ಕೋವಿಡ್ ಮಧ್ಯೆ ಡೆಂಗ್ಯೂ ಅಟ್ಟಹಾಸ
ವೈದ್ಯ ವೈವಿಧ್ಯ
ಡಾ ಎಚ್ ಎಸ್ ಮೋಹನ್
@.
ಭಾರತದಲ್ಲಿ ಕೋವಿಡ್ ಕಾಯಿಲೆಯ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸಮಾಧಾನ ಪಟ್ಟು ಕೊಳ್ಳುವ ವೇಳೆಯಲ್ಲಿಯೇ ಮತ್ತೆ ಕೆಲವು ಕಾಯಿಲೆಗಳು ತಮ್ಮಇರುವಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಹೌದು, ಮಾನ್ಸೂನ್ ದಿನಗಳ ಈ ಸಂದರ್ಭದಲ್ಲಿ ಡೆಂಗ್ಯೂ ಹಾಗೂ ಇನ್ನೀತರ ವೈರಲ್ ಜ್ವರಗಳು ಗಮನಾರ್ಹವಾಗಿ ಜಾಸ್ತಿಯಾಗುತ್ತಿವೆ.
ಉತ್ತರ ಪ್ರದೇಶ, ದೆಹಲಿ, ಮಧ್ಯ ಪ್ರದೇಶ, ಪಂಜಾಬ್ ಮತ್ತು ತೆಲಂಗಾಣಗಳಲ್ಲಿ ಡೆಂಗ್ಯೂ ಜ್ವರದ ಹಾವಳಿ ಜಾಸ್ತಿಯಾಗುತ್ತಿದೆ. ಉತ್ತರ ಪ್ರದೇಶ ಒಂದರಲ್ಲೇ ಇತ್ತೀಚೆಗೆ 1200 ಕ್ಕೂ ಹೆಚ್ಚು ಡೆಂಗ್ಯೂ ಜ್ವರದ ಪ್ರಕರಣಗಳು ವರದಿಯಾಗಿದ್ದು ಅದರಲ್ಲಿ ಈಗಾಗಲೇ 90 ಜನರು ಅಸು ನೀಗಿದ್ದಾರೆ. ಮಕ್ಕಳು ಹೆಚ್ಚು ಕೋವಿಡ್ಕಾಯಿಲೆಗೆ ತುತ್ತಾಗು ವುದಿಲ್ಲ ಎಂದು ಡೆಂಗ್ಯೂ ಜ್ವರ ಮಕ್ಕಳನ್ನು ಹೈರಾಣಾಗಿಸಿದೆ.
ಉತ್ತರ ಪ್ರದೇಶದಲ್ಲಿ 2015 ರಿಂದಲೇ ಡೆಂಗ್ಯೂ ಜ್ವರದ ಪ್ರಕರಣಗಳು ಜಾಸ್ತಿಯಾಗುತ್ತಿವೆ. 2016 ಮತ್ತು 2019 ರಲ್ಲಿ 10000 ಕ್ಕೂ ಹೆಚ್ಚಿನ ರೋಗಿಗಳ ಸಂಖ್ಯೆ ದಾಖಲಾಗಿತ್ತು. ಈ ವರ್ಷ ಜುಲೈವರೆಗೆ 14000 ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು 4 ಜನರು ಮೃತಪಟ್ಟರು. ಆನಂತರ ಮತ್ತೆ 14044 ರೋಗಿ ಗಳಲ್ಲಿ ಇದು ಕಂಡು ಬಂದಿದ್ದು 2002 ರ ಸಂಖ್ಯೆಗೆ ಹೋಲಿಸಿದರೆ ಅದರ 7 ಪಟ್ಟು ಜಾಸ್ತಿಯಾಗಿದೆ.
ನಮ್ಮ ದೇಶದಲ್ಲಿನ ವಾತಾವರಣವು ಈ ಮಾನ್ಸೂನ್ ಅಥವಾ ಮಳೆಗಾಲದಿಂದ ತುಂಬಾ ಪ್ರಭಾವಿತವಾಗಿದೆ. ಹಾಗೆಯೇ ಜಗತ್ತಿನಾದ್ಯಂತ   ನಮ್ಮ ಮಾನ್ಸೂನ್ ರೀತಿಯನ್ನು ಪ್ರಭಾವ ಗೊಳಿಸುತ್ತದೆ . ಏಕಾಏಕಿ ಮಳೆಗಾಲ ಮತ್ತು ಉಷ್ಣದ ತರಂಗಗಳು ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ಹೆಚ್ಚಿಸುತ್ತವೆ. ಹಾಗೆಯೇ ಸ್ವಲ್ಪ ತಾಪಮಾನ ಜಾಸ್ತಿಯಾಗುವುದರಿಂದಲೂ ಸೊಳ್ಳೆಗಳು ಜಾಸ್ತಿಯಾಗುವುದನ್ನು ಹೆಚ್ಚಿಸಿ ಡೆಂಗ್ಯೂ ಹೆಚ್ಚಾಗಲು ಕಾರಣ ವಾಗುತ್ತದೆ. ಮುಖ್ಯವಾಗಿ ಡೆಂಗ್ಯೂ ಕಾಣಿಸಿಕೊಳ್ಳುವ ದೇಶಗಳೆಂದರೆ – ಬ್ರೆಜಿಲ್, ಮೆಕ್ಸಿಕೊ ಮತ್ತು ಭಾರತ.
ಒಂದು ಅಂದಾಜಿನ ಪ್ರಕಾರ ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಜನತೆ ( ಸುಮಾರು 3.5ಬಿಲಿಯನ್ ) ಡೆಂಗ್ಯೂ ಸೋಂಕು ಬರುವ ಸಾಧ್ಯತೆಯಲ್ಲೆ ಇದ್ದಾರೆ. ಆಗ ೧೦೦೦ ಜನ ವರ್ಷಂಪ್ರತಿ ಮರಣ ಹೊಂದುತ್ತಾರೆ. ಇದರಲ್ಲಿ 70% ಉಷ್ಣ ಪ್ರದೇಶದ ದೇಶಗಳಾದ ಬ್ರೆಜಿಲ್ ಮತ್ತು ಭಾರತದವರು. ಡೆಂಗ್ಯೂ ಜ್ವರ ತಮಗೆಲ್ಲಾ ತಿಳಿದಂತೆ ಸೊಳ್ಳೆಯಿಂದ ಬರುವ ಒಂದು ವೈರಸ್ ಕಾಯಿಲೆ. ಇತ್ತೀಚಿನ ದಿನಗಳಲ್ಲಿ ಜಗತ್ತಿನ ಹೆಚ್ಚಿನ ದೇಶಗಳಿಗೆ ಹಬ್ಬಿದೆ ಮತ್ತು ಅಲ್ಲೆಲಾ ತನ್ನ ಪ್ರತಾಪ ತೋರಿಸುತ್ತಿದೆ. ಈ ವೈರಸ್   ಜಾತಿಯ ಹೆಣ್ಣು ಸೊಳ್ಳೆಗಳಿಂದ ಹಬ್ಬುತ್ತದೆ.
ಕೆಲವೊಮ್ಮೆ   ಜಾತಿಯ ಸೊಳ್ಳೆಯಿಂದಲೂ ಹರಡಬಹುದು. ಈ ಸೊಳ್ಳೆಗಳು ಚಿಕುನ್ ಗುನ್ಯಾ, ಹಳದಿ ಜ್ವರ, ಝೀಕಾ ವೈರಸ್ ಕಾಯಿಲೆ ಗಳನ್ನೂ ಹರಡುತ್ತವೆ ಎಂಬುದು ಗಮನಾರ್ಹ ಅಂಶ. ಇದು ಉಷ್ಣವಲಯದ () ದೇಶಗಳಲ್ಲಿ ಎಲ್ಲಾ ಕಡೆ ಕಂಡುಬರುತ್ತವೆ. ಈ ಸೋಂಕಿನ ರಿಸ್ಕ್ ಸ್ಥಳೀಯ ಪ್ರದೇಶದ ಮಳೆ ಬೀಳುವ ಪ್ರಮಾಣ, ತಾಪಮಾನ, ಆ ಪ್ರದೇಶದಲ್ಲಿರುವ ತೇವಾಂಶ () ಹಾಗೂ ಯೋಜನೆ ಇಲ್ಲದ ಶೀಘ್ರ ಗತಿಯಲ್ಲಿನಡೆಯುತ್ತಿರುವ ನಗರೀಕರಣ (  ) – ಇಂತಹವುಗಳಲ್ಲಿ ರಿಸ್ಕ್ ಜಾಸ್ತಿ.
