ಕ್ಯಾನ್ಸರ್‌ನ ಸಮರಕ್ಕೆ ಬಲ ತಂದ ಥ್ಯಾಲಿಡೋಮೈಡ್
ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
ಸುದೀರ್ಘ ನಿರೀಕ್ಷೆಯ ಬಳಿಕ ವೈದ್ಯ ಜಗತ್ತಿನ ಸತ್ಯವೊಂದು ಬಯಲಾಗಿದೆ. ಸರಿ ಸುಮಾರು ಸತತ 60 ವರ್ಷಗಳಿಂದ ಥ್ಯಾಲಿಡೋಮೈಡ್ ಔಷಧದ ಪರಿಣಾಮ ಗಳ ಬಗ್ಗೆ ಸಾಕಷ್ಟು ಮಾಹಿತಿ ದೊರಕಿದ್ದು, ಔಷಧ ಹಾಗೂ ವೈದ್ಯ ಕ್ಷೇತ್ರಗಳಲ್ಲಿ ಇದು ಹೊಸ ಸಂಚಲನ ಉಂಟು ಮಾಡಿದೆ.
ಹಲವು ಮಕ್ಕಳಲ್ಲಿ ಹುಟ್ಟಿನಿಂದಲೇ ಬರುವ ಹಲವು ಊನ) ವೈಕಲ್ಯಗಳಿಗೆ ಕಾರಣವಾದ ಥ್ಯಾಲಿಡೋಮೈಡ್ ಔಷಧ ಏಕೆ ಮತ್ತು ಹೇಗೆ ಇದಕ್ಕೆ ಕಾರಣವಾಗುತ್ತದೆ ಎಂಬ ಸತ್ಯವನ್ನು ವಿಜ್ಞಾನಿಗಳು ಕಡೆಗೂ ಕಂಡುಕೊಂಡಿ ದ್ದಾರೆ. ಅಮೆರಿಕದ ಡಾನಾ ಫಾಬರ್ಕ್ಯಾನ್ಸರ್ ಸಂಸ್ಥೆಯ ವಿಜ್ಞಾನಿಗಳು ಈ ಒಗಟನ್ನುಬಿಡಿಸಿದ್ದು, ಎರಡುಪೀಳಿಗೆಗಳಿಂದ ಗೊತ್ತಿರದ ಗುಟ್ಟನ್ನು ರಟ್ಟು ಮಾಡಿದುದೇ ಅಲ್ಲದೆ ಹಲವು ಕ್ಯಾನ್ಸರ್ ವಿರುದ್ಧದ ಔಷಧಗಳ ಬೆಳವಣಿಗೆಗೂ ಸಹಾಯವಾಗಬಹುದು ಎನ್ನಲಾಗುತ್ತಿದೆ. ಥ್ಯಾಲಿಡೋಮೈಡ್ ರೀತಿಯ ರಾಸಾಯನಿಕ ಸಂಯೋಜನೆ ಹೊಂದಿರುವ ಔಷಧಗಳು ಹಲವು ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆಗೆ ನೆರವಾಗಬಹುದು ಎಂಬ ಅಂಶದ ಬಗ್ಗೆ ಬೆಳಕು ಚೆಲ್ಲಿದ್ದಾರೆ ವಿಜ್ಞಾನಿಗಳು.
ಇದಕ್ಕೆ ಹಳೆಯ ಹಲವಾರು ಸಂಶೋಧನೆಗಳನ್ನು ಆಧಾರ ನೀಡಲಾಗಿದ್ದು, ಜೀವಕೋಶಗಳಲ್ಲಿರುವ   ಗಳನ್ನು ಥ್ಯಾಲಿಡೋಮೈಡ್ ನಾಶಗೊಳಿಸುತ್ತದೆ ಎಂಬುದು ಗೊತ್ತಾಗಿದೆ. ಜೀವಕೋಶಗಳಲ್ಲಿರುವ ಜೀನ್ಸ್‌ಗಳನ್ನು ಉತ್ತೇಜಿಸುವ ಅಥವಾ ನಿರುತ್ತೇಜಿಸುವ ಕ್ರಿಯೆ ನಿರ್ಧಾರವಾಗುವುದು ಜೀವಕೋಶದ ಪ್ರೋಟೀನ್- 4 ಎಂಬುದರಿಂದ ಅದನ್ನು ನಾಶಗೊಳಿಸುತ್ತದೆ. ಇರ ಪರಿಣಾಮ ಎಂದರೆ ಈ  4 ಪ್ರೋಟೀನ್ ಜೀವಕೋಶದಿಂದ ಸಂಪೂರ್ಣ ಹೊರ ಬರುತ್ತದೆ. ಹೀಗೆ ಆದಾಗ ಅದು ಮಗು ಗರ್ಭ ಕೋಶದಲ್ಲಿರುವಾಗ ಅದರ ಕೈಕಾಲುಗಳ ಬೆಳವಣಿಗೆಗಳನ್ನು ಕುಂಠಿತಗೊಳಿಸುತ್ತದೆ.
ಅಂದರೆ ಅಂಗವಿಕಲ ಮಕ್ಕಳ ಜನನಕ್ಕೆ ಕಾರಣ ಸ್ಪಷ್ಟ. ಗರ್ಭಧರಿಸಿದ ಅವಧಿಯಲ್ಲಿ ಥ್ಯಾಲಿಡೋಮೈಡ್ ಸೇವಿಸಿದ ತಾಯಂದಿರಲ್ಲಿ ಈ ತರಹ ಕೈಕಾಲುಗಳು ಮುರುಟಿದ ಮಕ್ಕಳು ( ಫೋಕೋಮೀಲಿಯ)ಹುಟ್ಟುತ್ತಾರೆ. ಈ ವಾದಕ್ಕೆ ಪೂರಕವಾಗಿ ವೈದ್ಯ ಜಗತ್ತಿನಲ್ಲಿ ಹಲವು ದಾಖಲೆಗಳು ದೊರಕುತ್ತವೆ.  4 ನ ಜೀನ್ ನಲ್ಲಿ ಮ್ಯುಟೇಷನ್ (ರೂಪಾಂತರ) ಆಗಿ ಹುಟ್ಟಿದ ಮಕ್ಕಳಲ್ಲಿ ಕೆಲವೊಮ್ಮೆ ಹೆಬ್ಬೆರಳು ಇರುವುದಿಲ್ಲ, ಕೈ ಕಾಲುಗಳು ಸರಿಯಾಗಿ ಬೆಳೆದಿರುವುದಿಲ್ಲ, ಕಣ್ಣು ಮತ್ತು ಕಿವಿಯಲ್ಲಿ ವಿವಿಧ ವೈಕಲ್ಯಗಳಿರುತ್ತವೆ, ಹಾಗೆಯೇ ಕೆಲವು ಮಕ್ಕಳಲ್ಲಿ ಹುಟ್ಟುತ್ತಲೇ ಹೃದಯದ (  ) ಕಾಯಿಲೆ ಗಳಿರುತ್ತವೆ. ಈ  4 ಜೀನ್ ಮ್ಯುಟೇಷನ್ ಹೊಂದಿರುವವರು ಮತ್ತು ಥ್ಯಾಲಿಡೋಮೈಡ್ ಸೇವಿಸಿದ ತಾಯಿಂದಿರಿಗೆ ಹುಟ್ಟುವ ಮಕ್ಕಳು ಒಂದೇ ರೀತಿಯ ಊನಗಳನ್ನು ಹೊಂದಿರುವುದು ನಮಗೆ ಈಗಷ್ಟೇ ಗೊತ್ತಾದ ಅಂಶ ಎನ್ನುತ್ತಾರೆ ಈ ಅಧ್ಯಯನದ ಮುಖ್ಯಸ್ಥ ಡಾನಾಫಾರ್ಬರ್ಸಂಸ್ಥೆಯ ಎರಿಕ್ ಫಿಶರ್.
ಎರಡನೇ ಇನಿಂಗ್ಸ್ :ಈ ಥ್ಯಾಲಿಡೋಮೈಡ್ ಔಷಧ ತನ್ನ ಎರಡನೇ ಜನ್ಮ ತಾಳಿದ್ದು೧೯೮೦ರ ದಶಕದಲ್ಲಿ. ಹಲವು ಕ್ಯಾನ್ಸರ್ ಗ್ರಂಥಿಗಳಲ್ಲಿ ರಕ್ತ ನಾಳಗಳು ಬೆಳೆಯುವುದನ್ನು ತಪ್ಪಿಸುವ ಗುಣದಿಂದ ಹಲವಾರು ಕ್ಯಾನ್ಸರ್ ಕಾಯಿಲೆಗಳಲ್ಲಿ ಇದನ್ನು ಉಪಯೋಗಬಹುದು ಎಂಬ ಸೂಚನೆ ದೊರಕಿತು. ವಿಜ್ಞಾನಿಗಳು ಈ ದಿಸೆಯಲ್ಲಿ ವಿವಿಧ ಸಂಶೋಧನೆಗಳಲ್ಲಿ ತೊಡಗಿದರು. ವಿಜ್ಞಾನಿಗಳ ಪ್ರಕಾರ ಗರ್ಭಜಾತ ಮಗುವಿನಲ್ಲಿ ಹೀಗೆ ವೈಕಲ್ಯ ಉಂಟು ಮಾಡಬಲ್ಲ ಈ ಔಷದದ ಗುಣ ವನ್ನು ಸಕಾರಾತ್ಮಕವಾಗಿ ಬಹುಶಃ ವಿವಿಧ ಕ್ಯಾನ್ಸರ್ ಕಾಯಿಲೆಗಳ ವಿರುದ್ಧವೂ ಬಳಸಬಾರದೇಕೆ ಎಂಬ ಅಭಿಪ್ರಾಯ ಬಂದಿತು. ಈ ಹಂತದಲ್ಲಿ ಅಮೆರಿಕದಲ್ಲಿ ೩ ದೊಡ್ಡ ಕ್ಲಿನಿಕಲ್ ಟ್ರಯಲ್ ನಲ್ಲಿ ೨೦೦ ಕ್ಕೂ ಹೆಚ್ಚು ರೋಗಿಗಳಲ್ಲಿ ಪ್ರಯೋಗಮಾಡಿ ನೋಡಲಾಯಿತು.
ಅವರಿಗೆ ಅಂತಹಾ ಗಮನಾರ್ಹ ಪರಿಣಾಮ ಕಂಡು ಬರದಿದುದರಿಂದ ಮುಂದೆ ಇದು ೩ ದಶಕಗಳ ಕಾಲ ಹಾಗೆಯೇ ಸಂಶೋಧನೆ ನೇಪಥ್ಯಕ್ಕೆ ಸರಿಯಿತು.೧೯೬೦ರ ದಶಕದಲ್ಲಿ ಇದಕ್ಕೆ ಕೆಟ್ಟ ಹೆಸರು ಬಂದು ಹಿನ್ನೆಲೆಗೆ ಸರಿದಿದ್ದರೂ ೧೯೬೪ರಲ್ಲಿ ಡಾ ಜೇಕಬ್ ಶೆಶ್ಕಿನ್ ಎಂಬ ಇಸ್ರೇಲಿ ವೈದ್ಯಕೀಯ ತಜ್ಞ ವೈದ್ಯರು ೪೪ ವರ್ಷದ ಕುಷ್ಠ ರೋಗದ ಕಾಯಿಲೆಯ ಮುಂದುವರಿದ ಹಂತ    () ನಲ್ಲಿ ರೋಗಿಯೊಬ್ಬರಲ್ಲಿ ಪ್ರಯೋಗಿಸಿ ದರು. ಆತನಿಗೆ ವಿಪರೀತ ಜ್ವರ, ವಿವಿಧ ಮಾಂಸಖಂಡಗಳಲ್ಲಿ ಹಾಗೂ ವಿವಿಧ ಸಂದುಗಳಲ್ಲಿ ನೋವು, ಚರ್ಮದ ಮೇಲೆ ಬಹಳಷ್ಟು ದದ್ದುಗಳು () ಕಾಣಿಸಿ ಕೊಂಡು ನಿದ್ದೆ ಬರುವುದೇ ತುಂಬಾ ಕಷ್ಟವಾಗುತ್ತಿತ್ತು. ಆಗ ಆತನಿಗೆ ಮನಸ್ಸು ಶಾಂತಗೊಳಿಸಿ ನಿದ್ದೆ ಬರಸಲು ಆತನ ಮೇಲೆ ಥ್ಯಾಲಿಡೋಮೈಡ್ ಉಪಯೋಗಿಸಿ ದರು. (ಈ ವಯಸ್ಸಿನ ಗಂಡಸರಲ್ಲಿ ಅದನ್ನು ಉಪಯೋಗಿಸಬಹುದು). ಕೇವಲ ೩ ದಿನಗಳೊಳಗೆ ಆತನ ರೋಗ ಲಕ್ಷಣಗಳು ಸಂಪೂರ್ಣ ಕಾಣೆಯಾದವು.
