ಕಚೇರಿಗೆ ಹೋಗುವ ದಾರಿಯಲ್ಲೇ ಕಛೇರಿ ಕೇಳಿ
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಸಿನಿಮಾರಂಗ ಮತ್ತು ರಾಜಕೀಯ ರಂಗ ಮೊದಲಿನಿಂದಲೂ ದೂರ ದೂರ ಇರುವಂಥವೇನಲ್ಲ. ಸಿನಿಮಾ ರಂಗದಲ್ಲಿ ಹೆಸರು ಮಾಡಿ, ತಮ್ಮ ಕಾಲ ಮುಗಿಯುತ್ತಾಬಂದಂತೆ, ತಮ್ಮ ಡಿಮ್ಯಾಂಡ್ ಕಮ್ಮಿ ಆಗುತ್ತಾ ಬಂದಂತೆ ಹಲವು ಸಿನಿಮಾ ಮಂದಿ ಮೆಲ್ಲಗೆ ರಾಜಕೀಯ ಮಾತಾಡೋಕೆ ಶುರು ಮಾಡೋದು ಸಹಜ. ಆದರೆ ಇತ್ತೀಚೆಗೆ ಈಗಿನ್ನೂ ಅಂಬೆಗಾಲಿಡುತ್ತಿರುವ ನಟ ನಟಿಯರೂ ಕೂಡ ರಾಜಕೀಯದ ಬಗ್ಗೆ ಮಾತಾಡೋಕೆ ಶುರು ಮಾಡ್ತಾ ಇರೋದು ಹೊಸ ಟ್ರೆಂಡು. ಕನ್ನಡದಲ್ಲಿ ಅನಂತ್ ನಾಗ್, ಅಂಬರೀಶ್ ಅವರಂಥ ಹಿರಿಯರ ನಂತರ ಈಗಿನ ಸಿನಿಮಾ ಹೀರೋಗಳು ರಾಜಕೀಯದ ವರಸೆ ಶುರು ಮಾಡಿದ್ದಾರೆ.
ಉಪೇಂದ್ರ ಅವರಂಥ ಕೆಲವರು ರಾಜಕೀಯದಲ್ಲಿ ಭವಿಷ್ಯಕಂಡುಕೊಳ್ಳುವ ಪ್ರಯತ್ನಕ್ಕೆ ಈಗಲೇ ಮುನ್ನುಡಿ ಬರೆಯುತ್ತಿದ್ದಾರೆ. ಇನ್ನು ಚೇತನ್ ಅವರಂಥ ನಟ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರೂ ರಾಜಕೀಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಇವರ ಹೊರತಾಗಿ ಒಂದೆರಡು ಸಿನಿಮಾ ಮಾಡಿದ ನಟ ನಟಿಯರೂ ಈಗ ರಾಜಕೀಯ ಪ್ರಿಯರಾಗಿದ್ದಾರೆ. ರಿಶಬ್ ಶೆಟ್ಟಿಯಂಥವರು ರಾಜಕೀಯವಾಗಿ ಸಕ್ರಿಯರಾಗಿಲ್ಲ ವಾದರೂ ಮುಂದೊಂದು ದಿನ ಕೆಲಸಕ್ಕೆ ಬರುತ್ತೆ ಎಂಬ ದಾರಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಇದೇ ಹಾದಿ ಯಲ್ಲಿ ಕೆಲಸಕ್ಕೆ ಬಾರದ ನಾಲ್ಕು ಸಿನಿಮಾ ಮಾಡಿರುವ ಅನಿತಾ ಭಟ್ ಅವರಂಥವರೂ ಕೆಲಸಕ್ಕೆ ಬಾರದ ಮಾತಾಡುತ್ತಿರೋದು ಮಾತ್ರ ಎಡೆ ಚರ್ಚೆಗೆ ಕಾರಣವಾಗುತ್ತಿದೆ.
