ಧೋವಲ್‌ಗೆ ಧನ್ಯವಾದ ಹೇಳಲೇಬೇಕು, ಏಕೆ ?
ಅವಲೋಕನ
ಹೇಮಂತ್ ಸಂಪಾಜೆ
ಅಜಿತ್ ಧೋವಲ್! ಈ ಹೆಸರು ದೇಶದ ಪ್ರತಿ ನಾಗರಿಕನಿಗೂ ತಿಳಿದಿದೆ. ರಾಷ್ಟ್ರೀಯ ಭದ್ರತಾ ಕ್ಷೇತ್ರದಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸುವ ಚಾಣಾಕ್ಷ. ಪುಲ್ವಾಮಾ ದಾಳಿ ಪ್ರತೀಕಾರವಾಗಿ ಪಾಕ್ ನೆಲಕ್ಕೆ ನುಗ್ಗಿ ಸೇಡು ತೀರಿಸಿಕೊಂಡ ಸರ್ಜಿಕಲ್ ಸ್ಟ್ರೈಕ್‌ನ ರೂವಾರಿ. ನಡೆ-ನುಡಿ ಎರಡರಲ್ಲೂ ಧೋವಲ್ ಖಡಕ್, ಅಷ್ಟೇ ನಾಜೂಕಾಗಿ ದೇಶದ ರಕ್ಷಣೆಗೆ ಬದ್ಧವಾಗಿರುವ ಅಽಕಾರಿ. ಇಂತಹ ಅಧಿಕಾರಿಗೆ ಧನ್ಯವಾದ ಹೇಳಲೇಬೇಕೆನಿಸುತ್ತದೆ. ಇದಕ್ಕೆ ಕಾರಣವೂ ಹಲವಿದೆ. ಏನಿದು ಕಾರಣ ಅನ್ನುವ ವಿವರ ಇಲ್ಲಿದೆ…
ಅಜಿತ್ ಧೋವಲ್ ಭಾರತದ ಕ್ಯಾಬಿನೆಟ್ ದರ್ಜೆಯ ರಾಷ್ಟ್ರೀಯ ಭದ್ರತಾ ಸಲಹೆಗಾರರು. ಪ್ರತಿ ವಿಷಯವನ್ನೂ ಸೂಕ್ಷ್ಮವಾಗಿ ಅಳೆದು ತೂಗಬಲ್ಲ ಸಾಮರ್ಥ್ಯಹೊಂದಿರುವ ವಿಶೇಷ ವ್ಯಕ್ತಿ. ಇತ್ತೀಚೆಗೆ ಅಜಿತ್ ಧೋವಲ್ ಹಾಗೂ ಭಾರತದ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಡುವಿನ ಎರಡು ಭಿನ್ನ ಹೇಳಿಕೆಗಳನ್ನುಗಮನಿಸಬಹುದು. ಈ ಹೇಳಿಕೆಗಳಲ್ಲಿ ಎರಡು ವಿಭಿನ್ನ;ಸರ್ವಾಧಿಕಾರಿ ಹಾಗೂ ಬಹುಮತೀಯ ಆಡಳಿತ ಎಂಬ ದೃಷ್ಟಿಕೋನಗಳನ್ನು ಗಮನಿಸಬಹುದು.
ನಾಗರಿಕ ಸಮಾಜದ ರಕ್ಷಣೆ ಹೊಣೆ ನಾಲ್ಕು ದಿನಗಳ ಹಿಂದೆ ಅಜಿತ್ ಧೋವಲ್ ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಮುಂದೆ ಭವಿಷ್ಯದ ಪೊಲೀಸ್ಅಧಿಕಾರಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಈ ವೇಳೆ ನಾಗರಿಕ ಸಮಾಜವನ್ನು ರಕ್ಷಿಸಬೇಕಾಗಿರುವ ಅವಶ್ಯಕತೆ ಬಗ್ಗೆ ಹೇಳಿಕೆ ನೀಡಿದ್ದರು. ಇದೇ ವೇಳೆ ಮಾತು ಮುಂದುವರಿಸಿದ್ದ ಅವರು, ನಾಗರಿಕ ಸಮಾಜವನ್ನು ವಿಧ್ವಂಸಗೊಳಿಸಲು, ಅಽನಗೊಳಿಸಲು, ವಿಭಜಿಸಲು ಮತ್ತು ಕುಶಲತೆಯಿಂದ ತಮಗೆ ಬೇಕಾದಂತೆ ಬಳಸಿಕೊಳ್ಳಲು ವಿರೋಧಿಗಳು ಪ್ರಯತ್ನ ಪಡುತ್ತಿರುತ್ತಾರೆ. ಅಂತಹ ಕೆಲಸವನ್ನು ಯುವ ಪೊಲೀಸ್ಅಧಿಕಾರಿಗಳು ಗಮನಿಸಬೇಕು ಎಂದು ಸಲಹೆ ನೀಡಿದರು.
ಜಾಗರೂಕವಾದ ಹದ್ದಿನ ಕಣ್ಣನ್ನು ಇಟ್ಟಿರಬೇಕು ಎನ್ನುವುದರ ಬಗ್ಗೆ ಧೋವಲ್ ಹೆಚ್ಚಿನ ಪದಗಳಲ್ಲಿ ಪೊಲೀಸರಿಗೆ ತಿಳಿಸಲಿಲ್ಲವಾದರೂ ಅವರ ಮಾತಿನ ಹಿಂದಿನ ಅರ್ಥ ರಾಷ್ಟ್ರದ ರಕ್ಷಣೆಯ ವಿಚಾರವೇ ಅಡಕವಾಗಿತ್ತು. ಇದಕ್ಕೂ ಒಂದು ದಿನಕ್ಕೆ ಮೊದಲು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ‘ಜಮ್ಮು ಕಾಶ್ಮೀರದಲ್ಲಿ ಜನರೇ ಈಗ ಭಯೋತ್ಪಾ ದಕರನ್ನು ಹತ್ಯೆ ಮಾಡುವುದಾಗಿ ಹೇಳುತ್ತಿದ್ದಾರೆ’ ಎಂದು ಮಾಧ್ಯಮದ ಎದುರು ಬಹಿರಂಗ ಹೇಳಿಕೆ ನೀಡಿದ್ದರು. ಇದು ಸಕಾರಾತ್ಮಕ ಸಂದೇಶ ಎಂದು ರಾವತ್ ಭಾವಿಸಿದ್ದರು. ಒಬ್ಬಸೈನ್ಯಾಧಿಕಾರಿಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಅನ್ನುವಂತಹ ಟೀಕೆ ವ್ಯಕ್ತವಾದವು.
ಏಕೆಂದರೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ದೇಶದಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದು ದ್ವಂದ್ವ ಅರ್ಥವನ್ನು ನೀಡುತ್ತದೆ. ಅಲ್ಲದೆ ಸಂದೇಶ ತಪ್ಪಾಗಿ ಜನರಿಗೆ ತಲುಪುತ್ತದೆ ಅನ್ನುವಂತಹ ಟೀಕೆಗಳು ಮಾಧ್ಯಮಗಳಲ್ಲಿ ವ್ಯಕ್ತವಾದವು. ದೇಶದ ರಕ್ಷಣೆಯ ಹೊಣೆ ಹೊತ್ತಿರುವ ಇಬ್ಬರು ನಾಯಕರ ಹೇಳಿಕೆಗಳನ್ನು ಗಮನಿಸಿದಾಗ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತವೆ ಅನ್ನುವುದು ವಿಶ್ಲೇಷಕರ ಮಾತಾಗಿದೆ.
ಅಮೆರಿಕದಲ್ಲೂ ವಿಭಿನ್ನ ಹೇಳಿಕೆ ಜಗತ್ತಿನ ಬೇರೆ ರಾಷ್ಟ್ರಗಳಲ್ಲೂ ರಕ್ಷಣಾ ಮುಖ್ಯಸ್ಥರ ಹೇಳಿಕೆಗಳು ಇದೇ ರೀತಿಯಲ್ಲಿ ವ್ಯಕ್ತವಾಗಿದ್ದು ಇದೆ. ಒಂದು ಸಲ ಟ್ರಂಪ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ಪ್ಲಿನ್ ಕಾರ್ಯಕ್ರಮವೊಂದರಲ್ಲಿ ಹೀಗೆ ಹೇಳಿದ್ದರು- ನಾವು ದೇವರ ನಂಬಿಕೆಯ ಅಡಿಯಲ್ಲಿ ಒಂದು ರಾಷ್ಟ್ರವನ್ನು ಹೊಂದಬೇಕಾದರೆ ನಾವು ಒಂದು ಧರ್ಮವನ್ನು ಹೊಂದಿರಲೇಬೇಕು ಎಂದು ಹೇಳಿದ್ದರು. ಈ ಹೇಳಿಕೆಯನ್ನು ರಿಪಬ್ಲಿಕನ್ ಓಹಿಯೋ ರಾಜ್ಯದ ಖಜಾಂಚಿ ಮತ್ತು ಸನೆಟ್ ಅಭ್ಯರ್ಥಿ ಜೋಶ್ ಮ್ಯಾಂಡೆಲ್ ಸಮರ್ಥಿಸಿಕೊಂಡಿದ್ದರು. ಜನರಲ್ ಪ್ಲಿನ್ ಜತೆ ನಿಲ್ಲುತ್ತೇವೆ ಎಂದು ಹೇಳಿದ್ದರು. ಹೆಚ್ಚಿನ ಜನರು ಇದರಿಂದ ಭಾರೀ ಆಘಾತಕ್ಕೆ ಒಳಗಾಗಿದ್ದರು ಮತ್ತು ಮನನೊಂದಿದ್ದರು.
ಹೌದು, ಕೆಲವು ಸಲ ನಾವು ಕೊಡುವ ಹೇಳಿಕೆಗಳಲ್ಲಿ ವಿಭಿನ್ನತೆ ಇರಬಹುದು. ಆದರೆ ಅದು ಸಮಾಜದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಬಿಪಿನ್ ರಾವತ್ ನೀಡಿರುವ ಉಗ್ರರನ್ನು ಜನರೇ ಕೊಲ್ಲುತ್ತಾರೆ ಅನ್ನುವ ಹೇಳಿಕೆ ಖಂಡನೀಯ. ಭಯೋತ್ಪಾದಕ ಅನ್ನುವ ಹಣೆಪಟ್ಟಿಯನ್ನು ಸುಲಭವಾಗಿ ಬಿಸಾಡುವುದಕ್ಕೆ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಜನರೆ ಕೊಲ್ಲುತ್ತಾರೆ ಅನ್ನುವಂತಹ ಸಂದೇಶ ತಪ್ಪಾಗಿಅರ್ಥವಾಗಿ ಬಿಡಬಹುದು. ಇದರಿಂದ ದೇಶದಲ್ಲಿ ಅಶಾಂತಿ ಉಂಟಾಗಬಹುದು. ಪರಸ್ಪರ ಗಲಭೆಗೂ ಕಾರಣವಾಗಬಹುದು. ವಿವಿಧ ಕಡೆ ಹಿಂಸಾಚಾರವನ್ನುಬೆನ್ನಟ್ಟುತ್ತಿರುವ ವ್ಯಕ್ತಿಗಳಿಗೆ ಇದು ಅಸವಾಗಬಹುದು.
ಇಂತಹ ಹೇಳಿಕೆಗಳನ್ನು ಖಂಡಿಸುವುದಾದರೆ ಕೆಲವು ವಿದ್ಯಾವಂತರು, ಸಮಾಜದಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸುತ್ತಿರುವವರು ಮಾತ್ರ. ಉಳಿದಂತೆ ಅಂತಹವಿಚಾರವನ್ನು ಪ್ರಶ್ನೆ ಮಾಡುವುದಕ್ಕೆ ಯಾರೂ ಹೋಗುವುದಿಲ್ಲ..! ಧೋವಲ್ ಮಾತಿನಲ್ಲಿ ತೂಕವಿದೆ ಹೇಗೆ? ಸಮಾಜದಲ್ಲಿ ತೊಂದರೆಯಾದಾಗ ನಾಗರಿಕ ಸಮಾಜ ಅದರ ವಿರುದ್ಧ ಹೋರಾಟ ನಡೆಸುತ್ತದೆ. ನಾಗರಿಕ ಸಮಾಜವನ್ನು ರಕ್ಷಿಸುವುದಷ್ಟೇ ಪೊಲೀಸರ ಕೆಲಸವಾಗಿದೆ.
ಅದನ್ನು ಹೊರತು ಪಡಿಸಿದ ರಾಜ್ಯಗಳ ನಿರ್ಬಂಧದ ವಿರುದ್ಧವಲ್ಲ. ನಾಗರಿಕರಿಂದ ಯಾರಿಗೆ ತೊಂದರೆಯಾಗುತ್ತದೆ ಅಂತಹ ಶಕ್ತಿಗಳ ಧಮನಗೊಳಿಸಬೇಕುಅನ್ನುವುದನ್ನು ಧೋವಲ್ ತಿಳಿಸಿದ್ದರು. ಎಲ್ಲ ನಾಗರಿಕರು ಕೂಡ ಈ ನಿಟ್ಟಿನಲ್ಲಿ ಧೋವಲ್ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ಅದಕ್ಕೆ ಅವರುಅರ್ಹರು. ಪ್ರಜಾಪ್ರಭುತ್ವ ಮತ್ತು ಸಮಾನತೆಯಿಂದ ದೂರವಾಗದಂತೆ ಭಾರತವನ್ನು ರಕ್ಷಿಸುವ ಜವಾಬ್ದಾರಿ ಧೋವಲ್ ಹೆಗಲಮೇಲಿದೆ. ನಿಜ ಇದಕ್ಕೆ ಕೆಲವುಸಂಸದರು ಅಥವಾ ಮುಖ್ಯಮಂತ್ರಿಗಳು ಸಹಾಯ ಮಾಡಬಹುದು. ಮತ್ತೊಂದು ಕಡೆಯಿಂದ ಅದು ಸಾಧ್ಯವಾಗದೇ ಹೋಗಬಹುದು ಅಥವಾ ಅನುಮತಿಸಿಗದಿರಬಹುದು.
ಪ್ರಜಾಪ್ರಭುತ್ವದ ವಿರೋಧ ಶಕ್ತಿಗಳು ರಾಜ್ಯ ಶಕ್ತಿ ಮತ್ತು ಹಣದ ಬಲವನ್ನು ಮಾತ್ರ ಹೊಂದಿರುವುದಿಲ್ಲ. ವರ್ತಮಾನದಲ್ಲಿ ಜನರು ಏನು ನೋಡುತ್ತಾರೆ ಮತ್ತು ಕೇಳುತ್ತಾರೆ ಎಂಬುದನ್ನು ನಿಯಂತ್ರಿಸಲು ಸಮರ್ಥರಾಗಿದ್ದಾರೆ. ಭಾರತ ಏನನ್ನು ಎದುರಿಸುತ್ತಿದೆ ಎಂಬುದರ ಬಗ್ಗೆ ತೊಂದರೆಗೊಳಗಾದವರು ಯುಎಸ್ ಮತ್ತು ಇತರ ಪ್ರಜಾಪ್ರಭುತ್ವದ ರಾಜ್ಯಗಳ ಒತ್ತಡ ಮೇಲೆ ಭರವಸೆಯನ್ನು ವ್ಯರ್ಥ ಮಾಡಬಾರದು. ಭಾರತ ತಮ್ಮದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರೊಂದಿಗೆ ಚೀನಾದೊಂದಿಗಿನ ಸ್ಪರ್ಧೆಯಲ್ಲಿ ಅಮೆರಿಕಕ್ಕೆ ಭಾರತದ ಅಗತ್ಯವೂ ಇದೆ. ಇಂತಹ ಸಮಯದಲ್ಲಿ ಅವು ಮೋದಿಯಿಂದ ಏನು ನಿರೀಕ್ಷೆಇಡಬಹುದು.
ಧೋವಲ್ ಹೇಳಿಕೆಯು ಅತ್ಯಂತ ಸ್ಪಷ್ಟ ಗ್ರಹಿಕೆಯಿಂದ ಕೂಡಿದ್ದಾಗಿದೆ. ಉತ್ತರ ಅಮೆರಿಕ, ಯುರೋಪ್, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹದೇಶಗಳ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಗರಿಕ ಸಮಾಜಗಳು ಭಾರತೀಯ ಜನರ ಮನಸ್ಸಿನ ಪ್ರಭಾವ ಬೀರುವ ಶಕ್ತಿಗಳಾಗಿವೆ. ಈ ಶಕ್ತಿಗಳು ಭಾರತದ ಮೇಲೆಪರಿಣಾಮ ಬೀರುವ ವಿಧ್ವಂಸಗೊಳಿಸುವ, ಅಧೀನಪಡಿಸುವುದು, ವಿಭಜಿಸುವ ಮತ್ತು ಕುಶಲತೆಯ ಪ್ರಯತ್ನಗಳ ಮೂಲಕ ಅಲ್ಲ, ಸ್ವಾತಂತ್ರ್ಯ, ಸಮಾನತೆಮತ್ತು ಭ್ರಾತೃತ್ವ ನಂಬುವ ಯಾರೊಬ್ಬರ ಮನಸ್ಸಿಗೆ ಹಿಮೆಟ್ಟಿಸುವುದಾಗಿದೆ. ನೈಸರ್ಗಿಕ ಆಕರ್ಷಣೆಗಳ ಜೀವನವೇ ಪ್ರಜಾಪ್ರಭುತ್ವವಾಗಿದೆ.
ಯುಎಸ್ ನಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಆದರ್ಶಮಯ ಜೀವನಕ್ಕೆ ಮಹತ್ವವಿರುವುದಿಲ್ಲ. ಹೀಗಿದ್ದರೂ ಲಕ್ಷಾಂತರ ಭಾರತೀಯರನ್ನು ಎಲ್ಲ ವೈಫಲ್ಯಗಳೊಂದಿಗೆ ಉದ್ಯೋಗಕ್ಕಾಗಿ ಕೈ ಬೀಸಿ ಕರೆಯುತ್ತದೆ. ಮೈಕಲ್ ಪ್ಲಿನ್ ಧ್ವನಿಯ ಉಗ್ರಗಾಮಿ ಪ್ರಲೋಭನೆಗೆ ಬಿದ್ದಿದ್ದರೂ ಆ ದೇಶಗಳಲ್ಲಿನ ನಾಗರಿಕ ಸಮಾಜಗಳಲ್ಲಿ ಇನ್ನೂ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವವಿದೆ. ಭಾರತದಲ್ಲಿ ವಿವಿಧತೆಯಿದೆ. ದೇಶದ ಸಮಗ್ರ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ಹೀಗಿದ್ದರೂ ಕೆಲವು ಸಲ ದೇಶದಲ್ಲಿ ಬಹಳಷ್ಟು ಗೊಂದಲದ ವಿಚಾರ ಗಳು ತಲೆ ಎತ್ತಿ ದೇಶ ಅಪೂರ್ಣವಾಗಿ ಎಂದು ಕಾಣುತ್ತದೆ.
