ಒಳ್ಳೆಯ ಮಾತುಗಾರರಾಗೋದು ಹೇಗೆ ?
ತನ್ನಿಮಿತ್ತ
ಡಾ.ಕೆ.ಪಿ.ಪುತ್ತೂರಾಯ
@..
ಮನುಷ್ಯ ಸಂಘಜೀವಿ, ಸಮಾಜ ಜೀವಿ. ಅಂದ ಮೇಲೆ, ಹಾಳು ಹರಟೆಯಿಂದ ಹಿಡಿದು ಗಂಭೀರ ಚರ್ಚೆಗಳವರೆಗೆ ಪರಸ್ಪರ ಮಾತುಕತೆಗಳು, ಜನ ಜೀವನದ ಅನಿವಾರ್ಯ ಹಾಗೂ ಅವಿಭಾಜ್ಯ ಅಂಶ. ನಾವು ದಿನನಿತ್ಯ ಹಲವರ ಜತೆ ಮಾತನಾಡುತ್ತಿರುತ್ತೇವೆ; ಅಂತೆಯೇ ಇತರರೂ ನಮ್ಮ ಜತೆ ಮಾತನಾಡುತ್ತಿರುತ್ತಾರೆ. ಆದರೆ ಎಷ್ಟೋ ಮಾತುಕತೆಗಳು ದ್ವಿಮುಖಿಯಾಗಿರದೆ ಏಕಮುಖಿಯಾಗಿರುತ್ತವೆ; ಇಲ್ಲವೇ ಅಸಮರ್ಪಕವಾಗಿರುತ್ತವೆ.
ಪರಿಣಾಮವಾಗಿ ಯಶಸ್ವಿಯಾಗದೆ ಫಲಪ್ರದವಾಗದೆ ಬಿದ್ದು ಹೋಗುತ್ತವೆ. ಕಾರಣ ಕೆಲವರು ಹೇಳಬೇಕೆಂದಿ ರೋದು ಒಂದು, ಆದರೆ ಹೇಳೋದು ಇನ್ನೊಂದೇ. ಕೇಳಿಸಿಕೊಂಡವರು ಕೇಳಿದ್ದನ್ನು ಅರ್ಥೈಸಿಕೊಳ್ಳೋದು ಮಗದೊಂದೇ. ಇದನ್ನೇ ಸಂವಹನದ ಕೊರತೆ ಎನ್ನಲಾಗುತ್ತದೆ. ಇಲ್ಲವೇ ವೈಫಲ್ಯದಿಂದಾಗಿ ಎಷ್ಟೋ ಸಂಬಂಧ- ಸಂಪರ್ಕಗಳು, ವ್ಯಾಪಾರ ವಹಿವಾಟುಗಳು, ಕೆಲಸ ಕಾರ್ಯಗಳು ಕೆಟ್ಟು ಹೋಗೋದನ್ನ ನಾವು ದಿನನಿತ್ಯ ಕಾಣುತ್ತೇವೆ ಹಾಗೂ ಅನುಭವಿಸಿಯೂ ಇರುತ್ತೇವೆ. ‘ನನ್ನ ಮುದ್ದಿನ ಮಡದಿ’ ಎಂಬ ಕಾದಂಬರಿಯನ್ನು ಬರೆದ ಲೇಖಕನಿಗೆ ಓದುಗ ‘ನಿಮ್ಮ ಮುದ್ದಿನ ಮಡದಿ ಎಂಬ ಪುಸ್ತಕವನ್ನು ಕಳುಹಿಸಿಕೊಡಿ’ ಎಂದು ಹೇಳುವ ಬದಲು ‘ನಿಮ್ಮ ಮುದ್ದಿನ ಮಡದಿ’ಯನ್ನು ಕಳುಹಿಸಿಕೊಡಿ ಎಂದರೆ, ಅನರ್ಥಕ್ಕೆ ಕಾರಣವಾಗುತ್ತದೆ.
