ಪ್ರವಾಸೋದ್ಯಮ ಮತ್ತು ಸರ್ವಾವೃತ ಅಭಿವೃದ್ದಿ
ಅಭಿಪ್ರಾಯ
ಡಾ.ಶ್ರೀನಿವಾಸ ಮೂರ್ತಿ ಬಿ.ವಿ
@.
ನಮ್ಮ ಬದುಕಿಗೊಂದು ಗುರಿ ಇರಬೇಕು,ಸಾಧಿಸುವಛಲವಿರಬೇಕು, ಸಾರ್ಥಕತೆಯ ಹಾದಿಯಲ್ಲಿ ಕಲಿಕೆಯು ನಿರಂತರವಾಗಿರಬೇಕು, ಬದುಕಿನ ಅನ್ವೇಷಣೆಯಲ್ಲಿ ಪ್ರವಾಸಗಳು ಅಮೂಲ್ಯ, ಪ್ರವಾಸದ ಅನುಭವಗಳು, ವಿಷಯಗಳು, ಜ್ಞಾನಾರ್ಜನೆಗೆ ದಾರಿ, ಮನಸಿಗೆ ಚೇತೋಹಾರಿ, ಹಾಗಾಗಿ ಬದುಕಿಗೊಂದು ಅರ್ಥ ಕಟ್ಟಿಕೊಡುವ ದಿಸೆಯಲ್ಲಿ ಇದರ ಪಾತ್ರ ಅನನ್ಯದಿ.
ಒಂದು ಕಾಲವಿತ್ತು ಪ್ರವಾಸವೆಂದರೆ ಕೇವಲ ಧಾರ್ಮಿಕ ಸ್ಥಳಗಳಿಗೆ ಭೇಟಿ, ತೀರ್ಥಯಾತ್ರೆ ಎನ್ನುವುದಾಗಿತ್ತು. ಅದರ ವ್ಯಾಪ್ತಿ ತುಂಬಾ ಸೀಮಿತ ವಾಗಿತ್ತು. ಆದರೆ ಇಂದು ಪ್ರಾದೇಶಿಕ ವ್ಯಾಪ್ತಿ ಮೀರಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಹರಡಿ ಒಂದು ಉದ್ಯಮವಾಗಿದೆ. ವಿಶ್ವದ ಜಿಡಿಪಿಗೆ ಶೇ.10.4 ಹಾಗೂ ಉದ್ಯೋಗ ಸೃಷ್ಟಿ ಯಲ್ಲಿ 272 ಮಿಲಿಯನ್ ಕೊಡುಗೆ ನೀಡುತ್ತಿದೆ. ಜಗತ್ತಿನಲ್ಲಿ 10 ಹೊಸ ಉದ್ಯೋಗ ಸೃಷ್ಟಿಯಾದರೆ ಒಂದು ಉದ್ಯೋಗ ಈ ಕ್ಷೇತ್ರದ ಕೊಡುಗೆ. ಥೈಲ್ಯಾಂಡಿನ ಪುಟ್ಟ ದ್ವೀಪ ಪುಕೇತ್ ವಿಸ್ತೀರ್ಣ ಕೇವಲ 576 ಚ.ಕಿ.ಮಿ ಆಕರ್ಷಕ ಸಮುದ್ರ ಕಿನಾರೆ ಬೆಟ್ಟಗುಡ್ಡ ಗಳನ್ನು ಒಳಗೊಂಡ ಪ್ರದೇಶ ಅಲ್ಲಿ ಆಹಾರ ವಿಹಾರ ಮೋಜಿಗೆ ಪ್ರಾಮುಖ್ಯತೆ ಇರುವುದು.
ಅಲ್ಲಿನ ಅರ್ಧದಷ್ಟು ಜನ ಪ್ರವಾಸೋದ್ಯಮದಲ್ಲಿ ತೊಡಗಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಭಾರತದಲ್ಲಿ 1990 ನಂತರ ಈ ಉದ್ಯಮ ಕ್ಷಿಪ್ರವಾಗಿ ಬೆಳೆಯುತ್ತಿದೆ, ಸರಕಾರದ ಉದ್ಯಮ ಸ್ನೇಹಿ ನೀತಿ, ಮಾಹಿತಿ ತಂತ್ರಜ್ಞಾನದದ ಪ್ರಗತಿ, ಸರ್ವಕಾಲದಲ್ಲೂ ಭೇಟಿ ನೀಡುವ ವೈವಿಧ್ಯಮಯ ಪ್ರವಾಸಿ ತಾಣಗಳುಮೂಲಭೂತ ಸೌಕರ್ಯಗಳದ ಪ್ರಗತಿ ಇಂದಾಗಿ ದೇಶಿಯ ಮತ್ತು ವಿದೇಶಿ ಪ್ರವಾಸಿಗರನ್ನು ಕೈಬೀಸಿ ಕರೆದುದರ ಪರಿಣಾಮ ಒಟ್ಟು 2020ರಲ್ಲಿ 212.9 ಡಾಲರ್‌ಆಗಿದ್ದು 2021ರ ಹೊತ್ತಿಗೆ 512 ಬಿಲಿಯನ್ ಡಾಲರ್‌ಗಳಾಗಬುದೆಂದು ಅಂದಾಜಿಸಲಾಗಿದೆ.
ಈ ಕ್ಷೇತ್ರದ ಬೆಳವಣಿಗೆಯ ದರ 2019 ರಿಂದ 2028 ವರೆಗೆ ಶೇ 10ರಷ್ಟುಅಧಿಕವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಉದ್ಯೋಗ ಕ್ಷೇತ್ರದಲ್ಲಿ 21.8 ಮಿಲಿಯನ್ ಉದ್ಯೋಗ ಸೃಷ್ಟಿ ಯಾಗಿ ಒಟ್ಟು ಉದ್ಯೋಗದಲ್ಲಿ ಶೇ.7.3ರಷ್ಟು ಕೊಡುಗೆ ನೀಡುತ್ತಿದೆ. ಇಷ್ಟೆ ಕೊಡುಗೆ ನೀಡುತ್ತಿರುವ ಪ್ರವಾಸೋದ್ಯಮ ಕಳೆದ ಎರಡು ವರ್ಷಗಳಿಂದ ಸ್ವಲ್ಪ ಪ್ರಮಾಣದ ಹಿನ್ನಡೆಯಾಗಿದೆ ನಿಜ. ಆದರೆ ಈ ಉದ್ಯಮದ ಆಳ ಅಗಲದ ವ್ಯಾಪ್ತಿ ಮಾತ್ರ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ಹಾಗಾಗಿ ಇದನು ಹೊಸ ದೃಷ್ಟಿ ಕೋನದಿಂದ ನೋಡಬೇಕಿದೆ.
ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಪಂಡಿತರು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬನು ಭಾಗಿಯಾಗಿ ಅದರ ಫಲವನ್ನು ಪಡೆಯಬೇಕೆಂದು ಆರ್ಥಿಕ ಅಭಿವೃದ್ಧಿ ಮಾಡೆಲ್ಮಂಡಿಸಿದ್ದಾರೆ. ಅದುವೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ. ಈ ಮಾಡೆಲ್ ಅನುಷ್ಠಾನ ಹೇಗೆ ಮಾಡಬೇಕೆಂಬ ಬಗ್ಗೆ ಅರ್ಥ ಶಾಸ್ತ್ರಜ್ಞರಲ್ಲಿ ಸಾಕಷ್ಟು ಜಿಜ್ಞಾಸೆ ಗಳಿವೆ. ಇಂತಹ ಸಂದರ್ಭದಲ್ಲಿ ಪ್ರವಾಸೋದ್ಯಮ ದಲ್ಲಿ ಎಲ್ಲರ ಒಳಗೊಂಡ ಅಭಿವೃದ್ಧಿ ಎಂಬ ಹೊಸ ಚಿಂತನೆ ಪ್ರಾರಂಭವಾಗಿದೆ. ಅದುವೆ    . ಈ ದಿಸೆಯಲ್ಲಿ ಕೇಂದ್ರ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ವಿದೇಶಿ ಪ್ರವಾಸಿಗರಿಗೆ ನೀಡುವ ವೀಸಾವನ್ನು ಶೇ.23.6 ಹೆಚ್ಚಿಸಲಾಗಿದೆ. ಸ್ವದೇಶಿ ದರ್ಶನ ಯೋಜನೆ ಮೂಲಕ ಸುಮಾರು 77 ಪ್ರಾಜೆಕ್ಟ್ಗಳಿಗೆ ಸುಮಾರು 6,35,70 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಭೌಗೋಳಿಕ ವ್ಯಾಪ್ತಿ ಬಗ್ಗೆ ತಿಳಿದುಕೊಳ್ಳಲು ಹಾಗೂ ಆತಿಥ್ಯ ಅಭಿವೃದ್ಧಿಗಾಗಿನಿಧಿಪೋರ್ಟಲ್ಪ್ರಾರಂಭಿಸಲಾಗಿದ್ದು, 34399 ವಸತಿಗೃಹಗಳು ನೋಂದಣಿಯಾಗಿದೆ. ಇದರೊಂದಿಗೆ ಅತಿಥಿ ದೇವೋಭವ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ. ಭಾರತದದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿದ್ದು ಇದರ ಫಲಾನುಭವಿ ಇದರ ಉಪಯೋಗ ಪಡೆಯಬೇಕಿದೆ. ಹಾಗಾದಾಗ ಮಾತ್ರ ಪ್ರವಾಸೋದ್ಯಮದ ಮೂಲಕ ಆರ್ಥಿಕ ಮತ್ತು ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿಯಾಗಿ ಎಲ್ಲರ ಒಳಗೊಂಡ ಅಭಿವೃದ್ಧಿಯನ್ನು ಸಾಧಿಸಬಹುದು.