ಡೆಂಗ್ಯೂ ಹಲವು ರೀತಿಯ ಕಾಯಿಲೆ ತರಬಲ್ಲದು. ಸೋಂಕು ಪೀಡಿತರಲ್ಲಿ ಅತೀ ತೀವ್ರ ರೀತಿಯ – ರೀತಿಯ ಕಾಯಿಲೆಯನ್ನೂ ಉಂಟು ಮಾಡಬಹುದು. ಕಾಯಿಲೆ ಇದೆ ಎಂದು ಗೊತ್ತಾಗದ ರೀತಿಯ    ಕಾಯಿಲೆಯನ್ನೂ ತರಬಲ್ಲದು. ಇದರಲ್ಲಿ ದೇಹದಾದ್ಯಂತ ಅತೀವ ರಕ್ತಸ್ರಾವ, ಮುಖ್ಯ ಅಂಗಗಳಲ್ಲಿ ತೊಂದರೆ, ಹಾಗೆಯೇ   ಮುಖ್ಯವಾದದ್ದು. ಅಂದರೆ ರಕ್ತದಲ್ಲಿನ ಪ್ಲಾಸ್ಮಾ ಅಂಶ ತನ್ನ ಸ್ಥಳದಿಂದ ಹೊರಬಂದು ವಿವಿಧ ರೋಗಲಕ್ಷಣ ತರುತ್ತದೆ. ಈ ತೀವ್ರ ರೀತಿಯ ಡೆಂಗ್ಯೂವನ್ನು ಸರಿಯಾಗಿ ಚಿಕಿತ್ಸೆ ಮಾಡದಿದ್ದರೆ ಬೇಗ ಮರಣ ಉಂಟಾಗುತ್ತದೆ. ಈ ತೀವ್ರ ರೀತಿಯ ಡೆಂಗ್ಯೂ 1950ರ ದಶಕದಲ್ಲಿ ಫಿಲಿಪೈನ್ಸ್ ಮತ್ತು ಥೈಲ್ಯಾಂಡ್‌ಗಳಲ್ಲಿ ಸಾಂಕ್ರಾಮಿಕದ ರೀತಿ ಕಾಯಿಲೆ ಬಂದಾಗ ಮೊಟ್ಟಮೊದಲ ಬಾರಿಗೆ ಕಂಡು ಹಿಡಿಯಲ್ಪಟ್ಟಿತು.
ಈಗ ಈ ತೀವ್ರ ರೀತಿಯ ಡೆಂಗ್ಯೂ ( ) ಏಷಿಯಾದ ಮತ್ತು ಲ್ಯಾಟಿನ್ ಅಮೆರಿಕದ ಹಲವು ದೇಶಗಳಲ್ಲಿ ಕಂಡು ಬರುತ್ತದೆ. ಮಕ್ಕಳು ಹಾಗೂ ವಯಸ್ಕರು ಇಬ್ಬರಲ್ಲಿಯೂ ತೀವ್ರ ರೀತಿಯ ಡೆಂಗ್ಯೂ ಕಾಣಿಸಿಕೊಂಡಾಗ ಅವರಿಗೆ ಆಸ್ಪತ್ರೆಗೆ ಸೇರುವ ಅನಿವಾರ್ಯತೆ ಬರುತ್ತದೆ. ಹಾಗೆಯೇ ಮರಣ ಬರುವ ಸಾಧ್ಯತೆಯೂ ತುಂಬಾ ಜಾಸ್ತಿ. ಡೆಂಗ್ಯೂ ಕಾಯಿಲೆ-ವಿವಿರಿಡೆ () ಕುಟುಂಬದ ವೈರಸ್ ನಿಂದ ಬರುತ್ತದೆ. ಇದರಲ್ಲಿ ನಾಲ್ಕು ಮುಖ್ಯ ಸೀರೋ ಟೈಪ್ಸ್ ಅಂದರೆ ಪ್ರಭೇದಗಳಿವೆ. ಅಂಶವೆಂದರೆ  -1,  – 2, -3,  – 4. ಒಮ್ಮೆ ಸೋಂಕು ಬಂದು ಕಾಯಿಲೆ ಗುಣ ಆದ ಮೇಲೆ ಆನಿರ್ದಿಷ್ಟ ಸೀರೋ ಟೈಪ್‌ನ ವೈರಸ್‌ನಿಂದ ಮಾತ್ರ ಪ್ರತಿರೋಧ ಶಕ್ತಿ ಜೀವಮಾನ ಪಯಂತ ಇರುತ್ತದೆ.
ಉಳಿದ ೩ ಪ್ರಬೇಧಗಳು ಈತನಲ್ಲಿ ಕಾಯಿಲೆ ಉಂಟು ಮಾಡಬಹುದು. ಹಾಗೆಯೇ ತೀವ್ರ ರೀತಿಯ ಡೆಂಗ್ಯೂ ಕಾಯಿಲೆಯನ್ನೂ ತರಬಲ್ಲದು. ಉಷ್ಣ ಪ್ರದೇಶದ ದೇಶಗಳಲ್ಲಿ ಈ ನಾಲ್ಕೂ ರೀತಿಯ ವೈರಸ್‌ಗಳು ಇವೆ. ತಮಗೆಲ್ಲಾ ತಿಳಿದಿರುವಂತೆ ಮನುಷ್ಯನ ಆರೋಗ್ಯವು ದೇಶದ ಮತ್ತು ಪ್ರಪಂಚದ ಆರ್ಥಿಕತೆಯ ಮೇಲೆ ಬಹಳ ತೀವ್ರ ರೀತಿಯ ಪರಿಣಾಮ ಈ ಡೆಂಗ್ಯೂನಿಂದ ಇದೆ. ಇದು ಸೋಂಕು ಪೀಡಿತ ವ್ಯಕ್ತಿಗಳಿಂದ ಅವರು ಪ್ರಯಾಣಿಸುವಾಗ ಇತರ ವ್ಯಕ್ತಿಗಳಿಗೆ ಹರಡಬಲ್ಲದು.
ಡೆಂಗ್ಯೂವಿನ ಜಾಗತಿಕ ಹೊರೆ :ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಕಾಯಿಲೆ ಗಮನಾರ್ಹವಾಗಿ ಜಾಸ್ತಿಯಾಗಿದೆ. ಹೆಚ್ಚಿನ ಕಾಯಿಲೆಗಳು ಸಣ್ಣ ಪ್ರಮಾಣದಲ್ಲಿರುತ್ತವೆ.ಹೆಚ್ಚಿನ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ವೈದ್ಯರ ಅವಶ್ಯಕತೆಯೂ ಬೀಳು ವುದಿಲ್ಲ. ಹಾಗಾಗಿ ಕಾಯಿಲೆಯ ಸಂಖ್ಯೆ ನಿಜ ಸಂಖ್ಯೆ ಗಿಂತ ಕಡಿಮೆ ಇರುತ್ತದೆ. ಕೆಲವೊಮ್ಮೆ ಬೇರೆ ಜ್ವರ, ಕಾಯಿಲೆಗಳೆಂದು ತಪ್ಪು ಕಾಯಿಲೆ ಪತ್ತೆಯಾಗಿ ಇದರ ಸಂಖ್ಯೆ ಮತ್ತಷ್ಟು ಕಡಿಮೆ ಎಂದು ಕಾಣಲು ಕಾರಣವಾಗುತ್ತದೆ. ಒಂದು ಅಂದಾಜಿನ ಪ್ರಕಾರ ವರ್ಷದಲ್ಲಿ 390 ಮಿಲಿಯನ್ ಡೆಂಗ್ಯೂ ವೈರಸ್ ಸೋಂಕಾದರೆ ಅದರಲ್ಲಿ 90 ಮಿಲಿಯನ್ (67-136) ಸಂದರ್ಭಗಳಲ್ಲಿ ಕಾಯಿಲೆ ತನ್ನ ಲಕ್ಷಣ ತೋರಿಸಿ ತೀವ್ರ ಸ್ವರೂಪಕ್ಕೂ ತಿರುಗಬಹುದು.
ಇನ್ನೊಂದು ಅಧ್ಯಯನದ ಪ್ರಕಾರ ಜಗತ್ತಿನಾದ್ಯಂತ 3.9 ಮಿಲಿ ಯನ್ ಜನರು ಡೆಂಗ್ಯೂ ಸೋಂಕು ಬರುವ ಸಾಧ್ಯತೆ ಹೊಂದಿದ್ದಾರೆ. ಈ ಸೋಂಕಿನ ಸಾಧ್ಯತೆ ಜಗತ್ತಿನ 129 ದೇಶಗಳಲ್ಲಿ ಇದ್ದರೂ ಅದರಲ್ಲಿ ನಿಜವಾಗಿ ಸೋಂಕು ಬರುವ ದೇಶಗಳಲ್ಲಿ 70% ದೇಶಗಳು ನಮ್ಮ ಏಷ್ಯಾ ಖಂಡದಲ್ಲಿವೆ. ಕಳೆದ 2 ದಶಕಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ವರದಿಯಾಗುವ ಡೆಂಗ್ಯೂವಿನ ಪ್ರಮಾಣ 8 ಪಟ್ಟು ಜಾಸ್ತಿಯಾಗಿದೆ. 2000 ದಲ್ಲಿ 505,430 ರೋಗಿಗಳಲ್ಲಿ ಇದು ಕಾಣಿಸಿ ಕೊಂಡಿದ್ದರೆ 2010 ರಲ್ಲಿ 2.4 ಮಿಲಿಯನ್ ಜನರಲ್ಲಿ 2019 ರಲ್ಲಿ 5.2 ಮಿಲಿಯನ್ ಜನರಲ್ಲಿ ಕಾಣಿಸಿಕೊಂಡಿದೆ. 2000 ದಲ್ಲಿ ಮರಣದ ಸಂಖ್ಯೆ 960 ಇದ್ದದ್ದು 2015 ರಲ್ಲಿ 4032 ಆಗಿದೆ.
ಈ ರೀತಿ ರೋಗಿಗಳ ಸಂಖ್ಯೆ ಜಾಸ್ತಿಯಾಗಲು ಕಾರಣ ಎಂದರೆ ಡೆಂಗ್ಯೂವನ್ನು ತಮ್ಮ ದೇಶದ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡುವರಾಷ್ಟ್ರೀಯ ಪಾಲಿಸಿಗಳಲ್ಲಿ ಆದ ಬದಲಾವಣೆ. ಅಲ್ಲದೆ ಇದು ವಿವಿಧ ದೇಶಗಳ ಸರಕಾರಗಳಿಗೆ ಡೆಂಗ್ಯೂ ಕಾಯಿಲೆಯ ಹೊರೆ ಎಷ್ಟಿದೆ ಎಂದು ಎಚ್ಚರಿಸುತ್ತಲೂಇದೆ. ಹಾಗೆಂದು ಇದು ಸಂಪೂರ್ಣ ಅಂತಾರಾಷ್ಟ್ರೀಯ ಹೊರೆ ಇಷ್ಟೇ ಎಂದಲ್ಲ. ವಾಸ್ತವದಲ್ಲಿ ಅದು ಇನ್ನೂ ಜಾಸ್ತಿ ಇದೆ ಎಂದು ತಜ್ಞರ ಅಭಿಮತ.
ಕಾಯಿಲೆಯ ಲಕ್ಷಣಗಳು :ಇದು ಆರಂಭದಲ್ಲಿ – ಜ್ವರದಂತೆ ಆರಂಭವಾಗಿ ಜ್ವರದ ಲಕ್ಷಣಗಳು ತೀವ್ರವಾಗುತ್ತಾ ಹೋಗುತ್ತದೆ. ಆಗ ತಾನೇ ಹುಟ್ಟಿದ ಮಗು, ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವುದಲ್ಲದೇ ವಯಸ್ಕರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಸೋಂಕಿತ ಸೊಳ್ಳೆ ಕಚ್ಚಿ 4-10 ದಿನಗಳ ನಂತರ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು 2 ರಿಂದ 7 ದಿನಗಳವರೆಗೂ ಇರಬಹುದು. ವಿಶ್ವ ಆರೋಗ್ಯ ಸಂಸ್ಥೆಯು ಡೆಂಗ್ಯೂವನ್ನು ಎರಡು ರೀತಿಯಲ್ಲಿ ವಿಭಾಗ ಮಾಡುತ್ತದೆ. ಸಾಮಾನ್ಯ ಡೆಂಗ್ಯೂ (ಆರಂಭದ ಲಕ್ಷಣಗಳು ಇರಬಹುದು ಅಥವಾ ಇಲ್ಲದೇನೂ ಇರಬಹುದು) ಮತ್ತು ತೀವ್ರ ರೀತಿಯ ಡೆಂಗ್ಯೂ.
ಸಾಮಾನ್ಯ ಡೆಂಗ್ಯೂ :ತೀವ್ರ ರೀತಿಯ ಜ್ವರ ( 40°  / 104°  ) ಮತ್ತು ಈ ಕೆಳಗಿನ ಲಕ್ಷಣಗಳಲ್ಲಿ ಯಾವುದಾದರೂ 2 ಲಕ್ಷಣಗಳು ಇದ್ದರೆ ಡೆಂಗ್ಯೂವಿನ ಬಗ್ಗೆ ಸಂದೇಹಿಸಬೇಕು. – ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಸಂದು () ಮತ್ತು ಮಾಂಸಖಂಡಗಳಲ್ಲಿ ನೋವು, ವಾಂತಿ ಬರುವಪೂರ್ವ ಲಕ್ಷಣ, ವಾಂತಿಯಾಗುವುದು, ದೇಹದ ಹಲವೆಡೆ ಇರುವ ಹಾಲ್ರಸ ಗ್ರಂಥಿಗಳು ( ) ದಪ್ಪಗಾಗಿರುವುದು, ಚರ್ಮದಲ್ಲಿ ದದ್ದುಗಳು ().
ತೀವ್ರ ರೀತಿಯ ಡೆಂಗ್ಯೂ :ಮೇಲಿನ ಲಕ್ಷಣಗಳು ಕಾಣಿಸಿಕೊಂಡು 3-7 ದಿನಗಳ ನಂತರ ಅಪಾಯಕರ ಹಂತವನ್ನು ರೋಗಿ ತಲುಪುತ್ತಾನೆ. ಜ್ವರವು ಸ್ವಲ್ಪ ಮಟ್ಟಿಗೆ ಕಡಿಮೆಯಾದ ಹಾಗೆ (38°  / 100° ) ತೀವ್ರ ರೀತಿಯ. ಡೆಂಗ್ಯೂವಿನ ಅಪಾಯಕಾರಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ತೀವ್ರ ರೀತಿಯ ಡೆಂಗ್ಯೂ ಕೆಲವೊಮ್ಮೆ ಮರಣದಲ್ಲಿ ಕೊನೆಗೊಳ್ಳಬಹುದು. ಮುಖ್ಯ ಅಂಶಗಳೆಂದರೆ – ರಕ್ತದಲ್ಲಿರುವ ಪ್ಲಾಸ್ಮಾ ಭಾಗ ಸ್ರಾವವಾಗುವುದು (), ವಿವಿಧ ಸ್ಥಳಗಳಲ್ಲಿ ದ್ರವಗಳ ಶೇಖರಣೆ, ಉಸಿರಾಟದಲ್ಲಿ ತೊಂದರೆ, ತೀವ್ರ ರೀತಿಯ ರಕ್ತಸ್ರಾವ ಕಾಣಿಸಿಕೊಳ್ಳುವುದು, ಯಾವುದೋ ಅಂಗದಲ್ಲಿ ತೊಂದರೆ ಗೋಚರಿಸಬಹುದು.
ವೈದ್ಯರು ಗಮನಿಸುವ ಅಪಾಯಕಾರ ಲಕ್ಷಣಗಳೆಂದರೆ- ತೀವ್ರ ರೀತಿಯ ಹೊಟ್ಟೆ ನೋವು, ಎಡಬಿಡದೆ ಕಾಡುವ ವಾಂತಿ, ಉಸಿರಾಟದ ಗತಿ ತೀವ್ರಗೊಳ್ಳುವುದು, ಹಲ್ಲಿನ ಒಸಡಿನ ಭಾಗದಲ್ಲಿ ರಕ್ತಸ್ರಾವವಾಗುವುದು, ತೀವ್ರ ರೀತಿಯ ಸುಸ್ತು, ವ್ಯಕ್ತಿ ತೀವ್ರ ರೀತಿಯ ಚಡಪಡಿಕೆ ವ್ಯಕ್ತಪಡಿಸುತ್ತಾನೆ. ಈ ರೀತಿಯ ತೀವ್ರ ರೀತಿಯ ಲಕ್ಷಣ ಕಾಣಿಸಿಕೊಂಡಾಗ ಮುಂದಿನ 24 – 48 ಗಂಟೆಗಳು ವೈದ್ಯರು ತುಂಬಾ ಎಚ್ಚರಿಕೆಯಿಂದ ರೋಗಿಯನ್ನು ಗಮನಿಸಬೇಕು.
ರೋಗ ಪತ್ತೆ ಹಚ್ಚುವುದು ಹೇಗೆ ? :ವೈರಾಲಜಿ ಪರೀಕ್ಷೆ ಮತ್ತು ಸೀರಾಲಜಿ ಪರೀಕ್ಷೆಯಲ್ಲಿ ರೋಗದ ಬಗ್ಗೆ ದೃಢೀಕರಿಸಬಹುದು. ವೈರಾಲಜಿ ಪರೀಕ್ಷೆಯಲ್ಲಿ ವೈರಸ್ನ ಅಂಶಗಳನ್ನು ಪತ್ತೆ ಹಚ್ಚಲಾಗುವುದು. ಸೀರಾಲಜಿ ಪರೀಕ್ಷೆಯಲ್ಲಿ ಮನುಷ್ಯನ ದೇಹದಲ್ಲಿ ವೈರಸ್ ಸೋಂಕಿನಿಂದ ಉಂಟಾಗುವ ಪ್ರತಿರೋಧ ಘಟಕಗಳನ್ನು ಪತ್ತೆಹಚ್ಚುವುದು. ರೋಗಿ ಯಾವ ಲಕ್ಷಣಗಳೊಂದಿಗೆ ವೈದ್ಯ ರಲ್ಲಿ ಬಂದಿದ್ದಾನೆ ಎಂಬುದರ ಮೇಲೆ ಯಾವ ಪರೀಕ್ಷೆ ಮಾಡಿಸಬೇಕು ಎಂದು ವೈದ್ಯರು ನಿರ್ಧರಿಸುತ್ತಾರೆ.ಸೋಂಕಿನ ನಂತರ ಕೆಲವೇ ದಿನಗಳಲ್ಲಿ ರಕ್ತದಲ್ಲಿ ವೈರಸ್ ಪ್ರತ್ಯೇಕಿಸಬಹುದು. ಅಲ್ಲದೆ ವೈರಸ್ ಉತ್ಪಾದಿಸುವ ಪ್ರೋಟೀನ್ ( 1) ಅನ್ನು ಸಹಿತ ಮತ್ತೊಂದು ವಿಧಾನದಿಂದ ಕಂಡುಹಿಡಿಯಬಹುದು.
ಸೀರಾಲಜಿ ವಿಧಾನ :ಇದರಲ್ಲಿ     () – ಈ ಪರೀಕ್ಷೆಯಲ್ಲಿ ಇತ್ತೀಚಿನ ಅಥವಾ ಹಿಂದಿನ ಸೋಂಕು ಬಂದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದರಲ್ಲಿ , -  antibodiesಗಳು ಪತ್ತೆ ಹಚ್ಚಲ್ಪಡುತ್ತವೆ (ಅಂದರೆ ಡೆಂಗ್ಯೂ ವೈರಸ್ ವಿರುದ್ಧ ಉತ್ಪನ್ನವಾದ ಆಂಟಿಬಾಡಿಗಳು)
ಚಿಕಿತ್ಸೆ :ಡೆಂಗ್ಯೂ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಜ್ವರ ಕಡಿಮೆ ಮಾಡುವ ಮತ್ತು ಮಾಂಸಖಂಡಗಳ ನೋವನ್ನು ಹೋಗಲಾಡಿಸಲು ಸೂಕ್ತ ನೋವು ನಿವಾರಕಮಾತ್ರೆಗಳನ್ನು ತೆಗೆದುಕೊಳ್ಳಬಹುದು. ತೀವ್ರ ರೀತಿಯ ಡೆಂಗ್ಯೂವಿನಲ್ಲಿ ರೋಗಿಯ ದೇಹದ ದ್ರವವನ್ನು ಸರಿಯಾಗಿ ಮಾನಿಟರ್ ಮಾಡಿ ಆಸ್ಪತ್ರೆಯಲ್ಲಿ ಇಟ್ಟು ಕೊಂಡು ಸೂಕ್ತ ಚಿಕಿತ್ಸೆ ಮಾಡಬೇಕು.