ಬ್ರಿಟಿಷರು ನಿರ್ಮಿಸಿದ ಮಹಾನ್ ಮುಳ್ಳುಬೇಲಿ !
ಶಶಾಂಕಣ
ಶಶಿಧರ ಹಾಲಾಡಿ
.@.
ಎ.ಓ.ಹ್ಯೂಮ್ ಬ್ರಿಟಿಷ್ ಸರಕಾರದ ಪ್ರಮುಖ ಅಧಿಕಾರಿಯಾಗಿ ಮಾಡಿದ ಘನಕಾರ್ಯ ‘ಭಾರತದ ಮಹಾನ್ ಮುಳ್ಳುಬೇಲಿ!’ ಸುಂಕ ಸಂಗ್ರಹಿಸಲು ನಿರ್ಮಾಣ ಗೊಂಡ ಈ ಬೇಲಿಯು ಬ್ರಿಟಿಷ್ ರಾಜ್ ಕೈಗೊಂಡ ಅತಿ ಅಸಹ್ಯಕಾರಿ ಮತ್ತು ಕ್ರೂರ ಯೋಜನೆ’.
ಎ.ಓ.ಹ್ಯೂಮ್ ಎಂಬ ಮಹಾಶಯನ ಕುರಿತು ನೀವು ಕೇಳಿರಬಹುದು. ಬ್ರಿಟಿಷ್ ಸರಕಾರದಲ್ಲಿ ಐಸಿಎಸ್ ಸಮಾನ ಹುದ್ದೆಯ ಅಧಿಕಾರಿಯಾಗಿದ್ದ ಈತನ ಪ್ರಮುಖಹವ್ಯಾಸವೆಂದರೆ ಪಕ್ಷಿವೀಕ್ಷಣೆ ಮತ್ತು ಸಸ್ಯಗಳ ಅಧ್ಯಯನ. ಸೇವೆಯಲ್ಲಿದ್ದಷ್ಟೂ ಕಾಲ, ಇಲ್ಲಿನ ಪಕ್ಷಿಗಳನ್ನು ಸಂಗ್ರಹಿಸಿ, ಪ್ರಥಮ ಬಾರಿಗೆ ಅಧ್ಯಯನಕ್ಕೆ ಒಳಪಡಿಸಿ, ನಮ್ಮ ದೇಶದಲ್ಲಿ ಪಕ್ಷಿವೀಕ್ಷಣೆಗೆ ತಳಪಾಯವನ್ನು ನಿರ್ಮಿಸಿದ.
ಇದರ ಜತೆಯಲ್ಲೇ, ನಮ್ಮ ದೇಶದ ಸಸ್ಯಗಳನ್ನು ಪಟ್ಟಿಮಾಡುವಲ್ಲೂ ಈತನ ಕೊಡುಗೆ ಇದೆ. ಆದರೆ ಈತ ನಮಗೆಲ್ಲಾ ಹೆಚ್ಚು ಪರಿಚಿತನಾಗಿರುವುದು ಕಾಂಗ್ರೆಸ್ ಪಕ್ಷದ ಜನಕನಾಗಿ. ಬ್ರಿಟಿಷ್ ವೈಸ್ ರಾಯ್ ಸಹಮತ ದಿಂದ,1885ರಲ್ಲಿ ಈತ ಸ್ಥಾಪಿ ಸಿದ ಕಾಂಗ್ರೆಸ್ ಪಕ್ಷದಲ್ಲಿ ಮೊದಲು ಸೇರ್ಪಡೆ ಗೊಂಡವರು ಅಂದಿನ ವಿದ್ಯಾವಂತರು, ಬುದ್ಧಿ ಜೀವಿಗಳು ಮತ್ತು ಸ್ಥಿತಿವಂತರು. ಆತ ಸ್ಥಾಪಿಸಿದ ಆ ಪಕ್ಷ ಇಂದಿಗೂ ನಮ್ಮ ದೇಶದಲ್ಲಿ ಸಕ್ರಿಯವಾಗಿರುವುದು ವಿಶೇಷ. ಎ.ಓ.ಹ್ಯೂಮ್‌ನು ಬ್ರಿಟಿಷ್ ಸರಕಾರದ ಪ್ರಮುಖ ಅಧಿಕಾರಿಯಾಗಿ ಮಾಡಿದ ಮತ್ತೊಂದು ಘನಕಾರ್ಯವಿದೆ. ಅದೇ ‘ಭಾರತದ ಮಹಾನ್ ಮುಳ್ಳುಬೇಲಿ!’ (  ).
