ಕೃಷಿ ಕಾಯಿದೆ ವಾಪಸಿನ ಹಿಂದಿನ ಸತ್ಯವೇನು ?
ರಾಷ್ಟ್ರಪತಿಗಳ ಅನುಮೋದನೆಯ ಮೇರೆಗೆ ೨೪ ಸೆಪ್ಟೆಂಬರ್ ೨೦೨೦ರಂದು ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿತು.ಈ ಬಗ್ಗೆ ಕೇಂದ್ರ ಕೃಷಿ ಸಚಿವರಾಗಿದ್ದ ನರೇಂದ್ರಸಿಂಗ್ ತೋಮಾರ್ ಬಿಡಿ ಬಿಡಿ ಯಾಗಿ ಜನತೆಗೆ ಮನದಟ್ಟು ಮಾಡಿಕೊಟ್ಟಿ ದ್ದರು. ಆದರೆ ಭಾಷಾ ಸಮಸ್ಯೆಯೋಅಥವಾ ನಮ್ಮಗಲೇ ಆ ಕಾಯಿದೆಗಳ ಬಗ್ಗೆ ನಕಾರಾತ್ಮಕ ಅಂಶಗಳು ತಲೆಗೆ ಹೋಗಿದ್ದ ಕಾರಣದಿಂದಲೋ ಅವರ ಮಾತು ಯಾರಿಗೂ ಅರ್ಥವಾಗಲಿಲ್ಲ ವೆನಿಸುತ್ತದೆ.
ಪರಿಣಾಮ ರೈತರ ಹೋರಾಟ ಮೊದಲು ಸಣ್ಣದಾಗಿ ಶುರುವಾದರೂ ಭಾರತೀಯ ಕಿಸಾನ್ ಯೂನಿಯನ್ (ಆಓಖಿ) ನಾಯಕ ರಾಕೇಶ್ ಟಿಕಾಯತ್ ಬೆಂಬಲ ಸೂಚಿಸಿದ ಮೇಲಂತೂ ಇಡೀ ಹೋರಾಟದ ಚಿತ್ರಣವೇ ಬದಲಾಯಿತು. ಶಾಂತಿಯುತವಾಗಿದ್ದ ರೈತ ಹೋರಾಟ ಬರಬರುತ್ತ ಹಿಂಸಾತ್ಮಕವಾಗಿ ತಿರುಗಿತು. ಪಂಜಾಬಿನ -ರೋಜಿಪುರದಲ್ಲಿ ರೈಲು ತಡೆಯೊಂದಿಗೆ ಶುರುವಾದ ಈ ಹೋರಾಟ ಹರಿಯಾಣ ಮತ್ತು ದೆಹಲಿಯ ಕಡೆಗೆ ನುಗ್ಗಿ ಏನೆಲ್ಲ ದಾಂಧಲೆಗಳು ಮತ್ತು ಗೊಂದಲಗಳು ಶುರುವಾದವೆಂಬುದನ್ನು ನಾವು ಈಗಾಗಲೇ ಕಣ್ಣಾರೆ ಕಂಡಿದ್ದೇವೆ ಮತ್ತು ಕೇಳಿದ್ದೇವೆ.
ನವೆಂಬರ್ ೨೫ ರಂದು ‘ದೆಹಲಿ ಚಲೋ’ ಚಳವಳಿಗೆ ಕರೆಕೊಟ್ಟ ರೈತರ ಹೋರಾಟ ಶಾಂತಿಯುತವಾಗಿ ನಡೆಯುವಾಗಲೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಿಡಿ ಹೊತ್ತಿಸಿದವು. ದೆಹಲಿಯ ಕೆಂಪು ಕೋಟೆಯ ಮೇಲೆ ಖಲಿಸ್ಥಾನದ ಭಾವುಟವೂ ಹಾರಾಡಿಬಿಟ್ಟಿತು. ಬರಬರುತ್ತ ರಾಜಸ್ಥಾನ, ಹರಿಯಾಣ, ಪಂಜಾಬ, ಮಹಾ ರಾಷ್ಟ್ರ, ಗುಜರಾತಿನ ರೈತರು ದೆಹಲಿ ಕಡೆಗೆ ನುಗ್ಗಿದ ಮೇಲಂತೂ ದೆಹಲಿ-ಜೈಪುರ ರಾಷ್ಟ್ರೀಯ ಹೆzರಿಯನ್ನು ಬಂದ್ ಮಾಡಿ ಕುಳಿತರು. ಸಂದರ್ಭವನ್ನು ಉಪಯೋಗಿಸಿಕೊಂಡ ನೀಲಿಚಿತ್ರ ತಾರೆ ಮಿಯಾ ಖಲೀಫಾ ಟ್ವೀಟ್ ಮಾಡಿ ಭಾರತೀಯರನ್ನು ಕೆಣಕಿದರು. ಈಕೆಯ ಧ್ವನಿಗೆ ಜೊತೆಗೂಡಿಸಿದವರು ಬರ್ಬಡೋಸ್ ನ ಪಾಪ್ ತಾರೆ ’ರಿಹಾನಾ’ ಮತ್ತು ಸ್ವೀಡನ್ನಿನ ಗ್ರೇಟಾ ಥನ್ಬರ್ಗ್. ಈ ಮೂಲಕ ಜಾಗತೀಕರಣಗೊಳಿಸುವ ಯತ್ನವೂ ನಡೆಯಿತು.
ಹಾಗೆ ನೋಡಿದರೆ, ಭಾರತೀಯರು ಬಹುತೇಕ ರೈತರು ಕೇಂದ್ರ ಸರ್ಕಾರದ ಕೃಷಿ ಕಾಯಿದೆಗಳನ್ನು ಅರ್ಥ ಮಾಡಿಕೊಂಡು ಒಪ್ಪಿಗೆಯನ್ನು ಸೂಚಿಸಿದ್ದರು. ಆದರೆ ಶುಕ್ರವಾರ ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಹಿತದೃಷ್ಟಿಯಿಂದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುತ್ತಿರುವುದಾಗಿ ಹೇಳಿಬಿಟ್ಟಿದ್ದಾರೆ.ಒಂದು ವರ್ಷದಿಂದಲೂ ನಡೆಯುತ್ತಿರುವ ಈ ರೈತ ಹೋರಾಟಕ್ಕೆ ಸುತರಾಂ ಜಗ್ಗದ ಕೇಂದ್ರ ಸರ್ಕಾರ ಮತ್ತು ನರೇಂದ್ರಮೋದಿಯವರು ಇದ್ದಕ್ಕಿದ್ದಂತೆ ಈ ರೀತಿಯಾಗಿ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುತ್ತಿರುವುದಾಗಿ ಹೇಳಿಕೆ ಕೊಟ್ಟ ಮೇಲಂತೂ ಕೆಲವರಂತೂ ತಲೆ ಮೇಲೆ ಕೈಹೊತ್ತು ಕುಳಿತರೆ, ಇನ್ನು ಕೆಲವರಂತೂ ಮೋದಿಜಿಯವರನ್ನು ಪ್ರೀತಿಸುತ್ತಿದ್ದವರು ಅವರ ಈ ಹೇಳಿಕೆಯಿಂದ ಅವರನ್ನು ದೂಷಿಸುತ್ತಿzರೆ ಚೀರಾಡುತ್ತಾ ಮೈ ಪರಚಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ಮೋದಿ ಈ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂದು ನಾವು ಆಲೋಚಿಸಿದಾಗ ನಮ್ಮ ತಲೆಗೆ ಹಲವು ಅಂಶಗಳು ತಲೆಯೊಳಗೆ ಓಡಾಡುತ್ತವೆ. ಮತ್ತೊಂದು ಕಡೆ ಯೋಚಿಸುವುದಾದರೆ ಕೃಷಿ ಕಾಯಿದೆಯನ್ನು ವಾಪಸು ಪಡೆಯಲು ಒಂದಷ್ಟು ದೇಶದ ಒತ್ತಡ, ಆಂತರಿಕ ಭದ್ರತೆಯ ಅಂಶಗಳು ಕೂಡ ಕಾರಣವಾಗಿರಬಹುದು ಎಂದೆನ್ನಿಸುತ್ತಿದೆ. ಖಲಿಸ್ತಾನ ದ ಪ್ರತ್ಯೇಕ ಕೂಗು ಹೆಚ್ಚಾಗಿರುವುದರಿಂದ ಅವರು ಮುಂದೆ ಏನು ಬೇಕಾದರೂ ಮಾಡಲು ತಯಾರಾ ಗಿರುತ್ತಾರೆಂಬ ಮುನ್ಸೂಚನೆಯೇ..? ಹೀಗೆ ರೈತ ಹೋರಾಟ ಮುಂದುವರಿದರೆ ಸಾವು-ನೋವುಗಳು ಎದುರಾದರೆ ಅದಕ್ಕೆ ಆಡಳಿತ ಪಕ್ಷವೇ ಕಾರಣ ಎಂಬ ಹಣೆಪಟ್ಟಿ ಕಟ್ಟುತ್ತಾರೆಂಬ ಮುನ್ಸೂಚನೆಯೇ? ರೈತ ಹೋರಾಟವನ್ನೆ ನೆಪ ಮಾಡಿಕೊಂಡು ಉಗ್ರಗಾಮಿಗಳು ಹಿಂಸಾತ್ಮಕ ಕೃತ್ಯಗಳನ್ನು ನಡೆಸುವ ಸುಳಿವು ಏನಾದರೂ ಇರಬಹುದೆ? ಭಯೋತ್ಪಾದಕರು ರೈತ ಹೋರಾಟವನ್ನು ಉಪಯೋಗಿಸಿಕೊಂಡು ರೈತರ ವೇಷದಲ್ಲಿ ಬಂದು ನಮ್ಮ ಆಂತರಿಕ ಭದ್ರತೆಯ ಮೇಲೆ ದಾಳಿ ನಡೆಸುವ ಮುನ್ಸೂಚನೆಯೆ? ರೈತ ಹೋರಾಟ ಆಂತರಿಕವಾಗಿ ಹೆಚ್ಚಾದ ಸಮಯವಕಾಶ ಬಳಸಿಕೊಂಡು ನಮ್ಮ ಗಡಿ ಪ್ರದೇಶದ ಮೇಲೆ ದಾಳಿ ಮಾಡುವ ಯೋಜನೆಯಿದೆಯಾ ಅಕ್ಕ-ಪಕ್ಕದ ಶತ್ರು ರಾಷ್ಟ್ರಗಳಿಗೆ? ಹೀಗೆ ಹಲವಾರು ಊಹೆಯ ಹಂದರ ತಲೆಯಲ್ಲಿ ಸುತ್ತುತ್ತಿವೆ.
ಏನೇ ಆಗಲಿ ಮುಂದಾಗಬೇಕಿದ್ದ ಅಪಾಯಗಳಿಂದ ರಕ್ಷಿಸಲೋಸುಗ ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದೀಜಿಯವರು ಈ ರೀತಿಯ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ.