ಪಾದ್ರಿಗಳ ಆತಂಕ ಸ್ವಾಮೀಜಿಗಳಿಗೇಕಿಲ್ಲ ?
ಹಂಪಿ ಎಕ್ಸ್‌’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@.
ಮತಾಂತರ ನಿಷೇಧ ಕಾಯಿದೆ ಎಂದ ಕೂಡಲೇ ಹೆಗಲು ಮುಟ್ಟಿ ನೋಡಿಕೊಳ್ಳುವವರನ್ನು ಕೇಳಿ ಮಸಾಲೆ ಅರೆಯುವುದನ್ನು ಬಿಟ್ಟು ಸರಕಾರ ಕೂಡಲೇ ಕಾಯಿದೆಜಾರಿಗೆ ತರಬೇಕಿದೆ. ಕಾಯಿದೆಯೆಂಬುದು ಒಂದು ಬೇಲಿಯಷ್ಟೇ! ಬೇಲಿಯೊಂದಿಗೆ ದೊಣ್ಣೆಹಿಡಿದು ಕಾವಲು ಕಾಯಬೇಕಾದವರು ಮಾತ್ರ ಸ್ವಾಮೀಜಿಗಳು.
ಸಾವಿರಾರು ಮಂದಿಗಳ ಪಾದವನ್ನು ತನ್ನ ಕೈಯಾರೆ ತೊಳೆಯುವ ದರ್ದು ಯಾರಿಗೆ ಬೇಕು ಹೇಳಿ? ಆದರೆ ಅಂಥ ಒಂದು ಅದ್ಭುತವಾದ ಕಾರ್ಯವನ್ನು ಮಾಡಿದ್ದು ಒಂದು ರಾಜಮನೆತನದ ಯುವರಾಜ ಮತ್ತು ತೊಳೆಸಿಕೊಂಡಿದ್ದು ಬುಡಕಟ್ಟು ಹಿಂದುಳಿದ ಮತ್ತು ತೀರಾ ಕೆಳವರ್ಗದ ಜನ.
ಇಂಥ ಸುದ್ದಿಗಳೆ ‘ಕಪೋಲಕಲ್ಪಿತ ಜಾತ್ಯತೀತ’ ಸುದ್ದಿಮಾಧ್ಯಮಗಳಲ್ಲಿ ವರದಿ ಯಾಗುವುದೇ ಇಲ್ಲ. ಇಂಥ ಒಂದು ಪವಿತ್ರವಾದ ಕಾರ್ಯಕ್ಕೆ ಕಾರಣವಾಗಿದ್ದು ಮಿತಿಮೀರಿದ ಕ್ರಿಶ್ಚಿಯನ್ ಮಿಷನರಿಗಳ ಕುತಂತ್ರದ ಮತಾಂತರಗಳ ಅವಾಂತರಗಳು. ‘ತೆರೆದಿದೆ ಮನೆ ಓ ಬಾ ಅತಿಥಿ’ ಎಂದು ಮನೆಹಾಳು ಮತಾಂತರಿಎನ್‌ಜಿಒಗಳಿಗೆ ಅವಕಾಶಮಾಡಿಕೊಟ್ಟು ವೋಟ್ ಬ್ಯಾಂಕ್ ನಿರ್ಮಿಸಿಕೊಳ್ಳುವ ದರಿದ್ರ ರಾಜಕಾರಣದಿಂದಾಗಿ ಇಂದು ನಮ್ಮ ದೇಶದ ಅನೇಕ ಗ್ರಾಮಗಳು ಊರುಗಳಲ್ಲದೇ ರಾಜ್ಯಗಳೇ ಮತಾಂತರಿಗಳ ಯಶಸ್ಸಿನಿಂದ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಅಂಥ ಒಂದು ಊರೇ ಛತ್ತೀಸ್‌ಗಢ್ ರಾಜ್ಯದ ಜಶ್ಪುರ್ ಜಿಯ ಕುಂತಳಪಾನಿ. ಈ ಊರಿನಲ್ಲಿ ಮತಾಂತರಗಳನ್ನು ದಶಕಗಳಿಂದ ಸಹಿಸಿಕೊಂಡು ಬರಲಾಗಿದೆ. ಇದರಿಂದ ರೋಸಿ ಹೋದ ಸ್ಥಳೀಯ ಜಶ್ಪುರ್ ರಾಜಮನೆತನದ ರಾಜ ದಿಲೀಪ್‌ಸಿಂಗ್ ಜುದೇವ್ ಅವರು ಹೋರಾಟ ಮಾಡಿಕೊಂಡೇ ಬಂದಿದ್ದರು. ಮೊನ್ನೆ ಇವರ ಯುವರಾಜ ಪ್ರಬಲಪ್ರತಾಪ್ ಜುದೇವ್ ಅವರು ಈ ಮತಾಂತರದ ವಿರುದ್ಧ ದೊಡ್ಡ ಹೋರಾಟವನ್ನು ಆರಂಭಿಸಿ ಬೀದಿಗಿಳಿದಿದ್ದಾರೆ.
ಮೊನ್ನೆ 19 ಮತ್ತು 20ರಂದು ‘ವೇದಿಕ್ ಜ್ಞಾನಗಂಗಾ ವಿಶ್ವಕಲ್ಯಾಣ ಮಹಾಯಾಗ’ ಕಾರ್ಯಕ್ರಮವನ್ನು ಆಯೋಜಿಸಿ ಮತಾಂತರದ ಕುತಂತ್ರಕ್ಕೆ ಬಲಿಯಾದ ಸುಮಾರು ನಾನ್ನೂರು ಕುಟುಂಬಗಳ ಸಾವಿರಕ್ಕೂ ಹೆಚ್ಚು ಮಂದಿಗಳು ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳುವಂತೆ ಅವರಿಗೆ ಸತ್ಯಾಸತ್ಯತೆಯನ್ನು ಅರಿವಿಗೆ ತಂದು, ಅವರನ್ನೆ ಒಂದೇ ವೇದಿಕೆಗೆ ಕರೆತಂದು ಸ್ವತಃ ಯುವರಾಜ ಪ್ರಬಲ ಪ್ರತಾಪ್ ಜುದೇವ್ ಅವರೇ ಕೆಳಗೆ ಕೂತು ಒಬ್ಬೊಬ್ಬರನ್ನೇ ನಿಲ್ಲಿಸಿ ಅವರ ಪಾದಗಳನ್ನು ತೊಳೆದು ನಮಸ್ಕರಿಸುವ ಮೂಲಕ ಅಷ್ಟೂ ಮಂದಿಯನ್ನು ಮರಳಿ ‘ಬಡಪಾಯಿ ಮುಗ್ಧ ಮತ್ತು ನಿರಭಿಮಾನಿ’ ಹಿಂದೂ ಧರ್ಮಕ್ಕೆ ಕರೆತರುವ ಮಹತ್ವದ ಕೆಲಸವನ್ನು ಮಾಡಿದ್ದಾರೆ. ಅವರೇನು ಹೇಳುತ್ತಾರೆ ಗೊತ್ತೇ, ಇಂಥ ಮತಾಂತರಗಳಿಗೆ ಎರಡು ಮುಖ್ಯ ಕಾರಣಗಳಿದ್ದು, ಮೊದಲನೆಯದಾಗಿ ಕಳೆದ ಎರಡು ವರ್ಷಗಳಿಂದ ಕಾಡಿದ ಕರೋನಾ ಕಂಟಕ.