ಶಾಲಾ ಕಾಲೇಜುಗಳಲ್ಲಿ ನಿತ್ಯ ನಡೆಯುವ ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆಗಳಲ್ಲಿ ಕೂಡಾ ಉತ್ತಮ ಸಂವಹನ ಅತೀ ಅವಶ್ಯ. ಸಾಕಷ್ಟು ವಿಷಯ ಜ್ಞಾನ ಪಡೆದಿದ್ದರೂ ಅದನ್ನು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ರವಾನಿಸುವಲ್ಲಿ ಅಸಮರ್ಥರಾದ ಶಿಕ್ಷಕರಿಗೆ ನಮ್ಮಲ್ಲಿ ಕೊರತೆ ಇಲ್ಲ. ಅಂತೆಯೇ ಪಾಂಡಿತ್ಯವನ್ನು ಪಡೆಯದಿದ್ದರೂ, ಉತ್ತಮ ಮಾತುಗಾರಿಕೆಯಿಂದ ವಿದ್ಯಾರ್ಥಿಗಳನ್ನು ತಲುಪಬಲ್ಲ ಹೆಸರುವಾಸಿಯಾದ ಶಿಕ್ಷಕರನ್ನೂ ಕಾಣಬಲ್ಲೆವು. ಅದೆಷ್ಟೋ ಉಪದೇಶಗಳು, ಉಪನ್ಯಾಸಗಳು, ಪಾಠ ಪ್ರವಚನಗಳು, ಚರ್ಚೆ-ವಾದಗಳು ವಿಚಾರ ವಿನಿಮಯಗಳು, ವ್ಯವ ಹಾರ ವಹಿವಾಟುಗಳು, ಸೋಲಲು ಮುಖ್ಯ ಕಾರಣ, ಅಭಿವ್ಯಕ್ತಿಯ ಕೊರತೆ, ಸಂವಹನದ ಬಿಕ್ಕಟ್ಟು. ಅಂತಾ ರಾಷ್ಟೀಯ ಸಂಬಂಧಗಳನ್ನು ಸ್ಥಾಪಿಸುವಲ್ಲಿ, ಬೆಸೆಯುವಲ್ಲಿ, ಬೆಳೆಸುವಲ್ಲಿ, ರಾಷ್ಟ್ರನಾಯಕರು ನಡೆಸುವ ಮಾತು ಕತೆಗಳು ಅತೀ ದೊಡ್ಡ ಪಾತ್ರವನ್ನು ವಹಿಸು ತ್ತವೆ.
ಬಹುತೇಕ ಸಂದರ್ಭಗಳಲ್ಲಿ ಮಾತುಗಳ ಮೂಲಕ ಅವರವರ ಅನಿಸಿಕೆ-ಅಭಿಪ್ರಾಯಗಳಿಂದ ಹಿಡಿದು, ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರಗಳವರೆಗೆ ಸಂವ ಹನ ಪ್ರಕ್ರಿಯೆ ಪ್ರಮುಖ ಪಾತ್ರ ವನ್ನು ವಹಿಸುತ್ತದೆ. ಈ ಸಂವಹನ ಕೌಶಲ್ಯವನ್ನು    ಎಂದೂ, ವೈಫಲ್ಯತೆಯನ್ನು    ಎಂದೂ ಕರೆಯಲಾಗುವುದು. ಸಂವಹನ ಎಂದರೆ ಸಮ್ಯಕ್ ವಹನ ಅರ್ಥಾಥ್ ಒಬ್ಬರಿಂದ ಇನ್ನೊಬ್ಬರಿಗೆ ಇಲ್ಲವೇ ಒಂದೆಡೆಯಿಂದ ಇನ್ನೊಂದೆಡೆಗೆ, ಸುಸೂತ್ರವಾಗಿ, ಸಮರ್ಪಕವಾಗಿ, ತಲಪಿಸೋದು, ಸಾಗಿಸೋದು, ರವಾನಿಸೋದು ಎಂದರ್ಥ. ಈ ಚಲನಶೀಲ ಪ್ರಕ್ರಿಯೆಯೇ ವಾಹಿನಿ ವಾಹನ ಮುಂತಾದ ಪದಗಳಿಗೆ ಜನ್ಮ ನೀಡಿದ್ದು. ಸಂವಹನವೆಂಬುದು ಶಬ್ದಗಳನ್ನೊಳಗೊಂಡ ಮಾತುಗಳ ಮುಖೇನ (ಶಾಬ್ದಿಕ) ಇಲ್ಲವೇ ಶಬ್ದ ರಹಿತಸಂeಗಳ ಮೂಲಕ(ಅಶಾಬ್ದಿಕ) ಅಥವಾ ಮಾಧ್ಯಮಗಳ ಮೂಲಕ ನಡೆಯಬಹುದು.
ಆದರೆ ಬಹುತೇಕ ಸಂದರ್ಭಗಳಲ್ಲಿ ಸಂವಹನವೆಂದರೆ, ವ್ಯಕ್ತಿ ವ್ಯಕ್ತಿಯ ಇಲ್ಲವೇ ವ್ಯಕ್ತಿ-ವ್ಯಕ್ತಿಗಳ ನಡುವೆ ನಡೆಯುವ ಮಾತುಕತೆ, ಸಂಭಾಷಣೆ, ಇಲ್ಲವೇ ವಿಚಾರ ವಿನಿಮಯ, ಆಂಗ್ಲ ಭಾಷೆಯಲ್ಲಿ ಇದನ್ನೇ communicationಅಂತಾರೆ. ಲ್ಯಾಟಿನ್ ಭಾಷೆಯ ಕಮ್ಯೂನಿಸ್ ಎಂಬ ಪದದಿಂದ ಈ ಶಬ್ದದ ಜನನವಾಯಿತು.ಒಳ್ಳೆಯ ಸಂವಹನವೆಂದರೆ, ದ್ವಿಮುಖ ವಾದುದು. ಈ ಪ್ರಕ್ರಿಯೆಯಲ್ಲಿ ಹೇಳುವವನು ಮತ್ತು ಕೇಳುವವನು ಇವರಿಬ್ಬರೂ ಆಸಕ್ತರಾಗಿ, ಸಕ್ರಿಯವಾಗಿ ಭಾಗವಹಿಸ ಬೇಕು. ಉತ್ತಮ ಸಂವಹನದಲ್ಲಿ ಒಬ್ಬರು ಸೋಲಲೇ ಬೇಕೆಂದಿಲ್ಲ; ಇಲ್ಲವೇ ಒಬ್ಬರದು ಮೇಲುಗೈ ಆಗಲೇಬೇಕೆಂದಿಲ್ಲ.
ಹೇಳುವವರು ಮತ್ತು ಕೇಳುವವರಿಬ್ಬರೂ ತೃಪ್ತಿಪಟ್ಟು ಕೊಳ್ಳಬಹುದು. ಒಟ್ಟಿನಲ್ಲಿ ಹೇಳುವವ ಯಾವ ಅರ್ಥ ಉದ್ದೇಶದಿಂದ ಮಾತುಗಳನ್ನಾಡಿರುತ್ತಾನೋ ಅವೆಲ್ಲವೂ ತೃಪ್ತಿಕರವಾಗಿ ಕೇಳುಗ/ ಕೇಳುಗರಿಗೆ ರವಾನೆಯಾದರೆ ಅದನ್ನು ಯಶಸ್ವೀ ಮಾತುಕತೆಯೆಂದು ಕರೆಯಬಹುದು. ಸಂವಹನ ಪ್ರಕ್ರಿಯೆ ಫಲಕಾರಿ ಪರಿಣಾಮಕಾರಿಯಾಗಬೇಕಾದರೆ ಕೆಳಗೆ ನಮೂದಿಸಿದ ಕೆಲ ನೀತಿ ಅವಶ್ಯ.
ಉತ್ತಮ ಸಂವಹನ ಏರ್ಪಡುಹುದು ಹೇಳುಗ-ಕೇಳುಗರ ಮಾತುಕತೆಗೆ ಯೋಗ್ಯವಾದ ನಡುವೆ ಸಮಯ-ಸಂದರ್ಭ, ವಿಷಯ ವಿಚಾರಗಳಲ್ಲಿ ಸಮನ್ವಯ ಏರ್ಪಟ್ಟಾಗ ಮಾತ್ರ. ಇಲ್ಲವಾದರೆ ಗೊಂದಲಮಯವಾಗುತ್ತದೆ. ದೂರದರ್ಶನಗಳಲ್ಲಿ ವಿಧಾನಸಭೆ/ಪರಿಷತ್ತು ಇಲ್ಲವೇ ಸಂಸದಿನಲ್ಲಿ ನಡೆಯುವ ಬಹುತೇಕ ಚರ್ಚೆಗಳು ಪರಿಪಕ್ವ ಸಂವಹನ ಎನಿಸದೆ ಗದ್ದಲ-ಗೊಂದಲಗಳ ಬೀಡಾಗಿರುತ್ತದೆ.
ಹೀಗಾಗಲು ಬಹು ಮುಖ್ಯವಾಗಿ ಅಶಿಸ್ತು ಮತ್ತು ಬದ್ಧತೆಯ, ವಿಷಯದ ಕೊರತೆ. ಸಂವಹನದ ಅತಿ ಮುಖ್ಯ ಸಾಧನವೆಂದರೆ ಮಾತು. ಮಾತು ಬೇರೆ-ಮಾತು ಗಾರಿಕೆ ಬೇರೆ, ಈ ಹಿನ್ನೆಲೆಯಲ್ಲಿ ಹೇಳುವವರು ಹೇಳಬೇಕಾದುದನ್ನು ಮೊದಲೇ ಸ್ಪಷ್ಟವಾಗಿ ಗೊತ್ತು ಮಾಡಿಕೊಂಡಿರಬೇಕು. ಇದಕ್ಕೆ ಒಂದಿಷ್ಟು ಸಿದ್ಧತೆ, ಪೂರ್ವ ತಯಾರಿಯೂ ಅವಶ್ಯ. ಏನೂ ತಯಾರಿ ಇಲ್ಲದೆ ನಡೆಸುವ ಸಂವಹನ ಯಶಸ್ವಿಯಾಗದು ಹಾಗೂ ಕುತೂಹಲಕಾರಿಯಾಗಿರದು.
ಹೇಳುವವರ ಮಾತುಗಳೆಲ್ಲವೂಅಽಕೃತವಾಗಿರಬೇಕು; ಅದು ಅಂಕಿ ಅಂಶಗಳಿರಬಹುದು; ಮಾಹಿತಿಗಳಿರಬಹುದು. ತಪ್ಪು ಮಾಹಿತಿಗಳನ್ನಂತೂ ಎಂದೂ ನೀಡಬಾರದು. ಸಂವಹನ ನಡೆಸುವ ಸ್ಥಳ ಪ್ರಶಸ್ತವಾಗಿರಬೇಕು. ಗಲಾಟೆ-ಗದ್ದಲ-ಗೊಂದಲವಿದ್ದ ವಾತಾವರಣಲ್ಲಿ ಇಲ್ಲವೇ ಜನನಿಬಿಡ ಪ್ರದೇಶಗಳಲ್ಲಿ ಉತ್ತಮಸಂವಹನವೇರ್ಪಡದು. ನಿಶ್ಯಬ್ಧ ವಾತಾವರಣ ಅನುಕೂಲ.
ಅಂತೆಯೇ ಸಂವಹನ ನಡೆಸುವ ಸಮಯವೂ ಪ್ರಶಸ್ತವಾಗಿರಬೇಕು. ಉದ್ರಿಕ್ತ ವಾತಾವರಣದಲ್ಲಿ ಇಲ್ಲವೇ ಉದ್ದಿಗ್ನ ಮನೋಸ್ಥಿತಿಯಲ್ಲಿ ಸಂವಹನವನ್ನು ಕೈಗೊಳ್ಳ ಬಾರದು. ಸುಶ್ರಾವ್ಯ ಸಂಗೀತ, ಮನಮೋಹಿಸುವ ನೃತ್ಯ, ಒಳ್ಳೆಯ ನಾಟಕವನ್ನು ಆಸ್ವಾದಿಸುವ ವೇಳೆ, ಮಧ್ಯೆ ಮಾತುಕತೆ ಸಲ್ಲದು. ಉತ್ತಮ ಸಂವಹನ ವೇರ್ಪಟಲು ಮನಸ್ಸು ತಿಳಿಯಾಗಿರಲಿ, ಶಾಂತವಾಗಿರಲಿ ಹಾಗೂ ಪೂರ್ವ ಕಲ್ಪಿತ ಅಭಿಪ್ರಾಯಗಳಿಂದ ಮುಕ್ತವಾಗಿರಲಿ.
‘   ,   ;   ,    ’& – ಎಂಬ ಮಾತಿನಂತೆ, ನಾವು ಏನನ್ನು ಹೇಳುತ್ತೇವೆ ಅನ್ನೋದರ ಜತೆ ಹೇಗೆ ಹೇಳುತ್ತೇವೆ ಅನ್ನೋದೂ ಕೂಡಾ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮಾತುಗಳು ನಯವಾಗಿರಲಿ, ಮೃದು ಮಧುರವಾಗಿರಲಿ. ಕಟುವಾಗಿರದಿರಲಿ, ಕರ್ಕಶವಾಗಿರದಿರಲಿ. ‘ಕಟುವಾಗಿ ಮಾತನಾಡುವವ ಜೇನುತುಪ್ಪವನ್ನೂ ಮಾರಾಟ ಮಾಡಲಾರ; ನಯವಾಗಿ ಮಾತ ನಾಡುವವ ಕಹಿಬೇವಿನ ಸೊಪ್ಪನ್ನೂ ಸುಲಭವಾಗಿ ಮಾರಾಟ ಮಾಡಬಲ್ಲ’- ಎಂಬ ಮಾತಿನಲ್ಲಿ ಇದೇ ಸತ್ಯವಿದೆ.
ಇದನ್ನೇ ‘ಮೃದು ಮಾತು ಮೂಲೋಕ ಗೆಲ್ಲುವುದು’ ಎಂಬ ಕವಿ ಚನ್ನವೀರ ಕಣವಿಯವರು ತಿಳಿಸಿದರು. ಅಂತೆಯೇ ಮಾತುಗಳು ನೇರವಾಗಿರಬೇಕು; ಸುತ್ತಿ ಬಳಸಿ ಮಾತನಾಡುವ ಪರಿ ಬೇಡ. ನುಡಿಗಳು ಸ್ಪಷ್ಟವಾಗಿರಲಿ. ಹೀಗಾಗಲು ಸ್ಪಷ್ಟ ಉಚ್ಛಾರ, ಸೂಕ್ತ ಸ್ವರಭಾರ, ಹಿತಮಿತವಾದ ದನಿಯ ಏರಿಳಿತಗಳು ಸಹಕಾರಿ. ಮಾತಿನಲ್ಲಿ ಅತಿಯಾದ ವೇಗವೂ ಬೇಡ; ಮಂದಗತಿಯೂ ಬೇಡ; ವಾಕ್ಯದ ಕೊನೆಯಲ್ಲಿ ಪದಗಳನ್ನು ನುಂಗುವುದಾಗಲೀ ತೇಲಿಸುವುದಾಗಲಿ ತರವಲ್ಲ. ವಾಕ್ಯರಚನೆ ವ್ಯಾಕರಣ ಬದ್ಧವಾಗಿರಬೇಕು.
ಅಂತೆಯೇ ನಾವು ಬಳಸುವ ಭಾಷೆ ಶುದ್ಧವಾಗಿರಬೇಕು. ಆವಾಚ್ಯ, ಅಶ್ಲೀಲ ಶಬ್ದಗಳ ಪ್ರಯೋಗ ವರ್ಜ್ಯ. ವಿಚಿತ್ರ ಶಬ್ಧೋಚ್ಚಾರ, ಅಸಹ್ಯ ಆಂಗಿಕ ಚೇಷ್ಠೆಗಳು ಕೂಡಾ ನಿಷಿದ್ಧ. ನಮ್ಮ ಹಾವಭಾವಗಳು ಆಕರ್ಷಕವಾಗಿರಲಿ. ಕೆಲವರು ಹೇಳಬೇಕಾದುದನ್ನು ಅವಶ್ಯಕತೆಗಿಂತ ಕೊಂಚ ಜಾಸ್ತಿಯೇ ಹೇಳಿಬಿಡುತ್ತಾರೆ! ಇನ್ನುಕೆಲವರು ಕಡಿಮೆ ಇಲ್ಲವೇ ಇನ್ನೆನೋ ಹೇಳಿಬಿಡುತ್ತಾರೆ. ಯಾವುದೂ ಸರಿಯಲ್ಲ. ಹೇಳಲೇಬೇಕಾದುದನ್ನು ಅವಶ್ಯವಾಗಿ, ಸಂಕ್ಷಿಪ್ತವಾಗಿ ಹೇಳಿಯೇ ಬಿಡಬೇಕು. ಇಲ್ಲವಾದರೆ ಹೇಳಬೇಕಾದುದು ಕೆಳುಗರಿಗೆ ಸಂಪೂರ್ಣವಾಗಿ ರವಾನೆ ಯಾಗದು.
ಉತ್ತಮ ಸಂವಹನಕಾರನಿಗೆ ಇರಬೇಕಾದ ಇನ್ನೊಂದು ಗುಣಲಕ್ಷಣವೆಂದರೆ, ಆತ್ಮವಿಶ್ವಾಸ, ಹಾಗೆಂದು ಪ್ರತೀ ಸಲ ಸರಿ, ತಾನೆ ಗೆಲ್ಲಬೇಕೆಂಬ ಹಠವೂ ತರವಲ್ಲ. ಸಂವಹನ ಪ್ರಕ್ರಿಯೆಯಲ್ಲಿ ಅಭಿಪ್ರಾಯ ಭೇಧಗಳು ಸರ್ವೇ ಸಾಮಾನ್ಯ. ಇದನ್ನು ಎಲ್ಲರೂ ಗೌರವಿಸಬೇಕು. ಈ ನಿಟ್ಟಿನಲ್ಲಿ ಇತರರ ಮಾತುಗಳನ್ನು   ಮಾಡಬಾ ರದು. ಅವರಿಗೂ ಮಾತನಾಡುವ ಅವಕಾಶವನ್ನು ಅವಶ್ಯ ನೀಡಬೇಕು. ಕೆಲವರಿಗೆ, ತಾವು ಹೇಳಿದ್ದನ್ನೆಲ್ಲಾ ಪ್ರಶ್ನಿಸದೆ ಮರುಮಾತಿಲ್ಲದೆ, ಒಪ್ಪಿಕೊಂಡು,ಕೇಳಿಸಿಕೊಳ್ಳುವ ಕೇಳುಗರು ಬಲು ಪ್ರಿಯರಾಗುತ್ತಾರೆ. ತಾವು ಹೇಳಿದ್ದಕ್ಕೆ ಪ್ರತಿಕ್ರಿಯಿಸುವರು ಅಷ್ಟು ಇಷ್ಟವಾಗೋದಿಲ್ಲ. ಆದರೆ, ಇದು ಪ್ರಭುದ್ಧತೆಯ ಲಕ್ಷಣವಲ್ಲ. ಈ ದೌರ್ಬಲ್ಯದಿಂದಲೇ ಜಗತ್ತಿನಲ್ಲಿ ಹೆಚ್ಚಿನವರು ಇತರರಿಂದ ಬಯಸೋದು ಹೇಳೋ ದನ್ನು ಕೇಳಿಸಿಕೊಳ್ಳುವ ಬರೇ ಕಿವಿಗಳನ್ನು ಮಾತ್ರ!
ಅದೇನೇ ಇರಲಿ, ಸಕಾರಾತ್ಮಕವಾದ ಪ್ರಶ್ನೋತ್ತರಗಳೇ ಯಶಸ್ವೀ ಸಂವಹನಕ್ಕೆ ಸಹಕಾರಿ. ಆದುದರಿಂದ ಹೇಳುವವನು ಹೇಳತ್ತಲೇ ಇರಬಾ ರದು. ಮಧ್ಯೆ ಕೇಳುಗರ ಮಾತನ್ನೂ ಕೇಳಿಸಿಕೊಳ್ಳಬೇಕು ಹಾಗೂ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಿರಬೇಕು. ಇಲ್ಲವಾದರೆ, ಅದು ಏಕಮುಖೀ ಮಾತುಗಳಾಗಿ ಸಂವಹನದಸ್ವಾರಸ್ಯವನ್ನು ಕಳೆದು ಕೊಂಡೀತು. ಈ ಹಿನ್ನೆಲೆಯಲ್ಲಿ ಹೇಳುಗರೂ ಆಗಾಗ ಕೇಳುಗರಾಗಬೇಕು; ಕೇಳುಗರು ಹೇಳುಗರಾಗಬೇಕು. ಅಂತೆಯೇ ಹೇಳುವವರು ತಮ್ಮ ಅಭಿಪ್ರಾಯ ಗಳನ್ನು ಕೇಳುಗರ ಮೇಲೆ ಹೇರಬಾರದು.
ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಬೇಕು. ಕೇಳುಗರ ಅಭಿಪ್ರಾಯ ಅನಿಸಿಕೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಎಲ್ಲರಿಗೂ ತಮ್ಮ ನಿಲುವನ್ನು ವ್ಯಕ್ತಪಡಿ ಸುವ ಮುಕ್ತ ಅವಕಾಶವಿರಬೇಕು. ಯಾರಲ್ಲೂ ಮೇಲರಿಮೆಯೂ ಬೇಡ, ಕೀಳರಿಮೆಯೂ ಬೇಡ. ಹಾಗೇನೇ ಹೇಳುವವರೂ ಹೇಳಿದ್ದನ್ನೇ ಮತ್ತೆ ಮತ್ತೇಹೇಳುತ್ತಲೇ ಇರಬಾರದು. ಹಾಗೂ ಏನಾದರೂ ಹೇಳಲೇ ಬೇಕಲ್ಲ ಎಂಬ ಕಾರಣಕ್ಕೆ ಹೇಳಬಾರದು. ಅದು ಉದ್ದೇಶಪೂರ್ವಕವಾಗಿರಬೇಕು. ಆದರೆ ಯಾವುದೇ ಸಂದರ್ಭದಲ್ಲಿ ಕೇಳುಗರಿಗೆ ಅವಮಾನವಾಗುವಂತಹ ಅವರ ಮನಸ್ಸನ್ನು ನೋಯಿಸುವಂತಹ ಇಲ್ಲವೇ ಅವರಿಗೆ ಮುಜುಗರ ತರಿಸುವಂತಹ ಮಾತುಗಳು ನಿಷಿದ್ಧ. ವೈಯಕ್ತಿಕ ವಿಚಾರಗಳನ್ನು ತರಲೇಬಾರದು.
* ಅತಿಯಾದ ಅನಾವಶ್ಯಕವಾದ ಭಾವೋದ್ವೇಗವೂ ಬೇಡ; ಅಂತೆಯೇ ದುಡುಕಿ ಹೇಳುವ, ಒಂದೇ ಉಸಿರಿಗೆ ಎಲ್ಲವನ್ನು ಹೇಳಿ ಮುಗಿಸುವ ತವಕವೂ ಬೇಡ. ಮಾತುಗಳು ಹರ್ಷದಾಯಕವಾಗಿರಲಿ, ಸ್ನೇಹಪರವಾಗಿರಲಿ.ಅಽಕಾರಶಾಹಿಯಾಗಿದ್ದಲ್ಲಿ ಅಂತಹ ಸಂವಹನ ಸಂತಸ ತರದು.* ಒಟ್ಟಿನಲ್ಲಿ ಒಳ್ಳೆಯ ಸಂವಹನವೇರ್ಪಡ ಬೇಕಾದರೆ ಕೇಳೋದು ಕಡಿಮೆಯಾಗಬಾರದು; ಹೇಳೋದು ಹೆಚ್ಚಾಗಬಾರದು. ಕೆಲವರಿರುತ್ತಾರೆ; ಅವರಿಗೆಇತರರನ್ನು ಕೇಳಿಸಿಕೊಳ್ಳುವ ಆಸಕ್ತಿಯಾಗಲೀ, ತಾಳ್ಮೆಯಾಗಲಿ, ವ್ಯವಧಾನವಾಗಲಿ ಇರೋದಿಲ್ಲ. ಬರೇ ತಮ್ಮ ಬಗ್ಗೆಯೇ ಯಾರೂ ಕೇಳದೇನೇ ಹೇಳುತ್ತಿರುತ್ತಾರೆ; ಅದೂ ತುಸು ಜಾಸ್ತೀನೇ ಹೇಳಿರುತ್ತಾರೆ.
ಇತರರನ್ನು ಕೇಳಿಸಿಕೊಳ್ಳಲೇ ಬೇಕಾದರೆ ನಾವು ಇತರರ ಮಾತನ್ನು ಕೇಳಿಸಿಕೊಳ್ಳಲೇ ಬೇಕಲ್ಲವೇ! ಇದು ಒಂದು ಸಭ್ಯತೆ ಸೌಜನ್ಯತೆಯೂ ಹೌದು. ನಾವೇಮಾತನಾಡೋದೆಂದರೆ ನಮಗೆ ಈಗಾಗಲೇ ಗೊತ್ತಿರುವ ವಿಚಾರವನ್ನು ನಾವು ಪುನಃ ಮತ್ತೊಮ್ಮೆ ನಮ್ಮ ಬಾಯಿಯಿಂದ ಹೇಳಿದಂತೆ. ಇತರರ ಮತುಗಳನ್ನು ಕೇಳಿಸಿಕೊಳ್ಳೋದೆಂದರೆ ನಮಗೆ ತಿಳಿ ಯದ ಅನೇಕ ವಿಚಾರ ಗೊತ್ತು ಮಾಡಿಕೊಂಡಂತೆ.
ಇತರರನ್ನೂ ಕೇಳಿಸಿಕೊಳ್ಳೋದರಿಂದ ಇನ್ನೊಂದು ಲಾಭವೆಂದರೆ ಹೇಳುವವರಿಗೂ ಒಂದಿಷ್ಟು ವಿಶ್ರಾಂತಿ ಲಭ್ಯವಾಗಿ, ಮುಂದೆ ಮಾತ ನಾಡಲೇಬೇಕಾದವಿಷಯದ ಬಗ್ಗೆ ಯೋಚಿಸಲು ಸಮಯಾವಕಾಶವೂ, ಮಾಹಿತಿಯೂ ಲಭ್ಯವಾಗುತ್ತದೆ. ಅಂತೆಯೇ ಸಂವಹನ ಪ್ರಕ್ರಿಯೆ ಪರಿಪೂರ್ಣವಾಗಬೇಕಾದರೆ ಕೇಳುವವರೂ, ಪ್ರಾಮಾಣಿಕವಾಗಿ ಎಲ್ಲವನ್ನೂ ಕೇಳಿಸಿಕೊಳ್ಳುವ ತೆರೆದ ಮನಸ್ಸಿನಿಂದ ಭಾಗವಹಿಸಬೇಕು. ಯಾವುದೇ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ಭಾಗವಹಿಸಿದ ಸಂವಹನ ಅಪೇಕ್ಷಿತ ಫಲಿತಾಂಶವನ್ನು ನೀಡದು.
ಕೇಳುಗರೂ ಏನಾದರೂ ಕೇಳಬೇಕಲ್ಲ; ಪ್ರಶ್ನಿಸಬೇಕಲ್ಲ ಎಂಬ ಕಾಟಾಚಾರದ ಕಾರಣಕ್ಕೆಂದು ಮಾತನಾಡಬಾರದು. ಇವರ ಮಾತುಗಳು ಧನಾತ್ಮಕ ವಾಗಿರಬೇಕು. ಹೇಳುಗ ಕೇಳುಗರಿಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡೋದರಿಂದ ಸಂವಹನ ಪ್ರಕ್ರಿಯೆಗೊಂದು ಕಳೆ ಬರುತ್ತದೆ. ಇವರಿಬ್ಬರೂ ಅನುಸರಿಸ ಬೇಕಾದ ಧೋರಣೆ ಎಂದರೆ ‘ಮಾತಿಗೆ ಮಾತು ಬೆಳೆಸಿದರೆ, ಎಲ್ಲವೂ ಕ್ಲಿಷ್ಟ; ಎಲ್ಲವೂ ನಷ್ಟ. ಬದಲಾಗಿ ಮಾತಿಗೆ ಮಾತು ಇಳಿಸಿದರೆ, ಎಲ್ಲವೂ ಸುಲಭ, ಎಲ್ಲವೂ ಸರಳ’.
ಸಂವಹನ ಎಷ್ಟು ಹೊತ್ತು ನಡೆಯಿತು ಅನ್ನೋದು ಮುಖ್ಯವಲ್ಲ! ಸಂವಹನ ಪ್ರಕ್ರಿಯೆಯಲ್ಲಿ ಏನೆಲ್ಲಾ ಎಷ್ಟೆಲ್ಲಾ ವಿಚಾರಗಳು ವಿನಿಮಯಗೊಂಡವು ಅನ್ನೋದು ಮುಖ್ಯ. ಒಟ್ಟಿನಲ್ಲಿ ಒಬ್ಬರು ಇನ್ನೊಬ್ಬರ ಬಗ್ಗೆ ಮಾತನಾಡೋದರ ಬದಲು ಒಬ್ಬರಿಗೊಬ್ಬರ ಆತ್ಮೀಯತೆಯಿಂದ ಮಾತನಾಡಿಗೊಂಡರೆ ಜಗತ್ತಿನ ಅರ್ಧದಷ್ಟು ಸಮಸ್ಯೆಗಳು ಬಗೆಹರಿದೀತು. ಹೀಗಾಗಲೂ ಒಳ್ಳೆಯ ಸಂವಹನ ಪ್ರಕ್ರಿಯೆಯೇ ಉಳಿದಿರುವ ಏಕೈಕ ದಾರಿ.