ಎನ್.ಇ.ಪಿ ಅನುಷ್ಠಾನಕ್ಕೆ ಪರಿಗಣಿಸಬೇಕಾದ ಅಂಶಗಳು
ವಿಶ್ಲೇಷಣೆ
ದಿಲೀಪ್ ಕುಮಾರ‍್ ಸಂಪಡ್ಕ
ಕರ್ನಾಟಕದಲ್ಲಿ ಬಹು ನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಉನ್ನತ ಶಿಕ್ಷಣದಲ್ಲಿ ಈಗಾಗಲೇ ಜಾರಿಯಾಗಿರುವುದು ನಮಗೆಲ್ಲ ತಿಳಿದಿರುವ ವಿಚಾರ. ಇನ್ನೂ ಶಾಲಾ ಶಿಕ್ಷಣದಲ್ಲಿ ಎನ್ .ಇ.ಪಿಯು ಇನ್ನಷ್ಟೇ ಜಾರಿಯಾಗಬೇಕಾಗಿದೆ.
ಶಾಲಾ ಶಿಕ್ಷಣ ಹಂತ ಎಂದರೆ ಮಗುನ ಶಿಕ್ಷಣದ ಆರಂಭದ ಹಂತವಾಗಿದೆ. ಇಲ್ಲಿ ಭದ್ರ ಬುನಾದಿ ಹಾಕಿದಾಗ ಮಾತ್ರ ಮಗು ತನ್ನ ಶೈಕ್ಷಣಿಕ ಜೀವನವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಸಾಧ್ಯ. ಆದುದರಿಂದ ಶಾಲಾ ಶಿಕ್ಷಣವನ್ನು ಅತೀರಾ ಗಂಭೀರವಾಗಿ ತೆಗೆದುಕೊಳ್ಳಬೇಕು. ಶಾಲಾ ಶಿಕ್ಷಣದಲ್ಲಿ ಎನ್.ಇ.ಪಿಯನ್ನು ಜಾರಿ ಮಾಡುವಾಗ ಮಕ್ಕಳ ಮನೋ ವೈಜ್ಞಾನಿಕ, ಆರ್ಥಿಕ ಹಿನ್ನಲೆ ಪೋಷಕರ ಮತ್ತು ಶಿಕ್ಷಕರ ಮನಸ್ಥಿತಿಯನ್ನು ಅಧ್ಯಯನ ಮಾಡಿ ಕೊಂಡು ಜಾರಿತರಬೇಕಾಗಿದೆ. ಇದರ ಜತೆ ಶಾಲಾ ಶಿಕ್ಷಣ ಉತ್ತಮ ಪಡಿಸಲು ಒದಗಿಸಬೇಕಾದ ಮೂಲ ಸೌಕರ್ಯಗಳ ಬಗ್ಗೆ ಹೆಚ್ಚು ಗಮನಹರಿಸಬೇಕು.
ಉನ್ನತ ಶಿಕ್ಷಣದಲ್ಲಿ ಜಾರಿಗೊಳಿಸಿರುವಂತೆ ಶಾಲಾ ಶಿಕ್ಷಣದಲ್ಲಿ ಎನ್‌ಇಪಿಯನ್ನು ಅನುಷ್ಠಾನಗೊಳಿಸಲು ಹಾಗೂ ಅಗತ್ಯ ಯೋಜನೆಗಳನ್ನು ರೂಪಿಸಲು ರಾಜ್ಯ ಸರಕಾರ ನಿವೃತ್ತ ಐಎಎಸ್‌ಅಽಕಾರಿಮದನ್‌ಗೋಪಾಲ್ ನೇತೃತ್ವದ ೨೧ ಸದಸ್ಯರ ಕಾರ್ಯಪಡೆಯನ್ನು ರಚಿಸಿದೆ. ಈ ಕಾರ್ಯಪಡೆಯು ಅವಶ್ಯಕತೆಗೆ ಅನುಗುಣವಾಗಿ ಸಭೆಗಳನ್ನು ನಡೆಸಿ ಶಾಲಾ ಶಿಕ್ಷಣದಲ್ಲಿ ಎನ್‌ಇಪಿ ಜಾರಿಗೆ ಅಗತ್ಯ ಕರಡು ನೀತಿ ರಚಿಸಿ ಅಂತಿಮಗೊಳಿಸಬೇಕು. ೨೦೩೦ರವರೆಗೆ ಎನ್‌ಇಪಿ ಅನುಷ್ಠಾನದಿಂದ ಆಗುವ ಪರಿಣಾಮಗಳನ್ನು ವಿಶ್ಲೇಷಣೆ ಮಾಡಿ ಇದಕ್ಕೆ ಮಾರ್ಗ ದರ್ಶನ ಹಾಗೂ ಪರಿಹಾರ ತಿಳಿಸಬೇಕು.
