ಬಾಂಗ್ಲಾದಲ್ಲಿ ಹಿಂದೂಗಳನ್ನು ಓಡಿಸಿ ಧಾರ್ಮಿಕ ಕಾರ್ಡ್ ಆಟ
ಅಭಿಪ್ರಾಯ
ಶ್ರೀನಿವಾಸ ಜೋಕಟ್ಟೆ,ಮುಂಬಯಿ
ಬಾಂಗ್ಲಾದೇಶ ಈ ಬಾರಿಯ ದುರ್ಗಾ ಪೂಜೆಯ ನಂತರ ಹಿಂಸೆಯ ಬೆಂಕಿಯಲ್ಲಿ ಉರಿಯುತ್ತಿದೆ. ಈ ಬೆಂಕಿಯ ನಿಶಾನೆಯಲ್ಲಿ ಅಲ್ಪಸಂಖ್ಯಾತ ಹಿಂದೂಸಮುದಾಯವು ತೀವ್ರ ನರಳುತ್ತಿದೆ.
ಭಾರತ- ಪಾಕಿಸ್ತಾನದ ೧೯೭೧ ರ ಯುದ್ಧದ ಸಮಯವೂ ಪಾಕಿಸ್ತಾನೀ ಸೇನೆಯು ತನ್ನದೇ ದೇಶ ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಹಿಂದೂ ಗಳನ್ನು ಬೆನ್ನಟ್ಟಿ ಕೊಂದುಹಾಕುತ್ತಿತ್ತು. ಪಾಕಿಸ್ತಾನೀ ಸೇನೆ ಉದ್ದೇಶ ಪೂರ್ವಕವಾಗಿಯೇ ಹಾಗೆ ಹಿಂದೂಗಳನ್ನು ಕೊಲ್ಲುತ್ತಿತ್ತು. ಆ ಸಂಗತಿ ಭಾರತದ ಆಗಿನ ಇಂದಿರಾಗಾಂಧಿ ಸರಕಾರಕ್ಕೂ ಗೊತ್ತಿತ್ತು! ಆದರೆ ಭಾರತ ಸರಕಾರವು ಅದನ್ನು ತಪ್ಪು ರೀತಿಯಲ್ಲಿ ದೇಶಕ್ಕೆ ಹೇಳುತ್ತಿತ್ತು. ಏನೆಂದರೆ- ಪಾಕಿಸ್ತಾನೀ ಸೇನೆಯುಬಂಗಾಳಿಗಳನ್ನು ಕೊಲ್ಲುತ್ತಿದೆ ಎಂದು.
ಹಿಂದೂಗಳನ್ನು ಕೊಲ್ಲುತ್ತಿದೆ ಎಂದು ಹೇಳಲೇ ಇಲ್ಲ. ಭಾರತ ಪಾಕಿಸ್ತಾನದ ೧೯೭೧ ರ ಯುದ್ಧದಲ್ಲಿ ಪಾಕಿ ಸ್ತಾನದ ಗುರಿ ಪೂರ್ವಪಾಕಿಸ್ತಾನದ (ಈಗಿನ ಬಾಂಗ್ಲಾದೇಶದ) ಹಿಂದೂಗಳನ್ನು ಕೊಲ್ಲುವುದೇ ಆಗಿತ್ತು. ಆದರೆ ಭಾರತ ಸರಕಾರವು ಬಂಗಾಳಿಗಳು ಪಾಕ್ ಸೇನೆಯ ಗುರಿಯಾಗಿದ್ದಾರೆ ಎನ್ನುತ್ತಿತ್ತೇ ಹೊರತು ಬಾಂಗ್ಲಾದೇಶ ದಲ್ಲಿರುವ ಹಿಂದೂಗಳನ್ನು ಪಾಕಿಸ್ತಾನಿ ಸೇನೆ ಕೊಲ್ಲುತ್ತಿದೆ ಎಂದು ಹೇಳುತ್ತಿರಲಿಲ್ಲ. ಯಾಕೆ ಗೊತ್ತೇ? ಯಾಕೆಂದರೆ ಹಿಂದೂಗಳನ್ನು ಕೊಲ್ಲುವುದೇ ಪಾಕಿಸ್ತಾನಿ ಸೇನೆಯ ಗುರಿ ಎಂದು ಹೇಳಿದ್ದರೆ ಭಾರತದಲ್ಲಿ ಆವಾಗ ಜನಸಂಘವು ಸಿಡಿದೇಳುವ ಸಾಧ್ಯತೆಗಳಿದ್ದುವು. ಹಾಗೂ ಇದರಿಂದ ಭಾರತದ ಹಿಂದೂಗಳು ಆಕ್ರೋಶ ತಾಳಿ ದೇಶದ ಚಿತ್ರಣವೇ ಬದಲಾಗಬಹುದಾದ ಸಾಧ್ಯತೆಗಳೂ ಇದ್ದುವು.
೧೯೭೧ ರ ಭಾರತ ಪಾಕಿಸ್ತಾನದ ಯುದ್ಧದ ಕುರಿತಂತೆ ಪ್ರಿನ್ಸ್ ಟನ್ ಯುನಿವರ್ಸಿಟಿಯಲ್ಲಿ ರಾಜನೀತಿ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಪ್ರೊಫೆಸರ್ ಗರೀ ಜೆ.ಬಾಸ್ ಅವರು ಒಂದು ಕೃತಿಯನ್ನು ಪೂರ್ವ ಪಾಕಿಸ್ತಾನ ದ ಬಗ್ಗೆ ಕೆಲ ವರ್ಷದ ಹಿಂದೆ ಬರೆದಿದ್ದಾರೆ. ಅದರ ಹೆಸರು- ದ ಬ್ಲಡ್ ಟೆಲೆಗ್ರಾಮ್. ಇದರಲ್ಲಿ ಈ ಯುದ್ಧದ ವಿಷಯವಾಗಿ ವಿಸ್ತಾರದಿಂದ ಬರೆದಿರುವುದು ಚರ್ಚೆಯಾಗಿತ್ತು. ಗರೀ ಜೆ.ಬಾಸ್ ಅವರ ಪ್ರಕಾರ ಈ ಯುದ್ಧ ಮೂಲ ರೂಪದಿಂದ ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾ ದೇಶ) ವಾಸಿಸುತ್ತಿರುವ ಹಿಂದೂಗಳ ವಿರುದ್ಧವಾಗಿತ್ತು.
