ಸ್ವತ್ತು ನಗದೀಕರಣದ ಹಲವು ಸತ್ಯಗಳು
ಅಭಿಪ್ರಾಯ
ಹರದೀಪ್‌ ಎಸ್‌.ಪುರಿ
ಕೇಂದ್ರ ಸಚಿವರು
ಯುಪಿಎ ನಂತರವೂ ಕಾಂಗ್ರೆಸ್ ಆಳ್ವಿಕೆಯಲ್ಲಿದ್ದ ರಾಜ್ಯ ಸರಕಾರದಲ್ಲಿಯೂ ಸ್ವತ್ತುಗಳ ನಗದೀಕರಣಕ್ಕಾಗಿ ಹಲವಾರು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದು ಕೊಂಡಿದೆ. ಕಾಯ್ದೆಗಳನ್ನು ಮಾಡಿದೆ. ೨೦೨೦ರ ಫೆಬ್ರವರಿಯಲ್ಲಿ ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ ೮೨೬೨ ಕೋಟಿ ರುಪಾಯಿಗಳ ನಗದೀಕರಣದ ವ್ಯವಹಾರ ವನ್ನು ಮಹಾರಾಷ್ಟ್ರ ಸರಕಾರ ಕುದುರಿಸಿತ್ತು. ಆಗ ಚಿದಂಬರಂ ಹಾಗೂ ಅವರ ಪಕ್ಷ, ಉದ್ಧವ್ ಠಾಕ್ರೆಯವರ ಲೇಖನಿ ಈ ಒಪ್ಪಂದಕ್ಕೆ ಸಹಿ ಹಾಕುವುದನ್ನು ತಡೆಯಬಹದಿತ್ತು!
ಸತ್ಯವು ತನ್ನ ನಡಿಗೆಯಾರಂಭಿಸಲು ತಯಾರಾಗುವ ಸಮಯದಲ್ಲಿಯೇ ಸುಳ್ಳು ಅರ್ಧ ಜಗತ್ತು ಕ್ರಮಿಸಿರುತ್ತದೆ ಇದೊಂದು ಜನಪ್ರಿಯ ನಾಣ್ನುಡಿಯಾಗಿದೆ. ಇದು ಸುಳ್ಳುಗಳನ್ನು ಬಳಸಿ, ಅರೆ ಸತ್ಯಗಳನ್ನು ಹೇಳಿ, ತಪ್ಪು ಮಾಹಿತಿ ನೀಡಿ, ಜನರಲ್ಲಿ ಆತಂಕ ಹಾಗೂ ಭೀತಿಯನ್ನು ಸೃಷ್ಟಿಸುವವರ ಕುರಿತು ಸಂಕ್ಷಿಪ್ತವಾಗಿ ಹಾಗೂ ತೀಕ್ಷ್ಣವಾಗಿ ಹೇಳುವ ಮಾತಾಗಿದೆ. ಸದ್ಯಕ್ಕೆ ನಮ್ಮ ಪ್ರತಿಪಕ್ಷವು ತಮ್ಮ ಅಸ್ಮಿತೆಯನ್ನು ಸಾಬೀತುಪಡಿಸಲು ಹಾಗೂ ರಾಜಕೀಯ ಪ್ರಸ್ತುತಿಯನ್ನು ಎತ್ತಿಹಿಡಿಯಲು ಆಗಾಗ ಬಳಸುತ್ತಿರುವ ಅತಿ ಪ್ರಬಲವಾದ ಅಸ್ತ್ರವಾಗಿದೆ.
ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಬರೆಹ ‘ದಿ ಗ್ರ್ಯಾಂಡ್ ಕ್ಲೋಸಿಂಗ್ ಡೌನ್ ಸೇಲ್’ (ಇಂಡಿಯನ್ ಎಕ್ಸ್‌ಪ್ರೆಸ್ ಆ.೨೯, ೨೦೨೧) ರಂದು ಪ್ರಕಟವಾಗಿದೆ. ಒಂದು ಮಹಾ ಸುಳ್ಳಿನ ಅನಾವರಣ ಎಂದು ಹೇಳಿದೆ. ಇದು ನಿಜವೂ ಹೌದು. ಇದು ಅವರ ಸುಳ್ಳಿನ ಅನಾವರಣವೂ ಹೌದು. ಅವರ ಪಕ್ಷದ ಆಷಾಢ ಭೂತಿತನವನ್ನೂ ಹೊರಗೆಳೆದಿದೆ. ಕಾಂಗ್ರೆಸ್ ಪಕ್ಷವುಆಡಳಿತದಲ್ಲಿzಗದೇಶದ ಹಿತಾಸಕ್ತಿಯನ್ನು ಕಾಪಾಡುವಂತೆ ಕೈಗೊಂಡಿದ್ದ ಕ್ರಮಗಳೇ ಈಗ ಪ್ರಧಾನ ಮಂತ್ರಿ ಮೋದಿ ಹಾಗೂ ಬಿಜೆಪಿ ಸರಕಾರದ ಅವಽಯಲ್ಲಿ ದೇಶಕ್ಕೆ ಕೆಡುಕಾಗುವುದು ಎಂದು ಹೇಳುತ್ತಿದೆ. ಅವರ ಬರೆಹದ ತುಂಬ ಕೇವಲ ಊಹಾಪೋಹಗಳು ಹಾಗೂ ಅರೆಸತ್ಯಗಳೇ ತುಂಬಿವೆ. ಒಬ್ಬ ಹಿರಿಯ ಸಂಸದ ಹಾಗೂ ಮಾಜಿ ವಿತ್ತಸಚಿವರು ಕೇವಲ ರಾಜಕೀಯ ಗಮನಸೆಳೆಯಲು ಇಂಥ ಬರವಣಿ ಗೆಗೆ ಇಳಿದಿರುವುದು ದಯನೀಯ ಸ್ಥಿತಿಯನ್ನು ತೋರುತ್ತದೆ.
ಮೋದಿ ಸರಕಾರದ ಲೇಖನಿಯ ಒಂದು ಗೆರೆಯಿಂದ ರಾಷ್ಟ್ರೀಯ ಸಂಪತ್ತನ್ನು ಶೂನ್ಯಕ್ಕಿಳಿಸುತ್ತಿದೆ ಎಂದು ಅವರು ಪ್ರತಿಪಾದಿಸಿzರೆ. ಇದು ಅವರು ರಾಷ್ಟ್ರೀಯಸಂಪತ್ತಿನ ನಗದೀಕರಣವನ್ನು ಅರ್ಥೈಸಿಕೊಂಡಿಲ್ಲವೆಂದು ಸ್ಪಷ್ಟಪಡಿಸುತ್ತದೆ. ಅಥವಾ ಅರ್ಥವಾದರೂ ಸತ್ಯವನ್ನು ತಿರುಚಿ ಹೇಳಲು ಇಷ್ಟಪಡುತ್ತಿzರೆ ಎಂದರ್ಥ.ಪ್ರeಪೂರ್ವಕವಾಗಿಯೇ ಸಂಪತ್ತಿನ ನಗದೀಕರಣದ ಬಗೆಗೆ ಅಸ್ಪಷ್ಟ ಧೋರಣೆಗಳನ್ನು ವ್ಯಕ್ತಪಡಿಸುತ್ತಾರೆ. ಸತ್ಯವೇನೆಂದರೆ ನಮ್ಮ ರಾಷ್ಟ್ರೀಯ ಸಂಪತ್ತು ಯಾವುದೇ ರೀತಿಯಲ್ಲಿಯೂ ಮಾರಾಟಕ್ಕೆ ಇಲ್ಲ. ಅವುಗಳನ್ನು ಗುತ್ತಿಗೆ ನೀಡಲಾಗುತ್ತಿದೆ. ಖಾಸಗಿ ಪಾಲುದಾರರೊಂದಿಗೆ, ಒಂದು ಮುಕ್ತ ಹಾಗೂ ಪಾರದರ್ಶಕ ವ್ಯವಸ್ಥೆಯಲ್ಲಿ ಬಿಡ್ಡಿಂಗ್ ಕರೆದು ಗುತ್ತಿಗೆ ನೀಡಲಾಗುತ್ತದೆ. ಇಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಬರದಂತೆ ನೀತಿನಿಯಮಗಳಿಗೆ ಅನುಸಾರವಾಗಿ ಈ ಪ್ರಕ್ರಿಯೆ ಯನ್ನು ಪೂರೈಸಲಾಗುತ್ತದೆ.
