ಅನಿವಾಸಿಗಳಿಗೂ ಸಲ್ಲಲಿ ರಾಜ್ಯೋತ್ಸವ ಗೌರವ
ಪ್ರಚಲಿತ
ಎಚ್.ಕೆ.ಮಧು, ದೋಹಾ-ಕತಾರ್‌
ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸರಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಅನೇಕಾನೇಕ ಕ್ಷೇತ್ರಗಳಲ್ಲಿ ದುಡಿದು, ಸಾಧನೆಗೈದು, ಸಮಾಜದ ಒಳಿತಿಗಾಗಿ, ನಾಡಿಗೆ ಕೀರ್ತಿ ತಂದವರನ್ನು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ, ಆಯ್ಕೆ ಮಾಡಿ ಪ್ರಶಸಿ ಪ್ರದಾನ ಮಾಡುವುದು ಸಂಪ್ರದಾಯವಾಗಿದೆ.
ಈ ಪ್ರಶಸ್ತಿಯ ಪಟ್ಟಿಯಲ್ಲಿ, ಹೊರನಾಡ ಕನ್ನಡಿಗ ಎಂಬ ವಿಭಾಗವಿದೆ. ಹೊರನಾಡ ಕನ್ನಡಿಗ ವಿಭಾಗದಡಿಯಲ್ಲೇ ಅನಿವಾಸಿ ಭಾರತೀಯ ಕನ್ನಡಿಗ ಮತ್ತು ವಿದೇಶಿ ನೆಲ ದಲ್ಲಿನ ಕನ್ನಡ ಸಂಘ-ಸಂಸ್ಥೆಗಳಿಗೆ ಈ ಹಿಂದೆ ಪ್ರಶಸ್ತಿ ನೀಡಿರುವುದುಂಟು. ಹೊರನಾಡ ಕನ್ನಡಿಗ ಎಂದರೆ ಕರ್ನಾಟಕ (ಮೂಲರಾಜ್ಯ)ದಿಂದ ಹೊರಗಡೆ ಹೋಗಿ ನೆಲೆಸಿ ರುವ ಕನ್ನಡಿಗ ಎಂಬ ಅರ್ಥ. ವಿದೇಶದ ನೆಲದಲ್ಲಿರುವ ಕನ್ನಡಿಗ ಹೊರನಾಡ ಕನ್ನಡಿಗನೇ ಆದರೂ ಅವನು(ಳು) ಅನಿವಾಸಿ ಭಾರತೀಯ-ಕನ್ನಡಿಗನಾಗುತ್ತಾನೆ.
ಬಹುಶಃ ಪ್ರಶಸ್ತಿಯ ವಿಭಾಗಗಳು ರೂಪುಗೊಂಡಾಗ ವಿದೇಶದಲ್ಲಿನ ಕನ್ನಡಿಗರ ಹಾಗೂ ಕನ್ನಡ ಸಂಘಟನೆಗಳ ಸಂಖ್ಯೆಅಧಿಕವಿಲ್ಲದಾಗಿತ್ತೇನೋ? ಹೀಗಾಗಿ, ಹೊರನಾಡಕನ್ನಡಿಗ ವಿಭಾಗದಡಿ , ರಾಜ್ಯದ ಮತ್ತು ದೇಶದ ಹೊರಗಡೆ ನೆಲೆಸಿರುವ ವ್ಯಕ್ತಿ/ ಸಂಘಟನೆಗಳಿಗೆ ಪ್ರಶಸ್ತಿ ನೀಡುವಾಗ ಒಟ್ಟಿಗೇ ಪರಿಗಣಿಸಲಾಗುತ್ತಿತ್ತು. ಈ ಪರಿಪಾಠ ಇದುವರೆವಿಗೆ ಮುಂದುವರಿದಿದೆ. ಈ ಹಿಂದೆ, ಕನ್ನಡಿಗರ ಮೇಲೆ ಬೇರೆ ರಾಜ್ಯ ಅಥವಾ ವಿದೇಶಗಳಿಗೆ ಹೋಗಿ ಕೆಲಸ ಮಾಡಲು ಹಿಂಜರಿಯುತ್ತಾರೆಯೆಂಬ ಆರೋಪವಿತ್ತು.