ಇದೇ ಸಂದರ್ಭವನ್ನು ಬಳಸಿಕೊಂಡ ಮಿಷನರಿಗಳು ಲಾಕ್‌ಡೌನ್ ಕಟ್ಟುಪಾಡನ್ನೇ ಅನುಕೂಲವಾಗಿ ಬಳಸಿಕೊಂಡು ಗಲ್ಲಿಗಲ್ಲಿಗಳನ್ನು ಸುತ್ತಿ ಊರು ಊರನ್ನೇ ಪರಿವರ್ತಿಸಿದ್ದಾರೆ. ಇನ್ನು ಎರಡನೇ ಕಾರಣ, ಅದು ನೇರ ಅಲ್ಲಿನ ಕಾಂಗ್ರೆಸ್ ಆಡಳಿತವಿರುವ ರಾಜ್ಯ ಸರಕಾರ ಎಂದು ದೂರಿದ್ದಾರಲ್ಲದೇ, ಕಾಂಗ್ರೆಸ್ ಪಕ್ಷ ಎಲ್ಲಿ ಅಽಕಾರದಲ್ಲಿರುತ್ತದೆಯೋ  ಅ ಈ ಮಿಷನರಿಗಳ ಅಟ್ಟಹಾಸ ನಿರ್ಭಯವಾಗಿ ನಡೆಯುತ್ತಿದೆ ಎಂದು ಜರಿದಿದ್ದಾರೆ. ಒಬ್ಬ ರಾಜಮನೆತನದ ಯುವರಾಜನೊಬ್ಬ ಇಂಥಹೊಣೆಗಾರಿಕೆ ಸಮಾನತೆಯ ಕೆಲಸವನ್ನು ಮಾಡುತ್ತಿರುವಾಗ ಕೆಳಗಿಂದ ಮೇಲಿನವರೆಗೂ ಹಿಂದೂ ಕೇಸರಿ ಕಾವಿಯನ್ನು ತೊಟ್ಟ ಧರ್ಮರಕ್ಷಕರೆನಿಸಿರುವ ಸ್ವಾಮೀಜಿಗಳಿಗೇನಾಗಿದೆ? ಸಮಾಜಗೇಡಿ ಮತಾಂತರದ ಪರಮಾವಧಿಯಾಗಿ ವಿಧಾನಸಭೆಯ ಸಾಕ್ಷಾತ್ ಶಾಸಕರೇ ‘ಅಯ್ಯೋ, ಈ ಮತಾಂತರ ನಮ್ಮ ತಾಯಿಯನ್ನೇ ಬಿಟ್ಟಿಲ್ಲ, ನನ್ನ ಮನೆಯಲ್ಲಿ ನನ್ನ ದೇವರ ಪೂಜೆಯನ್ನೇ ಮಾಡದಂತ್ತಾಗಿದೆ’ ಎಂದು ಎದೆಬಡಿದುಕೊಂಡರ, ಆಗಲೇ ಅನಿವಾರ್ವೆಂಬಂತೆ ಈ ಮತಾಂತರ ಕುರಿತು ಸ್ವಲ್ಪಮಟ್ಟಿನ ಚರ್ಚೆಗೆ ಒಳಗಾದದ್ದು ಮತ್ತು ಗಂಭೀರತೆ ಪಡೆದುಕೊಂಡದ್ದು.
ಇಂಥ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುವ ಇಚ್ಛಾಶಕ್ತಿ ಹೊಂದಿರುವ ಖ್ಯಮಂತ್ರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರೈಸ್ತ ಸಮುದಾಯದ ಚರ್ಚ್ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳ ಗಣತಿ ನಡೆಸಿ ಕೂಡಲೇ ವರದಿ ನೀಡಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ತುರ್ತು ಆದೇಶ ಹೊರಡಿಸಿದರು. ಆಮೂಲಕ ಬೊಮ್ಮಾಯಿಯವರು ಮತಾಂತರ ನಿಷೇಧ ಕಾಯಿದೆಯನ್ನು ಶೀಘ್ರವೇ ಜಾರಿಗೆ ತರುವ ಭರವಸೆಯನ್ನೂ ನೀಡಿ ಕಳೆದ ವಾರವೂ ಇದನ್ನು ಪುನರು ಚ್ಚಿಸಿರುವುದು ಸ್ವಾಗತಾರ್ಹ. ಆದರೆ ಸರಕಾರ ಇಂಥ ಆದೇಶ ಹೊರಡಿಸಿದ್ದೇ ತಡ ಅಂದು ಸಂಜೆಯೇ ಅನೇಕ ಕ್ರಿಶ್ಚಿಯನ್ ಪಾದ್ರಿಗಳು ಮುಖ್ಯಮಂತ್ರಿ ಗಳನ್ನು ಭೇಟಿಮಾಡಿ ಸದರಿ ಕಾಯಿದೆಯನ್ನು ತರದಿರಲು ಮನವಿ ಸಲ್ಲಿಸಿ ಬಂದರು.
