ಕಾರ್ಮಿಕರ ‘ದುಡಿ’ತ ಅರ್ಥವಾಗದೆ ?
ನಾಡಿಮಿಡಿತ
ವಸಂತ ನಾಡಿಗೇರ
.@.
ಅದೊಂದು ಬಟ್ಟೆ ಅಂಗಡಿ. ಸೀರೆ ಅಂಗಡಿ ಎಂದೇ ಅಂದುಕೊಳ್ಳಿ. ಏಕೆಂದರೆ ಅಲ್ಲೇ ಈ ರೀತಿಯ ದೃಶ್ಯಗಳು ಹೆಚ್ಚಾಗಿ ಕಂಡುಬರುವುದು. ಸೀರೆ ಖರೀದಿಗೆ ಹೋದ ಮಹಿಳೆಯರನ್ನು ಅಲ್ಲಿನ ಮಾರಾಟ ಸಹಾಯಕರು (ಸೇಲ್ಸ್‌ಮನ್ ಅಂತ ಸಾಮಾನ್ಯವಾಗಿ ಕರೆಯುವುದು) ಕೃತಕ ಮುಗುಳ್ನಗೆಯೊಂದಿಗೆ ನಿಮ್ಮನ್ನುಸ್ವಾಗತಿಸುತ್ತಾರೆ. ಕೇಳಿ ಕೇಳಿದ ಸೀರೆಗಳನ್ನು ಒಂದಾದರೊಂದರಂತೆ ತೆಗೆದು ಹರಡಿ ತೋರಿಸುತ್ತಾರೆ.
ಇವರು ಅದನ್ನು ಒಂದಷ್ಟು ಹೊತ್ತು ನೋಡಿ ಬೇಡ ಎನ್ನುತ್ತಾರೆ. ‘ಬೇರೆ ಕಲರ್ ಇಲ್ವಾ, ಬೇರೆ ಪ್ಯಾಟರ್ನ್ ಇದೆಯಾ, ಇದೇ ಡಿಸೈನ್‌ನಲ್ಲಿ ಬದಲಿ ಕಲರ್ ಇದೆಯಾ?’ ಎಂದೆಲ್ಲ ಕೇಳುತ್ತಾರೆ. ಅದನ್ನೂ ತೋರಿಸಿದರೂ ಇವರಿಗೆ ಸಮಾಧಾನ ಆಗುವುದಿಲ್ಲ. ಇವರು ಪಕ್ಕದ ಸೆಕ್ಷನ್ ಹೋಗುತ್ತಾರೆ. ಅಲ್ಲಿ ದೃಶ್ಯದ ಪುನರಾವರ್ತನೆ. ಕೊನೆಗೆ ಇಡೀ ಅಂಗಡಿ ಸುತ್ತಿ ಒಂದೋ ಎರಡೋ ಸೀರೆ ಕೊಳ್ಳುತ್ತಾರೆ. ಕೆಲವರಂತೂ ಬೇಡ ಬಿಡಿ ಎಂದು ಮುಖಕ್ಕೆ ಹೊಡೆದಂತೆ ಹೇಳಿ, ಏನನ್ನೂ ಖರೀದಿಸ ದೆಯೇ ಅಲ್ಲಿಂದ ಹೊರಬೀಳುತ್ತಾರೆ.
ದ್ರೌಪದಿಯ ಸೀರೆ ಸೆಳೆದು ಸೆಳೆದು ದುಶ್ಶಾಸನಿಗೇ ಸುಸ್ತಾಯಿತಂತೆ. ಆದರೆ ಈ ಜನರಿಗೆ ಸುಸ್ತಾದರೂ ತೋರಿಸಿಕೊಳ್ಳದೆ ಸೀರೆಗಳನ್ನು ಕಪಾಟಿನಿಂದ ಸೆಳೆ ಸೆಳೆದು ತೊರಿಸಲೇಬೇಕು. ಇದು ಅವರಿಗೆ ಅನಿವಾರ್ಯ ಕರ್ಮ. ಗ್ರಾಹಕರ ಕೋಪ ತಾಪ, ಬೇಸರ ಮೊದಲಾದವುಗಳನ್ನು ಸಹಿಸಿಕೊಂಡು ಮತ್ತದೇ ನಗುವಿ ನಿಂದ ಅವರ ಮನವೊಲಿಸಬೇಕು. ಅವರು ಹಾಗೇ ಹೊರಟು ಹೋದರೆ ಅನಂತರ ಮಾಲೀಕರಿಂದ ಬೈಗುಳ ತಿನ್ನಬೇಕಾಗ ಬಹುದು. ‘ಗ್ರಾಹಕರನ್ನು ಆಕರ್ಷಿಸುವ ಕಲೆ ಗೊತ್ತಿಲ್ಲ, ನಿಮ್ಮಂಥವರಿದ್ದರೆ ನಮಗೆ ವ್ಯಾಪಾರ ಆದಂತೆಯೇ’ ಎಂಬ ಒಗ್ಗರಣೆ. ಇಷ್ಟಕ್ಕೇ ಅವರ ಬವಣೆ ನಿಲ್ಲುವುದಿಲ್ಲ. ಗ್ರಾಹಕರು ನೋಡಿ ಹರಡಿ ಹೋದ ಆ ಎಲ್ಲ ಬಟ್ಟೆಗಳನ್ನು ಮತ್ತೆ ಮಡಿಸಿ ಇಡಬೇಕು. ಉಸ್ಸಪ್ಪಾ ಎನ್ನುವಷ್ಟರಲ್ಲೆ ಮತ್ತೊಬ್ಬ ಗ್ರಾಹಕರ ಸೇವೆಗೆ ರೆಡಿಯಾಗಬೇಕು.
