ನಾನು ಕಂಡ ಸರಳ ವ್ಯಕ್ತಿ ಗಜಾನನ ರಘನಾಥ ಕುಲಕರ್ಣಿ
ಸ್ಮರಣೆ
ಹೋಳೂರು ಎಚ್.ರಾಚಪ್ಪ
ಗಜಾನನ ರಘನಾಥ ಕುಲಕರ್ಣಿ ಇತ್ತೀಚೆಗೆ ನಮ್ಮನ್ನು ಅಗಲಿದರು. ಮಹಾತ್ಮಗಾಂಧಿಅವರ ಮೊಮ್ಮಗಳಾದ ಸುಮಿತ್ರಾಗಾಂಧಿಕುಲಕರ್ಣಿ ಅವರ ಪತಿ ಗಜಾನನ ರಘನಾಥ ಕುಲಕರ್ಣಿ. ಸುಮಾರು ವರುಷಗಳ ಹಿಂದೆ ನನಗೆ ಸುಮಿತ್ರಾಗಾಂಧಿಕುಲಕರ್ಣಿ ಅವರ ಪರಿಚಯವಾಯಿತು, ಅಂದಿನಿಂದ ನನಗೆ ಗಜಾನನರಘನಾಥ ಕುಲಕರ್ಣಿ ಅವರು ಆತ್ಮೀಯರು. ನಾನು ಅವರ ಮನೆಗೆ ಪ್ರತಿ ಬಾರಿ ಹೋದಾಗಲೂ ಅಷ್ಟೇ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಅವರಖಾಸಗೀ ವಿಷಯಗಳನ್ನು ಯಾವ ಆತಂಕಲ್ಲದೇ ನನ್ನ ಬಳಿ ಹಂಚಿಕೊಳ್ಳುತ್ತಿದ್ದರು.
ಅವರನ್ನು ಮಾತನಾಡಿಸಿದಾಗಲೆಲ್ಲಾ ನನಗೆ ಅನ್ನಿಸುತ್ತಿದ್ದದ್ದು ಒಂದೇ ಈ ಸ್ನೇಹ, ಪರಿಚಯ ಮುಂದಿನ ಜನ್ಮದ್ದು ಎಂದು. ಅವರು ಇಲ್ಲ ಎನ್ನುವ ವಿಷಯ ತಿಳಿದ ದಿನ ನನಗಂತೂ ತುಂಬಾ ನೋವಾಯಿತು. ಎಷ್ಟು ಸಾಧನೆ ಮಾಡಿದ ವ್ಯಕ್ತಿ ಅವರು, ತುಂಬಾ ಸರಳ, ಇಂತಹ ವ್ಯಕ್ತಿಗಳು ಜೀವನದಲ್ಲಿ ಸಿಗುವುದು ತುಂಬಾ ಅಪರೂಪ. ಅದೆಷ್ಟು ವಿನಯ ಅಂದರೆ ಅದನ್ನು ವರ್ಣಿಸಲು ಪದಗಳು ಸಿಗಲಾರವು ಅದನ್ನು ಕಂಡ ನನಗೆ ಮಾತ್ರ ಗೊತ್ತಿದೆ. ಹಣ್ಣುಗಳಿಂದ ತುಂಬಿದ ಮರದ ಹಾಗೆ ಅವರು. ಒಮ್ಮೆ ಗಜಾನನ ಮತ್ತುಸುಮಿತ್ರಾಗಾಂಧಿಅವರು ನನಗೆ ಕರೆ ಮಾಡಿ ನಮ್ಮ ಜತೆ ಬನ್ನಿ ಪೋಸ್ಟ್ ಆಫೀಸಿಗೆ ಹೋಗಿ ಬರೋಣ ಎಂದರು ನಾನು ಸರಿ ಎಂದು ಅವರ ಜತೆ ಹೋದೆ.
ಪೋಸ್ಟ್ ಆಫೀಸಿಗೆ ಹೋದೆವು ತುಂಬಾ ಜನರಿದ್ದರು ತುಂಬಾ ಉದ್ದದ ಕ್ಯೂ ಇತ್ತು, ಗಜಾನನ ಅವರು ನೋಡಿ ಏನನ್ನೂ ಮಾತನಾಡದೇ ಹಾಗೆಯೇ ಹೋಗಿ ಕ್ಯೂ ನಲ್ಲಿ ನಿಂತರು, ನಾನು ಹೇಳಿದೆ ಸರ್ ನೀವು ಮಹಾತ್ಮಾಗಾಂಧಿಸಂಬಂಧಿಗಳು ಈ ರೀತಿ ಕ್ಯೂ ನಲ್ಲಿ ನಿಲ್ಲುವ ಅವಶ್ಯಕತೆ ನಿಮಗೆ ಇಲ್ಲ ಮ್ಯಾನೇಜರಿಗೆ ನಿಮ್ಮಪರಿಚಯ ಹೇಳಿದರೆ ಸಾಕು ನಿಮ್ಮನ್ನು ಕುಳ್ಳಿರಿಸಿ ಕೆಲಸ ಮಾಡಿಕೊಡುತ್ತಾರೆ ಎಂದೆ ಅದಕ್ಕೆ ಗಜಾನನ ಅವರು ಹೇಳಿದರು ನೋಡಿ ಇಲ್ಲಿಗೆ ನಾವು ಬಂದಿರುವುದು ನಮ್ಮ ಕೆಲಸಕ್ಕೆ ನಾವು ಯಾರಾಗಿದ್ದರೂ ಏನೇ ಹೆಸರಿದ್ದರೂ ಅವಲೆಲ್ಲವನ್ನೂ ಪಕ್ಕಕ್ಕೆ ಇರಿಸಿ ಸಾಮಾನ್ಯರಂತೆ ಬದುಕಬೇಕು ಎಂದರು ಅವರ ಆ ಮಾತುಗಳಲ್ಲಿ ಎಷ್ಟು ಅರ್ಥತ್ತು ನಮಗಿರುವ ಆಸ್ತಿ -ಪದವಿ ಎಲ್ಲಾ ಗೌಣ ಎನ್ನಿಸಿತು, ಅಷ್ಟು ಸರಳ ವ್ಯಕ್ತಿ ಅವರು.
ಆದರೂ ನನಗೆ ಅಂದು ಮನಸ್ಸು ತಡೆಯಲಿಲ್ಲ, ನಾನು ನೇರವಾಗಿ ಮ್ಯಾನೇಜರ್ ಹತ್ತಿರ ಹೋಗಿ ಮಹಾತ್ಮಾಗಾಂಧಿಅವರ ಮೊಮ್ಮಗಳು – ಅಳಿಯ ಬಂದಿದ್ದಾರೆ ಎಂದೆ, ತಕ್ಷಣ ಅವರು ಎದ್ದು ಬಂದು ಗಜಾನನ ಅವರನ್ನು ಮಾತನಾಡಿಸಿ ತಮ್ಮ ಕೋಣೆಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿ ಇವರ ಕೆಲಸವನ್ನು ಮಾಡಿ ಗೌರವದಿಂದ ಕಳುಹಿಸಿಕೊಟ್ಟರು. ಅಲ್ಲಿಂದ ಹೊರಗೆ ಬಂದ ನಂತರ ರಾಚಪ್ಪ ಏಕೆ ಹೀಗೆ ಮಾಡಿದಿರಿ ಎಂದು ನನ್ನನ್ನು ಗಜಾನನ ಅವರು ಕೇಳಿದರು. ನೋಡಿ ಎಂತಹ ವ್ಯಕ್ತಿತ್ವ ಅದು. ಎಕ್ಸ್.ಐ.ಎಮ್.ಇ. ಛೇರ್‌ಮೆನ್ ಆಗಿ ಸೇವೆಸಲ್ಲಿಸಿದವರು.
ಡಾ. ವಿಕ್ರಂ ಸಾರಾಭಾಯ್ ಅವರು ಗಜಾನನ ಅವರನ್ನು, ಐಐಎಮ್, ಅಹಮದಾಬಾದ್‌ಗೆ ಅಧ್ಯಾಪಕರನ್ನಾಗಿ ನೇಸಿದ್ದರು. ಹಾರ್‌ವರ್ಡ ಬ್ಯುಸಿನೆಸ್ ಸ್ಕೂಲ್ ನ ಶಿಕ್ಷಣ ನೀತಿಯನ್ನು ಐಐಎಮ್ ಗೆ ಇವರು ಅಳವಡಿಸಿದರು. ಬ್ಯಾಂಕ್ ಆಫ್ ಬರೋಡ ದ, ಇಂಟರ್ ನ್ಯಾಷನಲ್ಫೈನಾನ್ಸ್ನ, ಛೇರ್ ಪರ್ಸನ್ ಆಗಿ ಸೇವೆ ಸಲ್ಲಿಸಿ ದರು. ಇವರ ಬಳಿ ಅಭ್ಯಾಸ ಮಾಡಿದವರು ದೇಶದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಆರ್.ಬಿ.ಐ. ನ ಮಾಜಿ ಗೌವರ್ನರ್ ರಘುರಾಮ ರಾಜನ್. ಇನ್ಫೋಸಿಸ್‌ನ ಛೇರ್‌ಮೆನ್ ಡಾ.ನಾರಾಯಣ ಮೂರ್ತಿ ಅವರು. ಗಜಾನನ ರಘನಾಥ ಕುಲಕರ್ಣಿ ಮತ್ತು ಸುಮಿತ್ರಾಗಾಂಧಿಕುಲಕರ್ಣಿ ಅವರ ಮದುವೆಗೆ ಭಾರತದ ಮೊದಲ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ್ ಅವರು ಬಂದು ಶುಭ ಕೋರಿದ್ದರು.
ಗಜಾನನ ರಘನಾಥ ಕುಲಕರ್ಣಿ ಅವರು ಜಿ.ಆರ್.ಕುಲಕರ್ಣಿ ಎಂದೇ ಹೆಸರಾಗಿದ್ದವರು. ಆಧ್ಯಾತ್ಮದತ್ತ ತುಂಬಾ ಒಲವು. ಬೆಂಗಳೂರಿನಲ್ಲಿಯೇ ನೆಲೆಸಿದ್ದರಿಂದಕರ್ನಾಟಕದ ಮೇಲೆ ಅಪಾರ ಗೌರವತ್ತು. ಒಮ್ಮೆ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡುವ ಆಸೆಯನ್ನು ಗಜಾನನ ಅವರು ವ್ಯಕ್ತ ಪಡಿಸಿದರು ನಾನು ಹೆಗ್ಗಡೆ ಅವರನ್ನು ಸಂಪರ್ಕಿಸಿ ಷಯ ತಿಳಿಸಲು, ಹೆಗ್ಗಡೆಯವರು ತುಂಬಾ ಖುಷಿಪಟ್ಟು, ಅವರೇ ಕರೆ ಮಾಡಿ ಗಜಾನನ ಅವರನ್ನು ಮಾತ ನಾಡಿಸಿ, ನಿಮಗೆ ಕಾಪ್ಟರ್ ವ್ಯವಸ್ಥೆ ಮಾಡಿಕೊಡುತ್ತೇನೆ ಬಂದು ಹೋಗಿ ಎಂದರು ಅದಕ್ಕೆ ಗಜಾನನ ಅವರು ಬೇಡವೇ ಬೇಡ ನಾನು ಸಾಮಾನ್ಯ ಅದರಂತೆಯೇ ರೈಲಿನಲ್ಲಿ ಬಂದು ಹೋಗುವೆ ಎಂದರು, ಇವರ ಮಾತು ಕೇಳಿ ಹೆಗ್ಗಡೆ ಅವರಿಗೆ ಆಶ್ಚರ್ಯವಾಯಿತು.
