ವಯಸ್ಕರ ಆಟ ಸ್ಕ್ವಿಡ್‌ ಗೇಮ್
ಪ್ರಚಲಿತ
ಸ್ಫೂರ್ತಿ ರಾವ್ ಎಸ್.ಕೋಡಿ
ಸ್ಕಿಡ್ ಗೇಮ್ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ದಕ್ಷಿಣ ಕೊರಿಯಾದ ವೆಬ್ ಸೀರಿಸ್. ಹೆಚ್ಚಾಗಿ ದಕ್ಷಿಣ ಕೊರಿಯಾದ ಶೋಗಳು ಕೆ.ಡ್ರಾಮಗಳೆಂದೇ ಪ್ರಖ್ಯಾತಿ ಪಡೆದುಕೊಂಡಿದೆ.
ಈ ಸ್ಕ್ವಿಡ್ ಗೇಮ್ ಸೀರಿಸ್ 2021ರ ಸೆಪ್ಟಂಬರ್ 27ರಂದು ನೆಟ್‌ಫ್ಲಿಕ್ಸ್‌ನಲ್ಲಿ ವಿಶ್ವಾದ್ಯಂತ ಬಿಡುಗಡೆಗೊಂಡಿದೆ. ಒಟ್ಟು 9 ಸಂಚಿಕೆಯ ಸೀರಿಸ್ ಆಗಿದೆ. ಮೊದಲಿಗೆ ಈ ಸೀರಿಸ್ - ಗಳಲ್ಲಿ ಮಾತ್ರ ಪ್ರಸಿದ್ದಿ ಹೊಂದಿತ್ತು. ಅನಂತರ ನೆಟ್‌ಫ್ಲಿಕ್ಸ್ ಯುಸ್ ಈ ವರ್ಷ ಅತಿ ವೀಕ್ಷಣೆಗೊಂಡ ಸೀರಿಸ್‌ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ಕ್ವಿಡ್ ಗೇಮ್ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ, ಭಾರತವನ್ನು ಸೇರಿ ಸ್ಕ್ವಿಡ್ ಗೇಮ್ ಪ್ರಖ್ಯಾತಿ ವಿಶ್ವದೆಲ್ಲಡೆ ಮತ್ತಷ್ಟು ದ್ವಿಗುಣಗೊಂಡಿತ್ತು.
ಇಷ್ಟೊಂದು ಪ್ರಖ್ಯಾತಿ ಗೊಳ್ಳಲು ಕಾರಣವೇನೆಂದರೆ ಇದರ ವಿಭಿನ್ನವಾದ ಕಥೆ ಹೇಳುವ ಶೈಲಿ, ಕ್ಯಾಮರಾ ವರ್ಕ್, ಡೈರೆಕ್ಷನ್, ಸಿನಿಮಾಗ್ರಾಫಿ ಹಾಗೂ ಕಲಾವಿದರ ನಟನಾ ಶೈಲಿ. ಸ್ಕ್ವಿಡ್ ಗೇಮ್ ಸೀರಿಸ್ ಎಲ್ಲರ ವೀಕ್ಷಕರಿಗೆ ಅಲ್ಲ. ಪ್ರಾರಂಭದಿಂದಲೂ ಅಂತ್ಯದವರೂ ಸಂಪೂರ್ಣವಾಗಿ ರಕ್ತಪಾತದಿಂದ ಕೂಡಿದೆ. ಒಂದುವೇಳೆ ನೀವು ಸೂಕ್ಷ ಹೃದಯದವರಾಗಿದ್ದರೆ, ಇದನ್ನು ನೋಡದೆ ಇರುವುದು ಉತ್ತಮ. ಈ ಸೀರಿಸ್ ಒಂದು ಸ್ಪರ್ಧೆ ಯನ್ನು ಕೇಂದ್ರೀಕರಿಸುತ್ತದೆ, ಇದರಲ್ಲಿ 456 ಆಟಗಾ ರರು ಇದ್ದು, ಇವರು ಸಮಾಜ ವಿವಿಧ ಭಾಗಗಳಿಂದ ಆಯ್ಕೆಯಾದವರು. ಇವರೆಲ್ಲ ತಮ್ಮದೇ ಆದ ಆರ್ಥಿಕ ಕಾರಣಗಳಿಂದ ಇದರಲ್ಲಿ ಭಾಗವಹಿಸಿದ್ದಾರೆ. ಮಕ್ಕಳ ಆಟದಂತೆ ಕಂಡರು ಇದು ಅತ್ಯಂತ ಅಪಾಯದಿಂದ ಕೂಡಿದೆ. ಈ ಆಟದಲ್ಲಿ ಗೆದ್ದವರಿಗೆ 45.6 ಬಿಲಿಯನ್ ಡಾಲರ್ ಬಹುಮಾನವನ್ನು ಗೆಲ್ಲುವ ಅವಕಾಶ ಇದೆ.
ಭಾರತದ ಸುಮಾರು 2000 ಕೋಟಿಯಷ್ಟು (2,82,76, 29,900.00) ಹಣಕ್ಕೆ ಸಮ. ಆದರೆ ಸೋತವರು ತಮ್ಮ ಪ್ರಾಣದ ಮೂಲಕ ಬೆಲೆ ತೆರೆಬೇಕು. ಆಟಗಾರರು ಆರು ದಿನಗಳ ಕಾಲ ಆರು ಆಟವನ್ನು ಆಡಬೇಕು. ಆಟಗಾರರು ತಮ್ಮ ಪ್ರಾಣವನ್ನು ಒತ್ತೇ ಇಟ್ಟು ಗೆಲ್ಲುವ ಆಟ; ಒಂದು ವೇಳೆ ಸೋತರೆ ಅವರ ಪ್ರಾಣ ಅಲ್ಲಿಯೇ ಹೋಗುತ್ತದೆ. ಮೊದಲನೇ ಆಟ ‘ರೆಡ್ ಲೈಟ್, ಗ್ರೀನ್ ಲೈಟ’ ಇಲ್ಲಿ ಸೋತವರಿಗೆ ಗುಂಡು ಹಾರಿಸಿ ಸಾಯಿಸುತ್ತಾರೆ.
ಮೊದಲ ಆಟದ ಬಹುತೇಕ ಆಟಗಾರರು ತಮ್ಮ ಪ್ರಾಣ ಕಳೆದು ಕೊಳ್ಳುತ್ತಾರೆ. ಇದರಿಂದ ಭಯ ಭೀತರಾದ ಉಳಿದ ಆಟಗಾರರು ಮರಳಿ ಮನೆಗೆ ತೆರೆಳಲು ಇಚ್ಛಿಸುತ್ತಾರೆ. ಆಟದ ಒಪ್ಪಂದಂತೆ ಹೆಚ್ಚಿನ ಜನರು ಆಟವನ್ನು ಅರ್ಧಕ್ಕೆ ನಿಲ್ಲಿಸಲು ಬಯಸಿದರೆ; ಆಟವನ್ನು ನಿಲ್ಲಿಸಬಹುದು. ಅದರಂತೆ ಹೆಚ್ಚು ಮಂದಿ ಆಟವನ್ನು ನಿಲ್ಲಿಸಿದರು. ಆಟಗಾರರು ತಮ್ಮ ಮನೆಗೆ ಮರಳಿದರು ಕೂಡ. ವಿಪರ್ಯಾಸವೆಂದರೆ; ಆಟವನ್ನು ಪುನರಾಂಭಿಸಿದಾಗ ಹೆಚ್ಚಿನ ಆಟಗಾರರು ಮತ್ತೆ ಆಟಕ್ಕೆ ಮರಳಿದರು.
ಆರನೇ ದಿನದ ಹಾಗೂ ಕೊನೆಯ ಆಟವೇ ‘ಸ್ಕ್ವಿಡ್ ಗೇಮ’ ಸೀರಿಸ್‌ನ ಶೀರ್ಷಿಕೆ ಕೂಡ ಹೌದು. ಇಲ್ಲಿ ಕೊನೆಯ ತನಕ ಇದ್ದು; ಆಟವನ್ನು ಗೆಲ್ಲುವವರು ದೊಡ್ಡ ಮೊತ್ತದ ಹಣವನ್ನು ತಮ್ಮ ಮನೆಗೆ ತೆಗೆದು ಕೊಂಡು ಹೋಗುತ್ತಾರೆ. ಅದರೆ ಅದು ಸುಲಭದ ಮಾತಲ್ಲ. ಆಟವನ್ನು ಗೆಲ್ಲಲೇ ಬೇಕನ್ನುವ ಆಟಗಾರರ ಹಠ, ಹುಮ್ಮಸ್ಸು, ಆಟಗಾರರ ಅಸಹಾಯಕತೆ, ದ್ರೋಹ, ಸ್ನೇಹ, ತ್ಯಾಗ, ಮಾನವೀಯ ತೆಯ ಬಗ್ಗೆ ಪ್ರಶ್ನಿಸುವ ಸನ್ನಿವೇಶ! ಇತ್ಯಾದಿ. ಹೀಗೆ ಹಲವು ಭಾವನೆಗಳ ಸಂಗಮವಾಗಿದೆ ಈ ಸೀರಿಸ್. ಇದರ ನಿರ್ದೇಶಕ ಆದ ಹ್ವಾಂಗ್ ಡಾಂಗ್-ಹ್ಯೂಕ್ ( -) ತಮ್ಮ ಜೀವನದಲ್ಲಿ ಎದುರಿಸಿದ, ಹಾಗೂ ಅನುಭವವಿಸಿದ ಆರ್ಥಿಕ ಕಷ್ಟಗಳು ಮತ್ತು ದಕ್ಷಿಣ ಕೊರಿಯಾದೊಳಗಿನ ವರ್ಗ ಅಸಮಾನತೆಯ ಎಳೆಯನ್ನು ಹಿಡಿದುಕೊಂಡು ಈ ಸೀರಿಸ್ ಅನ್ನು ತಯಾರಿಸಿ ದ್ದಾರೆ.
ಈ ಕಥೆಯು 2008ರಲ್ಲಿ ಸಿದ್ದಗೊಂಡಿತ್ತು, ಆದರೆ ಅದಕ್ಕೆ ಸರಿಯಾದ ವೇದಿಕೆ ಸಿಕ್ಕಿರಲಿಲ್ಲ. ನೆಟ್‌ಫ್ಲಿಕ್ಸ್ ಮನರಂಜನಾ ಸಾಮ್ರಾಜ್ಯವನ್ನು ವಿದೇಶಗಳಲ್ಲಿ ವಿಸ್ತರಿ ಸಲು ಸಿದ್ಧವಾಯಿತು. ಆ ಸಂದರ್ಭದಲ್ಲಿ ಈ ಕಥೆಯ ಮೇಲೆ ಆಸಕ್ತಿ ಮೂಡಿ ತಮ್ಮ ವೇದಿಕೆಯ ಮೂಲಕ ಬಿಡುಗಡೆ ಗೊಳಿಸಲು ನಿರ್ಧಾರ ಮಾಡಿತು. ವಿಶ್ವಾದ್ಯಂತ ಸ್ಕ್ವಿಡ್ ಗೇಮ್ ಸೀರಿಸ್‌ನಲ್ಲಿ ನಟಿಸಿದವರಿಗೆ ಮತ್ತು ಅದರ ತಯಾರಕರಿಗೆ ಪ್ರಶಂಸೆ ಹಾಗೂ ಅಭಿನಂದನೆಗಳ ಸುರಿಮಳೆ ಬರುತ್ತಿದೆ.