ಯಾರು ಶ್ರೇಷ್ಠರು?
ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ಬಹು ಹಿಂದೆ ದಕ್ಷಿಣ ದೇಶದಲ್ಲಿ ಒಬ್ಬ ರಾಜನಿದ್ದ. ಆತನ ರಾಜ್ಯದಲ್ಲಿ ಸನ್ಯಾಸಿಗಳಿಗೆ ಬಹಳ ಗೌರವವಿತ್ತು. ಆದರೆ ಆ ರಾಜನಿಗೆಪ್ರಶ್ನೆ ಕೇಳುವ ಗೀಳು. ಸನ್ಯಾಸಿಗಳನ್ನು ಆದರದಿಂದ ಬರಮಾಡಿಕೊಂಡು, ಗೌರವ ತೋರಿದ ನಂತರ, ಒಂದು ಪ್ರಶ್ನೆ ಕೇಳುತ್ತಿದ್ದ.
‘ಸ್ವಾಮಿ, ನನ್ನ ಪ್ರಶ್ನೆಗೆ ತಾವು ಸಮರ್ಪಕ ಉತ್ತರ ಮತ್ತು ಪುರಾವೆ ನೀಡಬೇಕು. ಇಲ್ಲದಿ ದ್ದಲ್ಲಿ ತಾವು ನನ್ನ ರಾಜ್ಯದಲ್ಲಿ  ಸಂಸಾರಸ್ಥ ರಾಗಿ ಇರಬೇಕು. ಈ ಜಗತ್ತಿನಲ್ಲಿ ಯಾರು ಶ್ರೇಷ್ಠರು? ಲೌಕಿಕ ಬದುಕನ್ನು ತ್ಯಾಗ ಮಾಡಿದ ಸನ್ಯಾಸಿಗಳೇ ಅಥವಾ ಮದುವೆಯಾದ ಗೃಹಸ್ಥರೇ?’ ಇದಕ್ಕೆ ಸನ್ಯಾಸಿ ಉತ್ತರ ಹೇಳಿದರೆ, ಅದಕ್ಕೆ ಪುರಾವೆ ನೀಡುವಂತೆ ರಾಜ ದುಂಬಾಲು ಬೀಳುತ್ತಿದ್ದ.
ಹೊರತು ಒಪ್ಪುತ್ತಿರಲಿಲ್ಲ. ಒಂದು ದಿನ ಒಬ್ಬ ಸನ್ಯಾಸಿ ಬಂದ. ರಾಜನು ಅವನ ಬಳಿ ಎಂದಿನಂತೆ, ‘ಸ್ವಾಮಿ ಈ ಜಗತ್ತಿನಲ್ಲಿ ಯಾರು ಶ್ರೇಷ್ಠರು? ತಿಳಿಸಿ’ ಎಂದು ಕೇಳಿದ. ‘ರಾಜನೇ, ಇದರಲ್ಲೇಕೆ ಅನುಮಾನ? ಈ ಜಗತ್ತಿನಲ್ಲಿ ಎಲ್ಲಾ ಜೀವಿಗಳೂ ಅವರವರ ಮಟ್ಟಕ್ಕೆ ಶ್ರೇಷ್ಠರು’ ಎಂದುತ್ತರಿಸಿದ ಆ ಸನ್ಯಾಸಿ. ಇದಕ್ಕೆ ಪುರಾವೆ ಕೊಡಿ ಎಂದು ರಾಜ ಕೇಳಿದಾಗ, ‘ನನ್ನ ಜತೆ ಕೆಲವು ದಿನ ಕಾಲ ಕಳೆದರೆ ಈ ಪ್ರಶ್ನೆಗೆ ಉತ್ತರ ನೀಡಬಲ್ಲೆ’ ಎಂದ ಆ ಸನ್ಯಾಸಿ.
ರಾಜ ಒಪ್ಪಿದ. ಇಬ್ಬರೂ ಪಕ್ಕದ ರಾಜ್ಯಕ್ಕೆ ಹೋದರು. ಅಂದು ಅಲ್ಲಿ ಹಬ್ಬದ ವಾತಾ ವರಣ. ವಿಚಾರಿಸಿದಾಗ, ‘ರಾಜನ ಒಬ್ಬಳೇ ಮಗಳಿಗೆ ಇಂದು ಸ್ವಯಂವರ. ಆಯ್ಕೆಯಾದ ವರನಿಗೆ ಅರ್ಧ ರಾಜ್ಯ ಸಿಗುತ್ತದೆ’ ಎಂದು ತಿಳಿಯಿತು. ರಾಜಕುಮಾರಿಯು ಮೆರವಣಿಗೆಯೊಂದಿಗೆ ಹೂವಿನ ಹಾರ ಹಿಡಿದು ಬರುತ್ತಿದ್ದಳು. ಹಲವು ರಾಜಕುಮಾರರು ಸಾಲಾಗಿ ನಿಂತಿದ್ದರು. ಅವರ ನಡುವೆ ಒಬ್ಬ ಯುವ ಸನ್ಯಾಸಿಯೂ ಕುತೂಹಲದಿಂದ ನೋಡುತ್ತಾ ನಿಂತಿದ್ದ. ಆತನ ಮುಖದಲ್ಲಿ ದಿವ್ಯ ಕಳೆ ಇತ್ತು. ಅವನನ್ನು ಕಂಡ ಕೂಡಲೇ, ರಾಜಕುಮಾರಿಯು ಹಾರವನ್ನು ಅವನ ಕುತ್ತಿಗೆಗೆ ಹಾಕಿದಳು. ಆ ಯುವ ಸನ್ಯಾಸಿಯು, ‘ಹೇಯ್, ನಾನು ಇಲ್ಲಿ ಸುಮ್ಮನೇ ಕುತೂಹಲದಿಂದ ನಿಂತಿದ್ದೇನೆ. ನಾನು ವಿವಾಹಾಕಾಂಕ್ಷಿಯಲ್ಲ’ ಎಂದ.
ಆದರೆ ರಾಜಕುಮಾರಿಯು ಅವನನ್ನು ಇಷ್ಟಪಟ್ಟಿದ್ದಳು. ಆಕೆಯ ತಂದೆಯು ಯುವ ಸನ್ಯಾಸಿಯ ಬಳಿ ಬಂದು ‘ಸ್ವಾಮಿ, ನೀವು ನನ್ನ ಅಳಿಯನಾಗಬೇಕು’ ಎಂದು ವಿನಂತಿಸಿದ. ‘ನಾನು ಸನ್ಯಾಸಿ, ನನಗೆ ಮದುವೆ ಬೇಡ’ ಎಂದು ಆ ಯುವ ಸನ್ಯಾಸಿಯು ಕಾಡಿ ನತ್ತ ವೇಗವಾಗಿ ಸಾಗಿದ. ರಾಜಕುಮಾರಿ ಮತ್ತು ಆಕೆಯ ತಂದೆಯೂ ಅವನ ಹಿಂದೆ ಹೊರಟರು. ಇದನ್ನು ನೋಡುತ್ತಿದ್ದ ನಮ್ಮ ಸನ್ಯಾಸಿ ಮತ್ತು ರಾಜನೂ ಹಿಂಬಾಲಿಸಿದರು.
ಯುವ ಸನ್ಯಾಸಿಯು ಬಹುದೂರ ನಡೆದು, ಕಾಡಿನಲ್ಲಿ ಕಣ್ಮರೆಯಾದ. ರಾಜಕುಮಾರಿ ಮತ್ತು ಆಕೆಯ ತಂದೆಯು ಸುಸ್ತಾಗಿ, ಮರ ವೊಂದರ ಅಡಿ ಕುಳಿತರು. ನಮ್ಮ ಸನ್ಯಾಸಿಯು ಅವರ ಬಳಿ ಸಾಗಿ ಅವರಿಬ್ಬರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದ. ಕತ್ತ ಲಾಗಿದ್ದರಿಂದ, ಆ ರಾತ್ರಿ ಅವರೆಲ್ಲರೂ ಮರದ ಅಡಿ ತಂಗಿದರು. ಆ ಮರದ ಮೇಲೆ ಹಕ್ಕಿಯೊಂದು ಗೂಡುಕಟ್ಟಿ ವಾಸಿಸುತ್ತಿತ್ತು.ಈ ನಾಲ್ವರನ್ನು ಕಂಡು, ಹಕ್ಕಿಯು ತನ್ನ ಹೆಂಡತಿಯ ಬಳಿ ‘ಪಾಪ ಇವರು ಸುಸ್ತಾಗಿದ್ದಾರೆ. ಅವರಿಗೆ ಚಳಿಯಾಗಿರಬೇಕು’ ಎಂದಿತು.ಹೆಂಡತಿ ಹಕ್ಕಿಯು ‘ಹಾಗಾದರೆ, ನಾವು ಅವರಿಗೆ ಉರುವಲನ್ನು ಕೊಡೋಣ’ ಎಂದು ಮರದ ಮೇಲಿನಿಂದ ಒಣ ಟೊಂಗೆಗಳನ್ನುಬೀಳಿಸಿತು. ಕೆಳಗಿದ್ದವರು ಆ ಟೊಂಗೆಯನ್ನು ಉರಿಸಿ, ಬೆಂಕಿ ಕಾಯಿಸತೊಡಗಿದರು.
ಈಗ ಹಕ್ಕಿಯು ಪುನಃ ತನ್ನ ಹೆಂಡತಿಯೊಂದಿಗೆ ‘ಪಾಪ, ಅವರು ಹಸಿದಂತಿದೆ. ಅವರ ಹಸಿವನ್ನು ತಣಿಸುವುದು ನಮ್ಮ ಕರ್ತವ್ಯ’ಎಂದು ಹೇಳುತ್ತಲೇ, ಉರಿಯುತ್ತಿದ್ದ ಬೆಂಕಿಗೆ ಬಿದ್ದುಬಿಟ್ಟಿತು. ಅದನ್ನು ಕಂಡ ಹೆಂಡತಿ ಹಕ್ಕಿಯು, ಆ ನಾಲ್ವರಿಗೆ ಇನ್ನಷ್ಟು ಆಹಾರಬೇಕು ಎಂದು ತಾನೂ ಬೆಂಕಿಗೆ ಹಾರಿತು. ಅವರಿಬ್ಬರನ್ನು ಕಂಡು ಮರಿ ಹಕ್ಕಿಗಳೂ ಬೆಂಕಿಗೆ ಹಾರಿದವು. ಮರದ ಕೆಳಗೆ ಕುಳಿತಿದ್ದ ವರು ಹಕ್ಕಿಗಳ ಈ ಅತಿಥಿ ಸತ್ಕಾರವನ್ನು, ತ್ಯಾಗವನ್ನು ಕಂಡು ಮರುಗಿದರು. ಆದರೆ, ಆಹಾರವನ್ನು ಸ್ವೀಕರಿಸದೇ, ಹಾಗೆಯೇ ಮಲಗಿ, ಮರುದಿನ ತಮ್ಮ ರಾಜ್ಯಕ್ಕೆ ವಾಪಸಾದರು.
ಈಗ ಸನ್ಯಾಸಿಯು ರಾಜನನ್ನು ಕರೆದು, ‘ರಾಜನೇ, ಹಕ್ಕಿಗಳ ತ್ಯಾಗವನ್ನು ನೋಡಿದೆಯಲ್ಲವೇ? ಆ ಸನ್ಯಾಸಿಯು ಅರ್ಧರಾಜ್ಯವನ್ನು ತಿರಸ್ಕರಿಸಿದ್ದನ್ನು ನೋಡಿದೆ ಅಲ್ಲವೇ? ಈ ಜಗತ್ತಿನಲ್ಲಿ ಪ್ರತಿ ಜೀವಿಗೂ ಅದರದೇ ಆದ ಸ್ಥಾನವಿದೆ. ಎಲ್ಲರೂ ಶ್ರೇಷ್ಠರು. ಆದರೆಒಬ್ಬರ ಕರ್ತವ್ಯ ಇನ್ನೊಬ್ಬರದಾಗಿರುವುದಿಲ್ಲ. ಇದನ್ನು ಅರಿತರೆ ಈ ಜೀವನ ಸಾರ್ಥಕ’ ಎಂದು. ರಾಜ ಮೌನದಿಂದ ನಮಸ್ಕ ರಿಸಿದ.