ಸೈಕೋ ಸಿನಿಮಾದಿಂದ ನಾಯಕಿ ಎನಿಸಿಕೊಂಡ ಈಕೆ ಎಲ್ಲ ಪ್ರಯತ್ನಗಳ ನಡುವೆಯೂ ಚಿತ್ರರಂಗದಲ್ಲಿ ನಟಿ ಅಂತ ಗುರುತಿಸಿಕೊಳ್ಳೋಕಾಗಿಲ್ಲ ಅಂತಲೋ ಏನೋ ಈಗ, ವಯಸ್ಸಾದ ಮೇಲೆ ರಾಜಕೀಯ ಪಕ್ಷಗಳನ್ನು ಒಲಿಸಿಕೊಂಡು ರಾಜಕೀಯ ಪ್ರವೇಶಿಸುವ ಆಸೆ ಇಟ್ಟುಕೊಂಡವರಂತೆ ವರ್ತಿಸುತ್ತಿದ್ದಾರೆ.  ಬಾಲಿವುಡ್‌ ನಲ್ಲಿ ಸ್ಮೃತಿ ಇರಾನಿ, ಕಂಗನಾ ರನಾವತ್ ಅವರೆಲ್ಲ ಮಾತಾಡುವಾಗ ನಾನೂ ಮಾತಾಡಿದ್ರೆ ಅವರಂತೆ ಆಗಬಹುದು ಅಂತ ಕನಸು ಕಾಣೋದ್ರಲ್ಲಿ ತಪ್ಪಿಲ್ಲ ಬಿಡಿ. ಆದರೆ ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ, ದೇಶದ ಹಿರಿಯ ನಾಯಕರ ಬಗ್ಗೆ, ಮಹಾತ್ಮರ ಬಗ್ಗೆ ಹಗುರವಾಗಿ ಮಾತಾಡುವ ಮೂಲಕ ಈ ಸಿನಿಮಾ ನಾಯಕಿ ತನ್ನ ಆತುರ ಮತ್ತು ಅಜ್ಞಾನವನ್ನ ತೋರಿಸಿಕೊಳ್ಳುತ್ತಿರೋದು ನಗೆಪಾಟಲಿಗೆ ಈಡಾಗಿರೋದಂತೂ ನಿಜ.
ಲೂಸ್‌ಟಾಕ್(ವಿರಾಟ್ ಕೊಹ್ಲಿ) (ಕಾಲ್ಪನಿಕ ಸಂದರ್ಶನ)ಏನ್ ಸಾರ್, ಸೆಂಚುರಿ ಹೊಡೆದು ಎಲ್ಲಾ ವರ್ಷ ಆಯ್ತು, ಇನ್ನೂ ಯಾವಾಗ್ಹೊಡಿಬೇಕು ಅಂತಿದೀರಾ?– ನೀವ್ ಹೇಳೋದ್ ನೋಡಿದ್ರೆ, ಅಪ್ಪಾ, ತಂದೇ, ಸೆಂಚುರಿ ಹೊಡೆದು ೨ ವರ್ಷ ಆಯ್ತು, ಒಂದೆರಡ್ ಫುಲ್ ಟಾಸು, ಲೆಗ್ ಸೈಡ್ ಬಾಲ್ ಹಾಕ್ರಪ್ಪಾ ಅಂತಬೋಲರ್ಸ್ ಹತ್ರ ಬೇಡ್ಕೊಬೇಕು ನಾನು ಅಲ್ವಾ?
ಓಹೋ, ಸಮಾಧಾನ. ಬ್ಯಾಟಿಂಗ್ ನಲ್ಲಿ ಫಾರ್ಮ್ ಕಳ್ಕೊಂಡ್ರೂ ಮಾತಾಡೋ ವಿಷ್ಯದಲ್ಲಿ ಮಾತ್ರ ಯಾವಾಗ್ಲೂ ಫುಲ್ ಫಾರ್ಮ್ ನಲ್ಲಿರ್ತೀರಾ ಅಲ್ವಾ.– ಕೊಹ್ಲಿದು ಫಾರ್ಮು, ಚಾರ್ಮು ಯಾವಾಗ್ಲೂ ಹಂಗೇ ಇರುತ್ತೆ. ಇನ್ನೂ ಡೀಟೇಲ್ಸ್ ಬೇಕು ಅಂದ್ರೆ ನಮ್ ಫಾರ್ಮ್ ಹೌಸಿಗೆ ಬನ್ನಿ ಮಾತಾಡಣ.ಓಕೆ ಓಕೆ, ಸರಿ, ನಿಮ್ಮದು ಬಿಡಿ, ಚೇತೇಶ್ವರ ಪೂಜಾರ ಬಗ್ಗೆನೂ ಭಾರೀ ಟೀಕೆ ಬರ್ತಾ ಇದೆ, ಅವ್ರನ್ನ ಟೀಮಿಂದ ತೆಗಿಬೇಕು ಅಂತ. ಇದಕ್ಕೇನ್ ಹೇಳ್ತೀರಾ?– ಅಯ್ಯೋ, ಟೀಕೆ ಅನ್ನೋದು ಸಚಿನ್ ತೆಂಡೂಲ್ಕರ್ ಅವರನ್ನೇ ಬಿಟ್ಟಿಲ್ಲ. ದೇವರನ್ನೇ ಆಡಿಕೊಂಡವರು, ಪೂಜಾರ್‌ರನ್ನ ಬಿಡ್ತಾರಾ?
ಪೂಜಾರ್‌ರು ಬಿಡಿ, ಶಾಸ್ತ್ರಿಗಳು ಅಜಿಂಕ್ಯಾ ರಹಾನೆ ಆಟದ ಬಗ್ಗೆ ಏನಂತಾರೆ?– ಎಲ್ಲದಕ್ಕೂ ಒಂದ್ ಟೈಮು ಅಂತ ಇರುತ್ತೆ, ಈ ಆಷಾಢ ಕಳ್ದು, ಶ್ರಾವಣ ಬಂದ್ರೆ ರಹಾನೆನೂ ಟಾಪಲ್ ಬರ್ತಾನೆ ಅಂತ ಹೇಳಿದ್ದಾರೆ.
ಅಲ್ರೀ, ರಹಾನೆ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್, ಟಾಪ್ ಅಲ್ಲಿ ಹೆಂಗ್ರೀ ಬರ್ತಾನೆ? ಹೋಗ್ಲಿ ನಿಮ್ಮ ಓಪನರ್ಸ್ ಬಗ್ಗೆ ಹೇಳಿ– ಅವರು ಪಾಪ ಕಷ್ಟಪಟ್ಟು ಆಡ್ತಾ ಇzರೆ ಬಿಡಿ. ಆಡಬೇಕಾದ್ರೆ ಓಪನ್‌ದ ಬ್ಯಾಟಲ್, ಮ್ಯಾಚ್ ಗೆದ್ ಮೇಲೆ ಓಪನ್ ದ ಬಾಟಲ್, ಎರಡೂ ಅವರೇ ಮಾಡೋದು.
ನೆಟ್ ಪಿಕ್ಸ್ಖೇಮು ದಿನಾ ರಾತ್ರಿ ಕುಡ್ಕೊಂಡು ಮನೆಗೆ ಲೇಟ್ ಆಗಿ ಬರ್ತಾ ಇದ್ದ. ಖೇಮುಶ್ರೀ, ದಿನಾ ಬಯ್ತಾ ಇದ್ಳು. ಎಷ್ಟು ಹೇಳಿದರೂ ಖೇಮು ಕೇಳ್ತಾ ಇರಲಿಲ್ಲ.ಒಂದು ದಿನ ರೋಸಿ ಹೋದ ಖೇಮುಶ್ರೀ,೧೨ಗಂಟೆ ಒಳಗೆ ಮನೆಗೆ ಬನ್ನಿ ಅಂತ ಎಲ್ಲಾ ಸಲ ಹೇಳಿದೀನಿ, ಇನ್ನೊಂದ್ಸಲ ಲೇಟಾಗಿ ಬಂದ್ರೆ ನಾನು ನಿಮಗೆ ಡಿವೋರ್ಸ್ ಕೊಟ್ಟು, ಗಂಡನ್ನ ಬದಲಾಯಿಸ್ತೀನಿ ಅಷ್ಟೇ ಅಂತ ಹೆದರಿಸಿದಳು. ಅದಕ್ಕೆ ಖೇಮು ಇನ್ಮೇಲೆ ಕುಡಿಯೋದನ್ನ ಬೇಗ ಮುಗಿಸಿ ಕರೆಕ್ಟ್ ಟೈಮಿಗೆ ಮನೆಗೆ ಬರ್ಬೇಕು ಅಂತ ಅಂದುಕೊಂಡ. ಅವತ್ತು ಸ್ನೇಹಿತರು ಸಿಗ್ತೀವಿ ಅಂತ ಹೇಳಿದ್ರು. ಸರಿ ಪಾರ್ಟಿಗೆ ಹೋದ. ಮಾತಾಡ್ತಾ, ಮಾತಾಡ್ತಾ, ಟೈಮ್ ಹೋಗಿದ್ದೇ ಗೊತ್ತಾಗಲಿಲ್ಲ.
ಎಲ್ಲಾ ಪಾರ್ಟಿ ಮುಗಿಸಿ ಮನೆಗೆ ಬಂದ. ಮನೆಗೆ ಬರೋವಷ್ಟರಲ್ಲಿ ಬೆಳಗಿನ ಜಾವ೩ಗಂಟೆ ಆಗಿತ್ತು. ಖೇಮುಶ್ರೀ ಮಲಗಿದ್ಳು. ನಿದ್ದೆಗಣ್ಣಲ್ಲೇ, ಎಷ್ಟು ಗಂಟೆ ರೀ ಅಂತ ಕೇಳಿದ್ಳು. ಖೇಮು೧೨ಗಂಟೆ ಕಣೇ ಅಂದ. ಅದೇ ಸಮಯಕ್ಕೆ ಸರಿಯಾಗಿ ಗಡಿಯಾರದ ಗಂಟೆ ಹೊಡಕೊಳ್ಳೋಕೆ ಶುರು ಆಯ್ತು. ಅದು ಹನ್ನೆರಡು ಸಲ ಹೊಡೆದುಕೊಂಡಿದ್ದನ್ನು ಕೇಳಿದ ಖೇಮುಶ್ರೀ ಹಾಗೇ ಮಲಗಿಕೊಂಡಳು. ಬೆಳಗ್ಗೆ ಬೇಗ ಎದ್ದು ತಿಂಡಿ ಬಡಿಸುವಾಗ ಖೇಮುಶ್ರೀ ಕೇಳಿದ್ಳು, ನಿಜ ಹೇಳ್ರೀ ನೀವು ನಿನ್ನೆ ರಾತ್ರಿ ಬಂದಾಗ ಟೈಮ್ ಎಷ್ಟಾಗಿತ್ತು?. ಅದಕ್ಕೆ ಖೇಮು ಹೇಳಿದ, ನೀನೇ ಕೇಳಿದ್ಯ, ಗಡಿಯಾರ ಹನ್ನೆರಡು ಸಲ ಹೊಡಕೊಂತು ಅಲ್ವಾ, ಗಂಡನ್ನ ಬದಲಾಯಿಸ್ತೀನಿ ಅಂತೆಲ್ಲ ಹೇಳಬೇಡ ಈಗ ಅಂದ.
ಅದಕ್ಕೆ ಖೇಮುಶ್ರೀ ಹೇಳಿದ್ಳು, ಇಲ್ಲ, ರೀ, ಗಂಡನ್ನ ಬದಲಾಯಿಸೋ ಅಗತ್ಯ ಇಲ್ಲ, ಆದ್ರೆ ನಮ್ಮನೆ ಗಡಿಯಾರನ ಬದಲಾಯಿಸ್ಬೇಕು ಅಂದ್ಳು. ಯಾಕೆ ಅಂತ ಖೇಮು ಕೇಳಿದ. ಅದಕ್ಕೆ ಖೇಮುಶ್ರೀ ಹೇಳಿದ್ಳು, ಪಾಪ ನಮ್ ಗಡಿಯಾರಕ್ಕೆ ವಯಸ್ಸಾಯ್ತು, ಹುಷಾರಿಲ್ಲ ಅನ್ಸುತ್ತೆ. ನಿನ್ನೆ ರಾತ್ರಿ ನೀವು ಬಂದಾಗ ನಮ್ಮ ಗಡಿಯಾರ3ಸಲ ಬಡಕೊಂತು, ಆಮೇಲೆ ಓಹ್ ಶಿಟ್ ಅಂತು, ಮತ್ತೆ7ಸಲ ಬಡಕೊಂತು, ಮಧ್ಯೆ ಒಂದ್ಸಲ ಕೆಮ್ಮಿತು, ಆಮೇಲೆ ಎರಡು ಸಲ ಸೀನಿತು, ಮತ್ತೆ ಗಂಟಲು ಸರಿ ಮಾಡ್ಕೊಂಡು2ಸಲ ಬಡಕೊಂಡು, ಹಾಲ್‌ನ ಟೇಬಲ್ ಮೇಲಿದ್ದ ಫ್ಲವರ್ ವಾಸ್‌ಗೆ ಡಿಕ್ಕಿ ಹೊಡೆದು ಅದನ್ನ ಕೆಳಗೆ ಬೀಳಿಸಿ ಅಲ್ಲೇ ಇದ್ದ ಬೆಡ್ ಮೇಲೆ ಬಿದ್ಕೊಂತು.
ಕ್ರಿಕೆಟ್ ಟೀಮ್ ಸೆಲೆಕ್ಷನ್
ಅವ್ನ್ ಲಾ ಮ್ಯಾಚ್ ಚೆನ್ನಾಗೇ ಆಡಿದ್ನಲ್ಲ, ಅವನನ್ನ ಯಾಕ್ ಬಿಟ್ರು? ‘ಅವ್ನಿಗೆ ಪೈಲ್ಸ ಆಗಿದೆಯಂತೆ, ಅದಕ್ಕೇ ಕೂಡ್ಸಿದಾರೆ’ ‘ಪೈಲ್ಸ್ ಆದ್ರೆ ಕೂಡ್ಸಂಗಿಲ್ಲ, ಆಡಿಸ್ಬೇಕು ತಾನೇ?’ ಶಾರ್ದೂಲ್ ಠಾಕೂರ್31ಬಾಲಿಗೆ53ರನ್ ಹೊಡೆದಿದ್ದು ನೋಡಿ, ಪಂತ್, ಪೂಜಾರಾ, ರಹಾನೆ ಏನ್ ಹೇಳಿದ್ರು?
– ಯೇ ಹಾಥ್ ಮುಝೆ ದೇದೇ ಠಾಕೂರ್ಜಾಸ್ತಿ ಹೈಟ್ ಇರೋ ಜಾಗದಲ್ಲಿ ನಿಂತಿದ್ದಾಗ ಆಗೋ ಭಯ, ಫೋಬಿಯಾ ಆಫ್ ಹೈಟ್ಸ್. ಆದ್ರೆ, ನೆಲದ ಮೇಲೆ ನಿಂತಾಗಲೂ ಭಯ ಆದ್ರೆ, ಅದು -’ಹೈಟ್ಸ್’ ಆಫ್ ಫೋಬಿಯಾ ಕ್ಲಬ್‌ಹೌಸ್‌ನ18ಪ್ಲಸ್ ರೂಮ್ ಗಳಲ್ಲಿ ಆಡೋ ಮಾತು ಕೇಳಿದಾಗ ಅನ್ನಿಸೋದು ಬಿಟ್ರೆ, ಇವ್ರು ಕ್ಲಬ್ ಹೌಸಲ್ಲಿ  ರೂಮ್‌ನೂ ಹಾಕ್ಕೊಂಡ್ಬಿಡ್ತಾರೆ. ಹೆಂಡತಿಗೆ ಪ್ರಾಮಿಸ್ ಮಾಡಿದ ಟೈಮಿಗೆ ಸರಿಯಾಗಿ ಉಂಗುರ ಕೊಡಿಸದೆ ಕಾಯಿಸಿದ್ರೆ, ಅದು ಬಫರಿಂಗ್
ಲೈನ್ ಮ್ಯಾನ್
ಐಪೋನ್ ಪ್ರಿಯರ ಪ್ರಕಾರ-ಎ ಫಾರ್ ಆಪಲ್ ಅಲ್ಲ, ಐ ಫಾರ್ ಆಪಲ್
ವಾಹನಗಳಿಗೆ ತಬಲಾ, ಪಿಟೀಲು, ಕೊಳಲು ಸೌಂಡ್ ಬರೋ ಹಾರ್ನ್-ಇನ್ಮೇಲೆ ಎಲ್ರೂ ಕಚೇರಿಗೆ ಹೋಗೋವಾಗ್ಲೇ ಕಛೇರಿ ನೋಡ್ಕಂಡ್ ಹೋಗಬಹುದು.
ಬಿಜೆಪಿ ನಾಯಕರು ಜ್ಯೋತಿಷ್ಯ ಕೇಳೋಕ್ ಹೋಗಲ್ಲ-ಯಾಕಂದ್ರೆ ಜ್ಯೋತಿಷಿಗಳು ಕೈ ನೋಡಿ ಭವಿಷ್ಯ ಹೇಳ್ತಾರೆ
ಗಾಂಧಿನಗರ – ‘ಸಾರ್, ಏನ್ ಕೆಲ್ಸ ಮಾಡ್ತಿದ್ದೀರಾ ನೀವು?’‘ನಾನೊಬ್ಬ ಡಿಟೆಕ್ಟಿವ್– ಮತ್ತೆ, ಗಾಂಧಿನಗರದಲ್ಲಿ ಏನ್ ಮಾಡ್ತಾ ಇದ್ದೀರಾ?ಸಿನಿಮಾ ಮಾಡೋಕೆ ಕಥೆ ಹುಡುಕ್ತಾ ಇದ್ದೀನಿ, ಅದಾದ್ಮೇಲೆ ಪ್ರೋಡ್ಯೂರ್ಸ ಹುಡುಕ್ತೀನಿ