1867-70ರ ಅವಧಿಯಲ್ಲಿ ಈತನು ಅಂತರ್ದೇಶೀಯ ಸುಂಕದ ಅಧೀಕ್ಷಕನಾಗಿದ್ದಾಗ (ಇನ್‌ಲ್ಯಾಂಡ್ ಕಸ್ಟಂಸ್ ಕಮಿಷನರ್), ಸುಂಕ ಸಂಗ್ರಹಿಸುವ ವ್ಯವಸ್ಥೆ ಯನ್ನು ಬಲಪಡಿಸಲು, ಇಂತಹದೊಂದು ಮಹಾನ್ ಮುಳ್ಳು ಬೇಲಿಯನ್ನು ಬೆಳೆಸುವ ಯೋಜನೆಯನ್ನು ರೂಪಿಸಿ, ಯಶಸ್ವಿ ಯಾಗಿ ಜಾರಿಗೆ ತಂದ. ಆ ಬೇಲಿಯ ಮುಖ್ಯ ಉದ್ದೇಶವೆಂದರೆ, ಗುಜರಾತ್ ಪ್ರಾಂತ್ಯದಿಂದ ಉತ್ತರ ಭಾರತದ ಪ್ರಾಂತ್ಯಗಳಿಗೆ ಸಾಗಣೆಗೊಳ್ಳುತ್ತಿದ್ದ ಉಪ್ಪಿನ ಮೇಲೆ ಸುಂಕ ವಸೂಲು ಮಾಡುವುದು. ಉಪ್ಪಿನ ಮೇಲಿನ ಸುಂಕವು ಬ್ರಿಟಿಷರ ಪ್ರಮುಖ ಆದಾಯಮೂಲ ಗಳಲ್ಲಿ ಒಂದಾಗಿತ್ತು.
1860ರ ದಶಕದ ಮಧ್ಯಭಾಗದಲ್ಲಿ ಉತ್ತರ ಭಾರತದ ಆಗ್ರಾವನ್ನು ಬಳಸಿ ಸಾಗುವ ಸುಮಾರು 180 ಮೈಲಿ ಉದ್ದದ ಒಣ ಮುಳ್ಳು ಬೇಲಿಯನ್ನು ಬ್ರಿಟಿಷರು ನಿರ್ಮಿಸಿ, ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಿದ್ದರು. ಆದರೆ ಪ್ರತಿವರ್ಷ ಈ ಒಣಮುಳ್ಳುಗಳ ರಾಶಿಯಲ್ಲಿ ಶೇ.೫೦ರಷ್ಟು ನಾಶವಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ ಎ.ಓ.ಹ್ಯೂಮ್ ಅಳವಡಿಸಿದ್ದೇ, ಜೀವಂತ ಸಸ್ಯಗಳ ಮುಳ್ಳುಬೇಲಿ. ಸಸ್ಯಶಾಸ್ತ್ರದಲ್ಲೂ ಆತನಿಗೆ ಆಸಕ್ತಿ ಇದ್ದುದರಿಂದ, ಕಡಿಮೆ ನೀರಿನಲ್ಲಿ ಬೆಳೆಯುವ ಪ್ರಭೇದದ ಮುಳ್ಳುಗಿಡಗಳನ್ನು ಆರಿಸಿ, ನಾಲ್ಕಾರು ಅಡಿ ಅಗಲವಾಗಿ ನಾಟಿ ಮಾಡಿಸಿ, ನೀರುಣಿಸಿ, ಜೀವಂತ ಗಿಡಗಳ ಬೇಲಿ ನಿರ್ಮಿಸುವ ಯೋಜನೆಯನ್ನು ಕಾರ್ಯರೂಪಕ್ಕೆತರಲು ಸಾಧ್ಯವಾಯಿತು. 1870ರ ನಂತರ ಅಧಿಕಾರ ವಹಿಸಿಕೊಂಡ ಇತರ ಬ್ರಿಟಿಷ್ ಅಧಿಕಾರಿಗಳು, ಎ.ಓ.ಹ್ಯೂಮ್ ರೂಪಿಸಿದ ಈ ಜೀವಂತ ಬೇಲಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರು.
‘ಸುಂಕ ಸಂಗ್ರಹಿಸಲು ನಿರ್ಮಾಣಗೊಂಡ ಈ ಜೀವಂತ ಮುಳ್ಳುಬೇಲಿಯು ಬ್ರಿಟಿಷ್ ರಾಜ್ ಕೈಗೊಂಡ ಅತಿ ಅಸಹ್ಯಕಾರಿ ಮತ್ತು ಕ್ರೂರ ಯೋಜನೆ’ ಎಂದು ಆಗಿನ ದಿನಗಳಲ್ಲೇ ಕುಖ್ಯಾತ ವಾಗಿತ್ತು. ‘   ,                ‘ ಎಂದು 1893ರಲ್ಲಿ ಇದರ ಕುರಿತು ಸರ್ ಜಾನ್ ಸ್ಟ್ರಾಚೆರಿ ಎಂಬ ಬ್ರಿಟಿಷ್ ಮಂತ್ರಿ ಹೇಳಿದ್ದ. ಈ ಮುಳ್ಳುಬೇಲಿಯ ಸ್ವರೂಪ ಕ್ಕಿಂತ, ಅದನ್ನು ನಿರ್ಮಿಸಿದ ಉದ್ದೇಶವೇ ಅಸಹ್ಯಕಾರಿ, ಭೀಬತ್ಸ, ಕ್ರೂರ. ಕಡು ಬಡವರಿಗೂ ಅಗತ್ಯ ಎನಿಸುತ್ತಿದ್ದ ಉಪ್ಪನ್ನು ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಭಾರತೀಯರು ಸಾಗಿಸುವಾಗ ಬ್ರಿಟಿಷ್ ಸರಕಾರಕ್ಕೆ ಸುಂಕ ನೀಡಬೇಕಾಗಿದ್ದ ಅಧಿಕ ಸುಂಕವೇ ಈ ಬೇಲಿಯನ್ನು ಅಮಾನವೀಯ  ಎನಿಸು ವಂತೆ ಮಾಡಿತ್ತು. ಆದರೇನು ಮಾಡುವುದು – ಬ್ರಿಟಿಷ್ ರು ಹಣ ಸಂಗ್ರಹಿಸುವಾಗ, ಹೆಚ್ಚಿನ ಸುಂಕ – ಕಡಿಮೆ ಸುಂಕ ಎಂಬ ಮಾನವೀಯ ಮುಖವನ್ನು ನೋಡುತ್ತಿರ ಲಿಲ್ಲ. ‘ಕಲೆಕ್ಷನ್’ ಅವರ ಮೂಲ ಧ್ಯೇಯ- ಅದಕ್ಕಾಗಿಯೇ ತಾನೆ ನಮ್ಮ ದೇಶದ ಜಿಲ್ಲೆ ಜಿಲ್ಲೆಗಳಲ್ಲೂ ‘ಡಿಸ್ಟ್ರಿಕ್ಟ್ ಕಲೆಕ್ಟರ್’ಗಳನ್ನು ಅವರು ನಿಯುಕ್ತ ಗೊಳಿಸಿದ್ದು!
ಈ ಭಯಾನಕ ಮುಳ್ಳು ಬೇಲಿಯ ಅಂಕಿ ಅಂಶಗಳು, ಕಾರ್ಯವಿಧಾನ, ಬೆಳೆಸಿದ ರೀತಿ, ಅದುಸಾಧಿಸಿದಭಯಾನಕ ಯಶಸ್ಸು- ಎಲ್ಲವನ್ನೂ ಭಯಾನಕ ಎಂದೇ ಹೇಳಬಹುದು. ಮುಳ್ಳುಬೇಲಿಯ ಈ ಅಸಹ್ಯಸ್ವರೂಪವನ್ನು ರುತಿಸಿಯೇ, ಬ್ರಿಟಿಷ್ಅಧಿಕಾರಶಾಹಿ ಮತ್ತು ಇತಿಹಾಸಕಾರರು ಅದರ ಅಸ್ತಿತ್ವವನ್ನೇ ನಂತರದದಶಕಗಳಲ್ಲಿ ಮುಚ್ಚಿಹಾಕಿದ್ದರು! `870ರ ದಶಕದಲ್ಲಿ ಈ ಬೇಲಿಯು ಉತ್ತುಂಗದಲ್ಲಿದ್ದಾಗ, ಅದರ ಉದ್ದವು ಸುಮಾರು 2500 ಮೈಲಿ! (4000 ಕಿಮೀ). 2001ನೇ ಇಸವಿಯಲ್ಲಿ ಇದರ ವಿವರಗಳು ಜಗತ್ತಿಗೆ ಬಯಲಾದಾಗ, ಇದನ್ನು ಚೀನಾದ ಗೋಡೆಗೆ ಹೋಲಿಸಿದವರೂ ಇದ್ದಾರೆ.
