’ಸಖತ್‌’ ಅನ್ನೋ ’ಅಂಧ’ ಕಾಲತ್ತಿಲ್ ಸಿನಿಮಾ
ತುಂಟರಗಾಳಿ
ಹರಿ ಪರಾಕ್
ಲೂಸ್ ಟಾಕ್
ಸಿಂಪಲ್ ಸುನಿಏನ್ ಸಾರ್, ನಿಮ್ಮ ಸಖತ್ ಸಿನಿಮಾದಲ್ಲಿ ಅಂಧರನ್ನ ಅವಹೇಳನ ಮಾಡಿದ್ದೀರ ಅಂತ ಕೆಲವರು ಕಿರಿಕಿರಿ ಮಾಡಿದ್ರಂತಲ್ಲ? ಏನ್ ಮಾಡೋದು, ಸಿನಿಮಾನಮೆಳ್ಳೆಗಣ್ಣಲ್ಲಿ ನೋಡಿದವರಿಗೆ ಹಂಗನಿಸುತ್ತೆ. ‘ಅಂಧ’ ಅನ್ನೋ ವಿಷಯ ಬಿಟ್ಟು ನೋಡಿದ್ರೆ ಸಿನಿಮಾದ ನಿಜವಾದ ‘ಅಂದ’ ಕಾಣುತ್ತೆ.
ಒಬ್ಬ ನಿರ್ದೇಶಕರಾಗಿ ಈ ಸಿನಿಮಾ ನಿಮಗೆ ತೃಪ್ತಿ ಕೊಟ್ಟಿದೆಯಾ? ಖಂಡಿತಾ. ಸಿನಿಮಾ ನಾನು ‘ಅಂದುಕೊಂಡ’ ಹಾಗೆ ಬಂದಿದೆ. ಈ ಪ್ರಪಂಚನಾ, ‘ಅಂಧ ಕಂಡ’ ಹಾಗೆ ತೋರಿಸೋ ಪ್ರಯತ್ನ ಮಾಡಿದ್ದೀನಿ. ‘ಅಂಧ’ ಹಾಗೆ, ಸಾರಿ, ‘ಅಂದ’ಹಾಗೆ, ನಿಮ್ಮ ಸಿನಿಮಾ ರಿಪೋರ್ಟ್ ಹೆಂಗಿದೆ? ಸಿನಿಮಾ ನೋಡಿದವರೆಲ್ಲ, ‘ಕಣ್ ಮುಚ್ಕೊಂಡ್’ ಒಂದ್ ಸಲ ನೋಡಬಹುದು ಅಂತಿದ್ದಾರೆ.
ಓಹೋ ಹಂಗಾದ್ರೆ ನಿಮ್ಮ ನಿರ್ಮಾಪಕರು ಖುಷಿಯಾಗಿರಬೇಕಲ್ವಾ? ನಿರ್ಮಾಪಕರು ಫುಲ್ ‘ಖುಷ್, ಖುಷ್’ ಆಗಿzರೆ. ಸುನಿ, ಗಣೇಶ್ ಕಾಂಬಿನೇಶನ್ ಇದ್ರೆ ಸಿನಿಮಾ ಹಿಟ್ ಆಗೋದ್ ಗ್ಯಾರಂಟಿ ಅಂತ ‘ಬ್ಲೈಂಡ್ ಬಿಲೀಫ್’ ಬಂದುಬಿಟ್ಟಿದೆ ಅವರಿಗೆ. ಅದ್ಸರಿ, ನೀವೇನು ಗಣೇಶ್ ಅವರ ಜತೆ ಇಷ್ಟೊಂದ್ ಸಿನಿಮಾ ಮಾಡ್ತಾ ಇದ್ದೀರಾ? ನೋಡ್ರೀ, ಕನ್ನಡ ಪ್ರೇಮ ಅನ್ನೋದು ನವಂಬರ್ ತಿಂಗಳಲ್ಲಿ ಮಾತ್ರ ಇರಬಾರದು, ವರ್ಷ ಪೂರ್ತಿ ಇರಬೇಕು ಅಂತಾರೆ ಅಲ್ವಾ.. ಹಾಗೇನೇ ನಾನು ‘ಗಣೇಶನ ಹಬ್ಬ’ನೂ ವರ್ಷಪೂರ್ತಿಮಾಡ್ತಾ ಇದ್ದೀನಿ ಅಷ್ಟೇ.(ಕಾಲ್ಪನಿಕ ಸಂದರ್ಶನ)
