ್ರುಗಳು.
ಹಾಗೆಯೇ, ಲಷ್ಕರ್-ಎ-ತೊಯ್ಬಾ ಮತ್ತು ಹಕ್ಕಾನಿ ಉಗ್ರರು ಕೂಡ ತಾಲಿಬಾನ್‌ನ ಭಾಗವಾಗಿದ್ದಾರೆ. ಅವರು ಕಾಶ್ಮೀರದಲ್ಲಿ ರಕ್ತಪಾತ ನಡೆಸಲು ಯಾವಾಗ ಅವಕಾಶ ಸಿಗುತ್ತದೆಯೋ ಎಂದು ಕಾಯುತ್ತಿರುತ್ತಾರೆ. ತಾಲಿಬಾನಿಗಳು ಅವರನ್ನು ತಡೆಯುವುದಿಲ್ಲ. ತಡೆಯಲು ಅವರಿಗೆ ಸಾಧ್ಯವೂ ಇಲ್ಲ. ಏಕೆಂದರೆ ಹಾಗೆ ಮಾಡಲು ಹೋದರೆ ಪಾಕಿಸ್ತಾನ ಮತ್ತು ಚೀನಾ ಸರಕಾರಗಳು ತಾಲಿಬಾನಿಗಳ ತಲೆಗೆ ಮೊಟಕುತ್ತವೆ. ಆಗ ಅನಿವಾರ್ಯವಾಗಿ ಭಾರತದಲ್ಲಿ ಭಯೋತ್ಪಾದನೆ ಯನ್ನು ಹರಡಲು ಉಗ್ರರಿಗೆ ಆಶ್ರಯ ಮತ್ತು ತರಬೇತಿ ನೀಡುವ ಕೆಲಸವನ್ನು ತಾಲಿಬಾನಿಗಳೂ ಮಾಡಬೇಕಾಗುತ್ತದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟಗಳು ಇಡೀ ಸನ್ನಿವೇಶವನ್ನೇ ಬದಲಿಸಿಬಿಟ್ಟಿವೆ. ಹೀಗಾಗಿ ಕೇವಲ ತಾಲಿಬಾನ್ ಮಾತ್ರವಲ್ಲ, ಐಎಸ್‌ಐ ಕೂಡ ಬಹುದೊಡ್ಡ ಆತಂಕವಾಗಿ ಜಗತ್ತಿನೆದುರು ನಿಂತಿದೆ. ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ ದುರ್ಬಲವಾಗಿದೆ ಎಂದು ಇಷ್ಟು ಕಾಲ ನಂಬಲಾಗಿತ್ತು. ಆದರೆ, ತನ್ನ ವಿಧ್ವಂಸಕ ಶಕ್ತಿಯನ್ನು ಅದು ಮತ್ತೆ ಜಗತ್ತಿಗೆ ತೋರಿಸಿದೆ.2015ರಿಂದಲೂ ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರಿದ್ದಾರೆ. ಅವರನ್ನು ಬಗ್ಗುಬಡಿಯಲು ಕೇವಲ ಆಫ್ಘನ್ ಪಡೆಗಳು ಮತ್ತು ಅಮೆರಿಕದ ಸೇನೆಯಷ್ಟೇ ಅಲ್ಲ, ಸ್ವತಃ ತಾಲಿಬಾನ್ ಕೂಡ2019ರಿಂದ ದಾಳಿ ನಡೆಸುತ್ತಲೇ ಬಂದಿದೆ.
ಈ ಮೂವರೂ ಸೇರಿ ಅಫ್ಘಾನಿಸ್ತಾನದಲ್ಲಿ ಐಸಿಸ್ ಉಗ್ರರನ್ನು ನಾಮಾವಶೇಷ ಮಾಡಲು ಜಂಟಿ ದಾಳಿ ನಡೆಸುತ್ತಿದ್ದವು. ಆದರೆ ಐಎಸ್ ಕೂಡ ಹಲವಾರು ದಾಳಿ ನಡೆಸಿ ತಿರುಗೇಟು ನೀಡಿದೆ. ಈ ವರ್ಷದ ಮೇ ತಿಂಗಳಲ್ಲಿ ಕಾಬೂಲ್‌ನ ಹೆಣ್ಮಕ್ಕಳ ಶಾಲೆ ಮೇಲೆ ನಡೆದ ದಾಳಿ ನಿಮಗೆ ನೆನಪಿರಬಹುದು. ಅದರಲ್ಲಿ85ಮಂದಿ ಮೃತಪಟ್ಟಿದ್ದರು. ಈ ಬಾರಿ ಕಾಬೂಲ್ ಏರ್‌ಪೋರ್ಟ್ ಮೇಲೆ ನಡೆದ ದಾಳಿಯ ಬಗ್ಗೆ ಹಲವು ಅನುಮಾನಗಳಿವೆ. ಮೊದಲನೆಯದಾಗಿ, ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ತಾಲಿಬಾನಿಗಳು ಹಲವಾರು ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿದ್ದರು.
