ಸಂವಿಧಾನ, ನ್ಯಾಯಾಲಯ, ಕಾನೂನುಗಳನ್ನು ಮೀರಿದೆ ಮತಾಂತರ !
ಹಂಪಿ ಎಕ್ಸ್‌ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1332hampiexpress1509@.
ಮೊನ್ನೆ ವಿಧಾನಸಭೆಯ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಮಾತುಗಳು ಸಮಾಜದಲ್ಲಿ ಮಿಶನರಿಗಳ ಮತಾಂತರ ಪಿಡುಗು ಯಾವ ಮಟ್ಟಕ್ಕೆ ಬಂದು ತಲುಪಿದೆ ಎಂಬುದನ್ನು ಅನಾವರಣಗೊಳಿಸಿದೆ.
ಭ್ರಷ್ಟಾಚಾರದಷ್ಟೇ ಸಲೀಸಾಗಿ ನಡೆಯುತ್ತಿರುವ ಧರ್ಮ-ಸಂವಿಧಾನ- ಸಮಾಜ ವಿರೋಧಿ ಮತಾಂತರದ ಹೊಡೆತಕ್ಕೆ ಸಂವಿಧಾನಿಕ ಪ್ರತಿನಿಧಿ ಸಾಕ್ಷಾತ್ ಶಾಸಕರೇ ಈಡಾಗಿರುವುದು ಮತ್ತು ಅದರ ನೋವನ್ನು ಅಧಿವೇಶನದಲ್ಲಿ ಅಸಹಾಯಕರಾಗಿ ಹೇಳಿಕೊಳ್ಳುವುದಿದೆಯಲ್ಲ ಇದು ನಿಜಕ್ಕೂ ನಮ್ಮ ಆಡಳಿತ, ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆಗಳಿಗೆ ನಾಚಿಗೇಡಿನ ವಿಚಾರ. ಪಾಪ, ಅಂದು ಗೂಳಿಹಟ್ಟಿ ಅವರು ತಮಗಾದ ಮತಾಂತರದ ಅನುಭವದ ಕುರಿತುಇನ್ನೂ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದರು. ಆದರೆ ಸಭಾಧ್ಯಕ್ಷರು ಸಮಯಾವಕಾಶ ನೀಡಲಿಲ್ಲ. ಒಂದೆಡೆ ಸಂವಿಧಾನ ಪರಿಪಾಲನೆ, ಬಲಿಷ್ಠ ಕಾನೂನು ಗಳಿದ್ದರೂ, ಜಾತಿ ಉಪಜಾತಿಗಳಿಗೆಲ್ಲಾ ನಾಯಕರುಗಳಿದ್ದರೂ, ಎಲ್ಲಕ್ಕಿಂತ ಮಿಗಿಲಾಗಿ ರಾಜಕೀಯವನ್ನೇ ಆಪೋಶನ ತೆಗೆದುಕೊಳ್ಳುವಷ್ಟು ಪ್ರಭಾವದ ಜಾತಿ ಗೊಬ್ಬ ಸ್ವಾಮೀಜಿಗಳು ಮಠಾಧೀಶರುಗಳಿದ್ದರೂ ಈ ದರಿದ್ರ ಮತಾಂತರ ಕೃತ್ಯವು ಯಾವುದೇ ಅಡೆತಡೆಗಳಿಲ್ಲದೇ ಅದರ ಪಾಡಿಗೆ ಅದು ನಡೆಯುತ್ತಲೇ ಇರುವುದು ವ್ಯವಸ್ಥೆಯ ಮಹಾವೈಫಲ್ಯ ಮತ್ತು ಅಣಕ.
ಮೊನ್ನೆ ನೋಡಿ ಬೆಂಗಳೂರಿನಲ್ಲಿ ಮುಸ್ಲಿಂ ಧರ್ಮದ ಹೆಣ್ಣನ್ನು ಹಿಂದೂ ಧರ್ಮೀಯನೊಬ್ಬ ಕೇವಲ ಮನೆ ತನಕ ಬಿಡಲು ಜತೆಯಾಗಿ ಹೊರಟಾಗ ಅದನ್ನು ಸಹಿಸದೆ ಮುಸ್ಲಿಂ ಯುವಕರು ತಡೆದು ದಾಂದಲೆ ನಡೆಸಿದ್ದಾರೆ. ಆದರೆ ದಶಕಗಳಿಂದ ಕೋಟ್ಯಂತರ ಹಿಂದೂಗಳನ್ನು ಕುತಂತ್ರದಿಂದ ಮತಾಂತರ ಮಾಡಿ ಹಿಂದೂ ಧರ್ಮವನ್ನೇ ಉಡಾಯಿಸುತ್ತಿದ್ದರೆ ಯಾವೊಬ್ಬ ನಾಯಕರುಗಳಿಗೂ, ಸ್ವಾಮೀಜಿಗಳಿಗೂ ಏನೂ ಅನಿಸುತ್ತಿಲ್ಲ. ಎಲ್ಲೋ ಒಂದು ಹಿಂದೂಪರ ಸಂಘಟನೆ ತಡೆಯಲು ಹೊರಟರೆ ಅವರ ಮೇಲೆಯೇ ಉಲ್ಟಾ ಕೇಸು ದಾಖಲಿಸಿ ಕೋಮುವಾದಿ ಪಟ್ಟ ಕಟ್ಟುತ್ತಾರೆ.
ಸುಪ್ರೀಂಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆಂದು ಹೇಳಿಕೊಂಡು ಹಿಂದೂ ದೇವಾಲಯ ಗಳನ್ನು ಉರುಳಿಸುವ ಸರಕಾರಗಳು, ಭಾರತದ ಸಂವಿಧಾನದಲ್ಲಿ ‘ಒಬ್ಬ ವ್ಯಕ್ತಿ ಒಂದು ಧರ್ಮದಿಂದ ಇನ್ನೊಂದುಧರ್ಮ ಕ್ಕೆ ಸ್ವ ಇಚ್ಛೆಯಿಂದ “ಮತಾಂತರಗೊಳ್ಳು ವುದನ್ನು”(  ) ಒಪ್ಪಿದೆಯೇ ಹೊರತು ಇನ್ನೊಂದು ಧರ್ಮಕ್ಕೆ (  )  ‘ಮತಾಂತರಿಸುವುದನ್ನು’ ಒಪ್ಪುವುದಿಲ್ಲ. ಹೀಗೆ ಕಾನೂನು ಮತ್ತು ಸಂವಿಧಾನ ಬಾಹಿರವಾದ ಕೃತ್ಯ ಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದಕ್ಕೆ ಕಾನೂನಿಗೆ ಮತು ಸರಕಾರಗಳಿಗೇಕೆ ಸೋಂಬೇರಿತನ ಮತ್ತು ಜಾಣಕುರುಡು?.
ಒಬ್ಬ ಶಾಸಕನಿಗೆ ಇಂಥ ಅನುಭವಾಗಿ ಅದನ್ನುಅಽವೇಶನದಲ್ಲಿ ಅಲವತ್ತು ಕೊಳ್ಳುವ ದುರ್ಗತಿಗೆ ಬಂದಿದೆಯೆಂದರೆ ಮುಗ್ಧ ಮತ್ತು ಅಮಾಯಕ ಮಂದಿಯ ಪರ ಯಾರು ನಿಲ್ಲುತ್ತಾರೆ? ಇನ್ನು ಈ ಮನೆ ಹಾಳು ಮತಾಂತರಗಳನ್ನು ತಡೆಯದಿದ್ದರೆ ಸರಕಾರ- ಕಾನೂನು- ಸಂವಿಧಾನ- ನ್ಯಾಯಾಲಯಕ್ಕಿರುವ ಬೆಲೆ, ಉಳಿಯುವಗೌರವವಾದರೂ ಏನು?. ಇಷ್ಟಕ್ಕೂ ಈ ಮತಾಂತರ ಕುತಂತ್ರಗಳು ಹೇಗಿರುತ್ತವೆ ಎಂಬುದನ್ನು ನೋಡಿ. ‘ನೀವು ಪೂಜಿಸುವ ಮಾರಮ್ಮ, ಕಬ್ಬಾಳಮ್ಮ, ಅಣ್ಣಮ್ಮ ಇವರೆಲ್ಲ ದೇವರಲ್ಲ ರಾಕ್ಷಸರು, ನೀವು ರಾಕ್ಷಸರಿಗೆ ಪೂಜೆ ಮಾಡ್ತೀರ.