ಭಾರತ ಪಾಕಿಸ್ತಾನವಿಲ್ಲದೆ ಬದುಕಬಹುದು. ಆದರೆ ಕ್ರಿಕೆಟ್ ಅಥವಾ ಬಾಲಿವುಡ್ ಇಲ್ಲದೆ ಬದುಕುವುದಿಲ್ಲ. ಇತ್ತೀಚೆಗೆ ವಿಶ್ವಕಪ್ ಟಿ೨೦ ಸೋಲಿನ ನಂತರ ಭಾರತದಲ್ಲಿ ಶಮಿಯನ್ನು ಧರ್ಮಾಧರಿತವಾಗಿ ಟೀಕಿಸಲಾಯಿತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಬೆಂಬಲ ನೀಡಿ ಸಮಾನತೆಯ ಸಂದೇಶಸಾರಿದ್ದರು. ನಾಗರಿಕ ಸಮಾಜವು ಯಾವಾಗಲೂ ಕಾಣಿಸಿಕೊಳ್ಳದಿದ್ದರೂ ನಮ್ಮ ಸೈನಿಕರು, ಇನ್ಸ್‌ಪೆಕ್ಟರ್ ಗಳು, ತನಿಖಾಧಿಕಾರಿಗಳು, ಎಲ್ಲ ರೀತಿಯ ಸರಕಾರಿಅಽಕಾರಿಗಳ ಕುಟುಂಬಗಳು ಮತ್ತು ವಿಶ್ವಸಾರ್ಹ ಸ್ನೇಹಿತರನ್ನು ವಿಸ್ತರಿಸುತ್ತದೆ. ಧೋವಲ್ ಬಾಹ್ಯಶಕ್ತಿ ಯಲ್ಲದ ನಿಜವಾದ ಸಮಾಜವನ್ನು ನೆನಪಿಸಿದ್ದಾರೆ. ಈಮೂಲಕ ನಿಜವಾದ ಶಕ್ತಿ ಆಂತರಿಕವಾಗಿದೆ ಅನ್ನುವುದನ್ನು ತಮ್ಮ ನಡೆ-ನುಡಿಯಲ್ಲಿ ಪ್ರದರ್ಶಿಸಿದ್ದಾರೆ.
ಅಜಿತ್ ದೋವಲ್ ಚೀನಾ, ಪಾಕಿಸ್ತಾನಗಳಿಗೆ ಸಿಂಹಸ್ವಪ್ನವಾಗಿದ್ದಾರೆ, ದೇಶದ ಭದ್ರತಾ ವಿಷಯಕ್ಕೆ ಸವಾಲಾಗುವಂತಹ ಅದೆಷ್ಟೋ ಕ್ಲಿಷ್ಟ ಸಂದರ್ಭವನ್ನುಇವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರನ ಹುದ್ಧೆಗೆ ಹಲವು ವರ್ಷದ ಅನುಭವ ಹೊಂದಿರುವ ದೋವಲ್ ಅವರೇ ಸೂಕ್ತಎಂದು ಪ್ರಧಾನಿ ಮೋದಿ ನೇತೃತ್ವದ ಸರಕಾರ ನೇಮಕ ಮಾಡಿದೆ. ಮೋದಿಯವರ ಸಂಪೂರ್ಣ ವಿಶ್ವಾಸಕ್ಕೂ ದೋವಲ್ ಪಾತ್ರರಾಗಿದ್ದಾರೆ ಅನ್ನುವುದು ವಿಶೇಷ.ಭಾರತದ ಬೇಹುಗಾರಿಕಾ ಅಧಿಕಾರಿಯಾಗಿ, ಗುಪ್ತಚರ ದಳದ ಇಂಟೆಲಿಜೆನ್ಸ್ ಬ್ಯುರೊ ನಿರ್ದೇಶಕರಾಗಿ ಹಲವು ವರ್ಷ ಸೇವೆ ಮಾಡಿದ್ದಾರೆ.  ಇಂದಿರಾಗಾಂಧಿ, ನರಸಿಂಹರಾವ್, ವಾಜಪೇಯಿ ಪ್ರಧಾನಿಗಳಿಗೆ ದೋವಲ್ ಆತ್ಮೀಯರಾಗಿದ್ದರು.
(ಕೃಪೆ: ಎನ್‌ಡಿ ಟಿವಿ)