ಇಂಥದೇ ಅನುಭವ ಆಗುವುದು ಆಭರಣ ಅಂಗಡಿಗಳಲ್ಲಿ. ಅಲ್ಲಿನ ಹೆಣ್ಣುಮಕ್ಕಳೋ (ಬಹುತೇಕ ಹೆಂಗಸರೇ ಇರುತ್ತಾರೆ) ನೀಟಾಗಿ ಸೀರೆ ಉಟ್ಟುಕೊಂಡು, ಚೆಂದಾಗಿ ಮೇಕಪ್ ಮಾಡಿಕೊಂಡು ಗ್ರಾಹಕರನ್ನು ಬರಮಾಡಿ ಕೊಳ್ಳಬೇಕು. ಮಹಿಳಾ ಗ್ರಾಹಕರು ಒಂದೊಂದೇ ಆಭರಣ ನೋಡುತ್ತ, ಪರೀಕ್ಷಿಸುತ್ತ, ಕನ್ನಡಿ ಮುಂದೆ ನಿಂತು ತಮಗೆ ಒಪ್ಪುವುದಾ ಎಂಬುದನ್ನು ಲೆಕ್ಕ ಹಾಕುತ್ತಿರುವಾಗ ಅದರ ಗೊಡವೆ ಬೇಡ ಎನಿಸಿ ಇನ್ನೊಂದು ಒಡವೆಯತ್ತ ದೃಷ್ಟಿ ಹರಿಸುತ್ತಾರೆ. ಆಗಲೂ ಬೇಸರಗೊಳ್ಳದೆ ಮತ್ತೊಂದು ಆಭರಣದ ವೈಶಿಷ್ಟ್ಯಗಳನ್ನು ಬಣ್ಣಿಸತೊಡಗುತ್ತಾಳೆ ಮತ್ತೊಬ್ಬ ಮಹಿಳೆ. ಈ ನಡುವೆ ಕಾಫಿ ಬೇಕಾ, ಟೀ ಕುಡಿಯುವಿರಾ, ಜ್ಯೂಸ್ ಕೊಡಲೆ ಎಂದು ಕೇಳಬೇಕು.
ಗ್ರಾಹಕರು ಪಾನೀಯ ಸೇವನೆ ಮಾಡಿದರೂ ಬಂಗಾರ ಕೊಳ್ಳುವ ಗ್ಯಾರಂಟಿಯೇನೂ ಇರುವುದಿಲ್ಲ. ಇಷ್ಟು ಸಾಲದೆಂಬಂತೆ, ಹೇಳಿ ಕೇಳಿ ಚಿನ್ನದಂಗಡಿ. ಒಡವೆಗಳ ಮೇಲೆ ಸದಾ ನಿಗಾ ಇರಲೇಬೇಕು. ಅಕಸ್ಮಾತ್ ಕಾಣೆಯಾದರೆ ಅದರ ಹೊಣೆ ಮತ್ತದೇ ಮಾರಾಟ ಸಹಾಯಕರ ಮೇಲೆ. ಇವು ಒಂದೆರಡು ಉದಾಹರಣೆಗಳಷ್ಟೆ. ಗ್ರಾಹಕ ಉತ್ಪನ್ನ ಮಾರಾಟದ ಶೋರೂಂ ಗಳಿರಬಹುದು, ಮಾಲ್ ಗಳಿರಬಹುದು. ಎಲ್ಲೇ ಹೋದರೂ ಮಾರಾಟ ಸಹಾಯಕರದು ಬಹುತೇಕ ಇದೇ ಸ್ಥಿತಿ. ನಾಲ್ಕು ಕಾಸು ಸಂಪಾದಿಸಲು ಕೆಲಸಕ್ಕೆ ಬರುವ ಇವರದು ಬಿಡುವಿಲ್ಲದ ದುಡಿತ. ಮಾರಾಟ ಸಹಾಯಕರಾದರೂ ಇವರು ಬಹುತೇಕ ಅಸಹಾಯಕರು. ಒಂದು ಕಡೆ ಗ್ರಾಹಕರ ಮನಸ್ಸು ಅರ್ಥ ಮಾಡಿಕೊಂಡು ಅವರ ಬೇಕು ಬೇಡಗಳಿಗೆ ಅನುಗುಣವಾಗಿ ಬೇಸರವಿಲ್ಲದೆ ಸೇವೆ ನೀಡಬೇಕು.