ಇನ್ನುನೀವು ದೇವಸ್ಥಾನಕ್ಕೆ ಹೋಗ್ತಿರ ಅಲ್ಲಿಗೆ ತೆಂಗಿನಕಾಯಿ, ಬಾಳೇಹಣ್ಣು, ಹೂ, ಕಡ್ಡಿ ಕರ್ಪೂರ ಖರೀದಿಸಿ,ನಂತರ ಪೂಜಾರಿ ತಟ್ಟೆಗೆ ಹುಂಡಿಗೂ ದುಡ್ಡು ಹಾಕಿ, ಕೊನೆಗೆ ಚಪ್ಪಲಿ ಕಾಯುವವರಿಗೂ ಹಣ ಕೊಡ್ತೀರ. ಅದರಲ್ಲೂ ಕೆಲದೇವಸ್ಥಾನಗಳಲ್ಲಿ ನಿಮಗೆ ಪ್ರವೇಶನೇ ಕೊಡಲ್ಲ. ಆದ್ರೆ ನಮ್ಮಲ್ಲಿ ಹಾಗಲ್ಲ,ನಿಮ್ಮ ಕಷ್ಟ ನೋಡಿ ನಮ್ಮ ದೇವರ ದೇಹದಿಂದಲೇ ರಕ್ತ ಹರಿಯುತ್ತೆ, ನಮ್ಮ ದೇವಸ್ಥಾನಕ್ಕೆ ಬನ್ನಿ ನಿಮಗೆ ಯಾವುದೇ ಖರ್ಚಿಲ್ಲ, ನಿಮ್ಮ ಕಾಯಿಲೆ ಕಷ್ಟ ದುಃಖ ಎಲ್ಲವನ್ನೂ ನಮ್ಮ ಏಸಪ್ಪಕಳಿತಾನೆ. ನೀವು ಬಂದು ಏಸಪ್ಪನಿಗೆ ಪ್ರಾರ್ಥನೆ ಮಾಡಿದ್ರೆ ಸಾಕು ನಿಮ್ಮ ಬಿಪಿ,ಸಕ್ಕರೆ ಕಾಯಿಲೆ ವಾಸಿ ಆಗುತ್ತೆ, ನಾವು ನಿತ್ಯ ಬ್ರೆಡ್ಡು ಹಾಲು ಕೊಡ್ತಿವಿ ನೀವೂಬನ್ನಿ, ನಿಮ್ಮ ಮನೆಯವರನ್ನೂ ಕರ‍್ಕೊಂಡು ಬನ್ನಿ, ನಿಮ್ಮ ಅಕ್ಕ ಪಕ್ಕದವರಿಗೂ ಇದೆಲ್ಲಾ ಹೇಳಿ ನಿಮ್ಮ ಮಾರಮ್ಮನೇ ನಮ್ಮ ಮೇರಿಯಮ್ಮ ನಿಮ್ಮ ತಿಮ್ಮಪ್ಪಾನೇ ನಮ್ಮ ಏಸಪ್ಪ.
ನಮ್ಮ ಮೇರಿಯಮ್ಮ ನಿಮ್ಮನ್ನ ನರಕದಿಂದ ಸ್ವರ್ಗಕ್ಕೆ ಕಳಿಸ್ತಾರೆ, ಬೇಕಾದರೆ ನಿಮ್ಮ ಮನೆಗೆ ಬಂದು ನಾವೆಲ್ಲಾ ಅರ್ಥ ಮಾಡಿಸ್ತಿವಿ’. ಹೀಗಿರುತ್ತದೆ ನಮ್ಮಬೆಂಗಳೂರಿನಲ್ಲೇ ನಡೆಯುವ ಮತಾಂತರದ ಮೊದಲ ಅಸ್ತ್ರ. ಇದರ ಅನುಭವವಾಗಬೇಕಾದರೆ ಅನೇಕ ಕೊಳಚೆ ಪ್ರದೇಶಗಳಾಗಿ ಗುರುತಿಸಲ್ಪಡುವ ಪ್ರದೇಶ ಗಳನ್ನು ಎಲ್ಲಾ ಕೆಲಸವನ್ನು ಬಿಟ್ಟು ಒಂದು ವಾರಸುತ್ತಿ ಬಂದರೆ ಮತಾಂತರದ ವ್ಯೂಹಗಳ ಸ್ಪಷ್ಟ ಪುರಾವೆ ದೊರಕುತ್ತದೆ. ಇದರಲ್ಲೇ ಪಿಎಚ್‌ಡಿ ಮಾಡಿಡಾಕ್ಟರೇಟ್! ಪಡೆಯಲೂ ಬಹುದು. ಸರ್ವೇ ಜನಾಃ ಸುಖಿನೋ ಭವಂತು ಎಂಬ ವಿಶ್ವಮಂತ್ರ ಹೊಂದಿರುವ ಜಾಗತಿಕ ಅಲ್ಪಸಂಖ್ಯಾತರಾದ ಹಿಂದೂಗಳನ್ನು ಒಂದೆಡೆ ಇಸ್ಲಾಂಭಯೋತ್ಪಾದನೆ ಕೊಲ್ಲುತ್ತಿದ್ದರೆ, ಇನ್ನೊಂದೆಡೆ ಕುತಂತ್ರ ಮತಾಂತರದ ಮೂಲಕ ಹಿಂದೂ ಧರ್ಮವನ್ನೇ ಕೊಲ್ಲುವ ಈ ಗಂಡಾಂತರಕಾರಿ  ಮತಾಂತರ ನಿರಂತರವಾಗಿ ನಡೆಯುತ್ತಲೇ ಇದೆ.
ಒಂದು ಧರ್ಮ ಮತ್ತೊಂದು ಧರ್ಮದ ಮೇಲೆ ಹುನ್ನಾರವಿರಿಸಿ ಆಕ್ರಮಣ ಮಾಡುವುದು ವಿಶ್ವದ ಯಾವುದೇ ಮೂಲೆಯಲ್ಲೂ ಅಕ್ರಮ ಮತ್ತು ಅಪರಾಧವೆನಿಸಿ ಕೊಳ್ಳುತ್ತದೆ. ಹಾಗೇ ಬಲವಂತ ಮತಾಂತರ ಅಥವಾ ಆಮಿಷ ಮತಾಂತರ ಅಥವಾ ಪ್ರಚೋದನಾತ್ಮಕ ಮತಾಂತರ ಕಾನೂನಿನ ದೃಷ್ಟಿಯಲ್ಲಿ ಅಕ್ರಮ ಹಾಗೂ ಅಪರಾಧ. ಒಬ್ಬ ಪ್ರಜ್ಞಾವಂತ ಬೈಬಲ್ ಓದಿ ಅದರಿಂದ ಪ್ರಭಾವಿತನಾಗಿ ಮತಾಂತರ ಗೊಂಡರೆ ಅಪರಾಧವಲ್ಲ. ಆದರೆ ಮುಗ್ಧ ಅಮಾಯಕ ಅನಕ್ಷರಸ್ಥ ಜನರಿಗೆ ಬೈಬಲ್ ಒತ್ತೊಟ್ಟಿಗಿರಲಿ, ಅವರಿಗೆ ಸರಿಯಾಗಿ ಆ ದಿನದ ವಾರ,ದಿನಾಂಕವೇ ತಿಳಿದಿರುವುದಿಲ್ಲ.
ಇಂಥವರನ್ನು ಗುಟ್ಟಾಗಿ ಸಂಪರ್ಕಿಸಿ ದೇವರ ಕುರಿತು ಗೊಂದಲ ಮೂಡಿಸಿ, ಮನಸ್ಸಿನಲ್ಲಿ ಅಪರಾಧ ಭಾವನೆ, ಭಯ ಸೃಷ್ಟಿಸಿ ಮಾನಸಿಕವಾಗಿ ಬಲಹೀನಗೊಳಿಸಿ ತಮ್ಮ ಕಾರ್ಯ ಸಾಧಿಸುತ್ತಿರುವ ವ್ಯಕ್ತಿಗಳನ್ನುಕಾನೂನು ಚೌಕಟ್ಟಿಗೆ ತರುವುದು ಅಷ್ಟು ಸುಲಭವಲ್ಲ. ಮಧ್ಯ ವಯಸ್ಕ ಒಂಟಿ ಮಹಿಳೆಯೊಬ್ಬಳು ಇಂಥ ಪ್ರದೇಶ ದಲ್ಲಿ ವಾಸಿಸುತ್ತಾಳೆ. ಈಕೆ ಇಂಥ ಜನಗಳ ವಿಶ್ವಾಸವನ್ನು ಅತಿ ಸುಲಭವಾಗಿ ಗಳಿಸಿಕೊಳ್ಳುತ್ತಾಳೆ. ನಂತರ ತನ್ನ ಪೂರ್ವನಿಯೋಜಿತ ಕಾರ್ಯವನ್ನು ಜಾರಿಗೆ ತರುತ್ತಾ ಹೋಗುತ್ತಾಳೆ. ಸಾಮಾನ್ಯವಾಗಿ ಗಾಮೆಂಟ್ಸ್, ದಿನಗೂಲಿ ನೌಕರಿ ಮಾಡುವ, ಪೋಷಕರ ಬಗ್ಗೆ ನಿರಾಸೆ ಇರುವ ಯುವತಿಯರು ಈಕೆಗೆ ಸುಲಭವಾಗಿ ಸಿಕ್ಕು ಧರ್ಮ ಪರಿವರ್ತನೆಗೆ ಈಡಾಗುತ್ತಾರೆ.
