ಒಮೈಕ್ರಾನ್: ಭಯ, ಆತಂಕ ಬೇಡ, ಎಚ್ಚರವಿರಲಿ
ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
@.
ಒಮೈಕ್ರಾನ್ ಬಗೆಗೆ ಜಗತ್ತಿನಾದ್ಯಂತ ಅದರಲ್ಲೂ ಯುರೋಪ್ ಖಂಡದಲ್ಲಿ ಅನಗತ್ಯವಾದ ಪ್ರಚಾರ ಕೊಟ್ಟು ಜನರನ್ನು ಹೆದರಿಸಲಾಗುತ್ತಿದೆ. ಇದು ಚಿಕ್ಕವಯಸ್ಸಿನವರಲ್ಲಿ ಸಾಮಾನ್ಯ – ರೀತಿ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಇದುವರೆಗೆ ಒಂದೂ ಸಾವಿನ ಪ್ರಕರಣ ಎಲ್ಲಿಂದಲೂ ವರದಿಯಾಗಿಲ್ಲ.
ಈಗ ಟಿ.ವಿ, ಪತ್ರಿಕೆಗಳು ಹಾಗೂ ಎಲ್ಲಾ ಮಾಧ್ಯಮಗಳಲ್ಲೂ ಒಮೈಕ್ರಾನ್‌ನದ್ದೇ ಸುದ್ದಿ. ಭಾರತದಲ್ಲಿ ಇಷ್ಟು ರೋಗಿಗಳು, ಜಗತ್ತಿನ ಇಷ್ಟು ದೇಶಗಳಲ್ಲಿ ಹರಡಿತು –ಈ ತರಹದ ಸುದ್ದಿಗಳು ಜನರನ್ನು ಕಂಗೆಡಿಸುತ್ತಿವೆ, ಭಯ ಹುಟ್ಟಿಸುತ್ತಿವೆ.
ಹಾಗಾದರೆ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸೋಣ. ಹೌದು, ಕರೋನಾ ವೈರಸ್‌ನ ಹೊಸ ಪ್ರಭೇದ ಒಮೈಕ್ರಾನ್ ವೈದ್ಯರು ಹಾಗೂ ವಿಜ್ಞಾನಿಗಳ ನಿದ್ದೆ ಗೆಡಿಸುತ್ತಿದೆ. ಇದರ ಆರಂಭವನ್ನು ಸ್ವಲ್ಪ ಪರಿಶೀಲಿಸೋಣ. 2021ರ ನ.16ರಂದು ದಕ್ಷಿಣ ಆಫ್ರಿಕಾದಲ್ಲಿ 136 ಕೋವಿಡ್ ರೋಗಿಗಳಿದ್ದರು. ನ.25ರ ಹೊತ್ತಿಗೆ ಆ ಸಂಖ್ಯೆ 1200 ತಲುಪಿತು. ಇದರಲ್ಲಿನ ಶೇ.80ಕ್ಕೂಅಧಿಕರೋಗಿಗಳು ಜೋಹಾಬರ್ಗ್, ಪ್ರಿಟೋರಿಯಾಗಳನ್ನೊಳಗೊಂಡ ಗ್ವಾಟೆಂಗ್ ಪ್ರಾಂತ್ಯಕ್ಕೆ ಸೇರಿ ದವರು.
ದಕ್ಷಿಣ ಆಫ್ರಿಕಾದ ಆರ್ ಸಂಖ್ಯೆ 1.47 ಎಂದು ಸಂಶೋಧಕರ ಅಭಿಮತ. (ಈಗ ಜಾಸ್ತಿ ಆಗಿರಬೇಕು). ಆರ್ ಸಂಖ್ಯೆ ಎಂದರೆ ಪ್ರತಿಯೊಂದು ಸೋಂಕು ಪೀಡಿತ ರೋಗಿ ಉಂಟು ಮಾಡುವ ಸರಾಸರಿ ಹೊಸ ರೋಗಿ. ಈ ಆರ್ ಸಂಖ್ಯೆ 1ಕ್ಕಿಂತ ಜಾಸ್ತಿ ಇದ್ದರೆ ಸಾಂಕ್ರಾಮಿಕವು ವೇಗವಾಗಿ ಹರಡುತ್ತದೆ. ಗ್ವಾಟೆಂಗ್ ಪ್ರಾಂತ್ಯದ ಆರ್ ಸಂಖ್ಯೆ 1.93 ಆಗಿತ್ತು. (ಈಗ ಜಾಸ್ತಿ ಇರಲೂಬಹುದು. ದಕ್ಷಿಣ ಆಫ್ರಿಕಾದ       ()ನ ವಿಜ್ಞಾನಿಗಳು ಈ ರೀತಿಯ ಗಮನಾರ್ಹವಾದ ಏರಿಕೆಗೆ ಕಾರಣ ಒಮೈಕ್ರಾನ್ (ಆ1.1.529) ಎಂದು ಅಭಿಪ್ರಾಯ ಪಡುತ್ತಾರೆ. ಇಷ್ಟರೊಳಗೆ ದಕ್ಷಿಣ ಆಫ್ರಿಕಾದಲ್ಲಿ ಗರಿಷ್ಠ ಮಟ್ಟದ ಸೋಂಕಿನ ಅಲೆ 3 ಬಾರಿ ಬಂದಿತ್ತು. ಮೂರನೇದು ಡೆಲ್ಟಾ ಪ್ರಬೇಧದಿಂದ ಉಂಟಾದದ್ದು.
ದಕ್ಷಿಣ ಆಫ್ರಿಕಾದಲ್ಲಿ ವಿಜ್ಞಾನಿಗಳು ಒಮೈಕ್ರಾನ್ ಪ್ರಭೇದದ ವೈರಸ್ ಇರುವ ಸುಮಾರು 100 ರೋಗಿಗಳ ಮಾದರಿಯನ್ನು ಜೆನೆಟಿಕ್ ಸೀಕ್ವೆ ಮಾಡಿದರೆ ಅದರಲ್ಲಿನ ಹೆಚ್ಚಿನ ರೋಗಿಗಳು ಗ್ವಾಟೆಂಗ್ ಪ್ರಾಂತ್ಯಕ್ಕೆ ಸೇರಿದವರು. ಈ ಒಮೈಕ್ರಾನ್ ಪ್ರಭೇದ ಶೋಧವಾಗಿದ್ದು ಒಂದು ಆಕಸ್ಮಿಕ. ನವೆಂಬರ್ ಮೊದಲ ವಾರ ದಲ್ಲಿ ದಕ್ಷಿಣ ಆಫ್ರಿಕಾದ ಲ್ಯಾಬೋರೇಟರಿಗಳು (ಲ್ಯಾನ್ಸೆಟ್ ಲ್ಯಾಬೋರೇಟರಿಗಳು) ಕೋವಿಡ್ ಪರೀಕ್ಷೆ ನಡೆಸುತ್ತಿರುವಾಗ ಅಸಹಜವಾದದ್ದನ್ನು ಕಂಡರು. ಸ್ಟೈಕ್ ಪ್ರೊಟೀನ್ ಉಂಟು ಮಾಡುವ ವೈರಸ್ ಜೀನ್ ( ) ಅವರಿಗೆ ಹುಡುಕಲು ಕಷ್ಟವಾಯಿತು. ಅದು ಭಿನ್ನವಾಗಿ ಮ್ಯುಟೇಷನ್ ಹೊಂದಿತ್ತು. ಕಾಯಿಲೆ ಹರಡುವು ದರಲ್ಲಿ ಈ ಸ್ಪೈಕ್ ಪ್ರೊಟೀನ್ ಮುಖ್ಯ ಪಾತ್ರ ವಹಿಸುತ್ತದೆ. ಅದೇ ಸಮಯದಲ್ಲಿ ಆ ಭಾಗದ ವೈದ್ಯರು ಸುಸ್ತು ಮತ್ತು ತಲೆನೋವಿನ ಲಕ್ಷಣದ ರೋಗಿಗಳು ಬಹಳಷ್ಟು ಜಾಸ್ತಿ ಯಾಗಿದ್ದನ್ನು ಗಮನಿಸಿದರು. ಇದರ ಮೊದಲು ಹತ್ತು ದಿನಗಳ ಕಾಲ ಅಲ್ಲಿನ ಕರೋನಾ ರೋಗಿಗಳ ಸಂಖ್ಯೆ ತುಂಬಾ ಕಡಿಮೆ ಇತ್ತು. ( ಆಗ ಡೆಲ್ಟಾ ಪ್ರಭೇದದ ಪ್ರಭಾವ).
ಮೇಲೆ ತಿಳಿಸಿದ  ಸಂಸ್ಥೆಯ ನಿರ್ದೇಶಕ ಪ್ರೊ.ಟುಲಿಯೋ ಡಿ ಓಲಿವಿರಾ ಸುದ್ದಿಗೋಷ್ಠಿಯಲ್ಲಿ ಹಲವಾರು ವಿವರಗಳನ್ನು ನೀಡಿದರು. ಈ ಒಮೈಕ್ರಾನ್ ಜೀನೋಮ್‌ನಲ್ಲಿ ಹಲವಾರು ಮ್ಯುಟೇಷನ್‌ಗಳ ಗುಚ್ಛವೇ ಇದೆ. ಇದರಲ್ಲಿ ಕೆಲವು ಮ್ಯುಟೇಷನ್‌ಗಳು ವ್ಯಕ್ತಿಯ ಪ್ರತಿರೋಧ ವ್ಯವಸ್ಥೆಯನ್ನು ತಪ್ಪಿಸಿಕೊಳ್ಳಲು ವೈರಸ್‌ಗೆ ಸಹಾಯ ಮಾಡುತ್ತವೆ. ಮತ್ತೆ ಕೆಲವು ಮ್ಯುಟೇಷನ್‌ಗಳು ವೈರಸ್‌ನ ಹರಡುವಿಕೆಯ ವೇಗವನ್ನು ಹೆಚ್ಚಿಸುತ್ತವೆ. ಒಮೈಕ್ರಾನ್‌ನಲ್ಲಿ ಒಟ್ಟು 50 ಮ್ಯುಟೇ ಷನ್‌ಗಳಿವೆ. ಹಾಗೆಯೇ ಅದರ ಸ್ಟೈಕ್‌ನ ಕೋಡ್ ನಲ್ಲಿ 30 ಕ್ಕೂ ಹೆಚ್ಚು ಮ್ಯುಟೇಷನ್‌ಗಳಿವೆ. ಇಲ್ಲಿನ ಪ್ರೋಟೀನ್ ವ್ಯಕ್ತಿಯ ದೇಹವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
   () ಎಂಬ ಈ ಸ್ಪೆ ಕ್‌ನ ನಿರ್ದಿಷ್ಟ ಭಾಗವು ಮನುಷ್ಯನ ಜೀವಕೋಶಗಳ ಮೆಂಬ್ರೇನ್‌ನಲ್ಲಿರುವ  2  ಎಂಬರಿಸೆಪ್ಟಾರ್‌ ಗಳಿಗೆ ಅಂಟಿಕೊಳ್ಳುತ್ತವೆ. ಈ ಒಮೈಕ್ರಾನ್‌ನ  ಎಂದರೆ ರಿಸೆಪ್ಟಾರ್ ಬೈಂಡಿಂಗ್ ಡೊಮೈನ್‌ನಲ್ಲಿ ಬಹಳಷ್ಟು ಬದಲಾವಣೆಗಳಿವೆ.  ಯನ್ನುಅಂಟಿಕೊಳ್ಳುವ ಆಂಟಿಬಾಡಿಗಳು, ವೈರಸ್‌ಗಳು ಜೀವಕೋಶಗಳಿಗೆ ಸೋಂಕು ತರುವುದನ್ನು ತಡೆಯಬಹುದು.
ಹಾಗಾಗಿ ಕೋವಿಡ್ ವ್ಯಾಕ್ಸಿನ್‌ಗಳಿಗೆ  ಒಂದು ಮುಖ್ಯ ಗುರಿ. ಈ ವ್ಯಾಕ್ಸಿನ್‌ಗಳು ದೇಹದ ಪ್ರತಿರೋಧ ವ್ಯವಸ್ಥೆಯನ್ನು ಪ್ರಚೋದಿಸಿ ನಿರ್ದಿಷ್ಟ ಪ್ರೋಟೀನ್ ಸೀಕ್ವೆಗಳ ವಿರುದ್ಧ ಆಂಟಿಬಾಡಿಗಳನ್ನು ಹುಟ್ಟು ಹಾಕುತ್ತವೆ. ಜಿನೋಮ್‌ನ  ಯಲ್ಲಿ ಬೀಟಾ ಪ್ರಭೇದವು 3 ಮ್ಯುಟೇಷನ್ ಹೊಂದಿದ್ದರೆ, ಡೆಲ್ಟಾ ಪ್ರಭೇದವು2 ಮ್ಯುಟೇಷನ್ ಹೊಂದಿದೆ.        ಅವರ ಪ್ರಕಾರ ಒಮೈಕ್ರಾನ್ ಪ್ರಭೇದದಲ್ಲಿ 15  ಮ್ಯುಟೇ ಷನ್‌ಗಳಿವೆ. ಈ ಮ್ಯುಟೇಷನ್‌ಗಳಲ್ಲಿನ ಬದಲಾವಣೆಯು ವ್ಯಾಕ್ಸಿನೆಷನ್‌ನಿಂದ ಅಥವಾ ಕರೋನಾ ವೈರಸ್‌ನ ಬೇರೆ ಪ್ರಭೇದದ ಸೋಂಕಿನಿಂದ ಉಂಟಾದನ್ಯೂಟ್ರಲೈಸ್ ಮಾಡುವ ಆಂಟಿಬಾಡಿಗಳನ್ನು ನ್ಯೂಟ್ರಲೈಸ್ ಮಾಡದಂತೆ ತಡೆಯುತ್ತದೆ.
ಹಾಗೆಯೇ ಚಿಕಿತ್ಸೆಗಾಗಿ ಕೊಟ್ಟ ಮಾನೋಕ್ಲೋನಲ್ ಆಂಟಿಬಾಡಿಗಳು ಉಂಟು ಮಾಡುವ ಪ್ರತಿಕಾಯಗಳಿಗೆ ಸಹಿತ ಇವು ಪ್ರತಿರೋಧ ತೋರಿಸುತ್ತವೆ. ಅಲ್ಲದೆ ದೇಹದ ಮೊದಲ ಆತ್ಮರಕ್ಷಣೆಯ ವ್ಯವಸ್ಥೆ ಇನ್ನೇಟ್ ಇಮ್ಯೂನ್ ವ್ಯವಸ್ಥೆಯನ್ನು ಮೀರಿ ದೇಹ ಆಕ್ರಮಿಸುವ ಗುಣ ಹೊಂದಿದ ಮ್ಯುಟೇಷನ್‌ಗಳೂ ಈ ಒಮೈಕ್ರಾನ್ನಲ್ಲಿವೆ. ಹಾಗಾಗಿ ನಮ್ಮ ದೇಹದ ಪ್ರತಿರೋಧ ವ್ಯವಸ್ಥೆಯನ್ನು ಹಂತಹಂತವಾಗಿ ಹಾಳುಗೆಡವುವ ಶಕ್ತಿ ಈ ಒಮೈಕ್ರಾನ್‌ನ ಮ್ಯುಟೇಷನ್‌ಗಳಿವೆ.
ಇದರ ಒಟ್ಟು ಪರಿಣಾಮ ಸ್ಪಷ್ಟವಾಗಿ ಗೊತ್ತಿಲ್ಲ. ಒಂದು ಅಂದಾಜಿನ ಪ್ರಕಾರ ಇದು ಉಳಿದ ಪ್ರಭೇದಗಳಿಗಿಂತ ಕಡಿಮೆ ಪ್ರಮಾಣದ ರೋಗ ಲಕ್ಷಣಗಳನ್ನು ತೋರಿ ಸುತ್ತದೆ. ಲ್ಯಾಬೋರೇಟರಿಗಳಲ್ಲಿ ಈಗ ಕೈಗೊಳ್ಳಲಾಗುತ್ತಿರುವ ಅಧ್ಯಯನಗಳ ನಂತರ ನಮಗೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಹಾಗೆಯೇ ಈಗ ಕೊಡುತ್ತಿರುವ ವ್ಯಾಕ್ಸಿನ್, ಮಾ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ತುಂಬಾ ಮುಖ್ಯವಾಗುತ್ತವೆ ಎಂದು ತಜ್ಞರ ಅಭಿಮತ. ಈಗ ಒಮೈಕ್ರಾನ್ ಬಗ್ಗೆ ಮಾಧ್ಯಮಗಳಲ್ಲಿಚಿತ್ರಿಸುತ್ತಿರುವ ತೀರಾ ಕೆಟ್ಟ ಚಿತ್ರಣ ನೋಡಿ ಜನರು ಭಯ ಬೀಳಬಾರದು – ಎಂಬುದು ಮೊದಲು ತಿಳಿಸಿದ ತಜ್ಞರ ಸ್ಪಷ್ಟ ಸಂದೇಶ.
ಆತಂಕಗೊಳ್ಳಬಹುದಾದ ಪ್ರಬೇಧ 2021ರ ನ.26ರಂದು ವಿಶ್ವ ಆರೋಗ್ಯ ಸಂಸ್ಥೆ ಬಿ.1.1.529- ಈ ಪ್ರಭೇದವನ್ನು ಆತಂಕಗೊಳ್ಳಬಹುದಾದ ಪ್ರಬೇಧ (  ) ಎಂದು ವರ್ಗೀಕರಿಸಿತು. ಅದು ಗ್ರೀಕ್‌ನ 15 ನೇ ಅಕ್ಷರ – ಒಮೈಕ್ರಾನ್ ಎಂದು ಹೆಸರು ಕೊಟ್ಟಿತು. ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾ ಲಯದ ವೈರಾಲಜಿ ತಜ್ಞ ಡಾ.ಡೇನಿಯಲ್ ಗ್ರಿಫಿನ್ ಪ್ರಕಾರ ಈ ಹೊಸ ಒಮೈಕ್ರಾನ್ ಪ್ರಭೇದವು ದೇಹದಲ್ಲಿ ಪ್ರತಿರೋಧ ಶಕ್ತಿ ಕುಂಠಿತಗೊಂಡಿರುವ ವ್ಯಾಕ್ಸಿನ್ ತೆಗೆದುಕೊಳ್ಳದೇ ಇರುವ ಒಬ್ಬ ವ್ಯಕ್ತಿಯಲ್ಲಿ ಹುಟ್ಟಿರಬಹುದು. ಹಾಗಾಗಿ ಈ ವೈರಸ್‌ಗೆ ಮಾನವ ದೇಹದ ಪ್ರತಿರೋಧ ವ್ಯವಸ್ಥೆಗೆ ಹೊಂದಿಕೊಳ್ಳಲು ದೀರ್ಘ ಸಮಯ ಸಿಕ್ಕಿದೆ.
ಜಗತ್ತಿನಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳದಿರುವ ದೇಶಗಳಲ್ಲಿ ಇದು ಹೆಚ್ಚು ಹರಡುವ ಸಂಭವವಿದೆ. ಪ್ರಸ್ತುತ ನಮ್ಮಲ್ಲಿ ಈ ಒಮೈಕ್ರಾನ್ ಬಗ್ಗೆ ಬಹಳ ಕಡಿಮೆ ಮಾಹಿತಿ ಇದೆ. ಆದರೆ ಇದರ ಸ್ಪೈಕ್ ಪ್ರೋಟೀನ್ ಗಮನಿಸಿದರೆ ಇದು ಬೇರೆಯ ಪ್ರಭೇದಗಳಿಗಿಂತ ಸುಲಭವಾಗಿ ದೇಹದ ಪ್ರತಿರೋಧ ವ್ಯವಸ್ಥೆಯನ್ನು ತಪ್ಪಿಸಿಕೊಳ್ಳುವಚಾಕಚಕ್ಯತೆ ಹೊಂದಿದೆ. ಈಗಿರುವ ಡೆಲ್ಟಾ ಪ್ರಬೇಧವನ್ನು ಹಿಂದಿಕ್ಕಿ ಇದು ಮುಂದೆ ಜಾಸ್ತಿಯಾಗುವ ಎಲ್ಲಾ ಲಕ್ಷಣ ತೋರಿಸುತ್ತಾ ಇದೆ ಎಂದು ಅವರ ಅಭಿಮತ.
ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥೆ ಡಾ.ಆಂಗಲಿಖ್ ಕೊಯಿಟ್ಜೆ ಅವರು ಒಮೈಕ್ರಾನ್ ಬಗೆಗೆ ಜಗತ್ತಿನಾದ್ಯಂತ ಅದರಲ್ಲೂ ಯುರೋಪ್ ಖಂಡದಲ್ಲಿ ಅನಗತ್ಯವಾದ ಪ್ರಚಾರ ಕೊಟ್ಟು ಜನರನ್ನು ಹೆದರಿಸಲಾಗುತ್ತಿದೆ. ಇದು ಚಿಕ್ಕ ವಯಸ್ಸಿನವರಲ್ಲಿ (25-30-35 ವರ್ಷಗಳವರಲ್ಲಿ) ಬಹಳ ಸಾಮಾನ್ಯ – ರೀತಿಯ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆಗೆ ಸೇರಬೇಕಾದ ಅವಶ್ಯಕತೆ ತುಂಬಾ ಕಡಿಮೆ. ಇದುವರೆಗೆ ಒಂದೂ ಸಾವಿನ ಪ್ರಕರಣಎಲ್ಲಿಂದಲೂ ವರದಿಯಾಗಿಲ್ಲ. ಹಾಗಾಗಿ ಜನರು ಭಯಪಡಬಾರದು, ಆದರೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.
ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಒಮೈಕ್ರಾನ್ ಆದಷ್ಟು ಬೇಗ ಗುರುತಿಸಿ ಜಗತ್ತಿಗೆ ತಿಳಿಸಿದರೆ ಅವರ ಬೇಗ ಗುರುತಿಸುವಿಕೆಯನ್ನು ಹೊಗಳುವ ಬದಲು ಆ ದೇಶದ ಮೇಲೆ ಅನಗತ್ಯವಾದ ಪ್ರಯಾಣ ನಿರ್ಬಂಧಗಳನ್ನು ಹೇರುತ್ತಿರುವುದು ತೀರಾ ದೌರ್ಭಾಗ್ಯ ಎಂದು ಅವರ ಅಭಿಮತ. ಮುಂದಿನ ಕೆಲವು ದಿನಗಳಲ್ಲಿ ಈ ಕೆಳಗಿನಪ್ರೆಶ್ನೆಗಳಿಗೆ ವಿಜ್ಞಾನಿಗಳು ಉತ್ತರಿಸಬೇಕಾಗುತ್ತದೆ ಎಂದು ಹಲವು ತಜ್ಞರ ಅಭಿಮತ.
೧) ಒಮೈಕ್ರಾನ್ ವಿರುದ್ಧ ಬೇರೆ ಬೇರೆ ವ್ಯಾಕ್ಸಿನ್‌ಗಳು ಹೇಗೆ ಕೆಲಸ ಮಾಡುತ್ತವೆ?
೨) ಒಬ್ಬ ವ್ಯಕ್ತಿಯಲ್ಲಿ ಎರಡನೇ ಬಾರಿ ಬರುವ ಸೋಂಕಿನ ಮೇಲೆ ಇದರ ಪರಿಣಾಮವೇನು?
೩) ಒಮೈಕ್ರಾನ್ ಪ್ರಭೇದ ಮುಂದೆ ಹೇಗೆ ಹರಡಬಹುದು?
೪) ಒಮೈಕ್ರಾನ್ ಮತ್ತು ಡೆಲ್ಟಾ ಪ್ರಬೇಧಗಳ ಸಂಬಂಧಗಳು, ಹರಡುವಿಕೆಯಲ್ಲಿನ ವ್ಯತ್ಯಾಸ ಇತ್ಯಾದಿ.
ಈ ಲೇಖನ ಬರೆಯುವ ವೇಳೆಗೆ ಭಾರತದಲ್ಲಿ 23 ವ್ಯಕ್ತಿಗಳಲ್ಲಿ ಒಮೈಕ್ರಾನ್ ಪ್ರಕರಣ ಕಂಡು ಬಂದಿದ್ದು, ಜಗತ್ತಿನಲ್ಲಿ 40 ಕ್ಕೂ ಹೆಚ್ಚು ದೇಶಗಳಲ್ಲಿ ಇರುವುದು ಗೊತ್ತಾಗಿದೆ. ಹೆಚ್ಚಿನ ವ್ಯಕ್ತಿಗಳು ಆಫ್ರಿಕಾದ ಭಾಗಗಳಿಂದ ಬಂದವರು. ಮೊದಲೇ ತಿಳಿಸಿದಂತೆ ಇದು ಡೆಲ್ಟಾ ಗಿಂತ ಹೆಚ್ಚು ವೇಗವಾಗಿ ಹರಡುತ್ತಿದೆಯಾದರೂ ರೋಗ ಲಕ್ಷಣಗಳು ತುಂಬಾ ಕಡಿಮೆ ಪ್ರಮಾಣದ್ದು, ಆಸ್ಪತ್ರೆಗೆ ದಾಖಲಾದ ರೋಗಿಗಳ ಸಂಖ್ಯೆಯೂ ಬಹಳ ಕಡಿಮೆ, ಒಮೈಕ್ರಾನ್ ಹೊಂದಿದ ಯಾವುದೇವ್ಯಕ್ತಿ ಮರಣ ಹೊಂದಲಿಲ್ಲ ಎಂಬುದು ತುಂಬಾ ಗಮನಾರ್ಹ ಸಂಗತಿ.
ಆದರೆ ಇದು ಜಾಗತಿಕ ಮಟ್ಟದಲ್ಲಿ ಹಲವಾರು ಪರಿಣಾಮಗಳಿಗೆ ಕಾರಣವಾಗಿದೆ. ಈ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಖಚಿತ ನಿರ್ಧಾರಕ್ಕೆ ಬರುವ ಮೊದಲೇಜಗತ್ತಿನ ಹಲವಾರು ದೇಶಗಳು ದಕ್ಷಿಣ ಆಫ್ರಿಕಾದ ವಿಮಾನಗಳಿಗೆ ನಿರ್ಬಂಧ ಹೇರಿವೆ. ಅತಿರೇಕ ಎನ್ನುವುದಾದರೆ ಜಪಾನ್, ಇಸ್ರೇಲ್ ಮತ್ತು ಮೊರಾಕ್ಕೊ ದೇಶ ಗಳು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ತಮ್ಮ ಗಡಿಯನ್ನು ಮುಚ್ಚಿಬಿಟ್ಟಿವೆ.
ಈ ಮಧ್ಯೆ ಅಂತಾರಾಷ್ಟ್ರೀಯ ಹಣಕಾಸಿನ ನಿಧಿಯ ಮುಖ್ಯಸ್ಥರು ಒಮೈಕ್ರಾನ್‌ನ ಈ ವೇಗದ ಹರಡುವಿಕೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಹಿಂಜರಿತ ವಾಗಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಅಮೆರಿಕ ಮತ್ತು ಬ್ರಿಟನ್ ದೇಶಗಳು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ತೀರಾ ಬಿಗಿಯಾದ ಕ್ರಮ ಗಳನ್ನು ಕೈಗೊಂಡಿವೆ. ಬೇರೆ ದೇಶದಿಂದ ಬರುವ ಪ್ರಯಾಣಿಕರು ಪ್ರವಾಸದ ಹಿಂದಿನ ದಿನದ ಕೋವಿಡ್ ನೆಗೆಟಿವ್ ವರದಿ ಇರಬೇಕೆಂದು ಅಮೆರಿಕ ಮಾಡಿದರೆ ಇಂಗ್ಲೆಂಡ್ ಪ್ರವಾಸದ 2 ದಿನ ಮೊದಲಿನ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಎಂದು ಮಾಡಿದೆ.
ಹಾಗೆಯೇ ಅಮೆರಿಕದಲ್ಲಿ ಬೂಸ್ಟರ್ ವ್ಯಾಕ್ಸಿನ್ ಡೋಸ್‌ಗೆ ಮತ್ತು ವ್ಯಾಕ್ಸಿನ್ ತೆಗೆದುಕೊಳ್ಳದವರು ವ್ಯಾಕ್ಸಿನ್‌ಗೆ ಮುಗಿಬೀಳುತ್ತಿದ್ದಾರೆ. ತಜ್ಞರ ಪ್ರಕಾರ ಕೋವಿಡ್ ನಿಯಮಗಳಾದ ಮಾ, ಸಾಮಾಜಿಕ ಅಂತರ ಮತ್ತು ವ್ಯಾಕ್ಸಿನ್ ಹಾಸಿಕೊಳ್ಳದವರು ಅದನ್ನು ಮಾಡಿಸಿಕೊಳ್ಳಬೇಕು.  ಹಾಗಾಗಿ ಒಮೈಕ್ರಾನ್ ಬಗ್ಗೆ ಎಚ್ಚರ, ಜಾಗೃತಿಇರಬೇಕೇ ಹೊರತು ಭಯ, ಹತಾಶೆ ಬೇಡ.