ಮಹಿಳೆಯರಿಗೂ ಎನ್‌ಡಿಎ ಅವಕಾಶ
ಪ್ರಚಲಿತ
ಅನುಪ ಶೆಟ್ಟಿ
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ)ಯ ಮೂರು ಸೇವೆಗಳಅಧಿಕಾರಿಯಾಗಲು ಕೇವಲ ಪುರುಷರಿಗೆ ಇದ್ದ ಅವಕಾಶ, ಈ ಸಾಲಿನಿಂದ ಮೊದಲ ಬಾರಿಗೆಮಹಿಳೆಯರಿಗೂ ಲಭ್ಯವಾಗಲಿದೆ. ಮಹಿಳಾ ಕೆಡೆಟ್‌ಗಳಿಗೆ ಈ ವರ್ಷದ ನವೆಂಬರ್ ತಿಂಗಳಿನಿಂದ ಎನ್‌ಡಿಎ ಪರೀಕ್ಷೆ ಎದುರಿಸಲು ಅವಕಾಶವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ತಿಳಿಸಿತ್ತು. ಆದರೆ, ಮುಂದಿನ ಮೇ ತಿಂಗಳಿನಿಂದ ಮಹಿಳೆಯರಿಗೂ ಅವಕಾಶ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದ್ದರೂ, ಸುಪ್ರೀಂ ಕೋರ್ಟ್ ತನ್ನ ನಿಲುವನ್ನು ಬದಲಿಸಿಲ್ಲ.
ಏನೇ ಆದರೂ, ಮಹಿಳೆಯರಿಗೆ ಅವಕಾಶ ಸಿಗುವುದು ಬಹುತೇಕ ಖಚಿತಗೊಂಡಿದ್ದರಿಂದ, ಭಾರತದಲ್ಲಿ ಲಿಂಗ ಅಸಮಾನತೆಯ ಅಂತರ ತಗ್ಗುತ್ತಿದೆ ಎನ್ನುವುದು ಸ್ಪಷ್ಟ. ಈ ವರ್ಷದ ಆರಂಭದಿಂದಲೂ ಎನ್‌ಡಿಎ ಮಹಿಳಾ ಕೆಡೆಟ್‌ಗಳಿಗೆ ಸೂಕ್ತವಾದ ಮೂಲ ಸೌಕರ್ಯವನ್ನು ತಯಾರು ಮಾಡುವಲ್ಲಿ ತೊಡಗಿಸಿಕೊಂಡಿದೆ. ಶೆಕ್ಷಣಿಕ ಪಠ್ಯಕ್ರಮದಲ್ಲಿ ಯಾವುದೇ ಸಮಸ್ಯೆಯಿಲ್ಲದಿದ್ದರೂ, ಹೊರಾಂಗಣ ತರಬೇತಿ ಮತ್ತು ದೈಹಿಕ ಫಿಟ್‌ನೆಸ್ ನಿಯತಾಂಕಗಳನ್ನು ಅಂತಿಮಗೊಳಿಸುವುದರಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಭೌತಿಕ ತರಬೇತಿಯೂ ಸಹನೆಯ ಜತೆಗೆ ಯುದ್ಧ ಡ್ರಿಲ್‌ಗಳನ್ನು ಒಳ ಗೊಂಡಿದೆ. ಇದುವರೆಗೆ ಇವೆಲ್ಲವನ್ನೂ ಕೇವಲ ಪುರುಷ ಕೆಡೆಟ್‌ ಗಳನ್ನು ದೈಹಿಕ ಕ್ಷಮತೆಗೆ ಕಸ್ಟಮೈಸ್ ಮಾಡಲಾಗಿತ್ತು. ಆದರೆ ಈಗ, ಹೆಣ್ಣುಮಕ್ಕಳ ದೆಹಿಕ ಮತ್ತು ವೈದ್ಯಕಿಯ ಮಾನದಂಡಗಳಿಗೆ ಅನುಗುಣವಾಗಿ ಮಾನದಂಡಗಳನ್ನು ಪರಿಷ್ಕರಿಸಬೇಕಾಗಿದೆ.
ಲಿಖಿತ ಪರಿಕ್ಷೆ ಮತ್ತು ಸಂದರ್ಶನದಲ್ಲಿ ತೇರ್ಗಡೆಯಾಗುವ ಪುರುಷ ಅಭ್ಯರ್ಥಿಗಳು ವೈದ್ಯಕಿಯ ಪರೀಕ್ಷೆಯ ಆಧಾರದಲ್ಲಿ ಎನ್‌ಡಿಎಗೆ ಸೆರಲು ಅರ್ಹರಾಗುತ್ತಾರೆ. ಈ ಪರೀಕ್ಷೆಯು ನಿರ್ದಿಷ್ಟ ತೂಕ ಮತ್ತು ಎತ್ತರದ ಮಾನದಂಡಗಳನ್ನೂ ಒಳಗೊಂಡಿದೆ. ಇನ್ನು ಕೆಲವೇ ತಿಂಗಳಲ್ಲಿ ಮಹಿಳಾ ಕೆಡೆಟ್‌ಗಳಿಗೆ ಸೂಕ್ತವಾಗುವಂತೆ ಹೊರಾಂಗಣ ತರಬೇತಿ ಮತ್ತು ವೈದ್ಯಕೀಯ ಪರೀಕ್ಷೆಯ ಕುರಿತು ಈ ಮಾನದಂಡಗಳನ್ನು ಸರಿಪಡಿಸಲು ಎನ್‌ಡಿಎ ಕಾರ್ಯನಿರ್ವಹಿಸುತ್ತಿದೆ. ಅವರಿಗೆ ನಿಯತಾಂಕಗಳನ್ನು ರೂಪಿಸುವ ಸಂದರ್ಭದಲ್ಲಿ ತರಬೇತಿ ಮಾನದಂಡಗಳು ಉನ್ನತ ವರ್ಗಗಳಾಗಿವೆ ಎಂದು ಖಚಿತಪಡಿಸಿಕೊಳ್ಳುವ ಪ್ರಯತ್ನವಾಗಿದೆ.
ರಕಾರವು ಸಹನೆ, ಕರಕುಶಲತೆ ಮತ್ತು ಮಹಿಳೆಯರಿಗೆ ದೈಹಿಕ ತರಭೇತಿಯಲ್ಲಿ ಯಾವುದೇ ದುರ್ಬಲತೆ ಕಂಡು ಬಂದರೂ, ಅದು ಸಶಸ್ತ್ರ ಪಡೆಗಳ ಯುದ್ಧದ ಮೆಲೆ ಪರಿಣಾಮ ಬಿರುತ್ತದೆ ಎಂದುಸುಪ್ರೀಂ ಕೋರ್ಟ್‌ಗೆ ಸರಕಾರವು ವರದಿ ಸಲ್ಲಿಸಿತ್ತು. ಮೂಲ ಸೌಕರ್ಯಗಳ ಪ್ರಗತಿಯನ್ನು ಪರಿಶೀಲಿಸಲು ಮೂರು ಸೇವೆಗಳಮುಖ್ಯಸ್ಥರು ಎನ್‌ಡಿಎಗೆ ಭೇಟಿ ನೀಡಿದ್ದರು. ಬದಲಾಗುತ್ತಿರುವ ಸಮಯಗಳಿಂದ, ಸ್ತ್ರೀ ಅಧಿಕಾರಿಗಳು ಐಎಎಫ್, ನೌಕಾಪಡೆಯ ಮತ್ತು ಸೇನೆಯ ವಿವಿಧ ವಿಭಾಗ ಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ವಾಸ್ತವವಾಗಿ, ಕನಿಷ್ಠ ನಾಲ್ಕು ಮಹಿಳಾ ಐಎಎಫ್ ಅಧಿಕಾರಿಗಳು ಪ್ರಸ್ತುತ ತಮ್ಮ ಫೈಟರ್ ಜೆಟ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಅಂತೆಯೆ, ಮಹಿಳಾ ಅಧಿಕಾರಿಗಳು ಹೆಲಿಕಾಪ್ಟರ್ ಮತ್ತು ಸಾರಿಗೆ ವಿಮಾನಗಳ ಚಾಲನೆ ಮಾಡುತ್ತಿದ್ದಾರೆ. ನೌಕಾಪಡೆಯು ಈಗಾಗಲೇ ಮಹಿಳೆಯರಿಗೆ ಸಹ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಇದರರ್ಥ ಅವರು ತಮ್ಮ ಪುರುಷ ಸಹೊದ್ಯೊಗಿಗಳಂತೆ ತಿಂಗಳಾನುಗಟ್ಟಲೆ ನೌಕಾಯಾನ ಮಾಡುವುದನ್ನು ನಾವು ಕಾಣಬಹುದಾಗಿದೆ. ಆಕಾಂಕ್ಷಿಗಳೇ ಪರೀಕ್ಷೆ ಬರೆಯಲು ಮುಂದೆ ಬರುತ್ತಿರುವ ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನಿರ್ಧಾರದಂತೆ, ಈ ನವೆಂಬರ್‌ನಿಂದಲೇ ಕೇಂದ್ರ ಸರಕಾರವೂ ಮಹಿಳೆಯರನ್ನೂಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ.