ಅಕ್ಷರ, ಅನ್ನ ಕೊಟ್ಟ ಅಮ್ಮೆಂಬಾಳ್ ಪೈಗಳು
ಸ್ಮರಣೆ
ಕಮಲಾಕರ ಕೆ.ಆರ್‌.ತಲವಾಟ
ಜನರು ಸಾಲಕ್ಕಾಗಿ ಪಡುವ ಕಷ್ಟ ನೋಡಿ, ಸಾರ್ವಜನಿಕ ಹಣದಿಂದಲೇ ನಿಧಿ ಸ್ಥಾಪಿಸಿ ಉಳಿತಾಯ-ಸಾಲ ಎರಡನ್ನೂ ಒದಗಿಸುವ ಚಿಂತನೆ ಮಾಡಿ ಜಯಶೀಲ ರಾಗಿದ್ದು ಅಂದಿನ ದಿನಗಳಲ್ಲಿ ಯಶೋಗಾಥೆಯೇ ಸರಿ.
ಕರ್ನಾಟಕದ ಕರಾವಳಿಗೆ ಸೇರಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಬ್ಯಾಂಕುಗಳ ಉಗಮ ಸ್ಥಳ. ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋ ರೇಷನ್ ಬ್ಯಾಂಕ್, ವಿಜಯ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕು ಇವೆಲ್ಲವೂ ಅಲ್ಲೇ ಸ್ಥಾಪನೆಗೊಂಡದ್ದು. ಇದರಲ್ಲಿ ಸಿಂಡಿಕೇಟ್ ಬ್ಯಾಂಕು, ವಿಜಯಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್ ಇತ್ತೀಚೆಗೆ ಬೇರೆಬೇರೆ ಬ್ಯಾಂಕಿನೊಂದಿಗೆ ವಿಲೀನವಾಗಿದ್ದು ಇತಿಹಾಸ.
ಸಿಂಡಿಕೇಟ್ ಬ್ಯಾಂಕು ಕೆನರಾ ಬ್ಯಾಂಕಿನೊಂದೀಗೆ ವಿಲೀನವಾಗಿದೆ. ಜತೆಗೆ ಈ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲೂ, ಹೋಟೆಲ್ (ಉಡುಪಿ ಬ್ರಾಹ್ಮಣ ಹೋಟೆಲ್, ಕಾಮತ್ ಹೋಟೆಲ್) ಉದ್ಯಮದಲ್ಲೂ ಇಂದಿಗೂ ಚಿರಪರಿಚಿತ. ಪೈ ಎಂಬುದು ಗೌಡ ಸಾರಸ್ವತ ಬ್ರಾಹ್ಮಣರ ಸರ್ ನೇಮ್. ರಾಷ್ಟ್ರಕವಿ ಗೋವಿಂದ ಪೈ, ಟಿಎಂಎ ಪೈ ಇಂಥವರ ಜತೆ ಕೇಳಿಬರುವ ಮತ್ತೊಂದು ಹೆಸರು ಕೆನರಾಬ್ಯಾಂಕ್ ಸ್ಥಾಪಕ ಶ್ರೀ ಅಮ್ಮೆಂಬಾಳ್ ಸುಬ್ಬರಾವ್ ಪೈಗಳದು.
ನವೆಂಬರ್19 ಅವರ ಜನ್ಮದಿನ. ಇದನ್ನು ಕೆನರಾ ಬ್ಯಾಂಕ್ ಸಂಸ್ಥಾಪಕರ ದಿನನ್ನಾಗಿ ಆಚರಿಸುತ್ತಿದೆ. ಇಂದು 116ನೇ ಜನ್ಮದಿನ. ಅಮ್ಮೆಂಬಾಳ್ ಸುಬ್ಬರಾವ್ ಪೈ ಅವರು ಮುನ್ಸಿ- ಕೋರ್ಟ್ ವಕೀಲ ಉಪೇಂದ್ರ ಪೈಗಳ ನಾಲ್ವರು ಮಕ್ಕಳಲ್ಲಿ ಚಿಕ್ಕವರು. ಹುಟ್ಟಿದ್ದು ಮುಲ್ಕಿಯಲ್ಲಿ 1852ರಲ್ಲಿ. ಚಿಕ್ಕ ವಯಸ್ಸ ತಾಯಿ ಕಳೆದುಕೊಂಡಿದ್ದು ದ್ಯಾಭ್ಯಾಸದೆಡೆಗೆ ತೀವ್ರವಾಗಿ ತೊಡಗಿಸಲು ಕಾರಣವಾಯಿತಂತೆ. ಬಾಲ್ಯ ಶಿಕ್ಷಣ ಮಂಗಳೂರಿನ ಗವರ್ನ ಮೆಂಟ್ ಹೈಸ್ಕೂಲಿನಲ್ಲಿ. ಮುಂದಿನ ವ್ಯಾಸಂಗಕ್ಕಾಗಿ ಮದ್ರಾಸಿಗೆ ತೆರಳಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಾಲೇಜು ಮುಗಿಸಿ ಮದ್ರಾಸ್ ಲಾ ಕಾಲೇಜು ಸೇರಿದರು. ಆ ದಿನಗಳಲ್ಲಿ ಅಗಾಧ ಪರಿಣಾಮ ಬೀರಿದವರು ಜಸ್ಟೀಸ್ ಹೊಲೊವೇ.
೧೮೭೬ರಲ್ಲಿ ಸುಬ್ಬರಾವ್ ಪೈಗಳ ತಂದೆ ತೀರಿಕೊಂಡಿದ್ದರಿಂದ ಮಂಗಳೂರಿಗೆ ಹಿಂದುರುಗಿ ಲಾ ಪ್ರಾಕ್ಟೀಸ್ ಶುರುಮಾಡಿದರು. ಸಾಮಾನ್ಯವಾಗಿ ಯಾವುದೇ ವಕೀಲರಾದರೂ ಆಸ್ತಿಪಾಸ್ತಿ ಅಥವಾ ಮತ್ತಾವುದೊ ವಿಷಯದಲ್ಲಿ ಜನರು ಜಗಳವಾಡಿಕೊಂಡು ಕೊರ್ಟಿನಲ್ಲಿ ಕೇಸು ದಾಖಲಿಸಲು ಬಂದು ಸಲಹೆ ಕೇಳಿದರೆಇವರು ಹಲವಾರು ಬಾರಿ ದುಡ್ಡಿಗಾಗಿ ಆಸೆ ಪಡದೆ ಕೊರ್ಟಿನ ಹೊರಗೆ ವ್ಯಾಜ್ಯವನ್ನು ಪರಿಹರಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದರಂತೆ. ಯಾಕೆಂದರೆ ನಮ್ಮ ದೇಶದಲ್ಲಿ ನ್ಯಾಯ ನಿರ್ಣಯದಲ್ಲಿನ ವಿಳಂಬ, ಅದರಿಂದ ಜನ ಸಾಮಾನ್ಯರಿಗಾಗುವ ಆರ್ಥಿಕ, ಮಾನಸಿಕ ಹೊರೆಯನ್ನು ಅರಿತಿದ್ದರು ಅವರು. ಇದನ್ನು ನೋಡಿ ದಾಗ ಅವರ ಮಾನವೀಯತೆಯ ಮತ್ತೊಂದು ಮುಖ ತೆರೆದುಕೊಳ್ಳುತ್ತದೆ.
1891ರಲ್ಲಿ ಸುಬ್ಬರಾವ್ ಪೈಗಳಿಗೆ ಪರಿಚಯವಿದ್ದ 4 ಶಿಕ್ಷಕರು ಮಂಗಳೂರಿನಲ್ಲಿ ಸ್ಕೂಲು ಪ್ರಾರಂಭಿಸುವ ಬಗೆಗೆ ಚರ್ಚಿಸಿದರಂತೆ. ಅದರ ಫಲವೇ ಮಂಗಳೂರಿನ ಕೆನರಾ ಹೈ ಸ್ಕೂಲ್. ಈ ಸ್ಕೂಲಿನ ಜಾಗ ಸಹ ಇವರ ತಂದೆ ದಾನವಾಗಿ ಕೊಟ್ಟದ್ದಂತೆ. ಪೈ ಅವರು ಅಂದೇ ಹೆಣ್ಣು ಮಕ್ಕಳು ಓದಬೇಕೆಂದು ಬಯಸಿದ್ದರು. ಹೆಣ್ಣುಮಕ್ಕಳಿಗಾಗಿ ಮಂಗ ಳೂರಿನಲ್ಲಿ 1894ರಲ್ಲಿ ಕೆನರಾ ಹೆಣ್ಣು ಮಕ್ಕಳ ಶಾಲೆ ತೆರೆದರು. ಹೆಣ್ಣು ಮಕ್ಕಳಿಗಾಗಿ ‘ಹಿಡಿ ಅಕ್ಕಿ ಉಳಿಸಿ’ ಎಂದು ತಂದೆತಾಯಿಯರ ಮನದಲ್ಲಿ ಅವರ ಓದಿನ ಬಗೆಗೆ ಚಿಂತನೆಯ. ಬೀಜ ಬಿತ್ತಿ ಜಾಗೃತಿ ಮೂಡಿಸಿದ್ದರು. ಹೆಣ್ಣು ಮಕ್ಕಳಿಗೆ ಹಲವಾರು ಸಾಮಾಜಿಕ, ಆರ್ಥಿಕ ಕಾರಣಗಳಿಗಾಗಿ ಓದು ಎಂಬುದು ಗಗನ ಕುಸುಮವಾಗಿದ್ದ ದಿನಗಳಲ್ಲಿ ಇಂಥ ಒಂದು ಯೋಜನೆ ರೂಪಿಸಿ ಕಾರ್ಯ ರೂಪಕ್ಕಿಳಿಸಿದ್ದು ಅವರ ಸಾಮಾಜಿಕ ಪ್ರಜ್ಞೆಗೆ ಸಾಕ್ಷಿ.
ಲಾಭ ಗಳಿಕೆಗಿಂತ ಜನಸಾಮಾನ್ಯರು ಹಣ ಉಳಿತಾಯ ಮಾಡುವುದನ್ನ ಪ್ರೇರೇಪಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಆಗ ಮಂಗಳೂರಿನಲ್ಲಿದ್ದುದು ಬ್ರಿಟಿಷರಿಗೆ ಸೇರಿದ್ದ ಮದ್ರಾಸ್ ಶಾಖೆಯೊಂದೇ. ಅದರಲ್ಲಿರುವ ಅಧಿಕಾರಿಗಳೆಲ್ಲರೂ ಬ್ರಿಟಿಷರೇ. ಭಾರತೀಯರು ಕ್ಲರ್ಕ್ ಮತ್ತು ಜವಾನ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರು. ಅಲ್ಲದೆ ಅದು ಶ್ರೀಮಂತರ ಬ್ಯಾಂಕ್ ಆಗಿತ್ತು. ಅವರು ಸಾಲಕ್ಕೆ ವಿಽಸುವ ಬಡ್ಡಿಯೂ ವಿಪರೀತವಾಗಿತ್ತು. ಸಾಮಾನ್ಯ ಜನರು ಬೆವರು ಸುರಿಸಿ ದುಡಿದ ಹಣವನ್ನು ಇಡಲು, ತಮಗೆ ಬೇಕೆಂದಾಗ ಸಾಲ ಪಡೆಯಲು ಪಡುವ ಕಷ್ಟ ನೋಡಿ ಈ ದಿಶೆಯಲ್ಲಿ ಚಿಂತನಮಂಥನ ಮಾಡಿ ಸಾರ್ವಜನಿಕರಿಂದಹಣದಿಂದಲೇ ನಿಧಿ ಸ್ಥಾಪಿಸಿ ಉಳಿತಾಯ- ಸಾಲ ಎರಡನ್ನೂ ಒದಗಿಸುವ ಚಿಂತನೆ ಮಾಡಿ ಅದರಲ್ಲಿ ಜಯಶೀಲರಾಗಿದ್ದು ಅಂದಿನ ದಿನಗಳಲ್ಲಿ ಒಂದು ಯಶೋಗಾಥೆಯೇ ಸರಿ. ಆ ದಿನಗಳಲ್ಲಿ ಸುಬ್ಬರಾವ್ ಪೈ ಅವರು ಎತ್ತಿನ ಗಾಡಿಯಲ್ಲಿ ಊರೂರು ಸುತ್ತಿ ತಲಾ 50 ರು. ಬೆಲೆಯ 2000 ಷೇರು ಪತ್ರಗಳನ್ನು ಮಾರಿ ನಿಧಿ ಸಂಗ್ರಹ ಮಾಡಿದರು.
ಹೀಗೆ ಜನರಲ್ಲಿ ಉಳಿತಾಯ ಮಾಡುವ ಹವ್ಯಾಸವನ್ನು ಬಿತ್ತಿ ಬೆಳೆಸಿ ಮುಂದೆ ಇದೇ 1906ರಲ್ಲಿ ‘ಕೆನರಾ ಹಿಂದು ಶಾಶ್ವತ ನಿಧಿ’ (   ) ಸ್ಥಾಪನೆಗೆ ನಾಂದಿಯಾಯಿತು. 1910ರಲ್ಲಿ ಇದರ ಹೆಸರನ್ನು ‘ಕೆನರಾ ಬ್ಯಾಂಕ್ ’ ಎಂದು ಬದಲಾಯಿಸಲಾಯಿತು. 1969ರಲ್ಲಿ ರಾಷ್ಟ್ರೀಕೃತ ಬ್ಯಾಂಕಾಯಿತು. ಉತ್ತಮ ಬ್ಯಾಂಕಿನಿಂದ – ಉಳಿತಾಯ ಮತ್ತು ಸರಿಯಾದ ಸಮಯ ದಲ್ಲಿ ಸಾಲ ಒದಗಿಸುವುದು(ಆದರೆ ಈಗ ಬ್ಯಾಂಕಿನ ಚಟುವಟಿಕೆಗಳು ಇವೆರಡನ್ನೂ ದಾಟಿ ಎಷ್ಟೋ ಬೇರೆ ಕ್ಷೇತ್ರಗಳಿಗೆ ವಿಸ್ತರಿಸಿದೆ ಎಂಬುದು ಬೇರೆ ಮಾತು) ಮಾತ್ರ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಗಟ್ಟಿಯಾಗಿ ನಂಬಿದ್ದವರು.
ಇಂದಿಗೂ ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕುಗಳು ಮಹತ್ವದ ಪಾತ್ರ ವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವಂತಹುದೆ. ಇಷ್ಟೆಲ್ಲ ಸಾಧಿಸಿದ, ಇಂದಿಗೂ ಸಹಸ್ರಸಹಸ್ರ ಜನರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅನ್ನದಾತರಾಗಿರುವ ಶ್ರೀಯುತ ಅಮ್ಮೆಂಬಾಳ್ ಸುಬ್ಬರಾವ್ ಪೈಗಳು ನಮ್ಮನ್ನು ಅಗಲಿದ್ದು 25 ಜುಲೈ 1909, ತಮ್ಮ 57ನೇ ವಯಸ್ಸಿನಲ್ಲಿ. ಅವರನ್ನ ಸಂಧಿವಾತ (ಎಟ್ಠಠಿ – ಕಾಲ್ಬೆರುಳುಗಳಲ್ಲಿ ನೋವು) ಕಾಯಿಲೆ ಸಾಕಷ್ಟು ಕಾಡಿದ್ದು ಮಾತ್ರ ಬೇಜಾರಿನ ಸಂಗತಿ. ಖಂಡಿತಾ 57 ಸಾಯುವ ವಯಸ್ಸಲ್ಲ, ಇನ್ನಷ್ಟು ಸಾಧಿಸುವ ವಯಸ್ಸು. ನೀವು ಸ್ಥಾಪಿಸಿದ ಕೆನರಾ ಬ್ಯಾಂಕಿನಲ್ಲಿ ಸೇರಿ ಸೇವೆ ಸಲ್ಲಿಸುತ್ತಿರುವ , ಸೇವೆ ಸಲ್ಲಿಸಿ ನಿವೃತ್ತ ರಾಗಿರುವ ಎಲ್ಲರ ಪರವಾಗಿ ನಿಮಗಿದೊ ನಮ್ಮ ಅಕ್ಷರ ನಮನ.