ಮಧ್ಯರಾತ್ರಿಯಲ್ಲೇ ಏಕೆ ಸ್ವಾತಂತ್ರ‍್ಯ?
ಅಭಿಪ್ರಾಯ
ಬಿ.ಪಿ.ಆಚಾರ್ಯ, ನಿವೃತ್ತ ಐಎಎಸ್ ಅಧಿಕಾರಿ
@.
ವೈಸ್ ರಾಯ್‌ನ ಸೊಕ್ಕು ಮತ್ತು ಜ್ಯೋತಿಷ್ಯದ ಹೊಂದಾಣಿಕೆ ಅಥವಾ ಉಪಾಯದ ಕಾರಣದಿಂದಾಗಿ ಹೀಗೆನಾವು ಎಂದೆಂದಿಗೂ ಇಳಿಸಲಾಗದ ಮಧ್ಯರಾತ್ರಿ ಸ್ವಾತಂತ್ರ್ಯದ ಹೊರೆ ಹೊತ್ತೆವು. ಸ್ವಾತಂತ್ರ್ಯ ಹಸ್ತಾಂತರದದಿನಾಂಕವನ್ನು ಕೂಡ ಒಬ್ಬ ಸೊಕ್ಕಿನ ವೈಸ್ ರಾಯ್‌ನ ಸ್ವೇಚ್ಛಾಚಾರಕ್ಕೆ ಅನುಗುಣವಾಗಿ ನಿಶ್ಚಯಮಾಡಲಾಯಿತು.ಪರಮಾಶ್ಚರ್ಯದ ವಿಚಾರವೆಂದರೆ, ಭಾರತೀಯ ನಾಯಕರು ಅವನ ತಿಕ್ಕಲುತನಕ್ಕೆಶರಣಾಗಿದ್ದು. ಈ ವಿಚಾರವಾಗಿ ನೆಹರು ಉಳಿದ ನಾಯಕರುಗಳ ಬಳಿ ಚರ್ಚಿಸಿದಾಗ ಸಹಜವಾಗಿಯೇವಿರೋಧ ವ್ಯಕ್ತವಾಯಿತು.
ಈಗ ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಕರೆಯಲಾಗುತ್ತಿರುವ ನಮ್ಮ ಸ್ವಾತಂತ್ರ್ಯದ ೭೫ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿಅನಿವಾರ್ಯವಾಗಿ 25 ವರ್ಷಗಳ ಹಿಂದೆ ನಡೆದ ಸುವರ್ಣ ಮಹೋತ್ಸವ ನೆನಪಿಸಿಕೊಳ್ಳುತ್ತೇನೆ. ಅಂದು ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ಹೆಸರಿನಲ್ಲಿ ಆಯೋಜನೆ ಗೊಂಡ ಸಮಾರಂಭಗಳು ಹಾಗೂ ಅವುಗಳನ್ನು ಅನಿವಾರ್ಯವಾಗಿ ಅಸಹಾಯಕ ಕಣ್ಣುಗಳಿಂದ ನೋಡಿದ ನೋಟ ಯಾರಿಗಾದರೂ ನೆನಪಿರಬೇಕು. ಅದೃಷ್ಟ ವಶಾತ್ ಈ ಬಾರಿ ಹಾಗೆ ಏನೂ ಕೂಡ ನಡೆಯಲಿಲ್ಲ.