ಪೂರ್ವ ಪ್ರಾಥಮಿಕ ಹಾಗೂ ೧ ರಿಂದ ೧೨ನೇ ತರಗತಿವರೆಗಿನ ಪಠ್ಯಕ್ರಮ ಚೌಕಟ್ಟು ತಯಾರಿಸಲು ಮಾರ್ಗದರ್ಶನ ನೀಡಬೇಕು. ಅನುಷ್ಠಾನಕ್ಕೆ ಅಗತ್ಯ ಕಾರ್ಯ ಗಳನ್ನು ಹಂಚಿಕೆ ಮಾಡಿ ಮೇಲುಸ್ತುವಾರಿ ವಹಿಸಬೇಕು. ಎಲ್ಲಾ ಭಾಗೀದಾರರೊಂದಿಗೆ ಚರ್ಚಿಸಿ ಕರಡು ಅನುಷ್ಠಾನಕ್ಕೆ ಸೂಕ್ತ ನಿಯಮರೂಪಿಸಬೇಕು. ಈ ನೀತಿ ಅನುಷ್ಠಾನಕ್ಕೆ ದೀರ್ಘಾವಧಿ ಯೋಜನೆಗಳನ್ನು ಸಿದ್ಧಪಡಿಸಲು ಸಹಕಾರ ನೀಡಬೇಕು. ಶಾಲಾ ಶಿಕ್ಷಣದಲ್ಲಿ ಎನ್‌ಇಪಿಯನ್ನು ಜಾರಿ ಮಾಡುವಾಗ ಈ ಕೆಳಗಿನ ಅಂಶ ಗಳ ಕಡೆಗೆ ಹೆಚ್ಚು ಒತ್ತು ನೀಡಬೇಕಾಗಿದೆ.
ಅವುಗಳೆಂದರೆ :ಪೂರ್ವಪ್ರಾಥಮಿಕ ಹಂತದ ಸ್ಥಾಪನೆ :ಆರಂಭಿಕ ವರ್ಷಗಳಲ್ಲಿ ಮೆದುಳಿನ ಸೂಕ್ತ ಆರೈಕೆ ಮತ್ತು ಪ್ರಚೋದನೆ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಣದಲ್ಲಿ ಬಾಲ್ಯದ ರಕ್ಷಣೆ ಮತ್ತು ಶಿಕ್ಷಣಉZqsಇeಜ್ಝಿbeಟಟb ಇZಛಿ  ಉbZಠಿಜಿಟ್ಞ (ಉಇಇಉ)ಯನ್ನು ಪ್ರಸ್ತಾಪಿಸಿದೆ. ಇದು ಅವರ ಜೀವನದುದ್ದಕ್ಕೂ ಶಿಕ್ಷಣ ವ್ಯವಸ್ಥೆಯಲ್ಲಿಸಕ್ರಿಯವಾಗಿ ಭಾಗವಸಲು ಮತ್ತು ಅಭಿವೃದ್ಧಿ ಸಾಧಿಸಲು ಸಮರ್ಥರನ್ನಾಗಿಸುತ್ತದೆ. ಅಲ್ಲದೇ, ಒಂದನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲಾ ಮಕ್ಕಳು ಶಾಲಾ ವ್ಯವಸ್ಥೆಗೆ ಸಿದ್ಧರಾಗಿರುವುದನ್ನು ಖಚಿತ ಪಡಿಸಿಕೊಳ್ಳಲು ಸುಲಭವಾಗುತ್ತದೆ.
ಒಟ್ಟಾರೆಯಾಗಿ ಈ ಹಂತವು ಹೊಸತನದಿಂದ ಕೂಡಿದೆ.ಉಇಇಉಶಿಕ್ಷಣವನ್ನು ಪ್ರತ್ಯೇಕವಾಗಿರುವ ಅಂಗನವಾಡಿಗಳು, ಪ್ರಾಥಮಿಕ ಶಾಲಾ ಆವರಣದಲ್ಲಿರುವ ಅಂಗನವಾಡಿಗಳು, ಪ್ರಸ್ತುತ ಇರುವ ಪ್ರಾಥಮಿಕ ಶಾಲೆಗಳಲ್ಲಿರುವ ೫ ಅಥವಾ ೬ ವರ್ಷಗಳ ಮಕ್ಕಳಿರುವ ಶಾಲೆಗಳು ಪೂರ್ವ ಪ್ರಾಥಮಿಕ ಭಾಗಗಳು ಮತ್ತು ಪ್ರತ್ಯೇಕವಾಗಿರುವ ಪೂರ್ವ ಪ್ರಾಥಮಿಕ ಶಾಲೆಗಳು ಸೇರಿದಂತೆ, ವಿಸ್ತರಿಸಿದ ಮತ್ತು ಬಲಪಡಿಸಿದ ಪೂರ್ವ ಬಾಲ್ಯಾವಸ್ಥೆ ಶಿಕ್ಷಣ ಸಂಸ್ಥೆಗಳಉಇಇಉಪಠ್ಯಕ್ರಮ ಮತ್ತು ಬೋಧನಾ ಶಾಸದಲ್ಲಿ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಕ ಮಾಡಿಕೊಂಡು ಅವರ ಮೂಲಕ ತರಬೇತಿ ಒದಗಿಸಲಾಗುತ್ತದೆ ಎನ್ನಲಾಗಿದೆ.
ಕಾರ್ಯಭಾರದ ಹಂಚಿಕೆ :ಹೊಸ ಶಿಕ್ಷಣ ನೀತಿಯಲ್ಲಿ ೫+೩+೩+೪ ಶಿಕ್ಷಣ ವಿನ್ಯಾಸವನ್ನು ಪ್ರಸ್ತಾಪಿಸಲಾಗಿದೆ. ಈಗಾಗಲೇ ಪ್ರತಿ ಹಂತದ ಶಿಕ್ಷಕರ ನೇಮ ಕಾತಿಯ ಬಗ್ಗೆ ಎನ್‌ಸಿಟಿಇಯು ಕನಿಷ್ಠ ವಿದ್ಯಾರ್ಹತೆಯನ್ನು ನಿಗಽಪಡಿಸಿದೆ. ಇದರ ಚೌಕಟ್ಟಿನಲ್ಲಿಯೇ ಶಿಕ್ಷಕರ ನೇಮಕಾತಿಗಳನ್ನು ಮಾಡ ಬೇಕಾಗಿರುತ್ತದೆ. ಈ ಪ್ರತಿ ಹಂತದ ಶಿಕ್ಷಕರಿಗೆ ಕೇಂದ್ರಿಯ ಮಾದರಿಯಲ್ಲಿ ಏಕರೂಪದ ಪದನಾಮ ಮತ್ತು ಆಯಾ ಹಂತದ ಶಿಕ್ಷಕರ ಕಾರ್ಯಭಾರವನ್ನು ಸ್ಪಷ್ಟವಾಗಿ ರೂಪಿಸಿ, ಅದಕ್ಕೆ ಅನುಗುಣವಾಗಿ ಶಿಕ್ಷಕರಿಗೆ ತರಬೇತಿಗಳನ್ನು ನೀಡಬೇಕು. ಕನಿಷ್ಠ ಪಕ್ಷ ಅರೆಕಾಲಿಕ ವೃತ್ತಿ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಲು ಕ್ರಮವಹಿಸಬೇಕು.
ಶಿಕ್ಷಕರ ಮತ್ತು ಅಧಿಕಾರಿಗಳ ಮರು ಹೊಂದಾಣಿಕೆ :ಈ ಹಿಂದೆ ಇದ್ದ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗಳನ್ನು ೯-೧೨ ತರಗತಿಗಳ ಬೋಧಕ ಹುದ್ದೆಗೆ ಮರು ಹೊಂದಾಣಿಕೆ ಮಾಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಮೇಲಿನ ಹುದ್ದೆಯ ಕನಿಷ್ಠ ವಿದ್ಯಾರ್ಹತೆ ಹೊಂದಿರದ ಶಿಕ್ಷಕರಿಗೆ ಬದಲಿ ವ್ಯವಸ್ಥೆ, ಪ್ರೌಢ ಶಾಲೆಯಲ್ಲಿ ಈಗಾಗಲೇ ಕಾರ್ಯ ನಿರ್ವಸುತ್ತಿರುವ. ಗ್ರೂಪ್-ಬಿ ಮುಖ್ಯ ಶಿಕ್ಷಕರ ಹುದ್ದೆಗಳ ಹೊಂದಾಣಿಕೆ ಮತ್ತು ಅವರ ಮುಂದಿನ ಕಾರ್ಯಭಾರದ ಬಗ್ಗೆ ಚಿಂತಿಸಬೇಕಾಗಿದೆ.
