ಗುಂಡಿಗಳ ಮಧ್ಯದ ರಸ್ತೆಗೆ ಟೋಲ್ ಎಂಬ ಶೃಂಗಾರ
ಪ್ರಚಲಿಕ
ವಿನಾಯಕ ಭಟ್ಟ
.@.
ಯಾವುದೇ ದೇಶದ ಮೂಲ ಸೌಕರ್ಯ ಅನ್ನುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ರಸ್ತೆಗಳು. ದೇಶದ ರಸ್ತೆಗಳ ಸ್ಥಿತಿ, ದೇಶದ ಆರ್ಥಿಕ ಸ್ಥಿತಿಯ ಮೇಲೂ ಗಂಭೀರವಾದ ಪರಿಣಾಮಗಳನ್ನು ಬೀರಬಲ್ಲುದು ಅನ್ನುವುದು ಗೊತ್ತೇ ಇದೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ದೇಶದ ರಾಷ್ಟ್ರೀಯ ಹೆದ್ದಾರಿಗಳ ಉನ್ನತೀ ಕರಣ ನಡೆದೇ ಇದೆ.
ದಿನಕ್ಕೆ ಅದೆಷ್ಟೋ ಕಿಲೋ ಮೀಟರ್ ರಸ್ತೆಗಳು ಆಗುತ್ತಿವೆ ಅನ್ನುವ ಸುದ್ದಿಗಳನ್ನೂ ಅವಾಗವಾಗ ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಒಳ್ಳೆಯದೇ. ರಸ್ತೆಗೆ ವಿನಿಯೋಗಿಸುತ್ತಿರುವ ಬಹಳಷ್ಟು ಹಣವನ್ನು ಟೋಲ್ ರೂಪದಲ್ಲಿ ಆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಂದಲೇ ವಸೂಲಿ (ಗಮನಿಸಿ- ಪಡೆಯುವುದಲ್ಲ!!) ಮಾಡುವುದೂ ಕೂಡ ಸಾಮಾನ್ಯ ಆಗಿ ಬಿಟ್ಟಿದೆ. ಈಗಂತೂ ತಂತ್ರಜ್ಞಾನ ಆಧಾರಿತ ಫಾಸ್ಟ್ ಟ್ಯಾಗ್ ಗಳು ಟೋಲ್ ವಸೂಲಿಗೆ ಸುಲಭದ ಮಾರ್ಗವನ್ನು ತಂದು ಕೊಟ್ಟಿದೆ. ಆದರೆ ಪ್ರಶ್ನೆ ಏಳುವುದು ಟೋಲ್ ವಸೂಲಿಯ ಬಗೆಗೆ ಅಲ್ಲ. ಆದರೆ, ಆ ಟೋಲ್ ಕೊಟ್ಟು ಓಡಾಡುವ ರಸ್ತೆಗಳ ಪರಿಸ್ಥಿತಿಯ ಬಗ್ಗೆ.
ಯಾವುದೇ ವ್ಯಾಪಾರ ಇರಲಿ, ಸೇವೆ ಇರಲಿ , ಅದರಲ್ಲಿ, ಹಣ ಕೊಡುವ ಗ್ರಾಹಕನಾದವನು ಪಡೆದುಕೊಳ್ಳುವ ವಸ್ತು ಅಥವಾ ಸೇವೆಯಲ್ಲಿ ಗುಣಮಟ್ಟವನ್ನು ಅಪೇ ಕ್ಷಿಸುವುದು ಹಕ್ಕು. ಅದೇ ಪ್ರಕಾರವಾಗಿ ಸೇವೆಯನ್ನು ಕೊಡುವುದು ವ್ಯಾಪಾರಿಯ ಕರ್ತವ್ಯ ಕೂಡ ಹೌದು. ಕೊಡುವ ಹಣಕ್ಕೆ ಬೇಕಾದ ವಸ್ತು ಅಥವಾ ಸೇವೆ ಗ್ರಾಹಕನ ತೃಪ್ತಿಗೆ ಅನುಗುಣವಾಗಿಯೇ ಇರಬೇಕು. ಆದರೆ, ನಮ್ಮ ಸರಕಾರ ಟೋಲ್ ಎನ್ನುವ ಶುಲ್ಕಕ್ಕೆ ಮೌಲ್ಯಯುತ ವಾದ ಈ ರಸ್ತೆ ವಸ್ಥೆ ಎಂಬ ಸೇವೆಯನ್ನು ಕೊಡುತ್ತಿದೆಯೇ ಎನ್ನುವ ಪ್ರಶ್ನಗೆ ಸಮಂಜಸವಾದ ಉತ್ತರ ಸಿಗುವು ದಿಲ್ಲ.
