ಅಕ್ಷರ ಲೋಕದ ಬೆಳಗೆರೆಯ ಬಳ್ಳಿಗಳು !
ಯಶೋ ಬೆಳಗು
ಯಶೋಮತಿ ಬೆಳಗೆರೆ
ಅಮ್ಮಾ, ನಾನು ಹುಟ್ಟಿದ ತಿಂಗಳ ಅಪ್ಪ   .        ಎಂದು ಜೋರಾಗಿ ಅಳೋಕೆ ಶುರು ಮಾಡಿದ ನನ್ನ ಮಗ ಹಿಮವಂತ.
ನೋಡು ಪುಟ್ಟಾ, ಹುಟ್ಟು-ಸಾವು ಅನ್ನುವುದು ನಮ್ಮ ಕೈಲಿರುವುದಿಲ್ಲ. ನಾವು ಒಂದಷ್ಟು  ನೊಂದಿಗೆ ಇಲ್ಲಿ ಜನ್ಮ ಪಡೆ ದಿರ್ತೇವೆ. ಅದು ಮುಗಿದ ಕೂಡಲೇ ಬೇಕೂ ಅಂದರೂ ಒಂದು ಕ್ಷಣವೂ ಇಲ್ಲಿರೋಕೆ ಸಾಧ್ಯವಿಲ್ಲ. ಹೀಗಾಗಿ ಇರುವಷ್ಟು ದಿನ ನಮ್ಮಿಂದಾದ ಸಹಾಯವನ್ನು ಮಾಡುತ್ತಾ, ಯಾರಿಗೂ ತೊಂದರೆ ಕೊಡದೆ, ನೋಯಿಸದೆ ಬದುಕುವುದನ್ನು ರೂಡಿಸಿಕೊಳ್ಳಬೇಕು.
ಅಪ್ಪ ಕೂಡ ಯಾವಾಗ್ಲೂ ಅವರಮ್ಮನನ್ನು ನೆನಪು ಮಾಡಿಕೊಂಡು ಹೀಗೇ ಕಣ್ಣೀರು ಹಾಕ್ತಿದ್ರು. ಇಷ್ಟೆಲ್ಲ ಸಾಧಿಸಿದೆ, ಹೆಸರು ಮಾಡಿದೆ. ಹಣ, ಆಸ್ತಿ ಗಳಿಸಿದೆ. ಆದರೆ ಇದನ್ನೆಲ್ಲ ಒಂದೇ ಒಂದು ದಿನದ ಮಟ್ಟಿಗಾದ್ರೂ ಅಮ್ಮ ನೋಡಬೇಕಿತ್ತು. ಅದೆಷ್ಟು ಸಂತೋಷ ಪಡ್ತಿದ್ಲೋ? ಬರೀ ಕಷ್ಟ ಗಳನ್ನೇ ಅನುಭವಿಸಿಬಿಟ್ಟಳು ನನ್ನಮ್ಮ ಅಂತ. ಜತೆಗೆ       ದೀಪಾವಳಿ ಹಬ್ಬ.
ಅವತ್ತಿನ ದಿನವೇ ಪಾರ್ವತಜ್ಜಿಗೆ    ಆಗಿದ್ದು ಅಂತ ಹೇಳ್ತಾ ಹೇಳ್ತಾ ಅದೆಷ್ಟು ದುಃಖ ಪಡ್ತಿದ್ರು. ನೋಡು ಅವರು ಕೂಡ ಹೇಗೆ ಅದೇ ದೀಪಾವಳಿಗೆ ನಮ್ಮನ್ನೆಲ್ಲ ಕತ್ತಲಲ್ಲಿ ಬಿಟ್ಟು ಅವರ ಅಮ್ಮನ ಬಳಿಗೆ ಹೊರಟು ಹೋದರು. ‘ನೀನು ದೊಡ್ಡವನಾದ ಮೇಲೆ ನನ್ನನ್ನ ಚೆನ್ನಾಗಿ ನೋಡಿಕೊಳ್ತೀಯ ಅಲ್ವಾ ಪುಟ್ಟಾ? ಅಂತ ಕೇಳ್ತಿದ್ರು. ನಿಮ್ಮ  Q7 ಡಬ್ಬಾ ಕಾರು. ನಾನು   ಕಾರು ತಗೊಂಡು ಅದರಲ್ಲಿ ನಿಮ್ಮನ್ನ ಕರ್ಕೊಂಡು ಹೋಗ್ತೀನಿ ಅಂತ ಪ್ರಾಮಿಸ್ ಮಾಡಿದ್ದೇ ಆದ್ರೂ ಯಾಕೆ ಹೀಗೆ ನನ್ನನ್ನ ಇಷ್ಟು ಬೇಗ ಬಿಟ್ಟು ಹೋದ್ರು? ಎಂದು ಅಳುತ್ತಲೇ ಕೇಳಿದ.
ಅಪ್ಪ          .              .       .       .   ಅಪ್ಪನ ಎಲ್ಲ ಒಳ್ಳೆಯ ಗುಣಗಳೂ ನಿನ್ನೊ ಳಗೆ ಬೆಳೆದು ನಿಲ್ಲಲಿ. ಬಹುಶಃ ಅದನ್ನೆಲ್ಲ ನಿನಗೆ ಹೇಳಲಿ ಅಂತಲೇ ದೇವರು ಇನ್ನೂ ನನ್ನನ್ನ ನಿನ್ನ ಜತೆಗೆ ಬಿಟ್ಟಿದ್ದಾನೆ ಅಲ್ವಾ?    ...ಅವರ ಬದುಕಿನುದ್ದಕ್ಕೂ ಈ ಸಮಾಜದ ಕೆಲವು ಕ್ಷುದ್ರ ಮನಸುಗಳು ನಿಮ್ಮಪ್ಪ ಯಾರು?’ ಎಂದು ಕೇಳುತ್ತಾ ನಿರಂತರವಾಗಿ ಅವರದ್ದಲ್ಲದ ತಪ್ಪಿಗೆ ಅವರನ್ನು ಚುಚ್ಚಿ ಚುಚ್ಚಿ ಘಾಸಿಗೊಳಿಸಿದರು.
   .ಅದಕ್ಕೇ ನೀನು ಹುಟ್ಟಿದಾಗ ಮರೆಯದೇ ತಮ್ಮ ಹೆಸರನ್ನು ಕೊಟ್ಟು ಎಲ್ಲರೆದುರಿಗೆ ಹಿಮವಂತ ನನ್ನ ಮಗ’ ಎಂದು ಹೇಳಿದರು.               .ಬಾಲ್ಯದಲ್ಲಿ ಅಪ್ಪ ನಿಲ್ಲದೇ ನರಳಿದರು. ಯೌವನದಲ್ಲಿ ಪ್ರೀತಿ ಕಳೆದುಕೊಂಡು ನರಳಿದರು. ಇತಿಹಾಸದ ಉಪನ್ಯಾಸಕರಾಗಿ, ಕಥೆಗಾರರಾಗಿ, ವರದಿ ಗಾರರಾಗಿ, ಉಪಸಂಪಾದಕರಾಗಿ, ಸಂಪಾದಕರಾಗಿ ಪತ್ರಿಕೋದ್ಯಮದೊಂದಿಗೆ ನಂಟು ಬೆಳೆದರೂ ಅವರು ಯಶಸ್ಸನ್ನು ಕಂಡಿದ್ದು ತಮ್ಮದೇ ಸಾರಥ್ಯದಲ್ಲಿ ಹಾಯ್ ಬೆಂಗಳೂರ್!
ಪತ್ರಿಕೆ ಆರಂಭಿಸಿದ ನಂತರವೇ. ಹಣ ಹೊಳೆಯಾಗಿ ಹರಿದು ಬರಲಾರಂಭಿಸಿತು. ಜೊತೆಜೊತೆಗೇ ಅಷ್ಟೇ ಶತ್ರುಗಳೂ ಹುಟ್ಟಿ ಕೊಂಡರು. ಯಾವುದೇ ಕ್ಷಣದದರೂ ಜೀವಕ್ಕೇ ಅಪಾಯ ಎದುರಾಗುವಂತಿತ್ತು. ಅದೆಲ್ಲದರ ನಡುವೆ ಯೂ ಊಟ, ನಿದ್ರೆ,ಆರೋಗ್ಯವನ್ನು ಲೆಕ್ಕಿಸದೆ ನಿರಂತgವಾಗಿ ಬರೆಯುತ್ತಾ, ಪತ್ರಿಕೆಯ ಜತೆಜತೆಗೆ ತಮ್ಮದೇ ಆದ ಭಾವನಾ ಪ್ರಕಾಶನ ಸಂಸ್ಥೆಯ ಮೂಲಕ ಸಾಕಷ್ಟು ಪುಸ್ತಕಗಳನ್ನೂ ಪ್ರಕಟಿಸಿದರು. ದೇಶ-ವಿದೇಶಗಳನ್ನು ಸುತ್ತಿ ಬಂದರು.
ಯುದ್ಧ ಭೂಮಿಯಿಂದಲೇ ವರದಿ ಮಾಡಿದರು. ಬೆಂಗಳೂರಿನ ಬಗ್ಗೆ, ವೇಶ್ಯಾವಾಟಿಕೆಗಳ ಬಗ್ಗೆ, ಭೂಗತ ಲೋಕದ ಬಗ್ಗೆ, ಭಯೋತ್ಪಾದನೆಯ ಬಗ್ಗೆ, ನಕ್ಸಲೈಟರ ಬಗ್ಗೆ, ಕವಿಗಳ ಬಗ್ಗೆ, ಸಂಗೀತ-ಸಾಹಿತ್ಯದ ಬಗ್ಗೆ, ಮಠಗಳ ಬಗ್ಗೆ, ಹೋರಾಟಗಳ ಬಗ್ಗೆ, ಚಳುವಳಿಗಳ ಬಗ್ಗೆ, ಅನ್ಯಾಯದ ವಿರುದ್ಧ ಬರೆಯುತ್ತ ಬರೆಯುತ್ತ ತಮ್ಮ ಖಾಸ್ ಬಾತ್ ಎಂಬ ಅಂಕಣದ ಮೂಲಕ ತಮ್ಮಬದುಕನ್ನೂ ಓದುಗರೆದುರು ಅನಾವರಣಗೊಳಿಸಿಕೊಂಡರು.
ಬೆಳ್ಬೆಳಗ್ಗೆ ಬೆಳಗೆರೆ ಅನ್ನುವ ರೇಡಿಯೋ ಠಿ, ಎಂದೂ ಮರೆಯದ ಹಾಡುಗಳು ಕಾರ್ಯಕ್ರಮದ ನಿರೂಪಕರಾಗಿ ಜನಮೆಚ್ಚುಗೆ ಗಳಿಸಿದರು. ಮನಸೇ, ಕನಸೇ, ಒಲವೇ ಅನ್ನುವ ಸಿಡಿಗಳನ್ನು ಹೊರತಂದರು. ಅಚ್ಚರಿ, ಓ ಮನಸೇ ಎಂಬ ಕೌಟುಂಬಿಕ ಪಾಕ್ಷಿಕ ಪತ್ರಿಕೆಯನ್ನು ಸೃಷ್ಟಿಸಿದರು. ಹೈಟೆಕ್ ಶಾಲೆಗಳಲ್ಲಿ ದೊರೆಯುವಷ್ಟೇ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಪದ್ಧತಿಯನ್ನು ಅನುಸರಿಸಿ ಮಧ್ಯಮವರ್ಗದ ಜನರಿಗೆ ನಿಲುಕುವಂತೆ ಪ್ರಾರ್ಥನಾ ಎಂಬ ಮಾದರಿ ಶಾಲೆಯನ್ನು ನಿರ್ಮಿಸಿ ಅಸಂಖ್ಯಾತ ಮಕ್ಕಳಿಗೆ ಉಚಿತ ಶಿಕ್ಷಣವನ್ನೂ ಒದಗಿಸಿದರು.
ತೆಲುಗು ಹಾಗೂ ಉರ್ದು ಭಾಷೆಗಳಿಂದ ಬಹಳ ಪ್ರಭಾವಿತರಾಗಿದ್ದ ಅವರ ಭಾಷೆಯಲ್ಲಿದ್ದ ಸೊಗಸನ್ನು ಅವರ ಬರಹಗಳನ್ನು ಓದಿಯೇ ಅರಿಯಬೇಕು. ಹುಬ್ಬಳ್ಳಿ- ಧಾರವಾಡ, ದಾವಣಗೆರೆ, ಬಳ್ಳಾರಿ, ಬೀದರ್ ನೆಲದ ಕನ್ನಡವನ್ನು ಅದೇ ಶೈಲಿಯಲ್ಲಿ ಮಾತ ನಾಡುತ್ತಾ ಎಲ್ಲರೊಂದಿಗೆ ಆಪ್ತಭಾವವನ್ನು ಹುಟ್ಟುಹಾಕುತ್ತಿದ್ದರು. ‘ಮಹಾಸ್ವಪ್ನ’ ಎಂಬ ಕಾವ್ಯನಾಮದಲ್ಲಿ ಸಾಕಷ್ಟು ಕಥೆ ಗಳನ್ನು ಬರೆದರು. ಅವರ ‘ವಂಧ್ಯಾ’ ಕಥೆಗೆ ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಾಗ ಅವರಿಗೆ ಕೇವಲ ಇಪ್ಪತ್ಮೂರು ವರ್ಷ.
ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮ ಕಾರಂತ ಪುರಸ್ಕಾರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೆಂಪೇ ಗೌಡ ಪ್ರಶಸ್ತಿ ಹಾಗೂ ಜೀವಮಾನದ ಸಾಧನೆಯ ಪ್ರಶಸ್ತಿ, ಪತ್ರಿಕೋದ್ಯಮದ ದ್ರೋಣಾಚಾರ್ಯ ಪ್ರಶಸ್ತಿಗಳ ಕಿರೀಟ ಹೊತ್ತರೂ ಓದುಗರನ್ನು ಪ್ರೀತಿಯಿಂದ ಓದುಗ ದೊರೆ’ ಎಂದು ಕರೆದರು. ಇದೆಲ್ಲದರ ನಡುವೆ ಹಿಡಿ ಪ್ರೀತಿಗಾಗಿ ಚಡಪಡಿಸಿದರು. ನೋವು ಗಳನ್ನು ನುಂಗಿದರೂ, ಅರಗಿಸಿಕೊಳ್ಳ ಲಾಗದೇ ನರಳಿದರು. ಮುಲಕನಾಡು ಸ್ಮಾತರ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಎಂದಿಗೂ ಜಾತಿವಾದಿಯಾಗಿರಲಿಲ್ಲ.
ಕಮ್ಯುನಿಸ್ಟ್ ಚಿಂತಕರಾಗಿ, ವಿಚಾರವಾದಿಯಾಗಿ ಮೇಲು-ಕೀಳೆಂಬ ಬೇದ-ಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುವ ಹೃದಯ ವೈಶಾಲ್ಯತೆ ಇತ್ತು. ಜಮೀನುದಾರನ ಮಗನಾಗಿದ್ದರೂ ಎಂದಿಗೂ ಅಪ್ಪನ ಆಸ್ತಿಗೆ ಕೈಚಾಚಲಿಲ್ಲ. ತನ್ನದೇ ಹೆಸರನ್ನುಸೃಷ್ಟಿಸಿಕೊಂಡು ಯಾವುದೇ   ಇಲ್ಲದೇ ತಮ್ಮ ಬದುಕನ್ನು ತಾವೇ ಕಟ್ಟಿಕೊಂಡು ಇಷ್ಟು ಎತ್ತರಕ್ಕೆ ಬೆಳೆದು ನಿಂತು ಹೆತ್ತವರಿಗೆ, ಹುಟ್ಟೂರಿಗೆ ಕೀರ್ತಿ ತಂದು, ಸ್ನೇಹ-ಪ್ರೀತಿಗೆ ತಲೆಬಾಗುತ್ತಿದ್ದ ಅಪ್ಪನಿಗೆ ಮಾತು ಹಾಗೂ ಬರವಣಿಗೆಗಳೇ ಅವರ  ಆಗಿದ್ದವು.
ಅಷ್ಟೇ ಅಲ್ಲ, ಅಪ್ಪನ ಮುತ್ತಾತ ಅಂದರೆ ಬೆಳಗೆರೆ ಪಾರ್ವತಮ್ಮನವರ ತಾತ ನರಸಿಂಹ ಶಾಸಿಯವರು ಕಂಚಿಯಲ್ಲಿ ವೇದಾ ಧ್ಯಯನ ಮಾಡಿ ಪೂರ್ಣ ಪಾಂಡಿತ್ಯವನ್ನು ಗಳಿಸಿಕೊಂಡಿದ್ದವರು. ಅವರು ಛಂದೋಬದ್ಧವಾಗಿ ಸಂಸ್ಕೃತದಲ್ಲಿ ಕಾವ್ಯ ರಚನೆ ಮಾಡುತ್ತಿದ್ದರು. ಪ್ರಖರ ಪಾಂಡಿತ್ಯವುಳ್ಳ ನರಸಿಂಹ ಶಾಸಿಯವರು ತಮ್ಮ ಹಳ್ಳಿಯ ಪುಟ್ಟ ಕೆರೆಯಾದ ಬೆಳಗೆರೆಯನ್ನು ತೇಜ ಸ್ತಟಾಕ ಎಂದು ಕರೆಯುತ್ತಿದ್ದರಂತೆ. ಇನ್ನು ಅವರ ಮಗನಾದ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಯವರು (ಬೆಳಗೆರೆ ಪಾರ್ವತಮ್ಮ ನವರ ತಂದೆ) ಅಶು ಕವಿಯಾಗಿದ್ದವರು.
ಚಿತ್ರದುರ್ಗದ ಉದ್ದಗಲಕ್ಕೂ ಲಾವಣಿ ಶಾಸ್ತ್ರಿಗಳು, ಕಡಲೇಕಾಯಿ ಶಾಸ್ತ್ರಿಗಳು, ಹಾಡಿನ ಶಾಸ್ತ್ರಿಗಳು ಎಂದೇ ಹೆಸರಾದವರು. ಶೃಂಗೇರಿ ಮಠದಲ್ಲಿ ವೇದ ಪಾಠ ಹೇಳಿಕೊಟ್ಟವರು. ಒಮ್ಮೆ ಶೃಂಗೇರಿಯ ಮುಸಲ್ಮಾನರ ಮನೆಯಲ್ಲಿ ಕಾಫಿ ಕುಡಿದಿದ್ದಕ್ಕೆಮಠಾಧಿಪತಿಗಳ ಕಟುನುಡಿಗಳಿಗೆ ಬೇಸತ್ತು ಹಾಕಿದ್ದ ತಮ್ಮ ಜನಿವಾರವನ್ನು ಕಿತ್ತು ಅವರೆದುರಿಗಿಟ್ಟು ’ನಿಮ್ಮ ಬಹಿಷ್ಕಾರ ವೇನಿದ್ದರೂ ಇದಕ್ಕೆ ಹಾಕಬಹುದು. ನನ್ನನ್ನೇನೂ ಮಾಡಲಾರಿರಿ’ ಎಂದು ಎದ್ದು ಬಂದಿದ್ದರಂತೆ.
ಚಂದ್ರಶೇಖರ ಶಾಸ್ತ್ರಿ ಹಾಗೂ ಅನ್ನಪೂರ್ಣಮ್ಮ ದಂಪತಿ ಗೆ ಜನಿಸಿದ ಹತ್ತು ಮಕ್ಕಳಲ್ಲಿ ಅಕ್ಷರಲೋಕಕ್ಕೆ ಸಮರ್ಪಿಸಿಕೊಂಡವರು ಸೀತಾರಾಮಶಾಸಿಯವರು, ಬೆಳಗೆರೆ ಕೃಷ್ಣಶಾಸ್ತ್ರಿಯವರು, ಬೆಳಗೆರೆ ಜಾನಕಮ್ಮನವರು ಹಾಗೂ ಬೆಳಗೆರೆ ಪಾರ್ವತಮ್ಮನವರು. ಪಾರ್ವತಮ್ಮನವರ ಹಿರಿಯಣ್ಣನಾದ ಸೀತಾರಾಮ ಶಾಸ್ತ್ರಿಯವರು ಗಣಿತದ ಪಾಂಡಿತ್ಯದಲ್ಲಿ ಹೆಸರಾದವರು. ಅವರನ್ನು ಕ್ಯಾಲ್ಕುಲಸ್ ಶಾಸ್ತ್ರಿ ಅಂತಲೂ ಕರೆಯುತ್ತಿದ್ದರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಗಣಿತದ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದವರು. ಕಾಶಿ ಯಾತ್ರೆ, ಆಶಾ ಭಂಗ,‘ಒಡೆದ ಕನ್ನಡಿ’ಗಳೆಂಬ ಸಾಮಾಜಿಕ ಕಾದಂಬರಿಗಳು, ‘ಶ್ರೀರಂಗ ಪಟ್ಟಣದ ಕೊನೆಯ ದಿವಸ’, ‘ರಾಧೆ’, ‘ವೀಳ್ಯ’ ಮೊದಲಾದ ಕವನಸಂಕಲನವನ್ನು ಪ್ರಕಟಿಸಿದ್ದರು. ಗತಿಸಿದ ಸೋದರ ಶ್ಯಾಮಣ್ಣನ ಬದುಕು, ನೆನಪುಗಳನ್ನು ಕುರಿತು ‘ನಮ್ಮೂರ ಪಶ್ಚಿಮಕ್ಕೆ’ ಎಂಬ ಅಪರೂಪದ ಕೃತಿಯನ್ನು ರಚಿಸಿದ್ದರು.
‘ಕ್ಷೀರ ಸಾಗರ’ ಎನ್ನುವ ಕಾವ್ಯನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದರು. ಹಾಗೂ ಮತ್ತೊಬ್ಬ ಅಣ್ಣನಾದ ಬೆಳಗೆರೆ ಕೃಷ್ಣಶಾಸ್ತ್ರಿಯವರು ಹಳ್ಳಿಯ ಮೇಷ್ಟ್ರು. ‘ಯೇಗ್ದಾಗೆ ಐತೆ’, ‘ಮರೆಯಲಾದೀತೇ ಸಾಹಿತಿಗಳ ಸಾನ್ನಿಧ್ಯ’ದಲ್ಲಿ ಮುಂತಾದ ಕೃತಿಗಳನ್ನು ರಚಿಸಿ ಜನಪ್ರಿಯರಾದವರು. ಎಲ್ಲಕ್ಕೂ ಕಿರೀಟಪ್ರಾಯವಾದದ್ದು ಅವರ ಸಾಮಾಜಿಕ ಕಳಕಳಿ. ಕುಗ್ರಾಮ ವಾದ ಬೆಳಗೆರೆಯಲ್ಲಿ ಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿ ಅನ್ನ ನೀಡುವ ಕಾರ್ಯವನ್ನು ಬಹಳ ಪ್ರೀತಿಯಿಂದ ನಡೆಸಿಕೊಂಡು ಬಂದವರು.
ರಾಷ್ಟ್ರಮಟ್ಟದಲ್ಲಿ ‘ಜನಪ್ರಿಯ ಅಧ್ಯಾಪಕ’, ‘ಅತ್ಯುತ್ತಮ ಅಧ್ಯಾಪಕ’ ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಅವರ ಹಳ್ಳಿಯ ಮೇಷ್ಟ್ರು’ ನಾಟಕಕ್ಕೆ ರಾಷ್ಟ್ರ ಪ್ರಶಸ್ತಿ’ ಬಂದಿದೆ. ಇನ್ನು ಹಿರಿಯ ಸಹೋದರಿಯಾದ ಬೆಳಗೆರೆ ಜಾನಕಮ್ಮನವರು ತಮ್ಮ ಎಂಟನೇವಯಸ್ಸಿಗೇ ಮದುವೆಯಾಗಿ ಮಹಿಳೆಯರು ಮನೆಯಿಂದಾಚೆ ಬರದಿರುವ ದಿನಗಳ ಜನಕಜೆ’ ಅನ್ನುವ ಕಾವ್ಯ ನಾಮದಿಂದ ಸ್ತ್ರಿ ಸಂವೇದನೆ, ಸಾಮಾಜಿಕ ಕಳಕಳಿಗಳನ್ನೊಳಗೊಂಡ ನೂರಾರು ಪದ್ಯಗಳನ್ನು ಬರೆದವರು.
ವರಮಹಾಲಕ್ಷ್ಮಿಯ ಹಬ್ಬದ ಶ್ರಾವಣ ಶುಕ್ರವಾರ ದಂದು ಜನಿಸಿದ ಹೆಣ್ಣುಮಗುವಿಗೆ ಚಂದ್ರಶೇಖರ ಶಾಸ್ತ್ರಿ ಹಾಗೂ ಅನ್ನಪೂರ್ಣ ದಂಪತಿಗಳು ಜಯಲಕ್ಷ್ಮೀ ಎಂದು ಹೆಸರಿಟ್ಟರು. ಆದರೆ ಕಾಲಾಂತರದಲ್ಲಿ ಶಾಲೆಗೆ ಸೇರುವಾಗ ಜಯಲಕ್ಷ್ಮಿ ಪಾರ್ವತಿಯಾಗಿದ್ದಳು. ಹನ್ನೆರಡು ವರುಷಕ್ಕೇ ವಿವಾಹವಾದರೂ. ವೈವಾಹಿಕ ಬದುಕಿನಲ್ಲಿ ಸಾಕಷ್ಟು ಏರಿಳಿತಗಳಿಂದ ನರಳಿದವರು. ಇದರ ನಡುವೆಯೇಕೆಲಕಾಲ ಗಾಂಧಿ ಆಶ್ರಮದಲ್ಲಿದ್ದು, ಟಿಸಿಎಚ್ ಮುಗಿಸಿ ಹಿಂದಿ ಅಧ್ಯಾಪಕಿಯಾಗಿ, ನಂತರ ಪ್ರಾಂಶುಪಾಲೆಯಾಗಿ ಬಳ್ಳಾರಿಯಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದವರು.
ಜತೆಗೆ ಸಾಹಿತ್ಯಾಭಿಮಾನ, ಸಾಹಿತ್ಯ ಪ್ರೀತಿ, ಆಸಕ್ತಿಗಳು ರಕ್ತಗತವಾಗೇ ಬಂದಿದ್ದವು. ಹೀಗಾಗಿ ಕವನ, ಕಥೆ- ಕಾದಂಬರಿಗಳ ಬರವಣಿಗೆಯಲ್ಲಿ ತೊಡಗಿಕೊಂಡು ‘ಬೋರವ್ವನ ಬಯಕೆ’, ಮನೋ ಪ್ರಪಂಚ, ಶ್ಯಾನುಭೋಗರ ಭಾವಿ, ಗಂಡ-ಹೆಂಡ್ತಿ, ಕಥೆ ಗಳನ್ನೊಳಗೊಂಡ ಪದರಗಳು ಎಂಬ ಕಥಾ ಸಂಕಲನ, ‘ಮೂರು ದೀಪಾವಳಿಗಳು’ ಎಂಬ ಕಾದಂಬರಿ ಜನಕಜೆಯ ಭಗಿನಿ ಎಂಬ ಕಾವ್ಯನಾಮದೊಂದಿಗೆ ಬೆಳಗೆರೆ ಪಾರ್ವತಮ್ಮನವರು ತಮ್ಮ ಅಧ್ಯಾಪಕ ವೃತ್ತಿಯ ಜತೆ ಜತೆಗೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು.
ಪಾರ್ವತಮ್ಮನವರ ಹಿರಿಯಣ್ಣ ಸೀತಾರಾಮ ಶಾಸಿಯವರ ಪತ್ನಿ ಸುಂದರಮ್ಮನವರ ಅಣ್ಣನಾದ ಟಿ.ಎಸ್. ವೆಂಕಣ್ಣಯ್ಯನವರುಮೈಸೂರು ವಿಶ್ವವಿದ್ಯಾನಿಲ ಯದ ಮೊದಲ ಕನ್ನಡ ಉಪನ್ಯಾಸಕರು. ಜತೆಗೆ ರಾಷ್ಟ್ರಕವಿ ಕುವೆಂಪುರವರ ಗುರುಗಳಾಗಿದ್ದವರು. ಅವರ ಸಹೋದರ ತ.ಸು. ಶ್ಯಾಮರಾಯರು. ಮತ್ತೊಬ್ಬ ಸೋದರನ ಪುತ್ರ    ತ.ರಾ.ಸು…..ಇನ್ನು ಸೀತಾರಾಮ ಶಾಸ್ತ್ರಿಯವರ ಮಗ ಪ್ರಭಾಶಂಕರರನ್ನು ವರಿಸಿದ್ದು ದೇವುಡು ಅವರ ಮೊಮ್ಮಗಳು ರಮಾ!
ಆ ಬೆಳಗೆರೆ ಪಾರ್ವತಮ್ಮನವರು ಮಾರ್ಚ್ 15, 1958ರಲ್ಲಿ ಜನ್ಮನೀಡಿದ ಮಗುವಿನ ಹೆಸರೇ ರವಿ ಬೆಳಗೆರೆ! ಹೀಗೆ ಬೆಳಗೆರೆಯ ಸಾಹಿತ್ಯದ ಬಳ್ಳಿಯಲ್ಲಿ ಅರಳಿದ ಹೂವುಗಳು ಹಲವು. ನೀನಿನ್ನೂ ಆ ಬಳ್ಳಿಯಲ್ಲಿ ಅರಳಿ ನಗಲು ಮೂಡಿರುವ ಸಣ್ಣ ಮೊಗ್ಗಷ್ಟೆ ಹಿಮ.    ಎಂದು ಹೇಳಿದಾಗ ಮುಖದಲ್ಲಿ ಬೆರಗಿನಿಂದ ಕೂಡಿದ ಪುಟ್ಟ ನಗು ಅರಳಿದ್ದು ಕಂಡು ಮನಸ್ಸಿಗೆ ಸಮಾಧಾನಾಯ್ತು.