ಕಳೆದ ತಿಂಗಳು ಕರ್ನಾಟಕ ಪ್ರಾಂಥೀಯ ಕ್ಯಾಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ ಮತ್ತು ಅಖಿಲ ಕರ್ನಾಟಕ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟದ ಅಧ್ಯಕ್ಷ ಆರ್ಚ್ ಬಿಷಪ್ ಪೀಟರ್ ಮಚಾಡೋ ಸುದ್ದಿಗೋಷ್ಠಿ ನಡೆಸಿ ‘ಸರಕಾರ ಮೊದಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನೀಡಿರುವ ಆದೇಶವನ್ನು ಹಿಂಪಡೆಯಬೇಕು ಮತ್ತು ಯಾವುದೇ ಕಾರಣಕ್ಕೂ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಬಾರದು, ಇದನ್ನು ಕ್ರೈಸ್ತ ಸಮುದಾಯ ಒಕ್ಕೊರಲಿನಿಂದ ವಿರೋಧಿಸುತ್ತದೆ, ಯಾವುದೇ ಧರ್ಮವನ್ನು ಆಚರಿಸಲು ಸಂವಿಧಾನ ಹಕ್ಕು ನೀಡಿದೆ, ಹೀಗಿರುವಾಗ ಮತಾಂತರ ನಿಷೇಧ ಕಾಯಿದೆ ಅಗತ್ಯವೇನು? ಎಂದು ಪ್ರಶ್ನಿಸಿದ್ದಾರೆ.ಅರಿ ಪೀಟರ್ ಮಚಾಡೋ ಸ್ವಾಮಿಗಳೇ, ನಮ್ಮ ಮನೆಯ ಸುತ್ತ ನಾವು ಬೇಲಿಹಾಕಿಕೊಂಡರೆ ನಿಮಗೆ ಏಕೆ ಅಸಹನೆ? ಸಂವಿಧಾನದ ಹಕ್ಕಿನ ಬಗ್ಗೆ ಮಾತನಾಡುವ ನಿಮಗೆ ಅದೇ ಸಂವಿಧಾನ ಯಾವುದೇ ವ್ಯಕ್ತಿ ಸ್ವಯಂ ಪ್ರೇರಣೆಯಿಂದ ಅನ್ಯ ಧರ್ಮಕ್ಕೆ ಮತಾಂತರವಾಗಬಹುದು.
ಆದರೆ ಮತಾಂತರಕ್ಕೆ ಒಳಪಡಿಸುವುದಕ್ಕೆ ಅವಕಾಶವಿಲ್ಲ ಮತ್ತು ಅದು ಅಪರಾಧ ಎಂದು ಹೇಳಿರುವುದು ತಿಳಿದಿಲ್ಲವೇ? ಇದೊಂಥರಾ ‘ನಾವು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತೇವೆ, ನೀವುಗಳು ಮೂರನ್ನು ಮುಚ್ಚಿಕೊಂಡು ನೋಡುತ್ತಾ ಸುಮ್ಮನಿರಿ’ ಎಂದು ಕಳ್ಳಬೆಕ್ಕು ಉಪದೇಶ ಮಾಡಿದಂತೆ. ಯೇಸುಪ್ರಭು ಯಾವಾಗ ಬರುತ್ತಾನೆ, ಯಾರೆಲ್ಲರ ಕೈಹಿಡಿಯುತ್ತಾನೆ ಎಂದು ಬಲ್ಲ ಪಾದ್ರಿಗಳಿಗೆ ಮಿಷನರಿಗಳು ನಡೆಸುತ್ತಿರುವ ಅಕ್ರಮಗಳು ಹಿಂದೂಧರ್ಮದ ಮುಗ್ಧರ ಮೇಲೆ ನಡೆಸು ತ್ತಿರುವ ಧರ್ಮಾಕ್ರಮಣಗಳ ಪರಿಚಯವೇ ಇಲ್ಲವೇ?. ಈ ದರಿದ್ರ ಕುತಂತ್ರಿಗಳು ಯಾವ ಮಟ್ಟದಲ್ಲಿ ಮತಾಂತರಗಳನ್ನು ನಡೆಸುತ್ತಿವೆಯೆಂದರೆ ಸಾಕ್ಷಾತ್ ಯೇಸು ಪ್ರಭುವನ್ನೇ ಮುರುಗನಂತೆ, ಗಣೇಶನಂತೆ, ಕೃಷ್ಣನಂತೆ ರೂಪನೀಡಿ ಹಿಂದೂಧರ್ಮಕ್ಕೆ ಮತಾಂತರ ಮಾಡಿಬಿಟ್ಟಿದ್ದಾರೆ.
ಮುಗ್ಧ ದಲಿತರು, ಅಕ್ಷರeನ ಇಲ್ಲದವರು, ದೇವರ ವಿಚಾರದಲ್ಲಿ ಭೇದಭಾವ ಇಲ್ಲದವರನ್ನು ದಾರಿತಪ್ಪಿಸಲು ಕಾವಿಧಾರಿ ಗೆಟಪ್‌ನಲ್ಲಿ ಸುತ್ತಿ, ಚರ್ಚ್‌ಗಳನ್ನುಅಮ್ಮನ ಅಪ್ಪನ ದೇವಾಲಯವೆಂದು ಕರೆದು, ಅದರ ಮುಂದೆ ಗರುಡಗಂಬದಂತೆ ಶಿಲುಬೆಗಳನ್ನು ನೆಡುವುದೇನು, ರಂಗೋಲಿಯಲ್ಲೂ ಯೇಸುವನ್ನು ಇಳಿಸುವುದೇ ನು, ಹಿಂದೂ ಮಂತ್ರಗಳನ್ನು ಭಕ್ತಿಗೀತೆಗಳನ್ನು ಡಬ್ಬಿಂಗ್ ಮಾಡಿ ಯೇಸುಮಯ ಮಾಡುವುದೇನು, ಯೇಸು ಕುಂಭಕಳಸ, ಯೇಸು ಅರ್ಚನೆ, ಯೇಸು ಹೋಮ, ಯೇಸು ಕೊಂಡ, ಯೇಸು ಪಿಂಡ, ಯೇಸು ನಿಂಬೆಹಣ್ಣು, ಯೇಸು ಲಡ್ಡು, ಯೇಸು ಕುಂಕುಮ, ಯೇಸು ವಿಭೂತಿ, ಕೊನೆಗೆ ಭರತನಾಟ್ಯ, ಯಕ್ಷಗಾನ, ಕಥಕ್ಕಳಿ ಯಂಥ ಹಿಂದೂ ಪರಂಪರೆಯನ್ನೇ ಮತಾಂತರಿಸಿ, ಯೇಸುವನ್ನು ಯೋಗಾಸನ ಧ್ಯಾನ ಭಂಗಿಗಳಲ್ಲಿ ಚಿತ್ರಿಸಿ, ನೋಡಿದ ಕೂಡಲೇ ಸಾಕ್ಷಾತ್ ಯೇಸುವೇಹಿಂದೂಧರ್ಮಕ್ಕೆ ಮತಾಂತರವಾಗಿಬಿಟ್ಟನೇ ಎಂದು ಅನುಮಾನ ಮೂಡುವಷ್ಟು ಅತಿರೇಕದಲ್ಲಿ ಮತಾಂತರದ ಗೇಮುಗಳು ಸ್ಕೀಮುಗಳು ನಾಚಿಗೇಡು ಸರಕಾರಗಳ ಕೃಪಾಪೋಷಿತಗಳಿಂದಲೇ ನಡೆಯುತ್ತಿರುವುದು ಪಾದ್ರಿಗಳಿಗೆ ತಿಳಿದೇ ಇಲ್ಲವೇ?.
ಮೊದಲು ಪಾದ್ರಿಗಳು ಇಂಥ ಅನಿಷ್ಠ ಮಿಷನರಿಗಳಿಗೆ ಎಚ್ಚರಿಕೆ ನೀಡಬೇಕಾದ ಅವಶ್ಯಕತೆ ಇದೆ. ಹಿಂದೂ ಒಬ್ಬ ಬೈಬಲ್ ಓದಿ ಅದರಿಂದ ಪ್ರಭಾವಿತನಾಗಿ ಚರ್ಚ್‌ಗೆ ಎಡತಾಕಿದರೆ ಖಂಡಿತಾ ಆತನನ್ನು ಸ್ವಾಗತಿಸಿ ಕುತ್ತಿಗೆಗೆ ಶಿಲುಬೆ ಏರಿಸಿ ಬಹಳ ಸಂತೋಷ. ಆದರೆ ಮುಗ್ಧ ಹಿಂದೂ ವೃದ್ಧರನ್ನು, ದೇವರೆಂದರೆ ಸ್ಪಷ್ಟ ತಿಳುವಳಿ ಯಿಲ್ಲದ ಮಕ್ಕಳನ್ನು, ದಿನಗೂಲಿ ಮಾಡುವ ಹೆಣ್ಣುಮಕ್ಕಳಿಗೆ ಬಲೆಬೀಸಿ ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡು ಹಿಂದೂ ದೇವರುಗಳ ಬಗ್ಗೆ ಇಲ್ಲಸಲ್ಲದ ಭಾವನೆಯನ್ನು ಬಿತ್ತಿ, ಮಾನಸಿಕವಾಗಿ ಬಲಹೀನಗೊಳಿಸಿ ಯೇಸಪ್ಪನ ಮೇಲೆ ದಿಢೀರ್ ಭಯ ಭಕ್ತಿಯನ್ನು ಹತ್ತಿಸಿ ಯೇಸ ಪ್ಪನ ಭಜನೆ ಮಾಡಿಸುವುದಿದೆಯ ಅಂಥಅಕ್ರಮ ಮತ್ತು ಅಪರಾಧವನ್ನು ತಡೆಯುವ ಬದ್ಧತೆಯನ್ನು ಪಾದ್ರಿಗಳು ತೋರಬೇಕಿದೆ. ಇಂಥ ದ್ದನ್ನು ಕಿಂಚಿತ್ ಅದರೂ ಮಾಡಿದರೆ ಹಿಂದೂಗಳೇ ಯೇಸಪ್ಪನಿಗೆ ಗೌರವಿಸುವ ಸೌಹಾರ್ದತೆ ಮೆರೆಯುತ್ತಾರೆ.
ಮೊನ್ನೆ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿರುವ ಶಾಸಕ ಡಾ.ಶಾಮನೂರ ಶಿವಶಂಕರಪ್ಪನವರು ತಡವಾದರೂ ಇದೀಗ ಎಚ್ಚೆತ್ತುಕೊಂಡಿದ್ದಾರೆ. ಸಾಕ್ಷಾತ್ ವೀರಶೈವ- ಲಿಂಗಾಯತ ಸಮುದಾಯದವರೇ ಮಿಷನರಿಗಳ ಆಸೆ ಆಮಿಷ ಪ್ರಲೋಭನೆ ಒತ್ತಡಗಳಿಗೆ ಬಲಿಯಾಗಿ ದಾವಣಗೆರೆ ಜಿಲ್ಲೆಯೊಂದರ ಲಕ್ಷಾಂತರ ಮಂದಿ ಮತಾಂತರಕ್ಕೆ ಒಳಗಾಗಿzರೆಂಬ ಸ್ಪೋಟಕ ವರದಿಗೆ ಬೆಚ್ಚಿಬಿದ್ದು ಜಾಗೃತರಾಗಿ ಇದ್ದುನಿಂತಿದ್ದಾರೆ. ಹಾಗೊಮ್ಮೆ ಮತಾಂತರ ನಡೆದಿದ್ದೇ ಆಗಿದ್ದರೆ ಅವರೆಲ್ಲರನ್ನೂ ಮರಳಿ ಹಿಂದೂಧರ್ಮಕ್ಕೆ ವಾಪಸ್ಸು ಕರೆತರುವ ತುರ್ತುಕಾರ್ಯಕ್ಕೆ ಮಹಾಸಭಾ ತೊಡಗಿಸಿಕೊಳ್ಳಬೇಕೆಂದು ಪದಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದು ನಿಜಕ್ಕೂ ಅದ್ಭುತ ಬೆಳವಣಿಗೆ.
ಹಿಂದೂಧರ್ಮದ ಒಂದು ಸಮುದಾಯದ ಶಾಸಕರೊಬ್ಬರು ಇಂಥ ನಿಲುವನ್ನು ತಳೆದಿರಬೇಕಾದರೆ, ಜಾತಿಗೊಂದು ಉಪಜಾತಿಗೊಂದು ಮಠಗಳನ್ನು ಸ್ಥಾಪಿಸಿಕೊಂಡಿರುವ ಸ್ವಾಮೀಜಿಗಳಿಗೆ ಮಾಡಲು ಇದಕ್ಕಿಂತ ದೊಡ್ಡ ಧರ್ಮದ ಕೆಲಸ ಇನ್ನೇನಿದೆ ಹೇಳಿ. ನಮ್ಮಲ್ಲಿ ಶೃಂಗೇರಿ, ಸಿದ್ಧಗಂಗಾ, ಸುತೂರು, ಮೂರುಸಾವಿರ, ಮರುಘರಾಜೇಂದ್ರ, ಆದಿಚುಂಚನಗಿರಿ ಅಂತಹ ಅನ್ನ-ಅಕ್ಷರ-ಆಶ್ರಯವೆಂಬ ತ್ರಿವಿಧ ದಾಸೋಹಗಳ ವಿಶ್ವಖ್ಯಾತ ಮಠಮಂದಿರಗಳಿವೆ.ಸಾಮಾನ್ಯನಿಂದ ಹಿಡಿದು ದೊಡ್ಡ ಉದ್ಯಮಿಗಳು ರಾಜಕಾರಣಿಗಳವರೆಗೂ ಎಲ್ಲರನ್ನೂ ಗೌರವಿಸುವ ಆಧರಿಸುವ ಮಿಗಿಲಾಗಿ ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. ಹೀಗಿರುವಾಗ ಹಿಂದೂ ಧರ್ಮಕ್ಕೆ ಶಾಪವಾಗಿರುವ ಮತಾಂತರವನ್ನು ನೋಡಿಯೂ ಸ್ಪಷ್ಟ ಅರಿವಿದ್ದರೂ ಅದನ್ನು ನಿಯಂತ್ರಿಸುವುದಿರಲಿ, ತಮ್ಮ ಸಮುದಾಯದ ಮಂದಿಗಳದರೂ ಜಾಗೃತಿ ಮೂಡಿಸುವ ಕಾರ್ಯವನ್ನಾದರೂ ಮಾಡಬಹುದಲ್ಲವೇ?.
ಆದೇನು ದುರ್ದೈವಬಲವೋ ಏನೋ ಯಾವ ಸ್ವಾಮೀಜಿಗಳೂ ಈ ಧರ್ಮನಾಶಕ ಮತಾಂತರವನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಇರುವಷ್ಟರಲ್ಲಿ ಪೇಜಾವರ ಶ್ರೀಗಳು ದಲಿತರ ಕೇರಿಗೆ ಭೇಟಿನೀಡಿ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ಹಂಪಿಯ ವಿದ್ಯಾರಣ್ಯಮಠದ ಶ್ರೀವಿದ್ಯಾರಣ್ಯ ಭಾರತೀಯತಿಗಳು ತಮ್ಮ ಚಾತುರ್ಮಾಸ ಕಳೆದ ಮಾರನೇ ದಿನವೇ ಹಂಪಿ ಸುತ್ತಮುತ್ತಲಿನಲ್ಲಿನ ದಲಿತರು ಪರಿಶಿಷ್ಠ ಪಂಗಡದವರ ಮನೆಗಳಿಗೆ ತೆರಳಿ ದೀಪವನ್ನು ಬೆಳಗಿಸುವ ‘ಧರ್ಮಜ್ಯೋತಿ’ ಆಚರಣೆಯನ್ನು ರೂಢಿಸಿಕೊಂಡು ಬಂದಿದ್ದಾರೆ. ಆದರೆ ಮೊನ್ನೆ ನೋಡಿ ಅಲೌಕಿಕತೆ ಮೆರೆಯಬೇಕಾದ ಕಾವಿಯನ್ನು ತೊಟ್ಟವರೊಬ್ಬರು ಸಂಸದರಾದ ತಾಪಸಿಂಹ ಅವರಿಗೆ ‘ಚಡ್ಡಿಬಿಚ್ಚಿ ಹೊಡೆಯುತ್ತೇನೆ’ ಎಂದು ಪರಮ ಕೆಳದರ್ಜೆಯ ಲೌಕಿಕತೆ ಮೆರೆದಿದ್ದಾರೆ. ಪ್ರತಾಪಸಿಂಹ ಅವರಿಗೆ ಹೊಡೆಯಲು ಇವರೇಕೆ ತಮ್ಮ ಚಡ್ಡಿಬಿಚ್ಚಿಕೊಂಡು ಬರಬೇಕು?.
ಈಗ ಹಂಸಲೇಖರಂಥ ಸಮಾಜ ಸುಧಾರಕರು ಮುಂದೆಬಂದು ಮೊದಲು ಇಂಥ ಕಾವಿಧಾರಿಗಳ ಕಳಚಿಹೋಗುತ್ತಿರುವ ಚಡ್ಡಿಯನ್ನು ಮೇಲಕ್ಕೆಳೆದು ದಾರಕಟ್ಟಿ ಮಠಗಳ ಸಂತರ ಪಾವಿತ್ರ್ಯತೆಯನ್ನು ಕಾಪಾಡಬೇಕಿದೆ. ಕೊನೆಯದಾಗಿ, ಮತಾಂತರ ನಿಷೇಧ ಕಾಯಿದೆ ತರುತ್ತೇವೆ ಎಂದಕೂಡಲೇ ಹೆಗಲು ಮುಟ್ಟಿ ನೋಡಿಕೊಳ್ಳುವವರನ್ನು ಕೇಳಿ ಮಸಾಲೆ ಅರಿಯುವುದನ್ನು ಬಿಟ್ಟು ಸರಕಾರ ಕೂಡಲೇ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಬೇಕಿದೆ. ಕಾಯಿದೆ ಯೆಂಬ ಬೇಲಿಯನ್ನು ಹಾಕಿದರಷ್ಟೇ ಸಾಲದು. ಅದರಿಂದ ಮಿಷನರಿಗಳಿಗೆ ಒಂದಿಷ್ಟು ಭಯ ಹುಟ್ಟಬಹುದು. ಆದರೆ ಆ ಬೇಲಿಯೊಂದಿಗೆ ದೊಣ್ಣೆ ಹಿಡಿದು ಕಾವಲು ಕಾಯಬೇಕಾದವರು ಛತ್ತೀಸ್ ಗಢ್ದ ಪ್ರಬಲಪ್ರತಾಪ್ ಜುದೇವರಂಥ ಬದ್ಧತೆಯುಳ್ಳವರು, ಶಾಮನೂರು ಶಿವಶಂಕರಪ್ಪನವರಂಥ ನಾಯಕರು ಮತ್ತು ರಾಜ ಕಾರಣ ಮತ್ತು ಸ್ವಜಾತಿ ಧ್ಯಾನದಿಂದ ತಪೋಭಂಗರಾಗಿ ಸಿಡಿದೇಳಬೇಕಾದ ತಾತ್ವಿಕ ಮತ್ತು ಸಾತ್ವಿಕ ಸಂನ್ಯಾಸಿಗಳಿದ್ದರೆ ಸಾಕು.
ಮುಖ್ಯಮಂತ್ರಿಗಳೇ, ಮತಾಂತರ ನಿಷೇಧ ಕಾಯಿದೆ ಶೀಘ್ರ ಜಾರಿಗೆ ತನ್ನಿ.