ಒಂದು ಚಿಕ್ಕ ಉದಾಹರಣೆಯನ್ನು ತೆಗೆದುಕೊಂಡರೆ, ಬೆಂಗಳೂರಿನಿಂದ ಕರ್ನಾಟಕದ ಉತ್ತರ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ (NH48). ಇಲ್ಲಿ ಅನೇಕಾನೇಕ ಟೋಲ್ ಬೂತ್‌ಗಳಿವೆ. ಬೆಂಗಳೂರಿನಿಂದ ಹುಬ್ಬಳ್ಳಿ ವರೆಗಿನ ದಾರಿಯಲ್ಲಿ ೫ಕ್ಕೂ ಹೆಚ್ಚು ಟೋಲ್ ಬೂತ್ ಗಳಿವೆ. ಒಟ್ಟಾರೆ ಕೊಡುವ ಟೋಲ್ ಶುಲ್ಕ ೪೦೦ಕ್ಕೂ ಹೆಚ್ಚು ರೂಪಾಯಿಗಳು. ಆದರೆ ರಸ್ತೆಯ ಕತೆ? ಒಟ್ಟಾರೆ ರಸ್ತೆಯ ಪ್ರತಿಶತ ಸುಮಾರು 50ಕ್ಕೂ ಹೆಚ್ಚು ದೂರಕ್ಕೆ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಅಲ್ಲೆಲ್ಲ ಬದಲಿ ರಸ್ತೆಯನ್ನು ಕೊಡಲಾಗಿದೆ. ಆ ಬದಲಿ ರಸ್ತೆಗಳಾದರೋ ದಯನೀಯ ಸ್ಥಿತಿ ಯಲ್ಲಿವೆ. ಅಷ್ಟೊಂದು ದುಡ್ಡು ಸುರಿದು ನಾವು ಓಡಾಡಬೇಕಿರುವುದು ಮಾತ್ರ ಗುಂಡಿ ತುಂಬಿದ ರಸೆಯಲ್ಲಿ. ಅಥವಾ ಗುಂಡಿಗಳ ಮಧ್ಯದಲ್ಲಿ ರಸ್ತೆಯನ್ನು ಹುಡುಕುತ್ತಾ ಸಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ರಸ್ತೆಯ ಕಾಮಗಾರಿ ಕನಿಷ್ಠ 3 ವರ್ಷಗಳಿಂದ ನಡೆಯುತ್ತಿದೆ.
ಈ ಮೂರೂ ವರ್ಷಗಳಲ್ಲಿ ಒಂದು ದಿನವೂ ಟೋಲ್ ತೆರದೆ ರಸ್ತೆಯಲ್ಲಿ ಓಡಾಡುವಂತಿಲ್ಲ. ಅಂದರೆ ಸರಕಾರದ ಭಾಗವಾಗಿಯೇ ಇರುವ ಈ ಟೋಲ್ ಬೂತ್‌ಗಳಲ್ಲಿ ಸುಲಿಯುವ ಹಣ, ಒಳ್ಳೆಯ ರಸ್ತೆಯದ್ದು ಆದರೆ, ನಮಗೆ ಸಿಗುತ್ತಿರುವುದು ಮಾತ್ರ ಗುಂಡಿಗಳ ಮಧ್ಯದಲ್ಲಿರುವ ರಸ್ತೆ. ಸೇವೆಗೆ ಕೊಡುತ್ತಿರುವುದು ಪೂರ್ತಿ ಹಣ, ಕೊಡುತ್ತಿರುವ ಸೇವೆ ಮಾತ್ರ ಅರ್ಧದಷ್ಟು!. ನಾವೆಲ್ಲಾ ಇದನ್ನ ಒಪ್ಪಿಕೊಂಡು ಬಿಟ್ಟಿದ್ದೇವೆ ಅನ್ನುವುದು ನಮ್ಮ ದುರಾದೃಷ್ಟ ಅನ್ನದೇ ವಿಧಿ ಇಲ್ಲ. ಇದು ಇಲ್ಲಿಯ ಮಾತಲ್ಲ, ದೇಶದ ಅದೆಷ್ಟೋ ಕಡೆ ಇದೇ ರೀತಿಯ ಪರಿಸ್ಥಿತಿ ಇರುವುದು ಸ್ಪಷ್ಟ. ಇಂಥದ್ದಕ್ಕೆಲ್ಲ ಸರಕಾರದ ಜಾಣ ಕುರುಡು ಎಂದೇ ಹೇಳಬೇಕಾಗುತ್ತದೆ.
