ರಕ್ಷಣಾ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಭಾರತ
ವಿದೇಶ ವಾಸಿ
ಕಿರಣ್ ಉಪಾಧ್ಯಾಯ, ಬಹ್ರೇನ್
ಹಿಂದೆ, ರಾಜಮಹಾರಾಜರು ದೇಶವನ್ನು ಆಳುತ್ತಿದ್ದ ಕಾಲದಲ್ಲಿ ಅವರಲ್ಲಿದ್ದ ಪ್ರಾಣಿಗಳನ್ನುಲೆಕ್ಕ ಹಾಕುತ್ತಿದ್ದರಂತೆ. ಎಷ್ಟು ಪ್ರಾಣಿಗಳಿವೆ ಎಂಬುದರ ಮೇಲೆ ಆರಾಜ್ಯ ಎಷ್ಟು ಸಮೃದ್ಧವಾಗಿದೆ, ಎಷ್ಟು ಸಶಕ್ತವಾಗಿದೆ ಎಂದು ನಿರ್ಣಯಿಸುತ್ತಿದ್ದರಂತೆ. ಎಷ್ಟು ಧನಕನಕವಿದೆ ಅಥವಾ ಎಷ್ಟು ಕೊಪ್ಪರಿಗೆ ಸ್ವರ್ಣವಿದೆ ಎಂದು ಹೇಳಿಕೊಳ್ಳುವ ಪರಿಪಾಠವಿಲ್ಲದ ಕಾಲ ಅದು.
ಒಂದು ವೇಳೆ ಹೇಳಿದರೂ ಅದನ್ನೇ ಪೂರ್ಣಸತ್ಯ ಎಂದು ನಂಬುವುದಾದರೂಹೇಗೆ? ಅವೆಲ್ಲ ರಾಜ್ಯದಕೋಶಾಧಿಕಾರಿಯೋ, ಅಥವಾ ಮಹಾರಾಜನ ಮಾತಿನ ಮೇಲೆ ಇಟ್ಟ ನಂಬಿಕೆಗೆಸಂಬಂಧಿಸಿದ ವಿಷಯವಾಗಿರುತ್ತಿತ್ತು. ಆದರೆ ಜಾನುವಾರುಗಳು ಹಾಗಲ್ಲ. ಹೊರಗೆ ಓಡಾಡುತ್ತಿದ್ದವು, ಕಣ್ಣಿಗೆ ಕಾಣುತ್ತಿದ್ದವು. ಕಡಾಕಡಿಅಲ್ಲದಿದ್ದರೂ, ಮೋಟಾ ಮೋಟಿ ಲೆಕ್ಕ ಜನಸಾಮಾನ್ಯರಿಗೂ ಸಿಗುತ್ತಿತ್ತು. ಆದ್ದರಿಂದ ಒಂದು ರಾಜ್ಯದ ಬಲವನ್ನು ಅಳೆಯಲು ಅದು ಮಾನದಂಡವಾಗುತ್ತಿತ್ತು. ಎಷ್ಟು ಗೋವುಗಳಿವೆ ಎನ್ನುವುದರ ಮೇಲೆ ಆ ರಾಜ್ಯ ಎಷ್ಟು ಸಂಪತ್ಭರಿತವಾಗಿದೆ, ಎಷ್ಟು ಆನೆ, ಕುದುರೆ, ಒಂಟೆಗಳು (ಜತೆಗೆ ಸೇನಾನಿಗಳೂ ಕೂಡ) ಇವೆ ಎನ್ನುವುದರ ಮೇಲೆ ಆ ರಾಜ್ಯದ ಸೇನೆ ಎಷ್ಟು ಬಲಿಷ್ಟವಾಗಿದೆ ಎನ್ನುವುದನ್ನು ಅಂದಾಜಿಸುತ್ತಿದ್ದರು.