ಪ್ರೌಢಶಾಲೆಗಳ ವಿನ್ಯಾಸ:ಎನ್‌ಇಪಿಯ ಪ್ರಕಾರ ಇನ್ನು ಮುಂದೆ ಪ್ರಸ್ತುತದಲ್ಲಿರುವ ಪ್ರೌಢಶಾಲಾ ಹಂತ ಎಂಬುವುದು ಇರುವುದಿಲ್ಲ. ಆದುದರಿಂದ ಎಲ್ಲಾ ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳನ್ನು ೯-೧೨ನೇ ತರಗತಿಗಳ ಹಂತಕ್ಕೆ ಮೇಲ್ದರ್ಜೆಗೇರಿಸಬೇಕು. ಹೀಗೆ ಮೇಲ್ದರ್ಜೆಗೇರಿಸಿದ ೯-೧೨ನೇ ತರಗತಿ ಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವ ಹೊಣೆ ಸರಕಾರದ ಮೇಲಿದೆ.
ಕೇಂದ್ರೀಯ ಮಾದರಿಯ ಶಾಲಾ ವಿನ್ಯಾಸಕ್ಕೆಒತ್ತು :ಶಿಕ್ಷಣದ ಮೂಲ ತತ್ವಗುಣಮಟ್ಟದ ಶಿಕ್ಷಣ ನೀಡುವುದು ಆಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರವಸು ವವರು ಶಿಕ್ಷಕರು. ಶಿಕ್ಷಕರು ಇಲ್ಲ ಎಂದರೆ ಗುಣಮಟ್ಟದ ಶಿಕ್ಷಣ ಎನ್ನುವುದು ಮರಿಚೀಕೆ. ಆದರೆ ಯಾವುದೇ ಯೋಜನೆಗಳು ವಿಷಯವಾರು ಶಿಕ್ಷಕರ ನೇಮಕಾತಿಕೆಗೆ ಒತ್ತು ಕೊಡುತ್ತಿಲ್ಲ ಎನ್ನುವುದು ಬೇಸರದ ವಿಚಾರ. ಆದರೆ ಕೇಂದ್ರಿಯ ವಿದ್ಯಾಲಯಗಳು, ಆದರ್ಶ ಶಾಲೆಗಳು, ಸೈನಿಕ ಶಾಲೆಗಳು ಮತ್ತು ಟಿಬೇಟಿಯನ್‌ ಶಾಲೆ ಗಳಲ್ಲಿ ೬ ರಿಂದ ೧೦ ನೇ ತರಗತಿಗಳ ವಿನ್ಯಾಸವನ್ನು ರಚಿಸಿಕೊಂಡಿರುತ್ತದೆ.
ಶಿಕ್ಷಕರ ನೇಮಕಾತಿ ಅರ್ಹತೆಗಳ ನಿರ್ಧಾರ:ಎನ್‌ಇಪಿಯ ೫+೩+೩+೪ ಶಿಕ್ಷಣದ ವಿನ್ಯಾಸವನ್ನು ಮಾಡಬೇಕಾಗಿರುತ್ತದೆ. ಪ್ರತಿ ಹಂತದಲ್ಲಿ ಶಿಕ್ಷಕರ ನೇಮಕಾತಿ ಅರ್ಹತೆಗಳನ್ನು ಎನ್.ಸಿ.ಟಿ.ಇಯ ನಿಯಮಗಳ ಪ್ರಕಾರ ಸ್ಪಷ್ಟವಾಗಿ ಮಾಡಲು ಅಧ್ಯಯನ ಮಾಡಿ ನಿರ್ಧಾರ ಮಾಡಬೇಕು. ಬಾಲ್ಯದ ರಕ್ಷಣೆ ಮತ್ತು ಶಿಕ್ಷಣ (ಉಇಇಉ) ಮೊದಲ ಪೂರ್ವ ಪ್ರಾಥುಕ ಹಂತವು ಹೊಸ ವಿನ್ಯಾಸವಾಗಿರುವುದರಿಂದ ಪೂರ್ವ ಪ್ರಾಥಮಿಕ ಹಂತದ ಶಿಕ್ಷಕರ ನೇಮಕಾತಿಗೆ ಎನ್.ಸಿ.ಟಿ.ಇಯ ಪ್ರಕಾರ, ನರ್ಸರಿ ಶಿಕ್ಷಕರ ಶಿಕ್ಷಣ,
ಪ್ರೀ-ಸ್ಕೂಲ್ ಶಿಕ್ಷಣ, ಆರಂಭಿಕ ಬಾಲ್ಯದ ಕಾರ್ಯಕ್ರಮದಲ್ಲಿ ಡಿಪ್ಲೋಮ ಅಥವಾ ನರ್ಸರಿ ಶಿಕ್ಷಣದಲ್ಲಿ ಬಿ.ಇಡಿ ಹೊಂದಿದದವರನ್ನು ಪರಿಗಣಿಸಬೇಕಾಗಿರುತ್ತದೆ. ಒಂದು ಲೆಕ್ಕಚಾರದ ಪ್ರಕಾರ ಸುಮಾರು ೪೫,೦೦೦ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥುಕ ಶಾಲೆಗಳನ್ನು ತೆರೆಬೇಕಾಗುತ್ತದೆ. ಪ್ರತಿ ಶಾಲೆಗೆ ಕನಿಷ್ಠ ಪಕ್ಷ ಮೂರು ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕಾತಿ ಮಾಡಬೇಕಾಗುತ್ತದೆ.
ಮೂಲಸೌಕರ್ಯಗಳನ್ನು ಒದಗಿಸುವುದು:ಎನ್‌ಇಪಿಯು ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಅಂಶವನ್ನು ಹೊಂದಿದೆ. ಪ್ರಸ್ತುತ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶಾಲಾ ಕೊಠಡಿಗಳ ಅಲಭ್ಯತೆ, ಅನುದಾನದ ಕೊರತೆ, ಮಕ್ಕಳಿಗೆ ದೊರಕಬೇಕಾದ ಸೌಲಭ್ಯಗಳು ಸೂಕ್ತ ಸಮಯದಲ್ಲಿ ದೊರೆಯುತ್ತಿಲ್ಲ. ಶಾಲಾ ಶಿಕ್ಷಣದಲ್ಲಿ ಎನ್‌ಇಪಿಯು ಜಾರಿಯಾದಲ್ಲಿ ಮೊದಲ ಹಂತದಲ್ಲಿಯೇ ಮೂಲಸೌಕರ್ಯಗಳನ್ನು ಒದಗಿಸುವ ಹೊರೆ ಸರಕಾರದ ಮೇಲೆ ಇರುತ್ತದೆ. ಇದನ್ನು ಸಮರ್ಥವಾಗಿ ನಿಭಾಯಿಸಲು ಕಾರ್ಯಪಡೆಯು ಯೋಜನೆಯನ್ನು ರೂಪಿಸಬೇಕು.
ಸರಕಾರಿ ಶಿಕ್ಷಕ ತರಬೇತಿ ಸಂಸ್ಥೆಗಳ ಬಲವರ್ಧನೆ:ಎನ್‌ಇಪಿಯಲ್ಲಿ ಶಾಲಾ ಶಿಕ್ಷಣದ ಎಲ್ಲಾ ಹಂತದ ವಿದ್ಯಾರ್ಥಿಗಳೂ ವಿಷಯಾಸಕ್ತ ಪ್ರೇರಿತ, ಹೆಚ್ಚು ಅರ್ಹತೆ ಹೊಂದಿರುವ, ವೃತ್ತಿಪರವಾಗಿ ತರಬೇತಿ ಪಡೆದ ಮತ್ತು ಸುಸಜ್ಜಿತ ಶಿಕ್ಷಕರಿಂದ ಕಲಿಸಲು ನಾಲ್ಕು ವರ್ಷದ ಸಂಯೋಜಿತ ಬಿ.ಇಡಿ ಕೋರ್ಸಿಗೆ ಮಹತ್ವ ನೀಡಲಾಗಿದೆ. ಆದರೆ ಕರ್ನಾಟಕದ ಬಹುತೇಕ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳು ಮತ್ತು ಡಯಟ್ ಗಳಲ್ಲಿ ಎನ್.ಸಿ.ಟಿ.ಇ ನಿಯಮದ ಪ್ರಕಾರ ಅರ್ಹತೆಯನ್ನು ಹೊಂದಿರುವ ಉಪನ್ಯಾಸಕರು ಇಲ್ಲದಿರುವುದು ಎನ್‌ಇಪಿಯ ಪ್ರಕಾರ ಈ ಸಂಸ್ಥೆಗಳು ಗುಣಮಟ್ಟದ ಶಿಕ್ಷಕರನ್ನು ತಯಾರು ಮಾಡಲು ಅಡ್ಡಿಯಾಗಲಿದೆ.ಅದುದರಿಂದ ಟಿ.ಟಿ.ಐ ಮತ್ತು ಡಯಟ್‌ಗಳಲ್ಲಿ ಬೋಧಕ ವರ್ಗದವರನ್ನು ಎನ್.ಸಿ.ಟಿ.ಇ ಮತ್ತು ಯುಜಿಸಿ ನಿಯಮದ ಪ್ರಕಾರ ಅರ್ಹತೆ ಹೊಂದಿದವರನ್ನು ನೇಮಕಾತಿ ಮಾಡಲು ಒತ್ತು ಕೊಡಬೇಕು.
ಕಾನೂನುಗಳ ಬದಲಾವಣೆ:ಎನ್‌ಇಪಿಯ ಪ್ರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆಯಲ್ಲಿ ೬ ವರ್ಷದಿಂದ ೧೪ ವರ್ಷದ ಮಕ್ಕಳಿಗೆ ಇದ್ದ ವ್ಯಾಪ್ತಿಯನ್ನು ೩ ವರ್ಷದಿಂದ ೧೮ ವರ್ಷದವರೆಗೆ ವಿಸ್ತರಿಸಿದೆ. ಅಂದರೆ ಶಾಲಾಪೂರ್ವ ದಿಂದ ೧೨ ನೇ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ವ್ಯಾಪ್ತಿಗೆ ಬರಲಿದೆ. ಇದನ್ನು ಅನುಷ್ಠಾನ ಮಾಡಲು ಆರ್.ಟಿ.ಇ ಕಾಯಿದೆಯನ್ನು ತಿದ್ದುಪಡಿ ಮಾಡುವ ಅವಶ್ಯಕತೆಯಿದೆ.
ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ:ಎನ್‌ಇಪಿಯಲ್ಲಿ ಶಾಲಾ ರಚನೆ ಮತ್ತು ವಿನ್ಯಾಸದಲ್ಲಿ ಬದಲಾವಣೆಗಳನ್ನು ತಂದಿರುತ್ತದೆ. ಈಗ ಹಳೆಯನಿಯಮಗಳನ್ನು ತಿದ್ದುಪಡಿ ಮಾಡಬೇಕಾಗಿದೆ. ಕೆಲವು ಹುದ್ದೆಗಳನ್ನು ಹೊಂದಾಣಿಕೆ ಮಾಡಬೇಕಾಗಿದೆ. ಶಿಕ್ಷಕರ ಕಾರ್ಯಭಾರ ಹಂಚಿಕೆಗಳ ಬಗ್ಗೆ ಸ್ಪಷ್ಟಪಡಿಸ ಬೇಕಾಗಿದೆ. ಪ್ರತಿ ಫೀಡರ್ ಕೇಡರ್‌ಗಳ ಬಡ್ತಿ ಅಂಶಗಳನ್ನು ವೃಂದ ಮತ್ತು ನೇಮಕಾತಿಗಳಲ್ಲಿ ಉಲ್ಲೇಖಿಸಬೇಕಾಗಿದೆ.
ಶೈಕ್ಷಣಿಕ ಆಡಳಿತದಲ್ಲಿ ಬದಲಾವಣೆ:ಎನ್‌ಇಪಿ ೨೦೨೦ ನವ ಭಾರತದಲ್ಲಿ ಶಿಕ್ಷಣದ ಕ್ರಾಂತಿಯನ್ನು ಸೃಷ್ಠಿಸುವ ಅಕ್ಷಾಂಕೆಯನ್ನು ಹೊಂದಿದೆ. ಹೊಸ ಶಿಕ್ಷಣ ನೀತಿಯ ಮೂಲ ತತ್ವಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕೆ ಪೂರಕವಾದ ಆಡಳಿತ ವ್ಯವಸ್ಥೆಯನ್ನುರೂಪಿಸಬೇಕಾಗಿರುತ್ತದೆ. ಆದುದರಿಂದಕೆ.ಇ.ಎಸ್ ಅರ್ಹತೆಯನ್ನು ಹೊಂದಿರುವ ಅಧಿಕಾರಿಗಳನ್ನು ಹೆಚ್ಚಾಗಿ ಶಿಕ್ಷಣ ಇಲಾಖೆಯಲ್ಲಿ ಉಪಯೋಗಿಸಬೇಕು.
ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ರಾಜ್ಯಯೋಜನಾ ನಿರ್ದೇಶಕರು ಹುದ್ದೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಆಡಳಿತ ಹುದ್ದೆಗಳನ್ನು ಕೆ.ಇ.ಎಸ್ ಕೇಡರ್‌ನಿಂದ ನೇಮಕ ಮಾಡಿ ಕೊಳ್ಳಬೇಕು. ಏಕೆಂದರೆ ಒಬ್ಬ ಉತ್ತಮ ಶೈಕ್ಷಣಿಕ ಚಿಂತಕ ಮತ್ತು ಶೈಕ್ಷಣಿಕ ವಿಚಾರ ಬಲ್ಲವನು ಮಾತ್ರ ಉತ್ತಮಶೈಕ್ಷಣಿಕ ಆಡಳಿತಗಾರ ಆಗಬಲ್ಲ ಎಂಬ ಮಾತಿದೆ.
ಶಾಲೆಗಳ ವಿಲೀನದ ಬಗ್ಗೆ ಚಿಂತನೆ:ಇತ್ತೀಚಿನ ಒಂದು ಅಂಕಿ ಅಂಶಗಳ ಪ್ರಕಾರ ೧೦ ಕ್ಕಿಂತ ಕಡಿಮೆ ಮಕ್ಕಳಿರುವ ೩,೭೮೪ ಶಾಲೆಗಳು, ೩೦ ಮತ್ತು ಅದಕ್ಕಿಂತ ಕಡಿಮೆ ಮಕ್ಕಳಿರುವ ೧೨,೮೬೫ ಶಾಲೆಗಳು ಇವೆ ಎಂಬುವುದು ದೃಢಪಟ್ಟಿದೆ. ಇಂಥ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರನ್ನು ನೇಮಿಸಿ ಗುಣ ಮಟ್ಟದ ಶಿಕ್ಷಣವನ್ನು ನೀಡುವುದು ಅಸಾಧ್ಯ. ಆದುದರಿಂದ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ವಿಲೀನ ಮಾಡಿದರೆ ಸ್ವಲ್ಪಮಟ್ಟಿಗೆ ಶಿಕ್ಷಕರ ಕೊರತೆಯನ್ನ ನೀಗಿಸಿ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬಹುದಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶಾಲಾ ಶಿಕ್ಷಣದಲ್ಲಿ ಜಾರಿ ಮಾಡುವಾಗ ಅತೀ ಜಾಗರೂಕತೆಯಿಂದ ಎಲ್ಲಾ ಸೂಕ್ಷ್ಮ ವಿಚಾರಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಮತ್ತು ಆಡಳಿತದಲ್ಲಿ ಬದಲಾವಣೆಯನ್ನು ತರಲು ಆಡಳಿತ ಮತ್ತು ಶಾಲಾ ಸಿಬ್ಬಂದಿಗಳಿಗೆ ತರಬೇತಿಗಳನ್ನುನೀಡಬೇಕು. ಎನ್.ಇ.ಪಿ ಯ ಜಾರಿಯಲ್ಲಿ ಶಿಕ್ಷಕರು ಮಾತ್ರ ಪ್ರತ್ಯಕ್ಷವಾಗಿ ಭಾಗಿಯಾಗುವುದರಿಂದ ಶಿಕ್ಷಕರ ಅಭಿಪ್ರಾಯವನ್ನು ಹೆಚ್ಚಾಗಿ ಪರಿಗಣಿಸಿ ಹೊಸ ಶಿಕ್ಷಣನೀತಿಯನ್ನು ಜಾರಿ ಮಾಡಿ ಸರಕಾರಿ ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡಲು ಎಲ್ಲರೂ ಕೈ ಜೋಡಿಸಬೇಕು