ಪರಿಸರ ಸ್ನೇಹಿ ಕಟ್ಟಡಗಳು
ಅಭಿಮತ
ಸಂದೀಪ್ ಶರ್ಮಾ
.@.
ಈ ಭೂಮಿ ಸುಂದರ ನಗರಿ ನಿಜವಾಗಿಯೂ ಇಂತಹ ಸೌಂದರ್ಯದ ಗೂಡನ್ನು ಸಂರಕ್ಷಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಮುಂದಿನ ಪೀಳಿಗೆಗಾಗಿ ಇರುವ ಒಂದೇ ಭೂಮಿಯನ್ನು ಜತನದಿಂದ ಕಾಪಿಡುವುದರಲ್ಲಿ ನಮ್ಮ ಜೀವವ ಸಾರ್ಥಕಗೊಳಿಸಬಹುದು.
ಹೀಗೆ, ಭಾರತದ ಹಲವು ರಾಜಧಾನಿ ನಿವಾಸಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮದ ಕ್ರಾಂತಿಯಿಂದ ಕಂಡ ಹಲವು ಏಳಿಗೆಗಳಲ್ಲಿ ಸ್ಥಿರಾಸ್ತಿಯ ಏರಿಕೆಯನ್ನು ಗಮನಿಸಬಹುದು. ಖಾಲಿ ನಿವೇಶನಗಳು, ಕಟ್ಟಿದ ಮನೆಗಳು, ಬಹುಮಹಡಿ ಮನೆಗಳು, ಗಗನಚುಂಬಿ ಕಟ್ಟಡಗಳು ನಂಬಲು ಅಸಾಧ್ಯ ವಾದಂತಹ ಬೆಲೆಗಳಿಗೆ ಮಾರಾಟವಾಗುತ್ತಿರುವುದು ಗೊತ್ತಿರುವ ಸಂಗತಿಯೆ. ಕಳೆದ 12 ರಿಂದ 14 ವರುಷ ಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೊದಲಿನ ಪರಿಸರವು ಕಳಾಹೀನವಾಗಿ ಕ್ಷೀಣಿಸುತ್ತಿದೆ. ಜನಸಂಖ್ಯಾಸ್ಫೋಟ, ಪರಿಸರ ಮಾಲಿನ್ಯದಂತಹ ಕೊಡುಗೆಗಳ ಜತೆಗೆ ಸಾಂಪ್ರದಾಯಿಕ ಕಟ್ಟಡಗಳ ನಿರ್ಮಾಣಗೊಳ್ಳುವಿಕೆಯಲ್ಲಿ ಬಳಸುವ ಸಾಮಗ್ರಿಗಳು ಕೂಡ ಬಹಳಷ್ಟು ಪ್ರಭಾವ ಬೀರಿ ಪರಿಸರವನ್ನು ಹಾಳುಮಾಡುತ್ತಿವೆ.
ಪರಿಸರ ಸ್ನೇಹಿ ಕಟ್ಟಡಗಳೆಂದರೇನು? ಸಾಂಪ್ರದಾಯಿಕ ಕಟ್ಟಡಗಳಿಗೆ ಬಳಸುವ ವಿಷಕಾರಕ ಅಂಶಗಳುಳ್ಳ ಬಣ್ಣ, ರಾಸಾಯನಿಕವನ್ನೊಳಗೊಂಡ ಲೇಪಗಳು, ಕಾಂಕ್ರೀಟ್.. ಇವೇ ಮುಂತಾದ ವಸ್ತುಗಳನ್ನು ಬಳಸದೆ ಪರ್ಯಾಯ ಸಾಮಗ್ರಿಗಳನ್ನು ಬಳಸಿ ಪರಿಸರವನ್ನು ಸಂರಕ್ಷಿಸುವ ಸಲುವಾಗಿ ಕಟ್ಟಡ ನಿರ್ಮಾಣಗೊಳ್ಳು ವಿಕೆಯೇ ಪರಿಸರ ಸ್ನೇಹಿ ಕಟ್ಟಡಗಳು. ಹಲವು ರೂಪಗಳಲ್ಲಿ ನಾವು ವಸ್ತುಗಳನ್ನು ಉಪಯೋಗಿಸಬಹುದು ಉದಾಹರಣೆಗೆ ಸೌರ ಶಕ್ತಿಯಿಂದ ಬಿಸಿನೀರೂಟೆ (), ಸೌರ ಶಕ್ತಿಯ ಬೆಳಕು, ಸಾಂಪ್ರದಾಯಿಕ ಡಾಂಬರೀಕರಣಗೊಂಡ ರಸ್ತೆಗಳ ಬದಲಾಗಿ ಮಳೆ ನೀರಿನ ಕೊಯ್ಲಿಗಾಗಿ ಹಾಗೂ ಅಂತರ್ಜಲ ಸಂರಕ್ಷಣೆ ಗಾಗಿ ಪ್ರವೇಶ ಸಾಧ್ಯ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸ ಬಹುದು.
ಕೆಲಸಕ್ಕೆ ಬಾರದ ಮರದ ತುಂಡುಗಳನ್ನು, ಮರುಬಳಕೆ ಸಾಧ್ಯತೆಯುಳ್ಳ ಬಿದಿರು, ಕವಚ ಮಾದರಿಯ ಕಾಂಕ್ರೀಟ್ ಪರಿಜು ಹೀಗೆ ಹಲವು ವಸ್ತುಗಳನ್ನು ಪರಿಸರಸ್ನೇಹಿ ಸಾಮಗ್ರಿಗಳಾಗಿ ಉಪಯೋಗಿಸಬಹುದು. ಉತ್ತರ ಬ್ರಿಟಿಷ್ ದೇಶದಲ್ಲಿ ಮಳೆ ನೀರಿನ ಕೊಯ್ಲಿಗಾಗಿ ಹೊಸ ಪ್ರಯೋಗವನ್ನು ಅತ್ಯಂತ ಸಫಲತೆಯಿಂದ ಉಪಯೋಗಿಸುತ್ತಿದ್ದಾರೆ. ತಾಳಬಲ್ಲ ನಾಲೆ ಅಥವಾ ಸಸ್ಟೇನಬಲ್ ನಾಲೆ ವ್ಯವಸ್ಥೆಯು ನಗರದಾದ್ಯಂತ ಮುಖ್ಯರಸ್ತೆಗಳಲ್ಲಿ, ಹೆದ್ದಾರಿಗಳಲ್ಲಿ ಉಪಯೋಗಿ ಸುತ್ತಿದ್ದಾರೆ.
ಮಳೆ ನೀರನ್ನು ಸಂಗ್ರಹಿಸಿ ದಿನ ನಿತ್ಯ ಬಳಕೆಗಾಗಿ ಶೌಚಾಲಯ, ಇನ್ನಿತರ ಕೆಲಸಗಳಿಗೆ ಉಪಯುಕ್ತವಾಗಿ ಬಳಸುತ್ತಿದ್ದಾರೆ. ಅಲ್ಲಿ ಪ್ರಕೃತಿ ವಿಕೋಪದಿಂದಾಗುವ ಪ್ರವಾಹವಾಗುವುದು ಸರ್ವೆ ಸಾಮಾನ್ಯ, ಪ್ರವಾಹದ ನೀರು ತಾಳಬಲ್ಲ ನಾಲೆಯ ಕೊಳದಲ್ಲಿ ಸಂರಕ್ಷಣೆಗೊಂಡು ಬೇಸಿಗೆಯ ಸಮಯದಲ್ಲಿ ಜನರಿಗೆ ಸರ್ವ ವಿಧ ದಲ್ಲಿ ಉಪಯೋಗವಾಗುತ್ತಿದೆ. ಅಲ್ಲಿನ ಸರಕಾರವು ಇಂತಹ ಕಾಳಜಿಗೆ ಪ್ರೋತ್ಸಾಹಿಸುತ್ತದೆ. ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಕುರಿತಂತೆ ನಾವು ನಿರಂತರ ಹೊಸ ಬದಲಾವಣೆಗೆ ತೆರೆದುಕೊಂಡಷ್ಟು ಪರಿಸರಕ್ಕೆ ಕೊಡಬಹುದಾದಂತಹ ಅಲ್ಪ ಕಾಣಿಕೆಯೆಂದರೆ ತಪ್ಪಾಗಲಾರದು.
ಇಂತಹ ಉಪಯುಕ್ತ ನಿರ್ಮಾಣಗಳನ್ನು ಸಾರಾಸಗಟಾಗಿ ತಳ್ಳಿಹಾಕಿಬಿಡುತ್ತಾರೆ. ಪರಿಸರ ಸ್ನೇಹಿ ಕಟ್ಟಡ ನಿರ್ಮಾಣವು ಸಾಂಪ್ರದಾಯಿಕ ಕಟ್ಟಡ ನಿರ್ಮಾಣದ ವೆಚ್ಚಕ್ಕಿಂತಲೂ ದುಬಾರಿ ಇರಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ಹಾಗೂ ಪರಿಸರ ಕಾಳಜಿ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಾಗುತ್ತದೆ. ಭವಿಷ್ಯ ದಲ್ಲಿ ನಮ್ಮ ನಗರಗಳ ಹಾಗೂ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ನಾವು ಈ ಬದಲಾವಣೆಯನ್ನು ಸ್ವೀಕರಿಸಬೇಕಿದೆ.
40 ರಿಂದ 50 ವರ್ಷಗಳ ಹಿಂದೆ ಇದ್ದ ಅಂತರ್ಜಲದ ಮಟ್ಟದ ಪ್ರಮಾಣಕ್ಕೂ ಈಗ ದೊರೆಯುವ ಮಟ್ಟದ ಪ್ರಮಾಣಕ್ಕೂ ತಾಳೆ ಹಾಕಿ ನೋಡಿದರೆ ನಿಜಕ್ಕೂ ನಮ್ಮ ಸ್ವಾರ್ಥದ ಒಡಲು ಹೇಗೆ ತುಂಬಿರಬಹುದು ಎಂಬುದು ಕಠೋರದ ಸಂಗತಿಯೇ ಸರಿ. ನಾವು ಕಟ್ಟಡ ನಿರ್ಮಾಣಕ್ಕೆ ಬಳಸುವ ಪ್ರತಿಯೊಂದು ವಸ್ತು ಕೂಡಭೂಮಿಯ ಒಡಲಿನಿಂದ ತೆಗೆದದ್ದು. ಇಂಥ ಅನೇಕ ಅಂಶಗಳನ್ನು ಅರಿತುಕೊಳ್ಳುವುದೇ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣದ ಹಿಂದಿರುವ ಉದ್ದೇಶವಾಗಿದೆ. ಈ ಎಲ್ಲ ಹೊಸ ಬದಲಾವಣೆಗೆ ಸಾಂಕ ಪ್ರಯತ್ನ ಮಾಡಬೇಕಾಗುತ್ತದೆ. ನಮ್ಮ ಇಂದಿನ ನಗರಗಳ ತುರ್ತು ಅಗತ್ಯಗಳನ್ನು ಮನಗಂಡು ಕೇವಲ ಕಟ್ಟಡ ನಿರ್ಮಾಣ ಉದ್ದಿಮೆ ಮಾತ್ರವೇ ಮಾಡಬೇಕಾದ ಕೆಲಸ ಇದಲ್ಲ. ಸರಕಾರ ಕೂಡ ಈ ದಿಸೆಯಲ್ಲಿ ಜಾಗೃತವಾಗಬೇಕು. ನಿರ್ಮಾಣಗಾರರು ಸಹಕರಿಸಬೇಕು.