ಈ ನೆಲದ ಕಾನೂನಿನ ಅನ್ವಯವೇ ಪೂರ್ಣ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಖಾಸಗಿ ಪಾಲುದಾರ ಈ ಸಂಪತ್ತನ್ನು ನಿರ್ವಹಿಸುತ್ತಾನೆ. ಕಾರ್ಯಾನುಷ್ಠಾನಕ್ಕೆ ತರುತ್ತಾನೆ. ಗುತ್ತಿಗೆಅವಽಯನಂತರ ಸರಕಾರಕ್ಕೆ ಮರಳಿಸುತ್ತಾನೆ. ಮಾಜಿ ವಿತ್ತ ಸಚಿವರು ಸ್ವತ್ತುಗಳ ನಗದೀಕರಣದಲ್ಲಿ ಸರಕಾರವು ಬಳಸುತ್ತಿರುವ ನವೀನ ಸಾಧನ ಹಾಗೂ ತಂತ್ರಗಾರಿಕೆಯ ಕುರಿತು ಏನೂ ತಿಳಿದಿಲ್ಲವೆಂದೆನಿಸುತ್ತಿದೆ. ನಿರ್ಮಾಣ ಬಂಡವಾಳ ಟ್ರಸ್ಟ್ ಹಾಗೂ ರಿಯಲ್ ಎಸ್ಟೇಟ್ ಬಂಡವಾಳ ಟ್ರಸ್ಟ್ಗಳು, ಮ್ಯುಚುವಲ್ ಫಂಡ್ ನಡುವೆ ಸಂಪರ್ಕ ಸೇತುವಿನಂತೆ ವರ್ತಿಸುತ್ತದೆ. ಈ ಮೂಲಕ ನಿರ್ಮಾಣ ಕಾರ್ಯಗಳಿಗೆ ಹಾಗೂ ರಿಯಲ್ ಎಸ್ಟೇಟ್‌ಗಳ ಕಾರ್ಯ ಗಳಿಗೆ ಹಣದ ಹರಿವು ಹೆಚ್ಚುತ್ತದೆ. ಇದರ ಮುಖಾಂತರ ಭಾರತೀಯ ಪ್ರಜೆಗಳೂ ಭಾರತದ ಸ್ವತ್ತುಗಳ ನಗದೀಕರಣ ಹಾಗೂ ಮಾರುಕಟ್ಟೆಯಲ್ಲಿ ತೊಡಗಿಸಿ ಕೊಳ್ಳುವಂತಾಗುತ್ತದೆ.
ಮಾಜಿ ಸಚಿವರು ‘ಬಾಡಿಗೆ ಎಂದು ಕರೆದಿರುವ ಒಂದೂವರೆ ಲಕ್ಷ ಕೋಟಿ ರುಪಾಯಿಯು ರಾಷ್ಟ್ರೀಯ ಸ್ವತ್ತಿನ ನಗದೀಕರಣದಿಂದಾಗಿ ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ಬಂಡವಾಳ ಹೂಡಲು ಸಹಾಯವಾಗಿದೆ. ಅದು ಮೂಲ ಬಂಡವಾಳವಾಗಿಯೂ ಪರಿವರ್ತಿತವಾಗಿದೆ.೨ಜಿ, ಕೋಲ್‌ಗೇಟ , ಸಿಡಬ್ಲುಜಿ ಮತ್ತು ಆದರ್ಶ್ ಇವೆಲ್ಲ ಇದಕ್ಕೆ ಉದಾಹರಣೆಗಳಾಗಿವೆ. ಆದರೆ ಯುಪಿಎ ಇನ್ನೊಂದು ಬಗೆಯ ನಗದೀಕರಣದ ಬಗೆಗೆ ಮಾತ್ರ ನಿಗಾವಹಿಸಿದಂತೆ ಕಾಣುತ್ತದೆ.
ಜಾಗತಿಕ ಗುಣಮಟ್ಟದ ಮೂಲಸೌಕರ್ಯವನ್ನು ದೇಶದ ವಾಸಿಗಳಿಗೆ ಒದಗಿಸಬೇಕಾಗಿದೆ. ದೇಶದ ಪ್ರಾಮಾಣಿಕ ತೆರಿಗೆದಾರರ ಮೇಲೆ ಹೊರೆಯಾಗಿಸದಂತೆ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಬೇಕಿದೆ. ಕಳೆದ ಏಳು ವರ್ಷಗಳಲ್ಲಿ ರಾಷ್ಟ್ರೀಯಹೆzರಿಗಳ ಉದ್ದ ಈ೭೦ವರ್ಷಗಳಲ್ಲಿ ನಿರ್ಮಾಣವಾಗಿರುವ ರಾಷ್ಟ್ರೀಯಹೆzರಿಗಳಿಗಿಂತ ಒಂದೂವರೆ ಪಟ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ.
೨೦೦೪-೨೦೧೪ರಅವಽಯಲ್ಲಿ ನಗರ ಪ್ರದೇಶದಲ್ಲಿ ಹೂಡಿದ ಬಂಡವಾಳಕ್ಕಿಂತಲೂ ಕಳೆದ ಈ ಏಳು ವರ್ಷಗಳಅವಽಯಲ್ಲಿ ಏಳು ಪಟ್ಟುಗಳಷ್ಟು ಹೆಚ್ಚಿನ ಬಂಡವಾಳ ಹೂಡಲಾಗಿದೆ. ಗಮನಾರ್ಹವಾದ ಅಂಶವೆಂದರೆ ಹೀಗೆ ತಪ್ಪು ಕತೆಗಳನ್ನು ಹೇಳುವ ಭರದಲ್ಲಿ ಚಿದಂಬರಂ ಅವರು ಯುಪಿಎ ಸರಕಾರವು ಸ್ವತ್ತುಗಳ ನಗದೀಕರಣದಲ್ಲಿ ಮೊದಲ ಹೆಜ್ಜೆಗಳನ್ನು ಇರಿಸಿರುವುದನ್ನೂ ಮರೆತಿಂತಿದೆ. ದೆಹಲಿ ಹಾಗೂ ಮುಂಬೈ ಏರ್ ಪೋಟ್‌ಗಳು ಖಾಸಗಿ ಒಡೆತನಕ್ಕೆ ನೀಡಿದಾಗಯುಪಿಎ ಸರಕಾರ ಆಡಳಿತದಲ್ಲಿತ್ತು. ಚಿದಂಬರಂ ಅವರೇ ವಿತ್ತೀಯ ಮಂತ್ರಿಗಳಾಗಿದ್ದರು. ಅಷ್ಟೇ ಅಲ್ಲ, ಈ ಒಪ್ಪಂದದ ತೀರ್ಮಾನ ಕೈಗೊಂಡ ಮಂತ್ರಿಗಳ ಒಕ್ಕೂಟದ ಅಧ್ಯಕ್ಷ ಸ್ಥಾನದಲ್ಲಿಯೂ ಇದ್ದರು.
ಮಾನ್ಯ ಚಿದಂಬರಂ ಅವರು ರೈಲ್ವೇಸ್ ಬಗ್ಗೆಯೂ ಹೀಗೆಯೇಉಖಿಸಿzರೆ. ಇದೊಂದು ತಂತ್ರಗಾರಿಕೆಯ ಕ್ಷೇತ್ರವಾಗಿದೆ. ರೈಲ್ವೇ ಕ್ಷೇತ್ರವನ್ನು ಖಾಸಗಿ ಪಾಲ್ಗೊಳ್ಳುವಿಕೆಗೆ ಮುಕ್ತಗೊಳಿಸಬಾರದು ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ. ಆದರೆ೨೦೦೮ರಲ್ಲಿ ಯುಪಿಎ ಸರಕಾರವು, ದೆಹಲಿಯರೈಲ್ವೆ ವಿಭಾಗವನ್ನು ಚೇತರಿಸಿಕೊಳ್ಳುವಂತೆ, ಅಭಿವೃದ್ಧಿ ಪಡಿಸಲು ಖಾಸಗಿ ಪಾಲ್ಗೊಳ್ಳುವಿಕೆಗಾಗಿ ಆಹ್ವಾನಿಸಿದಾಗ ಅವರೇಕೆ ಆ ಹೆಜ್ಜೆಯನ್ನು ಹಿಂದೆಗೆಯಲಿಲ್ಲ?ಯುಪಿಎ ನಂತರವೂ ಕಾಂಗ್ರೆಸ್ ಆಳ್ವಿಕೆಯಲ್ಲಿದ್ದ ರಾಜ್ಯ ಸರಕಾರದಲ್ಲಿಯೂ ಸ್ವತ್ತುಗಳ ನಗದೀಕರಣಕ್ಕಾಗಿ ಹಲವಾರು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕಾಯ್ದೆಗಳನ್ನು ಮಾಡಿದೆ.