ಅವರನ್ನು ಅಲ್ಲಿಂದ ಓಡಿಸುವುದೇ ಉದ್ದೇಶ ಆಗಿತ್ತು. ಇದರ ಹೊರತಾಗಿಯೂ ಆಗಿನ ಭಾರತ ಸರಕಾರ ಇದನ್ನು ಬಂಗಾಳಿಗಳ ವಿರುದ್ಧ ನರಸಂಹಾರ ಎಂದೇ ಹೇಳಿಕೆ ನೀಡುತ್ತಿತ್ತು. ಅತ್ತ ಪಾಕಿಸ್ತಾನೀ ಸೇನೆ ನಿರಂತರವಾಗಿ ಅಲ್ಲಿನ ಹಿಂದೂಗಳನ್ನು ಕೊಲ್ಲುತ್ತಿತ್ತು. ಈ ಕೃತಿಯ ಪ್ರಕಾರ ಭಾರತೀಯ ಅಧಿಕಾರಿಗಳು ನಿರ್ಧ ರಿಸಿದ್ದಂತೆ ಜನಸಂಘದ ಹಿಂದೂ ರಾಷ್ಟ್ರವಾದಿಗಳು ಉಗ್ರ ರೂಪ ತಾಳಲು ಅವಕಾಶ ನೀಡಬಾರದು ಎಂದೇ ಅಲ್ಲಿನ ಹಿಂದೂಗಳ ಹತ್ಯೆಯನ್ನು ಮುಚ್ಚಿಟ್ಟಿದ್ದರು. ರಷ್ಯಾದಲ್ಲಿ ಆಗಿನ ಭಾರತದ ರಾಯಭಾರಿ ಡಿ.ಪಿ.ಧರ್ ಪ್ರಕಾರ ಪಾಕಿಸ್ತಾನಿ ಸೇನೆಯು ಯುದ್ಧದ ಮೊದಲೇ ಹಿಂದೂಗಳ ಸಂಹಾರಕ್ಕಾಗಿ ಗುರಿ ಇರಿಸಿತ್ತು.
ಆದರೆ ಭಾರತದಲ್ಲಿ ಗೊತ್ತಾದರೆ ಈ ಸಿಟ್ಟು ಉಗ್ರ ರೂಪ ತಾಳುವುದರಿಂದ ಅವರು ಸುಮ್ಮನಿದ್ದರು. ಆವಾಗ ಹಿಂದೂಗಳ ಸಂಖ್ಯೆ ಅಲ್ಲಿ ಒಂದು ಕೋಟಿಯಹತ್ತಿರ ವಿತ್ತು…. ಇಂದು ಎಷ್ಟಿದ್ದಾರೆ? ಈ ಬಾರಿ ದುರ್ಗಾ ಪೂಜೆಯ ಸಮಯದಲ್ಲಿ ಕಟ್ಟರ್ ಪಂಥಿ ಮುಸ್ಲಿಮರು ಕಿತಾಪತಿಗೆ ಇಳಿದರು: ಬಾಂಗ್ಲಾದೇಶದಲ್ಲಿ ಹಿಂದೂ ಗಳು ಸಂಖ್ಯೆಯಲ್ಲಿ ಬಹಳ ಕಡಿಮೆ ಇರುವ ಕಾರಣ ಅಲ್ಲಿ ಹಿಂದೂಗಳು ಮುಸ್ಲಿಮರ ವಿರುದ್ಧ ಪ್ರತೀಕಾರ ಮಾಡುವ ಸಂಭವವೇ ಇಲ್ಲ. ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಅತಿದೊಡ್ಡ ಹಿಂದೂಗಳ ಪರ್ವ. ಈ ಸಲ ದಸರಾ ಸಮಯ ಹಿಂದೂಗಳ ಯಾವುದೇ ತಪ್ಪಿಲ್ಲದಿದ್ದರೂ ಷಡ್ಯಂತ್ರಕಾರಿಗಳ ಹಿಡಿತದಲ್ಲಿ ಸಿಕ್ಕಿಬಿದ್ದರು.ಹಿಂದೂಗಳ ವಿರುದ್ಧ ಒಂದು ಫೇಕ್ ನ್ಯೂಸ್ ತಯಾರಿಸಿ ವಾಟ್ಸಪ್ ನಲ್ಲಿ ಪ್ರಚಾರ ಮಾಡಿ ಹಿಂದೂಗಳ ವಿರುದ್ಧದ ವಾತಾವರಣ ಸೃಷ್ಟಿಸಲಾಯಿತು. ಹಾಗೂ ಇಪ್ಪತ್ತು ಜಿಲ್ಲೆಗಳಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸಲು ಶುರುವಾಯಿತು.
ಬಾಂಗ್ಲಾದಲ್ಲಿ ಆಡಳಿತಕ್ಕಾಗಿ ಧಾರ್ಮಿಕ ಕಾರ್ಡ್: ಬಾಂಗ್ಲಾದೇಶದ ಆಡಳಿತ ಪಾರ್ಟಿ ಅವಾಮೀ ಲೀಗ್‌ನ ಪ್ರಧಾನಮಂತ್ರಿ ಶೇಖ್ ಹಸೀನಾ ಮತ್ತು ಬಾಂಗ್ಲಾದೇಶನ್ಯಾಷನಲಿಸ್ಟ್ ಪಾರ್ಟಿಯ ವಿಪಕ್ಷ ನೇತಾ ಖಾಲಿದಾಜಿಯಾರ ನಡುವಿನ ಆಡಳಿತ ಕಚ್ಚಾಟದ ನಡುವೆ ಬಾಂಗ್ಲಾ ದೇಶದ ಹಿಂದೂಗಳನ್ನು ಅನಾವಶ್ಯಕವಾಗಿ ಎಳೆದು ತರಲಾಯಿತು. ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ ಸಮಾಜವು ಅಲ್ಲಲ್ಲಿ ದುರ್ಗಾಪೂಜೆಯ ಉತ್ಸವದ ಸಡಗರದಲ್ಲಿದ್ದಾಗ ಕೆಲವು ಧಮಾಂಧರು ಕಟ್ಟರ್ ಪಂಥಿಗಳು ಯೋಜನಾ ಬದ್ಧ ರೀತಿಯಲ್ಲಿ ಹಿಂದೂಗಳ ನರಸಂಹಾರಕ್ಕೆ ಸ್ಕೆಚ್ ತಯಾರಿಸಿದರು.
