ಕಪ್ ಗೆದ್ದ ಮೇಲೆ – ಥ್ಯಾಂಕ್ಯೂ ಧೋನಿಜೀ
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಸ್ಯಾಂಡಲ್ ವುಡ್ ನಲ್ಲಿ ಅನೇಕ ನಟರು ತಮಗೆ ತಾವೇ ಬಿರುದು ಕೊಟ್ಟುಕೊಳ್ಳುವ ಟ್ರೆಂಡ್ ಹೊಸದೇನಲ್ಲ. ಒಬ್ಬರನ್ನು ನೋಡಿ ಒಬ್ಬರು ಕಾಂಪಿಟೇಶನ್ ಮೂಲಕ ತಮಗೆ ತಾವೇ ಹೆಸರು ಕೊಟ್ಟುಕೊಳ್ಳುತ್ತಾರೆ. ಇಲ್ಲಿ, ಗೋಲ್ಡನ್ ಸ್ಟಾರ್ ಬಂದ್ರೆ, ಅವರ ಹಿಂದೇ ಡೈಮಂಡ್ ಸ್ಟಾರ್ ಬರ್ತಾರೆ.
ಒಬ್ಬ ಕಿಂಗ್ ಆದ್ರೆ ಇನ್ನೊಬ್ಬ ಸುಲ್ತಾನ್ ಆಗ್ತಾನೆ. ಒಬ್ಬ ಬಾದ್ ಶಾ ಅಂದ್ರೆ, ಮತ್ತೊಬ್ಬ ಬಾಸ್ ಅಂತಾನೆ. ಕರುನಾಡ ಚಕ್ರವರ್ತಿಯ ಬೆನ್ನ ಹಿಂದೆ ಅಭಿನಯ ಚಕ್ರವರ್ತಿ ಬರ್ತಾನೆ. ಹೋಗಲಿ, ಅವರೇನೋ ಫೀಲ್ಡ್ ನಲ್ಲಿ ಹೆಸರು ಮಾಡಿದ ಮೇಲೆ ನಾಮಕರಣ ಮಾಡಿಕೊಂಡವರು. ಆದರೆ ಹೆಸರು ಮಾಡುವ ಮುನ್ನವೇ ತಮಗೆ ತಾವು ದೊಡ್ಡ ದೊಡ್ಡ ಹೆಸರುಗಳನ್ನು ಇಟ್ಟುಕೊಳ್ಳೋದು ಎಷ್ಟು ಸರಿ ಅನ್ನೋದು ಸಿನಿಕರ ಪ್ರಶ್ನೆ. ಅಂದಹಾಗೆ, ಈ ಶೋ ಕಾಲ್ಡ್ ಸ್ಟಾರ್, ಸಾರಿ, ಸೋ ಕಾಲ್ಡ್ ಸ್ಟಾರ್ ಗಳು ಇತ್ತೀಚೆಗೆ ಜಾಸ್ತಿ ಆಗ್ತಾ ಇದ್ದಾರೆ. ಈ ಪಟ್ಟಿಗೆ ಲೇಟೆಸ್ಟ್ ಸೇರ್ಪಡೆ ಧನ್ವೀರ್.
ಯಾರಿವರು ಅಂತ ಕೇಳಬೇಡಿ. ಚಿತ್ರರಂಗದಲ್ಲಿ ಬಹುತೇಕರಿಗೆ ಉತ್ತರ ಗೊತ್ತಿಲ್ಲದ ಪ್ರಶ್ನೆ ಇದು. ಈ ಹಿಂದೆ ಸಿಂಪಲ್ ಸುನಿ ಅವರ ಬಜಾರ್ ಚಿತ್ರದಲ್ಲಿ ಅಭಿನಯಿಸಿದ್ದ ಧನ್ವೀರ್ ಈಗ ತಮಗೆ ಸ್ಯಾಂಡಲ್ ವುಡ್ ನ ಶೋಕಿ ದಾರ್, ಅಭಿಮಾನಿಗಳ ಶೋಕಿದಾರ್ ಎಂದೆಲ್ಲ ಕರೆದುಕೊಳ್ಳುತ್ತಿದ್ದಾರೆ. ಇನ್ನೂ ನಮ್ಮ ಚಿತ್ರರಂಗದ ನಿರ್ದೇಶಕರು ಇವರನ್ನು ಕರೆದು ಅವಕಾಶ ಕೊಡುವ ಮಟ್ಟಕ್ಕೇ ಈ ಹುಡುಗ ಬೆಳೆದಿಲ್ಲ. ಆದ್ರೆ ಬಿರುದು ಇಟ್ಕೊಳ್ಳೋ ಶೋಕಿ ಮಾತ್ರ ಕಮ್ಮಿ ಇಲ್ಲ. ಇವ್ರ್ ಸಿನಿಮಾಗಳು ಬಿಡುಗಡೆ ಆದಾಗ ಚಿತ್ರಮಂದಿರದಲ್ಲಿ ಎಷ್ಟ್ ಶೋ ಹೌಫ್ ಫುಲ್ ಆಗುತ್ತೋ ಗೊತ್ತಿಲ್ಲ.
ಆದ್ರೂ ಇವರು ಶೋಕಿದಾರ್. ಅಲ್ಲದೆ ಇವರಿಗೆ ಈಗ ಅಭಿಮಾನಿ ಸಂಘಗಳು ಕೂಡಾ ಹುಟ್ಟಿಕೊಂಡಿರೋದು ನೋಡಿದ್ರೆ ಇವರೆಲ್ಲ ಮುಂದಿನ ದಿನಗಳಲ್ಲಿ ಮೈ ಭೀಶೋಕಿದಾರ್ ಅಂತ ಹೇಳಿಕೊಂಡು ತಿರುಗಾಡೋದ್ರಲ್ಲಿ ಅನುಮಾನವೇ ಇಲ್ಲ. ಬಜಾರ್ ಚಿತ್ರದಲ್ಲಿ ಪಾರಿವಾಳ ಹಾರಿಸಿದ್ದ ಧನ್ವೀರ್ ಈಗ ಶೋಕಿದಾರ್ ಆಗಿರೋ ದನ್ನ ನೋಡಿ, ಈಗೇನ್ ಕಾಗೆ ಹಾರಿಸ್ತಾ ಇದ್ದೀರಾ ಅಂತ ಸಿನಿಪ್ರಿಯರು ಕೇಳ್ತಾ ಇರೋದಂತೂ ಸತ್ಯ.
ಲೂಸ್ ಟಾಕ್ಮಹೇಂದ್ರ ಸಿಂಗ್ ಧೋನಿ (ಕಾಲ್ಪನಿಕ ಸಂದರ್ಶನ)ಏನ್ ಸಾರ್, ಹೋದ್ಯಾ ಪಿಶಾಚಿ, ಅಂದ್ರೆ……ಸಾರಿ, ಹೋಗ್ಲಿ ಬಿಡಿ ಈ ಮಾತು ನಿಮಗೆಲ್ಲಾ ಅನ್ವಯಿಸಲ್ಲ, ಆದ್ರೂ ಮತ್ತೆ ಇಂಡಿಯನ್ ಕ್ರಿಕೆಟ್ ಗೆ ವಾಪಸ್ಬಂದಿದೀರ. ಏನನ್ನಿಸ್ತಾ ಇದೆ?
– ನೀವ್ ಏನ್ ಹೇಳಕ್ ಬಂದಿದ್ರಿ ಅಂತ ನಂಗೊತ್ತು. ಆದ್ರೆ, ನಾನು ತುಂಬಾ ಜನರಿಗೆ ಗಾಡ್ “ಫಾದರ್” ಕಣ್ರೀ. ಹಂಗಾಗಿ ಅವರೆಲ್ಲಾ ಹೋದ್ಯಾ “ಪಿತಾಜಿ” ಅಂದ್ರೆ, ಮತ್ತೆ ಬಂದ್ರಲ್ಲ ಅಂತ ಖುಷಿಯಾಗಿದಾರೆ ಗೊತ್ತಾ.
ಸರಿ, ಈ ಹೊಸ ಕೆಲ್ಸದಲ್ಲಿ ತುಂಬಾ ಜವಾಬ್ದಾರಿ ಇರುತ್ತೆ ಅಂತ ಅನ್ನಿಸಲ್ವಾ?– ಹಂಗೇನಿಲ್ಲ ಗೆದ್ರೆ ಧೋನಿಯಿಂದ, ಸೋತ್ರೆ ಕೊಹ್ಲಿಯಿಂದ ಅಷ್ಟೇ. ಮೆಂಟೋಸ್ ಕೂಲ್ ಬ್ರ್ಯಾಂಡ್ ಜೊತೆ ಟೈ ಅಪ್ ಮಾಡ್ಕೊಂಡಿದೀನಿ. ಹಂಗಾಗಿ, ನಾನು ಮೊದ್ಲು ಕ್ಯಾಪ್ಟನ್ ಕೂಲ್, ಈಗ ಮೆಂಟರ್ ಕೂಲ್ ಅಷ್ಟೇ.
ನೀವು ವರ್ಲ್ಡ್ ಕಪ್ ಟೀಮಿಗೆ ಮೆಂಟರ್ ಆಗಿರೋದು ನೋಡಿ ಗಂಭೀರ್ ಮೆಂಟಲ್ ಆಗಿಲ್ವಾ?-ಅದು ಅವ್ರ ಮೆಂಟಾಲಿಟಿ. ಹೆಸರಲ್ಲಿ “ಗೌತಮ” “ಗಂಭೀರ” ಎರಡೂ ಇಟ್ಕೊಂಡು ಯಾಕೆ ಯಾವಾಗ್ಲೂ ಅಷ್ಟೊಂದು ಸಿಡಿಮಿಡಿ ಅಂತಿರ್ತಾರೋ ಗೊತ್ತಿಲ್ಲ.
ಒಟ್ನಲ್ಲಿ ನೀವು ಮೆಂಟರ್ ಆಗಿರೋದಕ್ಕ ನಿಮ್ಮ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ ಅಲ್ವಾ?-ಅಲ್ವಾ ಮತ್ತೆ. ಈ ಮಹೇಂದ್ರನ ಅಭಿಮಾನಿಗಳು ಒಂಥರಾ ನರೇಂದ್ರನ ಅಭಿಮಾನಿಗಳ ಥರಾ. ನೋಡ್ತಾ ಇರಿ. ’ಧೋನಿ ಹೈ ತೋ ಮುಮ್ಕಿನ್ ಹೈ’ ಅಂತಶುರು ಮಾಡ್ತಾರೆ. ಆಮೇಲೆ ನಾನ್ ಏನೂ ಮಾಡದೇ ಕಪ್ ಗೆದ್ರೂ “ಥ್ಯಾಂಕ್ಯೂ ಧೋನಿಜೀ” ಅಂತಾರೆ.
ಸರಿ, ಆಕಸ್ಮಾತ್ ಕಪ್ ಗೆದ್ರೆ, ಕಪ್ ನೂ ನೀವೇ ಎತ್ಕೊತೀರೋ ಇಲ್ಲಾ, ಕೊಹ್ಲಿಗೆ ಬಿಡ್ತೀರೋ?-ಕಪ್ ನ ಕೊಹ್ಲಿನೇ ಎತ್ಕೊಂಡ್ರೂ, ಸ್ಟೇಡಿಯಂನಲ್ಲಿ ಇರೋ ಜನ ‘ಮಹೇಂದ್ರ ಕೊಹ್ಲಿ’ ಅಂತ ಬಾಹುಬಲಿ ರಮ್ಯಾ ಕೃಷ್ಣ ಥರ ಕೂಗ್ತಾರೆ ಅಂತ ಗೊತ್ತು ಬಿಡಿ ನಂಗೆ.