ಸಿಡುಕಿದರೆ ಕೆಡುಕು ಕಟ್ಟಿಟ್ಟ ಬುತ್ತಿ. ಗ್ರಾಹಕರು ಬೈದರೂ ಬೈಸಿಕೊಳ್ಳಬೇಕು. ಒಂದೊಮ್ಮೆ ವಸ್ತುಗಳು ಚೆನ್ನಾಗಿ ಮಾರಾಟವಾಗದಿದ್ದರೆ ಅದಕ್ಕೂ ನಿಂದನೆ. ಇಷ್ಟೆಲ್ಲ ಬಿಡುವಿಲ್ಲದ ದುಡಿಮೆ ಮಾಡಿದರೂ ಒಂದರೆ ಕ್ಷಣ ಸುಮ್ಮನೆ ಕೂಡುವ ಹಾಗಿಲ್ಲ. ಕೂತರೆ ಮುಗೀತು. ‘ಏನು ಮಹಾರಾಜನಂತೆ / ಮಹಾರಾಣಿಯಂತೆ ಕುಳಿತು ಕೊಂಡೆಯಲ್ಲ. ಗ್ರಾಹಕರನ್ನು ವಿಚಾರಿಸಿಕೋ  ಹೋಗು, ರಾಶಿ ಬಿದ್ದಿರುವ ಬಟ್ಟೆಯನ್ನು ಮಡಿಸಿಡು’ ಎಂಬಿತ್ಯಾದಿ ಆದೇಶ. ಅನಿವಾರ್ಯವಾಗಿ ಅವರು ಮತ್ತೆಅಲ್ಲಿಂದ ಏಳಬೇಕು. ಇಷ್ಟಕ್ಕೂ ಕೂರಲು ಅಲ್ಲಿ ಕುರ್ಚಿಗಳು ಇರುವುದೂ ಇಲ್ಲ. ಇವರು ಗ್ರಾಹಕರಿಗೆ ಕುರ್ಚಿ ಹಾಕಬೇಕೇ ಹೊರತು ಅವರಿಗಾಗಿ ಅಲ್ಲಿ ಕುರ್ಚಿಇರುವುದೇ ಇಲ್ಲ.
ಇಂಥ ಕೆಟ್ಟದಾದ ಕೆಲಸದ ಸ್ಥಿತಿಗತಿಗಳ ನಡುವೆಯೂ ಆಶಾಕಿರಣ ಎನ್ನುವಂಥ ಒಂದಷ್ಟು ಬೆಳವಣಿಗೆಗಳು ನಡೆಯುವುದುಂಟು. ಅಂಥದೇ ಒಂದು ಕ್ರಮಕ್ಕೆತಮಿಳುನಾಡು ಸರಕಾರ ಮುಂದಾಗಿದೆ. ಕೆಲಸಗಾರರಿಗೆ ‘ಕುಳಿತುಕೊಳ್ಳುವ ಹಕ್ಕು’ ನೀಡುವ ಕಾನೂನು ತರುವ ಉದ್ದೇಶದ ವಿಧೇಯಕವೊಂದನ್ನು ಅಲ್ಲಿನವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ತಮಿಳುನಾಡಿನಲ್ಲಿ ಉಡುಪು ಉತ್ಪಾದನೆ ಘಟಕಗಳ ಸಂಖ್ಯೆ ಅಧಿಕವಾಗಿದ್ದು ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸ್ಥಿತಿಶೋಚನೀಯವಾಗಿದೆ. ಇವರನ್ನು ದೃಷ್ಟಿಯಲ್ಲಿ ಇರಿಸಿಕೊಂಡೇ ಅಲ್ಲಿನ ಸರಕಾರ ಈ ಕಾನೂನು ತರಲು ಯತ್ನಿಸುತ್ತಿದೆ. ಕಾನೂನಿನ 22ನೇ ಸೆಕ್ಷನ್‌ನಲ್ಲಿ ಹೀಗೆಹೇಳಲಾಗಿದೆ: ‘ಪ್ರತಿಯೊಂದು ಅಂಗಡಿ, ಮಾರಾಟ ಮಳಿಗೆಗಳಲ್ಲಿ ಎಲ್ಲ ಉದ್ಯೋಗಿಗಳಿಗೆ ಆಸನದ ವ್ಯವಸ್ಥೆ ಇರತಕ್ಕದ್ದು.
ಕೆಲಸದ ನಡುವೆ ಉದ್ಯೋಗಿಗಳಿಗೆ ಯವಾಗಲಾದರೂ ಬಿಡುವು ಸಿಕ್ಕರೆ ಅವರು ಕುಳಿತುಕೊಳ್ಳಬಹುದು. ಇಲ್ಲವಾದರೆ ಅವರು ಗಂಟೆಗಟ್ಟಲೆ ನಿಂತುಕೊಂಡೇ ಕಾರ್ಯ ನಿರ್ವಹಿಸಬೇಕಾಗುತ್ತದೆ.’ ಬಡಪಾಯಿ ಕೆಲಸಗಾರರ ನೆರವಿಗೆ ತಮಿಳುನಾಡು ಸರಕಾರ ಈಗಲಾದರೂ ಬಂದಿದೆ ಎಂದು ಖುಷಿ ಮತ್ತು ಹೆಮ್ಮೆ ಪಡಬೇಕೊ ಅಥವಾ ನಮ್ಮ ವ್ಯವಸ್ಥೆ ಇಷ್ಟು ಕ್ರೂರವಾಗಿದೆ ಎಂದು ಮರುಗೋಣವೋ ಎಂಬುದು ಗೊತ್ತಾಗುವುದಿಲ್ಲ. ಹಾಗೆ ನೋಡಿದರೆ ಇಂಥದ್ದೊಂದುಕಾನೂನು ತರಲು ಮುಂದಾಗಿರುವ ರಾಜ್ಯಗಳಲ್ಲಿ ತಮಿಳುನಾಡು ಮೊದಲನೆಯದೇನೂ ಅಲ್ಲ. ಏಕೆಂದರೆ ಈ ರೀತಿಯ ಕಾಯಿದೆಯೊಂದು ಕೇರಳದಲ್ಲಿ ಈಗಾಗಲೇಜಾರಿಯಲ್ಲಿದೆ.
ಕೇರಳದಲ್ಲಿ ‘ಕೂರುವ ಹಕ್ಕು’ ಜಾರಿಗೆ ಬಂದಿದ್ದರ ಹಿಂದೆ ಒಂದು ಕಥೆ ಮತ್ತು ಹೋರಾಟವೇ ಇದೆ. ಇದರ ಉಗಮ ಸ್ಥಾನ ಕೋಯಿಕ್ಕೋಡ್. ಅಲ್ಲಿನ ಮಾರುಕಟ್ಟೆರಸ್ತೆಯೊಂದರ ಅಂಗಡಿಗಳಲ್ಲಿ ಶುಚಿತ್ವದ ಕೆಲಸ ಮಾಡುತ್ತಿದ್ದ ಮಹಿಳೆಯರು2010ರ ಅದೊಂದು ದಿನ ಬೀದಿಗಿಳಿದಿದ್ದರು. ‘ಅಸಂಘಟಿತ ಮೇಘಲ ತೋಳಿಲಾಲಿಯೂನಿಯನ್ (ಎಎಂಟಿಯು)’ ಎಂಬ ಸಂಘಟನೆಯು ಇದರ ನೇತೃತ್ವ ವಹಿಸಿತ್ತು. ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಶೌಚಾಲಯಗಳಿರಲಿಲ್ಲ. ಅವರು ಹತ್ತಿರದ ರೆಸ್ಟೊರೆಂಟ್‌ಗಳಿಗೆ ಹೋಗಬೇಕಿತ್ತು. ಆ ಹೋರಾಟ ಯಶಸ್ವಿಯಾಯಿತು. ಇದನ್ನೇ ಮೂಲಾಧಾರವಾಗಿ ಇಟ್ಟುಕೊಂಡು ರಿಟೇಲ್ ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರು ಕೂಡ ‘ಕೂರುವ ಹಕ್ಕು’ ಬೇಕೆಂದು ಆಗ್ರಹಿಸಿ ಪ್ರತಿಭಟನೆಗಿಳಿದರು.
ಉಡುಪು ಮಾರಾಟದ ಬಹುತೇಕ ಮಳಿಗೆಗಳಲ್ಲಿನ ಮಹಿಳಾ ನೌಕರರು ಸುದೀರ್ಘ ಅವಧಿಯವರೆಗೆ ಬಿಡುವಿಲ್ಲದೆ ಕೆಲಸ ಮಾಡಬೇಕಿತ್ತು. ಅನೇಕ ಸಂದರ್ಭಗಳಲ್ಲಿ ಹತ್ತು ಗಂಟೆಗಳ ಕಾಲ ಅವರಿಗೆ ಕೂರಲೂ ಆಗುತ್ತಿರಲಿಲ್ಲ. ಅಷ್ಟೇಕೆ, ಶೌಚಾಲಯಕ್ಕೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಇವರ ನೆರವಿಗೆ ಬಂದಿದ್ದು ಮತ್ತದೇ ಎಎಂಟಿಯು ಸಂಘಟನೆ. ಇದರ ಮುಖ್ಯಸ್ಥರಾದ ವಿಜಿ ಎಂಬುವವರು ಎಂಟು ವರ್ಷಗಳ ಹಿಂದೆ ಕೂರುವ ಹಕ್ಕಿಗಾಗಿ ಹೋರಾಟ ಪ್ರಾರಂಭಿಸಿದರು. ಇದಕ್ಕೂ ಒಂದು ಘಟನೆಯೇ ಪ್ರೇರಣೆ. ಮಹಿಳಾ ಮಾರಾಟ ಸಹಾಯಕಿಯೊಬ್ಬಳು ಕೆಲಸದ ನಡುವೆ ಒಂದು ಗಳಿಗೆ ಗೋಡೆಗೆ ಒರಗಿದ್ದರಂತೆ. ತುಂಬಾ ದಣಿವಾಗಿದ್ದಿರಬಹುದು. ಆದರೆ ಈ ಅಪರಾಧಕ್ಕಾಗಿ ಆಕೆಗೆ 100 ರು. ದಂಡ ವಿಧಿಸಲಾಯಿತು.
ತ್ರಿಸ್ಸೂರಿನ ಸೀರೆ ಅಂಗಡಿಯೊಂದರ ಉದ್ಯೋಗಿಗಳು ಬಹುತೇಕ ಮಹಿಳೆಯರು ಪ್ರತಿಭಟನೆಗೆ ಇಳಿದಾಗ ಈ ವಿಷಯ ರಾಷ್ಟ್ರವ್ಯಾಪಿ ಸುದ್ದಿಯಾಯಿತು. ಬಿಡುವಿಲ್ಲದ ದುಡಿತ, ಕೂಡಲೂ ಅವಕಾಶ ಇಲ್ಲದ ಕಾರಣ ತಮಗೆ ಬೆನ್ನು ನೋವು, ವೆರಿಕೊಸ್ ವೇಯ್ನ್ಸ್, ಕಿಡ್ನಿ ಸಮಸ್ಯೆ ಮೊದಲಾದ ತೊಂದರೆ ಉಂಟಾಗುತ್ತಿದೆ ಎಂಬುದು ಅವರ ಅಳಲು ಮತ್ತು ದೂರಾಗಿತ್ತು. 2014 ರಿಂದ ಈ ಹಕ್ಕಿಗೆ ಆಗ್ರಹಿಸಿ ಎಎಂಟಿಯು ಹೋರಾಟ ಪ್ರಾರಂಭಿಸಿತು. ಕೇರಳ ಸರಕಾರ ಎಚ್ಚೆತ್ತುಕೊಂಡು 2018 ರಲ್ಲಿ ಈ ನಿಟ್ಟಿನಲ್ಲಿ ಕಾನೂನನ್ನು ಜಾರಿಗೆ ತಂದಿತು.
ಇಂಥ ಕೆಲವು ಕ್ರಾಂತಿಕಾರಿ ಹಾಗೂ ವಿನೂತನವಾದ, ಮಾದರಿ ಕಾನೂನುಗಳನ್ನು ಎಲ್ಲಕ್ಕಿಂತ ಮೊದಲು ಕೇರಳದಲ್ಲಿ ಜಾರಿಯಾಗುತ್ತವೆ. ಆದರೆ ಅಲ್ಲಿಯೂ ಇನ್ನೂಕೆಲವು ವಿಚಿತ್ರ, ವಿಕ್ಷಿಪ್ತ, ಅಸಮ್ಮತವಾದಂಥ ಆಚರಣೆಗಳು ಜಾರಿಯಲ್ಲಿವೆ. ಬಹುಶಃ ಆ ರಾಜ್ಯದಲ್ಲಿ ಕಾರ್ಮಿಕ ಸಂಘಟನೆಗಳು ಹೆಚ್ಚು ಸಕ್ರಿಯವಾಗಿರುವುದು ಇದಕ್ಕೆಕಾರಣವಾಗಿರಬಹುದು. ಅಂಥದೊಂದು ಆಚರಣೆ- ನೊಕ್ಕು ಕೂಲಿ. ಅಂದರೆ ನೋಡುವುದಕ್ಕೆ ಕೊಡುವ ಕೂಲಿ ಎಂದು ಹೇಳಬಹುದು.
ಹಾಗಾದರೆ ಏನಿದು ನೊಕ್ಕು ಕೂಲಿ? ಕೂಲಿ ಅಥವಾ ಕೆಲಸ ಮಾಡದೆಯೇ ಕೂಲಿ ಅಥವಾ ಮಜೂರಿ ಕೊಡುವ ಪದ್ಧತಿ. ಇದನ್ನು ಹೀಗೆ ಬಿಡಿಸಿ ಹೇಳಬಹುದು. ಕಟ್ಟಡ ಕಾಮಗಾರಿ, ವಸ್ತುಗಳ ಸಾಗಣೆ ಇತ್ಯಾದಿ ಚಟುವಟಿಕೆಗಳಿಗೆ ಕಾರ್ಮಿಕರ ಅಗತ್ಯ ಇರುತ್ತದೆ. ಇದಕ್ಕಾಗಿ ಅಲ್ಲಿನ ಕಾರ್ಮಿಕ ಸಂಘಟನೆಗಳು ಕೂಲಿಯನ್ನು ನಿಗದಿ ಪಡಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಹೀಗೆ ಸಂಘಟನೆಗಳ ಬಳಿ ಬರುವುದಿಲ್ಲ. ಈಗ ಸಾಕಷ್ಟು ಕೆಲಸಗಳಿಗೆ ಯಂತ್ರಗಳು ಬಂದಿರುವುದರಿಂದ ಕೂಲಿ ಕಾರ್ಮಿಕರ ಅಗತ್ಯವೂ  ರುವುದಿಲ್ಲ. ಹೀಗಾಗಿ ಮಾಲೀಕರು ತಮಗೆ ಬೇಕಾದ ರೀತಿಯ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಆದರೆ, ಇಷ್ಟಾಗಿಯೂ ಈ ಜನರು ಕಾರ್ಮಿಕ ಸಂಘಟನೆಗಳಿಗೆ ಕೂಲಿ ಕೊಡಬೇಕಂತೆ. ಇದನ್ನು ‘ನೋಡುವ ಕೂಲಿ’,  ದರೆ ಕೆಲಸ ಆಗುವುದನ್ನು ನೋಡುವುದಕ್ಕೆ  ಷಡಲಾಗುವ ಕೂಲಿ ಎಂದು ಕರೆಯುತ್ತಾರೆ.
ಕೇರಳದಲ್ಲಿ ಈ ಪದ್ಧತಿ ಸಾಕಷ್ಟು ಸಮಯದಿಂದ ನಡೆದುಕೊಂಡು ಬರುತ್ತಿರುವ ಒಪ್ಪಿತ ಪದ್ದತಿ. ಇದಕ್ಕೆ ಕಾನೂನಿನ ಬೆಂಬ  ಇಲ್ಲದಿದ್ದರೂ ರಾಜಕಾರಣಿಗಳುಹಾಗೂ ಕಾರ್ಮಿಕ ಸಂಘಟನೆಗಳು ಇದನ್ನು ವಿರೋಧಿಸಿಲ್ಲ. ಆದರೆ ಇತ್ತೀಚೆಗೆ ಕೇರಳ ಹೈಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾ ತು. ಈ ಅನಿಷ್ಟ ಪದ್ಧತಿಯನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ನಿಲ್ಲಿಸಿ ಎಂದು ಸರಕಾರಕ್ಕೆ  ರ್ದೇಶನ ನೀಡಿತು. ರಾಜ್ಯಕ್ಕೆ ಅವಮಾನಕರ ಎಂದುಷ ಬಣ್ಣಿಸಿ ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಚನೆ ನೀಡಿತು. ಆದರೆ ಇದರ ಬೆನ್ನಲ್ಲೇ ಮತ್ತೆ ಇದೇ ರೀತಿಯ ಘಟನೆ ಮರುಕಳಿಸಿ ಅದು ದೊಡ್ಡ ಸುದ್ದಿಯಾಯಿತು. ಅದೂಕೇರಳ ಹೈಕೋರ್ಟ್ ತೀರ್ಪು ನೀಡಿದ ಮೂರುದಿನಗಳಲ್ಲೇ ನಡೆದಿರುವಂಥದ್ದು. ಇಸ್ರೊ ಸಂಸ್ಥೆಗೆ ಸೇರಿದ ಲಾರಿಗೆ ಈ ದುರ್ಗತಿ ಒದಗಿದ್ದರಿಂದ ಅದು ದೇಶವ್ಯಾಪಿಸುದ್ದಿಯಾಯಿತು. ಇಸ್ರೊದ ವಿಕ್ರಮ್ ಸಾರಾಬಾಯಿ ಸ್ಪೇಸ್ ಸೆಂಟರ್‌ನ ಯೋಜನೆಯೊಂದಕ್ಕೆ ಅಗತ್ಯವಾದ ಭಾರಿ ಯಂತ್ರೋಪಕರಣಗಳನ್ನು ಸಾಗಿಸಲಾಗು ತ್ತಿತ್ತು.
ಮುಂಬೈನಿಂದ ಹೊರಟಿದ್ದ ಲಾರಿಯು ಕೂಚುವೇಲಿ ಬಳಿ ಬಂದಾಗ ಒಂದಷ್ಟು ಕಾರ್ಮಿಕರು ಬಂದು ಲಾರಿಯನ್ನು ತಡೆದರು. 10 ಲಕ್ಷ ರು. ನೊಕ್ಕು ಕೂಲಿ ಕೊಡಿ ಎಂಬುದು ಅವರ ಆಗ್ರಹವಾಗಿತ್ತು. ಈ ನೊಕ್ಕು ಕೂಲಿಯೂ ಸರಕಿನ ತೂಕವನ್ನು ಆಧರಿಸಿರುತ್ತದೆ. ಇಸ್ರೊ ಟ್ರಕ್ಕು ಸಾಗಿಸುತ್ತಿದ್ದ ಸರಕಿನ ಭಾರ 184 ಟನ್. ಪ್ರತಿ ಟನ್ನಿಗೆ 2000 ರು. ನಂತೆ 10 ಲಕ್ಷರು ಕೊಡುವಂತೆ ವರಾತ ಮಾಡತೊಡಗಿದರು. ತಕ್ಷಣವೇ ಪೊಲೀಸರಿಗೆ ದೂರು ನೀಡಲಾಯಿತು. ಅಂದಹಾಗೆ ಇಸ್ರೊದ ಈ ಕೇಂದ್ರ ಕಾರ್ಯಾರಂಭ ಮಾಡಿದಾಗಿನಿಂದಲೂ ಈ ಸಮಸ್ಯೆ ಇದ್ದೇ ಇದೆ. ಈ ಯೋಜನೆಯಿಂದಾಗಿ ನಿರ್ವಸಿತರಾದ ಕೆಲವರಿಗೆ ಕಾಯಂ ಉದ್ಯೋಗ ನೀಡಲಾ ಗಿದೆ. ಮತ್ತೆ ಕೆಲವರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗಿದೆ.
ಭಾರಿ ತೂಕದ ಯಂತ್ರೋಪಕರಣಗಳು ಬಂದಾಗಲೆಲ್ಲ ಅದನ್ನು ಇಳಿಸಿಕೊಳ್ಳಲು ಯಂತ್ರಗಳ ಬಳಕೆ ಮಾಡಲಾಗುತ್ತದೆ. ಆದರೂ ಈ ಹಂಗಾಮಿ ಕೆಲಸಗಾರಿಗೆ ಹಣ ನೀಡುವ ಪದ್ಧತಿ ಜಾರಿಯಲ್ಲಿದೆ. ಇದು ನೊಕ್ಕು ಕೂಲಿ ಎನ್ನುವುದು ಹಲವರ ಹೇಳಿಕೆ. ಆದರೆ ಸದ್ಭಾವನಾ ಗಣ ಎಂಬುದು ಇಸ್ರೊ ಹೇಳಿಕೆ. ಇಷ್ಟು ದೊಡ್ಡ ಗಾತ್ರದ ಯಂತ್ರೋಪಕರಣಗಳನ್ನು ಹೊತ್ತು ಬರುವುದರಿಂದ ರಸ್ತೆಗಳು ಹಾಳಾಗುತ್ತವೆ. ವಿದ್ಯುತ್, ಕೇಬಲ್ ಮತ್ತಿತರ ತಂತಿಗಳಿಗೆ ಅಪಾಯವಾಗುತ್ತದೆ. ಈಹಿನ್ನೆಲೆಯಲ್ಲಿ ಅಂದು ಪ್ರತಿಭಟನೆ ನಡೆಸಿದ್ದು ಎಂಬುದು ಸ್ಥಳಿಯರ ಹೇಳಿಕೆ.
ನಿಜ ಏನೇ ಇರಲಿ. ಕೇರಳದ ಕೆಲವೆಡೆ ‘ನೊಕ್ಕು ಕೂಲಿ’ ಇನ್ನೂ ಜಾರಿಯಲ್ಲಿರುವುದಂತೂ ನಿಜ. ಅದೇ ರೀತಿ, ಕೇರಳದಲ್ಲಿ ಕೂರುವ ಹಕ್ಕಿಗಾಗಿ ಪ್ರತಿಭಟನೆಯೂನಡೆಯುತ್ತದೆ, ಇನ್ನೊಂದೆಡೆ ನೊಕ್ಕು ಕೂಲಿ ಪದ್ಧತಿಯೂ ಜಾರಿಯಲ್ಲಿರುವುದು ವೈರುಧ್ಯ ಮತ್ತು ವಿಪರ್ಯಾಸ. ಇವೆಲ್ಲ ಕೇರಳ, ತಮಿಳುನಾಡಿನ ಮಾತಾಯಿತು. ನಮ್ಮ ರಾಜ್ಯದಲ್ಲಿ ಏನು ಪರಿಸ್ಥಿತಿ ಎಂಬುದನ್ನು ಗಮನಿಸೋಣ. ಏಕೆಂದರೆ ಕೂರುವ ಹಕ್ಕು, ಇತರ ಕಡೆಗಳಲ್ಲಿ ಬಿಡುವಿಲ್ಲದ ದುಡಿತ ಇವು ಎಲ್ಲ ಕಡೆ ಇರುವಂಥದ್ದು. ನಮ್ಮಲ್ಲೂ ಕೂಡ ಅಂಗಡಿಗಳಲ್ಲಿ ಬಿಡುವಿಲ್ಲದ ದುಡಿತ ಸಾಮಾನ್ಯ. ಮತ್ತೊಂದು ಕ್ಷೇತ್ರ ಎಂದರೆ ಹೋಟೆಲ್. ಅಲ್ಲಿ ಸ್ವಲ್ಪ ವಿಳಂಬವಾದರೂ ‘ಯಾಕೆ ಪ್ಲೇಟ್ ಕ್ಲೀನ್ ಮಾಡಿಲ್ಲ’ ಎನ್ನುತ್ತಾರೆ. ಗ್ಯಾರೇಜು ಮತ್ತಿತರ ಕಡೆ ಬಾಲ ಕಾರ್ಮಿಕರು ಇಂದಿಗೂ ಕೆಲಸ ಮಾಡುವುದುಂಟು.
ತಮಿಳುನಾಡಿನಂತೆಯೇ ಬೆಂಗಳೂರಿನಲ್ಲೂ ಸಾಕಷ್ಟು ಗಾರ್ಮೆಂಟ್ ಕಾರ್ಖಾನೆಗಳಿವೆ. ಅಲ್ಲಿಯೂ ಈ ರೀತಿಯ ಎಲ್ಲ ಸಮಸ್ಯೆಗಳು ಇವೆ. ಆದರೆ ಇವುಗಳಿಗೆ ಪರಿಹಾರ ಇಲ್ಲವಾಗಿದೆ. ಇವರೆಲ್ಲ ಬಹುತೇಕ ಅಸಂಘಟಿತ ವಲಯದ ಕೆಲಸಗಾರರಾಗಿರುವುದರಿಂದ ಈ ರೀತಿಯ ಪರಿಸ್ಥಿತಿಯಲ್ಲಿಯೇ ಕೆಲಸ ಮಾಡುವುದು ಹೆಚ್ಚು. ಬೆಂಗಳೂರು ಪಾಲಿಕೆಯ ವ್ಯಾಪ್ತಿಯಲ್ಲಿ, ಅಂಗಡಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸಮೀಪದ ಹೋಟೆಲ್‌ಗಳ ಶೌಚಾಲಯಗಳನ್ನು ಬಳಸಲು ಅನುಮತಿ ನೀಡಬೇಕೆಂಬ ಆದೇಶ ಹೊರಡಿಸುವ ಬಗ್ಗೆ ಚರ್ಚೆ ನಡೆಯಿತು. ಆದರೆ ಅದು ಜಾರಿಗೆ ಬಂದಿದೆಯೋ, ಬಂದಿದ್ದರೂ ಅನುಷ್ಠಾನಗೊಂಡಿದೆಯೋ ಎಂಬುದು ಗೊತ್ತಾಗಿಲ್ಲ.
ಏನೇ ಆಗಲಿ, ಈ ರೀತಿಯ ಪ್ರಗತಿಪರ ಕ್ರಮಗಳು, ರ್ಧಾರಗಳ ವಿಚಾರದಲ್ಲಿ ನಮ್ಮ ರಾಜ್ಯ ಸ್ವಲ್ಪ ಹಿಂದೆಯೇ. ಬೇರೆ ರಾಜ್ಯಗಳ ಮಾದರಿಯನ್ನು ಅನುಸರಿಸುವು ದರ ಜತೆಗೆ ಬೇರೆ ರಾಜ್ಯಗಳಿಗೂ ಮಾದರಿಯಾಗುವಂಥ ಕೆಲವು ಕಾನೂನುಗಳನ್ನು ಜಾರಿಗೆ ತಂದರೆ ಅನುಕೂಲ. ಅದೇ ರೀತಿ ನಾವೆಲ್ಲರೂ ಇದನ್ನು ನೋಡಿರು ತ್ತೇವೆ, ಇಲ್ಲವೇ ಅನುಭವಿಸಿರುತ್ತೆವೆ. ಅನೇಕ ಬಾರಿ ಪ್ರತ್ಯಕ್ಷ ಸಾಕ್ಷಿಗಳೋ, ಮೂಕಪ್ರೇಕ್ಷಕರೋ, ಮೌನ ಸಮರ್ಥಕರೋ ಆಗಿರುತ್ತೇವೆ. ಹೀಗಾಗಿ ಇಂಥ ಪದ್ಧತಿ ಗಳು ಮುಂದುವರಿದಿರುವುದರಲ್ಲಿ ನಮ್ಮ ಪಾತ್ರವೂ ಇದ್ದೇ ಇದೆ. ಈ ನಿಟ್ಟಿನಲ್ಲಿ ನಾವೂ ಕೂಡ ನಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬಹುದು.
ನಾಡಿಶಾಸ್ತ್ರಸತತ ದುಡಿತ, ಕೆಲಸಗಾರರಿಗೆ ಸಂಕಷ್ಟಇವರು ಕುಳಿತರರೆ ಮಾಲೀಕರಿಗೆ ಕಷ್ಟಅವರ ದೃಷ್ಟಿಯಲ್ಲಿ ಇವರೆಂದರೆ ನಿಕೃಷ್ಟಜನರಿಗೆ, ಸರಕಾರಕ್ಕಿಲ್ಲ ಕನಿಕರ ಕನಿಷ