ಉಷ್ಣತೆಯ ಏಕಮಾನ ಸೆಲ್ಸಿಯಸ್ ಹುಟ್ಟಿದ ಕಥೆ
ಶ್ರೀನಿವಾಸ ಡಿ. ಶೆಟ್ಟಿ
ಕರೋನಾ ಕಾಲಘಟ್ಟದಲ್ಲೀಗ ಎಲ್ಲಿಗೆ ಹೋದರೋ ಬಾಗಿಲಲ್ಲೇ ನಮ್ಮನ್ನು ಸ್ವಾಗತಿಸುವುದು ಡಿಜಿಟಲ್ ಉಷ್ಣತಾಮಾಪಕ ಹಾಗೂ ಹ್ಯಾಂಡ್ ಸ್ಯಾನಿಟೈಜರ್ಗಳೇ. ಉಷ್ಣತಾ ಮಾಪಕದಲ್ಲಿ ೯೮.೬ಓಊ ಅಥವಾ ೩೭ಓ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣತೆ ಕಂಡುಬಂದರೆ ಸಾಕು ಎದೆ ಬಡಿದುಕೊಳ್ಳಲು ಆರಂಭಿಸುತ್ತದೆ. ಆದರೆ ಕೊರೋನಾ ಮಾಡಿದ ಉಪಕಾರ(?)ವೇನೆಂದರೆ ಜನಸಾಮಾನ್ಯರಿಗೂ ದೇಹದ ಉಷ್ಣಾಂಶದ ಬಗೆಗೆ ಅರಿವು ಮೂಡಿದ್ದು. ಈವರೆಗೆ ವಿಜ್ಞಾ ಆಸಕ್ತರಿಗೆ ಮಾತ್ರ ಗೊತ್ತಿದ್ದ ಡಿಗ್ರಿ ಸೆಲ್ಸಿಯಸ್, ಫಾರನ್ ಹೀಟ್‌ಗಳೆಂಬ ಪದಗಳು ಈಗ ಜನಜನಿತ.
ಕೊರೋನಾ ಮಹಿಮೆ!ಇರಲಿ, ಏನಿದು ಸೆಲ್ಸಿಯಸ್? ಉಷ್ಣತೆಯ ಅಂತಾರಾಷ್ಟ್ರೀಯ ಏಕಮಾನ ಕೆಲ್ವಿನ್. ಆದರೆ ವಾತಾವರಣದ ಉಷ್ಣತೆ, ಅಡುಗೆ ಮಾಡುವಾಗ, ಆಹಾರ ಪದಾರ್ಥಗಳನ್ನು ಪ್ಯಾಂಕಿಂಗ್ ಮಾಡುವಲ್ಲಿ, ದೇಹದ ಉಷ್ಣಾಂಶ ನೋಡುವಾಗ, ಕೊಠಡಿಯ ಉಷ್ಣತೆ ಕಂಡುಹಿಡಿಯಲು ಇನ್ನಿತರ ದೈನಂದಿನ ಕೆಲಸಗಳಲ್ಲಿ ನಾವು ಡಿಗ್ರಿ ಸೆಲ್ಸಿಯಸ್ ಅಥವಾ ಫಾರನ್ ಹೀಟ್ ಅನ್ನು ಬಳಸುತ್ತೇವೆ. ಅಂಥ ಡಿಗ್ರಿ ಸೆಲ್ಸಿಯಸ್‌ನ ಬರ್ತ್‌ಡೆ ಇಂದು (ನವೆಂಬರ್ ೨೭)! ಹೌದು, ಇಂಥದ್ದೊಂದು ಉಷ್ಣತಾಮಾ ಪಕ ಕಂಡುಹಿಡಿದ ವಿಜ್ಞಾನಿ ಆಂಡೆರ್ಸ್ ಸೆಲ್ಸಿಯಸ್‌ನ ಜನ್ಮದಿನವನ್ನೇ ‘ಸೆಲ್ಸಿಯಸ್ ಡೇ’ ಎಂದು ವಿಜ್ಞಾನ ಜಗತ್ತು ಆಚರಿಸುತ್ತದೆ. ಆತ ಕಂಡು ಹಿಡಿದ ಮಾಪಕಕ್ಕೆ ಆತನ ಹೆಸರನ್ನೇ ಇಡಲಾಗಿದೆ.
ವಿಜ್ಞಾನಿ ಸೆಲ್ಸಿಯಸ್ ೨೭ ನವೆಂಬರ್ ೧೭೦೧ರಲ್ಲಿ ಸ್ವೀಡನ್ ದೇಶದ ಉಪ್ಸಾಲಾದಲ್ಲಿ ಹುಟ್ಟಿದ್ದು. ಮೂಲತಃ ಖಗೋಳಶಾಸ್ತ್ರಜ್ಞನಾದ ಈತ ಸ್ವೀಡನ್ ಸರಕಾರದ ನೆರವಿನಿಂದ ಉಪ್ಸಾಲಾದಲ್ಲಿ ೧೭೪೧ರಲ್ಲೇ ಒಂದು ಖಗೋಳ ವೀಕ್ಷಣಾಲಯ ಸ್ಥಾಪಿಸಿದ. ಫ್ರಾನ್ಸ್, ಜರ್ಮನಿ, ಇಟಲಿಗಳನ್ನು ಸುತ್ತಿ, ಅಧ್ಯಯನದ ಮೂಕಖಗೋಳಶಾಸ್ತ್ರಕ್ಕೆ ತನ್ನದೇ ಕೊಡುಗೆ ಕೊಟ್ಟವನೀತ. ಧ್ರುವಪ್ರಭೆಯ () ವೈಚಿತ್ರ್ಯವನ್ನು ಅಭ್ಯಾಸ ಮಾಡಿ ಉತ್ತರ ಧ್ರುವಪ್ರಭೆಗೂ ಭೂಮಿಯ ಕಾಂತ ಕ್ಷೇತ್ರದಲ್ಲಿ ನಡೆಯುವ ಬದಲಾವಣೆಗೂ ಸಂಬಂಧವಿದೆ ಎಂದು ಕಂಡುಹಿಡಿರವರಲ್ಲಿ ಸೆಲ್ಸಿಯಸ್ ಮೊದಲಿಗ.
ಆವರೆಗೆ ಉಷ್ಣತೆಯನ್ನು ನಿಖರವಾಗಿ ಅಳತೆ ಮಾಡಲು ಉಪಕರಣವಿರಲಿಲ್ಲ. ಅದುವರೆಗೂ ಇದ್ದ ಗೆಲಿಲಿಯೋನ ಥೆರ್ಮೋಸ್ಕೋಪ್ ನಿಂದ ನಿಖರ ಉಷ್ಣತೆಕಂಡು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಈ ಥರ್ಮೋಸ್ಕೋಪ್‌ನಿಂದ ವಸ್ತುಗಳ ನಡುವೆ ಯಾವುದು ಹೆಚ್ಚು ಬಿಸಿ ಇದೆ ಎಂಬುದನ್ನಷ್ಟೇ ತಿಳಿಯಬಹುದಾಗಿತ್ತು.೧೬೧೨ರಲ್ಲಿ ಸ್ಯಾಂಟೋರಿಯೋ ಎಂಬುವವನು ಥೆರ್ಮೋಸ್ಕೋಪ್‌ಗೆ ಸಂಖ್ಯೆಗಳನ್ನು ಅಳವಡಿಸಿ ಉಪಕರಿಸಿದ. ಇದೇ ಮೊದಲ ವೈದ್ಯಕೀಯ ಉಷ್ಣತಾಮಾಪಕ. ಇದನ್ನು ವ್ಯಕ್ತಿಯ ಬಾಯಿಯಲ್ಲಿ ಇಟ್ಟು ದೇಹದ ಉಷ್ಣತೆ ಅಳೆಯುವಂತೆ ಮಾಡಲಾಗಿತ್ತು. ಆದರೆ ಇದರಿಂದಲೂ ನಿಖರ ಉಷ್ಣತೆ ಅಳೆಯಲು ಸಾಧ್ಯವಾಗಲಿಲ್ಲ. ಕೊನೆಗೆ ೧೭೧೪ರಲ್ಲಿ ಪ್ರಪ್ರಥಮವಾಗಿ ಆಧುನಿಕ ಉಷ್ಣತಾಮಾಪಕವನ್ನು ಡೇನಿಯಲ್ ಗ್ಯಾಬ್ರಿಯಲ್ ಫಾರನ್ ಹೀಟ್ ಎಂಬಾತ ಗಾಜಿನೊಳಗೆ ಪಾದರಸವನ್ನುತುಂಬಿಸಿ ಅದಕ್ಕೆ ಸಂಖ್ಯೆಗಳನ್ನು ಸಮಭಾಗಗಳಲ್ಲಿ ವಿಂಗಡಿಸಿ ಜೋಡಿಸಿದ.
೧೭೨೪ರಲ್ಲಿ ನೀರಿನ ಘನೀಕರಣ ಬಿಂದು ಹಾಗೂ ಕುದಿಯುವ ಬಿಂದುವನ್ನು ೧೮೦ ಡಿಗ್ರಿಗಳನ್ನಾಗಿ ಮಾಡಿ ೩೨ ಡಿಗ್ರಿಯಿಂದ ೨೧೨ ರವರೆಗಿನ ಅಳತೆಯುಳ್ಳಅವನದೇ ಹೆಸರಿನ ‘ಫ್ಯಾರನ್ ಹೀಟ್’ ಎಂಬ ಏಕಮಾನ ದಿಂದ ಕರೆಯಲಾಯಿತು. ಫ್ಯಾರನ್ ಹೀಟ್ ಉಷ್ಣತಾಮಾಪಕದಲ್ಲಿ ಮಾನವ ದೇಹದ ಸರಾಸರಿ ಉಷ್ಣತೆಯು ಮೊದಲು ೧೦೦ ಡಿಗ್ರಿ ಇದ್ದದ್ದು ನಂತರ ಇದನ್ನು ೯೮.೬ ಡಿಗ್ರಿ ಎಂದು ನಿಗದಿಮಾಡಲಾಯಿತು. ಇ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ಕೈಗೊಂಡು ೧೭೪೨ರಲ್ಲಿ ನಮ್ಮ ಆಂಡೆರ್ಸ್ ಸೆಲ್ಸಿಯಸ್ ನೀರಿನ ಕುದಿಯುವ ಬಿಂದುವನ್ನು ೦ ಡಿಗ್ರಿಯನ್ನಾಗಿ ಹಾಗೂ ಘನೀಕರಣ ಬಿಂದುವನ್ನು ೧೦೦ ಡಿಗ್ರಿಯನ್ನಾಗಿ ಮಾಡಿ ಸೆಂಟಿಗ್ರೇಡ್ ಉಷ್ಣತಾಮಾಪಕವನ್ನು ಕಂಡುಹಿಡಿದನು. ಆದರೆ ೧೭೪೫ ರಲ್ಲಿ ಸೆಲ್ಸಿಯಸ್ ನಿಧನರಾದ ಒಂದು ವರ್ಷದ ನಂತರ ಕಾರ್ಲ್ ಲಿನಾಯಸ್ ಸೆಂಟಿ ಗ್ರೇಡ್ ಉಷ್ಣತಾಮಾಪಕದಲ್ಲಿ ೦ ಡಿಗ್ರಿಯನ್ನು ಘನೀಕರಣ ಬಿಂದು ಎಂದೂ, ೧೦೦ ಡಿಗ್ರಿಯನ್ನು ಕುದಿ ಯುವ ಬಿಂದು ಎಂದೂ ಬದಲಾಯಿಸಿದ.
ಲಾರ್ಡ್ ಕೆಲ್ವಿನ್ ೧೮೫೮ರಲ್ಲಿ ಕೆಲ್ವಿನ್ ಉಷ್ಣತಾಮಾಪಕವನ್ನು ಕಂಡುಹಿಡಿದಾತ. ಈ ಉಷ್ಣತಾಮಾಪಕವು ಸೆಲ್ಸಿಯಸ್ ಉಷ್ಣತಾಮಾಪಕದಂತೆಯೇ ಇದೆ. ಆದರೆ ಇದು ನಿರಪೇಕ್ಷ ತಾಪಮಾನದಿಂದ ಪ್ರಾರಂಭವಾಗುತ್ತದೆ. (ನಿರಪೇಕ್ಷ ತಾಪಮಾನ -೨೭೩.೧೫ಓಇ ಅಥವಾ – ೪೫೯.೬೭ಓಊ ಇರುತ್ತದೆ. ಇದಕ್ಕಿಂತ ಕಡಿಮೆ ತಾಪಮಾನ ಹೊಂದಿರುವುದಕ್ಕೆ ಯಾವ ವಸ್ತುವಿಗೂ ಸಾಧ್ಯವಿಲ್ಲ.
ಏಕೆಂದರೆ ವಸ್ತುವಿನ ಕಣಗಳ ಕನಿಷ್ಠ ಚಲನೆ ಈ ತಾಪಹೀಗೆ ಸಾಗಿ ಬಂದ ಉಷ್ಣತಾಮಾಪಕವು ಇಂದು ಹಲವಾರು ರೂಪಗಳನ್ನು ಪಡೆದಿದೆ. ರೋಗಿಗಳ ದೇಹದ ಉಷ್ಣತೆ ನೋಡಲು ಬಳಸುವ ವೈದ್ಯಕೀಯ ಉಷ್ಣತಾಮಾಪಕ, ಪ್ರಯೋಗಾಲಯ ಉಷ್ಣತಾಮಾಪಕ, ಇನ್ರಾರೆಡ್ (ಆವತೀತ ಕಿರಣ) ಉಷ್ಣತಾಮಾಪಕ, ಡಿಜಿಟಲ್ ಉಷ್ಣತಾಮಾಪಕ ಹೀಗೆ ಹತ್ತು ಹಲವು ರೂಪ ಪಡೆದಿದೆ. ಯಾವುದೇ ರೂಪದಲ್ಲಿ ಉಷ್ಣತಾಮಾಪಕವಿದ್ದರೂ ಸೆಲ್ಸಿಯಸ್ ಮಾಡಿದ ಉಷ್ಣತಾಮಾಪಕ ವನ್ನು ಇಂದಿಗೂ ಬಳಸುತ್ತಿರುವುದು ಹಾಗೂ ಉಷ್ಣತೆ ಏಕಮಾನವನ್ನು ಸೆಲ್ಸಿಯಸ್‌ನಲ್ಲಿಯೇ ಬಳಸುತ್ತಿರುವುದು ಅವರಿಗೆ ಸಂದ ಬಹುದೊಡ್ಡ ಗೌರವ.ಯೇ ಇರೋಣ.
(ಲೇಖಕರು ಅರಕಲಗೋಡಿನ ಶಿಕ್ಷಣ ಸಂಯೋಜಕರು)