ಕೋಮಿಲಾ ಕ್ಷೇತ್ರದ ಬಾಂಗ್ಲಾದೇಶಿ ನ್ಯಾಷನಲಿಸ್ಟ್ ಪಾರ್ಟಿ ಮತ್ತು ಜಮಾತೆ- ಎ- ಇಸ್ಲಾಮೀಯ ಕಾರ್ಯಕರ್ತರು ಕುರಾನ್‌ನ ಒಂದು ಪ್ರತಿಯನ್ನು ದುರ್ಗಾ ಪೆಂಡಾಲದೊಳಕ್ಕೆ ತಂದು ದುರ್ಗಾಮೂರ್ತಿಯ ಪಾದದ ಬಳಿ ಇರಿಸಿದರು. ಹಾಗೂ ಅದರ ಒಂದು ಫೋಟೋ ತೆಗೆದು ಪರಾರಿಯಾದರು. ಸ್ವಲ್ಪ ಸಮಯದಲ್ಲೇ ಈ ಫೋಟೋ ದೇಶಾದ್ಯಂತ ವೈರಲ್ ಆಯಿತು. ಹಿಂದೂಗಳು ಕುರಾನ್‌ಅನ್ನು ದುರ್ಗಾ ಮೂರ್ತಿಯ ಕಾಲಿನ ಬಳಿ ಇರಿಸಿ ಅವಮಾನ ಮಾಡಿದರು ಎಂದು ಕಟ್ಟರ್ ಪಂಥಿಗಳು ಪ್ರಚಾರ ಮಾಡಿ ಮುಸ್ಲಿಂರನ್ನು ಕೆರಳಿಸಿದರು. (ಕುರಾನ್ ಹಿಂದೂಗಳು ದುರ್ಗಾ ಮಂಟಪದಲ್ಲಿ ತರುವುದು ಸಾಧ್ಯವೇ?) ತಕ್ಷಣ ಕಟ್ಟರ್ ಪಂಥಿಮುಸ್ಲಿಮರು ದುರ್ಗಾ ಪೆಂಡಾಲಗಳು, ಮಂದಿರಗಳು ಮತ್ತು ಹಿಂದೂಗಳ ಮೇಲೆ, ಹಿಂದೂ ಬಸ್ತಿಗಳ ಮೇಲೆ ದಾಳಿ, ಹಲ್ಲೆ , ಕೊಲೆ ಮಾಡಲು ಶುರುಮಾಡಿದರು.
೧೩ ಅಕ್ಟೋಬರ್ ನಿಂದ ಆರಂಭವಾದ ಈ ಹಲ್ಲೆ ಒಂದು ವಾರ ಕಾಲ ವಿಜೃಂಭಿಸಿತು ( ಈಗಲೂ ಅದು ಪೂರ್ತಿ ನಿಂತಿಲ್ಲ). ಚಿಂತ್ ಗಾಂಗ್, ರಂಗಪುರ್, ಪೀರ್ ಗಂಜ್, ಹಾಜೀಗಂಜ್ ಮೊದಲಾದೆಡೆ ಮುಸಲ್ಮಾನರು ಗುಂಪು ಸೇರಿ ಅತ್ಯಧಿಕ ವಿಧ್ವಂಸಕ ಕೃತ್ಯಗಳನ್ನು ಮಾಡಿದರು. ಈ ಕಟ್ಟರ್ ಪಂಥಿಗಳು ನೌಖಾಲಿಯಲ್ಲಿನ ಇಸ್ಕಾನ್ ಕೃಷ್ಣ ಮಂದಿರಕ್ಕೆ ದಾಳಿ ನಡೆಸಿ ಭಕ್ತರನ್ನು ಅರ್ಚಕರನ್ನು ಹತ್ಯೆ ನಡೆಸಿದರು.ಪೂರ್ವನಿಯೋಜಿತವಾಗಿ ಒಂದು ಸಣ್ಣ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ವೈರಲ್ ಆಗಿಸಿ ಬಾಂಗ್ಲಾದೇಶದಲ್ಲಿ ಅನೇಕ ಹಿಂದೂ ಮಂದಿರಗಳನ್ನು ಧ್ವಂಸಗೊಳಿಸಿದರು.
ಸಾವಿರಾರು ಹಿಂದೂಗಳು ಮನೆ ಮಂದಿರವನ್ನು ತ್ಯಜಿಸಿ ಜೀವ ಭಯದಿಂದ ಪಲಾಯನ ಮಾಡಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಲ್ಲೆ ಇದೇನೂ ಮೊದಲ ಬಾರಿಯಲ್ಲ. ಕಳೆದ ಅನೇಕ ವರ್ಷಗಳಿಂದ ಈ ದೃಶ್ಯಗಳು ಒಂದಲ್ಲ ಒಂದು ನೆಪ ಒಡ್ಡಿ ಪುನರಾವರ್ತನೆ ಆಗುತ್ತಲೇ ಬಂದಿದೆ. ಹಿ-ಜತ್-ಎಫ್ ಇಸ್ಲಾಮ್ ಹೆಸರಿನ ಕಟ್ಟರ್ ಪಂಥೀ ಸಂಘಟನೆ ಜಮಾತ್ ನ ಕಾರ್ಯಕರ್ತರು ಮತ್ತು ಖಾಲಿದ್ ಜಿಯಾರ ಅವಾಮೀ ಲೀಗ್ ನ ಕಾರ್ಯಕರ್ತರು ಆಗಾಗ ಷಡ್ಯಂತ್ರ ರಚಿಸಿ ಹಿಂದೂಗಳ ಮೇಲೆ ಇಂತಹ ದಾಳಿಯನ್ನು ನಡೆಸುತ್ತಲೇ ಇದ್ದಾರೆ.