ಮೇಲ್ನೋಟಕ್ಕೆ ಇದೆಲ್ಲಾ ಗಂಭೀರವಾಗಿ ಕಾಣಿಸದ ತಂತ್ರಗಳನ್ನುನೇರವಾಗಿ ಆರೋಪಿಸಲು ಕ್ಲಿಷ್ಟಕರವಾಗಿರುತ್ತದೆ. ಆದರೆ ಇದರ ಪರಿಣಾಮವಾಗಿ ಇಂಥ ಪ್ರದೇಶಗಳಲ್ಲಿ ಏಕಾಏಕಿ ಗುಡಿಸಲು ರೂಪದ ಪ್ರಾರ್ಥನ ಮಂದಿರಗಳು ಸ್ಥಾಪಿತಗೊಂಡು ಅದರ ಸುತ್ತಮುತ್ತಲಿನ ಮನೆಗಳಲ್ಲಿ, ಮನಗಳಲ್ಲಿ ಜೀಸಸ್ ಮೇರಿ ಪಟಗಳು ಜಾಗಪಡೆಯುತ್ತವೆ. ಇದನ್ನೆಲ್ಲಾ ಗಮನಿಸಿ ಪೊಲೀಸ್ ಠಾಣೆಗೆ ಹೋಗಿ ಇಂಥ ಜಾಗದಲ್ಲಿ ಮತಾಂತರವಾಗುತ್ತಿದೆ ಎಂದು ದೂರು ನೀಡಲು ಪ್ರಯತ್ನಿಸಿ ನೋಡಿ, ಆಗ ಪೊಲೀಸರು ‘ಮತಾಂತರ ನಡೆಯುತ್ತಿರುವುದಕ್ಕೆ ನಿಮ್ಮ ಹತ್ತಿರ ಸಾಕ್ಷಿಗಳಿವೆಯಾ?, ಮತಾಂತರ ಮಾಡಲು ನಿಮ್ಮ ಮನೆಗೇ ಬಂದಿದ್ರ?,ಮತಾಂತರವಾಗಲು ನಿಮ್ಮನ್ನು ಬೆದರಿಸಿದ್ರಾ?, ನೀನು ಬಿಜೆಪಿಯವನಾ?ಹಿಂದೂಪರ ಸಂಘಟನೆಯವನಾ? ಕೋಮುವಾದಿನಾ?’ ಎಂದು ಪ್ರಶ್ನಿಸದಿದ್ದರೆ ಕೇಳಿ!.ಆಗ, ಅಯ್ಯೋ ಇದೆಲ್ಲಾ ಉಸಾಬರಿ ನನಗ್ಯಾಕೆ ಎಂದು ಹಿಂತಿರುಗ ಬೇಕಾಗುತ್ತದೆ.
ಒಂದೊಮ್ಮೆ ಮತಾಂತರಿಗಳನ್ನು ಪ್ರಶ್ನಿಸಿದರೆ ಮಹಾಸಾಚಾಗಳಂತೆ ಬೊಬ್ಬೆ ಹಾಕಿ ಸುತ್ತಮುತ್ತಲಿನವರ ಅನುಕಂಪಗಿಟ್ಟಿಸಲು ಪ್ರಯತ್ನಿಸುತ್ತಾರೆ. ಅಲ್ಪಸಂಖ್ಯಾತ ಸನ್ಯಾಸಿ – ಪಾದ್ರಿಗಳ ಮೇಲೆ ಹಿಂದೂಗಳಿಂದ ದಾಳಿ-ಹಲ್ಲೆ ಎಂಬಂತೆ ಬಿಂಬಿಸಿ ವಿವಾದ ಸೃಷ್ಟಿಸುತ್ತಾರೆ. ಆಗ ಹಸಿದ ನಾಯಿಗಳಂತೆ ರಾಜಕೀಯ ವೋಟ್‌ಬ್ಯಾಂಕ್ ನಿರಾಶ್ರಿತರು ಓಡಿ ಬಂದು ಇಂಥ ಕುತಂತ್ರಿ ಕಂತ್ರಿಗಳ ಬೆಂಬಲಕ್ಕೆ ನಿಲ್ಲುತ್ತಾರೆ. ಅಲ್ಲಿಗೆ ಮತ್ತೊಂದು ಸುತ್ತಿನ ‘ಮಾನವ ಹಕ್ಕು ಹರಣ, ಕೋಮುವಾದಿಗಳ ದೌರ್ಜನ್ಯ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ’ ಎಂಬ ನಾಟಕ ನಡೆದು ವಿಷಯ ತಣ್ಣಗಾಗುತ್ತದೆ.
ಕೆಲ ದಿನ ಸುಮ್ಮನಿದ್ದು ಮತ್ತೆ ಈ ಮನೆ ಹಾಳು ಮತಾಂತರ ಅಬಾಧಿತವಾಗಿ ಮುಂದುವರಿಯುತ್ತದೆ. ಮುಂದೊಂದು ದಿನ ಊರಿಗೆ ಊರೇ ಮತಾಂತರಗೊಂಡು ಗೂಳಿಹಟ್ಟಿ ಯಂಥ ಶಾಸಕರು ಕಂಗಾಲಾಗಿ ಶರ್ಟ್ ಪ್ಯಾಂಟ್ ಪಂಚೆ ಬಿಚ್ಚಿಕೊಂಡು ಬಾಯಿ ಬಡಿದುಕೊಳ್ಳ ಬೇಕಾಗುತ್ತದೆ. ಈ ಮಿಶನರಿಗಳ ಮತಾಂತರವೆಂಬುದು ಕಾನೂನಿನ ಕಣ್ಣಿಗೆ ಕ್ಲಬ್ ಒಂದರಲ್ಲಿ ನಡೆಯುವ ಸಾಮೂಹಿಕ ಜೂಜಾಟದಂತೆ, ವೇಶ್ಯಾವಾಟಿಕೆಯಂತೆ ಅಥವಾ ಹಿಂದೆ ನಡೆದ ಚರ್ಚ್‌ಗಳ ಮೇಲಿನ ದಾಳಿಯಂತೆ ಕಂಡರೆ ಮಾತ್ರ ಅಪರಾಧವಾಗುತ್ತದೆ. ಆದರೆ ಮನಸ್ಸು ಮತ್ತು ಮಿದುಳಿನ ಪರಿವರ್ತನೆಯ ಸಂಚುಗಳ ಮತಾಂತರದ ತಂತ್ರಗಳು ಅಷ್ಟು ಸುಲಭವಾಗಿ ಕಾನೂನಿನ ಬಲೆಗೆ ತುರುವುದು ಸಾಧ್ಯವಿಲ್ಲ.
ಹೀಗಾಗಿಯೇ ಇಡೀ ದೇಶದಲ್ಲಿ ಮತಾಂತರ ‘ಉದ್ದಿಮೆಗಳು’ ಲೀಲಾಜಾಲವಾಗಿ ಕಾನೂನು ಕಟ್ಟಳೆಗಳ ಭಯವಿಲ್ಲದೆ ಅವ್ಯಾಹತವಾಗಿ ನಡೆಯುತ್ತಲೇ ಬರುತ್ತಿದೆ. ಇವುಗಳನ್ನೆಲ್ಲಾ ಸಮಗ್ರವಾಗಿ ತಿಳಿಯ ಬೇಕಾದರೆ ಕಳೆದ ಇಪ್ಪತ್ತೈದು ವರ್ಷಗಳ ನಂತರ ನಿರ್ಮಾಣವಾದ ಚರ್ಚ್ ಅಥವಾ ದಿಢೀರ್ ಪ್ರಾರ್ಥನಾ ಮಂದಿರಗಳ ಇತಿಹಾಸವನ್ನು ಅವಲೋಕಿಸಿದರೆ ಸಾಕು. ಹಿಂದೆ ಕೇವಲ ಗುಡಿಗಳಿದ್ದ ಪ್ರದೇಶದಲ್ಲಿ ಕ್ರಿಶ್ಚಿಯನ್ನರೇ ಇಲ್ಲದಿದ್ದ ಊರಿನಲ್ಲಿ ಹತ್ತಾರು ವರ್ಷಗಳಲ್ಲಿ ಅಲ್ಲಿಚರ್ಚ್ ಒಂದರ ಅವಶ್ಯಕತೆ ಕೂಡಿಬರುತ್ತದೆಂದರೆ ಅದರ ಹಿಂದಿನ ಬೆಳವಣೆಗೆಯೇ ಮತಾಂತರದ ಯಶಸ್ಸಿನ ಒಟ್ಟಾರೆ ಸಾಧನೆಯಾಗಿರುತ್ತದೆ. ಒಂದು ಹೊಸ ಚರ್ಚ್ನಿರ್ಮಾಣದ ಹಿಂದೆ ಹಲವು ವರ್ಷಗಳ ಧರ್ಮ ಪರಿವರ್ತಕರ ಪರಿಶ್ರಮದ ಒಟ್ಟಾರೆ ಫಲಿತಾಂಶವಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಧರ್ಮಾಂಧ ಇಸ್ಲಾಂ ಆಕ್ರಮಣಕಾರರಷ್ಟು ಅಲ್ಲದಿದ್ದರೂ, ಹಿಂದೂ ಪರಂಪರೆ ನಂಬಿಕೆ ಸಂಸ್ಕೃತಿಯನ್ನುನಾಶ ಮಾಡಲು ಬ್ರಿಟಿಷರು ತಮ್ಮದೇ ಆದ ಆಮಿಷ ತಂತ್ರವನ್ನು ಬಳಸಿ ಹಿಂದೂಗಳನ್ನು ಮತಾಂತರಿಸಿ ನಮ್ಮ ದೇಶದಲ್ಲಿ ಇಲ್ಲದೇ ಇದ್ದ ಕ್ರಿಶ್ಚಿಯನ್ ಧರ್ಮವನ್ನು ಸ್ಥಾಪಿಸಿ ಹೋದರು. ಆನಂತರ ರಾಜಕೀಯ ಮೇಲಾಟಕ್ಕೆ ಬಂದ ಬೆಕ್ಕು ಗೂಬೆ ಮುಖದ ಪಿತೃಪಕ್ಷಗಳೆಂಬ ಅನಿಷ್ಟಗಳಿಗೆ ಬಕೆಟ್ ಹಿಡಿಯಲು ಮತಾಂತರಗಳನ್ನು ಪೋಷಿಸುವ, ಆ ಮೂಲಕ ವಿಕೃತಶಹಬಾಷ್ ಗಿರಿ ಪಡೆಯುವ ಮತ್ತು ಮತ ಬ್ಯಾಂಕ್ ಹೆಚ್ಚಿಸಿ ಕೊಳ್ಳುವ ಹಿಂದೂ ತಾಯಿ ಗಂಡರುಗಳೇ ರಾಜಕೀಯದಲ್ಲಿದ್ದಾರೆ.
ನೆರೆಯ ಆಂಧ್ರ, ನಾಗಾಲ್ಯಾಂಡ್, ನಮ್ಮಲ್ಲಿನ ಕನಕಪುರ, ಮಂಗಳೂರು ಸೇರಿದಂತೆ ಅನೇಕ ಊರುಗಳಲ್ಲಿ ಇಂಥವರಿಂದಲೇ ಮತಾಂತರ ಪ್ರಕ್ರಿಯೆ ನಿರಂತರ ವಾಗಿ ನಡೆಯುತ್ತಿದೆ. ಶಾಸಕ ಗೂಳಿಹಟ್ಟಿ ಆರಂಭದಲ್ಲೇ ಮತಾಂತರಿಗಳ ಎಡೆಮುರಿ ಕಟ್ಟದೆ ಸುಮ್ಮನಿದ್ದು ಈಗ ತನ್ನ ತಾಯಿಗೇ ವಕ್ಕರಿಸಿದ ಮೇಲೆ ಗೋಳಿಡು ತ್ತಿರುವುದು ನಾಚಿಗೆಗೇಡು. ಆದ್ದರಿಂದ ಈಗಲಾದರೂ ಸರಕಾರ ಈ ಮತಾಂತರವನ್ನುಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಕ್ಕೆ ಮುಂದಾಗದಿದ್ದರೆ ದೇಶದ ಸಂವಿಧಾನ ನ್ಯಾಯಾಂಗ ವ್ಯವಸ್ಥೆಗೆ ಮಸಿ ಬಳಿದಂತೆ.
ಇನ್ನು ಈ ಮತಾಂತರವನ್ನು ನಿಯಂತ್ರಿಸುವ ಮಾತನಾಡಿದರಷ್ಟೇ ಸಾಕು, ನಮ್ಮಲ್ಲಿ ಕಡ್ಡಿ ಅಲ್ಲಾಡಿಸುವ ಅಯೋಗ್ಯರು ಎದ್ದು ನಿಲ್ಲುತ್ತಾರೆ. ಮೊನ್ನೆ ಗೂಳಿಹಟ್ಟಿಶೇಖರ್‌ರನ್ನು ಸಂತೈಸಲು ಸರಕಾರ ಮುಂದಾದಾಗ ಜಾರ್ಜ್ ನಂಥ ಮಹಾಶಯ ಜಾಗೃತನಾಗುತ್ತಾನೆ. ನಂತರದಲ್ಲಿ ಡೋಂಗಿ ಜಾತ್ಯತೀತರ ಟ್ವೀಟ್ಸಮರವಾಗುತ್ತದೆ, ಒಬ್ಬರಾಗಿ ಬೀದಿಗೆ ಇಳಿಯುತ್ತಾರೆ, ಬಿಜೆಪಿಯಿಂದ ಹಿಡಿದು ಸಂಘ ಪರಿವಾರ, ಗೋಡ್ಸೆ, ಸಾವರ್ಕರ್, ಮೋದಿ, ಕೊನೆಗೆ ಬಡಪಾಯಿಬ್ರಾಹ್ಮಣರೂ ದೂಷಿತರಾಗುತ್ತಾರೆ. ಕ್ರಿಶ್ಚಿಯನ್ನರಿಗೆ ಭಾರತದಲ್ಲಿ ಉಳಿಗಾಲವಿಲ್ಲ ಎಂಬಂತೆ ಪ್ರತಿಬಿಂಬಿಸಿ ಇಡೀ ಬ್ರಹ್ಮಾಂಡಕ್ಕೆ ಮುಟ್ಟುವಂತೆ ಎದೆ ಬಡಿದು ಕೊಂಡು ದೇಶಕ್ಕೆ ಕಳಂಕ ತರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಆಗ ಸರಕಾರ ಅಲ್ಪಸಂಖ್ಯಾತರ ತಂಟೆಗೆ ಹೋಗುವುದಿಲ್ಲ ಎನ್ನುತ್ತದೆ.ಮಿಶನರಿ ಗಳು ಕೆಲದಿನಗಳು ಸುಮ್ಮನಿದ್ದು ಮುಗ್ಧ ಹಿಂದೂಗಳ ಬೇಟೆ ಮುಂದುವರೆಸುತ್ತದೆ.
ಹಿಂದೂಧರ್ಮ ರಕ್ಷಕರೆಂಬ ಮಠಾಽಶರುಗಳು,ಜಾತಿ ಸ್ವಾಮೀಜಿಗಳು ಮಾತ್ರ ತಮ್ಮ ಜಾತಿಯಲ್ಲಿ ಯಾರ‍್ಯಾರು ಮುಂದಿನ ಸಿಎಂ, ಮಿನಿಸ್ಟರ್ ಆಗ ಬೇಕೆಂದುತಪೋನಿರತರಾಗುತ್ತಾರೆ. ಆದ್ದರಿಂದ ನಮ್ಮ ದೇಶದ ಸಂವಿಧಾನ- ನ್ಯಾಯಾಂಗ- ಕಾನೂನು ವ್ಯವಸ್ಥೆಗಳು ಇನ್ನಾದರೂ ತಮ್ಮ ‘ವಿಶ್ವರೂಪ’ ತೋರಲಿ, ಈಮತಾಂತರ ಪಿಡುಗನ್ನು ಶಾಶ್ವತವಾಗಿ ಮಟ್ಟಹಾಕಲಿ.