ಆದರೆ, ಇತ್ತೀಚಿನ ವರ್ಷಗಳಲ್ಲಿ ಹೊರ ದೇಶಗಳಿಗೆ ಹೋಗಿದುಡಿ ಯುವ ಕನ್ನಡಿಗರು ಬಹುಸಂಖ್ಯೆಯಲ್ಲಿದ್ದಾರೆ. ಕಳೆದ ೨೩ವರ್ಷ ಗಳಿಂದ ನಾನಿರುವ ಪುಟ್ಟ ಕೊಲ್ಲಿ ರಾಷ್ಟ್ರ ಕತಾರಿನಲ್ಲಿ೩೫ ಸಾವಿರ ಕನ್ನಡಿಗರಿದ್ದಾರೆ. (ಕತಾರಿನ ಜನಸಂಖ್ಯೆ೨೭ಲಕ್ಷ). ಕರ್ನಾಟಕ ಸಂಘವೂ ಸೇರಿದಂತೆ ರಾಜ್ಯದ ಇನ್ನಿತರ ಆರೇಳು ಸಂಘ -ಸಂಸ್ಥೆಗಳು ಇಲ್ಲಿನ ಭಾರತೀಯ ದೂತಾವಾಸದಡಿಯಲ್ಲಿ ಸಾಮಾಜಿಕ, ಸಾಂಸ್ಕೃ ತಿಕ, ಸಾಹಿತ್ಯಿಕ, ಮನರಂಜನಾತ್ಮಕ, ಪರಿಸರ ರಕ್ಷಣೆ, ಸಂತ್ರಸ್ತರಿಗೆ, ಪ್ರಕೃತಿ ವಿಕೋಪ ಪರಿಸ್ಥಿತಿಗಳಲ್ಲಿ ನೆರವು ನೀಡುವ ಕಾರ್ಯ ಹಾಗೂ ಕ್ರೀಡಾ ಚಟುವಟಿಕೆಗಳನ್ನುನಿರಂತರವಾಗಿ ಮಾಡುತ್ತಾ ಬಂದಿವೆ.
ಉದರ ನಿಮಿತ್ತ ಕೆಲಸವರ ಸಿವಿದೇಶಗಳಿಗೆ ಹೋಗಿ ಬೀಡು ಬಿಟ್ಟ ಅನಿವಾಸಿ ಕನ್ನಡ ಭಾರತೀಯರಿಗೆ ಮೊದ ಮೊದಲು ಏಕಾಂಗಿ ತನ ಮತ್ತು ಖಿನ್ನತೆ ಕಾಡುವುದುಂಟು. ಊರು-ಮನೆಯ ಮೇಲಿನ ವ್ಯಾಮೋಹದ ಬಲೆಯಿಂದ ಬಿಡಿಸಿಕೊಂಡು ಬರುವುದಕ್ಕೆ ಬಹಳಷ್ಟು ಕಾಲಾವಕಾಶಬೇಕು. ಹೊಕ್ಕ ಊರಿನ ಪರಿಸರ, ಕೆಲಸ, ಹೊಸ ಗೆಳಯರು, ವಾತಾವರಣಕ್ಕೆ ಹೊಂದಿ ಕೊಳ್ಳಲು ಸ್ವಲ್ಪ ಕಷ್ಟಪಡಬೇಕಾಗುತ್ತದೆ.
ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ, ಉದ್ಯೋಗದ ಜತೆಗೆ, ತಮ್ಮತನವನ್ನು ತೊರೆಯದೆ, ಕನ್ನಡ ಸಂಘಗಳನ್ನು ಕಟ್ಟಿ, ಅವುಗಳ ಮೂಲಕ ಮುಂದಿನ ಪೀಳಿಗೆಗೆ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ, ನಾಡಿನ ಶ್ರೇಷ್ಠತೆಯನ್ನು ಪಸರಿಸುವಲ್ಲಿ, ಉಳಿಸಿ, ಬೆಳೆಸು ವಲ್ಲಿ ನಿಸ್ವಾ ರ್ಥ ಸೇವೆ ಸಲ್ಲಿಸುತ್ತಿರುವ ಕನ್ನಡ ಸಂಘ-ಸಂಸ್ಥೆಗಳ ಮತ್ತು ಕನ್ನಡಿಗರ ದೊಡ್ಡದಂಡೇ ಇದೆ. ಕನ್ನಡ ಭಾಷಾ ಕಲಿಕೆಯ ಉಚಿತ ತರಗತಿಗಳನ್ನು ನಡೆಸಿ, ಕನ್ನಡದ ಮಕ್ಕಳಿಗೆ ಭಾಷೆಯ ಪರಿಚಯ ಮಾಡಿ, ಕನ್ನಡದ ಬೇರನ್ನು ಇನ್ನಷ್ಟು ಗಟ್ಟಿ ಗೊಳಿಸುವ ಕಾರ್ಯವನ್ನುವಿದೇಶದಲ್ಲಿನ ಕನ್ನಡ ಸಂಘಟನೆಗಳು ಅತ್ಯಂತ ಪ್ರೀತಿಯಿಂದ ನಿರಂತರವಾಗಿ ಮಾಡುತ್ತಾ ಬಂದಿವೆ.
ಕನ್ನಡ ಕಲಿಸುವ ಅನೇಕ ಶಿಕ್ಷಕ-ಶಿಕ್ಷಕಿಯರು ಕನ್ನಡಮ್ಮನ ಸೇವೆ ಮಾಡುತ್ತಿದ್ದಾರೆ. ಕನ್ನಡ ಸಂಘಟನೆಗಳು ರಾಜ್ಯೋತ್ಸವ ಮತ್ತು ನಾಡ ಹಬ್ಬಗಳನ್ನು ಅರ್ಥ ಪೂರ್ಣವಾಗಿ ಆಚರಿಸಿ ನಾಡಿನ ಹೆಮ್ಮೆಯ ಸಾಹಿತಿಗಳು, ಸಾಧಕರು ಮತ್ತು ಕಲಾವಿದರನ್ನು ಆಹ್ವಾ ನಿಸಿ ಸಂಭ್ರಮಿವುದನ್ನು ನೋಡಬೇಕು. ಸಮುದಾಯಕ್ಕೆ ಒಳಿತು ಮಾಡುವ, ನೆರವಿಗೆ ಬರುವಲ್ಲಿ ಈ ಸಂಘಟನೆಗಳು ಮಹತ್ತರ ಪಾತ್ರವಹಿಸುತ್ತಿವೆ.
ಯಾವುದು ವಿರಳವೋ, ಅದನ್ನುಇರುವಲ್ಲಿಯೇ ಉತ್ತು, ಬಿತ್ತು, ಕೃಷಿ ಮಾಡಿ ಬೆಳೆತೆಗೆಯುವ ಅನಿವಾರ್ಯತೆ ದೇಶಿನೆಲದಲ್ಲಿರುವಕನ್ನಡಿಗರಿಗೆ ಮತ್ತು ಸಂಘಟನೆಗಳಿಗಿದೆ. ಇದು ಕನ್ನಡ ಉಳಿಸಲು, ಬೆಳೆಸಲು, ಹರಡಲು ಮತ್ತು ಸಂರಕ್ಷಿಸಲು ಮಾರ್ಗೋ ಪಾಯವೂ ಆಗಿದೆ.
ಆದ್ದರಿಂದ ಅನಿವಾಸಿ ಕನ್ನಡ ಹಾಗೂ ಕನ್ನಡ ಸಂಘಟನೆಗಳಿಗೆ ಪ್ರತ್ಯೇಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಯನ್ನು ಪರಿಗಣಿಸಿ ನೀಡಬೇಕು. ಮೆಟ್ಟಿದ ನಾಡಿಗೂ ಮತ್ತು ಹುಟ್ಟಿದ ನಾಡಿಗೂ ಕೀರ್ತಿ, ಗೌರವ ಮತ್ತು ಅಭಿಮಾನ ಮೂಡಿಸುವ ಸ್ತುತ್ಯಕಾರ್ಯ ಮಾಡುವ ವಿದೇಶಿ ಕನ್ನಡಿಗರಿಗೆ ಸನ್ಮಾನ, ಪ್ರಶಸ್ತಿಗಳು ಅರಸಿಕೊಂಡು ಬರಲಿ.