ಹೌದು ಖಾನ್ ಸಾಬ್, ಜಾಗತಿಕ ಕ್ರಿಕೆಟನ್ನು ಭಾರತ ನಿಯಂತ್ರಿಸುತ್ತದೆ !
ಪ್ರಚಲಿತ
ವಿಜಯ್ ದರ್‌’ಡ
ಹಿರಿಯ ಪತ್ರಕರ್ತ, ಅಧ್ಯಕ್ಷರು, ಲೋಕಮತ್ ಮೀಡಿಯ
ಜಾಗತಿಕ ಕ್ರಿಕೆಟ್ ಅನ್ನು ಭಾರತೀಯ ಕ್ರಿಕೆಟ್ ಮಂಡಳಿ ನಿಯಂತ್ರಿಸುತ್ತಿದೆ ಎಂಬ ಪಾಕಿಸ್ತಾನದ ಒಂದು ಕಾಲದ ಸೂಪರ್‌ಸ್ಟಾರ್ ಕ್ರಿಕೆಟಿಗ ಹಾಗೂ ಹಾಲಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾತುಗಳನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಖಾನ್ ಸಾಬ್, ಯಾರಿಗೆ ತಾಕತ್ತಿದೆಯೋ, ಯಾವ ರಾಷ್ಟ್ರದ ಆಟಗಾರರು ಸಂಪೂರ್ಣಸಮರ್ಪಣಾ ಭಾವದಿಂದ ತಮ್ಮ ದೇಶಕ್ಕಾಗಿ ಆಡುತ್ತಾರೋ ಆ ರಾಷ್ಟ್ರಕ್ಕೆ ಆಟದ ಮೇಲೆ ಖಂಡಿತ ನಿಯಂತ್ರಣವಿರುತ್ತದೆ.
ಡಿಯರ್ ಇಮ್ರಾನ್ ಖಾನ್ ಸಾಬ್, ನನಗೆ ನಿಮ್ಮ ನೋವು ಅರ್ಥವಾಗುತ್ತದೆ. ಮ್ಯಾಚ್ ಇನ್ನೇನು ಆರಂಭವಾಗಬೇಕು ಅನ್ನುವಾಗ ನ್ಯೂಜಿಲೆಂಡ್ ತಂಡ ಪಾಕಿಸ್ತಾನದಲ್ಲಿ ನಮಗೆ ಭಯೋತ್ಪಾದಕ ದಾಳಿಯ ಆತಂಕವಿದೆ ಎಂದು ಹೇಳಿ ಸ್ವದೇಶಕ್ಕೆ ವಾಪಸಾಗುತ್ತದೆ. ಇಂಗ್ಲೆಂಡ್ ತಂಡ ಕೂಡ ಇದೇ ಕಾರಣ ನೀಡಿಪಾಕಿಸ್ತಾನಕ್ಕೆ ಬರಲು ನಿರಾಕರಿಸುತ್ತದೆ. ಇದರಿಂದ ಪಾಕಿಸ್ತಾನಕ್ಕೆ ಅವಮಾನವಾಗುವುದು ಸಹಜವೇ ಬಿಡಿ. ಅವಮಾನವಲ್ಲ, ನಿಮಗೆ ನಾಚಿಕೆಯಾಗಬೇಕು! ಖಂಡಿತ ಇದು ಒಂದು ದೇಶ ನಾಚಿಕೆ ಪಡುವ ವಿಷಯ. ಇದರ ಜೊತೆಗೆ, ಆ ಮ್ಯಾಚ್‌ಗಳು ನಡೆದಿದ್ದರೆ ನಿಮ್ಮ ದೇಶಕ್ಕೆ ಆಗುತ್ತಿದ್ದ ಲಾಭ, ಕ್ರಿಕೆಟಿಗರ ಕಿಸೆ ತುಂಬುತ್ತಿದ್ದ ಹಣ ಕೂಡ ಹೋಯಿತಲ್ಲ! ಬಹಳ ದುಃಖದ ವಿಚಾರವೇ ಹೌದು. ಹೀಗಾಗಿ ನಿಮಗೆ ಚಡಪಡಿಕೆಯಾಗುವುದು, ನಖಶಿಖಾಂತ ನೋವಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ನ್ಯೂಜಿಲೆಂಡ್ ತಂಡ ಭಯೋತ್ಪಾದಕ ದಾಳಿಯ ಆತಂಕ ವ್ಯಕ್ತಪಡಿಸಿ ವಾಪಸ್ ಹೊರಟಾಗ ನೀವು ಪಾಕಿಸ್ತಾನ ದಲ್ಲಿನ ಉಗ್ರವಾದದ ಬಗ್ಗೆ ಏನಾದರೂ ಮಾತನಾಡುತ್ತೀರಿ ಎಂದು ನಿರೀಕ್ಷಿಸುತ್ತಿದ್ದೆ. ಆದರೆ, ಸ್ವತಃ ದೇಶವೇ ಅವಸಾನದ ಅಂಚಿನಲ್ಲಿರುವಾಗ ನಿಮ್ಮವರು ಪಾಕಿಸ್ತಾನದ ಕ್ರಿಕೆಟ್ ಮಂಡಳಿಯನ್ನು ರಿಪೇರಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮ ವಾರ್ತಾ ಮಂತ್ರಿ -ವಾದ್ ಚೌಧರಿ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಬೆದರಿಕೆ ಹಾಕಿದ ಇ-ಮೇಲ್ ಭಾರತದಿಂದ ಬಂದಿದೆ ಮತ್ತು ಅದನ್ನು ಕಳಿಸಿದ ಉಪಕರಣ ಕೂಡ ಭಾರತದಲ್ಲೇ ಪತ್ತೆಯಾಗಿದೆ ಎಂದು ರೀಲು ಬಿಡುತ್ತಾರೆ. ಈ ಮಾಹಿತಿ ನಿಮಗೆ ಸಿಕ್ಕಿದ್ದೆಲ್ಲಿ ಎಂದು ಕೇಳಿದರೆ ಆ ಮನುಷ್ಯನ ಬಳಿ ಉತ್ತರವಿಲ್ಲ. ಯಾರೋ ಓಂಪ್ರಕಾಶ್ ಎಂಬ ವ್ಯಕ್ತಿ ಮುಂಬೈನಿಂದ ಇದನ್ನು ಕಳಿಸಿದ್ದಾನೆ ಎಂದೂ ಹೇಳುತ್ತಾರೆ!
ಒಂದು ದೇಶದ ವಾರ್ತಾ ಸಚಿವ ಇಂತಹ ಮೂರ್ಖತನದ ಕೆಲಸ ಮಾಡಲು ಹೇಗೆ ಸಾಧ್ಯ? ನನಗೆ ಆಶ್ಚರ್ಯವಾಗುತ್ತದೆ. ಈ ಕಿತಾಪತಿ ಸಾಲದೆಂಬಂತೆ ಪಾಕಿಸ್ತಾನದ ಕ್ರಿಕೆಟ್ ಮಂಡಳಿಯ ಚೇರ್ಮನ್ ರಮೀಜ್ ರಾಜಾ ಇವೆಲ್ಲವೂ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಯ ಕುತಂತ್ರ ಎನ್ನಲು ಆರಂಭಿಸಿದ್ದಾರೆ! ನಿಮ್ಮ ದೇಶದಲ್ಲಿ ಪರಿಸ್ಥಿತಿ ನಿಜವಾಗಿಯೂ ಹದಗೆಟ್ಟಿದೆ. ನಿಮ್ಮ ಸೇನೆ ಹಾಗೂ ಗುಪ್ತಚರ ದಳ (ಐಎಸ್‌ಐ)ಗಳು ಭಯೋತ್ಪಾದಕರನ್ನು ಬೆಂಬಲಿಸುತ್ತಿವೆ. ಆದರೆ ನೀವು ಭಾರತದ ಮೇಲೆ ಗೂಬೆ ಕೂರಿಸುತ್ತಿದ್ದೀರಿ! ದೇವರಿಗಾದರೂ ಸ್ವಲ್ಪ ಹೆದರಿ ಮಾರಾಯ್ರೇ!
ನಿಮ್ಮ ಉಪದ್ವ್ಯಾಪಗಳು ಇಷ್ಟಕ್ಕೇ ನಿಂತಿಲ್ಲ. ಈಗ ಜಾಗತಿಕ ಕ್ರಿಕೆಟ್ ಅನ್ನು ಭಾರತ ನಿಯಂತ್ರಿಸುತ್ತಿದೆ ಎಂದು ಹೊಸ ವರಾತ ಶುರುಮಾಡಿದ್ದೀರಿ. ಹೌದುಖಾನ್ ಸಾಬ್! ಖಂಡಿತ ಭಾರತವೇ ಜಾಗತಿಕ ಕ್ರಿಕೆಟ್ ಆಟದ ಮೇಲೆ ನಿಯಂತ್ರಣ ಹೊಂದಿದೆ. ಯಾರಿಗೆ ಶಕ್ತಿಯಿದೆಯೋ, ಯಾವ ಆಟಗಾರರು ತಮ್ಮ ರಾಷ್ಟ್ರ ಕ್ಕಾಗಿ ಚೆನ್ನಾಗಿ ಆಡುತ್ತಾರೋ ಅವರಿಗೆ ಸಹಜವಾಗಿಯೇ ಈ ಕ್ರೀಡೆಯ ಮೇಲೆ ನಿಯಂತ್ರಣವಿರುತ್ತದೆ. ನಿಮಗೇಕೆ ಹೊಟ್ಟೆ ಉರಿ? ನಾನಿಲ್ಲಿ ಉದ್ದೇಶಪೂರ್ವಕವಾಗಿ ‘ರಾಷ್ಟ್ರ ಎಂಬ ಪದ ಬಳಸುತ್ತಿದ್ದೇನೆ. ನಿಮಗಿದು ಅರ್ಥವಾಗದೆ ಹೋಗಬಹುದು. ಹೀಗಾಗಿ ಕೆರ್ರಿ ಪ್ಯಾಕರ್‌ನ ವಿಚಾರ ನೆನಪಿಸುತ್ತೇನೆ ಕೇಳಿ.
1977 ಹಾಗೂ 1979ರ ನಡುವೆ ಕೆರ್ರಿ ಪ್ಯಾಕರ್ ಒಂದಷ್ಟು ಕ್ರಿಕೆಟ್ ತಂಡಗಳನ್ನು ರಚಿಸಿದ್ದರು. ಆಗ ಪಾಕಿಸ್ತಾನದ ಅಷ್ಟೂ ಆಟಗಾರರು ಅವರ ಜೊತೆ ಹೋಗಿದ್ದರು. ನಿಮಗೆ ನೆನಪಿಲ್ಲವೇ? ನೀವೂ ಕೂಡ ಅವರ ಜೊತೆ ಹೋಗಿದ್ದಿರಿ. ಖಾನ್ ಸಾಬ್, ಆಗ ಒಬ್ಬನೇ ಒಬ್ಬ ಭಾರತೀಯ ಆಟಗಾರ ಕೆರ್ರಿ ಪ್ಯಾಕರ್ ಜೊತೆ ಹೋಗಿರಲಿಲ್ಲ. ಏಕೆಂದರೆ ತಮ್ಮ ರಾಷ್ಟ್ರಕ್ಕಾಗಿ ಆಡುವ ಹೆಮ್ಮೆಗಿಂತ ನಮ್ಮ ದೇಶದ ಆಟಗಾರರಿಗೆ ಹಣ ಮುಖ್ಯವಾಗಿರಲಿಲ್ಲ. ಆದರೆ ಪಾಕಿಸ್ತಾನದ ಕತೆ ನೋಡಿ. ನಿಮ್ಮ ದೇಶದ ಎಷ್ಟು ಮಂದಿ ಕ್ರಿಕೆಟ್ ಆಟಗಾರರು ನಿಮ್ಮ ದೇಶದಲ್ಲೇ ವಾಸಿಸುತ್ತಿದ್ದಾರೆ? ಎಷ್ಟು ಮಂದಿ ವಿದೇಶದಲ್ಲಿ ನೆಲೆಸಿದ್ದಾರೆ? ನೀವೂ ಕೂಡ ಹೆಚ್ಚಿನ ಕಾಲವಿದೇಶದಲ್ಲೇ ಇರುತ್ತಿದ್ದಿರಿ!
ಭಾರತದ ಕ್ರಿಕೆಟ್ ಸ್ಪಿರಿಟ್ ಬಗ್ಗೆ ನಿಮಗೆ ಇನ್ನೊಂದು ವಿಷಯ ನೆನಪಿಸುತ್ತೇನೆ. ನಾವು ಕ್ರಿಕೆಟ್ ಆಟ ಕಲಿತಿದ್ದು ಇಂಗ್ಲೆಂಡ್‌ನಿಂದ. ಆದರೆ, ನಮ್ಮ ದೇಶ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ಗೆದ್ದಿದ್ದು ಕೂಡ ಇಂಗ್ಲೆಂಡ್ ವಿರುದ್ಧವೇ. ಅದು ಹೋಗಲಿ. ನಮ್ಮ ದೇಶ ಮೊದಲ ಟೆಸ್ಟ್ ಕ್ರಿಕೆಟ್ ಸರಣಿ ಗೆದ್ದಿದ್ದು ಪಾಕಿಸ್ತಾನದ ವಿರುದ್ಧ ಎಂಬವಿಷಯವನ್ನಾದರೂ ನಿಮ್ಮ ಕ್ರಿಕೆಟ್ ಪೂರ್ವಜರು ಹೇಳಿರಲಿಕ್ಕೆ ಸಾಕು.
ನಿಮಗೀಗ ಬಿಸಿಸಿಐ ಹೇಗೆ ಇಷ್ಟೊಂದು ಶಕ್ತಿಶಾಲಿಯಾಯಿತು, ಹೇಗೆ ನಿಮ್ಮ ದೇಶದ ಕ್ರಿಕೆಟ್ ಮಂಡಳಿ ಹಾಗೂ ತಂಡಗಳು ಸಂಕಷ್ಟದಲ್ಲಿರುವಾಗ ಭಾರತೀಯಕ್ರಿಕೆಟ್ ಮಂಡಳಿಯು ಇಡೀ ಜಗತ್ತಿನ ಕ್ರಿಕೆಟ್ ಲೋಕ ವನ್ನು ನಿಯಂತ್ರಿಸುವಷ್ಟು ಸಾಮರ್ಥ್ಯ ಪಡೆಯಿತು ಎಂಬುದನ್ನು ಹೇಳುತ್ತೇನೆ. ಮೊದಲನೆಯದಾಗಿ,ಬಿಸಿಸಿಐ ತನ್ನ ಹುಟ್ಟಿನಿಂದಲೂ ಒಂದು ಸ್ವತಂತ್ರ ಸಂಸ್ಥೆಯಾಗಿಯೇ ಕೆಲಸ ಮಾಡುತ್ತ ಬಂದಿದೆ. ಕಳೆದ 30-40 ವರ್ಷಗಳಲ್ಲಿ ಈ ಸಂಸ್ಥೆಯನ್ನು ಹೇಗೆ ಕಟ್ಟಿಬೆಳೆಸಲಾಗಿದೆ ಎಂಬುದನ್ನು ನೀವು ಊಹೆ ಕೂಡ ಮಾಡಲಾರಿರಿ. 1983ರಲ್ಲಿ ವಿಶ್ವಕಪ್ ಗೆದ್ದ ಮೇಲೆ ನಮ್ಮ ಕ್ರಿಕೆಟ್ ಮಂಡಳಿಗೆ ಹಣ ಹರಿದುಬ ರತೊಡಗಿತು. ನಮ್ಮ ದೇಶದ ಆರ್ಥಿಕತೆ ಬೆಳೆಯುತ್ತಾ ಹೋದಹಾಗೆ ಇನ್ನಷ್ಟು ಹಣ ಬರತೊಡಗಿತು.
ನಾವು ಈ ಹಣವನ್ನು ಸರಿಯಾಗಿ ಬಳಸಿಕೊಂಡೆವು. ನಮ್ಮ ದೇಶದ ಪ್ರತಿ ರಾಜ್ಯದಲ್ಲೂ ಇಂದು ಒಳ್ಳೊಳ್ಳೆ ಕ್ರಿಕೆಟ್ ಸ್ಟೇಡಿಯಂಗಳಿವೆ. ಕಾಶ್ಮೀರದಿಂದ ಕನ್ಯಾ ಕುಮಾರಿ ಯವರೆಗೆ ಪ್ರತಿ ಭಾಗದಲ್ಲೂ ಕ್ರಿಕೆಟ್ ಆಡಲಾಗುತ್ತದೆ. ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಎಲ್ಲೆಡೆ ಒಳ್ಳೆಯ ಕ್ರೀಡಾ ಮೂಲ ಸೌಕರ್ಯ ಗಳಿವೆ. ಈ ಹಂತದಲ್ಲಿ ಚೆನ್ನಾಗಿ ಕ್ರಿಕೆಟ್ ಆಡುವ ಮಕ್ಕಳು ರಾಜ್ಯ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗುತ್ತಾರೆ. ಅಲ್ಲಿಂದ ಆಟಗಾರರು ದುಲೀಪ್ ಟ್ರೋಫಿಯಿಂದ ಹಿಡಿದು ರಣಜಿ ಟ್ರೋಫಿಯವರೆಗೆ ಹಲವಾರು ವೇದಿಕೆಗಳಲ್ಲಿ ಪರೀಕ್ಷೆಗೆ ಒಳಪಡುತ್ತಾರೆ.
ನಾವು ಕ್ರಿಕೆಟ್ ಆಟಗಾರರನ್ನು ಪ್ರತಿಯೊಂದು ಹಂತದಲ್ಲೂ ಚೆನ್ನಾಗಿ ಬೆಳೆಸುತ್ತಾ ಬಂದಿದ್ದೇವೆ. ನಮ್ಮ ದೇಶದ ತಂಡದಲ್ಲಿ 11 ಆಟಗಾರರು ಆಡುತ್ತಿದ್ದರೆ ಅವರಹಿಂದೆ ಅಸಂಖ್ಯಾತ ಆಟಗಾರರು ತಮ್ಮ ಸರದಿಗಾಗಿ ಕಾಯುತ್ತಿರುತ್ತಾರೆ. ಐಪಿಎಲ್ ರೂಪ ದಲ್ಲಿ ನಾವು ಕ್ರಿಕೆಟ್‌ಗಾಗಿ ಇನ್ನೊಂದು ಅದ್ಭುತ ಅವಕಾಶ ಸೃಷ್ಟಿಸಿ ದ್ದೇವೆ. ಇದರಲ್ಲಿ ಜಗತ್ತಿನಾದ್ಯಂತ ಇರುವ ಎಲ್ಲಾ ದೇಶಗಳ ಆಟಗಾರರಿಗೂ ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಧ್ಯವಿದೆ. ಪಾಕಿಸ್ತಾನದ ಎಡವಟ್ಟಿ ನಿಂದಾಗಿ ನಿಮ್ಮ ದೇಶದ ಆಟಗಾರರಿಗೆ ಐಪಿಎಲ್‌ನಲ್ಲಿ ಅವಕಾಶ ನೀಡುತ್ತಿಲ್ಲ ಎಂಬುದು ಬೇರೆ ವಿಚಾರ.
ಭಾರತದಲ್ಲಿರುವಂತಹ ಕ್ರಿಕೆಟ್ ಮೂಲಸೌಕರ್ಯ ಪಾಕಿಸ್ತಾನದಲ್ಲೂ ಇರಬೇಕಿತ್ತು ಎಂದು ನೀವೇ ಸ್ವತಃ ಹೇಳುತ್ತಾ ಬಂದವರು. ಈಗ ನೀವೇ ಆ ದೇಶದಪ್ರಧಾನ ಮಂತ್ರಿ. ಹೀಗಾಗಿ ಏಕೆ ನೀವದನ್ನು ಮಾಡಿ ತೋರಿಸಬಾರದು? ಸರ್, ನಿಮ್ಮ ದೇಶದ ಕ್ರಿಕೆಟ್ ಮಂಡಳಿಯ ಮೇಲೆ ಸರ್ಕಾರಕ್ಕೆ ನಿಯಂತ್ರಣವಿದೆ.ಆದರೆ ಕ್ರಿಕೆಟ್ ಮಂಡಳಿಯ ಸ್ಥಿತಿ ಅಧ್ವಾನವಾಗಿದೆ. ಎಲ್ಲೆಡೆ ಬರೀ ರಾಜಕೀಯ ತುಂಬಿದೆ. ನಿಮ್ಮ ದೇಸೀ ಕ್ರಿಕೆಟ್ ಅವಸಾನದ ಅಂಚಿನಲ್ಲಿದೆ. ಉನ್ನತ ಹಂತಕ್ಕೆಬರುವ ಆಟಗಾರರು ತಮ್ಮ ಸ್ವಂತ ಪರಿಶ್ರಮದ ಮೇಲಷ್ಟೇ ಆ ಮಟ್ಟಕ್ಕೆ ಬರಲು ಸಾಧ್ಯ. ಅವರಿಗೆ ಯಾವ ಬೆಂಬಲವೂ ನಿಮ್ಮಲ್ಲಿ ಸಿಗುವುದಿಲ್ಲ. ಪಾಕಿಸ್ತಾನದಲ್ಲಿಯಾರೂ ಕ್ರಿಕೆಟಿಗರನ್ನು ತಯಾರಿಸುವುದಿಲ್ಲ ಅಥವಾ ಬೆಳೆಸುವುದಿಲ್ಲ. ನಿಮಗೆ ಬೇಸರವಾದರೆ ಕ್ಷಮಿಸಿ, ನಿಮ್ಮ ದೇಶದ ಕ್ರಿಕೆಟಿಗರಲ್ಲಿ ಯದ್ವಾತದ್ವಾ ದುರಹಂಕಾರತುಂಬಿದೆ. ಪಕ್ಷಪಾತ ಎಲ್ಲೆಡೆ ಕಾಣಿಸುತ್ತದೆ.
ನೀವೇ ಕ್ರಿಕೆಟ್‌ನಿಂದ ಮೂರು ಬಾರಿ ನಿವೃತ್ತಿಯಾಗಿದ್ದಿರಿ ಎಂಬುದು ನಿಮಗೆ ನೆನಪಿರಬೇಕು! 1992ರಲ್ಲಿ ನೀವು ಬೌಲಿಂಗ್ ಸೂಪರ್‌ಸ್ಟಾರ್ ಆಗಿದ್ದಿರಿ. ಆದರೆ ನಂತರ ನಾನು ಬ್ಯಾಟ್ಸ್‌ಮನ್ ಆಗಿ ಆಡುತ್ತೇನೆ, ನನಗೆ ಮಾಡ ಬೇಕು ಅನ್ನಿಸಿದರೆ ಬೌಲಿಂಗ್ ಮಾಡುತ್ತೇನೆ ಅಂದಿರಿ! ಏಕೆ ಹಾಗೆ ಹೇಳಿದಿರೋ ದೇವರೇ ಬಲ್ಲ. ಖಾನ್ ಸಾಬ್, ನಮ್ಮ ದೇಶದಲ್ಲಿ ಯಾವ ಆಟಗಾರರೂ ಇಂತಹ ಅಹಂಕಾರ ಪ್ರದರ್ಶಿಸುವುದಿಲ್ಲ ಬಿಡಿ. ಈಗ ನಾವು ಜಾಗತಿಕ ಕ್ರಿಕೆಟ್ ಲೋಕವನ್ನು ಆಳುತ್ತಿದ್ದೇವೆ. ನಮ್ಮದೇ ಸ್ವಂತ ಹಣದಲ್ಲಿ ಕ್ರಿಕೆಟ್ ಜಗತ್ತನ್ನು ಬೆಳೆಸುತ್ತಿದ್ದೇವೆ. ಆದರೂ ನಮಗೆ ಇದರ ಬಗ್ಗೆ ಅಹಂಕಾರವಿಲ್ಲ. ನಮಗೆ ಕ್ರಿಕೆಟ್ ಆಟವನ್ನು ಬೆಳೆಸುವುದರಲ್ಲಿಆಸಕ್ತಿಯಿದೆಯೇ ಹೊರತು ಒಣ ಪ್ರತಿಷ್ಠೆಯಲ್ಲಲ್ಲ.
ನ್ಯೂಜಿಲೆಂಡ್ ತಂಡ ಪಂದ್ಯಕ್ಕೂ ಮುನ್ನ ವಾಪಸ್ ಹೋಯಿತು ಮತ್ತು ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಬರಲೇಇಲ್ಲ ಅಂತಾದರೆ ಅದು ನಮ್ಮ ತಪ್ಪಲ್ಲ. ಪಾಕಿ ಸ್ತಾನ ತನ್ನ ದೇಶವನ್ನು ಭಯೋತ್ಪಾದಕರ ಆಡುಂಬೊಲವನ್ನಾ ಗಿಸುವ ಅಪರಾಧವನ್ನು ಕೈಯಾರೆ ಎಸಗಿದೆ. 2009ರ ಮಾರ್ಚ್ 3ರಂದು ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಕರಾಳ ದಿನವನ್ನು ಮರೆತುಬಿಟ್ಟಿರಾ? ಆ ದಾಳಿಯಲ್ಲಿ 6 ಆಟಗಾರರಿಗೆ ಗಾಯವಾಗಿತ್ತು. ನಿಮ್ಮ ದೇಶದ ೬ ಯೋಧರು ಸೇರಿದಂತೆ ೮ ಮಂದಿ ಸಾವನ್ನಪ್ಪಿದ್ದರು.
ಹಾಗಿರುವಾಗ ಯಾರು ತಾನೇ ನಿಮ್ಮನ್ನು ನಂಬಲು ಸಾಧ್ಯ? ನಿಮ್ಮದೇ ಇತಿಹಾಸದ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ ಖಾನ್ ಸಾಬ್! ಭಾರತೀಯ ಕ್ರಿಕೆಟ್ ಅನ್ನುನಿಮಗಿಂತ ಚೆನ್ನಾಗಿ ತಿಳಿದುಕೊಂಡವರು ಯಾರಿದ್ದಾರೆ? ಆದರೂ ನೀವು ಕೆಟ್ಟ ಭಾಷೆ ಬಳಸುತ್ತಿದ್ದೀರಿ. ರಾಜಕೀಯ ಒತ್ತಡದಿಂದ ಹಾಗೆ ಮಾಡುತ್ತಿದ್ದೀರೋ ಅಥವಾ ಇದರ ಹಿಂದೆ ನಿಮ್ಮದೇ ವೈಯಕ್ತಿಕ ರಾಜಕೀಯ ಉದ್ದೇಶವಿದೆಯೋ ಗೊತ್ತಿಲ್ಲ. ಏಕೆಂದರೆ ಇದು ಖಂಡಿತ ಆಟಗಾರನೊಬ್ಬ ಬಳಸುವ ಭಾಷೆಯಲ್ಲ!