ಈಗ, ಬದಲಾದ ಕಾಲಘಟ್ಟದಲ್ಲಿ, ಒಂದು ದೇಶ ಎಷ್ಟು ಬಲಿಷ್ಟವಾಗಿದೆ ಎನ್ನುವುದಕ್ಕೆ ಆ ದೇಶದ ರಕ್ಷಣಾ ಪಡೆಯಲ್ಲಿರುವ ಯುದ್ಧವಿಮಾನಗಳು, ನೌಕೆಗಳು, ಸಬ್ ಮೆರಿನ್, ಯುದ್ಧದ ಟ್ಯಾಂಕರ್, ರಾಕೆಟ್ ಲಾಂಚರ್, ಇಂಟರ್‌ಸೆಪ್ಟ ಮುಂತಾದವು ಮಾನ ದಂಡವಾಗಿವೆ. ಯುದ್ಧೋಪಕರಣಗಳ ಸಂಖ್ಯೆಯಿಂದ ಆಯಾ ದೇಶದ ತಾಕತ್ತನ್ನು ಅಳೆಯುವಂತಾಗಿದೆ. ಅವುಗಳ ಸಂಖ್ಯೆಯಷ್ಟೇ ಅಲ್ಲ, ಅವುಗಳ ವರ್ಗ, ಮಾದರಿ, ಗುಣಮಟ್ಟ, ಸಾಮರ್ಥ್ಯವನ್ನೂ ಪರಿಗಣಿಸಲಾಗುತ್ತದೆ. ಅದು ಸರಿಯೂ ಹೌದು ಅನ್ನಿ, ತಪ್ಪಲೆ ಭರ್ತಿಗೆ ಬರೀ ಸಂಖ್ಯೆಗಳಲ್ಲಿ ಕಾಣುತ್ತಿದ್ದು, ಕೆಲಸಕ್ಕೆ ಬಾರದವುಗಳು ಇದ್ದರೆಷ್ಟು, ಬಿಟ್ಟರೆಷ್ಟು? ಭೂಪಟದಲ್ಲಿರುವ ತೀರಾ ಸಣ್ಣ ದೇಶವೇ ಆದರೂ ಇದಕ್ಕೆ ಹೊರತಲ್ಲ.
ಕೆಲವು ದೇಶಗಳು ವರ್ತಮಾನದಲ್ಲಿ ಬಳಕೆಗೆ ಬೇಕಾಗಿ ಯುದ್ಧೋಪಕರಣಗಳನ್ನು ಖರೀದಿಸಿದರೆ, ಕೆಲವು ದೇಶಗಳು ಭವಿಷ್ಯದಲ್ಲಿ ಎಂದೋ ಆಗಬಹುದಾದ ಯುದ್ಧದ ಊಹೆಯಲ್ಲಿ ಇವನ್ನು ಖರೀದಿಸುತ್ತವೆ. ಈ ಯುದ್ಧದ ಭಯದಿಂದ ಕೆಲವು ದೇಶಗಳು ಯುದ್ಧೋಪಕರಣ ಗಳನ್ನು ಖರೀದಿಸುತ್ತಿವೆ, ಇನ್ನು ಕೆಲವು ದೇಶಗಳು ಅವನ್ನು ತಯಾರಿಸಿ ಮಾರುತ್ತಿವೆ. ಇತ್ತೀಚಿನ ದಿನಗಳಲ್ಲಿ ಒಂದು ದೇಶದ ರಕ್ಷಣಾ ವಿಭಾಗದ ಸಾಮರ್ಥ್ಯ ಅಳೆಯುವಲ್ಲಿ ಇದೂ ಒಂದು ಅಳತೆ ಗೋಲು ಎಂದರೆ ತಪ್ಪಾಗಲಾರದು. ಅಮೆರಿಕ ಇಂದು ದೊಡ್ಡಣ್ಣ ಎಂದು ಕರೆಸಿಕೊಳ್ಳಲು, ಈ ಕ್ಷೇತ್ರದಲ್ಲಿ ತನ್ನ ಹಿಡಿತ ಕಾದಿಟ್ಟು ಕೊಂಡಿರುವುದೂ ಒಂದು ಪ್ರಮುಖ ಕಾರಣ ಎನ್ನುವು ದರಲ್ಲಿ ಎರಡು ಮಾತಿಲ್ಲ.
ಕಳೆದ ಐದು ವರ್ಷ ದಸರಾ ಸರಾಸರಿ ತೆಗೆದರೆ, ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಆಮದು ಮಾಡಿಕೊಳ್ಳುತ್ತಿರುವ ಯುದ್ಧೋಪಕರಣಗಳ ಪೈಕಿ ಶೇ. ಮೂವತ್ತೇಳ ರಷ್ಟನ್ನು ಅಮೆರಿಕ ಪೂರೈಸುತ್ತಿದ್ದು, ಇಂದಿಗೂ ಮೊದಲನೆಯ ಸ್ಥಾನದಲ್ಲಿದೆ. ಶೇ. ಇಪ್ಪತ್ತರಷ್ಟನ್ನುರಫ್ತುಮಾಡುತ್ತಿರುವ ರಷ್ಯಾ, ಶೇ. ಎಂಟರಷ್ಟುರಫ್ತುಮಾಡುತ್ತಿ ರುವ ಫ್ರಾನ್ಸ್ನಂತರದ ಎರಡನೆಯ ಮತ್ತು ಮೂರನೆಯ ಸ್ಥಾನದಲ್ಲಿವೆ. ಜರ್ಮನಿ, ಚೀನಾ, ಇಂಗ್ಲೆಂಡ್, ಸ್ಪೇನ್, ಇಸ್ರೇಲ್, ದಕ್ಷಿಣ ಕೊರಿಯಾ, ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ಹತ್ತನೆಯ ಸ್ಥಾನದಲ್ಲಿರುವ ಇಟಲಿ ಶೇ. ಎರಡರಡರಷ್ಟನ್ನು ಮಾತ್ರರ-ಮಾಡುತ್ತದೆ. ಭಾರತ ಈ ಪಟ್ಟಿಯಲ್ಲಿ ಇಪ್ಪತ್ನಾಲ್ಕನೆಯ ಸ್ಥಾನ ದಲ್ಲಿದೆ. ಆದರೆ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೆಯ ಸ್ಥಾನದಲ್ಲಿದೆ.
ಆಮದು ಈ ಪಟ್ಟಿಯ ಮೊದಲನೆಯ ಸ್ಥಾನದಲ್ಲಿ ಸೌದಿ ಅರೇಬಿಯಾ ನಿಂತಿದೆ. ಅದು ಶೇ.ಹನ್ನೆರಡರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಎರಡನೆಯ ಸ್ಥಾನದಲ್ಲಿ ರುವ ಭಾರತ ಶೇ. ಒಂಬತ್ತುವರೆಯಿಂದ ಹತ್ತರಷ್ಟು ಯುದ್ಧ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತದೆ. ನಂತರದ ಸ್ಥಾನಗಳಲ್ಲಿ ಈಜಿಪ್ಟ್, ಆಸ್ಟ್ರೇಲಿಯಾ, ಚೀನಾ ಇವೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಅಮೆರಿಕ ಕೂಡ ಯುದ್ಧಕ್ಕೆ ಸಂಬಂಧ ಪಟ್ಟ ಕೆಲವು ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತದೆ. ಅದಿರಲಿ, ಕಳೆದ ನಾಲ್ಕೈದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿರುವುದು ನಮ್ಮ ಭಾರತ ಎನ್ನುವುದು ಹೆಮ್ಮೆಯ ವಿಷಯ.
ತೀರಾ ಇತ್ತೀಚಿನವರೆಗೂ ಸೈನಿಕರಿಗೆ ಬೇಕಾದ ಬೂಟಿನಿಂದ ಹಿಡಿದು ಬುಲೆಟ್‌ಪ್ರೂಫ್ಜಾಕೆಟ್‌ಗಳ ವರೆಗೂ ಭಾರತ ಆಮದು ಮಾಡಿಕೊಳ್ಳುತ್ತಿತ್ತು. ಎಚ್ಎಎಲ್(ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಕೆಲವು ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳನ್ನು ತಯಾರಿಸುತ್ತಿತ್ತಾದರೂ, ಬಹುತೇಕ ಯುದ್ಧವಿಮಾನಗಳು ರಷ್ಯಾ, ಅಮೆರಿಕ, ಫ್ರಾನ್ಸ್ನಂತಹ ದೇಶಗಳಿಂದ ಬರುತ್ತಿದ್ದವು. ಕಳೆದ ವರ್ಷ ಭಾರತದ ರಕ್ಷಣಾ ಬಜೆಟ್ ಸುಮಾರು ಅರವತ್ತಾರು ಬಿಲಿಯನ್ಡಾಲರ್ ಅಥವಾ ಸುಮಾರು ರು. ನಾಲ್ಕೂಮುಕ್ಕಾಲು ಲಕ್ಷ ಕೋಟಿ. ಇದರ ಬಹುಪಾಲು ಆಮದಿಗೆ ಖರ್ಚಾಗುತ್ತದೆ. ಡಿಆರ್‌ಡಿಒ (ಡಿಫೆನ್ಸ್ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್) ಪ್ರಕಾರ, ಭಾರತ ಬಳಸುವ ಸಾಮಗ್ರಿಗಳ ಪೈಕಿ ಶೇ.ನಲವತ್ತೈದರಿಂದ ಐವತ್ತರಷ್ಟು ಮಾತ್ರ ದೇಶದಲ್ಲಿ ಉತ್ಪಾದನೆ ಯಾಗುತ್ತಿದೆ. ಅಂದರೆ ಉಳಿದ ಅರ್ಧಕ್ಕಿಂತ ಹೆಚ್ಚು ಹಾರ್ಡ್‌ವೇರ್ ಮತ್ತುಸಾಫ್ಟ್ವೇರ್ ವಿದೇಶಗಳಿಂದ ಆಮದಾಗುತ್ತವೆ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ ತಾನೆ? ಇಲ್ಲಿ ಪ್ರಮುಖವಾಗಿ ಎರಡು ಅಂಶಗಳನ್ನು ಗಮನಿಸಬೇಕು.
ಒಂದು, ಉಪಕರಣಗಳ ಬೆಲೆಯ ನಿಯಂತ್ರಣರಫ್ತುಮಾಡುವ ದೇಶದ ಕೈಯಲ್ಲಿದ್ದು, ಯಾವಾಗ ಬೇಕಾದರೂ ಬೆಲೆ ಏರಿಸುವುದು. ಎರಡನೆಯದು, ಎಷ್ಟೇ ಹಣಕೊಡುತ್ತೇನೆಂದರೂ, ಸಾರಾಸಗಟಾಗಿ ತಿರಸ್ಕರಿಸಿ, ಉಪಕರಣ ನೀಡದೆ ಇರುವುದು. ಈ ಎರಡೂ ಕಾರಣಗಳು ಖರೀದಿಸುವ ದೇಶಕ್ಕೂ ಎದುರಾಗುವಪ್ರಮುಖ ಸವಾಲುಗಳೇ. ಹಾಗಾದರೆ ಅದಕ್ಕೆ ಉತ್ತರ? ಸ್ವಾವಲಂಬಿತನ ಮಾತ್ರ. ಭಾರತ ಇತ್ತೀಚೆಗೆ ಕೆಲವು ಬಗೆಯ ಬಂದೂಕು, ಅಸಾಲ್ಟ್ರೈಫಲ್, ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್, ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್,ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ವಾಹನಗಳು ಸೇರಿದಂತೆ ನೂರಕ್ಕೂ ಹೆಚ್ಚು ಸಾಮಗ್ರಿಗಳನ್ನು ನಕಾರಾತ್ಮಕ ಪಟ್ಟಿಗೆ ಸೇರಿಸಿದೆ. ಅಂದರೆ ಈ ಉಪಕರಣಗಳನ್ನು ಆಮದು ಮಾಡಿಕೊಳ್ಳದೆ, ಬದಲಾಗಿ ದೇಶದಲ್ಲಿಯೇ ಉತ್ಪಾದಿಸುವುದು.