೨೦೨೦ರ -ಬ್ರವರಿಯಲ್ಲಿ ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ ೮೨೬೨ ಕೋಟಿ ರುಪಾಯಿಗಳ ನಗದೀಕರಣದ ವ್ಯವಹಾರವನ್ನು ಮಹಾರಾಷ್ಟ್ರ ಸರಕಾರ ಕುದುರಿಸಿತ್ತು. ಆಗ ಚಿದಂಬರಂ ಹಾಗೂ ಅವರ ಪಕ್ಷ, ಉದ್ಧವ್ ಠಾಕ್ರೆಯವರ ಲೇಖನಿ ಈ ಒಪ್ಪಂದಕ್ಕೆ ಸಹಿ ಹಾಕುವುದನ್ನು ತಡೆಯಬಹದಿತ್ತು! ಮಾಜಿ ವಿತ್ತ ಸಚಿವರು ತಮ್ಮ ಬರವಣಿಗೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಏಕಸ್ವಾಮ್ಯತ್ವವವನ್ನು ಸೃಷ್ಟಿಸುವ ಸಾಧ್ಯತೆಗಳ ಬಗ್ಗೆಯೂಉಖಿಸುತ್ತಾರೆ. ಟೆಕ್ ಕಂಪನಿಗಳ ಮೇಲೆ ಅಮೆರಿಕದವರ ಹಿಡಿತ, ದಕ್ಷಿಣ ಕೋರಿಯಾ ಹಾಗೂ ಚೀನಾ ದೇಶಗಳು ಅಂತರ್ಜಾಲದ ಬೃಹತ್ ಹಿಡಿತವು ಸ್ಪರ್ಧಾತ್ಮಕವಲ್ಲದ ರೀತಿಯಲ್ಲಿರುವುದನ್ನು ಹೇಳುತ್ತಾರೆ.
ಸ್ಪರ್ಧಾತ್ಮಕವಲ್ಲದಂತೆ ಕಾರ್ಯನಿರ್ವಹಿಸುವ ಹಲವು ಸಂಸ್ಥೆಗಳು ಭಾರತದಲ್ಲಿಯೂ ಇವೆ. ಭಾರತೀಯ ಸ್ಪರ್ಧಾತ್ಮಕ ಆಯೋಗವಿದೆ. ಅದಕ್ಕೆಂದೇ ಹಲವು ನೀತಿ ನಿಯಮಗಳನ್ನು ರೂಪಿಸಿದೆ. ಗ್ರಾಹಕರ ವೇದಿಕೆಗಳು, ಗ್ರಾಹಕರ ನ್ಯಾಯಾಲಯಗಳೂ ಇವೆ. ಇವೆಲ್ಲವೂ ಭಾರತ ಸರಕಾರದಿಂದ ಸ್ವತಂತ್ರವಾಗಿಯೇಕಾರ್ಯನಿರ್ವಹಿಸುವಅಽಕಾರಹೊಂದಿ ಸ್ಪರ್ಧಾತ್ಮಕವಲ್ಲದ ಯಾವುದೇ ಅನಾರೋಗ್ಯಕರ ಬೆಳವಣಿಗೆಯಾದರೂ ಕಠಿಣ ಕ್ರಮಕೈಗೊಳ್ಳುತ್ತವೆ. ಮಾರುಕಟ್ಟೆ ವ್ಯವಸ್ಥೆಯಲ್ಲಿ ಏಕಸ್ವಾಮ್ಯ ವ್ಯವಸ್ಥೆ ಬಾರದಂತೆ ಕ್ರಮವಹಿಸಲು ಭಾರತ ಸರಕಾರವು ಸದಾ ಬದ್ಧವಾಗಿರುತ್ತದೆ. ಕೆಲವು ಕ್ಷೇತ್ರಗಳಲ್ಲಿ ಉದಾಹರಣೆಗೆ ರೈಲ್ವೆ ಹಳಿಗಳ ಕ್ಷೇತ್ರದಲ್ಲಿ ಸಹಜವಾಗಿಯೇ ಏಕಸ್ವಾಮ್ಯವಿದೆ. ಅಂತಹ ಕ್ಷೇತ್ರಗಳಲ್ಲಿ ಸ್ವತ್ತುಗಳ ನಗದೀಕರಣಕ್ಕೆ ಮುಂದಾಗುವುದಿಲ್ಲ.
ಮಾಜಿ ಅರ್ಥ ಸಚಿವರು ಇನ್ನೊಂದು ಪ್ರಮುಖ ಅಂಶದತ್ತಲೂ ಗಮನಸೆಳೆಯಲು ಯತ್ನಿಸುತ್ತಾರೆ. ಅದು ಉದ್ಯೋಗ. ವಾಜಪೇಯಿ ಸರಕಾರದಅವಽಯಲ್ಲಿ ಆದ ಖಾಸಗೀಕರಣದಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಿರುವುದು ಹಲವಾರು ಅಧ್ಯಯನಗಳು ಸ್ಪಷ್ಟಪಡಿಸಿವೆ. ಆಗ ಇಡೀ ಖಾಸಗೀಕರಣದ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು. ಸಮರ್ಥವಾಗಿ ನಿಭಾಯಿಸಲಾಗಿತ್ತು. ಸ್ವತ್ತುಗಳ ನಗದೀಕರಣ ಪ್ರಕ್ರಿಯೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತವೆ.ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಸರಕಾರವು ಆದಾಯ ತರುವ ಪ್ರಕ್ರಿಯೆಗಳಲ್ಲಿ ಮರು ಬಂಡವಾಳ ಹೂಡಿದಾಗ ಮತ್ತೆ ಮತ್ತೆ ಹೊಸ ಉದ್ಯೋಗಗಳ ಸೃಷ್ಟಿಯಾಗುತ್ತಲೇ ಹೋಗುತ್ತದೆ.
ಇದು ಅವಕಾಶಗಳನ್ನು ದ್ವಿಗುಣ, ಬಹುಗುಣಗೊಳಿಸುವ ಸಾಧ್ಯತೆಯನ್ನೂ ಸೃಷ್ಟಿಸುತ್ತದೆ. ಆದರೆ ನಮ್ಮ ಮಾಜಿ ವಿತ್ತ ಸಚಿವರು ಈ ಕ್ರಮವನ್ನುಶ್ಲಾಸಲುಹಿಂಜರಿಯುತ್ತಾರೆ. ಅಂತಿಮವಾಗಿ ಚಿದಂಬರಂ ಅವರು ರಾಷ್ಟ್ರೀಯ ಸ್ವತ್ತುಗಳ ನಗದೀಕರಣಕ್ಕಾಗಿ ದೇಶದ ಗೌಪ್ಯ ಕಾಪಾಡುವುದನ್ನೂ ಟೀಕಿಸುತ್ತಾರೆ.ಆರೋಪಿಸುತ್ತಾರೆ. ಸತ್ಯವನ್ನು ಯಾರೂ ಬಚ್ಚಿಡಲಾರರು. ನಿಗೂಢವಾಗಿಡಲಾರರು. ಸ್ವತ್ತುಗಳ ನಗದೀಕರಣವನ್ನು ಕೇಂದ್ರ ಬಜೆಟ್ ಮಂಡಿಸಿದಾಗಲೇ ಫೆಬ್ರವರಿ ೨೦೨೧ರಲ್ಲಿಯೇ ತಿಳಿಸಲಾಗಿತ್ತು. ಹಲವಾರು ಸುತ್ತುಗಳ ವೆಬಿನಾರ್ಗಳನ್ನು ಏರ್ಪಡಿಸಲಾಗಿತ್ತು. ಸಮಾಲೋಚನೆ ಹಾಗೂ ಚರ್ಚೆಗಳನ್ನು ನಡೆಸಲಾಗಿತ್ತು ಈ ನಿಟ್ಟಿನಲ್ಲಿ ನಾವು ಸಾಗಬೇಕಿರುವ ಮಾರ್ಗದ ಕುರಿತು ಕಳೆದ ವಾರ ಘೋಸಿಸಲಾಗಿತ್ತು.
ಇದಕ್ಕೂ ಮೊದಲು ೨೦೧೬ರಲ್ಲಿ ಹೂಡಿಕೆಯ ಕಾರ್ಯತಂತ್ರ ನಿಯಮವನ್ನು ರಚಿಸಿತ್ತು. ನಮ್ಮ ಸರಕಾರವು ಜನರ ಹಿತಾಸಕ್ತಿಯನ್ನು ಕಾಯುವುದಕ್ಕೆ ಬದ್ಧವಾಗಿದೆ. ಗೋಪ್ಯವಾಗಿಡುವ, ಕದ್ದು ಮಾಡುವ ಕೆಲಸಗಳು ಕಾಂಗ್ರೆಸ್‌ನ ಕಾರ್ಯಶೈಲಿಯಾಗಿದೆ. ರಾಷ್ಟ್ರದ ಹಿತಾಸಕ್ತಿ ಹಾಗೂ ಪಾರದರ್ಶಕ ವ್ಯವಸ್ಥೆಗೆ ಸಂಬಂಽಸಿದಂತೆ ಈ ಸರಕಾರವು ಎಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.