ಸಿನಿಗನ್ನಡಈ ಹಿಂದೆ ಸಿನಿಮಾದ ಕಥೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ರಾಜಕೀಯ ಅನ್ನೋದು ಈಗ ಸಿನಿಮಾಗಳನ್ನು ನೋಡುವ ಬಗೆಯನ್ನೇ ಬದಲಾಯಿಸುವ ಹಂತಕ್ಕೆ ಬಂದಿರೋದು ಹೊಸ ವಿಷಯ ಏನಲ್ಲ. ಇದು ಇತ್ತೀಚೆಗೆ ಭಾರತ ಚಿತ್ರರಂಗದುದ್ದಕ್ಕೂ ಆವರಿಸಿರೋ ಭೂತ ವಾಗಿದೆ. ಪ್ರಕಾಶ್ ರೈ ಇದ್ರೆ ಸಿನಿಮಾ ನೋಡಲ್ಲ, ಕಂಗನಾ, ಅಕ್ಷಯ್ ಕುಮಾರ್ ಸಿನಿಮಾ ನೋಡಲ್ಲ ಎಂದೆಲ್ಲ ತಳ ಬುಡ ಇಲ್ಲದೇ ಮಾತಾಡುವವರು ಈಗೀಗ ಜಾಸ್ತಿ ಆಗಿದ್ದಾರೆ.
ವಿಕ್ರಮ, ವಿಜಯ, ಅನುಪಮ್ ಖೇರ್, ಕಮಲ್ ಹಾಸನ್ ಹೀಗೆ ಅನೇಕ ಘಟಾನುಘಟಿಗಳನ್ನೂ ಈ ಭೂತ ಬಿಟ್ಟಿಲ್ಲ. ಈಗ ಈ ಸಮಸ್ಯೆ ಕನ್ನಡ ಚಿತ್ರರಂಗಕ್ಕೂ ಅಂಟಿಕೊಂಡಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಬಿಡುಗಡೆ ಆದ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಬರುತ್ತಿರೋ ವಿಮರ್ಶೆಗಳನ್ನು ನೋಡಿದರೆ ಹೀಗನ್ನಿಸೋದು ಸಹಜ. ನಟ ರಿಷಬ್ ಶೆಟ್ಟಿ ಒಂದು ರಾಜಕೀಯ ಪಕ್ಷದ ಪರವಾಗಿ ಮಾತಾಡಿದ್ದರು ಅನ್ನೋ ಕಾರಣಕ್ಕೆ ಈ ಸಿನಿಮಾವನ್ನು ನೋಡದೆಯೇ, ಸಿನಿಮಾ ಚೆನ್ನಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವವರ ಸಂಖ್ಯೆ ದೊಡ್ಡದಿದೆ. ಅಲ್ಲದೆ ಶೆಟ್ಟಿ ಸಮುದಾಯ ಕೂಡ ಅಂಥವರ ಸಣ್ಣಬುದ್ಧಿಗೆ ಟಾರ್ಗೆಟ್ ಆಗಿದೆ. ಆದರೆ ಇದರಲ್ಲಿ ಅವರದ್ದೂ ತಪ್ಪಿದೆ ಅನ್ನೋದು ಸತ್ಯ. ಶೆಟ್ಟಿ ಬಳಗದವರು ಯಾವ ಸಿನಿಮಾ ಮಾಡಿದ್ರೂ ಅದಕ್ಕೆ ತಮ್ಮದೇ ಬಳಗದ ಐಶಾನಿ ಶೆಟ್ಟಿ, ನೀತೂ ಶೆಟ್ಟಿ ಅಂಥವರ ಜತೆ, ಹೆಸರೇ ಕೇಳಿಲ್ಲದ ಶೆಟ್ಟಿ ಗಳಿಂದಲೇ ಬೆಂಬಲ ಕೊಡುವ ಮಾತುಗಳನ್ನಾಡಿಸುತ್ತಾರೆ.
ಹಾಗಾಗಿ ಉಳಿದವರಲ್ಲಿ, ಇದು ‘ನಮ್ಮ ಸಿನಿಮಾ ಅಲ್ಲ, ಅವರ ಸಿನಿಮಾ’ ಎನ್ನುವ ಭಾವನೆ ಹುಟ್ಟಿಕೊಳ್ಳಲು ಕಾರಣವಾಗಿದೆ. ಇದರ ಜತೆಗೆ, ಸಿನಿಮಾವನ್ನ ತೆಗಳುವವರಂತೇ, ಸಿನಿಮಾ ಹೊಗಳುವವರೂ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಇದು ಅದ್ಭುತ ಚಿತ್ರ ಎಂದು ಷರಾ ಬರೆದವರೂ ಇದ್ದಾರೆ. ಇನ್ನು ಬಿಡುಗಡೆ ಆದಮೇಲೂ ವಿಮರ್ಶೆ ಬರೆದವರ ಲೇಖನಗಳಲ್ಲಿ, ಇದು ‘ಅಂತರಾಷ್ಟ್ರೀಯ ಮಟ್ಟದ ಸಿನಿಮಾ’, ‘ಮೆಟಾ-ರ್‌ಗಳ ಬಳಕೆ’ ಎಂಬ ಅವವೇ ಕಾಮನ್ ಪದಗಳನ್ನು ನೋಡಿದ ಕಾಮನ್ ಪ್ರೇಕ್ಷಕರಿಗೆ ಇವರೆಲ್ಲ ಮೊದಲೇ ಮಾತಾಡಿಕೊಂಡು ವಿಮರ್ಶೆ ಬರೆದಿದ್ದಾರೆ, ಇದು ಪೂರ್ವ ನಿರ್ಧರಿತ ವಿಮರ್ಶೆ ಅನ್ನೋ ಅನುಮಾನ ಬಂದರೆ ತಪ್ಪಿಲ್ಲ.
ಒಟ್ಟಿನಲ್ಲಿ ಈ ರಾಜಕೀಯದ ಕೆಸರೆರೆಚಾಟ ಮನರಂಜನೆಯ ವಿಷಯದಲ್ಲೂ ಮೂಗು ತೂರಿಸುತ್ತಿರೋದು ಮಾತ್ರ ಒಳ್ಳೆಯ ಬೆಳವಣಿಗೆ ಅಲ್ಲ. ಇದರಿಂದ ಇನ್ನೂ ಸಿನಿಮಾ ನೋಡದೇ ಇರೋ ಅಪ್ಪಟ ಸಿನಿಪ್ರಿಯರಿಗೆ, ವಿಮರ್ಶೆಗಳನ್ನು ನೋಡಿ ಸಿನಿಮಾಗೆ ಹೋಗುವ ಮುಗ್ಧ ಪ್ರೇಕ್ಷಕರಿಗೆ, ಇದು ಪೂರ್ವಗ್ರಹ ಪೀಡಿತ ಅಭಿಪ್ರಾಯನಾ, ಅಥವಾ ವಸ್ತು ನಿಷ್ಠ ಅಭಿಪ್ರಾಯನಾ ಅನ್ನೋದರ ಬಗ್ಗೆ ಗೊಂದಲ ಮೂಡುತ್ತಿರೋದಂತೂ ಸತ್ಯ.
ನೆಟ್ ಪಿಕ್ಸ್ಕ್ರಿಶ್ಚಿಯನ್ನರೇ ಹೆಚ್ಚಾಗಿರುವ ಊರೊಂದರಲ್ಲಿ ಖೇಮು ಚರ್ಚ್ ಒಂದರಲ್ಲಿ ಫಾದರ್ ಆಗಿದ್ದ. ಆ ಏರಿಯಾದ ಬಹುತೇಕ ಎಲ್ಲ ಜನರ ಪರಿಚಯ ಅವನಿಗಿತ್ತು. ಆದರೆ,ಕೆಲವೊಂದು ದಿನಗಳಿಂದ ಚರ್ಚಿನ ಮುಂದೆ ಇರುವ ‘ಕ್ರಾಸ್’ ರೋಡ್ ನಲ್ಲಿ ಇಬ್ಬರು ಭಿಕ್ಷುಕರು ಕೂರುತ್ತಾ ಇದ್ದಿದ್ದು ಖೇಮು ಗಮನಕ್ಕೆ ಬಂತು. ಆದರೆ ಅವರನ್ನುಗಮನಿಸಿದರೂ ಗಮನಿಸದ ಹಾಗೆ ಹೋಗುತ್ತಿದ್ದ ಖೇಮು. ಆ ಇಬ್ಬರಲ್ಲೂ ಒಂದು ವಿಶೇಷ ಇತ್ತು. ಒಬ್ಬ ತನ್ನ ಕೊರಳಿಗೆ ಓಂ ಅನ್ನೋ ಪದಕ ಇರೋ ಸರವನ್ನು ನೇತು ಹಾಕಿಕೊಂಡು, ಹಿಂದೂ ದೇವರ ಫೋಟೋ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದ.