ಹಾಗೆಯೇ ಈ ಔಷಧವನ್ನು ನಿಲ್ಲಿಸಿದಾಗ ಆ ಲಕ್ಷಣಗಳು ಪುನಃ ಕಾಣಿಸಿಕೊಂಡವು. ನಂತರ ಸರಿಯಾದ ಪ್ರಮಾಣದಲ್ಲಿ ಇದನ್ನು ಉಪಯೋಗಿಸಿ ರೋಗಿಯ ಈ ಸಮಸ್ಯೆಯನ್ನು ಸಂಪೂರ್ಣ ಪರಿಹರಿಸಲಾಯಿತು. ಹಾಗೆಯೇ ಡಾ.ಶೆಶ್ಕಿನ್ ಅವರು ಇನ್ನೂ ೫ ರೋಗಿಗಳ ಮೇಲೆ ಇದನ್ನು ಪ್ರಯೋಗ ಮಾಡಿ ಥ್ಯಾಲಿಡೋಮೈಡ್ ಕುಷ್ಠರೋಗದ ಈ ಹಂತದಲ್ಲಿ ರೋಗಿಗಳಿಗೆ ತುಂಬಾ ಸಹಾಯಕ ಎಂಬುದನ್ನು ಸಾಬೀತು ಪಡಿಸಿದರು. ಆ ನಂತರ ಜಗತ್ತಿನ ಹಲವಾರು ತಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಇದನ್ನು ದೃಢೀಕರಿಸಿತು.
ಹಾಗೆಯೇ ೧೯೭೯ ರಲ್ಲಿ ಬೇಸೆಟ್ ಸಿಂಡ್ರೋಮ್ ಕಾಯಿಲೆಯಲ್ಲಿ ಇದನ್ನು ಚಿಕಿತ್ಸೆಯಾಗಿ ಉಪಯೋಗಿಸಬಹುದು ಎಂದು ಕಂಡುಕೊಂಡರು. ಇದರ ಮುಖ್ಯ ಉಪಯೋಗ ನಂತರ ಏಡ್ಸ್ ಸೋಂಕಿತ ರೋಗಿಗಳಲ್ಲಿ ಉಂಟಾಗುವ ಬಾಯಿ ಹುಣ್ಣನ್ನು ( ) ಇದು ಗುಣಮಾಡುತ್ತದೆ ಎಂಬ ಅಂಶ ಗೊತ್ತಾದ ಮೇಲೆ ಇದರ ಮಹತ್ವ ಜಾಸ್ತಿ ಆಯಿತು. ಏಡ್ಸ್ ಕಾಯಿಲೆಯಲ್ಲಿ ಇದರ ಮಹತ್ವ ಗೊತ್ತಾದಾಗ ಥ್ಯಾಲಿಡೋಮೈಡ್ ಓಪನ್ ಆಗಿ ಲಭ್ಯವಿಲ್ಲದಿದ್ದುದರಿಂದ ಅದ ಕ್ಕೊಂದು ಭೂಗತ ಬ್ಲಾಕ್ ಮಾರ್ಕೆಟ್ ಉಂಟಾಗಿ ದಕ್ಷಿಣ ಅಮೆರಿಕದಿಂದ ಅಮೆರಿಕ ಪ್ರವೇಶಿಸತೊಡಗಿತು. ಆಗ ಅಮೆರಿಕದ ಊಈಅ ಅನಿವಾರ್ಯವಾಗಿ ಇದನ್ನು ಕುಷ್ಠರೋಗ ಮತ್ತು ಏಡ್ಸ್ ರೋಗಗಳಲ್ಲಿ ಉಪಯೋಗಿಸಬಹುದು ಎಂದು ೧೯೯೮ರಲ್ಲಿ ಅನುಮತಿ ಕೊಟ್ಟಿತು.
ಮುಖ್ಯ ಅಂಶ ಎಂದರೆ ಮಕ್ಕಳನ್ನು ಹೆರುವ ವಯಸ್ಸಿನ ಮಹಿಳೆಯರು ಇದರಿಂದ ದೂರವಿದ್ದು ಇದನ್ನು ಉಪಯೋಗಿಸುವ ಅನಿವಾರ್ಯ ಬಂದರೆ ಗರ್ಭಿಣಿ ಆಗುವು ದನ್ನು ತಪ್ಪಿಸಿಕೊಳ್ಳಬೇಕು. ಥ್ಯಾಲಿಡೋಮೈಡ್ ಹಲವು ಕಾಯಿಲೆಗಳಲ್ಲಿ ಕಂಡುಬರುವ ಉರಿಯೂತ () ವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಫ್ಯಾಕ್ಟರ್ಆಲಾ ಎಂಬ ಪ್ರೋಟೀನ್ ಉತ್ಪಾದನೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಹೀಗಾಗಿ ಮುಖ್ಯವಾಗಿ ಉರಿಯೂತ ಉಂಟು ಮಾಡುವ ಕಾಯಿಲೆಗಳಾದ ರುಮಟಾಯಿಡ್ ಆರ್ತರೈಟಿಸ್ , ಕ್ರಾನ್ಸ್ ಕಾಯಿಲೆ ಹಾಗೂ ಲೆಪ್ರೋಮ್ಯಾಟಸ್ ಎಂಬ ಒಂದು ಬಗೆಯ ಕುಷ್ಠರೋಗಕ್ಕೆ ಪರಿಣಾಮಕಾರಿ ಔಷಧ ವಾಗಿ ಇದನ್ನು ಉಪಯೋಗಿಸಬಹುದು ಎಂಬ ಅಂಶವನ್ನು ಕಂಡುಕೊಳ್ಳಲಾಗಿದೆ.
ದೇಹದಲ್ಲಿ ವಿವಿಧ ಕಾರಣಗಳಿಂದ ಉತ್ಪತ್ತಿಯಾಗುವ ಹೊಸ ರೀತಿಯ ರಕ್ತನಾಳಗಳ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಕ್ಯಾನ್ಸರ್‌ನ ವಿವಿಧ ಗಡ್ಡೆಗಳು ಬೆಳೆಯಲು ಮತ್ತು ದೇಹದ ವಿವಿಧ ಭಾಗಗಳಲ್ಲಿ ಹರಡಲು ಈ ರೀತಿಯ ಹೊಸ ರಕ್ತ ನಾಳಗಳು ಹುಟ್ಟಿಕೊಳ್ಳುವುದು, ಹರಡುವುದು ಅನಿವಾರ್ಯ. ಈ ಮುಖ್ಯ ಗುಣದಿಂದ ಹಲವು ರೀತಿಯ ಕ್ಯಾನ್ಸರ್ ಮತ್ತು ಏಡ್ಸ್ ನ ಚಿಕಿತ್ಸೆಗೆ ಇದು ಉಪಯೋಗವಾಗುತ್ತಿದೆ.
ಮತ್ತೊಂದು ಮುಖ್ಯ ಗುಣವೆಂದರೆ ಮಯಲೋಮ ಜೀವಕೋಶಗಳು ಉತ್ಪತ್ತಿಯಾಗುವುದನ್ನು ಹಾಗೂ ಅವು ಅಸ್ಥಿಮಜ್ಜೆ ( ) ಗೆ ಹೋಗಿ ಅಂಟಿ ಕೊಳ್ಳುವುದನ್ನು ತಡೆಯುತ್ತದೆ. ಹಾಗಾಗಿ ರಕ್ತದ ಜೀವಕೋಶಗಳಲ್ಲಿ ಕಂಡು ಬರುವ ತೀವ್ರ ರೀತಿಯ ಕ್ಯಾನ್ಸರ್ ಕಾಯಿಲೆ – ಮಲ್ಟಿಪಲ್ ಮಯಲೋಮಾ ಕಾಯಿಲೆ ಯಲ್ಲಿ ಬಹಳವಾಗಿ ಉಪಯೋಗವಾಗುತ್ತಿದೆ. ದೇಹದಲ್ಲಿರುವ ಕ್ಯಾಬೆಕ್ಟಿನ್ ಎಂಬ ವಸ್ತುವಿನ ಪ್ರಮಾಣವನ್ನು ಇದು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕ್ಯಾಬೆಕ್ಟಿನ್ ಎಂದರೆ ದೇಹದಲ್ಲಿ ಸಾಮಾನ್ಯವಾಗಿರುವ ರಾಸಾಯನಿಕ. ಇದನ್ನು ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ () ಎಂದೂ ಕರೆಯುತ್ತಾರೆ. ಇದು ಬಿಳಿ ರಕ್ತ ಕಣಗಳಿಂದ ಸ್ರವಿಸಲ್ಪಡುತ್ತದೆ.
ಹೊರಗಿನಿಂದ ದೇಹದೊಳಗೆ ಆಕ್ರಮಣ ಮಾಡುವ ಕ್ರಿಮಿಗಳ ಜತೆಗೆ ಇದು ಹೋರಾಡುತ್ತದೆ. ಸೋಂಕಿನ ಪ್ರಮಾಣಕ್ಕೆ ಅನುಗುಣವಾಗಿ ವಿವಿಧ ಕಾಯಿಲೆಗಳಾದ ಕ್ಷಯ, ತೀವ್ರ ಸೋಂಕು ಅಥವಾ ಸೆಪ್ಸಿಸ್, ಕ್ಯಾನ್ಸರ್ ಮತ್ತು ಏಡ್ಸ್‌ಗಳಲ್ಲಿ ಕ್ಯಾಬೆಕ್ಟಿನ್ ಕಡಿಮೆ ಮಾಡುವುದರಿಂದ-ಥ್ಯಾಲಿಡೋಮೈಡ್ ಮೇಲಿನ ಕಾಯಿಲೆಗಳಲ್ಲಿ ಉಪಯೋಗವಾಗುತ್ತದೆ.
ಥ್ಯಾಲಿಡೋಮೈಡ್ ಔಷಧವಾಗಿ ಉಪಯೋಗಕ್ಕೆ ಬರುವ ಕಾಯಿಲೆಗಳು:ಚರ್ಮದ ಕಾಯಿಲೆಗಳು:ಸಾರ್ಕೊಯಿಡೋ ಸಿಸ್, ಲೂಪಸ್ ಕಾಯಿಲೆ, ಬೇಸಟ್ಸಿಂಡ್ರೋಮ, ಲೆಪ್ರೋಮ್ಯಾಟಿಸ್ ಕುಷ್ಠರೋಗ.
ಸಂಧಿವಾತ ಕಾಯಿಲೆಗಳು:ರುಮಟಾಯಿಡ್ ಆರ್ತರೈಟಿಸ್, ಆಂಕಲೋಸಿಂಗ್ ಸ್ಪಾಂಡಿಲೇಟಿಸ್, ಸ್ಟಿಲ್ ಕಾಯಿಲೆ, ಸೋಜರ್ನ್ ಸಿಂಡ್ರೋಮ.
ಕ್ರಾನ್ ಕಾಯಿಲೆ :ಇತರ ಔಷಧಗಳ ಜತೆಗೆ ಸೇರಿ, ಹೊಟ್ಟೆ ಮತ್ತು ಕರುಳಿನ ಭಾಗದ ಕಾಯಿಲೆಗಳಲ್ಲಿ
ಏಡ್ಸ್ ಮತ್ತು ಎಚ್‌ಐವಿ:ದೇಹದ ಪ್ರತಿರೋಧ ಶಕ್ತಿಯನ್ನು ಕುಂಠಿತಗೊಳಿಸುವ ಕಾಯಿಲೆಯಾದ ಏಡ್ಸ್ ನಲ್ಲಿ ಕಂಡು ಬರುವ ಬಾಯಿ ಮತ್ತು ಗಂಟಲಿನ ಭಾಗದ ಅಲ್ಸರ್ ಚಿಕಿತ್ಸೆಯಲ್ಲಿ, ಈ ಕಾಯಿಲೆಯಲ್ಲಿ ಕಂಡು ಬರುವ ಒಂದು ರೀತಿಯ ಕ್ಯಾನ್ಸರ್- ಕ್ಯಾಪೋಸಿಯಾ ಸಾರ್ಕೋಮಾ ಹಾಗೂ ಕಾಯಿಲೆಯ ತೀವ್ರ ರೀತಿ ಮತ್ತು ಅಂತಿಮ ಹಂತದಲ್ಲಿ ಉಂಟಾಗುವ ತೂಕ ಕಡಿಮೆಯಾಗುವುದು ಮತ್ತು ನಿಶ್ಯಕ್ತಿ – ಈ ಗುಣಲಕ್ಷಣದಲ್ಲೂ ಇದು ಉಪಯೋಗವಾಗುತ್ತದೆ.
ವಿವಿಧ ಕ್ಯಾನ್ಸರ್‌ಗಳು:ಮೂತ್ರಪಿಂಡದ () ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್ ಗಡ್ಡೆಗಳು, ಮೆಲನೋಮಾ, ಮಯಲೋಫೈಬ್ರೋಸಿಸ್, ರಕ್ತದ ಕ್ಯಾನ್ಸರ್ (ಪ್ಲಾಸ್ಮಾ ಸೆಲ್ ಲ್ಯುಕೀಮಿಯಾ), ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಸ್ತನದ ಕ್ಯಾನ್ಸರ್.
ಮುಖ್ಯವಾದ ಮುನ್ನೆಚ್ಚರಿಕಾ ಕ್ರಮ ಎಂದರೆ – ಗರ್ಭ ಧರಿಸಿವ ವಯಸ್ಸಿನ ಮಹಿಳೆಯರು ಇದನ್ನು ಉಪಯೋಗಿಸಬಾರದು. ಹಾಗೊಮ್ಮೆ ಉಪಯೋಗಿಸುವ ಸಂದರ್ಭ ಬಂದರೂ ತಾತ್ಕಾಲಿಕವಾಗಿ ಗರ್ಭಧರಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪುರುಷರು ಸಹಿತ ಕಾಂಡಮ್ ಧರಿಸಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು.
ಇನ್ನು ಥ್ಯಾಲಿಡೋಮೈಡ್ ಉಪಯೋಗದಿಂದ ಉಂಟಾಗುವ ಅಡ್ಡ ಪರಿಣಾಮಗಳು ಹಲವು. ದೀರ್ಘ ಅವಧಿಯ ಉಪಯೋಗದಿಂದ ನರಗಳ ನಿಷ್ಕ್ರಿಯತೆ –ಫೆರಿಫೆರಲ್ನ್ಯೂರೋಪತಿ ಬರಬಹುದು. ಗಂಭೀರವಲ್ಲದ ಇತರ ಪರಿಣಾಮಗಳೆಂದರೆ ನಿದ್ದೆಯ ಮಂಪರು, ಚರ್ಮದ ಮೇಲಿನ ದದ್ದುಗಳು (), ತಲೆ ತಿರುಗುವುದು, ಮಲಬದ್ಧತೆ, ತಲೆನೋವು, ಬಾಯಿ ಒಣಗುವುದು, ಬಾಯಿ ಹುಳಿ ಹುಳಿಯಾಗುವುದು – ಇತ್ಯಾದಿ.
ಥ್ಯಾಲಿಡೋಮೈಡ್ ರೀತಿಯಲ್ಲಿಯೇ ಹಲವು ಕಾಯಿಲೆಗಳಲ್ಲಿ ಕೆಲಸ ಮಾಡುವ ಆ ಔಷಧದ ಅಡ್ಡ ಪರಿಣಾಮಗಳಿಲ್ಲದ ಔಷಧಗಳನ್ನು ಥ್ಯಾಲಿಡೋಮೈಡ್ ಅನ ಲಾಗ್ಸ್‌ಗಳನ್ನು ವಿಜ್ಞಾನಿಗಳು ಶೋಧಿಸಿದ್ದಾರೆ. ಈ ಅನಲಾಗ್ಸ್ ಗಳಲ್ಲಿ ಮುಖ್ಯವಾಗಿ ಲಿನಲಿಡೋಮೈಡ್ ಮತ್ತು ಪೊಮಲಿಡೋಮೈಡ್ ಔಷಧಗಳು. ಇವುಗಳು ಥ್ಯಾಲಿಡೋಮೈಡ್ ಹಾಗೆಯೇ ಉರಿಯೂತದ ವಿರುದ್ಧ ಕೆಲಸ ಮಾಡುವ ಹಾಗೂ ದೇಹದ ಪ್ರತಿರೋಧ ಶಕ್ತಿಯನ್ನು ವೃದ್ಧೀಕರಿಸುವ ಗುಣವನ್ನು ಹೊಂದಿವೆ.
ಇವುಗಳು ಮುಖ್ಯವಾಗಿ ಮಲ್ಟಿಪಲ್ ಮಯಲೋಮ, ಮೇದೋಜೀರಕ ಗ್ರಂಥಿ (), ಪ್ರಾಸ್ಟೇಟ್ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗಳಲ್ಲಿ ಉಪಯೋಗಿಸ ಲಾಗುತ್ತದೆ. ಹಾಗೆಯೇ ವಿವಿಧ ಅಂಗಗಳ ಕಸಿ ಮಾಡುವಾಗಲೂ ಕಸಿ ಮಾಡಿದ ಅಂಗವನ್ನು ದೇಹವು ತ್ಯಜಿಸಿಬಾರದೆಂದು ಇದನ್ನು ಉಪಯೋಗಿಸಲಾಗುತ್ತದೆ. ಇತ್ತೀಚೆಗೆ ಇದನ್ನು ಪಶ್ಚಿಮ ಜಗತ್ತಿನ ದೇಶಗಳಲ್ಲಿ ಹೆಚ್ಚು ಕಂಡು ಬರುವ ನರವ್ಯೂಹದ ಕಾಯಿಲೆ – ಮಲ್ಟಿಪಲ್ ಸ್ಕ್ಲೆರೋಸಿಸ್ ಸಹಿತ ಉಪಯೋಗಿಸಲಾಗುತ್ತಿದೆ.
ಹಾಗೂ ಇನ್ನೂ ಹಲವು ಆಟೋ ಇಮ್ಯೂನ್ ಕಾಯಿಲೆಗಳಲ್ಲಿ ಈಗ ಇದನ್ನು ಉಪಯೋಗಿಸಲಾಗುತ್ತಿದೆ. ಒಮ್ಮೆ ಜನಪ್ರಿಯಗೊಂಡು ತನ್ನ ಯಾವುದೋ ಒಂದು ರೀತಿಯ ಅವಗುಣದಿಂದ ಕುಖ್ಯಾತಿಗೆ ಒಳಗಾಗಿ ಈ ಥ್ಯಾಲಿಡೋಮೈಡ್ ಔಷಧ ಮೂಲೆ ಸೇರಿತ್ತು. ಆದರೆ ಅದರಲ್ಲಿರುವ ಇತರ ಒಳ್ಳೆಯ ಗುಣಗಳನ್ನು ಪುನಃ ಶೋಧಿಸಿ ಹಲವಾರು ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಈಗ ಬಳಸಲಾಗುತ್ತಿದೆ.
ಅವಗಣನೆಗೆ ಒಳಗಾಗಿದ್ದರೂ ಅದರಲ್ಲಿ ಉತ್ಸಾಹ ಕಳೆದುಕೊಳ್ಳದೆ, ಔಷಧದ ಒಳ್ಳೆಯ ಮುಖವನ್ನು ಪರಿಚಯಿಸಿದ ಶ್ರೇಯಸ್ಸು – ಆ ಬಗ್ಗೆ ಸಂಶೋಧನೆಗೆತೊಡಗಿದ ವೈದ್ಯರಿಗೆ, ವಿeನಿಗಳಿಗೆ ಸಲ್ಲಬೇಕು. ಸಮಾಜದ ಅವಗಣನೆಗೆ ಒಳಗಾದ ವ್ಯಕ್ತಿಗಳಲ್ಲಿಯೂ ಅವರ ಇನ್ನೊಂದು ಮುಖ ಸಮಾಜಮುಖಿಯಾದಒಳ್ಳೆಯ ಗುಣಗಳನ್ನು ಹೊಂದಿರುವ ಸಾಧ್ಯತೆ ಇರುತ್ತದೆ – ಎಂಬ ತತ್ವವನ್ನು ಇದು ಪ್ರತಿಪಾದಿಸುವುದಿಲ್ಲವೇ ?