ರಕ್ಷಣಾ ಉತ್ಪಾದನೆಯಲ್ಲಿ ಹೊಸ ಯುಗ ಪ್ರಾರಂಭ
ಕೋವಿಡ್ ಬಿಕ್ಕಟ್ಟು ಮತ್ತು ಆರ್ಥಿಕ ಮುಗ್ಗಟ್ಟಿನ ನಡುವೆಯೂ ರಕ್ಷಣೆ ಮತ್ತು ದೇಶ ನೀತಿ ಕುರಿತಂತೆ ಕೇಂದ್ರ ಸರಕಾರ ಸಾಕಷ್ಟು  ರದೃಷ್ಟಿಯ ಹೆಜ್ಜೆ ಇಟ್ಟಿದೆ. ಚೀನಾದಂತಹ ಪ್ರಬಲ ಶತ್ರುನ ಕಡೆಯಿಂದ ಎದುರಾಗುತ್ತಿರುವ ಬೆದರಿಕೆಗೆ ಕೇವಲ ಹೇಳಿಕೆ ಗಳಿಂದ ಜವಾಬು ಕೊಡುವ ಹಿಂದಿನ ಸರಕಾರಗಳ ನೀತಿಗೆ ವಿರುದ್ಧವಾಗಿ ದೀರ್ಘಕಾಲದ ಯೋಜನೆಗಳನ್ನೊಳಗೊಂಡ ನೀಲ ನಕ್ಷೆ ಪ್ರಸ್ತುತಪಡಿಸುವ ಮೂಲಕ ಕೇಂದ್ರ ಸರಕಾರ ದೇಶದ ಸುರಕ್ಷತೆಯ ಕುರಿತು ತನ್ನ ಬದ್ಧತೆ ಪ್ರದರ್ಶಿ ಸಿದೆ.
ಸಾಮಾನ್ಯ ಜನರ ನಿತ್ಯ ಬದುಕಿನೊಂದಿಗೆ ನೇರ ಸಂಬಂಧರದ ರಕ್ಷಣೆಗೆ ಸಂಬಂಧಿಸಿದ ಇಂತಹ ವಿಷಯವನ್ನು ಸರಕಾರವೊಂದು ಸುನಿಯೋಜಿತ ರೀತಿಯಲ್ಲಿ ಎದುರಿಸುತ್ತಿರುವು ದರ ಕುರಿತು ಸಾರ್ವಜನಿಕರು ಅರಿತುಕೊಳ್ಳಬೇಕು. ಆರ್ಡಿನೆನ್ಸ್ ಫಾಕ್ಟರಿ ಬೋರ್ಡ ವಿಸರ್ಜಿ ಸುವ ಮತ್ತು ಹೊಸ ವ್ಯವಸ್ಥೆ ಜಾರಿಗೆ ತರುವ ಮಹತ್ವ ಪೂರ್ಣ ನಿರ್ಣಯ ಇದಕ್ಕೊಂದು ಉತ್ತಮ ನಿದರ್ಶನ.
‘ಸಬ್ ಚಲ್ತಾ ಹೈ’ ಎನ್ನುವ ಧೋರಣೆಯನ್ನು ರೂಢಿಸಿಕೊಂಡು ಬದಲಾದ ಕಾಲ ಮತ್ತು ಅಗತ್ಯಕ್ಕೆ ಹೊಂದಿಕೊಳ್ಳದ ಎರಡು ಶತಮಾನದ ಇತಿಹಾಸ ಹೊಂದಿದ ಆರ್ಡಿನೆನ್ಸ್ ಫ್ಯಾಕ್ಟರಿಗಳಿಗೆ ಇತ್ತೀಚೆಗೆ ವಿಜಯ ದಶಮಿ ಶುಭ ಮುಹೂರ್ತದಲ್ಲಿ ವಿದಾಯ ಹೇಳಲಾ ಯಿತು. ಏಳು ಹೊಸ ಸಾರ್ವಜನಿಕ ರಂಗದ ರಕ್ಷಣಾ ಉತ್ಪಾದನಾ ಯುನಿಟ್‌ಗಳನ್ನು (ಡಿಪಿಎಸ್‌ಯು) ರಚಿಸಿ ಅವುಗಳಲ್ಲಿ ಆರ್ಡಿನೆನ್ಸ್ ಫ್ಯಾಕ್ಟರಿಗಳನ್ನು ವಿಲೀನಗೊಳಿಸಲಾಗಿದೆ.
ನೌಕರರ ಸೇವೆ, ವೇತನ ಮತ್ತಿತರ ಸೌಲಭ್ಯಗಳ ವ್ಯತ್ಯಯವಾಗದಂತೆ ಮುಂದುವರಿಸುವ ಮೂಲಕ ನೌಕರರ ಅಸಂತೋಷವನ್ನು ತಡೆಯುವ ಪ್ರಯತ್ನ ಮಾಡಲಾಗಿದೆ. ಕೋಲ್ಕತ್ತಾದಲ್ಲಿ ಮುಖ್ಯಾಲಯ ಹೊಂದಿದ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ ಅಧೀನದಲ್ಲಿ ದೇಶದಾದ್ಯಂತ ೪೧ ಫ್ಯಾಕ್ಟರಿಗಳನ್ನು ಹೊಂದಿ ದ್ದು ಸುಮಾರು ೭೦೦೦೦ ಉದ್ಯೋಗಿಗಳು ಸರಕಾರಿ ಕೆಂಪು ಪಟ್ಟಿಯಡಿ, ಕಾರ್ಮಿಕ ಯೂನಿಯನ್‌ಗಳ ಆಶ್ರಯದಲ್ಲಿ ಸುಧಾರಣೆಗಳನ್ನು ವಿರೋಧಿಸುತ್ತಾ ಬ್ರಿಟಿಷ ರಾಜ್‌ನ ಪಳೆಯುಳಿಕೆಗಳಾಗಿ ಸರಕಾರದ ಪಾಲಿಗೆ ಬಿಳಿಯಾನೆಗಳೇ ಆಗಿದ್ದವು.
ಕಳೆದ ೧೫-೨೦ ವರ್ಷಗಳಿಂದ ಇವುಗಳ ಕಾಯಕಲ್ಪ ಸರಕಾರದ ಕಾರ್ಯಸೂಚಿಯಲ್ಲಿ ಇದ್ದುದರಿಂದ ಇದೊಂದು ಬಹು ನಿರೀಕ್ಷಿತ ಬೆಳವಣಿಗೆಯೇ ಎನ್ನಬಹುದು. ಬ್ರಿಟಿಷರ ಕಾಲದಲ್ಲಿ ಪ್ರಾರಂಭಿಸಲಾಗಿದ್ದ ಕೋಲ್ಕತ್ತಾದ ಹೂಗ್ಲಿ ನದಿಯ ದಡದಲ್ಲಿದ್ದ ಆಯುಧ ಭವನ ಇನ್ನೂ ವಸಾಹತುಶಾಹಿ ಜಮಾನದ ಕಾರ್ಯಸಂಸ್ಕೃತಿಯಲ್ಲಿಯೇ ಸಮಯದ ಬೇಡಿಕೆಗೆ ಹೊಂದಿಕೊಳ್ಳದೇ ಕಳಪೆ ಪ್ರದರ್ಶನ ತೋರುತ್ತಾ, ನಿರಂಕುಶ-ಗಜಗಮನೆಯಾಗಿ ಜಡ್ಡುಗಟ್ಟಿದ ಸ್ಥಿತಿಯಲ್ಲಿ ವ್ಯವಸ್ಥೆಗೆ ಸೆಡ್ಡು ಹೊಡೆದು, ಸರಕಾರಕ್ಕೆ ಸವಾಲಾಗಿ ಕಾಡುತ್ತಲೇ ಬಂದಿತ್ತು.
ಫ್ಯಾಕ್ಟರಿಗಳ ಜನರಲ್ ಮ್ಯಾನೇಜರ್‌ಗಳು ಬ್ರಿಟಿಷ್ ಜಮಾನದಲ್ಲಿ ಸ್ಥಾಪಿತವಾಗಿದ್ದ ದೊಡ್ಡ ಬಂಗಲೆಗಳಲ್ಲಿ, ಆಳು-ಕಾಳುಗಳ ಸವಲತ್ತು ಗಳನ್ನು ಭೋಗಿಸುತ್ತಾ ರಾಜಠೀಯಿಂದ ಇದ್ದರೆ, ಉದ್ಯೋಗಿಗಳೋ ಸರಕಾರದ, ರಕ್ಷಣಾ ಪಡೆಗಳ ಅಪೇಕ್ಷೆ-ಆಶಯಗಳಿಗೆ ಸ್ಪಂದಿಸದೇ ತಮ್ಮ ಲೇಟ್ ಲತೀಫ್ ಸಂಸ್ಕೃತಿಯಲ್ಲೇ ಮುಳುಗಿದ್ದವು. ಮುಷ್ಕರ- ಉಡಾಫೆಗೆ ಹೆಸರಾದ ನೌಕರರು ತಮ್ಮನ್ನು ಕಿತ್ತು ಹಾಕುವುದು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ದಾಷ್ಟ್ಯ ತೋರುತ್ತಾ ಸರಕಾರದ ಸಂಪನ್ಮೂಲದ ಅಪವ್ಯಯಕ್ಕೆ ಕಾರಣರಾಗಿ ದ್ದರು.
ನೌಕರಿ ಶಾಹಿಯ ಬಿಗಿ ಹಿಡಿತದಲ್ಲಿ, ಓಬೀರಾಯನ ಕಾಲದ ಹಳೆಯ ಯಂತ್ರ- ತಂತ್ರಜ್ಞಾನದಲ್ಲಿಯೇ ತೆವಳುತ್ತಾ ಸಾಗುತ್ತಾ, ಸಂಶೋಧನೆ ಸುಧಾರಣೆಗೆ ತೆರೆದು ಕೊಳ್ಳದೇ ಕೂಪಮಂಡೂಕಗಳಂತೆ ನಡೆದದ್ದೇ ದಾರಿ ಎನ್ನುವಂತಿದ್ದವು. ಶಿಸ್ತು, ವಿಧೇಯತೆಯ ಕಾರ್ಯಸಂಸ್ಕೃತಿಯ ಸಮವಸ್ತ್ರಧಾರಿ ಸೈನಿಕರು ಕೆಲವೊಮ್ಮೆ ಇವರೊಂದಿಗೆ ಕಾರ್ಯನಿರ್ವಸಬೇಕಾದ ಸ್ಥಿತಿಯ ಲ್ಲಿ ಆರ್ಡಿನೆನ್ಸ್ಫ್ಯಾಕ್ಟರಿಗಳ ನೌಕರರು ತೋರುತ್ತಿದ್ದ ಅಸಡ್ಡೆ, ದರ್ಪ ಸಸಿಕೊಳ್ಳಬೇಕಾಗುತ್ತಿತ್ತು. ಸೇನೆಯ ಉನ್ನತ ಅಧಿಕಾರಿಗಳ ಸಲಹೆ- ಸೂಚನೆ ಗಳಿಗೂ ಕ್ಯಾರೇ ಎನ್ನದೇ ಅನಿಯಂತ್ರಿತರಾಗಿದ್ದರು.