ಇಂದಿನ ಜನರ ಧಾವಂತದ ಓಟದಲ್ಲಿ ಸರ್ಕಾರ ಸುಮ್ಮನೆ ಕೂತು ಇಂತ ಹಣ ಮಾಡುವುದರಲ್ಲಿ ಬ್ಯುಸಿ ಇರುವುದು ಖೇದಕರ. ನಿಜವಾಗಿ ವಿರೋಧ ಪಕ್ಷಗಳು ಇಂತಹ ವಿಷಯಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಹಾಳಾದ ರಸ್ತೆಗೆ ಪೂರ್ತಿ ಟೋಲ್ ಯಾಕೆ? ಅದು ರಚನಾತ್ಮಕ ವಿರೋಧ. ಜನರಿಗೆ ಹತ್ತಿರವಾಗುವ ವಿರೋಧ! ವಿರೋಧ ಪಕ್ಷಗಳು ಇಂತಹ ರಚನಾತ್ಮಕ ಹೋರಾಟಕ್ಕೆ ಇಳಿದಿದ್ದನ್ನು ಕಂಡೇ ಇಲ್ಲ. ಇಂಥದ್ದನ್ನೆಲ್ಲ ಬಿಟ್ಟು ಇಲ್ಲ ಸಲ್ಲದ ಜಾತಿ ಆಧಾರಿತ ರಾಜ ಕಾರಣದಲ್ಲೇ ಮುಳುಗಿ ಹೋಗಿದೆ. ಈ ರಸ್ತೆಯಲ್ಲಿ ಜನ ಸಾಮಾನ್ಯರು ದುಡ್ಡು ಕೊಟ್ಟು ಓಡಾಡುವುದರಿಂದ ಒಂದು ಸಂಘಟಿತ ಹೋರಾಟ ಆಗುವುದು ಶಕ್ಯ ಅಲ್ಲ ಅನ್ನುವುದು ಸರಕಾರಕ್ಕೂ ಗೊತ್ತಿದೆ. ಬಸ್ಸಿನಲ್ಲಿ ಓಡಾಡುವ ಜನ ಕೂಡ ಟಿಕೆಟ್‌ನ ದರದಲ್ಲಿ ಟೋಲ್ ಕೊಡುತ್ತಿದ್ದಾರೆ.
ಜನ ಸಾಮಾನ್ಯರ ದೃಷ್ಟಿಯಿಂದ ನೋಡಿದಾಗ, ರಸ್ತೆ ರಿಪೇರಿ ಮತ್ತು ಕೆಲಸ ನಡೆಯುತ್ತಿರುವ ಭಾಗಕ್ಕೆ ಟೋಲ್ ತೆಗೆದುಕೊಳ್ಳಬಾರದು. ಒಂದು ವೇಳೆ ಬೇಕೇ ಬೇಕು ಅಂತಿದ್ದರೆ , ಚೆನ್ನಾಗಿರುವ ರಸ್ತೆಯ ಭಾಗಕ್ಕೆ ಮಾತ್ರ ತೆಗೆದುಕೊಳ್ಳಲಿ. ಇಂಥ ಜನ ಸ್ನೇಹಿ ಕೆಲಸಗಳನ್ನ ಜನರು ಸರ್ಕಾರದಿಂದ ನಿರೀಕ್ಷೆ ಮಾಡುವುದು. ಇನ್ನಾದರೂ ಸಂಬಂಧಪಟ್ಟ ಅಽಕಾರಿಗಳು, ಜನ ಪ್ರತಿನಿಽಗಳು ಇದರ ಬಗ್ಗೆ ಗಮನ ಹರಿಸಬೇಕಿದೆ.