ಬೆಂಗಳೂರಿನಲ್ಲಿ ಬರೀ ಸ್ಫೋಟಕ ಸುದ್ದಿ
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡರಾಜೇಂದ್ರಸಿಂಗ್ ಬಾಬು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದಶಕಗಳ ಹಿಂದೆ ಈ ಮಾತಿಗೆ ಚಿತ್ರಪ್ರೇಮಿಗಳಿಗೆ ರೋಮಾಂಚನಗೊಳಿಸುವ ತಾಕತ್ತು ಇತ್ತು. ಆದರೆ ಈಗ ಅದೇ ಮಾತು ಹೇಳಿದರೆ, ನಿರ್ದೇಶನ ಮಾಡ್ತಾರೆ, ಆದ್ರೆ ನಿಜವಾಗ್ಲೂ ಮಾಡ್ತಾರಾ, ಮಾಡಿದ್ರೆ ಕಂಪ್ಲೀಟ್ ಮಾಡ್ತಾರಾ, ಮಾಡಿದ್ರೆ ರಿಲೀಸ್ ಮಾಡ್ತಾರಾ ಅನ್ನೋ ಪ್ರಶ್ನೆ ಸಿನಿಪ್ರೇಮಿಗಳಿಗೆ ಬಂದರೆ ತಪ್ಪಿಲ್ಲ. ಯಾಕಂದ್ರೆ, ಸಿಂಗ್ ಬಾಬು ಅಭಿಮಾನಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಖುಷಿಪಡುವ ಅವಕಾಶ ವನ್ನೇ ಕೊಟ್ಟಿಲ್ಲ.
ಕುರಿ, ಕೋತಿ, ಕತ್ತೆಗಳ ನಂತರ ಸಿಂಗ್ ಬಾಬು ಅವರಿಗೆ ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲಾಗಿಲ್ಲ. ತಮ್ಮ ಪುತ್ರ ಆದಿತ್ಯ ಅವರೊಂದಿಗೆ ಒಂದಷ್ಟು ಪ್ರಯತ್ನ ಮಾಡಿದರೂ ಅದಾವುದೂ ಹಿಡಿಯಲಿಲ್ಲ. ಜತೆಗೆ ಉಪೇಂದ್ರ ಮತ್ತು ರಮ್ಯಾ ಅವರಿದ್ದ ಭೀಮೂಸ್ ಬ್ಯಾಂಗ್ ಬ್ಯಾಂಗ್ ಅನ್ನೋ ಸಿನಿಮಾ ಮುಗಿದಿದ್ದರೂ ಬಿಡುಗಡೆ ಮಾಡಿದ್ರೆ ಲಾಸ್ ಆಗುತ್ತೆ ಅನ್ನೋ ವಿಚಿತ್ರ ಕಾರಣಕ್ಕೆ ಡಬ್ಬಾ ಸೇರಿಕೊಂಡಿದೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಅಂದಿನ ಕಾಲದ ಸಿಂಗ್ ಬಾಬು ಅವರ ನಿರ್ದೇಶನದ ಝಲಕ್ ಸಿನಿಪ್ರಿಯರಿಗೆ ಕಾಣಿಸುತ್ತಿಲ್ಲ.
ಹಾಗಂತ ಬಾಬುಲ್ ಆಗಿದ್ದಾರೆ ಎಂದರ್ಥ ಅಲ್ಲ. ಆದರೆ ಅವರ ಕಾನ್ಸೆಪ್ಟ್ ಗಳು ಇಂದಿನ ಪೀಳಿಗೆಯ ಚಿತ್ರಗಳಿಗೆ ಮ್ಯಾಚ್ ಆಗುತ್ತಿಲ್ಲ. ಸುನೀಲ್ ಕುಮಾರ್ ದೇಸಾಯಿ ಸೇರಿದಂತೆ ಅನೇಕ ಹಿರಿಯ ನಿರ್ದೇಶಕರು ಎದುರಿಸು ತ್ತಿರೋ ಸವಾಲು ಇದು. ಇಂಥ ಸಂದರ್ಭದಲ್ಲಿ ಈಗ ಸಿಂಗ್ ಬಾಬು ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಬಂದಿದೆ. ಆದರೆ ಈ ಸುದ್ದಿಗೆ ತೂಕ ಬಂದಿರೋದು ಸಿನಿಮಾದ ಹೆಸರು ಬಂಧನ2ಅನ್ನೋ ಕಾರಣಕ್ಕಾಗಿ. ತಮ್ಮ ಯಶಸ್ವೀ ಚಿತ್ರ ಬಂಧನದ ಮುಂದುವರಿದ ಭಾಗವನ್ನು ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಎಲ್ಲರೂ ರೋಮಾಂಚಿತರಾಗಿದ್ದಾರೆ.
ಆದರೆ ಅದೇ ಸಮಯದಲ್ಲಿ ಈ ಚಿತ್ರದ ನಾಯಕ ನಟ ಆದಿತ್ಯ ಅನ್ನೋ ಮಾತು ಕೇಳಿ ಕೊಂಚ ಗೊಂದಲ ದಲ್ಲಿದ್ದಾರೆ. ಇಂಥ ಸಿನಿಮಾ ಮಾಸ್ ಇಮೇಜ್ ಇರೋ ಆದಿತ್ಯ ಅವರಿಗೆ ಸೂಟ್ ಆಗುತ್ತಾ ಅಂತ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಸುಹಾಸಿನಿ, ಜೈಜಗದೀಶ್ ಇರುತ್ತಾರಂತೆ. ಚಿತ್ರದ ಕತೆಯ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಚಿತ್ರ ಅನೌನ್ಸ್ ಆಗಿರೋದನ್ನ ನೋಡಿ ಕೆಲವರು ಸಿಂಗ್ ಬಾಬು ಹೊಸ ಚಿತ್ರ ಬರ್ತಾ ಇದೆ. ಅದೂ ಬಂಧನ2ಅಂತ ಥ್ರಿಲ್ ಆಗಿದ್ದರೆ, ಇನ್ನು ಕೆಲವರು, ಹೌದಾ, ಮಾಡಿ ರಿಲೀಸ್ ಮಾಡ್ಲಿ, ಆಮೇಲೆ ಮಾತಾಡೋಣ ಅನ್ನೋ ವೈರಾಗ್ಯವನ್ನೂ ತೋರಿಸುತ್ತಿರೋದು ಸುಳ್ಳಲ್ಲ.
ಲೂಸ್ ಟಾಕ್ಬಸವರಾಜ ಬೊಮ್ಮಾಯಿ (ಕಾಲ್ಪನಿಕ ಸಂದರ್ಶನ)
ಏನ್ ಸಾರ್ ಇದು, ಬೆಂಗಳೂರಲ್ಲಿ ಯಾಕೋ ಬರೀ ಸಿಲಿಂಡರ್ರ‍ು, ಅದು, ಇದು ಅಂತ ಬರೀ ಬ್ಲ್ಯಾಸ್ಟ್ ಆಗೋ ದುರ್ಘಟನೆಗಳೇ ನಡೀತಾ ಇವೆಯಲ್ಲ?-ಬ್ಲ್ಯಾಸ್ಟಾ? ಯಾವಾಗ, ಎಲ್ಲಿ? ಯಾರ್ ಮಾಡಿದ್ದು ?
ಏನ್ ಸಾರ್ ರಾಜ್ಯದ ಮುಖ್ಯಮಂತ್ರಿ ಆಗಿ ನಿಮಗೇ ಈ ವಿಷಯ ಗೊತ್ತಿಲ್ಲ ಅಂದ್ರೆ ಹೇಗೆ, ಟಿವಿ ಚಾನೆಲ್ ಗಳಲ್ಲಿ ಒಂದ್ ವಾರದಿಂದ ಸುದ್ದಿ ಬರ್ತಾ ಇದೆಯಲ್ಲ,ಅದನ್ನೂ ನೋಡ್ಲಿಲ್ವಾ?-ನೋಡ್ದೆ ಕಣ್ರೀ. ಆದ್ರೆ ಅವ್ರು ಎಲ್ಲದಕ್ಕೂ ‘ಸ್ಫೋಟಕ ಸುದ್ದಿ’ ಅಂತಿರ್ತಾರೆ. ಇದೂ ಅಂಥದ್ದೇ ಯಾವ್ದೋ ಕೆಲಸಕ್ಕೆ ಬಾರದ ವಿಷ್ಯ ಅಂದ್ಕೊತಾ ಇದ್ದೆ. ಅಷ್ಟರಲ್ಲಿನಮ್ಮನೆಯವರು ರಿಮೋಟ್ ತಗೊಂಡು ಚಾನೆಲ್ ಚೇಂಜ್ ಮಾಡ್ಬಿಟ್ರು.
ನಿಮ್ ರಿಮೋಟ್ ಯಡಿಯೂರಪ್ಪ ಅವ್ರ ಹತ್ರ ಐತೆ ಅಂತ ಎಲ್ರೂ ಹೇಳ್ತಿದ್ರು, ಈಗ ನಿದ್ರೆ ನಿಮ್ಮನೆಯವರತ್ರ ಇದೆ ಇನ್ಸುತ್ತೆ.
-ರೀ, ಎಲ್ಲದಕ್ಕೂ ರಾಜಕಾರಣ ತರ್ತೀರಲ್ರೀ..ನಾನೇಳಿದ್ದು ಆ ರಿಮೋಟ್ ಅಲ್ಲ. ನಾನು ಯಾರ ಮಾತನ್ನೂ ಕೇಳಲ್ಲ. ನನಗನ್ನಿಸಿದ ಹಾಗೇ ಆಡಳಿತ ಮಾಡ್ತೀನಿ.ರಾಜ್ಯದ ಎಂಥಹ ರಿಮೋಟ್ ಹಳ್ಳಿಗೆ ಬೇಕಾದ್ರೂ ಹೋಗಿ ಕೇಳಿ. ಸಿಎಂ ಯಾರು ಅಂತ. ನನ್ನೆಸರೇ ಹೇಳ್ತಾರೆ.
ಸರಿ, ವಿರಾಟ್ ಕೊಹ್ಲಿ ಟಿ 20 ಕ್ರಿಕೆಟ್ ಮತ್ತು ಆರ್‌ಸಿಬಿ ಕ್ಯಾಪ್ಟನ್ಸಿಗೆ ರಾಜೀನಾಮೆಕೊಟ್ಟಿದ್ದರ ಬಗ್ಗೆ ನಿಮ್ಮ ಅಭಿಪ್ರಾಯ?-ರೀ, ನಾನಿನ್ನೂ ಮೊನ್ನೆ ಮೊನ್ನೆ ಅಧಿಕಾರ ಸ್ವೀಕಾರ ಮಾಡಿದೀನಿ, ಆಗ್ಲೇ ರಾಜೀನಾಮೆ ಮಾತಾಡ್ತೀರಾ ನನ್ನತ್ರ?
ಅಯ್ಯೋ, ಏನ್ ಹೇಳಿದ್ರೂ ತಪ್ ತಿಳ್ಕೊತೀರಾ ಸರ್ ನೀವು, ಹೋಗ್ಲಿ, ನೀವುಮುಖ್ಯಮಂತ್ರಿ ಆದ್ಮೇಲೂ ಬೆಂಗಳೂರಲ್ಲಿ ನಿಮ್ಮ ಫ್ಲೆಕ್ಸ್ ಗಳು ಜಾಸ್ತಿ ಕಾಣಿಸ್ತಾಇಲ್ವಲ್ಲ?– ಫ್ಲೆಕ್ಸ್ ಹಾಕಬಾರದು ಅಂತ ರೂಲ್ ಮಾಡಿ ನಾವೇ ಬ್ರೇಕ್ ಮಾಡಿದ್ರೆ ಹೆಂಗೆ. ಮುಖ್ಯಮಂತ್ರಿ ಆಗ್ಲಿ, ಯಾರೇ ಆಗ್ಲಿ, ಸರಕಾರಿ ರೂಲ್ ಗಳು ಫ್ಲೆಕ್ಸಿಬಲ್ ಅಲ್ಲ.ಗೊತ್ತಾಯ್ತಾ ?
ನೆಟ್ ಪಿಕ್ಸ್ಖೇಮು ಒಂದು ಹುಡುಗೀನ ತುಂಬಾ ಲವ್ ಮಾಡ್ತಾ ಇದ್ದ. ಆದರೆ ಆ ಹುಡುಗಿ ಇವನನ್ನು ಇಷ್ಟ ಪಡ್ತಾ ಇರಲಿಲ್ಲ. ತುಂಬಾ ಪ್ರಯತ್ನಪಟ್ಟಮೇಲೂ ಹುಡುಗಿಖೇಮುವನ್ನು ಮದುವೆ ಆಗಲು ಒಪ್ಪಲಿಲ್ಲ. ಖೇಮುಗೆ ಅತಿ ದೊಡ್ಡ ನಿರಾಸೆ ಆಗುವಂತೆ ಅವಳ ಮದುವೆ ಕೂಡ ಫಿಕ್ಸ್ ಆಯ್ತು. ಈಗ ಖೇಮು ತೀರಾ ನಿರಾಸೆ ಗೊಳಗಾದ. ಸ್ನೇಹಿತ ಸೋಮುವನ್ನು ಎಣ್ಣೆ ಹೊಡಿಬೇಕು ಬಾ ಅಂತ ಕರೆದು ತನ್ನ ಮನಸ್ಸಿನ ನೋವನ್ನೆಲ್ಲಾ ತೋಡಿಕೊಂಡ. ಅದಕ್ಕೆ ತುಂಬಾ ಯೋಚನೆ ಮಾಡಿದಸೋಮು, ನೋಡು ಒಂದ್ ಕೆಲ್ಸ ಮಾಡು, ಅವಳನ್ನು ಮದ್ವೆ ಆಗ್ತಾ ಇರೋ ಹುಡುಗನ ಹತ್ರ ಹೋಗಿ ನನಗೆ ಆ ಹುಡುಗಿ ಜೊತೆ ಅಫರ್ ಇತ್ತು ಅಂತ ಹೇಳು.ಆಗ ಮದುವೆ ಮುರಿದು ಬೀಳತ್ತೆ ಅಂದ. ಅವನು ಹೆಂಗ್ ನಂಬ್ತಾನೆ ಅಂತ ಕೇಳಿದ ಖೇಮು.
ಅದಕ್ಕೆ ಸೋಮು ಹೇಳಿದ, ನನ್ನ ಮೈ ಮೇಲೆ ಟೋಟಲ್6ಮಚ್ಚೆ ಇದೆ ಅಂತ ನನ್ ತಂಗಿ ಹತ್ರ ನಿನ್ ಹುಡುಗಿ ಹೇಳಿದ್ಳಂತೆ. ನೀನು ಸುಮ್ನೆ ಅವಳ ದೇಹದಲ್ಲಿಇಂಥ ಕಡೆ ಮಚ್ಚೆ ಇದೆ ಅಂತ ಮದುವೆ ಆಗೋ ಹುಡುಗನಿಗೆ ಹೇಳು. ಮದುವೆ ಮುರಿದು ಬೀಳುತ್ತೆ ಅಂತ ಹೇಳಿದ. ಸರಿ ಖೇಮು ಮರುದಿನ ಸೋಮು ಹೇಳಿದ ಪ್ಲ್ಯಾನ್ ವರ್ಕ್ ಔಟ್ ಮಾಡೋಕೆ ಹೋಗಿ ಸಪ್ಪೆ ಮೋರೆ ಹಾಕ್ಕೊಂಡು ಬಂದ. ಅವನನ್ನು ನೋಡಿದ ಸೋಮು ಏನಾಯ್ತೋ ಅಂತ ಕೇಳಿದ. ಅದಕ್ಕೆ ಖೇಮು ಹೇಳಿದ, ಇಲ್ಲಾ ಕಣೋ, ನಮ್ಮ ಪ್ಲ್ಯಾನ್ ವರ್ಕ್ ಔಟ್ ಆಗ್ಲಿಲ್ಲ.
ನಾನು ನೀನು ಹೇಳಿದ ಐಡಿಯಾ ಪ್ರಕಾರ ಹೇಳಿದ್ದಕ್ಕೆ, ಆ ಹುಡುಗ, ಅದಕ್ಕೇನಿವಾಗ? ಅಂತ ತುಂಬಾ ಕ್ಯಾಷುವಲ್ ಆಗಿ ಹೇಳಿಬಿಟ್ಟ. ವಾಪಸ್ಸು ಬಂದೆ. ಸರಿ ನೀನು ಏನಂತ ಹೇಳಿದೆ? ಅಂತ ಸೋಮು ಕೇಳಿದ. ಅದಕ್ಕೆ ಖೇಮುವಿನಿಂದ ಉತ್ತರ ಬಂತು. ‘ನಾನ್ ಒಂದ್ ಮಾತು ಹೇಳ್ತೀನಿ. ಇದಕ್ಕೇನರ್ಥ ಅಂತ ನೀನೇ ಡಿಸೈಡ್ ಮಾಡು. ನೀನು ಮದ್ವೆ ಆಗ್ತಾ ಇರೋ ಹುಡುಗಿಯ ಎಡಗೆನ್ನೆಯ ಮೇಲೆ ಒಂದು ಮಚ್ಚೆ ಇದೆ, ಅಂತ ಹೇಳಿದೆ’.
ಲೈನ್ ಮ್ಯಾನ್ಮಳೆ ಬಂದಾಗ ನೆನಪಾಗುವ ಹಾಡಿನ ಧಾಟಿ-ವರುಣ ರಾಗಮೂರೊತ್ತೂ ನಾನ್ ವೆಜ್ ತಿನ್ನುವವನದು-ಪೀಸ್ ಪುಲ್ ಲೈಫ್ಯಾವುದಕ್ಕೂಇರಲಿ ಅಂತ ಇಟ್ಟುಕೊಳ್ಳುವ ಒಂದು ಜೊತೆ ಎಕ್ಸ್ಟ್ರಾ ಚಪ್ಪಲಿ-‘ಸ್ಟೆಪ್’ ಣಿಆರ್ ಸಿ ಬಿ ಅಭಿಮಾನಿಗೆ ಚೆಸ್ ಆಡುವಾಗ ಕಾಯಿ ಆಯ್ದುಕೊಳ್ಳುವ ಅವಕಾಶಕೊಟ್ರೆ ಏನಂತಾನೆ?-ಈ ಸಲ ‘ಕಪ್ಪು’ ನಂದೇಮಾಡುವ ಕೆಲಸಕ್ಕೆ ತಕ್ಕ ಹಾಗೆ ಬಾಯಿಗೆ ಬರುವ‘ಪ್ರೊಫೆಷನಲ್’ ಬೈಗುಳಗಳು-ಅಡುಗೆ ಭಟ್ಟ:ನನ್ನತ್ರ ನಿನ್ ಬೇಳೆ ಬೇಯೋಲ್ಲ-ಮೇಷ್ಟ್ರು: ಇವತ್ ನಿಂಗೆ ಸರಿಯಾಗಿ ಪಾಠ ಕಲಿಸ್ತೀನಿ-ಡಾಕ್ಟರ್: ನಿಂಗೇನ್ ಬಂದಿರೋದು, ದೊಡ್ ರೋಗ-ಸಾಹಿತಿ: ಬರ್ಕೊಡ್ತೀನಿ, ನೀನ್ ಉದ್ಧಾರ ಆಗಲ್ಲ-ಪೋಸ್ಟ್ ಮನ್: ನನ್ ತಂಟೆಗ್ ಬಂದ್ರೆ ಅಡ್ರೆಸ್ಗಿಲ್ದಂಗ್ ಹೋಗ್ಬಿಡ್ತೀಯಾ-ಪೊಲೀಸ್: ಅವ್ರ್ ಬಿಡಿ ಹಂಗ್ ಬೇಕಾದ್ರೂ ಬಯ್ಯಬಹುದು. ಅವ್ರನ್ನಹೇಳೋರಿಲ್ಲ, ಕೇಳೋರಿಲ್ಲ.ಹುಡುಗನಿಗೆ ಬಂದಿರುವ ಲವ್ ಫೀವರ್ ಗೆ ಕನ್ನಡದಲ್ಲಿ ಏನಂತಾರೆ?‘ಹಕ್ಕಿ’ ಜ್ವರಮೋದಿ ಮತ್ತೆ ಫಾರಿನ್ ಟ್ರಿಪ್ ಶುರು ಮಾಡಿದ್ದಾರಂತೆ-ರೊಟೀನ್ ವಿಷಯಗಳ ಬಗ್ಗೆ ಎಲ್ಲ, ಯಾರ್ ಕಾಮೆಂಟ್ ಮಾಡ್ತಾರೆ ಹೋಗ್ರೀ.ಮುತ್ತು ಕೊಟ್ಟಿದ್ದಕ್ಕೆ ದುಡ್ಡು ಕೇಳಿದರೆ ಅದು-‘ತುಟಿ’ ಭತ್ಯೆಹಾಫ್ ಮರ್ಡರ್ ಮತ್ತು ಪುಲ್ ಮರ್ಡರ್ ಗೆ ಕನ್ನಡ ವ್ಯಾಕರಣ ಸೇರಿದ್ರೆ ಏನಾಗುತ್ತೆಅಲ್ಪ ಪ್ರಾಣ, ಮಹಾಪ್ರಾಣ