ಓರ್ವ ಸಾಮಾನ್ಯ ಉದ್ಯೋಗಿಯ ಮೇಲೂ ಕ್ರಮಕೈಗೊಳ್ಳಲಾಗದ ಆಡಳಿತ ವರ್ಗದ ಅಸಹಾಯಕತೆ, ಕಾರ್ಮಿಕ ಯೂನಿಯನ್‌ ಗಳ ಬಿಗಿ ಹಿಡಿತ ನೌಕರರ ಅದಕ್ಷತೆಗೆ ಕುಮ್ಮಕ್ಕು ನೀಡುವಂತ್ತಿತ್ತು. ಬ್ರಿಟಿಷರ ಕಾಲದಲ್ಲಿ ದೇಶದ ರಕ್ಷಣಾ ಅವಶ್ಯಕತೆಗಳನ್ನು ಪೂರೈಸುತ್ತಿದ್ದ ಹೆಮ್ಮೆಯ ಫ್ಯಾಕ್ಟರಿಗಳು ಇತ್ತೀಚೆಗೆ ಅನುಪಯುಕ್ತ, ಅಪ್ರಸ್ತುತ ವೆನಿಸಲು ಉದ್ಯೋಗಿಗಳ ಉದಾಸೀನತೆ ಮತ್ತು ಜಾಗತೀಕರಣದ ಬದಲಾವಣೆಗೆ ಒಗ್ಗಿಕೊಳ್ಳಲು ಫಲವಾದುದೇ ಪ್ರಮುಖ ಕಾರಣ ಎನ್ನಬಹುದು. ಈ ಹಿಂದೆ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್‌ನೊಂದಿಗೆ ಮಾಡಿಕೊಂಡಿದ್ದ ಸೇನೆ, ಅರೆಸೇನೆ ಮತ್ತು ಪೋಲಿಸ್ ಪಡೆಗಳ ಅವಶ್ಯಕತೆಗೆ ಸಂಬಂಧಿಸಿದ ಸುಮಾರು ರು.೬೫೦೦೦ ಕೋಟಿ ಮೊತ್ತದ ಉತ್ಪನ್ನಗಳ ಪೂರೈಕೆಯ ಒಡಂಬಡಿಕೆಯನ್ನು ಹೊಸದಾಗಿ ರಚಿಸಲಾದ ಏಳು ಡಿಫೆನ್ಸ್ ಪಬ್ಲಿಕ್ ಸೆಕ್ಟರ್ ಯುನಿಟ್‌ಗಳಿಗೆ ನೀಡುವ ಮೂಲಕ ಸರಕಾರ ಹೊಸ ವ್ಯವಸ್ಥೆಯ ಸುಧಾರಣೆಯ ಬದ್ಧತೆ ತೋರಿದೆ.
ಹಳೆ ಮದ್ಯ ಹೊಸ ಬಾಟಲಿ ಎಂಬಂತೆ ಅದೇ ನೌಕರರೇ ಹೊಸದಾಗಿ ರಚಿಸಲ್ಪಟ್ಟ ಏಳು ಯುನಿಟ್‌ಗಳಲ್ಲಿ ಕಾರ್ಯ ನಿರ್ವಸುವು ದರಿಂದ ಸರಕಾರ ಮತ್ತು ರಕ್ಷಣಾ ಪಡೆಗಳ ಆಶಯಕ್ಕೆ ಅವರು ಹೇಗೆ ಸ್ಪಂದಿಸುತ್ತಾರೆ, ಆಧುನಿಕ ಕಾರ್ಪೋರೇಟ್ ವ್ಯವಸ್ಥೆಯಸ್ಪರ್ದಾತ್ಮತೆಗೆ ಎಷ್ಟರ ಮಟ್ಟಿಗೆ ಹೊಂದಿಕೊಳ್ಳುವರು ಎನ್ನುವುದರ ಮೇಲೆ ಹೊಸ ವ್ಯವಸ್ಥೆಯ ಯಶಸ್ಸು ನಿರ್ಧಾರವಾಗಲಿದೆ.-ಬೈಂದೂರು ಚಂದ್ರಶೇಖರ ನಾವಡ