ಔಷಧ ಸಸ್ಯ ಬೇಸಾಯ – ’ಫಾರ್ಮ’ಸಿ
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡರೋಹಿತ್ ಪದಕಿ ಅವರ ರತ್ನನ್ ಪ್ರಪಂಚ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗಿದೆ. ಎಲ್ಲಾ ಸಿನಿಮಾಗಳಿಗೂ ಬರುವಂತೆ, ಈ ಸಿನಿಮಾಗೂ ಸಹಜವಾಗಿಪಾಸಿಟಿವ್ ಮತ್ತು ನೆಗೆಟಿವ್ ಪ್ರತಿಕ್ರಿಯೆಗಳು ಬರುತ್ತಿವೆ. ಚಿತ್ರದಲ್ಲಿ ಡಾಲಿ ಧನಂಜಯ ಕಾಣಿಸುವುದಿಲ್ಲ. ಇಲ್ಲಿ ಅವರ ಇನ್ನೊಂದು ಮುಖದ ಅನಾವರಣ ಗೊಳಿಸಲಾಗಿದೆ.
ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪ್ರಮೋದ್ ಅಭಿನಯ ಕೂಡಾ ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿರುವ ‘ರತ್ನನ್ ಪದಗಳೂ’ ಜನರಿಗೆ ಇಷ್ಟ ಗಿದೆ. ಆದ್ರೆ ಈಗ ರತ್ನನ್ ಪ್ರಪಂಚ ಬೇರೆಯದೇ ವಿಷಯಕ್ಕೆ ಸುದ್ದಿಯಲ್ಲಿದೆ. ಅದು ಚಿತ್ರದ ಕಥೆಗೆ ಸಂಬಂಧಿಸಿದ್ದು. ರತ್ನನ್ ಪ್ರಪಂಚ ಸಿನಿಮಾ ನೋಡಿದವರು ಅದರಲ್ಲಿ ಎಸ್ ಎಲ್ ಭೈರಪ್ಪನವರ ಪ್ರಪಂಚ ಮತ್ತು ಸುಧಾ ಮೂರ್ತಿ ಅವರ ಪ್ರಪಂಚವನ್ನು ಕಾಣುತ್ತಿದ್ದಾರೆ. ಚಿತ್ರದ ಕಥೆಯಲ್ಲಿ ಭೈರಪ್ಪ ಅವರ ನಿರಾಕರಣ ಕಾದಂಬರಿಯ ಹೋಲಿಕೆ ಇದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ತುಮುಲದ ಎಳೆ ಕಾಣುತ್ತಿದ್ದಾರೆ.
ಅದು ಸಂಪೂರ್ಣ ಸುಳ್ಳೇನೂ ಅಲ್ಲ. ಭೈರಪ್ಪನವರ ನಿರಾಕರಣದಲ್ಲಿ ಬಡತನದ ಕಾರಣಕ್ಕೆ ಮಕ್ಕಳನ್ನು ದತ್ತು ಕೊಟ್ಟ ತಂದೆ ಆನಂತರ ಅವರನ್ನು ಮತ್ತೆ ನೋಡಬೇಕು ಎನ್ನಿಸುವ ತುಮುಲದಲ್ಲಿರುತ್ತಾನೆ. ಹಾಗಾಗಿ ಈ ಚಿತ್ರದಲ್ಲಿ ಎರಡೂ ಕಾದಂಬರಿಗಳು ಮಿಕ್ಸ್ ಆಗಿರುವ ಎಲ್ಲಾ ಸಾಧ್ಯತೆಗಳಿವೆ ಎನ್ನಬಹುದು. ಆದರೆ ನಿರಾಕರಣದ ಕಥೆ ಅಲ್ಲದಿದ್ದರೂ ಅದರ ಫೀಲ್ ರತ್ನನ್ ಪ್ರಪಂಚ ಚಿತ್ರದಲ್ಲಿದೆ. ಹಾಗಾಗಿ ತನ್ನ ಮಕ್ಕಳನ್ನು ಇನ್ನೊಬ್ಬರಿಗೆ ಅಡಾಪ್ಟ್ ಮಾಡಿಕೊಟ್ಟ ತಂದೆಯ ಕಥೆಯ ಸೂರ್ತಿಯಿಂದ ಮಾಡಿರುವ ಈ ಚಿತ್ರವನ್ನು ಅಡಾಪ್ಟೆಡ್ ಸ್ಟೋರಿ ಎನ್ನಬಹುದು. ಆದರೆ ನಿರ್ದೇಶಕ ರೋಹಿತ್ ಪದಕಿ ಕೆಲವು ಎಮೋಷನಲ್ ಸನ್ನಿವೇಶಗಳನ್ನು ಕಟ್ಟಿಕೊಡುವಲ್ಲಿ ಎಡವಿದ್ದಾರೆ.
ಹಾಗಾಗಿ ಸೀದಾ ಭೈರಪ್ಪನವರ ನಿರಾಕರಣ ಕಾದಂಬರಿಯನ್ನೇ ಆಧರಿಸಿ ಸಿನಿಮಾ ಮಾಡಬಹುದಿತ್ತು ಎಂದು ಅನೇಕರು ಸಲಹೆ ಕೊಡುತ್ತಿದ್ದಾರೆ. ಒಂದು ಚಿತ್ರ ಅಂದಮೇಲೆ ಅದಕ್ಕೆ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳು ಬರೋದು ಸಹಜ. ಆದರೆ ರತ್ನನ್ ಪ್ರಪಂಚ ಚಿತ್ರದ ಬಗ್ಗೆ ಇಷ್ಟು ಇನ್ ವಾಲ್ವ್ ಆಗಿ ಪ್ರೇಕ್ಷಕರು ಮಾತನಾಡುತ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ ಚಿತ್ರದಲ್ಲಿಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗೋ ಸೆನ್ಸಿಬಲ್ ಅಂಶಗಳು ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಲೂಸ್ ಟಾಕ್ಬಸವನಗೌಡ ಪಾಟೀಲ್ ಯತ್ನಾಳ್ (ಕಾಲ್ಪನಿಕ ಸಂದರ್ಶನ)ಸಾರ್, ನಿಮ್ದೊಂದ್ ಸಿಡಿ ಬರುತ್ತೆ ಅಂತ ಸುದ್ದಿ ಇತ್ತಲ್ಲ, ಏನಾಯ್ತು ಸಾರ್, ರಿಲೀಸ್ ಆಗ್ಲೇ ಇಲ್ಲ?-ದಸರಾಗೆ ದೊಡ್ ದೊಡ್ ಸಿನಿಮಾ ಇದ್ವಲ್ಲ, ಅದಕ್ಕೆ ರಾಂಗ್ ರಿಲೀಸ್ ಆಗುತ್ತೆ ಅಂತ ಸುಮ್ನೆ ಆದ್ರು ಅನ್ಸುತ್ತೆ. ಹೋಗ್ರಿ, ಹೋಗ್ರಿ.
ಬೇಜಾರ್ ಮಾಡ್ಕೊಬೇಡಿ ಸಾರ್, ಆದ್ರೂ ಭಾಳ ಜನ ಕಾಯ್ತಾ ಇದ್ರು ಆ ಸಿಡಿಗೋಸ್ಕರ.-ಯಾರ್ ಕಾಯ್ತಾ ಇದ್ರೋ ಇಲ್ವೋ, ನೀವ್ ಮೀಡಿಯಾದೋರ್ ಮಾತ್ರ ಬರ ಸಿಡಿಲಿನಂಥ ಸುದ್ದಿ ಅಂತ ಹಾಕೋಕೆ ಬರಗೆಟ್ಟುಕೊಂಡು ಕಾಯ್ತಾ ಇದ್ರಿಅನ್ನೋದ್ ಮಾತ್ರ ನಿಜ.
ಹಂಗೆಲ್ಲ ಏನಿಲ್ಲ ಬಿಡಿ, ಸರಿ,ಆದ್ರೂ ನೀವು ರಾಜಕಾರಣಿಗಳಿಗೆ ಈ ಸಿಡಿ ಅನ್ನೋದು ಭಾಳ ಹೆದರಿಸುತ್ತೆ ಅಲ್ವಾ ಸಾರ್?-ಯಾವ್ ಹೆದ್ರಿಕಿನೂ ಇಲ್ಲ, ನಾವು ಈ ಸಿಡಿಗಳಿಗೆ ಉತ್ರ ಕೊಡೋಕೆ ಅಂತನೇ, ಉಪೇಂದ್ರಂದು ಬುದ್ಧಿವಂತ ಸಿನಿಮಾ ಸಿಡಿ ಕೈಯಲ್ ಇಟ್ಕೊಂಡೇ ಅಡ್ಡಾಡ್ತೀವಿ.ಸಿಡಿ ಬಂದ ತಕ್ಷಣ ನಾನವನಲ್ಲ ಅಂತ ಹೇಳೋಕೆ.
ಅದ್ ನಿಜ ಬಿಡಿ, ಆದ್ರೆ ನಿಮ್ಗೆ ಭಯ ಆಗಿತ್ತಾ ಸಾರ್, ನಿಜ ಹೇಳಿ?
-ಅಯ್ಯೋ, ನಂಗ್ಯಾಕ್ರೀ ಭಯ?, ಇಂಥವೆಲ್ಲ ಹೊರಗೆ ಬರ್ತಾವೆ ಅಂತಾನೇ ನಾನು ಮೊದ್ಲೇ ಕೋಟಿಂದ ಸ್ಟೇ ಆನ್ ತಂದಿದ್ದೆ.
ಸಾರ್, ಅದು ಸ್ಟೇ ಆನ್ ಅಲ್ಲ, ಸ್ಟೇ ಆರ್ಡರ್. ಅರ್ಥ ಬೇರೆ ಆಗುತ್ತೆ. ಹೋಗ್ಲಿಬಿಡಿ, ಅಂದ್ರೆ ನೀವು ಈಗ ಅದರ ಬಗ್ಗೆ ಚಿಂತೆ ಮಾಡ್ತಿಲ್ಲ ಅಂತಾಯ್ತು.-ಚಿಂತೆ ಮಾಡ್ತಿಲ್ಲ ಅಂತ ಹೇಳೋಕಾಗಲ್ಲ, ಯಾಕಂದ್ರೆವಿರೋಽಗಳು ಈ ಯತ್ನಾಳ್‌ನ ಸಿಗಾಕ್ಸೋಕೆ, ಮರಳಿ ಯತ್ನಾಳ್ ಮಾಡಿ, ಸಾರಿ ಮರಳಿ ಯತ್ನವಮಾಡಿ ಅಂತ ಮಾಡಿದ್ರೂ ಮಾಡಬಹುದು.
ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಮದುವೆ ಆಗಿ ೫ ವರ್ಷ ಆಗಿದ್ರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯಕ್ಕೆ ಇಬ್ಬರೂ ತುಂಬಾ ಬೇಸರದಲ್ಲಿದ್ದರು. ಇಬ್ಬರೂತಮಗೆ ಗೊತ್ತಿರೋ ಎಲ್ಲಾ ಡಾಕ್ಟರ್‌ಗಳು, ಎಲ್ಲಾ ದೇವರುಗಳನ್ನೂ ಸಂಪರ್ಕ ಮಾಡಿದ್ದರು. ಆದರೆ ಮಕ್ಕಳು ಮಾತ್ರ ಆಗಲೇ ಇಲ್ಲ. ಹೀಗೆ ಒಂದು ದಿನ ಇಬ್ಬರೂಮಾರ್ಕೆಟ್ ನಲ್ಲಿ ಹೋಗುತ್ತಿರುವಾಗ ಅಲ್ಲಿ ಖೇಮುಶ್ರೀಯ ತವರು ಮನೆಗೆ ಬರುತ್ತಿದ್ದ ಪೂಜಾರಿಯೊಬ್ಬ ಆಕೆಯನ್ನು ಗುರುತು ಹಿಡಿದು ಮಾತನಾಡಿಸಿದರು.
ಎಲ್ಲಾ ಸೌಖ್ಯನೇನಮ್ಮ ಎಂದು ಅವರು ಕೇಳಿದಾಗ ಖೇಮುಶ್ರೀ, ಜೀವನದಲ್ಲಿ ಎಲ್ಲವೂ ಸರಿ ಇದೆ, ಆದ್ರೆ ಇನ್ನೂ ಮಕ್ಕಳಾಗಿಲ್ಲಎಂಬ ಕೊರಗನ್ನು ಹೇಳಿಕೊಂಡಳು.ಅದಕ್ಕೆ ಪೂಜಾರಿ, ಯೋಚನೆ ಮಾಡಬೇಡಮ್ಮ, ನಾನು ಕಾಶಿಗೆ ಹೋಗ್ತಾ ಇದ್ದೀನಿ, ಅಲ್ಲಿ ದೇವರ ಸನ್ನಿಽಯಲ್ಲಿ ನಿನ್ನ ಹೆಸರಲ್ಲಿ ಒಂದು ದೀಪ ಹಚ್ತೀನಿ. ಎಲ್ಲ ಸರಿಹೋಗುತ್ತೆ ಅಂದ್ರು. ಅದಾಗಿ ೫ ವರ್ಷ ಆಯ್ತು. ಒಂದು ದಿನ ಆ ಪೂಜಾರಿಯ ಮನೆ ಬಾಗಿಲು ಯಾರೋ ಬಡಿದಂತಾಯ್ತು. ಪೂಜಾರಿ ಎದ್ದು ಹೋಗಿ ಬಾಗಿಲುತೆರೆದರೆ ಖೇಮು ನಿಂತಿದ್ದ. ಗುರುತು ಹಿಡಿದ ಪೂಜಾರಿ ಒಳಗೆ ಕರೆದು ಮಾತನಾಡಿಸಿದರು.
ಮಕ್ಕಳಾದ್ವಾ? ಅಂತ ಪೂಜಾರ್ರ‍ು ಕೇಳಿದ ತಕ್ಷಣ ಖೇಮು ಪೂಜಾರ್ರ‍ ಕೈಯಲ್ಲಿ ೨೫ ಸಾವಿರ ಹಣ ಇಟ್ಟು, ದಯವಿಟ್ಟು ಇನ್ನೊಮ್ಮೆ ಕಾಶಿಗೆ ಹೋಗಿ ಬನ್ನಿ ಪೂಜಾರ್ರ‍ೇ ಅಂದ. ಯಾಕಪ್ಪಾ ಇನ್ನೂ ಮಕ್ಕಳಾಗಲಿಲ್ವಾ? ಅಂತ ಕೇಳಿದ್ದಕ್ಕೆ ಖೇಮು ಹೇಳಿದ ‘ನೀವೇನೋ ಕಾಶಿಗೆ ಹೋಗಿ ದೀಪ ಹಚ್ಚಿ ಬಂದ್ರಿ, ಆದ್ರೆ ಯಾವನೋ ಬಡ್ಡೀಮಗ ಇನ್ನೂ ಅದಕ್ಕೆ ಡೈಲಿ ಎಣ್ಣೆ ಹಾಕ್ತಾ ಇದ್ದಾನೆ ಅನ್ಸುತ್ತೆ. ಖೇಮುಶ್ರೀ ಈಗಾಗ್ಲೇ ೩ ಸಲ ಅವಳಿ ಜವಳಿ ಮಕ್ಕಳನ್ನ ಹೆತ್ತಿದ್ದಾಳೆ. ಇನ್ನು ನನ್ನ ಕೈಲಿ ತಡ್ಕೊಳ್ಳೋಕಾಗಲ್ಲ. ಮೊದ್ಲು, ಆ ಹೋಗಿ ಆ ದೀಪ ಆರಿಸಿ ಬನ್ನಿ’.
ಲೈನ್ ಮ್ಯಾನ್
ಹಾಡಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೆ ಏನಂತ ಹೇಳ್ತಾರೆ ?– ‘ಸಾಂಗೋ’ ಪಾಂಗವಾಗಿ ನೆರವೇರಿತು.ರೋಡ್ ಮೂವೀಸ್ ನ ಕನ್ನಡದಲ್ಲಿ ಏನಂತಾರೆ ?-‘ರೋಡಿಸಂ’ ಮೂವೀಸ್ಆರ್ ಸಿಬಿ ಮತ್ತು ಪಾಕಿಸ್ತಾನ ಟೀಮ್ ಗಳಲ್ಲಿ ಇರೋ ಹೋಲಿಕೆ ಐಪಿಎಲ್ ಟೈಮಲ್ಲಿ ಆರ್ ಸಿಬಿ
– ಈ ಸಲ ಕಪ್ ನಮ್ದೇ ವರ್ಲ್ಡ್ ಕಪ್ ಟೈಮಲ್ಲಿ ಪಾಕಿಸ್ತಾನ- ಈ ಸಲ ಇಂಡಿಯಾ ಮೇಲ್ ಗೆಲ್ತೀವಿ
ಎಟಿಎಂ ಕಾರ್ಡ್ ಎಟಿಎಂ ಮಶೀನ್ ನಲ್ಲೇ ಸಿಕ್ಕಿ ಹಾಕಿಕೊಂಡ್ರೆ ಅದು-ಕಾರ್ಡಿಯಾಕ್ ಅರೆಸ್ಟ್ಸದಾ ಧೋತಿ ಉಡೋನಿಗೆ ಪ್ಯಾಂಟ್ ಹಾಕೋ ಆಸೆ ಬಂದರೆ ಅದು-‘ಪ್ಯಾಂಟ’ಸಿಔಷಧಿಯ ಸಸ್ಯಗಳನ್ನು ಬೆಳೆಯುವ ರೈತನ ಕೆಲಸ– ‘-ರ್ಮ’ಸಿಟೊಬ್ಯಾಕೋ ಫಿಲಾಸಫಿ-ಬೀಡಿ ಸೇದೋರಿಗೆಲ್ಲ ‘ಫಿಲ್ಟರ್’ ಇಲ್ದೆ ಮಾತಾಡೋ ‘ಧಮ್’ ಬರಲ್ಲಡ್ರಗ್ಸ್ ತಗೋತಾನೆ ಅಂತ ಸುಮ್ ಸುಮ್ನೆ ಆರೋಪ ಬಂದಾಗ ಸೆಲೆಬ್ರಿಟಿಗಳುಏನು ಹೇಳ್ತಾರೆ?-ನಾನ್ ಇದಕ್ಕೆಲ್ಲ ‘ಸೊಪ್ಪು’ ಹಾಕಲ್ಲಆಗ ತಾನೇ ಹುಟ್ಟಿದ ಹಸುವಿನ ಕರು-‘ಹಸು’ ಗೂಸುಅಕ್ಷಯ್ ಕುಮಾರ್ ಯಾಕೆ ಅಷ್ಟೊಂದು ಸಿನಿಮಾಗಳನ್ನ ಮಾಡ್ತಾ ಇರ್ತಾರೆ?-ಯಾಕಂದ್ರೆ ಅವರ ಹೆಸರೇ ‘ಅಕ್ಷಯ’ ಕುಮಾ