ಜಾಲಿ ಮುಳ್ಳು, ಇಂಡಿಯನ್ ಪ್ಲಮ್, ಕವಳೆ ಕಾಯಿ (ಗರ್ಚನ ಮುಳ್ಳು), ಪಾಪಾಸು ಕಳ್ಳಿ ಮೊದಲಾದ ಗಿಡಗಳನ್ನು ನೆಟ್ಟು ನಿರ್ಮಿಸಿದ್ದ ಈ ಬೇಲಿಯು ಸರಾಸರಿ 10 ಅಡಿ ಎತ್ತರವಾಗಿತ್ತು, ನಾಲ್ಕಾರು ಅಡಿ ಅಗಲವಾಗಿತ್ತು. ಎ.ಓ.ಹ್ಯೂಮ್‌ನ ಅಧಿಕಾರಾವಧಿಯಲ್ಲಿ, ಇದರ ಉಸ್ತುವಾರಿ ನೋಡಿಕೊಳ್ಳಲು ಸುಮಾರು 14000 ಸಿಬ್ಬಂದಿ ಕೆಲಸ ಮಾಡುತ್ತಿದ್ದುದು ದಾಖಲಾಗಿದೆ. ಇನ್ ಲ್ಯಾಂಡ್ ಕಸ್ಟಂಸ್ ಲೈನ್ ಎಂದೂ ಕರೆಯಲ್ಪಡುತ್ತಿದ್ದ ಈ ಮಹಾನ್ ಮುಳ್ಳುಬೇಲಿಯು, ಸುಸ್ಥಿತಿಯಲ್ಲಿದ್ದ ಸಮಯದಲ್ಲಿ ಎಷ್ಟು ದಟ್ಟವಾಗಿ ಬೆಳೆದಿತ್ತೆಂದರೆ ಅದರ ಮೂಲಕ ಮನುಷ್ಯರಾಗಲಿ, ಹೇರು ಪ್ರಾಣಿಗಳಾಗಲೀ ನುಗ್ಗುವುದು ಅಸಾಧ್ಯವಾಗಿತ್ತು.
ಬೇಲಿಯುದ್ದಕ್ಕೂ ಸಾಗಿದ್ದ ಕಾಲ್ದಾರಿಯಲ್ಲಿ ನಡೆಯುತ್ತಾ ಹೋದರೆ, ಅಲ್ಲಲ್ಲಿ ಅದನ್ನು ದಾಟಲು ದಾರಿಯನ್ನು ಮಾಡಲಾಗಿತ್ತು. ಅದೇ ಸುಂಕ ವಸೂಲಿ ಮಾಡುವ ಸ್ಥಳ. ಮುಖ್ಯವಾಗಿ ಉಪ್ಪಿನ ಮೇಲೆಅಧಿಕಸುಂಕವನ್ನು ಆಗ ವಸೂಲು ಮಾಡುತ್ತಿದ್ದರು. ಜತೆಗೆ ಸಕ್ಕರೆ, ಅಪೀಮು ಮೊದಲಾದ ವಸ್ತುಗಳ ಮೇಲೂ ಸುಂಕ ವಸೂಲಿ ಯಾಗುತ್ತಿತ್ತು. ನಾಲ್ಕಾರು ಅಡಿ ಅಗಲದ ಈ ಮುಳ್ಳುಬೇಲಿಯನ್ನು ಬೆಳೆಸಲು, ಉಸ್ತುವಾರಿ ನೋಡಿಕೊಳ್ಳಲು ಬ್ರಿಟಿಷರು ಒಂದು ಬಲಿಷ್ಠ ವ್ಯವಸ್ಥೆಯನ್ನೇ ರೂಪಿಸಿ ದ್ದರು. ಬೇಲಿಯುದ್ದಕ್ಕೂ ಕಚ್ಚಾ ರಸ್ತೆ ಅಥವಾ ಕಾಲ್ದಾರಿ ಇರುತ್ತಿತ್ತು. ಅದನ್ನು ಪ್ರತಿದಿನ ಕೆಲಸಗಾರರು ಮುಳ್ಳಿನ ಪರಕೆಯಿಂದ ಗುಡಿಸಬೇಕಿತ್ತು.
ಆ ನಂತರ, ಆ ದೂಳುದಾರಿಯಲ್ಲಿ ಯಾರೇ ಸಾಗಿದರೂ ಹೆಜ್ಜೆ ಗುರುತು ಮೂಡುತ್ತಿತ್ತು. ಅದನ್ನು ಕಂಡು ಸುಂಕ ವಸೂಲಿ ಸಿಬ್ಬಂದಿ ಜಾಗೃತರಾಗಿ, ತಮ್ಮ ಅಽಕಾರವನ್ನು ಚಲಾಯಿಸುತ್ತಿದ್ದರು. ಬೇಸಿಗೆಯಲ್ಲಿ ಮುಳ್ಳಿನ ಗಿಡಗಳಿಗೆ ನೀರು ಹಾಕುವ ವ್ಯವಸ್ಥೆಯಿತ್ತು. ಕೆರೆಗಳು ಇಲ್ಲದ ಜಾಗದಲ್ಲಿ, ಅದಕ್ಕೆಂದೇ ಬಾವಿಯನ್ನು ತೋಡಲಾಗಿತ್ತು! ಪ್ರತಿ10ರಿಂದ15ಮೈಲಿಯನ್ನು ನೋಡಿಕೊಳ್ಳಲು ಒಬ್ಬ ಜಮೇದಾರ್ ಮತ್ತು ಆತನ ಕೈಕೆಳಗೆ10ಸ್ಥಳೀಯ ನೌಕರರಿದ್ದರು. ಪಂಜಾಬಿನ ಸಿಂಧೂ ನದಿಯ ದಡದಿಂದ ಆರಂಭಗೊಂಡ ಈ ಜೀವಂತ ಮುಳ್ಳುಬೇಲಿಯು, ದೆಹಲಿ, ಆಗ್ರಾ ಮೊದಲಾದ ಸ್ಥಳಗಳನ್ನು ಸುತ್ತುವರಿದು, ಒಡಿಶಾ ಗಡಿಯ ತನಕಮುಂದುವರಿದಿತ್ತು. ಉಪ್ಪಿನ ಮೇಲೆ ಸುಂಕ ಸಂಗ್ರಹಿಸುವ ಉದ್ದೇಶದ,2500ಮೈಲಿ ಉದ್ದದ ಈ ಬೇಲಿಯು ಬ್ರಿಟಿಷ್ ರಾಜ್‌ನ ಕುಖ್ಯಾತ ಸಾಧನೆ.
1869-70ರಲ್ಲಿ ಬ್ರಿಟಿಷ್ ಸರಕಾರವು ಸುಮಾರು 12.5 ಮಿಲಿಯ ರೂಪಾಯಿಗಳನ್ನು (1.25 ಕೋಟಿ ರೂ) ಉಪ್ಪಿನ ಮೇಲಿನ ಸುಂಕದ  ರೂಪದಲ್ಲಿ ಸಂಗ್ರಹಿಸಿತ್ತು. ಈ ಮೊತ್ತವು 1877ರಲ್ಲಿ 29.1 ಮಿಲಿಯ ರೂಪಾಯಿಗಳಿಗೆ (2.91 ಕೋಟಿ ರೂ) ಏರಿತು! ಸಕ್ಕರೆಯ ಮೇಲಿನ ಸುಂಕದಿಂದ ವಾರ್ಷಿಕ ಸುಮಾರು 10 ಲಕ್ಷ ರೂಪಾಯಿ ಸುಂಕ ಬರುತ್ತಿತ್ತು. ಆದರೆ ಬಡವರ ಜೀವನಾವಶ್ಯಕ ವಸ್ತು ಎನಿಸಿದ್ದ ಉಪ್ಪಿನ ಮೇಲೆ ಅಂದು ವಿಧಿಸಿದ ಅತಿಯಾದ ತೆರಿಗೆ ಅಮಾನವೀಯ. 1888ರಲ್ಲಿ ಒಂದು ಮೌಂಡ್ (ಸುಮಾರು 37 ಕೆ.ಜಿ.) ಉಪ್ಪಿಗೆ ಬ್ರಿಟಿಷರುವಿಧಿಸಿದತೆರಿಗೆ ರೂ.2.50 (ಕೆಲವು ಪ್ರದೇಶದಲ್ಲಿ ತುಸು ಕಡಿಮೆ). ಅದು ಅಂದಿನ ಒಬ್ಬ ಕೃಷಿ ಕಾರ್ಮಿಕನ ಒಂದು ತಿಂಗಳ ವೇತನಕ್ಕಿಂತ ಜಾಸ್ತಿ! 1946ರ ತನಕ ಉಪ್ಪಿನ ಮೇಲಿನ ಈ ತೆರಿಗೆ ಮುಂದುವರಿದಿತ್ತು ಎಂದರೆ, ಅದಕ್ಕೆ ಅವರೆಷ್ಟು ಪ್ರಾಮುಖ್ಯತೆ ನೀಡಿದ್ದರು ಎಂದು ಯೋಚಿಸಬಹುದು!
1879ರ ಎಪ್ರಿಲ್ 1ರಿಂದ ಜೀವಂತ ಮುಳ್ಳುಬೇಲಿಯ ಯೋಜನೆಯನ್ನು ಬ್ರಿಟಿಷರು ಕೈಬಿಟ್ಟರು. ಜತೆಗೆ, ಆ ಬೇಲಿಯುದ್ದಕ್ಕೂ ಇದ್ದ ಸುಂಕ ವಸೂಲಾತಿ ಕೇಂದ್ರಗಳು ಮುಚ್ಚಲ್ಪಟ್ಟವು. ಇದು ಮಾನವೀಯತೆಯಿಂದಲ್ಲ. ಬದಲಿಗೆ, ಉಪ್ಪಿನ ತಯಾರಿಯ ಜಾಗದಲ್ಲೇ ಸುಂಕ ವಸೂಲಿ ವ್ಯವಸ್ಥೆಯನ್ನು ಬ್ರಿಟಿಷರು ಜಾರಿಗೆ ತಂದರು. ಗುಜರಾತ್‌ನ ವಿಶಾಲ ಪ್ರದೇಶದ ಉಪ್ಪಿನ ಗಣಿ ಗಳನ್ನು ಬ್ರಿಟಿಷರು ತಮ್ಮ ನಿಯಂತ್ರಣಕ್ಕೆ ತೆಗೆದು ಕೊಂಡಿದ್ದರಿಂದ, ಉತ್ತರ ಭಾರತದಲ್ಲಿ ಆರಂಭಗೊಂಡು, ಮಧ್ಯಭಾರತದುದ್ದಕ್ಕೂ ಹಾದು ಹೋಗಿ, ಒಡಿಶಾದಲ್ಲಿ ಕೊನೆಗೊಂಡಿದ್ದ ಆ ಜೀವಂತ ಮಹಾನ್ ಮುಳ್ಳಿನ ಬೇಲಿಯ ಅವಶ್ಯಕತೆ ಅವರಿಗೆ ಕಾಣಲಿಲ್ಲ. 1879ರಿಂದ ಅವಗಣನೆಗೆ ಗುರಿಯಾದ ಈ ಹಸಿಗಿಡಗಳ ಮುಳ್ಳುಬೇಲಿ ನಂತರದ ನಾಲ್ಕಾರು ದಶಕಗಳಲ್ಲಿ ಮೂಲೆಗುಂಪಾಯಿತು.
ಕವಳಿ ಗಿಡ, ಪಾಪಸುಕಳ್ಳಿ, ಜಾಲಿ ಮೊದಲಾದ ಗಿಡಗಳು ಒಣಗಿಹೋದವು. ಬೇಲಿಯುದ್ದಕ್ಕೂ ಹಾದುಹೋಗಿದ್ದ ಕಾವಲುಗಾರರ ದಾರಿಯು, ಕ್ರಮೇಣ ರಸ್ತೆಯಾಗಿಪರಿವರ್ತನೆಗೊಂಡು, ಇಂದಿಗೂ ಒಂದು ಪ್ರದೇಶವನ್ನು ಇನ್ನೊಂದಕ್ಕೆ ಸಂಪರ್ಕ ನೀಡುತ್ತಿದೆ. ಸುಮಾರು 4000 ಕಿಮೀ ಉದ್ದ, 10 ಅಡಿ ಎತ್ತರ, ನಾಲ್ಕಾರು ಅಡಿ ಅಗಲದ ಈ ವ್ಯವಸ್ಥಿತ ಜೀವಂತ ಮುಳ್ಳುಬೇಲಿಯು ಬ್ರಿಟಿಷ್ ಸರಕರದ ಒಂದು ಸಾಧನೆಯಾಗಿ ಹೆಸರಾಗಿಬೇಕಿ. ಆದರೆ, ಹಾಗಾಗಲಿಲ್ಲ! ಬದಲಿಗೆ, ಇಂತಹಅಮಾನವೀಯ ‘ಮಹಾನ್ ಮುಳ್ಳುಬೇಲಿ’ ಯೊಂದು ಅಸ್ತಿತ್ವದ ಲ್ಲಿತ್ತು ಎಂಬ ಸತ್ಯವನ್ನೇ ವ್ಯವಸ್ಥಿತವಾಗಿ ಮುಚ್ಚಿ ಹಾಕಿ, ಇದರ ವಿವರಗಳು ಪ್ರಚಾರಕ್ಕೆ ಬರದಂತೆ ನೋಡಿಕೊಳ್ಳಲಾಗಿತ್ತು.
ಜೀವನಕ್ಕೆ ಮುಖ್ಯವೆನಿ ಸುವ, ಬಡವರಿಗೆ ಅಗತ್ಯವಾಗಿ ಬೇಕಿದ್ದ, ಬಿಸಿಲುಗಾಲದಲ್ಲಿ ಉಂಟಾಗುವ ಡಿಹೈಡ್ರೇಷನ್ ತಡೆಯಲು ಬೇಕಿದ್ದ ಉಪ್ಪನ್ನು, ಅತಿ ಹೆಚ್ಚಿನ ತೆರಿಗೆಗೆ ಒಳಪಡಿಸಿದ್ದಕ್ಕೆ ಬ್ರಿಟಿಷ್ಅಧಿಕಾರಿಗಳಿಗೆ ವೈಯಕ್ತಿಕವಾಗಿ ಒಳಗೊಳಗೇ ನಾಚಿಕೆ ಇದ್ದಿರ ಬೇಕು; ಆದ್ದರಿಂದಲೇ 4000 ಕಿಮೀ ಉದ್ದದ ಈ ಮಹಾನ್ ಮುಳ್ಳು ಬೇಲಿಯನ್ನು ಬೆಳೆಸಿದ ಬ್ರಿಟಿಷ್ ಸರಕಾರದ ಸಾಧನೆಯನ್ನು ಅಂದಿನ ಇತಿಹಾಸಕಾರರು ವ್ಯವಸ್ಥಿತವಾಗಿ ಮುಚ್ಚಿಹಾಕಿದ್ದರು. ಎಷ್ಟರ ಮಟ್ಟಿಗೆ ಎಂದರೆ, ಇಂತಹದೊಂದು ಬೇಲಿ ಇತ್ತು ಎಂಬ ವಿಚಾರವೇ ಕ್ರಮೇಣ ಮರೆತು ಹೋಯಿತು!
ಈ ಅಮಾನವೀಯ, ಬೃಹತ್ ಮುಳ್ಳು ಬೇಲಿಯ ಅಸ್ತಿತ್ವ ಬಯಲಿಗೆ ಬಂದಿದ್ದು ಆಕಸ್ಮಿಕ ವಾಗಿ. 1995 ರಲಿ ರೋಯ್ ಮೊಕ್ಸಾಮ್ ಎಂಬ ಲೇಖಕ, ಸಂಶೋಧಕ, ಹಳೆಯ ಪುಸ್ತಕವೊಂದನ್ನು ಓದುವಾಗ, ಬ್ರಿಟಿಷ್ ಅಧಿಕಾರಿಯೊಬ್ಬರ ನೆನಪುಗಳಲ್ಲಿ ಈ ಬೇಲಿಯ ಸಾಂದರ್ಭಿಕ ಪ್ರಸ್ತಾಪವನ್ನು ಕಂಡು ಕುತೂಹಲಗೊಂಡ.ಲಂಡನ್ ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ ಕ್ಯುರೇಟರ್ ಆಗಿದ್ದ ರೋಯ್ ಮೊಕ್ಸಾಮ್, ಈ ಅಮಾನವೀಯ ಮುಳ್ಳುಬೇಲಿಯ ವಿವರ ಕಲೆಹಾಕಲು ಪ್ರಯತ್ನಿಸಿದ. ಆದರೆ ಮೊದಲಿಗೆ ಮಾಹಿತಿ ದೊರಕಲಿಲ್ಲ. ಇನ್ನಷ್ಟು ಹುಡುಕಾಡಿ, ಹಳೆಯ ಭೂಪಟಗಳನ್ನು ತಲಾಶು ಮಾಡಿದಾಗ, ಒಂದೊಂದೇ ವಿವರ ಬಯಲಿಗೆ ಬರತೊಡಗಿತು.
ಈ ಬೇಲಿಯನ್ನು ಹುಡುಕಿಕೊಂಡು ಮೂರು ಬಾರಿ ಭಾರತಕ್ಕೆ ಪ್ರವಾಸ ಮಾಡಿ, ಆ ಬೇಲಿ ಹಾದು ಹೋಗಿದ್ದ ಹಳ್ಳಿಗಳನ್ನು ಸಂದರ್ಶಿಸಿ, ಅಲ್ಲಿನ ಹಿರಿಯರನ್ನು ಕೇಳಿದ. ಆದರೆ, ಕೇವಲ ೧೦೦ ವರ್ಷಗಳ ಹಿಂದಿನ ಬೇಲಿ ಜನರ ನೆನಪಿನಿಂದ ಬಹುತೇಕ ಅಳಿಸಿಹೋಗಿತ್ತು. ಕೊನೆಗೂ ಒಂದಿಬ್ಬರು ಹಿರಿಯರು ‘ಪರ್ಮಿಟ್ ಲೈನ್’ಎಂಬ ಹೆಸರಿನ ಮುಳ್ಳುಬೇಲಿಯ ಕುರಿತು ಅವರ ಹಿರಿಯರು ಹೇಳುತ್ತಿದುದನ್ನು ನೆನಪಿಸಿಕೊಂಡರು. ಒಂದೆರಡು ಸ್ಥಳಗಳಲ್ಲಿ ಆ ಬೇಲಿಯ ಕುರುಹು ಗಳಿದ್ದುದನ್ನು ಮೊಕ್ಸಾಮ್ ಕಂಡುಕೊಂಡ. ಸಾಕಷ್ಟು ಸಂಶೋಧನೆ ಮಾಡಿ, ೨೦೦೧ರಲ್ಲಿ ‘ದ ಗ್ರೇಟ್ ಇಂಡಿಯನ್ ಹೆಜ್’ ಎಂಬ ಪುಸ್ತಕವನ್ನು ಆತ ಹೊರತಂದಾಗ, ಜಗತ್ತಿನ ಇತಿಹಾಸಜ್ಞರು, ಇತಿಹಾಸ ಪ್ರಿಯರು, ಓದುಗರು ಅಚ್ಚರಿಪಟ್ಟರು.
ಬೆರಗಾದರು. ಇಂತಹ ಬೃಹತ್ ಬೇಲಿ ಇತಿಹಾಸದಿಂದ ಮರೆಯಾಗಿದ್ದಾದರೂ ಹೇಗೆ ಎಂಬ ಅಚ್ಚರಿ ಎಲ್ಲರಲ್ಲೂ! ಅಂದು ಬ್ರಿಟಿಷರು ವಿಧಿಸಿದ ಉಪ್ಪಿನ ಮೇಲಿನ ಅಽಕ ಸುಂಕವು 1946ರ ತನಕ ಮುಂದುವರಿದಿತ್ತು ಎಂಬುದು ಮತ್ತೊಂದು ಅಚ್ಚರಿ.