ಇನ್ನೊಬ್ಬ ಶಿಲುಬೆಯನ್ನು ಕೊರಳಿಗೆ ಹಾಕಿಕೊಂಡು ಯೇಸು ಹೆಸರಲ್ಲಿ ಭಿಕ್ಷೆ ಬೇಡುತ್ತಿದ್ದ. ಅದು ಕ್ರಿಶ್ಚಿಯನ್ನರು ಹೆಚ್ಚಿರುವ ಪ್ರದೇಶ ಆದ್ದರಿಂದ ಸಹಜವಾಗಿ ಎಲ್ಲರೂ ಶಿಲುಬೆ ಹಾಕಿಕೊಂಡವನಿಗೆ ಭಿಕ್ಷೆ ಹಾಕುತ್ತಿದ್ದರು. ಅಲ್ಲದೆ ತಮ್ಮ ಧರ್ಮದ ಮೇಲಿನ ಪ್ರೀತಿ ತೋರಿಸಿಕೊಳ್ಳುವವರು ಹಿಂದೂ ಭಿಕ್ಷುಕನನ್ನು ನೋಡಿ ಬೇಕಂತಲೇಶಿಲುಬೆ ಹಾಕಿಕೊಂಡವನಿಗೆ ಹಣ ನೀಡುತ್ತಿದ್ದರು. ಇದನ್ನೆಲ್ಲ ಗಮನಿಸಿದ ಖೇಮು ಒಂದು ದಿನ ಹಿಂದೂ ಭಿಕ್ಷುಕನ ಹತ್ತಿರ ಬಂದು, ‘ಮಗೂ, ಇದು ಕ್ರಿಶ್ಚಿಯನ್ನರುಹೆಚ್ಚಾಗಿರುವ ಊರು, ಇಲ್ಲಿ ನಿನಗೆ ಯಾರೂ ಹಣ ಕೊಡೋದಿಲ್ಲ. ಹಾಗೆ ನೋಡಿದರೆ ನಿನ್ನಿಂದ ನಿನ್ನ ಪಕ್ಕದಲ್ಲಿ ಶಿಲುಬೆ ಹಾಕಿಕೊಂಡವನಿಗೆ ಲಾಭ ಆಗ್ತಾ ಇದೆ. ಅವನ ಮೇಲೆ ಕರುಣೆ ಇಲ್ಲದಿದ್ದರೂ,ಅವನ ಪಕ್ಕದಲ್ಲಿ ನೀನು ಹಿಂದೂ ದೇವರ ಹೆಸರಲ್ಲಿ ಭಿಕ್ಷೆ ಬೇಡ್ತಾ ಇದ್ದೀಯ ಅನ್ನೋ ಕಾರಣಕ್ಕೆ ತಮ್ಮ ಧರ್ಮ ಪ್ರೇಮವನ್ನ ಸಾಬೀತು ಮಾಡೋಕೋಸ್ಕರ ಜನ ಅವನಿಗೆ ದುಡ್ಡು ಹಾಕ್ತಾ ಇದ್ದಾರೆ. ನೀನು ಬೇರೆ ಎದ್ರೂ ಭಿಕ್ಷೆ ಬೇಡೋದು ಒಳ್ಳೇದು ಅನ್ನಿಸ್ತಿದೆ’ ಎಂದು ಹೇಳಿದ.
ಅದಕ್ಕೆ ‘ಸರಿ ಫಾದರ್’ ಅಂದ ಆ ಭಿಕ್ಷುಕ. ಖೇಮು ಆ ಕಡೆ ಹೋದ ಮೇಲೆ, ಈ ಭಿಕ್ಷುಕ ಪಕ್ಕಕ್ಕೆ ತಿರುಗಿ ‘ಜಿಗ್ನೇಶ್ ಭಾಯ’ ಅಂದ. ಅದಕ್ಕೆ ಆ ಕಡೆ ಭಿಕ್ಷುಕ ‘ಹೇಳು, ಮನ್ ಸುಖ್ ಭಾಯ’ ಅಂದ. ಅದಕ್ಕೆ ಜಿಗ್ನೇಶ್ ನಗುತ್ತಾ ಹೇಳಿದ, ‘ನೋಡಿದ್ಯಾ ಈ ಫಾದರ್‌ನ, ನಮ್ಮಂಥ ಗುಜರಾತಿಗಳಿಗೇ ದುಡ್ಡು ಮಾಡೋದ್ ಹೇಗೆ ಅಂತ ಹೇಳಿ ಕೊಡ್ತಾ ಇದ್ದಾನೆ’.
ಲೈನ್ ಮ್ಯಾನ್ಮಕ್ಕಳಿಗೆ ಅಂತ ಬೇರೆ ಬ್ರ್ಯಾಂಡ್ ಬ್ರ್ಯಾಂಡಿ ಇದೆ. ಹಾಗೇ ಬಿಯರ್ ಕೂಡ ಇದ್ದಿದ್ರೆ ಅದು ‘ಚೈಲ್ಡ್’ ಬಿಯರ್ ಒಬ್ಬ ‘ಸುಳ್ಳು’ ಹೇಳೋದ್ ನೋಡಿ ಅವನ ಜತೆಗಿರೋ ಜನರೆಲ್ಲ ಅಂಥವರೇ ಅಂತ ಡಿಸೈಡ್ ಮಾಡೋದು ಜನ‘ರ’ಲೈಸ್ಮೊನ್ನೆ ಐಟಿ ರೈಡ್ ಮಾಡಿದಾಗ ಯಾರದ್ದೇ ಮನೆಯಲ್ಲಿ ಪೈಪ್‌ನ ದುಡ್ಡು ಬಂತಂತೆ. ಅವತ್ತು ಐಟಿ ಆಫೀಸಿಂದ ಫೋನ್ ಮಾಡಿ ರೈಡ್ ಮುಗೀತಾ?ಅಂತ ಕೇಳಿದ್ದಕ್ಕೆ ರೈಡ್ ಮಾಡ್ತಾ ಇದ್ದ ಆಫೀಸರ್ ಹೇಳಿದ್ದು ಇಲ್ಲ, ಇಟ್ಸ್ ಸ್ಟಿಲ್ ಇನ್ ದ ಪೈಪ್ ಲೈನ್.
ಚೆಸ್ ಆಡುವವರು‘೬೪’ ವಿದ್ಯೆಯಲ್ಲಿ ಪಾರಂಗತರುಸಖತ್ ಸಿನಿಮಾದ ಮೇಲೆ ಯಾರಾದ್ರೂ ಕೇಸು ಹಾಕಿದ್ರೆ, ವಿಚಾರಣೆ ಎಲ್ಲಿ ನಡೆಯುತ್ತೆ?‘ಐ’ ಕೋರ್ಟ್‌ನಲ್ಲಿಅಂಧರ ಬಗ್ಗೆ ಅವಹೇಳನ ಮಾಡಿದ್ದೀರ ಅಂತ ಸಖತ್ ಸಿನಿಮಾನ ಬ್ಯಾನ್ ಮಾಡಿ ಆದೇಶದ ಕರಡು ಪ್ರತಿ ಹೊರಡಿಸಿದರೆ, ಅದು‘ಕುರುಡು’ ಪ್ರತಿಗಣೇಶ್ ಅವರಲ್ಲಿರೋ ಪ್ರತಿಭೆ ಎಲ್ಲ ನನಗೇ ಬೇಕು ಅನ್ನೋ ಥರಾ ಅವರ ಜತೆ ಸಾಲುಸಾಲು ಸಿನಿಮಾ ಮಾಡ್ತಾ ಇರೋ ಸಿಂಪಲ್ ಸುನಿ ಮಾಡ್ತಿರೋದ್ ಏನು?‘ಗಣಿ’ಗಾರಿಕೆಸುನಿ-ಗಣೇಶ್ ಅವರ ಸಖತ್ ಚಿತ್ರದ ಕಥೆ ಯಾವ ಕಾಲ ಘಟ್ಟದ್ದು?‘ಅಂಧ’ಕಾಲತ್ತಿಲ್ ಅನ್ನುವಂಥದ್ದುತಂಡದ ಕ್ಯಾಪ್ಟನ್ ‘ಬುದ್ಧಿವಂತ’ ಆಗಿದ್ರೆ ಅವನನ್ನ ಏನಂತಾರೆ?‘ವೈಸ್’ ಕ್ಯಾಪ್ಟನ್‘ತುಪ್ಪ’ ತಿಂದು ಕೊಬ್ಬು ಜಾಸ್ತಿ ಆದವರು ಏನ್ ಮಾಡ್ತಾರೆ
’ಘೀ’ಳಿಡುತ್ತಾರೆ.