ನಾನು, ಗಜಾನನ ಅವರು ಸುಮಿತ್ರಾ ಗಾಂಽ ಅವರು ರೈಲಿನಲ್ಲಿಯೇ ಧರ್ಮಸ್ಥಳಕ್ಕೆ ಹೋದೆವು ಅಲ್ಲಿಗೆ ಹೆಗ್ಗಡೆಯವರು ಕಾರನ್ನು ಕಳುಹಿಸಿದರು. ಹೆಗ್ಗಡೆಯವರನ್ನು ಭೇಟಿ ಮಾಡಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಪೂಜ್ಯ ಹೆಗ್ಗಡೆ ಅವರು ಇವರಿಂದ ಅನೇಕ ವಿಷಯಗಳನ್ನು ಕೇಳಿ ಪಡೆದಿದ್ದರು. ಗಜಾನನ ಅವರಸರಳತನಕ್ಕೆ ತಲೆದೂಗಿದರು. ಮೈಸೂರಿನ ಸುತ್ತೂರು ಮಠದ ಸ್ವಾಮಿಗಳನ್ನು ಭೇಟಿ ಮಾಡುಲು ಬಯಸಿದಾಗ ನಾನೇ ಅವರನ್ನು ಕರೆದುಕೊಂಡು ಹೋಗಿದ್ದೆ ಹಾಗೆಯೇ ತುಮಕೂರಿನ ಸ್ವಾಮಿಗಳನ್ನು ಭೇಟಿಯಾಗುವ ಇಂಗಿತವನ್ನು ನನ್ನ ಬಳಿ ಹೇಳಿದಾಗ ಸ್ವಾಮೀಜಿಗಳ ಅನುಮತಿ ಪಡೆದ ದಂಪತಿಗಳನ್ನು ಕರೆದು ಕೊಂಡು ಹೋಗಿದ್ದೆ. ಸುಮಾರು ಗಂಟೆಗಳ ಕಾಲ ಸ್ವಾಮೀಜಿ ಅವರೊಂದಿಗೆ ಕಾಲ ಕಳೆದಿದ್ದರು.
ಎಷ್ಟು ಸಾಧನೆ ಮಾಡಿದ ವ್ಯಕ್ತಿ ತುಂಬಾ ತುಂಬಾ ಸರಳವಾಗಿ ಜೀವನ ನಡೆಸಿ ನಮಗೆಲ್ಲಾ ಮಾದರಿಯಾಗಿದ್ದಾರೆ. ಅವರು ನಿಧನರಾಗುವ3ದಿನದ ಮೊದಲು ಅವರನ್ನು ಭೇಟಿ ಮಾಡಿ ನಾನು ಹೊರತರಲಿರುವ ನನ್ನ ಜೀವನ ಚರಿತ್ರೆಯ ಪುಸ್ತಕಕ್ಕೆ ಶುಭಾಶಯಗಳನ್ನು ಪಡೆದಿದ್ದೆ. ಅವರು ಮತ್ತು ಅವರ ಪ್ರೀತಿಯ ಪತ್ನಿ ಸುಮಿತ್ರಾಗಾಂಧಿಕುಲಕರ್ಣಿ, ಮಗಳುದ ಮೋಸ್ಟ್ಪವರ್ ಫುಲ್ವುಮೆನ್ ಇನ್ ಇಂಡಿಯಾ ಸೊನಾಲಿ ಕುಲಕರ್ಣಿ ಅಳಿಯ ಮೈಕ್ರೋಸಾಫ್ಟ್ಇಂಡಿಯಾದ ಪ್ರೆಸಿಡೆಂಟ್‌ರ ವೆಂಕಟೇಶನ್ ಹಾಗೂ ಇಬ್ಬರು ಅವಳಿ ಗಂಡು ಮಕ್ಕಳನ್ನು ಜತೆಗೆ ಅವರನ್ನು ಆದರ್ಶವಾಗಿ ಪಡೆದ ನನ್ನಂತಹ ಎಷ್ಟೋ ಸ್ನೇಹಿತರನ್ನುಅಗಲಿದ್ದಾರೆ.
ಅವರಿಗೆ ಸದ್ಗತಿ ಸಿಗಲಿ, ಪರಮಾತ್ಮ ಅವರ ಸಂಸಾರಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ.