ಅಪ್ಪಾಜಿ ಜೀವನ ಚರಿತ್ರೆ: ಅಪ್ಪು ಕನ್ನಡಿಗರಿಗೆ ಕಟ್ಟಿಕೊಟ್ಟ ಅಪೂರ್ವ ನೆನಪಿನ ಬುತ್ತಿ
-ಪಾರ್ವತಮ್ಮ ರಾಜಕುಮಾರ್‌
ಹತ್ತು ವರ್ಷಗಳಷ್ಟು ಹಿಂದೆಯೇ ಡಾ. ರಾಜ್‌ಕುಮಾರ ಜೀವನದ ಹಲವು ಭಿತ್ತಿಗಳನ್ನು ಸಂಗ್ರಹಿಸಿ ‘ಡಾ. ರಾಜ್‌ಕುಮಾರ- ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ ಎಂಬ ಅತ್ಯಪರೂಪದ, ಸಂಗ್ರಾಹ್ಯ, ಶ್ರೀಮಂತ ಹೊತ್ತಗೆಯೊಂದನ್ನು ಕನ್ನಡಿಗರ ಮಡಿಲಿಗೆ ಇಟ್ಟಿದ್ದರು ಪುನೀತ್. ತಮ್ಮ ಗೆಳೆಯ ಹಾಗೂ ಖ್ಯಾತ ಇಂಗ್ಲಿಷ್ ಭಾಷಾ ತರಬೇತುದಾರ ಪ್ರಕೃತಿ ಬನವಾಸಿಯವರೊಡನೆ ಸೇರಿ ತಪಸ್ಸಿನಂತೆ  ಡಿಮುಗಿಸಿದ ಈ ಪುಸ್ತಕ, ಯಾವುದೇ ಕೆಲಸದ ಬಗೆಗಿನ ಅವರ ಶಿಸ್ತು ಶ್ರದ್ಧೆ, ಕಾಳಜಿ, ಪರಿರ್ಶರಮ, ಬದ್ಧತೆಗೆ ಸಾಕ್ಷಿ.
ಆ ಹೊತ್ತಗೆಗೆ ಸ್ವತಃ ಪಾರ್ವತಮ್ಮ ರಾಜ್ ಕುಮಾರ್ ಬರೆದ ಮುನ್ನುಡಿ ಪುನೀತ್‌ರ ವ್ಯಕ್ತಿತ್ವ ವನ್ನು ಅಧಿಕಾರಯುತವಾಗಿ ಕಟ್ಟಿ ಕೊಡುತ್ತದೆ. ಈ ಜೀವನ ಚರಿತ್ರೆಯಿಂದಾಗಿ, ನನ್ನಲ್ಲಿ ಸದಾ ಜೀವಂತವಾಗಿರುವ ಗತಕಾಲಕ್ಕೆ ಅಪ್ಪು ಮತ್ತು ಅಶ್ವಿನಿ ಜಾರಿದರು. ನನ್ನ ಅತ್ಯಂತ ಅಚ್ಚುಮೆಚ್ಚಿನ ನೆನಪಿನಂಗಳದಲ್ಲಿ ಮತ್ತೊಮ್ಮೆ ಅವರೊಡನೆ ನೆಡದಾಡಿ ನೆನಪಿನ ಬುತ್ತಿಯನ್ನು ಬಿಚ್ಚಿಡಲು  ನನಗೂ ಬಹಳ ಸಂತೋಷವಾಯಿತು. ಈ ಕೆಲವು ವರ್ಷ ಗಳಲ್ಲಿ ನಾನು, ಅಪ್ಪು, ಅಶ್ವಿನಿ ಹಾಗೂ ಅಪ್ಪುವಿನ ಗೆಳೆಯನಾದ ಪ್ರಕೃತಿ ಎನ್. ಬನವಾಸಿ ಯೊಂದಿಗೆ ಅನೇಕ ಚರ್ಚೆಗಳಲ್ಲಿ ಛಾಯಾಚಿತ್ರಗಳ ಆಯ್ಕೆಯಲ್ಲಿ ಭಾಗಿಯಾಗಿ ದ್ದೇನೆ.
ಸಂಗ್ರಹಿಸಲಾದ ಮಾಹಿತಿಯನ್ನು ಪರಿಶೀಲಿಸಿದ್ದೇನೆ, ನನ್ನ ಬಳಿ ಯಾವುದೇ ವಿಷಯದ ಬಗ್ಗೆ ಸ್ಪಷ್ಟೀಕರಣ ಅಥವಾ ಸಂದೇಹ ಪರಿಹಾರಕ್ಕೆ ಬಂದಾಗ, ಅವರಿಗೆ ಅದರ ಬಗ್ಗೆ ಸ್ಪಷ್ಟತೆ ಮೂಡಲು ಸಹಕರಿಸಿದ್ದೇನೆಂದು ಮನಃಪೂರಕವಾಗಿ ಹೇಳಬಲ್ಲೆ, ನಮ್ಮ ಯಜ ಮಾನರನ್ನು ಕೇವಲ ಒಂದು ವ್ಯಕ್ತಿತ್ವವಾಗಲ್ಲದೆ, ಒಬ್ಬ ದೊಡ್ಡ ವ್ಯಕ್ತಿಯಾಗಿ ಈ ಜೀವನ ಚರಿತ್ರೆ ಒಂದು ಪರಿಪೂರ್ಣ ಕನ್ನಡಿಯಂತೆ ಸೆರೆಹಿಡಿದಿದೆ ಎಂದು ನಾನು ವಿಶ್ವಾಸದಿಂದ ದೃಢಪಡಿಸಬಲ್ಲೆ.
ಮಕ್ಕಳಿಗೆ ಅವರಿಗೆ ಏನು ಇಷ್ಟವೋ ಅದನ್ನು ಅವರು ಪ್ರೋತ್ಸಾಹಿಸುತ್ತಿದ್ದರು. ಆದರೆ ಏನೂ ಮಾಡಿದರು ಸಂಪೂರ್ಣ ನಿಷ್ಠೆ ಯಿಂದ ಈ ಕೆಲಸವನ್ನು ಮುಂದುವರಿಸಿಕೊಂಡು ಹೋದ ಅವನಿಗೆ ಇದರಲ್ಲಿ ಬಹಳ ನೆಮ್ಮದಿ ಸಮಾಧಾನ ದೊರೆತಿದೆ. ಪ್ರತಿ ಚಿಕ್ಕ ಅಂಶಗಳ ಬಗ್ಗೆಗೂ ಚರ್ಚಿಸುತ್ತಿದ್ದಾಗ, ಈ ಜೀವನ ಚರಿತ್ರೆಯ ಬಗೆಗಿನ ಹಲವಾರು ಆದರೆ ಗಮನಾರ್ಹ ವಿಷಯಗಳ ಬಗ್ಗೆ ಪ್ರಕೃತಿ ಯೊಡನೆ ನಿರ್ಧರಿಸುತ್ತಿದ್ದಾಗ, ನಾನು ಹೆಮ್ಮೆಯಿಂದ ಬೀಗುತ್ತಿದ್ದೆ. ಅಪ್ಪು ಇರದ ಸಮಯದಲ್ಲಿ ಅವನು ಈ ಪುಸ್ತಕದ ಬರವಣಿಯಿಂದ ಎಷ್ಟರ ಮಟ್ಟಿಗೆ ತನ್ನ ಹೃದಯಕ್ಕೆ ಹತ್ತಿರವಾಗಿಸಿಕೊಂಡಿದ್ದಾನೆಂದು ಪ್ರಕೃತಿಯೊಡನೆ ಹೆಮ್ಮೆಯಿಂದ ಮಾತನಾಡುತ್ತಿದ್ದೆ. ಈ ಜೀವನ ಚರಿತ್ರೆಯಲ್ಲಿ ನಮ್ಮ ಯಜಮಾನರ ಆತ್ಮವನ್ನುಜೀವಂತವಾಗಿರಿಸುವತ್ತ ಹಾಗೂ ಭವಿಷ್ಯದ ಪೀಳಿಗೆಗೆ ಇದನ್ನು ಒಂದು ಕನ್ನ ಡಿಯಾಗಿಸಲು ನನ್ನ ಎಲ್ಲ ಮಕ್ಕಳು ಹಾಗೂ ಇಡೀ ಕುಟುಂಬದ ಸದಸ್ಯರು ಶ್ರದ್ಧೆಯಿಂದ ಶ್ರಮಿಸಿದ್ದಾರೆ.
ಈ ಜೀವನ ಚರಿತ್ರೆಯನ್ನು ಹೊರತರಲು ತನ್ನ ಸಂಪೂರ್ಣ ಬೆಂಬಲ ನೀಡಿದ ಪ್ರಕೃತಿಯಂತಹ ಗೆಳೆಯ ಅಪ್ಪುವಿಗಿರುವುದು ನನಗೆ ಬಹಳ ಸಂತಸದ ವಿಷಯ. ಅವರು ಹಾಕಿರುವ ಗಾಢವಾದ ಶ್ರಮ ನನಗೆ ನಿರಂತರ ಖುಷಿ ತಂದಿದೆ ಹಾಗೂ ಅವರಿಗೆ ಯಾವಾಗಲೂ ಒಳ್ಳೆಯದಾಗಲೆಂದು ನಾನು ಹಾರೈಸುತ್ತೇನೆ. ಇಡೀ ಕುಟುಂಬದ ಪರವಾಗಿ ಮಾಡಲಾದ ಈ ಜೀವನ ಚರಿತ್ರೆಯ ಕ್ರೋಡೀಕರಣದ ಕಾರ್ಯದಲ್ಲಿ ಅವನಿಗಿದ್ದ ಅತೀವ ಉತ್ಸಾಹದಲ್ಲಿ, ಈ ಒಂದು ದಶಕದಲ್ಲಿ ನಾನೂ ನನ್ನನ್ನು ತೊಡಗಿಸಿಕೊಂಡಿದ್ದೇನೆ. ನನ್ನ ಯಜಮಾನರ ಬಗ್ಗೆ ಸುರಕ್ಷಿತವಾಗಿ ಬಚ್ಚಿಟ್ಟುಕೊಂಡಿದ್ದ ಬೆಚ್ಚನೆಯ ನೆನಪುಗಳನ್ನು, ಕುಟುಂಬದ ಪ್ರತಿ ಸದಸ್ಯರು, ಅದು ನನ್ನ ನಾದಿನಿಯಿರಬಹುದು, ನನ್ನ ಮಕ್ಕಳಿರಬಹದು ಅಥವಾ ನನ್ನ ಮೊಮ್ಮಕ್ಕಳಿರಬಹುದು, ಮಾತಿನಲ್ಲಿ ವ್ಯಕ್ತಪಡಿಸಿದ್ದನ್ನು ನೋಡು ವುದೇ ಒಂದು ಸಂಭ್ರಮವಾಗಿತ್ತು. ಮಾತನಾಡುವಾಗ , ತಮ್ಮದೇ ರೀತಿಯಲ್ಲಿ ನನ್ನ ಯಜಮಾನರ ಮೌಲ್ಯಗಳಿಗೆ ಕನ್ನಡಿ ಹಿಡಿದಅವರುಗಳ ಸರಳ ನಿರರ್ಗಳತೆ ನನ್ನ ಮನ ಮುಟ್ಟಿತು. ಈ ಎಲ್ಲರ ರೂಪದಲ್ಲಿ ಅವರು ಇನ್ನೂ ಜೀವಂತವಾಗಿದ್ದಾರೆ ಎಂಬ ನನ್ನ ಗಾಢ ನಂಬಿಕೆ ಇದರಿಂದ ಮತ್ತೊಮ್ಮೆ ಬಲಗೊಂಡಿತು.
ಈ ಎಲ್ಲಾ ವರ್ಷಗಳಲ್ಲಿ ನಮ್ಮ ಯಜಮಾನರ ಬಗ್ಗೆ ಅನೇಕ ದಾಖಲಾತಿಗಳು ಹಾಗೂ ಲೇಖನಗಳನ್ನು ನಾನು ಓದಿದ್ದೇನೆ. ಓದಿ ದಾಗಲೆಲ್ಲಾ ಲೇಖಕರೊಡನೆ ನಾನು ಮಾತನಾಡುವಂತಿದ್ದರೆ ಸ್ಪಷ್ಟೀಕರಣ ನೀಡಬಹುದಿತ್ತು ಅಥವಾ ವಿಷಯವನ್ನು ಅದರಸರಿಯಾದ ದೃಷ್ಟಿಕೋನದಲ್ಲಿ ನೋಡಲು ಕೆಲವು ಅಂಶಗಳನ್ನು ಸೇರಿಸಬಹುದಾಗಿತ್ತೇಂದು, ನನ್ನ ಈ ದೂರು ಇಲ್ಲಿ ಅನ್ವಯಿ ಸುವುದಿಲ್ಲ, ಅವನಿಗೆ ಏನಾದರೂ ಇಲ್ಲಿ ಅನ್ವಯಿಸುವುದಿಲ್ಲ. ಅವನಿಗೆ ಏನಾದರೂ ಸಂದೇಹವಿದ್ದಾಗ ನಾನು ಅದರ ಬಗ್ಗೆ ಅಧಿಕಾರದಿಂದ ಬೆಳಕು ಚೆಲ್ಲಿದ್ದೇನೆ ಅಥವಾ ವಿಷಯಗಳನ್ನು ಸ್ಪಷ್ಟಗೊಳಿಸಲು ಸೂಕ್ತ ವ್ಯಕ್ತಿಗಳೊಡನೆ ಮಾತನಾಡಿದ್ದೇನೆ.
ಅವನು ಈ ಜೀವನಚರಿತ್ರೆಯನ್ನು ಬರೆಯಲು ಕೈಗೆತ್ತಿಕೊಂಡಾಗ ಪ್ರಾರಂಭದಲ್ಲಿ ನಾನು ಚಕಿತಗೊಂಡಿದ್ದೆ. ಆದರೆ ನನ್ನನ್ನು ಮಂತ್ರಮುಗ್ಧಳನ್ನಾಗಿಸಿದ್ದು, ಇಷ್ಟು ವರ್ಷಗಳು ತೆದುಕೊಂಡಿದ್ದರೂ ಈ ಪುಸ್ತಕದ ಪ್ರತಿ ಅಂಶದ ಬಗ್ಗೆ ತುಂಬ ಎಚ್ಚರಿಕೆಯಿಂದಸಮಗ್ರವಾಗಿ ಕೂಲಂಕುಷವಾಗಿ ಕೆಲಸ ಮಾಡಲು ಅವನಿಗೆ ದೇವರು ಕೊಟ್ಟ ತಾಳ್ಮೆಯನ್ನು ನೋಡಿ, ಅಪ್ಪುವಿನ ವಯಸ್ಸು ಹಾಗೂ ಅವನ ಈಗಾಗಲೇ ಕ್ರಮಿಸಿರುವ ಮೈಲುಗಲ್ಲುಗಳನ್ನು ನೋಡಿ ಅವನ ಬಿಡುವಿಲ್ಲದ ಚಿತ್ರೀಕರಣದ ಕಾರ್ಯಕ್ರಮ ಹಾಗೂ ಅಸಂಖ್ಯಾತ ಜವಾಬ್ದಾರಿಗಳ ನಡುವೆಯೂ ಈ ಜೀವನಚರಿತ್ರೆಗೆ ಗುಣಮಟ್ಟದ ಸಮಯವನ್ನು ನೀಡುವುದು ಸುಲಭವಾಗಿರಲಿಲ್ಲ ವಾದರೂ, ಅವನಲ್ಲಿದ್ದ ಅತೀವ ತುಡಿತ ಅವನ ನೆರವಿಗೆ ಬಂದಿದೆ.
ಈ ಜೀವನ ಚರಿತ್ರೆಯ ಯೋಚನೆ ಅವನಿಗೆ ಬಂದಿದ್ದೇ ಒಂದು ಅಪೂರ್ವ ಸಂಗತಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಪ್ಪುವಿನ ಬಗ್ಗೆ ನನ್ನ ಎಲ್ಲಾ ಭಾವನೆಗಳನ್ನು ಸಮಗ್ರವಾಗಿ ವ್ಯಕ್ತಪಡಿಸಲು ಒಂದೇ ಮಾತು ಸಾಕಾಗುತ್ತದೆ. ಅವನು ಗ್ರೇಟ್ ! ಈ ಜೀವನ ಚರಿತ್ರೆ ನನಗೆ ಅತ್ಯಂತ ತೃಪ್ತಿ ತಂದಿದೆ ಹಾಗೂ ನನ್ನ ಯಜಮಾನರ ಬಗ್ಗೆ ಬೆಳಕು ಚೆಲ್ಲುವ ನನ್ನ ಮಗನ ಪ್ರಯತ್ನದ ಬಗ್ಗೆ ನನಗೆ ಅತೀವ ಹೆಮ್ಮೆಯಿದೆ. ಓದುಗರಿಗೂ ಇದು ಇದೇ ತೃಪ್ತಿಯನ್ನು ತಂದುಕೊಡುತ್ತದೆ ಎಂದು ನಂಬಿದ್ದೇನೆ.