ಪ್ರತಿಯೊಬ್ಬರನ್ನೂ ಕೂಲಂಕಷವಾಗಿ ತಪಾಸಣೆ ಮಾಡಿಯೇ ಮುಂದೆ ಬಿಡಲಾಗುತ್ತಿತ್ತು. ಹಾಗಿರುವಾಗ ಸ್ಫೋಟಕಗಳೊಂದಿಗೆ ದಾಳಿಕೋರರು ಏರ್‌ಪೋರ್ಟ್‌ಗೆ ಹೋಗಿದ್ದು ಹೇಗೆ? ತಾಲಿಬಾನಿಗಳಂತೆ ತಲೆಮರೆಸಿಕೊಂಡು ಇಸ್ಲಾಮಿಕ್ ಸ್ಟೇಟ್ ಉಗ್ರರು ಕಾಬೂಲ್‌ನಲ್ಲಿ ಬೀಡು ಬಿಟ್ಟಿದ್ದಾರೆಯೇ? ನನಗಂತೂ ಹಾಗೇ ಅನ್ನಿಸುತ್ತದೆ. ಎರಡನೆಯದಾಗಿ, ಈ ದಾಳಿಯಿಂದ ಯಾರಿಗೆ ಲಾಭ? ಮೇಲ್ನೋಟಕ್ಕೆ ನೋಡಿದರೆ ಅಮೆರಿಕನ್ ಸೇನೆಗೆ ಒಂದಷ್ಟು ಹಾನಿ ಉಂಟುಮಾಡುವ ಉದ್ದೇಶ ಐಎಸ್‌ಗಿತ್ತು.
13ಅಮೆರಿಕನ್ ಯೋಧರನ್ನು ಕೊಲ್ಲುವ ಮೂಲಕ ಅವರು ಯಶಸ್ವಿ ಕೂಡ ಆದರು! ಆದರೆ, ಆಳವಾಗಿ ನೋಡಿದರೆ, ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದನೆ ಯಿಂದ ನೇರವಾಗಿ ಲಾಭವಾಗಿರುವುದು ತಾಲಿಬಾನ್‌ಗೆ. ಐಎಸ್ ಉಗ್ರರು ಜಗತ್ತಿನಾದ್ಯಂತ ಕ್ಯಾಲಿಫಟ್ ಆಡಳಿತ ಜಾರಿಗೆ ತರುವ ಗುರಿ ಹೊಂದಿದ್ದಾರೆಂಬುದು ಜಗತ್ತಿಗೇ ಗೊತ್ತು. ಏಷ್ಯಾದ ಮಟ್ಟಿಗೆ ಅದು ಖೊರಾಸಾನ್ ಪ್ರಾಂತ್ಯಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ. ಅದರಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್, ಬಾಂಗ್ಲಾದೇಶ ಹಾಗೂ ಭಾರತದ ಭಾಗಗಳೂ ಸೇರಿವೆ. ಇದಕ್ಕೆ ವ್ಯತಿರಿಕ್ತವಾಗಿ ತಾಲಿಬಾನ್ ಉಗ್ರರು ಕೇವಲ ಅಫ್ಘಾನಿಸ್ತಾನದ ಬಗ್ಗೆ ಮಾತ್ರಮಾತನಾಡುತ್ತಾರೆ. ಬೇರಾವುದೇ ದೇಶದ ಮೇಲೆ ದಾಳಿ ನಡೆಸಲು ನಮ್ಮ ನೆಲವನ್ನು ಬಳಸಿಕೊಳ್ಳಲು ಬಿಡುವುದಿಲ್ಲ ಎಂದು ಪದೇಪದೇ ಹೇಳುತ್ತಾರೆ ಕೂಡ!
ಹಾಗಾದರೆ, ತಾಲಿಬಾನ್ ಪರವಾದ ವಾತಾವರಣ ಸೃಷ್ಟಿಸುವುದಕ್ಕೆಂದೇ ಈ ದಾಳಿಗಳನ್ನು ನಡೆಸಲಾಯಿತೇ? ಇದರ ಹಿಂದೆ ಇಸ್ಲಾಮಿಕ್ ಸ್ಟೇಟ್ ಇಲ್ಲವೇ? ಇಲ್ಲ ಅಂತಾದರೆ ಇನ್ನಾರಿದ್ದಾರೆ? ಇದು ಬಹಳ ಮುಖ್ಯ ಪ್ರಶ್ನೆ. ಜಗತ್ತಿನ ಯಾವುದಾದರೂ ದೇಶದ ಗುಪ್ತಚರ ದಳದವರು ಇದಕ್ಕೆ ಉತ್ತರ ಕಂಡುಹಿಡಿದೇ ತೀರುತ್ತಾರೆ. ಕಾಬೂಲ್‌ನಲ್ಲಿ ಸಂಭವಿಸಿದ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರರೇ ಕಾರಣ ಎಂದು ಅಮೆರಿಕ ನೇರವಾಗಿ ಆಪಾದಿಸಿದೆ.
ಅಧ್ಯಕ್ಷ ಜೋ ಬೈಡೆನ್ ಅವರಂತೂ ಈ ದಾಳಿಕೋರರನ್ನು ಹುಡುಕಿ ಕೊಲ್ಲುವುದಾಗಿ ಘೋಷಿಸಿದ್ದಾರೆ. ಆದರೆ, ಬೈಡೆನ್ ಅವರನ್ನು ಜಗತ್ತು ನಂಬುವುದಾದರೂ ಹೇಗೆ? ನ್ಯೂಯಾರ್ಕ್ ರಾಜ್ಯದ ಮಾಜಿ ನ್ಯಾಯಮೂರ್ತಿ ಜಾಸ್ಮಿನ್ ಜೀನೈನ್ ಪಿರೋ ಈಗಾಗಲೇ ಅಫ್ಘಾನಿಸ್ತಾನದ ಬಗ್ಗೆ ಬೈಡೆನ್ ಹೇಳಿದ ಪ್ರತಿಯೊಂದು ಸುಳ್ಳನ್ನೂ ಟೀವಿ ಪ್ರೋಗ್ರಾಮ್‌ನಲ್ಲಿ ಸಾಕ್ಷ್ಯಸಮೇತ ಎತ್ತಿ ತೋರಿಸಿದ್ದಾರೆ. ಸ್ವತಃ ಅಮೆರಿಕದಲ್ಲೇ ಬೈಡೆನ್ ಬಗ್ಗೆ ಬಹಳ ಟೀಕೆಗಳಿವೆ. ಅವೆಲ್ಲ ಏನಾದರೂ ಇರಲಿ, ಭಾರತದ ಮಟ್ಟಿಗೆ ನೋಡುವುದಾದರೆ, ನಾವು ಏನೇ ಮಾಡುವುದಿದ್ದರೂ ಏಕಾಂಗಿಯಾಗಿಯೇ ಮಾಡಬೇಕಾಗುತ್ತದೆ.
ಭಾರತಕ್ಕೆ ಐಎಸ್‌ನಿಂದ ಬಹಳ ದೊಡ್ಡ ಅಪಾಯವಿದೆ. ಹಾಗಂತ ತಾಲಿಬಾನನ್ನು ಕೀಳಂದಾಜು ಮಾಡುವಂತಿಲ್ಲ. ಭಾರತಕ್ಕೆ ಒಂದು ಕಡೆ ರಾಕ್ಷಸನಿದ್ದರೆ, ಇನ್ನೊಂದು ಕಡೆ ಆಳವಾದ ಸಮುದ್ರವಿದೆ. ಆದ್ದರಿಂದಲೇ ಸದ್ಯದ ಸ್ಥಿತಿಯಲ್ಲಿ ತಾಲಿಬಾನ್‌ನ ಆಡಳಿತಕ್ಕೆ ಭಾರತ ಮಾನ್ಯತೆ ನೀಡುವ ಪ್ರಶ್ನೆಯೇ ಇಲ್ಲ ಎಂದು ನಾನು ಈ ಹಿಂದೆಯೇ ಬರೆದಿದ್ದೇನೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಏಕಾಂಗಿಯಾಗಿ ಸರಕಾರ ರಚಿಸುತ್ತಾರೋ ಅಥವಾ ಬೇರೆಯವರ ಜತೆಗೆ ಅಧಿಕಾರ ಹಂಚಿಕೊಳ್ಳುತ್ತಾರೋ ಎಂಬುದನ್ನು ನಾವು ತಾಳ್ಮೆಯಿಂದ ಕಾದು ನೋಡಬೇಕು.
ಹಾಗೆಯೇ ಅಲ್ಲಿ ಮಾನವ ಹಕ್ಕುಗಳ ಕತೆಯೇನಾಗಿದೆ ಎಂಬುದನ್ನೂ ಗಮನಿಸಬೇಕು. ಸದ್ಯಕ್ಕೆ ನಾವು ಇಸ್ಲಾಮಿಕ್ ಸ್ಟೇಟ್ ನಿಂದ ಇರುವ ಅಪಾಯ ಎದುರಿಸಲು ಸಿದ್ಧರಿರಬೇಕು. ಐಎಸ್ ಉಗ್ರರು ಕಾಶ್ಮೀರದಲ್ಲಿ ಬೇರು ಬಿಡುವುದಕ್ಕೂ ಮುನ್ನ ಅಥವಾ ಭಾರತದ ಇನ್ನಾವುದೇ ಭಾಗದಲ್ಲಿ ಸ್ಲೀಪರ್ ಸೆಲ್‌ಗಳನ್ನು ಸ್ಥಾಪಿಸುವ ಮುನ್ನವೇ ನಾವು ಅವರನ್ನು ಧ್ವಂಸಗೊಳಿಸುತ್ತಿರಬೇಕು. ಅದಕ್ಕೊಂದು ಬಲವಾದ, ಶೂನ್ಯ ಸಹಿಷ್ಣು ನೀತಿ ನಮಗೆ ಬೇಕು.