ಹಿಂದೂ, ಈ ವಸುಧೆಯಲ್ಲಿ ನಿನಗ್ಯಾರು ಬಂಧು ?
ಸಕಾಲಿಕ
ವಿನಯ್‌ ಎಂ.ಖಾನ್
vinaykhan078@.
ಜಗತ್ತಿನಲ್ಲಿ ಹಿಂದೂಗಳ ಮೇಲೆ ಆದಂತಹ ದೌರ್ಜನ್ಯ ಮತ್ತ್ಯಾವ ಧರ್ಮದ ಮೇಲೂ ಆಗಿರಲಿಕ್ಕಿಲ್ಲ. ಆದರೆ ಹಿಂದೂ ಶಬ್ದ ಇಂದು ಜಾತಿ ಅಥವಾ ಧರ್ಮಕ್ಕೆ ಸೀಮಿತಗೊಳಿಸಲಾಗುತ್ತಿದೆ. ಹಿಂದೂ ಅನ್ನುವುದು ವಿಶಾಲ ಅರ್ಥವನ್ನು ಧ್ವನಿಸುತ್ತದೆ.
ಅದೊಂದು ಭೌಗೋಳಿಕ-ಸಾಂಸ್ಕೃತಿಕ ಜನಜೀವನದ ಪ್ರಾತಿನಿಧಿಕ. ಎಲ್ಲ ಕಾಲಘಟ್ಟದಲ್ಲೂ ಆಕ್ರಮಣಗಳು ನಡೆದಿದ್ದು ಭಾರತೀಯ ಪರಂಪರೆಯ ಮೇಲೆಯೇ. ಇತಿಹಾಸವನ್ನು ತಿರುವಿ ಹಾಕಿದರೆ, ನಾವು ಓದಿದ್ದು ಖಿಲ್ಜಿ ಭಾರತವನ್ನು ಕೊಳ್ಳೆಹೊಡೆಯಲು ಬಂದು ಹತ್ಯಾಕಾಂಡ ನಡೆಸಿದ, ಮೋಘಲರು ಬಂದರು ಮಾರಣಹೋಮ ನಡೆಸಿ, ಲಕ್ಷಾಂತರ ಜನರ ಮತಾಂತರ ಮಾಡಿದರು. ವ್ಯಾಪಾರಕ್ಕೆ ಬಂದ ಬ್ರಿಟಿಷರು ಮಿಷನರಿಗಳನ್ನು ತಂದರು.
ಪೋರ್ಚುಗೀಸರು ಕೊಳ್ಳೆಹೊಡೆದರು…. ಹೀಗೆ ನಮ್ಮ ದೇಶಕ್ಕೆ ಬಂದವರೆಲ್ಲ ದೋಚಿದ್ದು ಬರೀ ಭಾರತದ ಸಂಪತ್ತಲ್ಲ. ನಮ್ಮ ಸಂಸ್ಕೃತಿ, ಭಾಷೆ, ನಾಗರೀಕತೆ ಹಾಗೂ ಮೌಲ್ಯಗಳನ್ನು! ಹೀಗಾಗಿ ಇದು ಅಕ್ಷರಶಃ ‘ಜನಾಂಗೀಯ ಹತ್ಯಾಕಾಂಡ’! ನಾವು ಕೇವಲ 20ನೇ ಶತಮಾನದದಿಂದೀಚೆಗಿನ ಕೆಲ ಹತ್ಯಾಕಾಂಡಗಳ ಬಗ್ಗೆ ನೋಡಲು ಹೊರಟರೆ, ಒಂದು ಅಂಕಿ ಅಂಶದ ಪ್ರಕಾರ೫೪,೮೦,೫೯,೯೨೫ (54 ಲಕ್ಷಕ್ಕಿಂತ ಹೆಚ್ಚು) ಹಿಂದೂ ಗಳ ಪ್ರಾಣ ಹಾನಿಯ ಲೆಕ್ಕ ಸಿಗುತ್ತದೆ. ಹೋಗಲಿ ಎಂದುಕೊಂಡರೆ ಮೊನ್ನೆಮೊನ್ನೆ 2020ರಲ್ಲೇ ಸುಮಾರು 13ಲಕ್ಷಕ್ಕೂ ಹಿಂದೂಗಳ ಪ್ರಾಣ, ಧರ್ಮ ಹಾನಿ (ಬೇರೆ ಧರ್ಮಕ್ಕೆ ಮತಾಂತರರಾದವರು) ಆಗಿದೆ ಎನ್ನುತ್ತದೆ ಸಮೀಕ್ಷೆ.
ಅಷ್ಟಕ್ಕೂ ಜನಾಂಗೀಯ ಹತ್ಯಾಕಾಂಡವೆಂದರೆ ಕೇವಲ ಜನರ ಹತ್ಯೆಯಲ್ಲ. ಉದ್ದೇಶ ಪೂರ್ವಕವಾಗಿ ಒಂದಿಡೀ ಜನಾಂಗ, ರಾಷ್ಟ್ರೀಯತೆ, ಧರ್ಮ, ಸಂಸ್ಕೃತಿಯನ್ನು ಸಂಪೂರ್ಣ ನಾಶಕ್ಕೆ ಮುಂದಾಗುವುದು. ಈ ಜನಾಂಗೀಯ ಹತ್ಯೆಗಳ ಒಂದು ಸಣ್ಣ ಮೆಲುಕು; ೨೦ನೇ ಶತಮಾನದಲ್ಲಿ ೧೯೨೧-೨೨ರಲ್ಲಿ ಅಂದರೆ, ಒಂದು ಶತಮಾನದ ಹಿಂದೆ ಮಾಪಿಳ್ಳೆ ಮುಸಲ್ಮಾನರು ೨,೫೦೦ ಹಿಂದೂಗಳನ್ನು ಕೊಂದು, ೨೬,೦೦೦ ಜನ ನಿರಾಶ್ರಿತ, ಮತಾಂ ತರ, ದೌರ್ಜನ್ಯ ಕ್ಕೊಳಗಾದರು. ೧೦೦ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ಧ್ವಂಸ ನಡೆಯಿತು. ಬಹುಶಃ ಆಧುನಿಕ ಕಾಲಘಟ್ಟದಲ್ಲಿ ಇಂಥ ಹತ್ಯಾಕಾಂಡದ ಮುನ್ನುಡಿ ಇದೇ ಎನ್ನಬಹುದೇನೋ.
ಅಲ್ಲಿಂದ ಮುಂದೆ ೧೯೨೪ರಲ್ಲಿ ನಡೆದ ಕೊಹಾಚ ಧಂಗೆ ಯಲ್ಲಿ ೧೨೦ಕ್ಕೂ ಹೆಚ್ಚು ಹಿಂದೂಗಳನ್ನು ಕೊಂದು ೩,೨೦೦ ಜನರನ್ನು ಆ ಸ್ಥಳದಿಂದ ಓಡಿಸಿದರು. ನಂತರ ೧೯೪೬ರಲ್ಲಿ ಒಖಾಲಿ ಗಲಭೆಯಂಬ ಹತ್ಯಾಕಾಂಡವು ಅಕ್ಟೋಬರ್ ೧೦ರ ಲಕ್ಷ್ಮೀ ಪೂಜೆಯ ಸಂದರ್ಭ ದಲ್ಲಿ ಶುರುವಾಗಿ ಸತತ ಒಂದು ವಾರದ ತನಕ ಮುಂದುವರಿದು ೫ ಸಾವಿರಕ್ಕೂ ಹೆಚ್ಚು ಜನರ ಕೊಲೆ ಮತ್ತು ಅತ್ಯಾಚಾರ ಗಳನ್ನು ಒಳಗೊಂಡು ೩.೫ಲಕ್ಷ ಜನರ ಮತಾಂತರ, ಅತ್ಯಾಚಾರ, ಹತ್ಯೆ ನಡೆಯಿತು. ಅದೇ ವರ್ಷ ಗ್ರೇಟ್ ಕೋಲ್ಕತಾ ಕಿಲ್ಲಿಂಗ್ ನಲ್ಲಿ- ಮುಸ್ಲೀಂ ಲೀಗ್‌ನವರು ‘ಡೀರೆಕ್ಟ್ ಆಕ್ಷನ್ ಡೇ’ ಎಂದು ಘೋಷಿಸಿಕೊಂಡು ಆಗಷ್ಟ್ ೧೬ ರಂದು ೪ ಸಾವಿರ ಹಿಂದೂಗಳನ್ನು ಕೊಂದು ಲಕ್ಷಕ್ಕೂ ಹೆಚ್ಚು ಜನರ ಪಲಾಯನ ಮಾಡಿಸಿದರು.
ಇವೆಲ್ಲ ಸ್ವಾತಂತ್ರ್ಯಾ ಪೂರ್ವದ್ದಾದರೆ, ಸ್ವಾತಂತ್ರ್ಯಾ ನಂತರದ್ದು ಇನ್ನೊಂದು ಕರಾಳ ಇತಿಹಾಸ. ೧೯೪೭ರಲ್ಲಿ ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯವೇನೋ ಬಂತು. ಆದರೆ ಭಾರತವನ್ನು ವಿಭಜನೆ ಮಾಡಿದಕ್ಕೆ ಬಹುಮಾನವಾಗಿ ಮುಗ್ಧ ೪೭ ಲಕ್ಷ ಹಿಂದೂಗಳ ಕೊಲೆ, ಪಲಾಯನ. ಆನಂತರವಾದರೂ ನೆಮ್ಮದಿಯಾಗಿ ನಮ್ಮ ಪಾಡಿಗೆ ನಾವು ಬದುಕೊಣ ವೆಂದರೆ ಪಾಕ್ ನೆಲದಲ್ಲಿ ನಡೆದ ಕ್ರೌರ್ಯ ಒಂದೇ ಎರಡೇ? ಅಲ್ಲಿನ ವಿಕಟಾಟ್ಟಹಾಸದ ಪರಿಣಾಮ ಕನಿಷ್ಠ ೪೧ ಲಕ್ಷ ಹಿಂದೂಗಳು ಪಾಕ್‌ನ ನರಕ ಕೂಪಗಳಲ್ಲಿ ಬದುಕಲಾಗದೆ, ಭಾರತಕ್ಕೆ ಓಡಿಬಂದರು.
ಅಷ್ಟರಲ್ಲಿ ಆದದ್ದು ಗಾಂಧಿ ಹತ್ಯೆ. ಆರೋಪಿತ ನಾಥೂರಾಮ್ ಗೋಡ್ಸೆ ಬ್ರಾಹ್ಮಣನೆಂಬ ಏಕೈಕ ಕಾರಣಕ್ಕೆ ಮಹಾರಾಷ್ಟ್ರದ ೮ ಸಾವಿರಕ್ಕೂ ಹೆಚ್ಚು ಚಿತ್ಪಾವನ ಬ್ರಾಹ್ಮಣರ ನರಮೇಧ ನಡೆದುಹೋದದ್ದು, ಆ ನೆಲದಲ್ಲಿ ಇನ್ನೂ ಹೆಪ್ಪುಗಟ್ಟದೇ ಉಳಿದಿದೆ. ಕೊನೆಗೆ ಕಾಶ್ಮೀರದಲ್ಲಿ ಆದದ್ದು ಏನು? ೧೯೯೦ರ, ಜನವರಿ ೧೯ರಂದು ಭಾರತವು ಹಿಂದೆಂದೂ ಕಂಡುಕೇಳರಿಯದ ಕ್ರೌರ್ಯಕ್ಕೆ ಕಾಶ್ಮೀರ ನೆಲ ಸಾಕ್ಷಿಯಾಯಿತು.
ಕಾಶ್ಮೀರಿ ಪಂಡಿತರನ್ನೇ ಕಾಶ್ಮೀರದಿಂದ ರಾತ್ರೋ ರಾತ್ರಿ ಓಡಿಸಲಾಯಿತು. ಇದರಲ್ಲಿ ೩ರಿಂದ ೮ ಲಕ್ಷ ಮಂದಿ ನೆಲೆಕಳೆದುಕೊಂಡು, ಆಸ್ತಿಪಾಸ್ತಿಗಳನ್ನು ಬಿಟ್ಟು ದಿಕ್ಕಾಪಾಲಾಗಿ ಇಂದು ಎಲ್ಲೆಲ್ಲೋ ಬದುಕುಕಟ್ಟಿಕೊಳ್ಳಲು ಹೆಣಗುತ್ತಿದ್ದಾರೆ. ಸರಿ ಅಯೋಧ್ಯಾ ವಿವಾದ ಭುಗಿಲೆದ್ದಿತು. ೧೯೯೦, ಅಕ್ಟೋಬರ್ ೩೦ರಂದು ಆಯೋಧ್ಯೆ ಯಲ್ಲಿ ರಾಮ ಮಂದಿರಕ್ಕಾಗಿ ನಡೆದ ಹೋರಾಟದಲ್ಲಿ ಕನಿಷ್ಠ ೪ಸಾವಿರ ಕರಸೇವಕರ ಹತ್ಯೆಯಾಯಿತು.
ಇನ್ನು ಬಾಂಗ್ಲಾದೇಶದಲ್ಲಂತೂ ಹಿಂದೂಗಳು ಅಲ್ಪಸಂಖ್ಯಾತರು. ಅಲ್ಲಿನ ಪಕ್ಷಗಳ ನಡುವಿನ ರಾಜಕೀಯ ಸಂಘರ್ಷಕ್ಕೆ ಒಳಪಟ್ಟು ಸುಮಾರು ೨೦೦ಕ್ಕೂ ಹೆಚ್ಚು ಜನರ ಮೇಲೆ ಅತ್ಯಾಚಾರ, ಲೂಟಿ, ಲೈಂಗಿಕ ದೌರ್ಜನ್ಯ ನಡೆದಿದ್ದನ್ನು ಮರೆಯಲಾದೀತೇ? ಬಾಂಗ್ಲಾದ ಹಿಂಸಾಚಾರದಲ್ಲಿ ೫ ರಿಂದ ೨೦ಸಾವಿರ ಜನರು ಭಾರತಕ್ಕೆ ವಲಸೆ ಬಂದಿರಬಹುದು ಎನ್ನುತ್ತದೆ ಒಂದು ಅಂದಾಜು. ತೀರಾ ಇತ್ತೀಚೆಗೆ ೨೦೧೩- ೧೪ರ ಬಾಂಗ್ಲಾ ಚುನಾವಣಾ ನಂತರದ ಹಿಂಸೆಯಲ್ಲಿ ೧೮೦ಕ್ಕೂ ಜನರ ಕೊಲೆಗೀಡಾಗಿ ೫ ಸಾವಿರಕ್ಕೂ ಹೆಚ್ಚು ಕುಟುಂಬಗಳು ಮತಾಂಧರ ಅಟ್ಟಹಾಸ ಎದುರಿಸಿದ್ದಾರೆ.
ಮೊನ್ನೆ ಮೊನ್ನೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ನಂತರ ನಡೆದ ಹಿಂಸಾಚಾರದಲ್ಲಿ ಕನಿಷ್ಠ ೨೫ ಜನರ ಸಾವು, ೭ಸಾವಿರಕ್ಕೂ ಹೆಚ್ಚು ಜನರ ಮೇಲೆ ಲೈಂಗಿಕ ದೌರ್ಜನ್ಯ, ಹಲ್ಲೆ, ದರೋಡೆ ಸೇರಿ ೧೫ ಸಾವಿರ ಮೊಕದ್ದಮೆ ದಾಖಲಾಗಿವೆ. ಹಿಂದೂಗಳೂ ಎದುರಿಸು ತ್ತಿರುವ ಜನಾಂಗೀಯ ದ್ವೇಷದ ಜ್ವಾಲೆ ದೇಶದೊಳಕ್ಕೆ ಮಾತ್ರ ಸೀಮಿತವಾಗುಳಿದಿಲ್ಲ. ಅದು ನಮ್ಮದೇ ಹಿಂದುಸ್ಥಾನದಲ್ಲಿರಲಿ, ವಿದೇಶೀ ನೆಲದಲ್ಲೇ ಆಗಿರಲಿ ಬಲಿಪಶುಗಳು ನಾವೇ. ಇದಕ್ಕೆ ಇತ್ತೀಚಿನ ಉದಾಹರಣೆ; ಕರೋನಾ ಹಾವಳಿಯಿಂದ ಲಾಕ್‌ಡೌನ್ ಆಗಿ, ಜನರೆಲ್ಲ ಜನರೆಲ್ಲಾ ಮನೆಯೊಳಗಿದ್ದಾಗ ಪಲ್ಘರ್‌ನಲ್ಲಿ ಸಾಧುಗಳ ಕಗ್ಗೊಲೆಯಾಗಲಿಲ್ಲವೇ? ಇದೀಗ ಮತ್ತೆ ಸುದ್ದಿಯಾಗುತ್ತಿರುವುದು ಬಾಂಗ್ಲಾದ ಲ್ಲಿನ ದಳ್ಳುರಿ. ಆಗಿದ್ದಿಷ್ಟೆ. ಅಕ್ಟೋಬರ್ ೧೩ರ ಮಂಗಳವಾರವದು.
ಕಾಮಿಲ್ಲಾ ನಗರದ ದುರ್ಗಾ ಮಾತಾ ಪೆಂಡಾಲ್ ವೊಂದಕ್ಕೆ ದಾಂಗುಡಿಯಿಟ್ಟ ವ್ಯಕ್ತಿಯೊಬ್ಬ ಬೆಳ್ಳಂಬೆಳಗ್ಗೆ ೭ಕ್ಕೆ ಫೇಸ್‌ಬುಕ್‌ನಲ್ಲಿ ಲೈವ್ ಬಂದು ಗಣೇಶನ ಕಾಲಡಿ ಕುರಾನ್ ಇದ್ದಿದ್ದನ್ನು ತೋರಿಸಿಬಿಟ್ಟ. ಅದು ಹೇಗೆಬಂತೋ, ಯಾರಿಟ್ಟರೋ ಗೊತ್ತಿಲ್ಲ. ಆದರೆ ಬಿಂಬಿಸಿದ್ದೇ ಬೇರೆ. ಬಾಂಗ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಕುರಾನ್‌ಗೆ ಅಪಮಾನವಾಗಿದೆ ಅಂತ ಹುಯಿಲೆಬ್ಬಿಸಿದ. ಅಷ್ಟೆ, ಪೂಲೀಸರು ಧಾವಿಸಿದರು. ಜನ ಉದ್ವಿಘ್ನರಾದರು. ಕೆಲವೇ ಕ್ಷಣದಲ್ಲಿ ನೂರಾರು ಕೈಗಳಲ್ಲಿ ಮಾರಕಾಸಗಳು ವಿಜೃಂಭಿಸುತ್ತಿದ್ದವು. ‘ಬಂದೋ ಬಂದೋ ಪೂಜಾ ಬಂದೋ’ (ಪೂಜೆಯನ್ನು ನಿಲ್ಲಿಸಿ), ‘ಲೆಗೆಚಿ ರೇ ಲೆಗೆಚಿ ರೇ ರೊಕ್ತಿ ಆಗುನ್ ಲೆಗೆಚಿ ರೇ’ (ನಮ್ಮ ರಕ್ತ ಕುದಿಯುತ್ತಿದೆ) ಎಂದು ಅರಚುತ್ತಾ ಕ್ಷಣಾರ್ಧದಲ್ಲಿ ದುರ್ಗಾ ಮಾತಾ ಪೆಂಡಾಲ್ ಅನ್ನು ಧ್ವಂಸ ಮಾಡಿಬಿಟ್ಟರು.
ಇಷ್ಟು ಸಾಕಲ್ಲವೇ ಪ್ರಚೋದನೆಗೆ? ಸ್ಥಳದಲ್ಲೇ ಎಸ್‌ಪಿ, ಮೇಯರ್, ಪೊಲೀಸ್ ಪಡೆಗಳು ಇದ್ದರೂ ಲೆಕ್ಕಿಸದೇ ನೆರೆದಿದ್ದ ಶಸ್ತ್ರಧಾರಿ ಧರ್ಮಾಂಧರು ಕಲ್ಲುಗಳನ್ನು ತೂರುತ್ತ, ಧ್ವಂಸ ಮಾಡಿ, ಪೂಜಾ ಪರಿಕರಗಳ ಮೇಲೆ ಮೂತ್ರ ವಿಸರ್ಜಸುತ್ತಿದ್ದರೂ ಎಲ್ಲರೂ ಮೂಕ ಪ್ರೇಕ್ಷಕರು. ಜ್ವಾಲೆ ಇಡೀ ಬಾಂಗ್ಲಾವನ್ನು ಆವರಿಸುತ್ತದೆ ಎಂಬ ಕಲ್ಪನೆಯೂ ಆ ಕ್ಷಣಕ್ಕೆ ಅಲ್ಲಿದ್ದ ಯಾರಿಗೂ ಇದ್ದಂತಿಲ್ಲ. ಇಂದು ಅಲ್ಲಿನ ಬಹುಸಂಖ್ಯಾತ ಮುಸ್ಲಿಮರು ಅಲ್ಪಸಂಖ್ಯಾತರ ಹಿಂದೂಗಳ ಮೇಲೆ ಸಿಕ್ಕಸಿಕ್ಕಲ್ಲಿ ದಾಳಿ ಎಸಗುತ್ತಿದ್ದಾರೆ.
ನಂತರದ ಎರಡೇ ದಿನದಲ್ಲಿ ಹಲವಾರು ರ‍್ಯಾಲಿಗಳ ನೆಪದಲ್ಲಿ ಸಿಕ್ಕ ಸಿಕ್ಕ ಹಿಂದೂ ದೇಗುಲಗಳು ಪುಡಿಗಟ್ಟಿಹೋಗಿವೆ. ಇಂದು ಬಾಂಗ್ಲಾದ ಹಿಂದೂಗಳ ಜೀವನ ವೆಂದರೆ ನರಕ. ಇಲ್ಲಿ, ಒಂದು ಸಂಗತಿ ಅರ್ಥವಾಗುತ್ತಿಲ್ಲ ಕಾಮಿಲ್ಲಾ ನಗರದ ದುರ್ಗಾ ಉತ್ಸವದಲ್ಲಿ ಕುರಾನ್ ಹೇಗೆ ಬಂತು? ಉತ್ಸವ ಆಯೋಜಿಸಿದ್ದ ಸಂಘಟಕ ರಿಗೂ ಇದೇ ಪ್ರಶ್ನೆ ಇದೆ. ರಾತ್ರಿ ೨.೩೦(೧೨ನೇ ತಾರೀಕಿನ ಸೊಮವಾರ)ರಿಂದ ಪೆಂಡಾಲ್‌ನಲ್ಲಿ ಯಾರು ಇರಲಿಲ್ಲ. ಹಾಗಿದ್ದೂ ಫೇಸ್ ಬುಕ್‌ನಲ್ಲಿ ಲೈವ್ ಬಂದಿದ್ದ ಫಯಾಜ್ ಅಹ್ಮದ್ ಅಷ್ಟು ಬೆಳಗ್ಗೆ ಇನ್ನೂ ಪೂಜೆ ಆರಂಭವಾಗುತ್ತಿರುವಾಗಲೇ ಪೆಂಡಾಲಿಗೆ ಹೋಗಿದ್ದಾದರೂ ಏಕೆ? ಹಾಗೆಂದು ಆ ಪೆಂಡಾಲು ರಸ್ತೆ ಬದಿಯ ನಮ್ಮಲ್ಲಿ ಅಣ್ಣಮ್ಮನ ಪೆಂಡಾಲಿನಂತೆಯೂ ಇರಲಿಲ್ಲ.
ಸುಸಜ್ಜಿತವಾಗಿ ನಿರ್ಮಿಸಿ ಸಾಕಷ್ಟು ಭದ್ರತಾ ಕ್ರಮಗಳನ್ನು ಒಳಗೊಂಡಿತ್ತು. ಅಷ್ಟಾದರೂ ಫಯಾಜನ ‘ದಿವ್ಯದೃಷ್ಟಿ’ಗೆ ಒಳಗೇನೇನಿದೆ ಎಂಬುದು ಕಾಣಿಸಿ ಫೇಸ್ ಬುಕ್ ಲೈವ್‌ಗೆ ಬಂದು ಗಣೇಶನ ಕಾಲಡಿಗೇ ಫೋಕಸ್ ಮಾಡಿ ಕುರಾನ್ ಅನ್ನು ತೋರಿಸಿದ್ದು ಹೇಗೆಂಬುದನ್ನು, ಅದರ ಹಿಂದಿನ ಉದ್ದೇಶವನ್ನು ಯಾರೂ ಊಹಿಸ ಬಹುದು. ಮಾತ್ರವಲ್ಲ, ಕ್ಷಣಮಾತ್ರದಲ್ಲಿ ಸಶಸ್ತ್ರಧಾರಿ ಸಾವಿರಾರು ಜನ ಅಲ್ಲಿ ಜಮಾಯಿಸಲು ಸಾಧ್ಯವಾದದ್ದಾದರೂ ಹೇಗೆ? ಘಟನೆಗೆ ಕಾರಣವನ್ನು ಸುಲಭವಾಗಿ ಗ್ರಹಿಸಲು ಅಸಾಧ್ಯವೇ? ಇದೇ ಹಿನ್ನೆಲೆಯಲ್ಲಿ ಬಾಂಗ್ಲಾದಲ್ಲಿ ಇಲ್ಲಿವರೆಗೆ ೬೬ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ೧೦ ಅಮಾಯಕ ಹಿಂದೂಗಳನ್ನು ಕೊಲ್ಲಲಾಗಿದೆ.
೧೭ ಜನ ಹಿಂದೂಗಳು ನಾಪತ್ತೆಯಾಗಿದ್ದಾರೆ. ೨೩ಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯ/ ಅತ್ಯಾಚಾರ ಘಟನೆಗಳು ನಡೆದಿವೆ. ೧೬೦ ದುರ್ಗಾ ಪೂಜಾ ಪೆಂಡಾಲು ಧ್ವಂಸವಾಗಿವೆ. ೧೦೧ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಬೆಂಕಿ, ೧೫೦ಕ್ಕೂ ಹೆಚ್ಚು ಲೂಟಿ, ಇಸ್ಕಾನ್ ದೇವಾಲಯಗಳ ಧ್ವಂಸ ಮತ್ತು ಅಲ್ಲಿನ ೫ಕ್ಕೂ ಹೆಚ್ಚು ಪೂಜಾರಿ ಗಳ ಹತ್ಯೆ…. ಇವೆಲ್ಲವೂ ನಡೆದಿದ್ದು ಕೇವಲ ಧರ್ಮದ ಹೆಸರಿನಲ್ಲಿ. ಸ್ವಲ್ಪ ಯೋಚಿಸಿ. ಇಷ್ಟೆಲ್ಲವನ್ನೂ ಮಾಡಿದ್ದು, ಬಾಂಗ್ಲಾದ ಕಟ್ಟರ್ ಪಂಥೀಯ ಮುಸ್ಲೀಮರು. ಇದರಲ್ಲಿ ಹೆಚ್ಚಿನವರು ಜಮಾತೆ ಇಸ್ಲಾಮ್‌ಗೆ ಸೇರಿದವರು.
ಭಾರತದಲ್ಲಿ ಸೈಯದ್ ಅಲಾ ಮೌಹೊದಿಯಿಂದ ಶುರುವಾದ ಈ ಕಟ್ಟರ್ ಇಸ್ಲಾಮಿಕ್ ಸಂಘಟನೆಯ ಮೂಲ ಉದ್ದೇಶವೇ ಭಾರತವನ್ನು ಇಸ್ಲಾಮಿನ ಕೇಂದ್ರವಾಗಿ ಮಾಡುವುದಂತೆ. ೧೯೪೭ರಲ್ಲಿ ಭಾರತ ಮತ್ತು ಪಾಕಿಸ್ತಾನದ ವಿಭಜನೆಯನ್ನು ಈ ಸಂಘಟನೆ ವಿರೋಧಿಸಿತ್ತು. ವಿಭಜನೆ ಬಳಿಕ ಪಾಕಿಸ್ತಾನದಲ್ಲಿ ಹಿಂದೂ ಮತ್ತೂ ಉಳಿದ ಕೆಲ ಧರ್ಮಗಳ ಜನಾಂಗೀಯ ಹತ್ಯೆಗೂ ಈ ಸಂಘಟನೆಯೇ ಕಾರಣವಾಗಿತ್ತು. ಅಲ್ಲಿಂದ ಸತತ ಮಾನವ ವಿರೋಧಿ ಕೆಲಸಗಳನ್ನು ಮಾಡುತ್ತಲೇ ಬರುತ್ತಿದೆ. ಇಷ್ಟಾದರೂ ವಿಶ್ವಮಟ್ಟದ ಸೋಕಾಲ್ಡ್ ಮಾನವ ಹಕ್ಕುಗಳ ಸಂಘಟಕರು ಸೊಲ್ಲೆತ್ತುಲೇ ಇಲ್ಲ.
ಧರ್ಮದ ಹೆಸರಲ್ಲಿ ಜನರನ್ನ ಕೊಲ್ಲುವವರನ್ನೂ ಬೆಂಬಲಿಸುವ, ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಆಗುತ್ತಿದೆ ಎಂದು ಗುಲ್ಲೆಬ್ಬಿಸುವ ಮಂದಿಯ ಅಜೆಂಡಾ ಇಂದಿಗೂ ಅರ್ಥವಾಗುತ್ತಿಲ್ಲವೇ? ಸಿಎಎ, ಎನ್‌ಆರ್‌ಸಿ ಜಾರಿ ಪ್ರಸ್ತಾಪವಾಗುತ್ತಲೇ ದೊಡ್ಡ ದೊಡ್ಡ ಆಂದೋಲನಗಳನ್ನ ಮಾಡಿದವರು, ಸಣ್ಣಪುಟ್ಟದಕ್ಕೂ ಅಸಹೀಷ್ಣುತೆಯ ಭಾಷಣ ಬಿಗಿಯುವ ಸೋಗಲಾಡಿ ಬುದ್ಧಿಜೀವಿಗಳು, ವಿಚಾರವಾದಿಗಳು, ತಥಾಕಥಿತ ಮೀಡಿಯಾಗಳವರು, ಪಾಶ್ಚಿಮಾತ್ಯ ಸಿದ್ಧಾಂತ ಪ್ರತಿ ಪಾದಕರು ‘ಸೂ’ಗುಡುತ್ತಲೇ ಇಲ್ಲವೇಕೆ? ಶಾರುಖ್ ಖಾನ್‌ನ ಮಗ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾದಾಗ ‘ಸ್ಟಾಂಡ್ ವಿಥ್ ಶಾರುಖ್’ ಅಂದವರು ಬಾಯಿ ಈಗ ಬಿದ್ದುಹೋಗಿರಬಹುದೇನೋ. ಬಾಟ್ಲಾ ಹೌಸ್ ಎನ್ ಕೌಂಟರ್ ಪ್ರಕರಣದಲ್ಲಿ ಇಬ್ಬರು ಆತಂಕವಾದಿಗಳನ್ನು ಕೊಂದಾಗ ದೆಹಲಿ ತನಕ ಹೋಗಿ ಹೋರಾಡಿದ್ದ ಮಮತಾ ದೀದಿಯ ಕಣ್ಣು ಪಕ್ಕದ ಬಾಂಗ್ಲಾದೆಡೆಗೆ ಹರಿಯುತ್ತಿಲ್ಲವೇ? ಮೊನ್ನೆ ಮೊನ್ನೆ ಲಖೀಂಪುರ್ ಕೇರಿಯಲ್ಲಿ ಆದ ಗಲಾಟೆಯ ಬಗ್ಗೆ ಅಳುತ್ತಿದ್ದ ಕಾಂಗ್ರೆಸ್‌ನ ಪ್ರಿಯಾಂಕ ವಾದ್ರಾ, ರಾಹುಲ್ ಗಾಂಧಿ ಸಮೇತ ಪಾರ್ಟಿಯ ಮುಖಂಡರೆಲ್ಲರೂ ಈ ವಿಷಯದಲ್ಲಿ ಮಂಕಾಗಿದ್ದಾರೆ.
ಕಂಡಕಂಡ ವಿಷಯಗಳಲ್ಲಿ ಮೂಗು ತೂರಿಸುವ ‘ಆಂದೋಲನ ಜೀವಿ’ಗಳ ಮೂಗು ಮುರಿದುಹೋಗಿದ್ದು. ಇದೆಲ್ಲಾ ಯಾಕೆ? ಇಂಥ ಸಂದರ್ಬದಲ್ಲೆಲ್ಲ ಅನಿಸುವುದು ಒಂದೇ, ‘ವಸುದೈವ ಕುಟುಂಬಕಂ’ ಎನ್ನುವ ಪ್ರತಿಪಾದನೆ ಮಾಡುವ ಹಿಂದೂಗಳಿಗೇ ಈ ವಸುಂಧರೆಯಲ್ಲಿ ನೈಜ ಬಂಧುಗಳಿವಲ್ಲಾ…! ವ್ಯಥೆ ಕಾಡುತ್ತದೆ, ಛೆ!