ಆದರೆ, ಒಂದು ಪ್ರಶ್ನೆಯಂತೂ ಕಾಡುತ್ತಲೇ ಇದೆ. ಆದ್ಯಾವ ಕಾರಣಕ್ಕೆ ಹೊತ್ತಲ್ಲದ ಹೊತ್ತಿನಲ್ಲಿ ನಾವು ಸ್ವಾತಂತ್ರ್ಯ ಗಳಿಸಿಕೊಂಡೆವು? ಅದೇನು ಆಯ್ಕೆಯೋ ಅಥವಾ ಅನಿವಾರ್ಯವೋ? ಮಧ್ಯರಾತ್ರಿಯ ‘ಟ್ರಿಸ್ಟ್ ವಿತ್ ಡೆಸ್ಟಿನಿ-ವಿಧಿಯೊಂದಿಗಿನ ಪ್ರಯತ್ನ’ (ಸ್ವಾತಂತ್ರ್ಯದ ಮುನ್ನಾ ದಿನ ಮಧ್ಯರಾತ್ರಿಯಲ್ಲಿ ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರು ಮಾಡಿದ ಭಾಷಣಐಎ) ದ ಮಹತ್ವ ಏನು? ಯಾರಾದರೂ ಯೋಚಿಸಿದ್ದೀರಾ? ಅಲ್ಲೊಂದು ಸಣ್ಣ ಕತೆ ಇದೆ. ಅದು ಬಹಳ ಮಂದಿಗೆ ಗೊತ್ತಿಲ್ಲ. ಅದನ್ನು ಇಲ್ಲಿ ಹೇಳಿದ್ದೇನೆ ಓದಿ.
ಈ ಪ್ರಶ್ನೆಗಳಿಗೆ ಉತ್ತರಿಸಲು ನಾನು80ರ ದಶಕಕ್ಕೆ ಹಿಂದಿರುಗಬೇಕು. ನಾನು ಆಗ ಜೆಎನ್‌ಯು ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಕಾಲ. ನಾನು ಒಂದು ವರ್ಷ ಖಾಲಿ ಕೂತಿದ್ದೆ. ಉತ್ತಮ ದರ್ಜೆಯಲ್ಲಿ ಎಂಫಿಲ್ ಪಾಸಾದ ನಂತರ ನನಗೆ ಪಿಎಚ್‌ಡಿ ಮಾಡಲು ನೇರ ಅವಕಾಶವಿತ್ತು, (ನೋಂದಣಿ ಮಾಡಿಸಿದ್ದೆ, ಆದರೆ ಅದು ನನ್ನ ಆಧ್ಯತೆ ಆಗಿರಲಿಲ್ಲ). ನನಗೆ ಆಗಿನ್ನೂ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವ ಕನಿಷ್ಠ ವಯೋಮಾನ ಆಗಿರಲಿಲ್ಲ. ಹಾಗಾಗಿ ನನಗೆ ಬಿಡುವಿನ ಸಮಯವಿತ್ತು.
ಭಾರತದ ಕಡೆಯ ವೈಸ್ ರಾಯ್ ಲಾರ್ಡ್ ಲೂಯಿಸ್ ಮೌಂಟ್ ಬ್ಯಾಟನ್ ಅವರ ವೈಯಕ್ತಿಕ ಕಾಗದಪತ್ರಗಳು ಮತ್ತು ಖಾಸಗಿ ದಾಖಲೆಗಳನ್ನು ಸಂಪಾದಿಸಲು ಅಂತಾರಾಷ್ಟ್ರೀಯ ಖ್ಯಾತಿಯ ಸಾಹಿತಿಗಳಾದ ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲಾಪಿಯರ್ (ಫ್ರಿಡಂ ಅಟ್ ಮಿಡ್ ನೈಟ್ ಖ್ಯಾತಿಯ ಸಾಹಿತಿ) ಅವರಿಗೆ ನೆರವಾಗಬೇಕೆಂದು ನನ್ನ ಪ್ರೊಫೆಸರ್ ಮತ್ತು ಗೈಡ್ ಆಗಿದ್ದವರು ಕೇಳಿಕೊಂಡರು. ಲೂಯಿಸ್ ಮೌಂಟ್ ಬ್ಯಾಟನ್ ಅವರ ವೈಯಕ್ತಿಕ ಕಾಗದಪತ್ರಗಳು ಮತ್ತು ಖಾಸಗಿ ದಾಖಲೆಗಳನ್ನು ಅವರು ತಮ್ಮ ಬೆಸ್ಟ್ ಸೆಲ್ಲರ್ ಪ್ರಕಾಶನ ಕ್ಕಾಗಿ ಸಂಗ್ರಹಿಸಿಟ್ಟುಕೊಂಡಿದ್ದರು.
ಹೀಗಾಗಿ ಅವರಿಗೆ ನೆರವಾಗುವ ಕೆಲಸದಲ್ಲಿ ನನಗೆ ಅಪಾರ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಯಿತು. ಆ ಸಂಪಾದನೆಯ ಕೆಲಸದ ನಂತರ ಆ ಇಬ್ಬರು ಲೇಖಕರ ಮೌಂಟ್ ಬ್ಯಾಟನ್ ಮತ್ತು ಭಾರತದ ವಿಭಜನೆ ಹಾಗೂ ಮೌಂಟ್ ಬ್ಯಾಟನ್ ಮತ್ತು ಸ್ವತಂತ್ರ ಭಾರತ ಎಂಬ ಎರಡು ಕೃತಿಗಳು ಪ್ರಕಟವಾದವು.ಈ ಲೇಖಕರು ತಮ್ಮ ಅಂತಾರಾಷ್ಟ್ರೀಯ ಬೆಸ್ಟ್ ಸೆಲ್ಲರ್ ಫ್ರೀಡಂ ಅಟ್ ಮಿಡ್ ನೈಟ್ ಕೃತಿಗಾಗಿ ನಡೆಸಿದ ಸಂಶೋಧನಾ ಕಾರ್ಯದ ಸಂದರ್ಭದಲ್ಲಿ ಮಾಡಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಅವರೊಂದಿಗೆ ನಡೆಸಿದ್ದ ಆಸಕ್ತಿದಾಯಕ ಸಂದರ್ಶನ ನನ್ನ ಕಣ್ಣಿಗೆ ಬಿತ್ತು.
ಅದೊಂದು ಧ್ವನಿಮುದ್ರಿತ ಸಂದರ್ಶನವಾಗಿದ್ದು, ಮೌಂಟ್ ಬ್ಯಾಟನ್ ಮತ್ತು ಭಾರತದ ವಿಭಜನೆ ಕೃತಿಯ ಮೊದಲ ಭಾಗದಲ್ಲಿ ಪ್ರಕಟಗೊಂಡಿದೆ. ಈ ಸಂದರ್ಶನ ದಲ್ಲಿ ಮೌಂಟ್ ಬ್ಯಾಟನ್ ತಮ್ಮ ಎಂದಿನ ಸೊಕ್ಕು ಮತ್ತು ತಿರಸ್ಕಾರದ ಭಾವನೆಯಲ್ಲೇ ಮಾತನಾಡಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳೋಣ ಬನ್ನಿ:
ಪ್ರಶ್ನೆ:ಆಗಸ್ಟ್ 15ರ ರೀತಿಯ ಸಮಾರಂಭ ಹಿಂದೆಂದೂ ನಡೆದ ಉದಾಹರಣೆ ಇಲ್ಲ. ಇದನ್ನು ಪರಿಕಲ್ಪಿಸಿ ರೂಪಿಸಿದ ರುವಾರಿ ಯಾರು?ಉತ್ತರ:ನಾನು ನೆಹರು ಅವರೊಂದಿಗೆ ವಿಚಾರ ಮಾಡಿದೆ. ನಾನು ಆ.15 ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಮೊದಲ ಹಾಗೂ ಅಮೋಘ ವಿಚಾರವೆಂದರೆ ಅದು ಕೇವಲ ಎರಡು ವರ್ಷಗಳ ಹಿಂದೆ ಜಪಾನಿಯರು ಶರಣಾದ ದಿನಾಂಕವಾಗಿತ್ತು. ನಾನು ಯಾವುದೇ ಜ್ಯೋತಿಷಿಗಳನ್ನು ಸಂಪರ್ಕ ಮಾಡಲಿಲ್ಲ.
ನಿಮಗೆ ತಿಳಿದ ಹಾಗೆ ಭಾರತೀಯರು ಜ್ಯೋತಿಷಿಗಳನ್ನು ಬಹಳ ನಂಬುತ್ತಾರೆ. ಅದನ್ನು ನಾನು ಮನಗಂಡಿರಲಿಲ್ಲ. ಅಶುಭ ದಿನಗಳಲ್ಲಿ ಯಾರೂ ಏನನ್ನೂ ಮಾಡುವುದಿಲ್ಲ. ನೆಹರು ಜೋತಿಷ್ಯವನ್ನು ನಂಬುತ್ತಿರಲಿಲ್ಲ ಆದರೆ, ಬಹಳ ಮಂದಿ ನಂಬುತ್ತಾರೆ ಎಂದು ಅವರು ಹೇಳಿದ್ದರು. ಹಾಗಾಗಿ ನಾನು ಯಾವುದೇ ಶುಭಸೂಚಕವಲ್ಲದ ದಿನವನ್ನು ಆಯ್ಕೆ ಮಾಡಿಕೊಂಡೆ. ನಾನು ಜೋತಿಷಿಯನ್ನು ಭೇಟಿ ಮಾಡದ್ದು ಸಣ್ಣ ವಿಷಯವಿರಬಹುದು, ಆದರೆ ಅದನ್ನು ನಾನು ಮರೆತು ಬಿಟ್ಟಿದ್ದೆ.
‘ಏನೇನು ಅಂದುಕೊಳ್ಳಬೇಡಿ. ನೀವು ಒಪ್ಪಿಕೊಂಡರೆ ನಾವು ಮಧ್ಯರಾತ್ರಿಯೇ ಸಭೆ ನಡೆಸೋಣ. ಮಧ್ಯರಾತ್ರಿಗೆ ಮುನ್ನ ನಾವು ನಿಮಗೆ ಅಧಿಕಾರವನ್ನು ಹಸ್ತಾಂತರ ಮಾಡುತ್ತೇವೆ. ಅದು ಅತ್ಯಂತ ಒಳ್ಳೆಯ ಗಳಿಗೆಯೇ ಅಗಿರಲಿದೆ.’ ಮತ್ತೆ ನಾನೆಂದುಕೊಂಡೆ-ಎಂತಹ ಅಮೋಘ ನಾಟಕೀಯ ವಿಚಾರ ಅಂತ. ಇಡೀ ಪ್ರಪಂಚ ಮಲಗಿರುವಾಗ ಮಧ್ಯರಾತ್ರಿಯ ಸಭೆ. ನೀವು ಇದನ್ನು ನೆನಪಿನಲ್ಲಿ ಇಡುತ್ತೀರಿ… ಇದನ್ನು ಕೇವಲ ನಾಟಕೀಯಗೊಳಿಸಲು ಮಾಡಲಿಲ್ಲ ಬದಲಾಗಿ ಕೆಟ್ಟದಿನವನ್ನು ನಾನು ಆಯ್ಕೆ ಮಾಡಿಕೊಂಡಿದ್ದೆ. ಏಕೆಂದರೆ, ಜೋತಿಷಿಗಳು ಹೇಳಿದ್ದರು ಅದೊಂದು ಕೆಟ್ಟ ಗಳಿಗೆ ಎಂದು.
ನೋಡಿ ಇದು ಕತೆ. ವೈಸ್ ರಾಯ್‌ನ ಸೊಕ್ಕು ಮತ್ತು ಜ್ಯೋತಿಷ್ಯದ ಹೊಂದಾಣಿಕೆ ಅಥವಾ ಉಪಾಯದ ಕಾರಣದಿಂದಾಗಿ ಹೀಗೆ ನಾವು ಎಂದೆಂದಿಗೂ ಇಳಿಸ ಲಾಗದ ಮಧ್ಯರಾತ್ರಿ ಸ್ವಾತಂತ್ರ್ಯದ ಹೊರೆ ಹೊತ್ತೆವು. ಸ್ವಾತಂತ್ರ್ಯ ಹಸ್ತಾಂತರದ ದಿನಾಂಕವನ್ನು ಕೂಡ ಒಬ್ಬ ಸೊಕ್ಕಿನ ವೈಸ್ ರಾಯ್‌ನ ಸ್ವೆಚ್ಛಾಚಾರಕ್ಕೆ ಅನುಗುಣವಾಗಿ ನಿಶ್ಚಯ ಮಾಡಲಾಯಿತು. ಪರಮಾಶ್ಚರ್ಯದ ವಿಚಾರವೆಂದರೆ, ಭಾರತೀಯ ನಾಯಕರು ಅವನ ತಿಕ್ಕಲುತನಕ್ಕೆ ಶರಣಾಗಿದ್ದು. ಈ ವಿಚಾರವಾಗಿ ನೆಹರು ಉಳಿದ ನಾಯಕರುಗಳ ಬಳಿ ಚರ್ಚಿಸಿದಾಗ ಸಹಜವಾಗಿಯೇ ವಿರೋಧ ವ್ಯಕ್ತವಾಯಿತು.
ಅದರಲ್ಲೂ ಸರ್ದಾರ್ ವಲ್ಲಭಾಯ್ ಪಟೇಲ್ ಹಾಗೂ ಜೆ ಬಿ ಕೃಪಲಾನಿ ಅವರು ಅಶುಭ ದಿನವನ್ನು ತಪ್ಪಿಸಲು ಪ್ರಯತ್ನ ಪಟ್ಟರು. ಈ ಸಂದಿಗ್ಧತೆಯನ್ನು ನಿವಾರಿಸಿ ಕೊಳ್ಳಲು ಕುಶಲ ಜ್ಯೋತಿಷ್ಯ ಪರಿಹಾರದ ಮೊರೆ ಹೋಗಲಾಯಿತು. ಇದು ನಡೆದಿದ್ದು ಹೀಗೆ. ಹಿಂದೂ ಕ್ಯಾಲೆಂಡರ್ ಪ್ರಕಾರ (ಸೌರಮಾನ/ ಚಂದ್ರಮಾನ ವೃತ್ತದ ದಿನಗಳ ಪ್ರಕಾರ) ಸೂರ್ಯೋದಯದಿಂದ ದಿನ ಪ್ರಾರಂಭವಾಗುತ್ತದೆ.
ಆದರೆ, ಐರೋಪ್ಯ (ಗ್ರೆಗೋರಿಯನ್) ಕ್ಯಾಲೆಂಡರ್ ಪ್ರಕಾರ ದಿನ ಪ್ರಾರಂಭವಾಗುವುದು ಮಧ್ಯರಾತ್ರಿಯಲ್ಲಿ. ಈ ಒಂದು ಘನ ವ್ಯತ್ಯಾಸ ಜೋತಿಷ್ಯ ಪರಿಹಾರ ಕಂಡುಹಿಡಿಯಲು ಕಿರಿದಾದ ಮಾರ್ಗವನ್ನು (ಉಪಾಯ) ಒದಗಿಸಿತು. ಜೋತಿಷಿಗಳ ಪ್ರಕಾರ, 15ನೇ ಆಗಸ್ಟ್, 1947, ಕೃಷ್ಟ ಪಕ್ಷದ ೧೪ನೇ ದಿನದಂದು (ಚತುರ್ದಶಿ) ಬೀಳುತ್ತದೆ. ಅದು ಅತ್ಯಂತ ಅಶುಭ ದಿನವಾದ, ಎಲ್ಲಾ ರೀತಿಯಿಂದಲೂ ದೂರವಿರುವಂತೆ ಮಾಡುವ, ಅಮಾವಾಸ್ಯೆ ಎಂದು ತಿಳಿಯಲಾಗಿದೆ. ಆದರೂ ಸಹ, ಸೃಜನಾತ್ಮಕ ಹೊಂದಾಣಿಕೆ ಸೂತ್ರದ ಮೂಲಕ ೧೫ನೇ ಆಗಸ್ಟ್ ಸೂರ್ಯೋದಯವನ್ನು ತಪ್ಪಿಸುವುದರ ಮೂಲಕ ಸಾಽಸಲಾಯಿತು. ಅಲ್ಲಿ ಅಶುಭದಿನಗಳಾದ ಚತುರ್ದಶಿ/ಅಮಾವಾಸ್ಯೆಯನ್ನು ತಪ್ಪಿಸಿದಂತಾಯಿತು ಕೂಡ.
ಆದರೆ, ಗ್ರೆಗೇರಿಯನ್ ಕ್ಯಾಲೆಂಡರ್ ಪ್ರಕಾರ ೧೫ರ ಆಗಸ್ಟ್ ಪ್ರಾರಂಭವಾಗುವುದು ಮಧ್ಯರಾತ್ರಿ ಕಳೆದ ನಂತರ. ಹಾಗಾಗಿ ಮಧ್ಯ ರಾತ್ರಿ ಸಮಾರಂಭ ಒಂದುರೀತಿ ಕುಶಲ ಹಗ್ಗದ ಮೇಲಿನ ನಡಿಗೆ ರೀತಿಯದಾಗಿತ್ತು. ಹಾಗೆ ನೋಡಿದರೆ, ಇಲ್ಲಿ ಯಾರಿಗೂ ಸೋಲು ಗೆಲುವು ಇಲ್ಲದ ಸೂತ್ರವು ಅನಿವಾರ್ಯ ಅನ್ನುವುದಕ್ಕಿಂತ ಆಯ್ಕೆ ಆಗಿತ್ತು. ಜನರ ಭಾವನೆಗಳಿಗೆ ಯಾವುದೇ ಬೆಲೆ ನೀಡದ ತಿರಸ್ಕಾರ ಮನೋವೃತ್ತಿಯ ವೈಸ್ ರಾಯ್ ಮಾಡಿದ ಆಯ್ಕೆಯ ದಿನದ ವಿರುದ್ಧ ಬಡಿದಾಡಲು ಯಾವುದೇ ಮಾರ್ಗವಿರಲಿಲ್ಲ. ಆದರೆ ಬೇಸರದ ಸಂಗತಿಯೆಂದರೆ, ಅವನ ತಿಕ್ಕಲುತನಕ್ಕೆ ಯಾವುದೇ ಪ್ರತಿರೋಧ ತೋರದೆ ಭಾರತೀಯ ನಾಯಕರುಶರಾಣಾಗಿದ್ದು.
ಹಾಗಾಗಿ, ಮಧ್ಯರಾತ್ರಿಯ ಸ್ವಾತಂತ್ರ್ಯ ‘ಟ್ರಿಸ್ಟ್ ವಿತ್ ಡೆಸ್ಟಿನಿ-ವಿಧಿಯೊಂದಿಗಿನ ಪ್ರಯತ್ನ’ ಆಯಿತು. ಅದು ಕ್ರಮೇಣ ಹಾಂಗ್ ಕಾಂಗ್ ಸೇರಿದಂತೆ ಹಲವುವಸಾಹತುಶಾಹಿ ದೇಶಗಳಿಗೆ ಅಧಿಕಾರ ಹಸ್ತಾಂತರದ ಒಂದು ನಾಟಕೀಯ ರೂಪಕವಾಗಿ ಬೆಳೆದು ಬಂದಿದೆ. ನಮಗೆ, ಈ ಹೊಂದಾಣಿಕೆ ಕತೆಯು ನಮ್ಮ ದೇಶದಸ್ವಾತಂತ್ರ್ಯ ಪಡೆದ ಆರಂಭಿಕ ಕಾಲದಲ್ಲಿ ಇದ್ದ ಗೊಂದಲದ ಬಗ್ಗೆ ಸದಾ ಗುನುಗುತ್ತಲೇ ಇರುತ್ತದೆ.
(ಲೇಖಕರು ತೆಲಂಗಾಣ ರಾಜ್ಯದ ನಿವೃತ್ತ ವಿಶೇಷ ಮುಖ್ಯ ಕಾರ್ಯದರ್ಶಿಗಳು)