ನೆಟ್ ಪಿಕ್ಸ್ಖೇಮು ಕಾಲೇಜಲ್ಲಿ ಓದುವಾಗ ಒಂದು ದಿನ ಲೈಬ್ರೆರಿಗೆ ಅಂತ ಹೋದ. ಅಲ್ಲಿ ತುಂಬಾ ಜನ ಇದ್ರು. ಎಲ್ಲರೂ ಕಾಮ್ ಆಗಿ ಕೂತು ಓದ್ತಾ ಇದ್ರು. ಖೇಮುಕೂತ್ಕೊಳ್ಳೋಕೆ ಜಾಗ ಹುಡುಕ್ತಾ ಇದ್ದ. ಆದ್ರೆ ಎಲ್ಲೂ ಜಾಗ ಇರಲಿಲ್ಲ. ತುಂಬಾ ಹುಡುಕಿದ ಮೇಲೆ ಅಲ್ಲಿ ಒಂದು ಕಡೆ ಒಂದು ಸುಂದರವಾದ ಹುಡುಗಿ ಕೂತಿದ್ದುಕಾಣಿಸಿತು. ಅವಳ ಪಕ್ಕದಲ್ಲಿ ಒಂದು ಜಾಗ ಖಾಲಿ ಇತ್ತು. ಆದರೆ ಖೇಮು ಸ್ವಲ್ಪ ನಾಚಿಕೆ ಸ್ವಭಾವದ ಹುಡುಗ.
ಅವನಿಗೆ ಹುಡುಗಿಯ ಪಕ್ಕದಲ್ಲಿ ಹೋಗಿ ಕೂರೋದು ಮುಜುಗರ ಅನ್ನಿಸಿತು. ಆದರೆ ಬೇರೆ ದಾರಿ ಇರಲಿಲ್ಲ. ಸ್ವಲ್ಪ ಹೊತ್ತು ಯೋಚನೆ ಮಾಡಿ ನಂತರ ಧೈರ್ಯ ಮಾಡಿ ಆಕೆಯ ಬಳಿ ಹೋದ. ಎಕ್ಸ್ ಕ್ಯೂಸ್ ಮೀ ಅಂತ ಆಕೆಯನ್ನು ಮಾತನಾಡಿಸಿ, ಮೆಲುದನಿಯಲ್ಲಿ,“ಲೈಬ್ರೆರಿಯಲ್ಲಿ ಬೇರೆ ಎಲ್ಲೂ ಜಾಗ ಇಲ್ಲ. ಇಫ್ ಯೂ ಡೋಂಟ್ ಮೈಂಡ್, ನಾನು ನಿಮ್ಮ ಪಕ್ಕದಲ್ಲಿ ಕೂತ್ಕೋಬಹುದಾ?” ಅಂತ ಕೇಳಿದ.
ಅವಳು ಒಂದು ಕ್ಷಣ ಇವನ ಮುಖ ನೋಡಿ, ನಂತರ ಲೈಬ್ರೆರಿಯಲ್ಲಿರುವ ಎಲ್ಲರನ್ನೂ ಒಮ್ಮೆ ನೋಡಿ ಎದ್ದು ನಿಂತು ಎಲ್ಲರಿಗೂ ಕೇಳಿಸುವಂತೆ ಹೇಳಿದಳು“ಎಷ್ಟುಧೈರ್ಯ ನಿಂಗೆ, ಎಲ್ಲರ ಮುಂದೆ, ನಿನ್ ಜೊತೆ ಒಂದ್ ನೈಟ್ ಮಲಗಬೇಕು ಅಂತ ಕೇಳ್ತೀಯಾ?”. ಖೇಮುಗೆ ಶಾಕ್ ಆಯ್ತು. ಗಾಬರಿಯಾದ. ಲೈಬ್ರೆರಿಯಲ್ಲಿದ್ದಎಲ್ಲರೂ ಇವನನ್ನೇ ಅಸಹ್ಯವಾಗಿ ನೋಡೋಕೆ ಶುರು ಮಾಡಿದ್ರು. ಖೇಮುಗೆ ನಾಚಿಕೆ ಆಗಿ, ಒಂದು ಬುಕ್ ಸ್ಟ್ಯಾಂಡ್ ಬಳಿ ಹೋಗಿ ಒಂದು ಪುಸ್ತಕ ತೆಗೆದು ಮುಖಮುಚ್ಚಿಕೊಂಡ. ಸ್ವಲ್ಪ ಹೊತ್ತಾದ ಮೇಲೆ ಆ ಹುಡುಗಿ ಖೇಮು ಹತ್ರ ಬಂದು, “ಸಾರಿ, ನಾನೊಬ್ಬ ಸೈಕಾಲಜಿ ಸ್ಟೂಡೆಂಟ್.
ಈ ಥರ ಸಂದರ್ಭದಲ್ಲಿ ಗಂಡಸರು ಹೇಗೆ ವರ್ತಿಸ್ತಾರೆ ಅಂತ ನೋಡಬೇಕಿತ್ತು. ಅದಕ್ಕೆ ಹಾಗೆ ಮಾಡಿದೆ” ಅಂದಳು. ಅದಕ್ಕೆ ಖೇಮು ಅಲ್ಲಿದ್ದ ಎಲ್ಲರಿಗೂ ಕೇಳುವಂತೆ ಜೋರಾಗಿ ಹೇಳಿದ “ಏನು? ಒಂದ್ ನೈಟಿಗೆ೧೦,೦೦೦ರುಪಾಯಿನಾ, ನೀನೇನು ತ್ರಿಪುರ ಸುಂದರಿ ಅಂತ ತಿಳ್ಕೊಂಡಿದ್ದೀಯಾ?”. ಮತ್ತೆ ಅಲ್ಲಿದ್ದ ಎಲ್ಲರೂ ಇನ್ನಷ್ಟು ಆಶ್ಚರ್ಯದಿಂದ ಆ ಹುಡುಗಿಯನ್ನು ನೋಡಿದರು. ಹುಡುಗಿ ಗಾಬರಿಯಾಗಿ ನಿಂತಿದ್ದು ನೋಡಿ ಖೇಮು ಹೇಳಿದ, “ನಾನು ಲಾ ಸ್ಟೂಡೆಂಟ್, ಒಬ್ಬರು ಹಾಕಿದ ಕೇಸನ್ನ ಅವರಿಗೆ ಉಲ್ಟಾ ತಿರುಗಿಸೋದು ಹೆಂಗೆ ಅಂತ ನನಗೆ ಗೊತ್ತು”.
ಲೈನ್ ಮ್ಯಾನ್ಲಾಸ್ ಆಗ್ತಿದೆ ಅಂತ ಬಾಗಿಲು ಮುಚ್ಚಿದ ‘ಫೋರ್ಡ್’ ಕಂಪನಿ ಮಾಲೀಕ ಹೇಳಿದ್ದೇನು ?-ಸಾರಿ, ವಿ ಕೆನ್ ನಾಟ್ ಅ ‘ಫೋರ್ಡ್’.ಟಿ ೨೦ ವರ್ಲ್ಡ್ ಕಪ್ ಟೀಮಲ್ಲಿ ೪ ಜನ ಬ್ಯಾಟ್ಸ್ ಮನ್ ಗಳನ್ನಷ್ಟೇ ಸೆಲೆಕ್ಟ್ ಮಾಡಿರೋದು– ಅಲ್ಲಿಗೆ, ನಾಕ್ ಜನ ಔಟಾದ್ರೆ, ಇಂಡಿಯಾ ನಾಕ್ ಔಟ್
ಶಾಲೆಗಳಲ್ಲಿ ‘ಸಾಮಾಜಿಕ ಅಂತರ’ ಕಡ್ಡಾಯ. ಹಂಗಾಗಿ ಮಕ್ಕಳು ಈಗ ಸ್ಕೂಲಿಗೆ ಹೋದ್ರೂ, ಅದು– ‘ಡಿಸ್ಟೆನ್ಸ್’ ಎಜ್ಯುಕೇಷನ್
ಕೊಹ್ಲಿ- ‘ಶಾಸ್ತ್ರಿ’ಗಳೇ, ಸ್ವಲ್ಪ ನಮ್ ರಹಾನೆ ಭವಿಷ್ಯ ನೋಡಿ ಹೇಳಿಶಾಸ್ತ್ರಿ – ಆಷಾಢ ಕಳೆದು ಶ್ರಾವಣ ಬಂದ್ರೆ, ಫುಲ್ ಟಾಪಲ್ ಬರ್ತಾನೆ.ಕೊಹ್ಲಿ – ಹ್ಞೂ.. ಬಂದ್ಬುಡು, ಟಾಪಲ್ಲಿ ರಾಹುಲ್, ರೋಹಿತ್ ಇದ್ದಾರೆ. ಅದೆಂಗ್ ಬರ್ತಾನೆ?‘ವರ್ಷಾ’ ಇನ್ನೋ ಇಬ್ಬರು ಗರ್ಲ್ ಫ್ರೆಂಡ್ಸ್ ಇದ್ರೆ ಹೊಸಬಳ ನಂಬರ್ ಅನ್ನುಹೇಗೆ ಸೇವ್ ಮಾಡಿಕೊಳ್ಳಬೇಕು– ನ್ಯೂ ‘ಇಯರ್’ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಗೆ ಇಷ್ಟ ಆಗೋ ಬಿಸ್ಕೆಟ್– ‘ಮಾರಿ’ ಬಿಸ್ಕೆಟ್ಚೌಚೌ ಮಾರೋ ಅಂಗಡಿಗೆ ಏನಂತ ಹೆಸರಿಡಬಾರದು ?– ಚೌಚಾಲಯಪುರುಷರ ಎದೆ ಮೇಲೆ ಬೆಳೆಯುವ ಕೂದಲು– ಎದೆ ‘ಗರಿಕೆ’ಲವ ತನ್ನ ಸಹೋದರನನ್ನು ಭೇಟಿ ಆದಾಗ ಏನು ವಿಚಾರಿಸ್ತಾನೆ?– ‘ಕುಶ’ ಲೋಪರಿತಮಗೆ ತಾವೇ ಶೋಕಿದಾರ್ ಅಂತ ಹೆಸರು ಇಟ್ಕೊಂಡಿರೋ ಧನ್ವೀರ್ಅಭಿಮಾನಿಗಳ ಸ್ಲೋಗನ್– ಮೈ ಭೀ ಶೋಕಿದಾರ್ವಿಜಯ್ ಪ್ರಸಾದ್ -ಜಗ್ಗೇಶ್ ಅವರ ‘ತೋತಾಪುರಿ’ ಸಿನಿಮಾ ಟೈಟಲ್ ನ ಡಿಡಿಎಲ್ ಜೆ ಥರ ಶಾರ್ಟ್ ಫಾರ್ಮ್ ಗೆ ತಂದ್ರೆ ತೋತಾಪುರಿ ಮಾವು ಎಲ್ಲಿ ಸಿಗುತ್ತೆಅನ್ನೋ ಪ್ರಶ್ನೆಗೆ ಉತ್ರ ಸಿಗುತ್ತೆ.‘ತೋಪು’. ಹಾಗಂತ ಅದನ್ನ ಸಿನಿಮಾದ ಬಾಕ್ಸ್ ಆಫೀಸ್ ರಿಸಲ್ಟ್ ಅನ್ನೋದು ತಪ್ಪು
ನಿಮ್ಮ ಎಲ್ಲಾ ‘ಪಾಪ’ಗಳನ್ನು ಇಲ್ಲಿ ತೊಳೆಯಲಾಗುತ್ತದೆ ಎಂದು ಹೇಳಿ ಜನರ ತಲೆಕೆಡಿಸಿ ಮರುಳು ಮಾಡುವ ಢೋಂಗಿ ಧಾರ್ಮಿಕ ಸ್ಥಳಬ್ರೈನ್ ವಾಷ್ ಬೇ‘ಸಿನ್’