ಕರ್ನಾಟಕದ ಸಮಗ್ರತೆಯ ಪ್ರಶ್ನೆಗೆ ಕೊಟ್ಟ ಏಕೀಕೃತ ಉತ್ತರ
ನುಡಿ ನಿಪುಣರು
ಚಂದ್ರಕಾಂತ ಬಾರಕೇರ
ನೆರೆ-ಹೊರೆಯ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕರುನಾಡನ್ನು ಕನ್ನಡಿಗರ ಬಯಕೆ ಹಾಗೂ ಕನ್ನಡವನ್ನೇ ಉಸಿರಾಗಿಸಿಕೊಂಡಿದ್ದ ಉದಾತ್ತ ಸಾಹಿತಿಗಳು ಮತ್ತು ಕನ್ನಡಾಭಿಮಾನಿಗಳ ಅವಿರತ ಹೋರಾಟದ ಫಲವಾಗಿ ಉದಯವಾದ ಏಕೀಕೃತ ಕರ್ನಾಟಕದ ನೇತೃತ್ವ ವಹಿಸಿಕೊಂಡಿದ್ದ ಮುಂಚೂಣಿ ನಾಯಕರೆಲ್ಲರೂ ಉತ್ತರಕರ್ನಾಟಕದವರೇ ಎಂಬುದು ಗಮನಾರ್ಹ ಸಂಗತಿ.
ಕರ್ನಾಟಕ ಕಟ್ಟಲು ಬದುಕನ್ನೇ ಮುಡುಪಾಗಿಟ್ಟ ಕನ್ನಡದ ಕುಲ ಪುರೋಹಿತ ಆಲೂರ ವೆಂಕಟರಾಯರು, ಪಾಟೀಲ ಪುಟ್ಟಪ್ಪ, ಅಂದಾನಪ್ಪ ದೊಡ್ಡ ಮೇಟಿ, ಈಶ್ವರಸಣಕಲ್ಲ, ಡಾ.ದುಂಡಪ್ಪ ಕರ್ಕಿ, ದಿನಕರ ದೇಸಾಯಿ, ಕಪಗಲ್ ರಸೂಲ್‌ಸಾಬ್, ಜಮಖಂಡಿಯ ರಾಜೇಸಾಬ, ಪರಶುರಾಮ ಪಟವರ್ಧನ, ವಿರೂಪಾಕ್ಷಪ್ಪ ಅಬ್ಬಿಗೇರಿ ಮೊದಲಾದ ಕನ್ನಡದ ಕಟ್ಟಾಳುಗಳು ಉತ್ತರ ಕರ್ನಾಟಕ ದವರು. ದೇಶ, ಕಾಲ, ಪರಿಸ್ಥಿತಿ ಔಚಿತ್ಯವನ್ನ ನುಸರಿದಿ ತತ್ವಾದರ್ಶಗಳನ್ನು ಆತ್ಮಸಾಥ ಮಾಡಿಕೊಳ್ಳಬೇಕು ಮತ್ತು ಕಾರ್ಯರಂಗಕ್ಕೆ ಧುಮಕಬೇಕು. ಇದರಲ್ಲಿ ಏಕೀಕರ ಣಕ್ಕೆ ಹೋರಾಡಿದ ಮಹನೀಯರುಗಳು ಅಪ್ರತೀಮರು.
ಏಕೀಕರಣ ಸಂಪಾದನೆಯ ವಿಶಾಲ ಧ್ಯೇಯ ಸಾಧನೆಗಾಗಿ ಶ್ರಮಿಸುವಾಗ ನಿಸ್ವಾರ್ಥ ಸೇವೆಯೊಂದಿಗೆ ತ್ಯಾಗ-ಬಲಿದಾನಗಳ ಮಾರ್ಗ ಅನುಸರಿಸಿದವರು ಏಕೀಕರಣಕ್ಕೆ ಹೋರಾಡಿದ ಕನ್ನಡದ ಕಟ್ಟಾಳುಗಳು. ಕರ್ನಾಟಕ ವೆಂಬುದು ಏಕೀಕರಣ ಹೋರಾಟಗಾರರ ದೃಷ್ಟಿಯಲ್ಲಿ ಕೇವಲ ಭೌಗೋಳಿಕ ಸಂಕೇತವಾದ ಭೂಪ್ರದೇಶ ವಾಗಿರಲಿಲ್ಲ. ಅದು ಭುವನೇಶ್ವರಿಯ ಲೀಲಾ ಕ್ಷೇತ್ರವಾಗಿತ್ತು. ಇವರುಗಳ ಪಾಲಿಗೆ ಕನ್ನಡವೆಂಬುದು ಒಂದು ಭವ್ಯೋದಾತ್ತವಾದ ಶಕ್ತಿ. ಸಮುಜ್ವಲ ವಾದ ಸಂಸ್ಕೃತಿ, ಹಿರಿಮೆಯ ಮುದ್ರೆ ಹೊತ್ತ ಜೀವನ ದರ್ಶನ. ಕರ್ನಾಟಕದ ಚರಿತ್ರೆಯ ಪರಾತ್ಪರ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅವರ ಬಾಳಿನಲ್ಲಿ ಸಾಕ್ಷಾತ್ಕರಿಸಿಕೊಂಡ ಇವರುಗಳ ಬಾಳಿನಲ್ಲಿ ಕನ್ನಡದ ಅಂದ-ಚೆಂದಗಳು, ಚೆಲುವು-ಚೇತನಗಳು ಚಿತ್ತಾರಗೊಂಡಿದ್ದವು.
ಅವರ ನಡೆ-ನುಡಿ, ತನು-ಮನ, ಪ್ರಾಣ- ಆತ್ಮ ಏನೆಲ್ಲ ಕನ್ನಡತನದ ಅಮೃತಸ್ಪರ್ಶದಿಂದ ಪುನೀತವಾಗಿ ಅವರ ವ್ಯಕ್ತಿತ್ವವು ಕರ್ನಾಟಕ ಸಂಸ್ಕೃತಿಯ ಸರ್ವಾಂಗ ಸುಂದರ ಬಿಂಬದಂತೆ ಭವ್ಯವಾಗಿ ಶೋಭಿಸುತ್ತಿತ್ತು. ಏಕೀಕೃತ ಕರ್ನಾಟಕ ರಾಜ್ಯದ ಅಂದಿನ ಸಚಿವ ಸಂಪುಟದಲ್ಲಿ ಸ್ಥಾನವನ್ನಲಂಕರಿಸುವ ಭಾಗ್ಯವೂ ಈ ಹೋರಾಟಗಾರರದಾಯಿತು. ಕರ್ನಾಟಕ ಪ್ರಾಂತ ರಚನೆಯ ಮೇಲೆ ಅನೇಕ ನಿರಾಶೆಯ ಕಾರ್ಮೋಡಗಳು ಎದುರಾದವು.
ರಾಜ್ಯ ನಿರ್ಮಾಣಕ್ಕೆ ತರಬೇತಿ:ಅರವಿಂದರ ತತ್ವದಲ್ಲಿ ವಿಶ್ವಾಸವಿರುವ ಉತ್ತರ ಕರ್ನಾಟಕದ ಏಕೀಕರಣ ಹೋರಾಟ ಗಾರರು ಒಂದೆಡೆ ಸೇರಿ ಚಿಂತನೆ ನಡೆಸಿಮುಂದಿನ ಹೋರಾಟದ ಮಾರ್ಗಗಳನ್ನು ಕಂಡುಕೊಳ್ಳಲು ಮುಂದಾದರು. 1952 ನವ್ಹೆಂಬರ್ 24 ರಂದು ಅರವಿಂದರ ಸಿದ್ದಿಯ ದಿನದಂದು ನಿರ್ಣಯ ತೆಗೆದು ಕೊಂಡರು. ಕರ್ನಾಟಕ ರಾಜ್ಯ ನಿರ್ಮಾಣ ಶಿಬಿರಕ್ಕೆ ತರಬೇತಿ ಪಡೆಯಲು ಬರುವ ವರು ಪ್ರತಿಜ್ಞಾನ ಪತ್ರಕ್ಕೆ ಅಂಕಿತ ಹಾಕಬೇಕಿತ್ತು. ನಾಡಿನ ನಾನಾ ಮೂಲೆ ಗಳಿಂದ ಆಯ್ಕೆ ಮಾಡಿ ಮಾಡಿ ಇಪ್ಪತ್ತೊಂದು ಜನರನ್ನು ಆಯ್ಕೆ ಮಾಡಲಾಯಿತು. 21 ದಿನ ನಡೆದ ಈ ಶಿಬಿರದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಅಂದರೆ ಕರ್ನಾಟಕ ಇತಿಹಾಸ ಹಾಗೂ ಧಾರ್ಮಿಕ ಪರಂಪರೆ ಆರ್ಥಿಕ ಯೋಜನೆಗಳು ಇನ್ನಿತರ ವಿಷಯಗಳ ಬಗ್ಗೆ ಮಂಥನವಾಗುತ್ತಿತ್ತು. ಈ ಎಲ್ಲ ಬೆಳವಣಿಗೆಗೂ ಕಾರಣಿ ಪುರುಷರು ಹೋರಾಟದ ನೇತೃತ್ವ ವಹಿಸಿದ್ದ ಉತ್ತರ ಕರ್ನಾಟಕದ ಕಟ್ಟಾಳುಗಳು.
ನಾಡಿನ ನಾನಾ ಮೂಲೆಗಳಿಂದ ಸಾಹಿತಿಗಳನ್ನು, ಕಲಾವಿದರನ್ನು ಆರ್ಥಿಕ ಹಾಗೂ ಶಿಕ್ಷಣ ತಜ್ಞರನ್ನು ಅಧ್ಯಾತ್ಮಿಕ ಹಿನ್ನೆಲೆಯುಳ್ಳ ಸಾತ್ವಿಕ ರಾಜಕಾರಣಿಗಳನ್ನು ಆಹ್ವಾನಿಸಿಕೊಂಡರು. 1953 ಜನೇವರಿ 11ರಂದು ಜಕ್ಕಲಿ ಗ್ರಾಮದ ಅನ್ನದಾನೇಶ್ವರ ದೇವಸ್ಥಾನದ ಆವರಣದಲ್ಲಿ ಶಿಬಿರ ನಡೆಯಿತು. ಕರ್ನಾಟಕದ ವೈಭವ ವನ್ನೇ ಜನರ ಕಣ್ಣೆದುರಿಗೆ ಕಟ್ಟಿದ ಕನ್ನಡದ ಕುಲ ಪುರೋಹಿತ ಆಲೂರ ವೆಂಕಟರಾಯರು ಕರ್ನಾಟಕ ರಾಜ್ಯ ನಿರ್ಮಾಣ ಕರ್ನಾಟಕತ್ವದ ಅಂಶಕ್ಕೆ ಗಟ್ಟಿ ಅಡಿಪಾಯ ಹಾಕಿದರು. ಕರ್ನಾಟಕ ಏಕೀಕರಣ ಬೇಡಿಕೆಯ ಭೂಮಿಕೆಗೆ ಒಂದು ಹದವನ್ನು ತಂದುಕೊಟ್ಟರು.
ಕರ್ನಾಟಕ ರಾಜ್ಯ ನಿರ್ಮಾಣ ಶಿಬಿರ ಪ್ರಾರಂಭವಾದ ದಿನದಂದು ನಡೆದ ಈ ಘಟನೆಯು ಕರ್ನಾಟಕ ಶಕ್ತಿಯ ಉಪಾಸನೆಯ ಫಲವೆಂದು ನಂಬಲಾಗಿದೆ. ಉತ್ತರಕರ್ನಾಟಕದ ತುಂಬೆಲ್ಲಾ ಚೈತನ್ಯ ಹರಿದು ಬಂದು ಜನತೆ ಯನ್ನು ಎಚ್ಚರಿಸಿತು. ಅದರಗುಂಚಿ ಶಂಕರಗೌಡ್ರ ಉಪವಾಸದಿಂದ ಪರಿಸ್ಥಿತಿಯು ವಿದ್ವಂಸದ ರೂಪ ವನ್ನು ತೆರಳಿದರು. ಅದೇ ಶಕ್ತಿಯ ಇನ್ನೊಂದು ಮುಖ್ಯವಾಗಿ ತನ್ನ ಕೆನ್ನಾಲಿಗೆ ಯನ್ನು ಚಾಚಿ ನಿಂತು ಕೇಂದ್ರ ಸರ್ಕಾರದ ಕಣ್ಣು ತೆರೆಯಿತು.
ಮಹನೀಯರ ಹೋರಾಟ..:ಭಾಷಾನುಗುಣ ಪ್ರಾಂತ ರಚನೆಯ ಅಂಗವಾದ ರಾಜ್ಯ ನಿರ್ಮಾಣ ಕಾರ್ಯ ಕೇವಲ ಪ್ರಾಂತಾಭಿಮಾನ ಇಲ್ಲವೇ, ಭಾಷಾಭಿಮಾನದ ಹುಚ್ಚು ಹೊಳೆಯಲ್ಲ. ರಾಜಕೀಯ ಜನ್ಮಾದವಲ್ಲ.
ಪ್ರಥಕ್ ಭಾವನೆಯ ಕೃತಿಯಂತೂ ಅಲ್ಲವೇ ಅಲ್ಲ. ಕರ್ನಾಟಕದ ರಾಜ್ಯ ನಿರ್ಮಿತಿಯು, ಜನಸಾಮಾನ್ಯರ, ಹಿಂದುಳಿದವರ ಹಾಗೂ ಅಲ್ಪ ಸಂಖ್ಯಾತರ ಸಮಗ್ರ ಕಲ್ಯಾಣಕ್ಕಾಗಿಯೇ ಇದೆ ಎಂಬು ವದರಲ್ಲಿ ನಮ್ಮ ವಿಶ್ವಾಸವಿದೆ. ಸಾಧನೆಯಲ್ಲಿಯೂ, ಸಿದ್ಧಿಯಲ್ಲಿಯೂ ಅವರ ಹಿತ ಸಂಬಂಧಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಅದಕ್ಕೆ ಕುಂದು ಬಾರದಂತೆ ಏಕೀಕರಣ ಹೋರಾಟ ಗಾರರು ನಡೆದುಕೊಂಡರು.
ಕರ್ನಾಟಕದ ಯಾವುದೇ ಭಾಗವನ್ನು ನಾವು ಸಮಾನ ವಾಗಿ ಪ್ರೀತಿಸುತ್ತೇವೆ ಹಾಗೂ ಗೌರವಿಸುತ್ತೇವೆ. ರಾಜ್ಯದ ಸಮಗ್ರ ಹಿತವೇ ನಮ್ಮ ಗುರಿ. ಕರ್ನಾಟಕ ರಾಜ್ಯ ನಿರ್ಮಾಣಕ್ಕಾಗಿ ಭಾರತ ಸರ್ಕಾರದಿಂದ ರಚಿತವಾಗಬಹುದಾದ ಸೀಮಾ ಸಮಿತಿಯ ನಿರ್ಣಯವನ್ನು ಜಾರಿಗೆ ತರಲು ಯತ್ನಿಸುತ್ತೇವೆ. ನೆರೆಯ ರಾಜ್ಯ ಗಳೊಂದಿಗೆ ಸಹೋದರತ್ವ ಭಾವನೆ ಹೊಂದುತ್ತೇವೆ. ಸಕಲರೊಡನೆ ಸವಿ ಭಾವನೆ ಯಿಂದಲೇ ಸಾಗುವ ನಿಶ್ಚಯ ಮಾಡಿದ್ದೇವೆ ಎಂಬ ಧ್ಯೇಯ ದೊಂದಿಗೆ ಅಖಂಡ ಕರ್ನಾಟಕ ನಿರ್ಮಾಣಕ್ಕೆ ಹೋರಾಡಿದ ಮಹನೀಯರೆಲ್ಲರೂ ಉತ್ತರ ಕರ್ನಾಟಕದವರೇ ಎಂಬುದು ವಿಶೇಷ.
ಕಪಗಲ್ ರಸೂಲಸಾಬ್ ಅಮರ..ಏಕೀಕರಣ ಹೋರಾಟದಲ್ಲಿ ಬಳ್ಳಾರಿಯ ಕಪಗಲ್ ರಸೂಲಸಾಬ್ ವೀರ ಮರಣವನ್ನಪ್ಪಿದ್ದಾರೆ. ಅಖಂಡ ಕರ್ನಾಟಕ ಸ್ಥಾಪನೆಗೆ ಇಂಥ ಪರಿಣಾಮಕಾರಿ ಹೋರಾಟ, ತ್ಯಾಗ ನಡೆದದ್ದು ಉತ್ತರ ಕರ್ನಾಟಕದಿಂದಲೇ. ಸದ್ಯದ ಪರಿಸ್ಥಿತಿಯಲ್ಲಿ ಏಕೀಕರಣಕ್ಕಾಗಿ ಮಡಿದ ರಸೂಲ ಸಾಬ್ ಅವರನ್ನು ಸರ್ಕಾರ ಮರೆತಂತಿದೆ. ಕಪಗಲ್ ರಸೂಲಸಾಬ್‌ರ ಕನ್ನಡ ಪ್ರೇಮತ್ವವನ್ನು ಅರ್ಥ ಮಾಡಿಕೊಂಡು. ಆ ಕುಟುಂಬಕ್ಕೆ ಅಗತ್ಯ ನೆರವು, ಗೌರವಾಧಾರ ಒದಗಿಸಬೇಕಿದೆ.