ನಿಮಗೆ ತಿಳಿದಿರಲಿ, ನಮ್ಮ ಸೇನೆ ಸುಮಾರು ನಲವತ್ತು ಬಗೆಯ ಪಿಸ್ತೂಲು ಮತ್ತು ಬಂದೂಕು ಬಳಸುತ್ತಾರೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ವಿದೇಶದಿಂದ ಆಮದಾಗುತ್ತವೆ ಅಥವಾ ಅವರ ಸಹಯೋಗದಿಂದ ಭಾರತದಲ್ಲಿ ತಯಾರಾಗುತ್ತವೆ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷವಾದರೂ ಈ ಪರಿಸ್ಥಿತಿ ಇದೆ ಎಂದು ಖೇದವಾದರೂ ಇದು ಸತ್ಯ. ಆದರೆ ಈಗ ಆಮದಿಗೆ ನಿಬಂಧ ಹೇರಿದ ಎಲ್ಲಾ ಉಪಕರಣಗಳನ್ನು ಭಾರತದಲ್ಲಿಯೇ ಉತ್ಪಾದಿಸಲು ಉತ್ತೇಜಿಸಲಾಗುತ್ತಿದೆ. ಇದರಿಂದಾಗಿ ಸುಮಾರು ಐವತ್ತೈದು ಬಿಲಿಯನ್ ಡಾಲರ್ ಅಥವಾ ರುಪಾಯಿಯ ಲೆಕ್ಕದಲ್ಲಿ ಹೇಳುವುದಾದರೆ ನಾಲ್ಕು ಲಕ್ಷಕೋಟಿ ಮೌಲ್ಯದ ವಸ್ತುಗಳನ್ನು ಭಾರತದಲ್ಲೇ ತಯಾರಿಸಲು ಪ್ರೇರಣೆಯಾಗಲಿದೆ.
ಹಾಗಂತ ಅದು ಅಷ್ಟು ಸುಲಭದ ಮಾತೂ ಅಲ್ಲ. ಭಾರತದಲ್ಲಿ ಆರಂಭವಾಗುವ ಹೊಸ ಉದ್ಯಮಗಳ ಪೈಕಿ ನೂರರಲ್ಲಿ ತೊಂಬತ್ತುವಿಫಲವಾಗುತ್ತವೆ ಎಂಬುದು ಒಂದು ಅಂಕಿ ಅಂಶ. ಅದೇ ಸರಕಾರಿ ಸಂಸ್ಥೆಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು, ಅದರಲ್ಲೂ ರಕ್ಷಣಾ ವಿಭಾಗವನ್ನು ಗುರಿಯಾಗಿಸಿ ಕೊಂಡು ಏನನ್ನಾದರೂ ಉತ್ಪಾದಿ ಸಲು ಹೊರಟರೆ ನೂರಕ್ಕೆ ತೊಂಬತ್ತೊಂಬತ್ತರಷ್ಟುವಿಫಲವೇ. ಇದಕ್ಕೆ ಕಾರಣ ಸರಳ. ಸರಕಾರಿ ಸಂಸ್ಥೆಗಳ ಕಠಿಣವಾದ ಆಯ್ಕೆ ಪ್ರಕ್ರಿಯೆ. ಇದರ ನಡುವೆಯೂ ತಲೆ ಎತ್ತಿ ಗಟ್ಟಿಯಾಗಿ  ಲ್ಲಬೇಕೆಂದರೆ ಹೊಸ ಉತ್ಪಾದಕರ ನಡು ಗಟ್ಟಿಯಾಗಿರಬೇಕು.
ಹಾಗಾದರೆ ಭಾರತದಲ್ಲಿ ರಕ್ಷಣಾ ವಿಭಾಗಕ್ಕೆಸಂಬಂಧಿಸಿದವಸ್ತುಗಳನ್ನು ಉತ್ಪಾದಿಸುವ ಸಂಸ್ಥೆಗಳೇ ಇಲ್ಲವೇ? ?   .,   .,   .,    .,    .,    ..ಸೇರಿದಂತೆ ಸುಮಾರು ನಲವತ್ತಕ್ಕೂ ಹೆಚ್ಚು ಕಾರ್ಖಾನೆಗಳಿವೆ. ನೂರಾರು ಪ್ರಯೋಗ ಶಾಲೆಗಳಿವೆ. ಅದರಲ್ಲಿ ಡಿಆರ್‌ಡಿಒ ಸಂಸ್ಥೆಯದ್ದೇ ಸುಮಾರು ಐವತ್ತರಷ್ಟಿದೆ. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ತೀರಾ ವಿಶೇಷವಾದ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಉಪಕರಣಗಳನ್ನು ಸೇನೆಗೆ ಒದಗಿಸಿಕೊಡಲು ಕೆಲವು ಸಂಸ್ಥೆಗಳು ಉತ್ಸಾಹ ತೋರಿಸುತ್ತಿವೆ. ಅವುಗಳಲ್ಲಿ, ಮುನ್ನೂರಅರವತ್ತು ಡಿಗ್ರಿಯ ಸುತ್ತ ಸಂಪರ್ಕ ಸಾಽಸಬಲ್ಲ ಅತ್ಯಾಧುನಿಕ ಯುದ್ಧದ ಟ್ಯಾಂಕ್ ಮತ್ತು ಗಲಭೆ ನಿಯಂತ್ರಿಸಲು ಸಹಕರಿಸುವ ಡ್ರೋನ್ ತಯಾರಿಸುತ್ತಿರುವ ಚೆನ್ನೈನ     ಸಂಸ್ಥೆ ಒಂದು.
ಮಾನವ ರಹಿತ ನಾವೆ ತಯಾರಿಸುವ    ಸಂಸ್ಥೆ ಇನ್ನೊಂದು. ನೀರಿನ ಒಳಗೆ ಚಲಿಸಬಲ್ಲ ಡ್ರೋನ್ ತಯಾರಿಸುವ   ಸಂಸ್ಥೆ ಮತ್ತೊಂದು. ಇವುಗಳ ಜತೆಗೆ,  , ,  ,  ,  Imagesಮುಂತಾದ ಹಲವು ಸಂಸ್ಥೆಗಳು ಇಂದು ದೇಶದ ರಕ್ಷಣಾ ವಿಭಾಗಕ್ಕೆ ತಮ್ಮ ಕೊಡುಗೆ ನೀಡಲು ಸಿದ್ಧವಾಗಿ ನಿಂತಿವೆ. ಈ ಎಲ್ಲಾ ಸಂಸ್ಥೆಗಳ ಅನ್ವೇಷಣೆ ಯೂ ಅನನ್ಯವಾದದ್ದು. ಅವುಗಳ ಕುರಿತು ಮತ್ತೊಮ್ಮೆ ಹೇಳುತ್ತೇನೆ.
ಒಂದು ಸಂತಸದ ಸಂಗತಿ ಏನೆಂದರೆ, ಭಾರತ ಇಂದು ಸುಮಾರುಎಪ್ಪತ್ತೈದು ದೇಶಗಳಿಗೆ ರಕ್ಷಣಾ ವಿಭಾಗಕ್ಕೆಸಂಬಂಧಿಸಿದವಸ್ತುಗಳನ್ನುರಫ್ತುಮಾಡುತ್ತಿದೆ.2014-15ರಲ್ಲಿ ಭಾರತ ಸುಮಾರು ರು.1940 ಕೋಟಿ ಮೌಲ್ಯದ ಸಾಮಗ್ರಿಗಳನ್ನುರಫ್ತುಮಾಡುತ್ತಿತ್ತು. 2015-16ರಲ್ಲಿ ಈ ಮೌಲ್ಯ 2060 ಕೋಟಿಗೆ ಏರಿತು. 16-17 ರಲ್ಲಿ 1522 ಕೋಟಿಗೆ ಕುಸಿದರೆ, 17-18ರಲ್ಲಿ 4682 ಕೋಟಿಗೆ, 18-19ರಲ್ಲಿ 7466ಕೋಟಿಗೆ, ನಂತರದ ಎರಡು ವರ್ಷ ಕ್ರಮವಾಗಿ ಒಂಬತ್ತು ಮತ್ತು ಎಂಟುವರೆ ಸಾವಿರ ಕೋಟಿ ರೂಪಾಯಿಯಷ್ಟು ಮೌಲ್ಯದ ಸಲಕರಣೆಗಳನ್ನುರಫ್ತುಮಾಡಿದೆ.
2014ರವರೆಗೆರಫ್ತುಗಳೆಲ್ಲ ವಿದೇಶಿ ವ್ಯಾಪಾರ ನೀತಿಯ ಪ್ರಕಾರ ನಡೆಯುತ್ತಿದ್ದವು. ಆ ವರ್ಷ ಸೆಪ್ಟೆಂಬರ್‌ನಲ್ಲಿ ನಿಯಮಗಳನ್ನು ಸಡಿಲಗೊಳಿಸಿದ ಬಳಿಕ ರಕ್ಷಣಾವಿಭಾಗದ ರಫ್ತಿನಲ್ಲಿ ಏರಿಕೆ ಕಂಡಿತು. 2025ರ ವೇಳೆಗೆ ಭಾರತ ಐದು ಬಿಲಿಯನ್ ಮೌಲ್ಯದ ಯುದ್ಧ ಸಾಮಗ್ರಿಗಳನ್ನುರಫ್ತುಮಾಡುವ ಲೆಕ್ಕಾಚಾರ ಹಾಕಿ ಕೊಂಡಿದೆ. ಅದರ ಜತೆಗೆ ನಮಗೆ ಬೇಕಾದ ಅನೇಕ ಉಪಕರಣಗಳನ್ನು ನಮ್ಮ ದೇಶದಲ್ಲೇ ಸಿದ್ಧವಾಗುತ್ತವೆ ಎಂದರೆ ಅದಕ್ಕಿಂತ ಇನ್ನೇನುಬೇಕು? ಇದು ಸಾಧ್ಯವಾ? ಇಂದು ನಾಳೆಯೇ ಆಗುವ ಕೆಲಸವಂತೂ ಖಂಡಿತ ಅಲ್ಲ. ಇದಕ್ಕೆ ಮುಂದಿನ ಐದರಿಂದ ಹತ್ತು ವರ್ಷ ಬೇಕಾಗಬಹುದು. ಆದರೆ, ಸ್ವಾವಲಂಬಿ ದೇಶ ಕಟ್ಟುವಲ್ಲಿ ಮೊದಲ ಹೆಜ್ಜೆಯಂತೂ ಖಂಡಿತ ಹೌದು. ಎಂದಾದರೂ ಒಂದು ಪ್ರಯತ್ನ ಆಗಲೇಬೇಕಲ್ಲವೇ? ಅಂಬೆಗಾಲನ್ನಿಡದೇ ನಡೆಯಲು ಸಾಧ್ಯವಿಲ್ಲ,ನಡೆಯದೇ ಓಡಲು ಸಾಧ್ಯವಿಲ್ಲ ಅಲ್ಲವೇ?