ನಿನ್ನ ಚೆಲುವಿನಷ್ಟೆ ಗಾಢ ಪ್ರೀತಿ ನನ್ನದೂ !
ಯಶೋ ಬೆಳಗು
ಯಶೋಮತಿ ಬೆಳಗೆರೆ
@.
ಮರೆಸಲು ಯತ್ನಿಸಿದಷ್ಟೂ ಚಿತ್ತ ಮತ್ತೆ ಮತ್ತೆ ಅಲ್ಲಿಗೇ ಮರಳುತಿದೆ…. ಏನದು? ತಿರುಗಿ ನೋಡಿದರೆ ಎರಡು ಹೊಳೆವ ಕಂಗಳು ನನ್ನನ್ನೇ ತದೇಕ ಚಿತ್ತದಿಂದ ಗಮನಿಸುತ್ತಿದೆ. ನಾನು ಎಲ್ಲಿ ಹೋದರಲ್ಲಿಗೆ ಬಿಡದೆ ಬಂದು ಕಾಡುತ್ತಿದೆ. ಯಾಕೆ ಹೀಗೆ ನನ್ನನ್ನು ಹಿಂಬಾಲಿಸುತಿರುವೆ? ಏನಾಗಬೇಕು ನಾನು ನಿನಗೆ?
ಏನೂ ಇಲ್ಲ… ಮತ್ಯಾಕೆ ಕಾಡುತಿರುವೆ ಹೀಗೆ? ಬಳಲಿ ಬಯಸಿದಾಗ ನಿನಗೊದಗುವ ಆಸರೆ. ನಿನ್ನ ಹಿತ ಕಾಯುವ ರಕ್ಷಕ. ನಿನ್ನ ಕನಸು ಕಾಂಕ್ಷೆಗಳಿಗೆ ದಾರಿ ತೋರುವ ನಾವಿಕ, ನಿನ್ನೊಲ ವಿನ ಬೆಳಕು, ನೀನುಲಿಯುವ ರಾಗ… ಮತ್ತೇನು ಹೇಳಲಿ? ನಿನ್ನ ಹೆಸರು…ಜಗತ್ತು ಅದನ್ನು ಪ್ರೀತಿ, ಮಮತೆ, ಭಕ್ತಿ, ಆರಾಧನೆ ಅಂತೆಲ್ಲ ಕರೆದರೂ ಇದೊಂದು ದಿವ್ಯ ಅನುಭೂತಿ.
  . ಅದಕ್ಕೊಂದು ಹೆಸರಿಟ್ಟು ಅಪಚಾರಗೊಳಿಸಬೇಡ. ನಿನ್ನ ಇರುವ ನನ್ನನ್ನು ಕಂಡುಕೋ ಅಷ್ಟು ಸಾಕು. ಅನ್ನುವ ಷ್ಟರ ಎಚ್ಚರ. ಪಕ್ಕದ ನಿದಿರೆಯ ಮಂಪರಿನ ನಗು ತ್ತಿರುವ ಮಗು.***
ಪ್ರೀತಿ ಅಂದ ಕೂಡಲೆ ನೆನಪಿಗೆ ಬರುವ ಚಿತ್ರ ಧರ್ಮ- ಕರ್ಮಗಳ ಸಾರಥಿಯಾದ ಕೃಷ್ಣ!. ಅದೆಂಥ ಜೀವನ್ಮೋಹಿ ಕೃಷ್ಣ! ಬಾಲ್ಯ ದಲ್ಲಿ ತುಂಟತನಕ್ಕೆ ಹೆಸರಾದವನು. ಹರೆಯದಲ್ಲಿ ಲಲನೆಯರೊಟ್ಟಿಗೆ ನಲಿದಾಡಿದವನು. ರಾಧೆ-ರುಕ್ಮಿಣಿ-ಸತ್ಯಭಾಮೆ-ಮೀರಾ-ಒಬ್ಬೊಬ್ಬ ರಲ್ಲೂ ಒಂದೊಂದು ರೀತಿಯ ಪ್ರೀತಿಯನ್ನು ಕಂಡುಕೊಂಡು ಅದಕ್ಕೆ ಶರಣಾದವನು. ದೇವರನ್ನೇ ಬಿಡದ ಪ್ರೀತಿ ಯೆಂಬ ಮಾಯೆ ಇನ್ನು ಸಾಮಾನ್ಯ ಮನುಷ್ಯರಾದ ನಮ್ಮನ್ನು ಬಿಟ್ಟೀತೇ? ಜೀವನದ ಹಲವು ಹಂತಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಈ ಪ್ರೀತಿ ಎಂಬ ಮಧುರ ಯಾತನೆಯನ್ನು ಅನುಭವಿಸಿದವರೇ.
ಹಾಗಂತ ಪ್ರೀತಿ ಕೇವಲ ಕ್ಷಣಿಕವಾ? ದೈಹಿಕವಾ? ಆಧ್ಯಾತ್ಮಿಕವಾ? ಬೌದ್ಧಿಕವಾ? ಸಂವೇದನೆಯಾ? ನಂಬಿಕೆಯಾ? ಅಗತ್ಯವಾ? ನಿರೀಕ್ಷೆಯಾ? ಕನಸಾ? ಆಕಾಂಕ್ಷೆಯಾ? ಕಲ್ಪನೆಯಾ? ಸ್ಪಂದನವಾ? ಸೆಳೆತವಾ? ಭಾವ ತೀವ್ರತೆಯಾ? ಬೆಸುಗೆಯಾ? ಕಾಳಜಿಯಾ? ಪೊಸೆಸಿವ್‌ನೆಸ್ಸಾ? ಸಮರ್ಪಣೆಯಾ? ಶರಣಾಗತಿಯಾ? ಸ್ವಾರ್ಥವಾ? ತ್ಯಾಗವಾ? ಸಹನೆಯಾ? ಹೊಂದಾಣಿಕೆಯಾ? ದಿವ್ಯ ಅನು ಭೂತಿಯಾ? ಅಂತೆಲ್ಲ ನೋಡುವಾಗ ಎಲ್ಲವೂ ಹೌದು ಅವರವರ ಭಾವಕ್ಕೆ ತಕ್ಕಂತೆ. ದಿನ ಬೆಳಗಾದರೆ ನಮಗೆ ಹಲವಾರು ಜನರೊಡನೆ ಒಡನಾಟವೇರ್ಪಡುತ್ತಿರುತ್ತದೆ. ಆದರೆ ಎಲ್ಲರೊಡನೆಯೂ ಈ ಪ್ರೀತಿ ಅರಳಿ ನಗುವುದಿಲ್ಲ ಹಾಗೂ ಯಾವುದೇಕಾರಣಕ್ಕೂ ಪ್ರೀತಿಯನ್ನು ಬಲವಂತದಿಂದ ಹೊಂದಲಾಗುವುದಿಲ್ಲ. ಸಾವಿರ ಸಾವಿರ ಜನರ ನಡುವೆಯೂ ಕೆಲವರೆಡೆಗೆ ಮಾತ್ರ ಅನುರಕ್ತರಾಗುತ್ತೇವೆ. ಕಾರಣ ಬಹುಶಃ ಅವರಲ್ಲಿ ನಮ್ಮ ಕನಸು, ಕಲ್ಪನೆಯ ಪ್ರತಿಬಿಂಬ ಕಂಡಾಗ ಅವರೆಡೆಗೆ ಆಕರ್ಷಿತರಾಗು ತ್ತೇವೆ.
ಅದಕ್ಕೆ ಪ್ರತಿಯಾಗಿ ಉತ್ತಮ ಸ್ಪಂದನ ದೊರೆತಾಗ ಮಾತು, ನಗು, ನೋಟ, ಸ್ಪರ್ಶದ ಮೂಲಕ ಒಬ್ಬರನ್ನೊಬ್ಬರು ಅರಿಯುತ್ತಾ, ಆಸರೆಯಾಗುತ್ತಾ, ಭಾವನೆಗಳನ್ನು ಹಂಚಿಕೊಳ್ಳುತ್ತಾ ಪರಸ್ಪರರ ಒಳಿತಿಗಾಗಿ, ಏಳಿಗೆಗಾಗಿ ಜೊತೆಜೊತೆಯಾಗಿ ಕಳೆಯುವ ಕ್ಷಣ ಗಳನ್ನು ಉಸದಿಂದ ಶ್ರೀಮಂತಗೊಳಿಸುವ ಕ್ರಿಯೆಯೇ ಪ್ರೀತಿ! ಕೆಲವು ಪರಿಚಯದ ನಗುವಿನ ಸಮಾಪ್ತಿಗೊಂಡರೆ, ಕೆಲವು ಸ್ನೇಹದ ಹಸ್ತ ಕುಲುಕಿ ತನ್ನ ಗಮ್ಯವನ್ನರಸಿ ಕವಲಾಗಿ ನಡೆದು ಹೋಗುತ್ತದೆ. ಕೆಲವು ಪ್ರೀತಿಯ ಮಿಂಚಾಗಿ ಹೊಳೆದು ಸರಿದು ಹೋದರೆ, ಮತ್ತೆ ಕೆಲವು ಮಾತ್ರ ಬಂಧಗಳಾಗಿ ಬೆಸೆದು ಸಂಬಂಧಗಳಾಗಿ ಆವರಿಸಿಕೊಳ್ಳುತ್ತದೆ.
ಒಲವೆಂಬ ಹೊತ್ತಿಗೆಯ ಓದ ಬಯಸುತ್ತಾ ನೀನು; ಬೆಲೆಯೆಷ್ಟು ಎಂದು ಕೇಳುತಿಹೆ ಹುಚ್ಚ! ಹಗಲಿರುಳು ದುಡಿದರೂ, ಹಲ ಜನುಮ ಕಳೆದರೂ ನೀ ತೆತ್ತಲಾರೆ ಬರಿಯ ಅಂಚೆ ವೆಚ್ಚ! ಅಂದರು ದ.ರಾ ಬೇಂದ್ರೆಯವರು. ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು; ಕಾಣದೊಂದು ಕನಸ ಕಂಡು ಮಾತಿಗೊಲಿಯ ದಮೃತವುಂಡು ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ ಎಂದರು ಕೆ.ಎಸ್. ನರಸಿಂಹಸ್ವಾಮಿಯವರು.
ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅಂದರು ಹಂಸಲೇಖಾರವರು.. ಈ ಜಗತ್ತಿನಲ್ಲಿ ಪ್ರೀತಿಯೆಂಬ ಮಧುರ ಭಾವನೆಯೇ ಇಲ್ಲದೇ ಹೋಗಿದ್ದಿದ್ದರೆ ಬದುಕು ಅದೆಷ್ಟು ಯಾಂತ್ರಿಕವಾಗಿ ಹೋಗಿರುತ್ತಿತ್ತು ಅಲ್ಲವೇ? ನಮ್ಮ ಭಾವನೆಗಳಿಗೆ ಸ್ಪಂದಿ ಸುವ ಸಂಗಾತಿ ದೊರೆತರೆ ಬಾಳೊಂದು ಭಾವಗೀತೆ. ತಪ್ಪಿದರೆ ಬದುಕೇ ಶೋಕಗೀತೆ. ಪ್ರೀತಿಯೆಂಬುದು ಎರಡು ಮನಸುಗಳನಡುವೆ ನಿರಂತರವಾಗಿ ಹರಿಯುವ ನದಿಯಂತೆ. ಅದು ಬತ್ತದಂತೆ ನೋಡಿಕೊಳ್ಳವ ಹೊಣೆ ಇಬ್ಬರದೂ ಕೂಡ.
ನಮ್ಮೆಲ್ಲರ ಹುಟ್ಟು ಜೀವಕಣಗಳಿಂದಲೇ ಆದರೂ ಅದರ ನಿರಂತರ ಬೆಳವಣಿಗೆಗೆ ಪೂರಕವಾದದ್ದು ಮಾತ್ರ ಅಗ್ನಿ, ವಾಯು, ಜಲ, ಪೃಥ್ವಿ, ಆಕಾಶವೆಂಬ ಪಂಚಭೂತಗಳಿಂದ. ಪಂಚೇಂದ್ರಿಯಗಳ ಮೂಲಕ ಆಸ್ವಾದಿಸುತ್ತಾ ನಾವು ತಿನ್ನುವ ಪ್ರತಿಯೊಂದು ತುತ್ತೂ ಭೂಮಿಯಿಂದಲೇ ಬೆಳೆದದ್ದು. ನಮ್ಮ ದೇಹವು ಕೂಡ ಭೂಮಿಯಂತೆ ಶೇ.71 ಜಲಾವೃತ ವಾಗಿದೆ ಹಾಗೂ ಭೂಮಿ ಯಲ್ಲಿರು ವಂತೆಯೇ ಐಟ್ಞ, , , , , ,   ಅಂಶಗಳು ನಮ್ಮ ದೇಹದಲ್ಲೂ ಇವೆ.
ಅದಕ್ಕೇ ಅಲ್ಲವೇ ’ಮಣ್ಣಿಂದ ಕಾಯ ಮಣ್ಣಿಂದ” ಅಂದಿದ್ದು ದಾಸರು. ತಿಂದ ಆಹಾರ ಜೀರ್ಣವಾಗಲು ನೀರು ಅತಿ ಅವಶ್ಯಕ. ಹಾಗೇ ಗಾಳಿಯೂ ಕೂಡ. ಉಸಿರು ನಿಂತ ಕೂಡಲೇ ದೇಹ ಶವವಾಗಿ ಬಿಡುತ್ತದೆ. ಇನ್ನು ಬೆಳಗ್ಗೆ  ನೆಬಾಗಿಲಿಗೆ ಬರುವ ಹಾಲಿನಿಂದ ಹಿಡಿದು ರಾತ್ರಿ ಮಲಗುವ ಮೊದಲು ಮಾಡುವ ಊಟದ ತನಕ ಎಲ್ಲಕ್ಕೂ ಅಗ್ನಿಸ್ಪರ್ಶ ಬೇಕೇಬೇಕು. ಇವೆಲ್ಲವೂ ಅಡಕ ವಾಗಿರು ವುದು ಅದೇ  ನಲ್ಲಿ.
ತೆರೆದ ಹಸ್ತಗಳಿಂದ ಧ್ಯಾನಿಸುತ್ತಾ ಬೇಡಿಕೊಳ್ಳುವಾಗ ಕಣ್ಣಿಗೆ ಕಾಣದ ಅದೆಷ್ಟೋ ಅಗೋಚರ ಶಕ್ತಿಗಳು ನಮ್ಮ ಆಸೆಗಳನ್ನು, ಬೇಡಿಕೆಗಳನ್ನು ಪೂರೈಸಿಕೊಳ್ಳುವ ಹಾದಿಯಲ್ಲಿ ನಮಗೆ ಸರಿಯಾದ ದಿಕ್ಕನ್ನು ಗೋಚರವಾಗುವಂತೆ ಮಾಡುತ್ತವೆ. ಹಾಗಾಗೇ ಈuniverse ಅನ್ನುವುದು ಸದಾ ಕೌತುಕಮಯ. ಹಾಗೂ ಶಕ್ತಿಗಳಿಂದ ತುಂಬಿದ ಆಗರ. ಸಿಡಿಲು ಬಡಿದ ಜಾಗದಲ್ಲಿ ದೊರೆಯುವ ಕಂಚು, ಕತ್ತಲಾದ ಕೂಡಲೇ ಮನೆಬೆಳಗುವ ವಿದ್ಯತ್ ದೀಪಗಳಿಗೆ ಬರುವ ವಿದ್ಯುತ್ ಶಕ್ತಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಅದಕ್ಕೇ ಸತ್ತಾಗ ದೇಹದ ಭಸ್ಮವನ್ನು ತೇಲಿಬಿಟ್ಟು ಪಂಚಭೂತಗಳಲ್ಲಿ ಲೀನವಾದರು ಅಥವಾ ಮರಳಿ ಮಣ್ಣಿಗೆ ಎನ್ನುವುದು.
ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಯೊಬ್ಬರಲ್ಲಿಯೂ ಅವರದೇ ಆದ ಒಂದು ಅಪರೂಪದ ಶಕ್ತಿಯಿರುತ್ತದೆ. ಪರಿಚಯವೇ ಇಲ್ಲದ ಕೆಲವರನ್ನು ಭೇಟಿಯಾದಾಗ ಅತ್ಯಾಪ್ತರೆನಿಸಿದರೆ, ಮತ್ತೆ ಕೆಲವರೆಡೆಗೆ ನಿರಾಸಕ್ತರಾಗುತ್ತೇವೆ ಎಲ್ಲದಕ್ಕೂ ಕಾರಣ  !ನಮ್ಮ ಪ್ರತಿಯೊಂದು ಭಾವನೆಗಳಿಂದ ಕೂಡಿದ ವರ್ತನೆಗೆ ಅದರದೇ ಆದ  ಗಳಿರುತ್ತದೆ. ಕೋಪ,  ದ್ವೇಷ, ದುಃಖ, ಒಂಟಿತನ, ಬೇಸರ, ಅಸೂಯೆ, ಜಗಳ, ಆತಂಕ, ಭಯಗಳೆಲ್ಲ  energyಯ frequencyಗಳಾದರೆ ಪ್ರೀತಿ, ಪ್ರೇಮ, ಸ್ನೇಹ, ಸಾಂಗತ್ಯ, ನಗು, ಕಾಳಜಿ, ಧೈರ್ಯ,ಉಲ್ಲಾಸಗಳೆಲ್ಲ   ಹೊಂದಿರುವಂತಹ  ಗಳಾಗಿವೆ. ಗಮನಿಸಿ ನೋಡಿ.
ನಿಮಗೆ ತುಂಬ ಸಿಟ್ಟು ಬಂದು ಯಾರ ಮೇಲಾದರೂ ಸಿಕ್ಕಾಪಟ್ಟೆ ಕೂಗಾಡಿದರೆ ನಿಮ್ಮ    ಎಷ್ಟು ಕಡಿಮೆಯಾಗಿರುತ್ತದೆ. ಹಾಗೇ ಬೇಸರ, ದುಃಖ ಆತಂಕ, ಒಂಟಿತನಗಳು ಕಾಡಿದಾಗಲೂ ಸಹ ದೇಹದಲ್ಲಿನ energyಸಾಕಷ್ಟು ಕುಗ್ಗಿ ಹೋಗಿರುತ್ತದೆ. ಅದೇ ಪ್ರೀತಿಯ ನಶೆಯಲ್ಲಿರುವ ಪ್ರೇಮಿಗಳನ್ನು ಗಮನಿಸಿ ನೋಡಿ ಅವರ ಮುಖದಲ್ಲಿ ಅದೆಂಥ ಕಾಂತಿ ಯಿರುತ್ತದೆ. ಹಾಗೇ ಕಣ್ಣಿನಲ್ಲಿ ಅದೆಂಥಾ ಹೊಳಪಿರುತ್ತದೆ… ಅವರ ಪ್ರತಿಯೊಂದು ಚಟುವಟಿಕೆಯಲ್ಲೂ ಅದೆಂಥಾ ಸಂತೋಷವಿರುತ್ತದೆ.
ಅಷ್ಟೇ ಅಲ್ಲ.     , ,   . ತುಂಬ ಬಳಲಿಕೆಯಾದಾಗ ಸ್ನಾನ ಮಾಡಿದರೆ ಅಥವಾ ನೀರಲ್ಲಿ ಈಜಾಡಿದರೆ, ಜಲಪಾತದ ಧುಮುಕಿಗೆ ತಲೆಯೊಡ್ಡಿದರೆ, ಸಾಗರದ ಅಲೆಗಳಲ್ಲಿ ಮುಳುಗೆದ್ದರೆ   . ಹಾಗೆಯೇ ಬೇಸರವಾದಾಗ ಒಂದಷ್ಟು ದೂರ ಖಾಲಿ ಖಾಲಿ ರಸ್ತೆಗಳಲ್ಲಿ ನಡೆಯುತ್ತಲೋ ಅಥವಾ ಲಾಂಗ್ ಡ್ರೈವ್ ಹೋದಾಗಲೋ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.
ಕಾರಣ      . ಹಾಗೇ ಬೆಂಕಿಯಲ್ಲಿ ಬೆಂದು ರುಚಿಯಾದ ಆಹಾರ ಸವಿದಾಗಲೂ ಸಹ ನಮ್ಮ ದೇಹಕ್ಕೆ ಸಾಕಷ್ಟು  ದೊರೆಯುತ್ತದೆ. ಈಗಂತೂ ಮಳೆಯಿಂದ ಮನೆ, ದೇವಾಲಯ, ರಸ್ತೆ, ಕಾರು, ಬೈಕುಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಅದೆಷ್ಟು ಜನರು ಸೂರ್ಯನ ಒಂದು ಇಣುಕಿಗಾಗಿ ಪ್ರಾರ್ಥಿಸುತ್ತಿದ್ದಾರೆ ಅನ್ನುವುದು ನಮ್ಮೆಲ್ಲರಿಗೂ ಗೊತ್ತೇ ಇದೆ. ಬಹಳ ಕಾಲ   ರೂಮು ಗಳಲ್ಲಿದ್ದರೆ  ಈ ಕೊರತೆಯಾಗಿ ದೇಹವೆಲ್ಲ ಬಿಳುಚಿಕೊಂಡು ನಿಶ್ಶಕ್ತಗೊಳ್ಳುತ್ತದೆ. ಹೀಗಾಗಿ ಸ್ವಾಭಾವಿಕವಾಗಿ ದೊರೆಯುವ ಉತ್ತಮ  ಗಳನ್ನು ಸಾಕಷ್ಟು ಬಳಸಿ ಕೊಂಡು ನಮ್ಮ ದೇಹವನ್ನು ಸುಸ್ಥಿತಿ ಯಲ್ಲಿಟ್ಟು ಕೊಳ್ಳುವುದು ಉತ್ತಮ.
ಆದರೆ ದೈವಿಕವಾದಂಥ ಪ್ರೀತಿಯ ಹೆಸರಲ್ಲಿ ಸಾಕಷ್ಟು ವಂಚನೆಗಳೇ ನಡೆದು ಪ್ರೀತಿಯನ್ನು ತಪ್ಪಾಗಿ ಅರ್ಥೈಸಿ ಕೊಳ್ಳಲಾಗುತ್ತಿದೆ. ಆಯ್ಕೆಯಲ್ಲಿ ಎಡವದಿರಿ. ತಮ್ಮ ಮನದ ಭಾವನೆಗಳನ್ನು ಹಂಚಿಕೊಳ್ಳದೆಯೇ ಅವರಾಗೇ ನಮ್ಮನ್ನು ಅರ್ಥ ಮಾಡಿಕೊಳ್ಳಲಿ ಎಂದು ಮಾತೇ ಆಡದೆ ಕೇವಲ ನೀರೀಕ್ಷೆಯಿಟ್ಟುಕೊಂಡರೆ   ಉಂಟಾಗಿ ಪ್ರೀತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅತಿಯಾದ ಸುಳ್ಳುಗಳೂ ಸಹ ಪ್ರೀತಿಗೆ ಮಾರಕವೇ. ಹಾಗೆಯೇ ಕೂತರೆ, ನಿಂತರೆ, ಅನ್ಯರೊಡನೆ ಮಾತಾಡಿದರೆ, ನಕ್ಕರೆ ನಿರಂತರವಾಗಿ ಹಿಂಬಾಲಿಸುವ ಅನುಮಾನದ ಸುಳಿಯಲ್ಲಿ ಸಿಕ್ಕಿಕೊಂಡು ನರಳುವ ಯಾತನೆ ಯಾವ ಶತ್ರುವಿಗೂ ಬೇಡ. ಇದರಿಂದ ಜೀವನವೇ ನರಕವಾಗಿ ಹೋಗುತ್ತದೆ.
ಹಾಗೆಯೇ ಅತಿಯಾದ ಪ್ರೀತಿ ಕೂಡ ಬಹಳ ಸಲ ಹಿಂಸೆ ಯಾಗಿ ಭಾಸವಾಗುತ್ತದೆ. ತನ್ನದೇ ಮಾತು ನಡೆಯಬೇಕೆಂಬ ಹಟದಿಂದ ಅದಕ್ಯಾಕೆ ಅಷ್ಟು ಉಪ್ಪು ಹಾಕಿದೆ? ಇಷ್ಟು ಸಿಹಿ ತಿನ್ನಬಾರದು, ಇಂಥಾ ಬಟ್ಟೆಯನ್ನೇ ಧರಿಸಬೇಕು, ಇಂಥವ ರೊಂದಿಗೆ ಮಾತ್ರ ಮಾತನಾಡಬೇಕು ಎಂದು ಹೇಳುತ್ತಾ ನಮ್ಮ ಪ್ರತಿಯೊಂದು ಕೆಲಸ ಕಾರ್ಯದಲ್ಲೂ  ಆಗುತ್ತಿದ್ದರೆ ಆಗ ಅದು ಪೀಡೆ ಪ್ರೀತಿಯಾಗುತ್ತದೆ. ಅತಿಥಿ ಗಳೆದುರು ಗೇಲಿ ಮಾಡುತ್ತಾ, ನಿಂದಿಸುತ್ತಾ, ಸಣ್ಣಸಣ್ಣ ವಿಷಯಗಳಲ್ಲೂ ತಪ್ಪು ಹುಡುಕುತ್ತಾ ಹೊರಟರೆ ಪ್ರೀತಿ ಅವಮಾನದಿಂದ ಕುಗ್ಗಿ ಹೋಗುತ್ತದೆ.
ಇನ್ನು ನನ್ನನ್ನು ಬಿಟ್ಟು ಮತ್ಯಾರನ್ನೂ ನೋಡಬಾರದು, ಸಲುಗೆಯಿಂದ ಮಾತನಾಡಬಾರದು ಎಂದು ಹೋದಲ್ಲಿ ಬಂದಲ್ಲಿ ಸದಾ ಕಣ್ಗಾವಲಾಗಿದ್ದರೆ ಪ್ರೀತಿ ಉಸಿರುಗಟ್ಟಿಸಿ ಬಿಡುತ್ತದೆ. ಅದು ನಾಲ್ಕು ಗೋಡೆಗಳ ನಡುವೆ ನಮ್ಮನ್ನು ಬಂಽಗಳನ್ನಾಗಿ ಮಾಡಿ ನಿಧನಿಧಾನಕ್ಕೆ ಸಮಾಽ ಸ್ಥಿತಿಗೆ ತಲುಪಿಬಿಡುತ್ತದೆ. ಬದಲಿಗೆ ಪ್ರೀತಿಸಿದವರ ನಡುವೆ ಸಾಕಷ್ಟು ಸ್ವಾತಂತ್ರ್ಯ  ವಿರಲಿ. ಸ್ವೇಚ್ಚೆಯಲ್ಲ. ಪರಸ್ಪರರ ನಡುವೆ ಗೌರವ, ನಂಬಿಕೆಯ ಜೊತೆಗೆ    ನಿರಂತರ ವಾಗಿರಲಿ. ಸಣ್ಣ ಪುಟ್ಟ ಮೆಚ್ಚುಗೆಯ ಮಾತು ಗಳು ಪ್ರೀತಿಯನ್ನು ಹೆಚ್ಚು ಹತ್ತಿರಾಗಿಸುತ್ತದೆ.
ಸಮಯ ಸಿಕ್ಕಾಗಲೆಲ್ಲ ಅವರೆಡೆಗಿನ ತಮ್ಮ ಪ್ರೀತಿ ಎಷ್ಟು ಗಾಢವಾದದ್ದು ಎಂಬುದನ್ನು ಮಾತಿನಿಂದ, ತಮ್ಮ ವರ್ತನೆಯಿಂದ ಮನವರಿಕೆ ಮಾಡಿಕೊಡುತ್ತಿರಲಿ. ಪರಸ್ಪರರ ಕೆಲಸ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುತ್ತಾ ಆತ್ಮವಿಶ್ವಾಸ ತುಂಬುತ್ತಿರಲಿ.ಯಾವುದೇ ಕಾರಣಕ್ಕೂ ಪ್ರೀತಿಯ ಜಾಗದಲ್ಲಿ ದ್ವೇಷ ಬೆಳೆಯದಿರುವಂತೆ ನೋಡಿಕೊಳ್ಳಿ. ನಮ್ಮನ್ನು ಪ್ರೀತಿಸಿದ ಜೀವವನ್ನು ನಾವಲ್ಲದೆ ಮತ್ಯಾರು ನೋಡಿಕೊಳ್ಳಬೇಕು?  ಅನ್ನುವ ಭಾವನೆ ಮೂಡಿದರೆ ಉಳಿದ ಎಲ್ಲ ತಕರಾರುಗಳೂ ಗೌಣವಾಗುತ್ತವೆ. ಪ್ರೀತಿ ಬಾಳಿ ಬದುಕುವಂತಾಗುತ್ತದೆ.