ರಕ್ಷಣಾ ಉತ್ಪಾದನೆಗೆ ಏಳು ಹೊಸ ಸಂಸ್ಥೆಗಳ ಆರಂಭ
ಪ್ರಸ್ತುತ
ರಾಜನಾಥ್ ಸಿಂಗ್, ರಕ್ಷಣಾ ಸಚಿವರು
ಸ್ವಾವಲಂಬನೆ ಮತ್ತು ರಫ್ತುಗಳಿಗಾಗಿ ದೇಶದ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳಿಗೆ ಕೇಂದ್ರೀಕೃತ, ರಚನಾತ್ಮಕ ಮತ್ತು ಮಹತ್ವ ನೀಡಲು ನಾವು ಪ್ರಸ್ತುತ ಬಹು ಒತ್ತಡದ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಈ ಹೊಸ ಕಂಪನಿಗಳು ಮತ್ತು ಅಸ್ತಿತ್ವದಲ್ಲಿರುವ ಸಾರ್ವಜನಿಕ ವಲಯದ ಕಂಪನಿ ಗಳು ದೇಶದಲ್ಲಿ ಬಲವಾದ ಮಿಲಿಟರಿ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಖಾಸಗಿ ವಲಯ ದೊಂದಿಗೆ ಕೈಜೋಡಿಸುತ್ತವೆ.
ದೇವ್ ಶಿವಾ ವರ್ ಮೊಹೀಹೆ, ಶುಭ ಕಮಂತೇಕಭೂನ್ ನಾಡರೂ ಯಾವುದೇ ಒಂದು ಮಹತ್ವದ ಸುಧಾರಣೆ ಯನ್ನು ಪ್ರಾರಂಭಿಸಲು ಮತ್ತು ಅದನ್ನು ಪೂರ್ಣಗೊಳಿಸಲು ಕೆಚ್ಚು, ಬದ್ಧತೆ ಮತ್ತು ಸಂಕಲ್ಪ ಬೇಕಾಗುತ್ತದೆ. ಪಾಲುದಾರರ ಸ್ಪರ್ಧಾತ್ಮಕ ಆಕಾಂಕ್ಷೆಗಳನ್ನು ಪೂರೈಸುವ ಯಥಾಸ್ಥಿತಿಯನ್ನು ಬದಲಿಸಲು ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಿರುತ್ತದೆ.
ನಮ್ಮ ಸರ್ಕಾರವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮರ್ಥ ಮಾರ್ಗದರ್ಶನದಲ್ಲಿ, ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ರಾಷ್ಟ್ರದ ದೀರ್ಘಾವಧಿಯ ಹಿತಾಸಕ್ತಿಗಳಿಗಾಗಿ ಸುಧಾರಣೆಗಳನ್ನು ಕೈಗೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಭಾರತದ ರಕ್ಷಣಾ ಉತ್ಪಾದನಾ ನೀತಿಯ ಆಧಾರವಾಗಿದೆ. ನಮ್ಮ ಸರ್ಕಾರವು ನೀಡಿದ ಆತ್ಮನಿರ್ಭರ ಭಾರತ್ ದ ಕರೆಯು ಈ ಗುರಿಯನ್ನು ಸಾಧಿಸಲು ಮತ್ತಷ್ಟು ಉತ್ತೇಜನ ನೀಡಿದೆ.
ಪ್ರಾಥಮಿಕವಾಗಿ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸುತ್ತಿದ್ದ ಭಾರತೀಯ ರಕ್ಷಣಾ ಉದ್ಯಮ, ವೈವಿಧ್ಯಮಯ ಉತ್ಪನ್ನಗಳು ಮತ್ತು ಮಾರುಕಟ್ಟೆ ಯೊಂದಿಗೆ ವಿಕಸನಗೊಂಡಿದೆ. ಇತ್ತೀಚಿಗೆ ರಫ್ತುಗಳಲ್ಲಿ ಕಂಡಿರುವ ಯಶಸ್ಸಿ ನಿಂದ ಭಾರತವು ಉದಯೋನ್ಮುಖ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ತನ್ನ ಸಾಮರ್ಥ್ಯವನ್ನು ತೋರಿಸಲು ಸಜ್ಜಾಗಿದೆ. ವಿನ್ಯಾಸದಿಂದ ಉತ್ಪಾದನೆವರೆಗೆ ವಧಿತ ಮಾರುಕಟ್ಟೆ ವ್ಯಾಪ್ತಿಯೊಂದಿಗೆ ರಫ್ತು ಸೇರಿದಂತೆ ಸಾರ್ವಜನಿಕ  ಮತ್ತು ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆಯ ಮೂಲಕ ನಾವು ರಕ್ಷಣಾ ವಲಯದಲ್ಲಿ ಭಾರತವನ್ನು ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡುವ ಗುರಿ ಹೊಂದಿದ್ದೇವೆ.
೨೦೧೪ರಿಂದ, ಭಾರತ ಸರ್ಕಾರವು ರಫ್ತು, ಎಫ್ ಡಿಐ ಮತ್ತು ಸ್ಥಳೀಯ ಉತ್ಪನ್ನಗಳ ಬೇಡಿಕೆಗೆ ಉತ್ತೇಜನ ನೀಡಲು ಪೂರಕವಾದ ವ್ಯವಸ್ಥೆಯನ್ನು ಸೃಷ್ಟಿಸಲು ರಕ್ಷಣಾ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದೆ. ಕ್ರಿಯಾತ್ಮಕ ಸ್ವಾಯತ್ತತೆ, ದಕ್ಷತೆ ಮತ್ತು ಹೊಸ ಬೆಳವಣಿಗೆಯ ಸಾಮರ್ಥ್ಯವನ್ನು ಹೆಚ್ಚಿಸಲು ರಕ್ಷಣಾ ಸಚಿವಾಲಯದ ಅಧೀನ ಸಂಸ್ಥೆಯಾದ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ (ಒ ಎಫ್ ಬಿ) ಯನ್ನು ೭ ಹೊಸ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಕಾರ್ಪೊರೇಟ್ ಸಂಸ್ಥೆಗಳನ್ನಾಗಿ ಪರಿವರ್ತಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು ಇದು ಸುಧಾರಣಾ ಸರಣಿಯಲ್ಲಿ ಅತ್ಯಂತ ಮಹತ್ವ ದ್ದಾಗಿದೆ.
ಶಸ್ತ್ರಾಸ್ತ್ರ ಕಾರ್ಖಾನೆಗಳು ೨೦೦ ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿವೆ. ರಾಷ್ಟ್ರೀ ಯ ಭದ್ರತೆಗೆ ಅವುಗಳ ಕೊಡುಗೆ ಅಪಾರವಾಗಿದೆ. ಈ ಕಾರ್ಖಾನೆಗಳ ಮೂಲಸೌಕರ್ಯ ಮತ್ತು ನುರಿತ ಮಾನವಶಕ್ತಿ ದೇಶಕ್ಕೆ ಪ್ರಮುಖ ಮತ್ತು ಕಾರ್ಯತಂತ್ರದ ಆಸ್ತಿಯಾಗಿದೆ. ಆದಾಗ್ಯೂ, ಕಳೆದ ಕೆಲವು ದಶಕಗಳಲ್ಲಿ,ಒಎ-ಬಿ ಉತ್ಪನ್ನಗಳ ಹೆಚ್ಚಿನ ವೆಚ್ಚಗಳು, ಅಸಮಂಜಸ ಗುಣಮಟ್ಟ ಮತ್ತು ಪೂರೈಕೆಯಲ್ಲಿನ ವಿಳಂಬಗಳಿಗೆ ಸಂಬಂಧಿಸಿದಂತೆ ಶಸಾಸ ಪಡೆಗಳು ಕಳವಳ ವ್ಯಕ್ತಪಡಿಸಿವೆ.
ಈಗಿರುವ ಒಎಫ್ಬಿ ವ್ಯವಸ್ಥೆಯಲ್ಲಿ ಹಲವಾರು ನ್ಯೂನತೆಗಳಿವೆ. ಒಎಫ್ಬಿಯು ಯುದ್ಧೋಪಕರಣಗಳ ಕಾರ್ಖಾನೆಗಳಲ್ಲಿ ಎಲ್ಲವನ್ನೂ ಉತ್ಪಾದಿಸುವ ಪರಂಪರೆಯನ್ನು ಹೊಂದಿತ್ತು, ಇದರ ಪರಿಣಾಮವಾಗಿ ಅಸಮರ್ಥ ಪೂರೈಕೆ ಸರಪಳಿ ಮತ್ತು ಸ್ಪರ್ಧಾತ್ಮಕತೆಯ ಪ್ರೋತ್ಸಾಹದ ಕೊರತೆ ಮತ್ತು ಮಾರು ಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ಅನ್ವೇಷಣೆಯ ಕೊರೆತೆಗೆ ಕಾರಣವಾಯಿತು. ಒಎ-ಬಿ ಒಂದೇ ವ್ಯವಸ್ಥೆಯಡಿ ವ್ಯಾಪಕವಾದ ವಸ್ತುಗಳ ಉತ್ಪಾದನೆ ಯಲ್ಲಿ ತೊಡಗಿದ್ದರಿಂದ ತಜ್ಞತೆಯ ಕೊರೆತೆಯಿತ್ತು.
7ಹೊಸ ಕಾರ್ಪೊರೇಟ್ ಸಂಸ್ಥೆಗಳನ್ನು ರಚಿಸುವ ಈ ನಿರ್ಧಾರವು ವ್ಯಾಪಾರ ಆಡಳಿತದ ಮಾದರಿಗಳ ವಿಕಾಸಕ್ಕೆ ಅನುಗುಣವಾಗಿದೆ. ಹೊಸ ರಚನೆಯು ಈ ಕಂಪನಿಗಳಿಗೆ ಸ್ಪರ್ಧಾತ್ಮಕವಾಗಲು ಪ್ರೋತ್ಸಾಹವನ್ನು ನೀಡುತ್ತದೆ ಮತ್ತು ಅತ್ಯುತ್ತಮ ಬಳಕೆಯ ಮೂಲಕ ಉತ್ಪಾದನಾ ಮತ್ತು ಲಾಭದಾಯಕ ಸ್ವತ್ತುಗಳಾಗಿ ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಪರಿವರ್ತಿಸುತ್ತದೆ; ಉತ್ಪನ್ನ ಶ್ರೇಣಿಯಲ್ಲಿ ವಿಶೇಷತೆಯನ್ನು ಸಾಧಿಸಲು ಅವಕಾಶ ಕಲ್ಪಿಸುತ್ತದೆ. ಗುಣಮಟ್ಟ ಮತ್ತು ವೆಚ್ಚ- ದಕ್ಷತೆಯನ್ನು ಸುಧಾರಿಸುವ ಮೂಲಕ ಸ್ಪರ್ಧಾತ್ಮಕತೆ ಯನ್ನು ಹೆಚ್ಚಿಸುತ್ತದೆ ಮತ್ತು ಹೊಸ ಆವಿಷ್ಕಾರ ಮತ್ತು ವಿನ್ಯಾಸ ಚಿಂತನೆಗೆ ನಾಂದಿಹಾಡುತ್ತದೆ. ಈ ನಿರ್ಧಾರ ವನ್ನು ಅನುಷ್ಠಾನಗೊಳಿಸುವಾಗ, ಸರ್ಕಾರವು ನೌಕರರ ಹಿತಾಸಕ್ತಿಗಳನ್ನು ರಕ್ಷಿಸುವ ಭರವಸೆ ನೀಡಿದೆ.
7 ಹೊಸ ಕಂಪನಿಗಳನ್ನು ಈಗ ಸೃಷ್ಟಿಸಲಾಗಿದೆ ಮತ್ತು ಅವು ತಮ್ಮ ವ್ಯಾಪಾರವನ್ನು ಆರಂಭಿಸಿವೆ. ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (ಎಂಐಎಲ್)ಮುಖ್ಯವಾಗಿ ವಿವಿಧ ಸಾಮರ್ಥ್ಯ ಮತ್ತು ಸೋಟದ ಮದ್ದುಗುಂಡುಗಳ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುತ್ತದೆ. ’ಮೇಕ್ ಇನ್ ಇಂಡಿಯಾ’ ಮೂಲಕಮಾತ್ರವಲ್ಲದೇ ’ಮೇಕಿಂಗ್ ಫಾರ್ ದಿ ವರ್ಲ್ಡ್’ ಮೂಲಕ ಅಗಾಧವಾಗಿ ಬೆಳೆಯುವ ದೊಡ್ಡ ಇದು ಸಾಮರ್ಥ್ಯವನ್ನು ಹೊಂದಿದೆ.
ಶಸ್ತ್ರಸಜ್ಜಿತ ವಾಹನಗಳ ಕಂಪನಿ  ಮುಖ್ಯವಾಗಿ ಟ್ಯಾಂಕ್‌ಗಳು ಮತ್ತು ಸ್ಫೋಟನಿರೋಧಕ ವಾಹನಗಳಂತಹ ಯುದ್ಧ ವಾಹನಗಳ ಉತ್ಪಾದನೆ ಯಲ್ಲಿ ತೊಡಗಿಸಿಕೊಳ್ಳುತ್ತದೆ ಮತ್ತು ಉತ್ತಮ ಸಾಮರ್ಥ್ಯದ ಬಳಕೆಯ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ ಮತ್ತು ಹೊಸ ರಫ್ತು ಮಾರುಕಟ್ಟೆಗಳನ್ನು ಸಹ ಅನ್ವೇಷಿಸಲಿದೆ. ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಎಕ್ವಿಪ್ಮೆಂಟ್ ( ) ಮುಖ್ಯವಾಗಿ ಬಂದೂಕು ಮತ್ತು ಇತರ ಆಯುಧಗಳ ಉತ್ಪಾದನೆಯಲ್ಲಿ ತೊಡಗಿಕೊಳ್ಳುತ್ತದೆ.
ದೇಶೀಯ ಬೇಡಿಕೆ ಹಾಗೂ ಉತ್ಪನ್ನ ವೈವಿಧ್ಯವನ್ನು ಪೂರೈಸುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆ ಯಿದೆ. ಈ ಹೊಸ ಕಂಪನಿಗಳಿಗೆ ಸಾಕಷ್ಟು ಕೆಲಸವಿರುವ ಬಗ್ಗೆ ಸರ್ಕಾರವು ಭರವಸೆ ನೀಡಿದೆ. ಒ ಎಫ್ ಬಿ ಯೊಂದಿಗೆ ಬಾಕಿ ಇರುವ65000ಕೋಟಿ ರೂ.ಗೂ ಹೆಚ್ಚು ಮೌಲ್ಯದ ಎಲ್ಲಾ ಕೆಲಸದ ಆದೇಶಗಳನ್ನು ಡೀಮ್ಡ್ ಗುತ್ತಿಗೆಗಳಾಗಿ ಪರಿವರ್ತಿಸಲಾಗಿದೆ. ಇದಲ್ಲದೆ, ಹೊಸ ಕಂಪನಿಗಳುವೈವಿಧ್ಯೀಕರಣಮತ್ತು ರಫ್ತುಗಳ ಮೂಲಕ ಮತ್ತು ನಾಗರಿಕ ಬಳಕೆಗಾಗಿ ದ್ವಿಬಳಕೆಯ ವಸ್ತುಗಳನ್ನು ಒಳಗೊಂಡಂತೆ ಬೆಳೆಯುವ ಅಪಾರ ಸಾಮರ್ಥ್ಯವನ್ನು ಹೊಂದಿವೆ.ಹೊಸದೊಂದು ಆರಂಭವನ್ನು ಮಾಡಲಾಗಿದೆ. ಈ ಹಿಂದೆ ಶಸಾಸ್ರ ಕಾರ್ಖಾನೆಗಳು ಶಸ್ತ್ರಾಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸಲು ಮಾತ್ರ ಸೀಮಿತವಾಗಿದ್ದವು. ಹೊಸ ಕಂಪನಿಗಳು ಈಗ ಅದರಿಂದಾಚೆಗೂ ಬೆಳೆಯಲಿವೆ. ಭಾರತ ಮತ್ತು ವಿದೇಶಗಳಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುತ್ತವೆ. ಹೆಚ್ಚಿನ ಕ್ರಿಯಾತ್ಮಕ ಮತ್ತು ಆರ್ಥಿಕ ಸ್ವಾಯತ್ತತೆಯು ಈ ಹೊಸ ಕಂಪನಿಗಳಿಗೆ ಆಧುನಿಕ ವ್ಯಾಪಾರ ಮಾದರಿಗಳು ಮತ್ತು ಹೊಸ ಸಹಯೋಗಗಳನ್ನು ಹೊಂದಲುಅನುವು ಮಾಡಿಕೊಡುತ್ತದೆ.
ಸ್ವಾವಲಂಬನೆ ಮತ್ತು ರಫ್ತುಗಳಿಗಾಗಿ ದೇಶದ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳಿಗೆ ಕೇಂದ್ರೀಕೃತ, ರಚನಾತ್ಮಕ ಮತ್ತು ಮಹತ್ವ ನೀಡಲು ನಾವು ಪ್ರಸ್ತುತಬಹು ಒತ್ತಡದ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಈ ಹೊಸ ಕಂಪನಿಗಳು ಮತ್ತು ಅಸ್ತಿತ್ವದಲ್ಲಿರುವ ಸಾರ್ವಜನಿಕ ವಲಯದ ಕಂಪನಿಗಳು ದೇಶದಲ್ಲಿ ಬಲವಾದ ಮಿಲಿಟರಿ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಖಾಸಗಿ ವಲಯದೊಂದಿಗೆ ಕೈಜೋಡಿಸುತ್ತವೆ. ಇದು ದೇಶೀಯಸಾಮರ್ಥ್ಯ ಅಭಿವೃದ್ಧಿಗಾಗಿ ಸಮಯಕ್ಕೆ ಸರಿಯಾಗಿ ಯೋಜಿಸುವ ಮೂಲಕ ಆಮದುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಂತಹಸಂಪನ್ಮೂಲಗಳನ್ನು ಸ್ಥಳೀಯ ಖರೀದಿಗಾಗಿ ಬಳಸಲಾಗುತ್ತದೆ.
ಇದು ಯಶಸ್ವಿಯಾದರೆ, ನಮ್ಮ ಆರ್ಥಿಕತೆಯು ಹೂಡಿಕೆಗಳನ್ನು ಆಕರ್ಷಿಸುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ನಮ್ಮ ಮುಂದೆ ಹಲವಾರು ಸವಾಲುಗಳಿವೆ. ಹಳೆಯ ಸಂಪ್ರದಾಯಗಳು ಮತ್ತು ಕೆಲಸದ ಸಂಸ್ಕೃತಿಯನ್ನು ರಾತ್ರೋರಾತ್ರಿ ಬದಲಾಯಿಸುವುದು ಕಷ್ಟ. ಇದುಬಹಳ ಸಂಕೀರ್ಣವಾದ ಪರಿವರ್ತನಾ ಪ್ರಕ್ರಿಯೆಯ ಆರಂಭ ಎಂದು ನನಗೆ ಗೊತ್ತು. ನಮ್ಮ ಸಚಿವಾಲಯವು ಅಲ್ಪಕಾಲೀನ ಸಮಸ್ಯೆಗಳನ್ನು ಪರಿಹರಿಸು ವಲ್ಲಿ ಮತ್ತು ಹೊಸದಾಗಿ ರೂಪುಗೊಂಡ ಈ ಕಂಪನಿಗಳನ್ನು ದಕ್ಷ ವ್ಯಾಪಾರ ಸಂಸ್ಥೆಗಳನ್ನಾಗಿ ಪರಿವರ್ತಿಸುವಲ್ಲಿ ಎಲ್ಲಾ ಬೆಂಬಲವನ್ನು ನೀಡುತ್ತದೆ. ಹೊಸ ಕಂಪನಿಗಳ ಉದ್ಯೋಗಿಗಳು ಮತ್ತು ಆಡಳಿತವು ಹೊಸ ಸಂಸ್ಕೃತಿಯ ಬೀಜಗಳನ್ನು ಬಿತ್ತುತ್ತದೆ, ಇದರಿಂದ ಅವರ ವ್ಯವಹಾರಗಳು ಪರಿವರ್ತನೆ ಗೊಳ್ಳುತ್ತವೆ ಮತ್ತು ಪುನಶ್ಚೇತನಗೊಳ್ಳುತ್ತವೆ ಎಂದು ನನಗೆ ವಿಶ್ವಾಸವಿದೆ.