ಶವ ಸಿಂಗರಿಸುವ ಅನಿವಾರ್ಯ ಕರ್ಮದಲ್ಲಿ…
ಸುಪ್ತ ಸಾಗರ
ರಾಧಾಕೃಷ್ಣ ಭಡ್ತಿ
@.
ಇಲ್ಲ ಬಿಡಿ, ಯಾವ ಯೋಧನೂ ಯುದ್ಧ ಬಯಸುವುದಿಲ್ಲ. ಹಾಗೆಂದು ರಣಕಣಕ್ಕೆ ತನ್ನ ದೇಹದ ರಕ್ತದ ಕಣಕಣಗಳನ್ನೂ ತರ್ಪಣ ನೀಡಲು ಆತನ ಪ್ರತೀ ಜೀವ ಕೋಶಗಳೂ ಕಾತರಿಸುತ್ತಿರುತ್ತವೆ. ತಾಯ್ನೆಲಕ್ಕಾಗಿ ಹೋರಾಡುವ, ಹೋರಾಡಿ ಬಲಿದಾನಗೈವ ಒಂದೊಂದೂ ಕ್ಷಣಕ್ಕಾಗಿ ಎಲ್ಲ ಜೀವತಂತುಗಳನ್ನೂ ಒಟ್ಟುಗೂಡಿಸಿಕೊಂಡು ಸಜ್ಜಾಗಿರುತ್ತಾನೆ.
ಯುದ್ಧವೆಂದರೆ ರಣಕಲಿಗಳ ಪಾಲಿಗೆ ಸಾವನ್ನು ‘ಸಂಭ್ರಮಿಸುವ(?)’ ಹಬ್ಬ. ಅಂಥ ಸಾವು ತನ್ನದಾಗುವ ಮುನ್ನ ದುರಾಳಿ ಪಾಳೆಯದಲ್ಲಿನ ಎಷ್ಟು ಸಾಧ್ಯವೋ ಅಷ್ಟು ಮಂದಿಯ ಸಾವನ್ನು ಕಣ್ತುಂಬಿಕೊಳ್ಳಲು ಹವಣಿಸುತ್ತಾನೆ. ಬಹುಶಃ ಆತನ ಪ್ರತೀ ಜೀವಕೋಶಗಳೂ ಹಾಗೆ ಸಾಯಲು ಬಯಸುತ್ತಲೇ ಹುಟ್ಟುತ್ತವೆಯೇನೋ.  ಉತ್ಪಾದನೆ ಮಾಡುವ ಎನರ್ಜಿ ಬೇರೆಯದೇ ತೆರನಾದುದಿರಬೇಕು.
ಒಳಗೊಳಗೇ ಪ್ರವಹಿಸುವ ರಕ್ತಗಳು   ನ ಬದಲಿಗೆ ಕುದಿಮರಳತ್ತಲೇ ಸಾಗಿ,  ನ ಬದಲಿಗೆ ಕಡುಕಟ್ಟಗಿನ ಆಕ್ರೋಶದ ಕಿಡಿಗಳನ್ನೇ ಸೆಲ್‌ಗಳಿಗೆ ಒದಗಿಸುತ್ತವೆನೋ. ಹಾಗೆ ಪ್ರತಿ ಯೋಧನನ್ನೂ ಸಿದ್ಧ ಪಡಿಸಲಾಗಿರುತ್ತದೆ; ವಿಷ ಪೂತನಿಯಂತೆ! ಹಾಗಲ್ಲದಿದ್ದರೆ, ಕೃಷ್ಣನನ್ನು ಕೊಲ್ಲಲೆಂದೇ ಬಂದ ಆಕೆಯಲ್ಲೊಬ್ಬ ಮಮತಾಮಯಿ ಇದ್ದಳಲ್ಲವೇ. ಉದ್ದೇಶಪ್ರೇರಿತಳಾಗಿ ತಾನೇ ವಿಷವುಣ್ಣುತ್ತಲೇ ಬೆಳೆದು, ಮೈನೆರೆದು, ಬಸಿರಾಗಿ ಮೊಲೆಗಳ ತುಂಬ ಹಾಲಲ್ಲದೇ ಹಾಲಾಹಲವನ್ನೇ ತುಂಬಿ ಎರೆಯಲು ಸಜ್ಜಾಗಿ ಬಂದಿದ್ದ ಆಕೆ, ತೊಡೆಯ ಮೇಲೆ ಮಲಗಿದ್ದ ಕೃಷ್ಣ ತುಂಬಿದೆದೆಯ ತೊಟ್ಟಿಗೆ ಬಾಯಿಟ್ಟ ಕ್ಷಣದಲ್ಲೇ ಪೂತ್ಕರಿಸುವುದನ್ನು ಮರೆತು ಮಮತೆಯ ಮಾತೆಯಾಗಿರಲಿಲ್ಲವೇ? ಕ್ರೌರ್ಯ ಆಕೆಗೆ ವಿಧಿಸಿದ ಕರ್ಮ.
ಮೇಲ್ನೋಟಕ್ಕೆ ರಕ್ಕಸಿಯಾಗಿ ಕಂಡಿರಬಹುದು. ಒಮ್ಮೆ ಆಕೆಯ ಆಂತರ್ಯಹೊಕ್ಕು, ಅಲ್ಲಿ ಸುಳಿದಾಡುವ ತಾಕಲಾಟಗಳ ಎಡತಾಕಿ ಬಂದರೆ ಸಾಕು, ಆಕೆಯೊಳಗೆ ಬಲವಂತವಾಗಿ ಅವಿತಿರುವ ‘ಮಾತೃ’ಕೆಯನ್ನು ಸುಲಭದಲ್ಲಿ ಯಾರಾದರೂ ಎಂಪಥೈಸ್ ಮಾಡಬ ಹುದು. ಎಲ್ಲೋ ಓದಿದ ನೆನಪು; ಅವತಾರದ ಕೊನೆಯಾಗಿ ಸುವ ನಿರ್ಧಾರ ತಳೆದು ಮರದ ಕೆಳಗೆ ಜಗವ- ತನ್ನಿರುವ ಕೂಡ ಮರೆತು(ಪರಮಾತ್ಮನಿಗೆ ಮರೆ ವುಂಟೆ, ಆತ ಮರೆತು ಜಗ ಉಳಿವುದುಂಟೇ?) ಮಲಗಿದ್ದ ನಿಯಾಮಕನ ಕಾಲಿಗೆ ಬಂದು ನೆಟ್ಟಿತಲ್ಲ ಬೇಡ ಬಿಟ್ಟ ಆ ಅಂಬು! ಅವತಾರಿಯ ಬಾಯಲ್ಲಿ ‘ಅಮ್ಮಾ’ ಎಂಬುದ್ಘಾರ. ತಕ್ಷಣ ಮಿಡಿದದ್ದು ಮೂವರು ತಾಯ ಕರುಳು. ಹೌದು, ಕರುಳೇಕೆ ಮಿಡಿದದ್ದು? ಹೃದಯವಲ್ಲವೇ ಮಿಡಿಯಬೇಕಿದ್ದುದು? ದೇಹ ವಿಜ್ಞಾನದ ಒಳ ಹೊಕ್ಕು ನೋಡಿದರೆ ಹೃದಯವು ಒಂದು ಭಾವಹೀನ ಅಂಗ.
ಸರಾಸರಿ ತೂಕಕ್ಕೆ ಸಮನಾಗಿ ದಿನಕ್ಕೆ ಸಾವಿರದ ನಾನೂರು ಲೀಟರ್‌ನಷ್ಟು ನೆತ್ತರನ್ನು ಯಾಂತ್ರಿಕವಾಗಿ ಪಂಪ್ ಮಾಡಿ ಧಮನಿಗಳಿಗೆ ಕಳುಹಿಸಷ್ಟೇ ಗೊತ್ತಂತೆ ಹೃದಯಕ್ಕೆ. ಪ್ರೀತಿ-ಪ್ರೇಮ, ವಾತ್ಸಲ್ಯ, ಕರುಣೆ, ರೌದ್ರಗಳತ್ಯಾದಿ ರಸಭಾವಗಳು ಜನಿಸುವುದೇ ಕರುಳಲ್ಲಿ. ತಿಂದುಂಡ ಅನ್ನಗಳ ಪ್ರಕೃತಿಯನ್ನ ವಲಂಬಿಸಿ ಸ್ವಭಾವಗಳನ್ನು ರೂಪಿಸುವ ಹೊಣೆ, ಧೈರ್ಯಸ್ಥೈರ್ಯ ಗಳು ಉದಯಿಸಿಸುವುದು   ನಲ್ಲೇ ಹೊರತು ಹೃದಯದಲ್ಲಲ್ಲ. ಅದಕ್ಕೆ, ಸವಾಲೆಸೆಯುವ ಮುನ್ನ ‘ಗಟ್ಸ್ ಇದ್ದರೆ ಬಾ ಮಗನೇ’ ಅಂದು ತೊಡೆತಟ್ಟುವುದು.
ಹೀಗಿದ್ದರೂ ಅದ್ಯಾಕೆ ಪ್ರೀತಿಗೆ ಕೆಂಪು ಬಣ್ಣದ ಹೃದಯವನ್ನು ಸಂಕೇತವಾಗಸಿದರೋ? ಬಹುಶಃ ಕರುಳ ಚಿತ್ರ ಬರೆವುದರ ಕಷ್ಟ, ಆಕಾರವೂ ಅಕರಾಳ ವಿಕರಾಳಎಂಬ ಕಾರಣಕ್ಕಿದ್ದರಬಹುದು. ಇರಲಿ, ಕೃಷ್ಣ ಕರೆದ ಆ ಕ್ಷಣ ಅಲ್ಲಿ ಪ್ರತ್ಯಕ್ಷರಾದವರು ಒಂದಲ್ಲ, ಎರಡಲ್ಲ, ಮೂವರು ತಾಯಂದಿರು. ಯಶೋದೆ-ದೇವಕಿಯರನ್ನು ಸಹಜವಾಗಿ ಊಹಿಸಬಲ್ಲಿರಿ. ಮೂರನೆಯಾಕೆ? ಪೂತನಿ! ಹೌದಲ್ಲ, ಹಾಲೂಡಿಸಿದ್ದಳ್ಳಲ್ಲ ಆಕೆ? ಒಂದು ದಿನ, ಒಂದು ಕ್ಷಣವೇಇರಬಹುದು. ಉಣ್ಣಿಸಿದ್ದು  ಹಾಲಾಹಲ ವನ್ನೇ ಇರಬಹುದು. ಆಕೆಯಾದರೂ ಇನ್ನೇನು ಮಾಡಿಯಾಳು? ತೊಟ್ಟು ತೊಟ್ಟೇ ವಿಷವುಣ್ಣಿಸಿಯೇ ಕಂಸ ಬೆಳೆಸಿದ ಕನ್ಯೆಯ ಸ್ತನದಲ್ಲಷ್ಟೇ ಅಲ್ಲ, ದೇಹದ ಕಣಕಣ ದಲ್ಲೂ ಪ್ರವಹಿಸುತ್ತಿದ್ದು ಕಾರ್ಕೋಟಕವೇ.
ಅದನ್ನೇ ಆಕೆ ಕೃಷ್ಣನಿಗೂ ಉಣಿಸಿದ್ದು. ಆದರೆ ಭಾವ? ಅಂದಿಲ್ಲವೇ ಬಸವಣ್ಣ ‘ತಾಯ ಎದೆಹಾಲೇ ನಂಜಾಗಿ ಕೊಲುವೆಡೆ’. ಒಂದೊಮ್ಮೆ ಕೃಷ್ಣ… ಛೇ, ಹೇಗೆ ಸಾಧ್ಯ?    ಆತ ಕುಡಿದದ್ದು ಎದೆವಾಲನ್ನಲ್ಲವೇ? ಆತನಿಗೆ ಪೂತನಿ ತಾಯಲ್ಲದಿರಬಹುದು. ಆದರೆ, ತಾಯಿ ತಾಯಿಯೆ. ಅಮ್ಮನೆದೆಯ ಹಾಲು ಅಮೃತವೇ. ಯಾವ ತಾಯ ಎದೆ ಹಾಲು ಕೊಂದೀತು ಯಾರದ್ದೇ ಕಂದನನ್ನು? ತನ್ನ ಪ್ರಾಣವನ್ನಾದರೂ ಕೊಟ್ಟು ಕಂದನನ್ನುಳಿಸುವ ಎಂದಿನ ತಾಯ್ತನ ಮೆರೆದಳಲ್ಲವೇ ಪೂತನಿ? ಹಾಗಾಗಿ ‘ಅಮ್ಮಾ’ ಎಂದು ಕೃಷ್ಣ ಚೀತ್ಕರಿಸಿದ ಮರುಕ್ಷಣದಲ್ಲಿ ಎದುರೋಡಿ ಬಂದು ನಿಂತಿದ್ದಳು ಪೂತನಿ. ಹೇಳಿಕೇಳಿ ಆತನೇ ಗೀತೆಯಲ್ಲಿ ‘ದೊಡ್ಡದಾಗಿ ನಿಂತು’ ಹೇಳಿಲ್ಲವೇ ‘ಕರ್ಮಣ್ಯೆ ವಾಧಿಕಾರಸ್ಥೆ ಮಾ-ಲೇಷು ಕದಾಚನ’. ಹೀಗಾಗಿ ಪೂತನಿ ಅಪರಾಧಿ ಅಲ್ಲ, ಅಪರಾಧ ಅವಳಿಗಿಲ್ಲ.
ಪತ್ರಕರ್ತರದ್ದೂ   , ಯೋಧನದೇ ಸ್ಥಿತಿ. ಸತ್ತವರು ಯಾರೇ ಇರಲಿ, ಕ್ಷಣದಲ್ಲಿ ಸುದ್ದಿ ಮನೆ ಮಾತ್ರ ಕಳೆಗಟ್ಟುತ್ತದೆ; ಕಳೆಗಟ್ಟಲೇಬೇಕು.ಸುದ್ದಿಗಾರನೆನಿಸಿಕೊಂಬಾತ ಪಕ್ಕಾ ಯೋಧನಂತೆ ಯಾರದ್ದೇ ಸಾವನ್ನು ನಿರಕ್ಷಿಸದಿರಬಹುದು. ಆದರೆ ಸಾವಿನ ಸನ್ನಿವೇಶದಲ್ಲಿ, ಅದರಲ್ಲೂ ಸಮಾಜದಲ್ಲಿ ಗಣ್ಯ ರೆನಿಸಿಕೊಂಡವರು ಕಣ್ಮರೆಯಾದ ಕ್ಷಣ ಯುದ್ಧೋತ್ಸಾಹ ಮನೆ ಮಾಡುತ್ತದೆ ಪ್ರತಿ ಪತ್ರಕರ್ತನ ಮನದಲ್ಲಿ. ಇದೊಂದು ರೀತಿಯಲ್ಲಿ ‘ಶವ ಸಿಂಗರಿಸುವ ಅನಿವಾರ್ಯ ಕರ್ಮ’ ಆತನ ಪಾಲಿಗೆ. ಅವರಸರದ ಸಾಹಿತ್ಯದಲ್ಲಿ ಅವಾಂತರಗಳೂ ಆಗದುಳಿಯದು. ಆದರೆ, ಮಾನವತೆಯನ್ನು ಮರೆತು ವಿಜೃಂಭಿಸುವ ಕಟುಕ ಹೃದಯಿಗಳೇನೂ ಅಲ್ಲ ನಾವ್ ಸುದ್ದಿಮನೆಯ ಶೂರರು.
ಹಾಗಂತ ಸಾವು, ಭೀಕರ ಅಪಘಾತ, ನೈಸರ್ಗಿಕ ವಿಕೋಪ. ಯುದ್ಧ, ಸಂಘರ್ಷ, ಸಾಂಕ್ರಾಮಿಕ ಸಂಕ್ರಮಣಗಳೆಲ್ಲವೂ ಸುದ್ದಿ ದೃಷ್ಟಿಯಿಂದ ಪತ್ರಿಕಾ ಸದಸ್ಯರಿಗೆ ಸಂಭ್ರಮವೇ. ಆಗೆಲ್ಲ ಸುದ್ದಿಮನೆ ಗರಿಗೆದರುತ್ತದೆ. ಅಲ್ಲೊಂದು ಸಣ್ಣ (ದೊಡ್ಡದೇ) ಸಂಚಲನ ಸೃಷ್ಟಿಯಾಗುತ್ತದೆ. ಧಾವಂತ ಓಡಾಟಕ್ಕೆ ಎಲ್ಲರೂ ಶುರುವಿಟ್ಟು ಕೊಳ್ಳುತ್ತಾರೆ. ಸುದ್ದಿ ತಿಳಿದೊಡನೆಯೇ (ಹೌದು , ಸುದ್ದಿ ತಿಳಿಸುವ ಸುದ್ದಿಗಾರರಿಗೂ ಎಲ್ಲಿಂದಲಾದರೂ ತಿಳಿಯಲೇಬೇಕಲ್ಲ) ದೌಡಾಯಿಸುತ್ತಾರೆ. ಇರುವುದೆಲ್ಲವ ಬಿಟ್ಟು ಹೊಸ ಸುದ್ದಿಗಾಗಿ ತುಡಿಯಲಾರಂಭಿಸುತ್ತದೆ ಪ್ರತಿ ಪತ್ರಕರ್ತನ ಮನಸ್ಸು.
ಕ್ಷಣಕ್ಷಣಕ್ಕೂ ಉoಜಿqಛಿ ನ ಹಂಬಲದಲ್ಲಿ ಓಡತೊಡಗುತ್ತಾನೆ ಪತ್ರಕರ್ತ.ಎಲ್ಲರಿಗಿಂತಶ್ರೇಷ್ಠ, ಗರಿಷ್ಠವನ್ನು ವಿಭಿನ್ನವಾಗಿ ‘ನಾವೇ ಕೊಡಬೇಕು’ ಎಂಬ ಹಂಬಲ, ತುಡಿತ ಪ್ರತಿ ಸುದ್ದಿಮನೆಯ ಸದಸ್ಯನದ್ದೂ ಆಗಿರುತ್ತದೆ. ಆ ಭರದಲ್ಲಿ ನಿದ್ದೆ, ಹಸಿವು, ಬಾಯಾರಿಕೆಗಳನ್ನು ಮರೆತು ದುಡಿಯಲಿಟ್ಟುಕೊಳ್ಳುತ್ತಾನೆ. ಹಗಲು-ರಾತ್ರಿಗಳ ಭೇದ ಮರೆಯುತ್ತಾನೆ. ಥಕಥಕನೆ ಕುಣಿಯಲಾರಂಭಿಸುತ್ತಾನೆ. ಕೂಗಾಟ, ಅರಚಾಟಗಳೆಲ್ಲವೂ ಸಹಜ. ಹೊಸತೇನನ್ನೋ ಕೊಡುವ ಹಪಾಹಪಿಯಲ್ಲಿ ಸುದ್ದಿ ಮನೆಯ ಮೂಲೆಯಲ್ಲೇಲ್ಲೋ ಕುಳಿತು ಕೆತ್ತಲು ಇದೇನು ದೃಶ್ಯಕಾವ್ಯವಲ್ಲ. ಅಲ್ಲೊಂದಿಷ್ಟು ರಣಕೇಕೆ ಇದ್ದೇ ಇರುತ್ತದೆ. ಇರತಕ್ಕದ್ದು. ಅಷ್ಟಕ್ಕೂ ಸತ್ತವರ ನೆನೆದು ಭಾವುಕರಾಗಿ ರೋದಿಸುತ್ತಾ ಕುಳಿತುಕೊಳ್ಳಲು ಪತ್ರಕರ್ತರಿಗೆ ಪುರುಸೊತ್ತೆಲ್ಲಿಯದು? ಹಾಗೊಮ್ಮೆ ಕುಳಿತುಕೊಳ್ಳುವುದಾದರೆ ಪ್ರತಿದಿನವೂ ಸುದ್ದಿಮನೆಗೆಸೂತಕ ಕಾಡೀತು.
ಅದೆಷ್ಟೋ ಸಲ ಸ್ವಂತ ಮನೆಯಲ್ಲಿನ ಸಾವಿಗೇ ಅತ್ತು ಬರಿದಾಗಲು ಸಮಯದ ಬರ ಕಾಡುವ ಸನ್ನಿವೇಶದಲ್ಲಿ ಊರವರೆಲ್ಲರ ಸಾವಿಗೆ ಪತ್ರಕರ್ತ ಎಲ್ಲಿ ಕಣ್ಣೀರಾ ದಾನು? ಅಷ್ಟಕ್ಕೂ ಸುದ್ದಿಗಳಲ್ಲಿ ಒಳ್ಳೆಯದು, ಕೆಟ್ಟದ್ದೆಂಬ ಭೇದವೇ ಇಲ್ಲ. ಸಿಹಿ-ಕಹಿಗಳ ವ್ಯತ್ಯಾಸವಿಲ್ಲ. ಆ ವಿಚಾರದಲ್ಲಿ ಪತ್ರಕರ್ತ ಸ್ಥಿತಪ್ರಜ್ಞ. ಪತ್ರಕರ್ತರ ಪಾಲಿಗೆಪರಿಶ್ರಮದ ನೋವಿನ ಬಸಿರಿನಲ್ಲಿ. ಪ್ರತಿ ದಿನದ ಆರಂಭವೆಂದರೆ ಅದು ಕನಸಿನ ಹೆರಿಗೆ ಕ್ಷಣ. ಕಳೆದ ದಿನದ ಅಮ್ಮ ಹೊಸ ದಿನವನ್ನು ಹೆತ್ತಿರುತ್ತಾಳೆ. ಒಂದೊಂದುಘಟನೆಗಳೂ ದರೊಂದಿಗೆ ಬರುವ ಸವಾಲುಗಳೂ ಒಂದೊಂದು ಅವಕಾಶಗಳೇ. ಇಂಥ ಅವಕಾಶಗಳನ್ನು ಸ್ವೀಕರಿಸುವಾಗ ಸಂಭ್ರಮ ಮೇಲಾಗುವುದು ಸಹಜ.ಮರುದಿನದ ನಾವೇ ಹೆತ್ತ ಮಗು(ಪತ್ರಿಕೆ)ವನ್ನು ನೋಡುವಾಗ ಬಸಿರ ಒಂಬತ್ತು ತಿಂಗಳು ಹಾಗೂ ಹೆರಿಗೆ ಆ ಕ್ಷಣ ಅನುಭವಿಸಿದ ಸಂಕಟ, ನೋವು, ಹಳಹಳಿ ಯನ್ನು ಎಂದೂ ನೆನಪಿಸಿಕೊಳ್ಳುವುದಿಲ್ಲ.
ಆ ಎಲ್ಲವೂ ಮನದ ತೀರಕ್ಕೆ ಬಂದೆರಗುವ ಸಂತಸದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿರುತ್ತದೆ. ಉಳಿಯುವುದು ಸಂತಸದ ಸ್ವಚ್ಛ ಪಸೆಯನ್ನೊಳಗೊಂಡ ಹೊಳೆಯುವ ಹೊಯ್ಗೆ ಮಾತ್ರವೇ. ಅಲ್ಲಿನ್ನು ಮತ್ತೆ ನಾಳಿನ ಓದಿಗಾಗಿನ ನಮ್ಮ ಗುಬ್ಬಚ್ಚಿ ಗೂಡುಕಟ್ಟುವ, ಚೆಲುವ ಚಿತ್ತಾರ ಬರೆಯುವ, ಮರಳ ರಾಶಿಯಲ್ಲಿ ಮಯೊಡ್ಡಿ ಮಲಗಿ ಚಿತ್ತಾಗುವ ಪರಿಪರಿಯ ಆಟಗಳು ಮುಂದುವರಿಯುತ್ತವೆ. ನಮಗೆ ಗೊತ್ತು ಮತ್ತೊಂದು ಸಂಕಷ್ಟದ ಅಲೆ ಬಂದೇ ಬರುತ್ತದೆ, ಇನ್ನೊಂದು ಘಟನೆಯೋ, ದುರ್ಘಟನೆಯೋ ನಡೆದೇ ನಡೆಯುತ್ತದೆ. ಮತ್ತೆ ಮಾಹಿತಿ ಸಂಗ್ರಹಿಸಲು, ಸುದ್ದಿ ಬರೆಯಲು, ಬರೆದದ್ದನ್ನು ತಿದ್ದಲು, ಪುಟ ಕಟ್ಟಲು ಸಿದ್ಧರಾಗಲೇ ಬೇಕು.
