ಮಗು ಉಳಿಸಲು ಕುರುವಿಲ್ಲಾದ್ವಯರ ಸಾಹಸ
ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
@.
ಎರಡು ವಾರಗಳ ಮೊದಲು ಈ ಕಾಲಂ ನಲ್ಲಿ ಕೈ ಕಾಲು ಮುರುಟಿ ಹುಟ್ಟಿದ ಫೋಕೋಮೀಲಿಯ ಮಗುವನ್ನು ಮಣಿಪಾಲ ಆಸ್ಪತ್ರೆಯಲ್ಲಿ ಪಾಲಕರು ಬಿಟ್ಟು ಹೋದಬಗ್ಗೆ ಬರೆದಿದ್ದೆ. ಆ ಮಗು ವಿವಿಧ ಒಳ್ಳೆಯ ಕೈ ಗಳನ್ನು ದಾಟಿ ಒಳ್ಳೆಯ ಸಾಕುತಾಯಿ ಕ್ಯಾಥರೀನ್ ಕಾಕ್ಸ್ ದೊರಕಿ ಅಮೆರಿಕಕ್ಕೆ ತೆರಳಿದ ವಿಚಾರ, ಆನಂತರ ಆಕೆಮೊಂಡು ಕೈನಲ್ಲಿಯೇ ಚಿತ್ರಕಲೆ ಕಲಿತು ಚಿತ್ರಕಾರಳಾಗಿ ಮಿಂಡಾ ಹೆಸರಿನಿಂದ ಇತ್ತೀಚೆಗೆ ಕಲಾ ಶಿಕ್ಷಕಿಯೂ ಆಗಿ ಬದುಕನ್ನು ಆತ್ಮವಿಶ್ವಾಸದಿಂದ ಎದುರಿಸಿ ಒಂದುಫಲಪ್ರದ ಜೀವನ ನಡೆಸುತ್ತಿರುವ ಬಗ್ಗೆ ಮಾಹಿತಿ ಇತ್ತು.
ಆ ಲೇಖನದ ವಿವರಗಳನ್ನು ತಿಳಿದ ನಂತರ ಮಣಿಪಾಲದಲ್ಲಿ ನೇತ್ರ ವಿಭಾಗದಲ್ಲಿ ನನಗಿಂತ ಸೀನಿಯರ್ ಆಗಿದ್ದ ಪ್ರಸ್ತುತ ಕೇರಳದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಡಾ ಜೇಮ್ಸ್ ಕುರುವಿ ಅವರು ಹಿಂದಿನ ತಮ್ಮ ಇದೇ ರೀತಿಯ ಮಗುವಿನ ಕತೆಯನ್ನು ಬಿಚ್ಚಿಟ್ಟರು.
ಅವರ ಮಾತಿನ ಆ ಕತೆ ಕೇಳಿ :ಅದು 1973 ನೇ ವರ್ಷ. ನಾವೆ ಮಣಿಪಾಲದ ಕೆ ಎಂ ಸಿ ಯಲ್ಲಿ ಎಂಬಿಬಿಎಸ್ ಮುಗಿಸಿ ಹೌಸ್ ಸರ್ಜನ್ಸಿ (1 ವರ್ಷ) ಮಾಡು ತ್ತಿದ್ದೆವು. ಕಸ್ತೂರಬಾ ಆಸ್ಪತ್ರೆಯಲ್ಲಿ ಕೈ ಕಾಲು ಮುರುಟಿದ ಒಂದು ಮಗು ಹುಟ್ಟಿತು. ಅದನ್ನು ಮಕ್ಕಳ ವೈದ್ಯರು ಫೋಕೋಮಿಲಿಯ ಮಗು ಎಂದು ಗುರುತಿಸಿದರು. ಈ ರೀತಿಯ ಮಗುವನ್ನು ನೋಡಿದ ಪಾಲಕರು ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಓಡಿ ಹೋದರು. ನಂತರ ಆಸ್ಪತ್ರೆ ಯಲ್ಲಿನ ಅಧಿಕಾರಿಗಳು ಹಾಗೂ ಹಿರಿಯ ಕಿರಿಯ ವೈದ್ಯರುಗಳು ಈ ಮಗುವನ್ನು ಏನು ಮಾಡಬೇಕು ಎಂಬ ಬಗ್ಗೆ ವಿಸ್ತೃತವಾದ ಸಭೆ ನಡೆಯಿತು. ಹೆಚ್ಚಿನ ಹಿರಿಯ ವೈದ್ಯರುಗಳು ನಿಧಾನವಾಗಿ ಮಗುವಿಗೆ ಮರಣ ತರುವ   ಮಾಡಿ ಮಗುವನ್ನು ಮುಗಿಸಿಬಿಡಬೇಕೆಂಬ ವಿಚಾರವನ್ನು ಮಂಡಿಸಿದರು.
ಅದರಲ್ಲೂ ಮಕ್ಕಳ ವೈದ್ಯರು ಮಗುವಿನ ಭವಿಷ್ಯದ ದೃಷ್ಟಿಯಿಂದ ಮುಂದಿನ ಜವಾಬ್ದಾರಿ ಗಮನದಲ್ಲಿಟ್ಟುಕೊಂಡು ಅದೇ ಸೂಕ್ತ ಎಂದು ತುಂಬಾ ದೃಢವಾಗಿ ತಿಳಿಸಿದರು. ಆದರೆ ಹೌಸ್ ಸರ್ಜನ್ಸಿ ಮಾಡುತ್ತಿದ್ದ ಹೆಚ್ಚಿನ ಕಿರಿಯ ವೈದ್ಯರುಗಳಿಗೆ ಜೀವವಿರುವ ಈ ಮಗುವಿಗೆ ನಿಧಾನವಾಗಿ ಸಾಯಿಸುವುದು ನ್ಯಾಯವೇ? ಇಂತಹಾ ಮಗುವಿಗೆ ಹಾಲು ಕೊಡದಿರಲು ಸಾಧ್ಯವೇ? ಎಂದು ತುಂಬಾ ಸಂದಿಗ್ಧ ಮನಸ್ಥಿತಿಯಲ್ಲಿದ್ದರು. ಆಗ ನಾವು ಕೆಲವರು ಏನಾದರೂ ಮಾಡಿ ಈ ಮಗುವನ್ನು ಬದುಕಿಸಿಕೊಳ್ಳಬೇಕೆಂದು ತೀರ್ಮಾನಿಸಿದೆವು. ಹಾಗೆ ತೀರ್ಮಾನ ತೆಗೆದುಕೊಂಡ ನಮ್ಮ ನಾಯಕ ಡಾ.ಕುರುವಿ ಜಾರ್ಜ್ ಮುಖ್ಯ ವ್ಯಕ್ತಿ.
ತುಂಬಾ ಬುದ್ಧಿವಂತ, ಸುರದ್ರೂಪಿಯಾದ ಆತ ಯಾವಾಗಲೂ ಮೊದಲ ೫ ಶ್ರೇಣಿಯಲ್ಲಿರುತ್ತಿದ್ದ. ಆತನ ಜತೆ ಅಷ್ಟೇನೂ ಬುದ್ಧಿವಂತನಲ್ಲದ ನಾನು ಕೈ ಜೋಡಿ ಸಿದೆ. ಹಾಗೆಯೇ ನಮ್ಮ ಗ್ಯಾಂಗಿನ 14 ಕಿರಿಯ ವೈದ್ಯರು ಈ ಮಗುವನ್ನು ಉಳಿಸಿಕೊಳ್ಳುವ ಯೋಜನೆಗೆ ಒಪ್ಪಿ ನಮಗೆ ಎಲ್ಲಾ ರೀತಿಯ ಸಹಕಾರ ನೀಡಿದರು. ಮಗುವನ್ನು ಮುಂದೆ ಎಲ್ಲಿ ಬಿಟ್ಟು ಸಾಕುವಂತೆ ಮಾಡಬಹುದೆಂದು ಹಲವಾರು ಕಡೆ ನಾವು ವಿಚಾರಿಸತೊಡಗಿದೆವು. ಆಗಿನ ಕಾಲವೋ ಹೆಚ್ಚಿನ ಈಗಿನವರಿಗೆ ಗೊತ್ತಿಲ್ಲ. ಮುಂಬೈಗೆ ಒಂದು ಕಾಗದ ಬರೆದರೆ ಆಮೆ ವೇಗದಲ್ಲಿ ಸಾಗಿ ಒಂದು ವಾರದ ನಂತರ ತಲುಪುತ್ತಿತ್ತು. ಅವರು ಆ ಕಡೆಯಿಂದ ಉತ್ತರ ಕೊಡಲು ತಮ್ಮದೇ ಸಮಯ ತೆಗೆದುಕೊಂಡರೆ ಒಂದು ತಿಂಗಳ ನಂತರ ನಮಗೆ ಉತ್ತರ ಬರುತ್ತಿತ್ತು.
ನಾವು ಮಗುವನ್ನು ದಡ ಸೇರಿಸುವ ಪ್ರಯತ್ನ ಆರಂಭಿಸಿ ಕೆಲವು ತಿಂಗಳ ನಂತರ ಈ ತರಹ ಮಗುವನ್ನು ಸೇರಿಸಿಕೊಳ್ಳುವ ಆಶ್ರಮ ದೊರಕಿತು. ಅದು ಪೂನಾ ದಿಂದ 5-6 ಗಂಟೆಗಳ ಪ್ರಯಾಣ ಮಾಡಿ ತಲುಪಬಹುದಾದ ಊರಿನಲ್ಲಿರುವ ಆಶ್ರಮವಾಗಿತ್ತು. ಮಗುವಿಗೆ ಕನಿಷ್ಠ 3 ತಿಂಗಳು ಆಗಬೇಕು ಎಂಬುದು ಅವರ ನಿರ್ಬಂಧವಾಗಿತ್ತು. ಮಗುವನ್ನು ಬೇರೆಯವರು ಬಂದು ದತ್ತು ತೆಗೆದುಕೊಂಡು ಹೋಗುವವರೆಗೆ ಪಾಲಿಸಿ ಬೆಳೆಸುತ್ತೇವೆ ಎಂಬ ರೀತಿಯ ಪಂಡಿತ್ ರೇಮಾಬಾಯಿ ಆಶ್ರಮ ಎಂಬುದಾಗಿತ್ತು. ಆಗ ನಮಗೆ ಆ ಮಗುವನ್ನು ಸಾಧ್ಯವಾದಷ್ಟು ಆರೋಗ್ಯವಾಗಿಟ್ಟುಕೊಂಡು ಜೀವಂತ ಇಟ್ಟುಕೊಳ್ಳುವುದು ಒಂದು ದೊಡ್ಡ ಸವಾಲಾಗಿತ್ತು. ಆದರೆ ಅದು ನಮಗೆ ಸಂತೋಷ ತರುವ ಅನುಭವವಾಗಿ ಮಾರ್ಪಟ್ಟಿತು. ನಾನು ಮತ್ತು ಕುರುವಿ ಜಾರ್ಜ್ ಇಬ್ಬರೂ ನರ್ಸರಿಗೆ ಹೋಗಿ ಈ ಮಗುವನ್ನು ಸ್ವಚ್ಛ ವಾಗಿರಿಸುವುದು ಹೇಗೆ, ಕಾಲಿಲ್ಲದ ಈ ಮಗುವಿಗೆ ನ್ಯಾಪಿಗಳನ್ನು ಹೇಗೆ ಹಾಕುವುದು ಎಂಬುದನ್ನು ಕಲಿತುಕೊಂಡೆವು.
ನಮಗೆ ಈ ಕೆಲಸದಲ್ಲಿ ಆಸ್ಪತ್ರೆಯ ನರ್ಸಿಂಗ್ ಕಲಿಯುತ್ತಿರುವ ಕಿರಿಯ ನರ್ಸ್ ಗಳು, ಹಾಗೂ ಮಹಿಳಾ ಹೌಸ್ ಸರ್ಜನ್‌ಗಳು (ಮಹಿಳಾ ವೈದ್ಯರು) – ಇವರೆಬಹಳ ಸಹಾಯ ಮಾಡಿದರು. ನರ್ಸಿಂಗ್ ವಿದ್ಯಾರ್ಥಿನಿಯರು ಹೆರಿಗೆಯಾದ ತಾಯಂದಿರ ಬಳಿ ಹೋಗಿ ಅವರ ಎದೆಯ ಹಾಲು ಕುಡಿಸಿಕೊಂಡು ಬರುತ್ತಿದ್ದರು. ಹೆಚ್ಚಿನ ತಾಯಂದಿರು ಈ ಕ್ರಿಯೆಗೆ ಒಪ್ಪಿ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದರು. ಹಾಗಾಗಿ ಆ ಮಗು 50 ಕ್ಕೂ ಹೆಚ್ಚು ತಾಯಂದಿರ ಹಾಲು ಕುಡಿದಿರಬಹುದು.ಸೋಸಮ್ಮ ಎಂಬ ನರ್ಸ್ ಒಬ್ಬರು ನಮಗೆ ಈ ಕೆಲಸದಲ್ಲಿ ತುಂಬಾ ಸಹಾಯ ಮಾಡಿದರು.
ಹಾಗೆಯೇ ಚಿಕ್ಕ ವಯಸ್ಸಿನ ಹಲವು ನರ್ಸ್‌ಗಳು ತುಂಬಾ ಉತ್ಸುಕರಾಗಿ ನಮಗೆ ಈ ಕೆಲಸ ಸುಲಭವಾಗಿಸಿದರು. ಹಾಗೆಯೇ ನಮ್ಮ ಈ ಮಿಷನ್‌ನ ಮುಖ್ಯ ದಿನ ಬಂದಿತು. ಮಗುವನ್ನು ಕೊಂಡೊಯ್ಯಲು ಒಂದು ವಿಶೇಷ ಪೆಟ್ಟಿಗೆ ಮಾಡಿಸಿದೆವು. ಬಿಸಿ ನೀರು, ಬಿಸಿ ಹಾಲು, ಹಲವಾರು ನ್ಯಾಪಿಗಳು- ಹೀಗೆ ಎಲ್ಲಾ ಸಾಮಗ್ರಿ ಗಳನ್ನು ಜೋಡಿಸಿ ಇಟ್ಟುಕೊಂಡೆವು ಹಾಗೆಯೇ 2 ಬಾಳೆಹಣ್ಣಿನ ಗನೆಗಳನ್ನು ನಮ್ಮ ಮಿತ್ರರು ಕೊಟ್ಟರು. ಅವರಿಗೆ ಈ ಕುರುವಿದ್ವಯರು ಬಾಳೆಹಣ್ಣು ಮತ್ತು ನೀರು ಕುಡಿದು ಹಲವಾರು ದಿನಗಳನ್ನು ಕಳೆಯಬಲ್ಲರು ಎಂಬುದು ಚೆನ್ನಾಗಿ ಗೊತ್ತಿತ್ತು. ಮಂಗಳೂರು ಮತ್ತು ಬಾಂಬೆ ಬಳ್ ಬಸ್ಸಿನಲ್ಲಿ ಮುಂದಿನ ಸಾಲಿನ 2  ಸೀಟು ಗಳನ್ನು ಕಾಯ್ದಿರಿಸಿದ್ದೆವು. ಆ ಸಂದರ್ಭದಲ್ಲಿ ನಮ್ಮ ಮಿತ್ರರು ಹಲವರಿಂದ ದೇಣಿಗೆಯೆಂದು 1800- 1900 ರ ದೊಡ್ಡ ಮೊತ್ತ ನಮ್ಮ ಕೈಯಲ್ಲಿರಿಸಿದರು. ಆಗ ಟಿಕೆಟ್ ಬೆಲೆ ನಮ್ಮಿಬ್ಬರಿಂದ 150 ರು.ಗಳಿಗಿಂತ ಕಡಿಮೆ ಇತ್ತು. ಹೌದು ಮಗುವಿಗೆ ಚಾರ್ಜ್ ಮಾಡಿರಲಿಲ್ಲ. ಎದೆ ಹಾಲು ಕುಡಿದು ಬೆಳೆದ ಮಗುವನ್ನು ನಮ್ಮಸುಪರ್ದಿಗೆ ಕೊಟ್ಟರು. ಹಾಗೆಯೇ ಉಡುಪಿ ಬಸ್ ನಿಲ್ದಾಣದಲ್ಲಿ ರಾತ್ರಿ 7.30 ರ ಹೊತ್ತಿಗೆ ನಮಗೆ ಅಮೋಘವಾಗಿ ಬೀಳ್ಕೊಟ್ಟರು.
ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರೂ ಆರಂಭದಲ್ಲಿ ನಮ್ಮ ಮೇಲೆ ತೀವ್ರ ಅನುಮಾನ ತಳೆದಿದ್ದರು. ಆಮೇಲೆ ನಮ್ಮ ಉದ್ದೇಶ ಮತ್ತು ದಾಖಲೆಗಳ ವಿಚಾರ ತಿಳಿದ ನಂತರ ಅವರೆಲ್ಲರ ಅಭಿಪ್ರಾಯ ಧನಾತ್ಮಕವಾಗಿ ಬದಲಾಯಿತು. ಹಾಗೆಯೇ ತಮ್ಮದೂ ಈ ಕಾಯಕದಲ್ಲಿ ಸಹಾಯವಿರಲಿ ಎಂದು 5, 10 ರು.ಗಳ ನೋಟು ಗಳನ್ನು ದೇಣಿಗೆಯಾಗಿ ಪ್ರಯಾಣಿಕರು ಕೊಡಲಾರಂಭಿಸಿದರು. ಒಬ್ಬರು 100 ರು. ನೋಟನ್ನು ಸಹಿತ ಕೊಟ್ಟರು. ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ನಮಗೆ ತುಂಬಾ ಪೂರಕವಾಗಿದ್ದರು. ರಾತ್ರಿ 11 ಗಂಟೆಯವರೆಗೆ ಎಲ್ಲವೂ ಸುಸೂತ್ರವಾಗಿತ್ತು. ಆನಂತರ ಮಗು ಅಳಲಾರಂಭಿಸಿತು.
ಆ ಮಗುವಿಗೆ ಎದೆ ಹಾಲು ಕುಡಿದು ಅಭ್ಯಾಸ ವಿದ್ದುದರಿಂದ ನಾವು ಕೊಟ್ಟ ಬಾಟಲಿ ಹಾಲು ಆಕೆಗೆ ರುಚಿಸಲಿಲ್ಲ. ಈ ಮಗುವಿನ ಎಡಬಿಡದ ಅಳುವಿನ ಕಾರಣದಿಂದ ಪ್ರಯಾಣಿಕರು ಬೆಳಗಿನ ಜಾವ 3 ಗಂಟೆಯವರೆಗೂ ನಿzಗೆಡಬೇಕಾಯಿತು. ಆಗ ಇದ್ದಕ್ಕಿದ್ದಂತೆ ಒಬ್ಬ ಮಹಿಳೆ ಎದ್ದು ಬಂದು ತನ್ನ ಸ್ಥಳಕ್ಕೆ ಹೋಗಿ ಎದೆ ಹಾಲು ಕುಡಿಸಿ ಮಗುವನ್ನು ನಮಗೆ ಹಿಂತಿರುಗಿ ಸಿದಳು.ಇದು ಮನುಷ್ಯತ್ವದ ಪರಮೋಚ್ಚ ಗುಣ ಎಂದು ನಾನು ಭಾವಿಸುತ್ತೇನೆ.
ನಾವು ಪೂನಾದಲ್ಲಿ ಬಸ್ ನಿಂದ ಇಳಿದಾಗ ಬಳ ಮೋಟಾರ್ಸ್‌ನವರು ನಮಗೆ ನಮ್ಮ ಟಿಕೆಟ್ ಹಣವನ್ನು ವಾಪಸ್ ಕೊಟ್ಟರಲ್ಲದೆ ನಮಗೆ ಉಡುಪಿಗೆ ಉಚಿತವಾಗಿಹಿಂದಿರುಗಿ ಕೊಂಡೊಯ್ಯುತ್ತೇವೆಂದು ತಿಳಿಸಿದಾಗ ನಮ್ಮ ಟಿಕೆಟ್ ಬೆಲೆ ಉಚಿತವಾದಂತಾಯ್ತು. ಅಲ್ಲಿಂದ ಆಶ್ರಮಕ್ಕೆ ನಾವು ರೈಲಿನಲ್ಲಿ ಹೋದೆವು. ಆ ಪ್ರಯಾಣದಲ್ಲಿ ಮಗು ತುಂಬಾ ಅಳುತ್ತಿದ್ದುದರಿಂದ ನಮಗೆ ಯಾಣ ತ್ರಾಸದಾಯಕ ಎನಿಸಿತು. ಆ ಹೊತ್ತಿಗೆ ನಾವು ಮಗುವಿಗಾಗಿ-ಸ್ಕ್‌ನಲ್ಲಿತೆಗೆದುಕೊಂಡು ಹೋಗಿದ್ದಹಾಲೂ ಖಾಲಿಯಾಗಿತ್ತು. ಮಗುವಿಗೆ ಕುಡಿಸಲು ಬಿಸಿ ನೀರು ಮಾತ್ರ ಉಳಿದಿತ್ತು. ಅದರಲ್ಲಿ ಮಗುವಿನ ಹೊಟ್ಟೆ ತುಂಬಲು ಸಾಧ್ಯವೇ? ಹಾಗೂ ಹೀಗೂ ಆ ಕಷ್ಟಕರನಾಲ್ಕೂವರೆ ಗಂಟೆಗಳ ಪ್ರಯಾಣ ಮುಗಿಸಿ ಆಶ್ರಮ ತಲುಪಿದೆವು.
ಮಗುವನ್ನು ಆಶ್ರಮದ ಅಧಿಕಾರಿಗಳಿಗೆ ವರ್ಗಾಯಿಸಿದೆವು. ಸುದೀರ್ಘ 37 ಗಂಟೆಗಳ ಪ್ರಯಾಣವಾಗಿದ್ದರಿಂದ ತುಂಬಾ ಸುಸ್ತಾಗಿತ್ತು. ಒಳ್ಳೆಯ ಸ್ನಾನ ಮಾಡಿ ನಮ್ಮಲ್ಲಿ ಉಳಿದಿದ್ದ ಎಲ್ಲಾ ಬಾಳೆಹಣ್ಣು ತಿಂದು ನೀರು ಕುಡಿದು ಮಲಗಿದೆವು. 16 ಗಂಟೆಗಳ ದೀರ್ಘ ಅವಧಿಯ ನಂತರ ಎಚ್ಚರವಾದಾಗ ನಾವು ಎಲ್ಲಿದ್ದೇವೆ ಎಂದು ತಿಳಿಯದೆ ಹೊರಗೆ ಬಂದಾಗ ಅರಿವಾಯಿತು. ಮಾರನೆಯ ದಿನ ಬೆಳಗಿನ ತಿಂಡಿ ತಿಂದು ಮಗುವನ್ನು ನೋಡದೆ ಹಿಂದಿರುಗಿದೆವು. ಆನಂತರ ಮಗುವಿನ ಬಗ್ಗೆ ನನಗೆ ಸಂಪರ್ಕ ತಪ್ಪಿಹೋಯಿತು. ಆದರೆ ನನ್ನ ಸ್ನೇಹಿತ ಕುರುವಿ ಜಾರ್ಜ್ ಲಂಡನ್ನಿಗೆ ಹೋಗಿ ಮನೋರೋಗ ಶಾಸ್ತ್ರ () ದಲ್ಲಿ  ಮಾಡಿಸುಂದರ ಇಂಗ್ಲೀಷ್ ಮಹಿಳೆಯನ್ನು ಮದುವೆಯಾಗಿ ಕೆಲವು ಕಾಲ ಆತ ಇಂಗ್ಲೆಂಡಿನಲ್ಲಿ ಇದ್ದು ನಂತರ ಆತ ಆಸ್ಟ್ರೇಲಿಯಾಗೆ ತೆರಳಿ ಅಲ್ಲಿ ವಿಕ್ಟೋರಿಯಾ ರಾಜ್ಯದಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಮನೋರೋಗ ಶಾಸ್ತ್ರದ ಪ್ರೊಫೆಸರ್ ಮತ್ತು ಮುಖ್ಯಸ್ಥರ ಹುದ್ದೆಯಿಂದ ಇತ್ತೀಚಿಗೆ ನಿವೃತ್ತರಾಗಿದ್ದಾರೆ.
ಅವರಿಗೆ ಈ ಮಗುವಿನ ಮುಂದಿನ ವಿಚಾರ ಸ್ವಲ್ಪ ಗೊತ್ತಿತ್ತು. ಆ ಮಗುವನ್ನು ಪೂನಾದ ಬಳಿಯ ಆಶ್ರಮದಿಂದ ಡೆನ್ಮಾರ್ಕ್‌ನ ಮಹಿಳೆಯೊಬ್ಬರು ದತ್ತು ಸ್ವೀಕರಿಸಿ ಡೆನ್ಮಾರ್ಕ್ ಗೆ ಕೊಂಡೊ ಯ್ದರು. ಈಕೆಯ ಸಾಕುತಾಯಿ ಮದುವೆಯಾಗಲಿಲ್ಲ. ಬಹಳ ಕಾಲ ಮಗು ಡೆನ್ಮಾರ್ಕನಲ್ಲಿಯೇ ಇತ್ತು. ನಂತರ ಆಕೆ ತನ್ನ ವಾಸಸ್ಥಾನ ಅಮೆರಿಕಕ್ಕೆ ಬದಲಾಯಿಸಿ ಅಲ್ಲಿ ನೆಲೆಗೊಂಡಳು. 2014 ರಲ್ಲಿ ನಾನು ನನ್ನ ಕೆಲವು ಸ್ನೇಹಿತರ ಆಹ್ವಾನದ ಮೇರೆಗೆ ಅಮೆರಿಕಕ್ಕೆ ಹೋದಾಗ ಆಕೆಯನ್ನು ಭೇಟಿ ಮಾಡಲು ಬಯಸಿದ್ದೆ.
ಕಾರಣಾಂತರ ಗಳಿಂದ ಆ ಭೇಟಿ ರದ್ದಾಯಿತು. ಲೀಸಾ ಓಸ್ಲೆನ್ ಆಕೆಯ ಹೆಸರು. ಆ ಮಹಿಳೆಯ ಸಾಕುತಾಯಿ 2019 ರಲ್ಲಿ ವಿಧಿವಶಳಾದಳು. ಕೈ ಕಾಲುಗಳ ಊನತೆಯಿಂದ ಲೀಸಾ ಓಸ್ಲೆನ್ ಗೆ 24 ಗಂಟೆಗಳ ಕಾಲ ಒಬ್ಬರ ಸಹಾಯದ ಅವಶ್ಯಕತೆ ಇದ್ದೇ ಇದೆ. ಆಕೆಯ ಸಾಕುತಾಯಿಯ ಮರಣದ ನಂತರ ಆಕೆಯ ಜೀವನ ತುಂಬಾ ದುರ್ಭರವಾಗಿದೆ. ಪ್ರಸ್ತುತ ಆಕೆ ಒಂದು ಕಾಲೇಜಿನಲ್ಲಿ ಉಪನ್ಯಾಸಕಳಾಗಿ ಕೆಲಸ ಮಾಡುತ್ತಿದ್ದು ಈಕೆಯನ್ನು ನೋಡಿಕೊಳ್ಳಲು  ಗಳ ಅವಶ್ಯಕತೆ ಇದೆ. ವಾರಕ್ಕೆ ಕನಿಷ್ಠ ಎಂದರೆ 1800 ಡಾಲರುಗಳು ಬೇಕಾಗುತ್ತದೆ. ಈಕೆಗೆ ಅದನ್ನು ಭರಿಸಲು ಶಕ್ತಿ ಇಲ್ಲ. ಹಾಗಾಗಿ ಆಕೆಯ ಮಿತ್ರರು    .  ಎಂಬ ವೆಬ್ ಸೈಟ್ ತೆರದು ದಾನಿಗಳಿಂದ ದೇಣಿಗೆ ನಿರೀಕ್ಷಿಸುತ್ತಿzರೆ. ನಾನು 2 ವಾರದ ಮೊದಲು ಬರೆದ ಮಿಂಡಾಳ ಜೀವನ ಒಂದು ಹಂತದಲ್ಲಿ ಧನಾತ್ಮಕವಾಗಿದ್ದರೆ ಅದೇ ರೀತಿಯ ಲೀಸಾ ಓಸ್ಲೆನ್ ಳ ಜೀವನ ತ್ರಾಸದಾಯಕವಾಗಿದೆ ಎಂಬುದು ದುರದೃಷ್ಟಕರ.