೧೯೭೧ ರಲ್ಲಿ ಪಾಕಿಸ್ತಾನ ಸೇನೆಯು ತನ್ನದೇ ದೇಶ ಪೂರ್ವ ಪಾಕಿಸ್ತಾನದ ಮೇಲೆ ಹಲ್ಲೆ ನಡೆಸಿದ್ದು ಆವಾಗ ೩೦ ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿ ಹಿಂದೂಗಳನ್ನುಕೊಲ್ಲಲಾಗಿತ್ತು. ಭಾರತದಲ್ಲಿ ೨೦೨೧ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯದ (೧೯೭೧-೨೦೨೧) ಸುವರ್ಣ ಜಯಂತಿಯನ್ನು ಖುಷಿಯಿಂದ ಆಚರಿಸುತ್ತಿದ್ದರೆ ಅತ್ತ ಬಾಂಗ್ಲಾದಲ್ಲಿ ಹಿಂದೂಗಳ ಮಾರಣ ಹೋಮದ ದೃಶ್ಯಗಳು ಏರುತ್ತಿವೆ. ಇಂತಹ ದೃಶ್ಯ ಮತ್ತೆ ಮತ್ತೆ ಯಾಕೆ ಕಾಣಿಸಿತು? ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯ ವಾಗುತ್ತಿದೆ. ಅಲ್ಲಿನ ಹಿಂದೂಗಳಿಂದ ಭಾರತದತ್ತ ಪಲಾಯನ ಜಾರಿ ಇದೆ. ಈ ದೃಶ್ಯ ಮುಂದುವರಿದರೆ ಇನ್ನು ಇಪ್ಪತ್ತೈದು ವರ್ಷಗಳ ನಂತರ ಬಾಂಗ್ಲಾದೇಶದಲ್ಲಿ ಒಬ್ಬರೂ ಹಿಂದೂ ಧರ್ಮದವರು ಉಳಿಯಲಾರರು……..
ಭಾರತದ ಏಳು ನೆರೆರಾಷ್ಟ್ರಗಳಾದ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ, ಮಲೇಶಿಯಾ, ಇಂಡೋನೇಷ್ಯಾ, ಶ್ರೀಲಂಕಾ ಮತ್ತು ಟಿಬೇಟ್‌ನಲ್ಲಿ ಮಾನವಾ ಧಿಕಾರವನ್ನು ಮುಂದಿಟ್ಟು ಸೆಂಟರ್ ಫಾರ್ ಡೆಮೋಕ್ರೆಸಿ-ರಲಿಸಂಆಂಡ್ ಹ್ಯೂಮನ್ ರೈಟ್ಸ್ (ಸಿಡಿಪಿಎಚ್ ಆರ್) ನ ಕೆಲ ಸಮಯದ ಹಿಂದಿನ ರಿಪೋರ್ಟ್ ನಲ್ಲಿ ಈ ಸಂಗತಿಗಳನ್ನು ತಿಳಿಸಿತ್ತು. ಬಾಂಗ್ಲಾದೇಶದಲ್ಲಿ ಈ ವರ್ಷ ೨೦೨೧ ರ ಅಕ್ಟೋಬರ್ ೧೩ ರಿಂದ ೧೭ರ ತನಕ ಐದು ದಿನಗಳ ಕಾಲ ಹಿಂದೂಗಳ ಮೇಲೆ ಕಟ್ಟರ್ ಪಂಥಿ ಮುಸ್ಲಿಮರಿಂದ ತೀವ್ರ ಸ್ವರೂಪದ ಹಲ್ಲೆ ನಡೆಯಿತು. ದೊಡ್ಡ ಪ್ರಮಾಣದಲ್ಲಿ ಹಿಂಸಾ ದೃಶ್ಯಗಳು ಕಾಣಿಸಿತು. ಈಗಲೂ ಹಿಂಸಾದೃಶ್ಯ ಪೂರ್ತಿ ನಿಂತಿಲ್ಲ.
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಓಡಿಸುವ ಷಡ್ಯಂತ್ರದಲ್ಲಿ ಶೇಖ್ ಹಸೀನಾ ಸರಕಾರವು ಪರೋಕ್ಷವಾಗಿ ಹಿಂದೆ ಬಿದ್ದಿಲ್ಲ. ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಹಲ್ಲೆಕೋರರ ಮೇಲೆ ಕಠಿಣ ಕ್ರಮಕ್ಕೆ ಆದೇಶವನ್ನು ಕೂಡ ನೀಡಿದ್ದಾರೆ. ಅನೇಕರನ್ನು ಬಂಽಸಲಾಗಿದೆಯೆಂದೂ ವರದಿಗಳಾಗಿವೆ. ಆದರೆ ಇದರ ಬಗ್ಗೆ ಅಲ್ಲಿನ ಹಿಂದೂಗಳಿಗೆ ಯಾವ ಭರವಸೆಯೂ ಇಲ್ಲ. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗ್ತಿದೆ.
೧೯೪೭ ರಲ್ಲಿ ಶೇ.೨೯.೭ ಹಿಂದೂಗಳಿದ್ದರೆ, ೧೯೭೪ ರಲ್ಲಿ ಶೇ.೧೪.೬ ಮತ್ತು ೨೦೦೧ ರಲ್ಲಿ ಶೇ.೮.೩ ಮಾತ್ರ ಉಳಿದರು. ‘ಬಾಂಗ್ಲಾದೇಶ್ ಹಿಂದೂ ಬುದ್ಧಿಸ್ಟ್ ಕ್ರಿಶ್ಚಿಯನ್ ಕೌನ್ಸಿಲ್’ ನ ಜನರಲ್ ಸೆಕ್ರೆಟರಿ, ಖ್ಯಾತ ವಕೀಲ, ಸ್ವಾತಂತ್ರ್ಯ ಹೋರಾಟಗಾರ ರಾಣಾ ದಾಸಗುಪ್ತಾ ಹೇಳುತ್ತಾರೆ- ಬಾಂಗ್ಲಾದೇಶದಲ್ಲಿ ಈಗಲೂ ಸ್ಥಿತಿ ಸರಿಯಾಗಿಲ್ಲ. ಸದ್ಯದ ಅಫ್ಘಾನಿಸ್ತಾನದ ರಸ್ತೆಯನ್ನೇ ಇಲ್ಲೂ ಅಳವಡಿಸಲು ಪ್ರಯತ್ನ ನಡೆಯುತ್ತಿದೆ. ಇಂದು ಹಿಂದೂ ಬುದ್ಧಿಸ್ಟ್ ಕ್ರಿಶ್ಚಿಯನ್ ಕೌನ್ಸಿಲ್ ನ ಜನರಲ್ ಸೆಕ್ರೆಟರಿ ಆಗಿರುವ ನಾನೇ ಇಷ್ಟು ಹೆದರಿದ್ದರೆ ನೀವೇ ಊಹಿಸಿ ಇಲ್ಲಿನ ಇತರ ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು!
ಒಬ್ಬ ಸಾಮಾನ್ಯ ಹಿಂದೂವಿನ ಮನಸ್ಸಿನಲ್ಲಿ ಎಂತಹ ಭಯ ಹುಟ್ಟಿರಬಹುದು? ಇದು ಹಿಂದೂಗಳನ್ನು ದೇಶದಿಂದ ಓಡಿಸುವ ಬಹಳ ದೊಡ್ಡ ಷಡ್ಯಂತ್ರ.ಕಮ್ಯೂನಲ್-ರ್ಸೆಸ್ದೇಶದಲ್ಲಿ ಅಲ್ಪಸಂ ಖ್ಯಾತ ಹಿಂದೂಗಳು ಇರಬಾರದು ಎಂದು ಇಚ್ಚಿಸಿದೆ ಎಂದು. ಪಾಕಿಸ್ತಾನ ಹುಟ್ಟಿದಾಗ ಹಿಂದೂಗಳು ಶೇ.೨೯.೭ಇದ್ದರು. ಬಾಂಗ್ಲಾದೇಶ ರಚನೆ ಆದಾಗ ಹಿಂದೂಗಳ ಸಂಖ್ಯೆ ಇದ್ದುದು ಶೇ.೨೦. ಇದೀಗ ಶೇ. ೯ರಷ್ಟು ಮಾತ್ರ ಹಿಂದೂಗಳಿದ್ದಾರೆ. ೧೯೪೭ ರಲ್ಲಿ ಪಾಕಿಸ್ತಾನ ಆದಾಗಲೂ ಹಿಂದೂಗಳನ್ನು ದೇಶದಿಂದ ಓಡಿಸಲಿಕ್ಕೆ ನೋಡಿದ್ದರು.
೧೯೭೭ ರಲ್ಲಿ ಜಿಯಾಉರ್ ರಹಮಾನ್ ಸೈನ್ಯದ ಆತಂಕದ ಸಮಯವೂ ಸೆಕ್ಯುಲರಿಸಂ ಶಬ್ದವನ್ನು ಸಂವಿಧಾನದಿಂದ ತೆಗೆದು ಹಾಕಲಾಗಿತ್ತು. ೧೯೮೮ ರಲ್ಲಿ ಹುಸೇನ್ ಮುಹಮ್ಮದ್ ಇರ್ಷಾದ್ ರ ಅಧ್ಯಕ್ಷತೆಯಲ್ಲಿ ಬಾಂಗ್ಲಾದೇಶದಲ್ಲಿ ಇಸ್ಲಾಮನ್ನು ರಾಜ್ಯಧರ್ಮ ಎಂದು ಪರಿಗಣಿಸಲಾಯಿತು. ಪೂರ್ವ ಪಾಕಿಸ್ತಾನ ಬಾಂಗ್ಲಾದೇಶ ಎಂದು ಕರೆಸಿಕೊಂಡ ಸಮಯ(೧೯೭೧) ಒಂದು ಕೋಟಿ ಬಾಂಗ್ಲಾದೇಶ ಜನರು ಭಾರತದಲ್ಲಿ ಶರಣು ಬಂದಿದ್ದರು. ಆ ಸಮಸ್ಯೆ ಈಗಲೂಭಾರತವನ್ನು ಕಾಡುತ್ತಲೇ ಬಂದಿದೆ. (ಇಂದು ಎರಡು ಕೋಟಿಯಷ್ಷು ಅಕ್ರಮ ಬಾಂಗ್ಲಾ ನುಸುಳು ಕೋರರು ಭಾರತದಲ್ಲಿ ಓಡಾಡುತ್ತಿದ್ದಾರೆ.) ೧೯೭೦ ರಲ್ಲಿ ಪಾಕಿಸ್ತಾನದ ಚುನಾವಣೆಯು ಪೂರ್ವಪಾಕಿಸ್ತಾನದ ಅಸ್ಮಿತೆಗೆ ಸವಾಲಾಯಿತು. ಶೇಖ್ ಮುಜೀಬುರ್ ರಹಮಾನ್ ಪೂರ್ವ ಪಾಕಿಸ್ತಾನದ ಸ್ವಾಯತ್ತ ತೆಗೆ ಆರಂಭದಿಂದಲೂ ಸಂಘರ್ಷ ನಡೆಸಿದವರು. ಇದು ಪಾಕಿಸ್ತಾನಕ್ಕೆ ಕಿರಿಕಿರಿಯಾಯಿತು. ಅನ್ಯ ಬಂಗಾಳಿ ನಾಯಕ ರೂ ಪಾಕ್‌ನ ಕೋಪಕ್ಕೆ ತುತ್ತಾದರು. ಮುಜೀಬುರ್ ರಹಮಾನ್ ಈ ಆಂದೋಲನದಲ್ಲಿ ಹೀರೋ ಆಗಿದ್ದರು. (ನಂತ ರ ಪಾಕಿಸ್ತಾನ ಮುಜಿಬುರ್ ಮೇಲಿನ ಷಡ್ಯಂತ್ರದ ಕೇಸನ್ನು ವಾಪಸ್ ಪಡೆಯುವಂತಾಯಿತು.) ಪಾಕಿಸ್ತಾನಕ್ಕೆ ೧೯೭೦ ರ ಚುನಾವಣೆಯು ತನ್ನ ಅಸ್ತಿತ್ವಕ್ಕಾಗಿ ಬಹಳ ಮಹತ್ವವಾಗಿತ್ತು.
ಈ ಚುನಾವಣೆಯಲ್ಲಿ ಶೇಖ್ ಮುಜಿಬುರ್ ರಹಮಾನ್‌ರ ಪಾರ್ಟಿ ಪೂರ್ವ ಪಾಕಿಸ್ತಾನದ ಅವಾಮೀ ಲೀಗ್‌ಗೆ ಭರ್ಜರಿ ವಿಜಯ ಪ್ರಾಪ್ತಿಯಾಯಿತು. ಪೂರ್ವ ಪಾಕಿಸ್ತಾನದ (ಬಾಂಗ್ಲಾದ) ೧೬೯ ರಲ್ಲಿ ೧೬೭ ಸೀಟು ಅವಾಮೀ ಲೀಗ್ ಪಾರ್ಟಿಗೆ ಸಿಕ್ಕಿತು. ೩೧೩ ಸೀಟುಗಳ ಪಾಕಿಸ್ತಾನಿ ಸಂಸದ್‌ನಲ್ಲಿ ಮುಜಿಬುರ್‌ರ ಬಳಿ ಸರಕಾರ ರಚನೆಗೆ ಬಹುಮತ ಇತ್ತು. ಆದರೆ ಪಾಕಿಸ್ತಾನದಲ್ಲಿನ ಲೀಡರ್‌ಗಳಿಗೆ ಮತ್ತು ಸೈನ್ಯ ಶಾಸನಕ್ಕೆ ಇದನ್ನು ಅರಗಿಸಲು ಸಾಧ್ಯ ಆಗಲಿಲ್ಲ. ಮುಜೀಬುರ್ ರಹಮಾನ್ ಅವರಿಗೆ ಪಾಕಿಸ್ತಾನವು ದ್ರೋಹ ಬಗೆಯುತ್ತಿರುವುದು ಕಂಡುಬಂದಾಗ ಪೂರ್ವಪಾಕಿಸ್ತಾನ ದಲ್ಲಿ ಭಾರೀ ಆಂದೋಲನ ಕಾಣಿಸಿತು. ಇದರಿಂದಪಾಕಿಸ್ತಾನೀ ಸೇನೆ ಪ್ರವೇಶಿಸಿ ಆಂದೋಲನವನ್ನು ಹಿಮ್ಮೆಟ್ಟಿಸಲು ನೋಡಿತು.
ಮಾರ್ಚ್ ೧೯೭೧ ರ ನಂತರದ ದಿನಗಳಲ್ಲಿ ಪಾಕಿಸ್ತಾನೀ ಸೇನೆಯ ಕ್ರೌರ್ಯ ದೃಶ್ಯಗಳು, ಹತ್ಯೆ ಮತ್ತು ಅತ್ಯಾಚಾರಗಳು ಹೆಚ್ಚಾಯ್ತು. ಮುಜೀಬುರ್ ರಹಮಾನ್ಅವರನ್ನು ಪಾಕಿಸ್ತಾನವು ಬಂಽಸಿತು. ಅವಾಮಿ ಲೀಗ್‌ನ ಸದಸ್ಯರು ಆವಾಗ ಭಾರತಕ್ಕೆ ಪಲಾಯನ ಮಾಡಲು ಆರಂಭಿಸಿದರು. ಭಾರತದಲ್ಲಿ ಶರಣಾರ್ಥಿಗಳ ಸಂಖ್ಯೆ ಏರಿತು. ೧೯೭೧ ರಲ್ಲಿ ಒಂದು ವರ್ಷದ ಅವಧಿಯಲ್ಲಿ ಬಾಂಗ್ಲಾದಿಂದ ಭಾರತಕ್ಕೆ ಶರಣಾರ್ಥಿಗಳಾಗಿ ಬಂದವರ ಸಂಖ್ಯೆ ಒಂದು ಕೋಟಿ ದಾಟಿತು. ಹೆಚ್ಚಿನವರು ಪಶ್ಚಿಮ ಬಂಗಾಳದಲ್ಲಿ ಶರಣು ಬಂದರು. ಅನೇಕರು ಅಸ್ಸಾಂ ಗೆ ಓಡಿಬಂದರು.
ಇದರಿಂದ ಇಂದಿರಾಗಾಂಧಿ ಸರಕಾರಕ್ಕೆ ಪಾಕ್ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಒತ್ತಡವೂ ಹೆಚ್ಚಾಯಿತು. ಅತ್ತ ಪಾಕಿಸ್ತಾನದಲ್ಲಿಯೂ ಭಾರತದ ವಿರುದ್ಧ ಕ್ರಮಕೈಗೊಳ್ಳುವಂತೆ ಪಾಕಿಸ್ತಾನದೊಳಗೆ ಕೂಡಾ ಒತ್ತಡ ಬಂತು. ೨೩- ೧೧- ೧೯೭೧ರಂದು ಪಾಕಿಸ್ತಾನದ ರಾಷ್ಟ್ರಪತಿ ಯಾಹ್ಯಾಖಾನ್ ಪಾಕಿಸ್ತಾನದಿಂದ ಯುದ್ಧದ ತಯಾರಿ ನಡೆಸಿದರು. ೩ -೧೨ -೧೯೭೧ ರಂದು ಪಾಕ್ ನ ವಾಯುಸೇನೆ ಯು ಭಾರತದ ಮೇಲೆ ಹಲ್ಲೆ ನಡೆಸಿತ್ತು. ಅಮೃತಸರ, ಆಗ್ರಾ ಸಹಿತ ಹಲವು ನಗರಗಳನ್ನು ಗುರಿಯಾಗಿಸಿತು. ಇದರ ಜತೆ ಭಾರತ-ಪಾಕ್ ಯುದ್ಧ ಆರಂಭವಾಯಿತು. ಅದರೆ ೧೬ -೧೨- ೧೯೭೧ ರಂದು ಪಾಕಿಸ್ತಾನದ ಸೇನೆ ಭಾರತಕ್ಕೆಶರಣಾಗತಿಯಾಗಿ ಪೂರ್ವಪಾಕಿಸ್ತಾನವು ಬಾಂಗ್ಲಾದೇಶದ ಹೆಸರಲ್ಲಿ ಜನ್ಮ ತಳೆಯಿತು.
ಬಾಂಗ್ಲಾದ ರೊಹಿಂಗ್ಯಾ ಮುಸ್ಲಿಮರು ಬರ್ಮಾದಲ್ಲಿ ಅಲ್ಲಿನ ಬೌದ್ಧರ ಮೇಲೆ ಹಲ್ಲೆ ನಡೆಸಿದಾಗ ಬೌದ್ಧರನ್ನು ಕೊಲೆ ಮಾಡಿದಾಗ ಕೆರಳಿದ ಬೌದ್ಧರು ರೊಹಿಂಗ್ಯಾರನ್ನು ಮತ್ತೆ ಇತ್ತ ಬಾರದಂತೆ ಬುದ್ಧಿ ಕಲಿಸಿ ಓಡಿಸಿದ್ದರು. ಆವಾಗ ಭಾರತಕ್ಕೂ ಬಂದ ಒಂದಷ್ಟು ರೊಹಿಂಗ್ಯಾಗಳಿಗೆ ಆಶ್ರಯ ನೀಡಬೇಕು ಎಂದು ಕೆಲವರು ‘ರಾಗ’ ಎಳೆದಿದ್ದರು. ಆದರೆ ಅದೇ ಜನರು ಈವಾಗ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಧಾಳಿ ನಡೆಯುತ್ತಿದ್ದರೆ ಅವರ ಸ್ವರವೇ ಕೇಳಿ ಬರುತ್ತಿಲ್ಲ.
ಭಾರತ – ಬಾಂಗ್ಲಾದೇಶ ನಡುವೆ ೪,೦೯೬ ಕಿಲೋಮೀ ಟರ್ ಉದ್ದದ ಅಂತಾರಾಷ್ಟ್ರೀಯ ಗಡಿ ಪ್ರದೇಶ ಇದೆ. ಇದು ವಿಶ್ವದ ೫ ನೆಯ ಅತಿ ದೊಡ್ಡ ಬಾರ್ಡರ್. ಇದರಲ್ಲಿ ಅಸ್ಸಾಮ್ ರಾಜ್ಯದಲ್ಲಿ ೨೬೨ ಕಿ.ಮೀ, ತ್ರಿಪುರದಲ್ಲಿ ೮೫೬ ಕಿ.ಮೀ, ಮಿಜೋರಂನಲ್ಲಿ ೩೧೮ ಕಿ.ಮೀ, ಮೇಘಾಲಯದಲ್ಲಿ ೪೪೩ ಕಿ.ಮೀ ಮತ್ತು ಪಶ್ಚಿಮ ಬಂಗಾಳದಲ್ಲಿ ೨,೨೧೭ ಕಿ.ಮೀ. ಉದ್ದದ ಗಡಿಭಾಗವನ್ನು ಭಾರತ ಹೊಂದಿದೆ.
೬೪ ಜಿಲ್ಲೆಗಳ ಡಿವಿಜನ್‌ಗಳ ಬಾಂಗ್ಲಾದೇಶ ದಲ್ಲಿನ ಎರಡು ಡಜನ್ ಜಿಲ್ಲೆಗಳಲ್ಲಿ ಮೊನ್ನೆ ದಸರಾ ಸಮಯ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮುಸ್ಲಿಂ ಕಟ್ಟರ್ ಪಂಥಿಗಳು ನಡೆಸಿದ್ದು ಬಾರತದಲ್ಲಿ ಅದರಲ್ಲೂ ಈಶಾನ್ಯ ಭಾರತದಲ್ಲಿ ಭಾರೀ ಪ್ರತಿಭಟನೆಯನ್ನು ಹಿಂದೂಗಳು ನಡೆಸಿದ್ದಾರೆ. ಅಮೆರಿಕ ರಷ್ಯಾ ಆಸ್ಟ್ರೇಲಿಯಾ ಮೊದಲಾದ ವಿದೇಶಗಳಲ್ಲೂ ಹಿಂದೂಗಳ ಮೇಲಿನ ಹಲ್ಲೆಗೆ ತೀವ್ರ ಪ್ರತಿಭಟನೆ ಕಂಡು ಬಂದಿದೆ . ವಿಶ್ವದ ೧೫೦ ಇಸ್ಕಾನ್ ಮಂದಿರಗಳಲ್ಲಿ ಬಾಂಗ್ಲಾದಲ್ಲಿ ಇಸ್ಕಾನ್ ಮಂದಿರಕ್ಕೆ ನಡೆಸಿದ ದಾಳಿಯ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
೨೦೧೬ ರ ತನಕವೂ ಬಾಂಗ್ಲಾದೇಶ ಮತ್ತು ಭಾರತದ ಗಡಿಯಲ್ಲಿನ ೮ ಸಾವಿರಕ್ಕೂ ಅಽಕ ಪಿಲ್ಲರ್ ಗಳಲ್ಲಿ ಪೂರ್ವ ಪಾಕಿಸ್ತಾನ ಎಂದೇ ಹೆಸರಿತ್ತು. ಅನಂತರ ಮೋದಿ ಸರಕಾರವು ಆ ಪಿಲ್ಲರ್ ನಿಂದ ಪೂರ್ವ ಪಾಕಿಸ್ತಾನ ಹೆಸರು ಅಳಿಸಲು ಮುಂದಾಯ್ತು.೨೦೧೯ ರಲ್ಲಿ ಶೇಖ್ ಹಸೀನಾ ಸರಕಾರವೂ ಅದಕ್ಕೆ ಒಪ್ಪಿಗೆ ನೀಡಿತು. ೨೦೧೯ ರಲ್ಲಿ ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಬಂದಾಗ (ಎನ್‌ಆರ್‌ಸಿ) ಒಂದಷ್ಟು ಚರ್ಚೆಯಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿ ಸ್ತಾನದಿಂದ ೨೦೧೪ರ ಡಿಸೆಂಬ ರ್ ೩೧ರ ಮೊದಲು ಬಂದಿರುವ ಹಿಂದೂ, ಸಿಖ್ಖ್, ಬೌದ್ಧ, ಜೈನ , ಪಾರಸಿ, ಕ್ರೈಸ್ತ ಇವರಿಗೆ ಭಾರತದ ಪೌರತ್ವ ನೀಡುವಕಾನೂನನ್ನು ತರಲಾಗಿದೆ. ಆದರೆ ಇಲ್ಲಿ ಮುಸ್ಲಿಮರು ಇಲ್ಲ ಎನ್ನುವುದಕ್ಕಾಗಿ ಕೆಲವರು ಟೀಕೆ ಮಾಡಿದರು.
ಆದರೆ ಆ ಮೂರೂ ದೇಶಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರು ಇರುವುದರಿಂದ ಅವರನ್ನು ಸೇರಿಸಿಲ್ಲ. ಮುಸ್ಲಿಮರಿಗೆ ಆ ರಾಷ್ಟ್ರಗಳಲ್ಲಿ ಆರಾಮವಾಗಿ ಕಿರುಕುಳ ಇಲ್ಲದೆ ಬದುಕ ಬಹು ದಾಗಿದೆ. ಆ ಮೂರು ದೇಶಗಳಲ್ಲಿ ಹಿಂದೂ, ಸಿಖ್ಖ್ ಸಹಿತ ಹಲವು ಅಲ್ಪಸಂಖ್ಯಾತರು ಯಮಯಾತನೆಯನ್ನು ಅನುಭವಿಸುತ್ತಿದ್ದಾರೆ.ಕಾಶ್ಮೀರದಂತೆ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಆಸ್ತಿಪಾಸ್ತಿಗಳನ್ನು ಒಳ ಹಾಕುವ ಷಡ್ಯಂತ್ರಗಳು ನಿರಂತರ ನಡೆಯುತ್ತಲೇ ಇವೆ. ಪೂರ್ವ ಪಾಕಿಸ್ತಾನವನ್ನು (ಬಾಂಗ್ಲಾದೇಶ) ಪಾಕಿಸ್ತಾನಿ ರಾಕ್ಷಸರ ದೌರ್ಜನ್ಯದಿಂದ ಭಾರತವು ಅನೇಕ ಸಂಕಷ್ಟಗಳನ್ನು ಎದುರಿಸಿ ಪಾಕಿಸ್ತಾನಿಯರಿಂದ ಮುಕ್ತಗೊಳಿಸಿ ಅವರಿಗೆ ಸ್ವಾತಂತ್ರ್ಯವನ್ನು ಪಡೆಯಲು ಭಾರತ ನೀಡಿರುವ ನೆರವನ್ನು ಬಾಂಗ್ಲಾದೇಶ ಮರೆತಿದೆಯೇ? ಪಾಕ್ ನಂತೆ ಬಾಂಗ್ಲಾ ಕೂಡಾ ಒಂದು ದಿನ ಭಾರತಕ್ಕೆ ಅಪಾಯಕಾರಿಯಾಗಿ ಕಾಣುವ ದಿನ ದೂರವಿಲ್ಲವೇನೋ? ಈಗ ಅಲ್ಲಿನ ಮಾಧ್ಯಮಗಳೂ ಹಿಂದೂಗಳಿಗೆ ಈಗ ಬಾಂಗ್ಲಾದೇಶದಲ್ಲಿ ಜಾಗ ಇಲ್ಲ.
ಇವೆಲ್ಲ ಹಿಂಸೆ ಪೂರ್ವನಿಶ್ಚಿತ ಎಂದೇ ಬರೆದಿವೆ. ಸರಕಾರ ಮತ್ತು ವಿಪಕ್ಷಗಳು ಆಡಳಿತಕ್ಕಾಗಿ ಧಾರ್ಮಿಕ ಕಾರ್ಡ್ ನ ಆಟವಾಡುತ್ತಿವೆ ಎಂದೂ ಅಲ್ಲಿನ ಮಾಧ್ಯಮ ಗಳೂ ಹೇಳುತ್ತಿವೆ ಬಾಂಗ್ಲಾದೇಶದ ಚರ್ಚಿತ ಪತ್ರಿಕೆ ‘ದ ಡೇಲಿ ಸ್ಟಾರ್’ ಕುರಾನಿನ ಅಪಮಾನವು ಕೇವಲ ಕಟ್ಟುಕತೆ. ಇದು ಪೂರ್ವನಿಯೋಜಿತ ಹಿಂಸೆಯನ್ನು ಸಾಬೀತುಪಡಿಸುತ್ತದೆ ಎಂದಿದೆ. ೨೦೦೧ ರ ಚುನಾವಣೆಯ ನಂತರದ ದಿನಗಳಲ್ಲಿ ಬಾಂಗ್ಲಾದಲ್ಲಿ ಹಿಂಸೆಗೆ ಸಾವಿರಾರು ಜನ ಸತ್ತಿದ್ದಾರೆ. ಮಹಿಳೆಯರ ಅತ್ಯಾಚಾರ ನಡೆಯುತ್ತಿದೆ. ಪೀಡಿತ ಪರಿವಾರಕ್ಕೆ ನ್ಯಾಯವೂ ಸಿಗುತ್ತಿಲ್ಲ ಎಂಬ ಮಾತುಗಳನ್ನೂ ಬರೆದಿರುವುದು ಬಾಂಗ್ಲಾದೇಶದ ಈಗಿನ ಕರಾಳ ಸ್ಥಿತಿ ಹೇಳುತ್ತದೆ.