ಹಾಗೆ ಸಜ್ಜುಗೊಳ್ಳದೇ ಉಳಿದು ಬಿಟ್ಟರೆ, ಕತ್ತಲೆ ಕವಿದು ನನ್ನೂ ಸಾಧಿಸಲಾಗದೇ ವೃತ್ತಿಗೇ ವಿದಾಯ ಹೇಳಿ ಹೋಗಬೇಕಾದೀತು. ತೀರದಲ್ಲಿ ನಿಂತ ಮೇಲೆ ಅಲೆಗಳು ಬಂದೇ ಬರುತ್ತವೆ. ಎರಡು ಅಲೆಗಳ ನಡುವಿನ ಅವಧಿಯಲ್ಲಿ ನಾವು ಕೊನೆ ಪಕ್ಷ ತೀರದಗುಂಟ ಓಡುತ್ತ , ಹೆಜ್ಜೆ ಗುರುತುಗಳಾದರೂ ಅಚ್ಚೊತ್ತಿರಬೇಕು. ಅವನ್ನು ಆ ಅಲೆಗಳು ಹಾಗೆ ಬಂದು ಹೀಗೆ ತೊಳೆದುಕೊಂಡು ಮತ್ತೆ ಸಪಾಟು ತೀರವನ್ನು ಸೃಷ್ಟಿಸಿ ಹೋಗಬೇಕು. ನಾಳಿನ ಓದಿಗಾಗಿ ಮತ್ತೆ ಬರೆಯಲು ಮುಂದಾಗಲು, ಚಿತ್ರ ಕೊರೆಯಲು ಅದೇ ಕ್ಯಾನ್ವಾಸ್. ಅಂಥ ಅವಕಾಶವನ್ನೊದಗಿಸುವ ಕಾರಣಕ್ಕೇ ಹೊಸ ದಿನದ ಆರಂಭಕ್ಕೆ ಸಂಭ್ರಮ. ಅಲ್ಲಿ ಕಳೆದ ವೈಫಲ್ಯದಅನುಭವ, ಗೀಚು-ಕಾಟುಗಳ ಅರಿವಿನೊಂದಿಗೆ, ಮತ್ತೆ ಮುಗ್ಗರಿಸದ ಎಚ್ಚರಿಕೆಯೊಂದಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಬರುವ ಅಲೆಗಳಿಗೇ ಸವಾಲೊಡ್ಡುವ ತಾಳ್ಮೆಯೊಂದಿಗೆ ಗುಬ್ಬಚ್ಚಿ ಗೂಡು ಕಟ್ಟಲು ಆರಂಭಿಸಬೇಕು.
ಹಾಗೆಂದು ನಾವೇನು ನಿರ್ಭಾವುಕರಲ್ಲ. ಆದರ, ಅಭಿಮಾನಗಳಿದ್ದವರಲ್ಲ. ಶುಷ್ಕ ಹೃದಯಿಯಾಗಿ ಒಂದಷ್ಟು ಹೊತ್ತಾದರೂ ದುಃಖ, ದುಗುಡ, ವೈಯಕ್ತಿಕತಾಪತ್ರಯಗಳೆಲ್ಲವನ್ನು ಆತ ಮರೆಯಲೇಬೇಕು. ಮರೆತು ಬರೆಯಲೇಬೇಕು. ಅಳು ಉಕ್ಕಿ ಬರುವಾಗಲೂ ತಡೆದು ಸಮಯದೊಂದಿಗೆ ಸೆಣೆಸಲೇಬೇಕು. ಏಕೆಂದರೆ, ಹೇಳಿಕೇಳಿ ನಾವ್  ವೀರರು. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಮಾಧ್ಯಮ ಮಿತ್ರರು, ಅದರಲ್ಲೂ ಕೆಲ ದೃಶ್ಯಮಾಧ್ಯಮದಿಂದ ತುಸು ಅತಿರೇಕದ ವರ್ತನೆ ಕಂಡುಬರುತ್ತಿರುವುದೂ ಸುಳ್ಳಲ್ಲ. ಸಾವಿನ ಮನೆಯನ್ನೇ ಹೊಕ್ಕು, ಸತ್ತವರ ಕುಟುಂಬ ಸದಸ್ಯರಿಗೆ ಶವ ಸಿಂಗರಿಸುವ ಅನಿವಾರ್ಯ ಕರ್ಮದಲ್ಲಿ… ಸಾಂತ್ವನ ಹೇಳುತ್ತ ಕುಳಿತಿರಲು ಸಾಧ್ಯವಿಲ್ಲದಿದ್ದರೂ ಕನಿಷ್ಠ ಕುಟುಂಬ ಸದಸ್ಯರ ಮುಖಕ್ಕೇ ಮೈಕ್ ಹಿಡಿದು ಆ ಕ್ಷಣದ ಭಾವನೆಗಳನ್ನುಮಾತಲ್ಲಿ ಅಭಿವ್ಯಕ್ತಗೊಳಿಸಲು ಎಳಸುವುದು ಅಭಾಸವಾದೀತು.
ತೀರಾ ವೈಯಕ್ತಿಕವೆನಿಸುವ ದೃಶ್ಯಗಳನ್ನೂ ಸೆರೆಹಿಡಿದು ತೋರಿಸುವ, ಅಥವಾ ಮರುದಿನದ ಪತ್ರಿಕೆಗಳಲ್ಲಿ ಮುದ್ರಿಸುವುದು ಹೆಗ್ಗಳಿಕೆಗಿಂತ ವಿಕೃತಿ ಎನಿಸುವ ಸಾಧ್ಯತೆಗಳೇ ಹೆಚ್ಚು. ಹಾಗೆಂದು ಸೋಷಿಯಲ್ ಮೀಡಿಯಾಗಳ ಯುಗದಲ್ಲಿ ಬೇರೇನನ್ನೋ ಓದುಗ ಪತ್ರಕರ್ತರಿಂದ ಬಯಸುತ್ತಿರುವುದು ಸುಳ್ಳಲ್ಲ. ಯಾರಿಗೂ ಕಾಣದ್ದು, ಗ್ರಹಿಕೆಗೆ ನಿಲುಕದ್ದು ಅದು ಹೇಗೋ, ಯಾರದ್ದೋ ಮೂಲಕ ಕ್ಷಣದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗಳಂಥವುಗಳ ಗೋಡೆಗಂಟಿ ಜಗದಗಲಪಸರಿಸುತ್ತರುವುದರಿಂದ ಪತ್ರಕರ್ತನ ಹೊಣೆಗಾರಿಕೆ, ಕಾರ್ಯತತ್ಪರತೆ, ವಿಶ್ವಾಸಾರ್ಹತೆ ಎಲ್ಲವೂ ಒರೆಗೆ ಹಚ್ಚಿ ನಿಂತಿದೆ.
ಅದಕ್ಕಾಗಿ ಹಿಂದೆಂದಿಗಿಂತಲೂ ಪತ್ರಿಕಾ ವೃತ್ತಿ ಸುಲಭ ಎನಿಸುತ್ತಿರುವುದಕ್ಕಿಂತ ಆಧುನಿಕ ಕಾಲಘಟ್ಟದ ಪತ್ರಿಕೋದ್ಯಮ ಈ ಎಲ್ಲ ದೃಷ್ಟಿಯಿಂದಲೂ ಸಾವಾಲೆ ನಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ತುಸುವೇ ಎಡವಿದರೂ ಬೆಳಗಾಗುವುದರೊಳಗಾಗಿ ಎಲ್ಲರೆದು ಬಟಾಬಯಲು ಮಾಡಿ ಬೆತ್ತಲೆ ನಿಲ್ಲಿಸಬಲ್ಲ ಸೋಷಿಯಲ್ ಮೀಡಿಯಾ ವಿಮರ್ಶಕರು ಸಾಕಷ್ಟಿದ್ದಾರೆ. ತಪ್ಪಿಲ್ಲ. ನಮ್ಮ ಕೆಲಸ ನಾವು ಮಾಡಲೇಬೇಕು. ತಪ್ಪಾಗುತ್ತವೆ. ಏಕೆಂದರೆ ಪತ್ರಕರ್ತರೂ ಮನುಷ್ಯರೆ. ಆದರೆ, ನಮ್ಮ ಪ್ರತಿಭೆ ಮೆರೆಯುವ, ಚಾಣಾಕ್ಷತನದ ಪ್ರದರ್ಶನದ ಭರದಲ್ಲಿ ಬೇರೆಯವರ ಭಾವನೆಗಳನ್ನು ಘಾಸಿಗೊಳಿಸುವ ಹಕ್ಕು ನಮಗಿಲ್ಲ ಎಂಬ ಕನಿಷ್ಠ ಪ್ರಜ್ಞೆ, ನಾವೂ ಈ ಸಮಾಜದ ಭಾಗವೆಂಬ ಸಾಮಾಝಿಕ ಹೊಣೆಗಾರಿಕೆಯೂ ನಮಗಿರಬೇಕಾದುದು ಅರಿಯದ್ದೇನಲ್ಲ.
ಹೀಗನ್ನುವಾಘ ಹಳೆಯ ಘಟನೆಯೊಂದು ನೆನಪಿಗೆ ಬರುತ್ತದೆ: ಕನ್ನಡದ ಹಿರಿಯ ಪತ್ರಕರ್ತರೊಬ್ಬರು ಕೊಟ್ಟ ವಿಚಿತ್ರ ತಲೆಬರಹವೊಂದು ಮರುದಿನ ತೀವ್ರಆಕ್ರೋಶಕ್ಕೆ ಕಾರಣವಾಗಿತ್ತು. ದಿಬ್ಬಣದ ವಾಹನವೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ಮದುಮಗನೂ ಸೇರಿ ಒಂದಷ್ಟು ಮಂದಿ ಸಾವಿಗೀಡಾದ ಸುದ್ದಿಗೆ ಮಹಾಶಯರು ‘ಅಪಘಾತ: ಮದುಮಗನೇ ಗೋತಾ’ ಎಂಬ ಪ್ರಾಸಬದ್ಧ ಶೀರ್ಷಿಕೆ ನೀಡಿದ್ದರಂತೆ. ಇದು ವೃತ್ತಿಪರತೆಗಿಂತ ಬೇರೇನನ್ನೋ ಹೇಳುತ್ತದೆ. ಸುದ್ದಿ ಯನ್ನು ರೋಚಕವಾಗಿಸುವ ಭರದಲ್ಲಿ ತೀರಾ ಹೀಗೆ ಹೃದಯಹೀನರಾಗಬಾರದೆಂಬುದೂ ಸತ್ಯ.
ಕಹಿ ಸುದ್ದಿಗಳನ್ನೂ ಅತ್ಯಂತ ಘನತೆಯ ಪರಿಧಿಯಲ್ಲಿ ಕಟ್ಟಿಕೊಡಲು ಬಲ್ಲವನೇ ನೈಜ ಪತ್ರಕರ್ತ. ಇದೊಂದು ಧರ್ಮ ಸಂಕಟ. ಕಣ್ಣೆದುರೇ ಅಪಘಾತವಾದರೆ ಪತ್ರಕರ್ತನಾದವನೊಬ್ಬ ಗಾಯಾಳುಗಳ ಜೀವ ಉಳಿಸಲು ಆದ್ಯತೆಕೊಡಬೇಕೆ? ಸುದ್ದಿ ಬರೆಯಬೇಕೇ ಎಂಬುದು ಹಳೆಯ ಜಿಜ್ಞಾಸೆ. ಇಂದಿಗೂ ಪರಿಸ್ಥಿತಿಭಿನ್ನವಾಗಿಲ್ಲ. ಅನುಮಾನವಿಲ್ಲ, ಸುದ್ದಿ ಮಾಡುವುದಷ್ಟೇ ನಮ್ಮ ಕೆಲಸ. ಸ್ವತಃ ಸುದ್ದಿಯಾಗುವುದು ನಮಗೆ ಬೇಕಿಲ್ಲ. ಅದಕ್ಕೇ ಹೇಳಿರುವುದು ನಾವೂ ಸಹ ಯೋಧರಂತೆಯೇ. ಪಕ್ಕದಲ್ಲಿ ಸಹೋದ್ಯೋಗಿ ಎದುರಾಳಿಯ ಗುಂಡಿಗೆ ಎದೆಯೊಡ್ಡಿ ರಕ್ತದ ಮಡುವಲ್ಲಿ ಬಿದ್ದಿದ್ದರೂ, ಅನಿವಾರ್ಯವಾದರೆ ನಾನವನನ್ನು ತಿರುಗಿ ಯೂ ನೋಡದೇ ಮುಂದಿನ ಗುಂಡಿಗೆ ನನ್ನೆದೆಯನ್ನು ಒಡ್ಡಲು ಸಿದ್ಧನಾಗಬೇಕು.
ಜತೆಗೆ ಹಾಗೆ ಗುಂಡೆಸೆಯುತ್ತಿರುವವನ ಎದೆಸೀಳಿ ಮುನ್ನಗ್ಗಲೇಬೇಕು. ಏಕೆಂದರೆ ಮೊದಲು ಯೋಧ. ನಂತರ ಮನುಷ್ಯ. ಆದರೆ ನೆನಪಿಡಿ, ನಾವು ಪತ್ರಕರ್ತರು ಮೊದಲು ಮನುಷ್ಯರೇ. ನಮಗೂ ಹೆಂಡತಿ-ಮಕ್ಕಳು, ಮನೆ- ಸಂಸಾರ, ಜಂಜಡ- ಜಾಡ್ಯ ಎಲ್ಲವೂ ಇವೆ. ಆದರೂ ಎಲ್ಲವನ್ನೂ ಬಿಟ್ಟು ನಿಮ್ಮ ಸುಂದರ ಬೆಳಗಿನ ಓದಿಗಾಗಿ ರಾತ್ರಿಯೆಲ್ಲ ಶ್ರಮಿಸುತ್ತಿರುತ್ತೇವೆ. ನಾಳೆಗಳ ಕನಸಿನ ನವೀಕರಣಕ್ಕೆ ಬೇಕಿರುವುದು ನಿನ್ನೆಯ ನೆನಪು, ಇಂದಿನ ದೃಢ ಹೆಜ್ಜೆಯಷ್ಟೇ. ಮತ್ತೆ ಹೇಳುತ್ತೇನೆನಾವ್ ಪತ್ರಕರ್ತರ ಪಾಲಿಗೆ ಸಿಹಿ- ಕಹಿಗಳೆಂಬ ಭೇದವಿಲ್ಲ.
ಮರೆವು- ನೆನಪುಗಳ ಸಂಘರ್ಷವಿಲ್ಲ. ಒಳಿತು- ಕೆಡಕುಗಳ ವಿಂಗಡಣೆಯಿಲ್ಲ. ಹಿರಿದು- ಕಿರಿದೆಂಬ ಅಂತರವಿಲ್ಲ. ಎಲ್ಲವೂ ಸಮುಚಿತ. ಆ ಭವ್ಯ ಭಾವದೊಂದಿಗೆ ಸುದ್ದಿಯ ಸುಂದರ ಆಟೋಗ್ರಾಫ್ ಅನ್ನು ಹಿಡಿದಿಟ್ಟು ಓದುಗರಿಗೆ ಕೊಡಲು ಮುಂದಾಗಬೇಕಿದೆ. ಮನಸ್ಸು ಮಾಡಿದರೆ ಅದೇನೂ ದೊಡ್ಡದಲ್ಲ. ಹೌದು ನಾವು ಬುದ್ಧರೇ, ನೆನಪಿಲ್ಲವೇ… ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ !