ಯಾಂತ್ರಿಕತೆ ನಡುವೆ ಒಂದಿಷ್ಟು ಮಾನವ ಹಕ್ಕುಗಳು
ಪ್ರಚಲಿತ
ಕುಮಾರ‍್ ಶೇಣಿ
ಪ್ರತಿ ಸಲವೂ ಮಾನವ ಹಕ್ಕುಗಳ ನೆನಪಾಗುವುದು, ಅದರ ಶೋಷಣೆ ಆಗುತ್ತಿದೆ ಎಂಬ ವಿಚಾರ ಬಂದಾಗಲೇ. ಗಾಂಽ ಹೇಳಿದಂತೆ, ನಾಗರಿಕತೆ ಬೆಳೆದಂತೆಲ್ಲ ಮಾನವನ ಶೋಷಣೆಯಾಗುವುದು ಹೆಚ್ಚು. ಮೊದಲು ಸೋಲು ಗೆಲುವು ನಿರ್ಧಾರ ಮಲ್ಲಯುದ್ಧದ ಮೂಲಕ ಮಾಡುತ್ತಿದ್ದರು. ಮನುಷ್ಯನ ಜೀವಕ್ಕೆ ಏನೂ ಸಂಚ ಕಾರ ಇರಲಿಲ್ಲ. ಇಂದು ಮೆನ್ ಗನ್ ಎಂಬ ಯಂತ್ರ ಬಂದು ನಿಂತಿದೆ!
ಈ ನಾಗರಿಕತೆಯಲ್ಲಿ ಬದುಕುವ ಜನರಿಗೆ ಶರೀರ ಸುಖವೇ ಬಾಳಿನ ಗುರಿ. ನೂರು ವರ್ಷಕ್ಕೆ ಹಿಂದೆ ಯುರೋಪಿನಲ್ಲಿ ಮನೆಗಳು ಚೆನ್ನಾಗಿರ ಲಿಲ್ಲ. ಈಗ ಬಹಳ ಉತ್ತಮವಾಗಿದೆ. ಇದು ನಾಗರಿಕತೆಯ ಲಕ್ಷಣ. ಮೊದಲು ಅವರು ತೊಗಲನ್ನು ತೊಡುತ್ತಿದ್ದರು.
ಭರ್ಜಿ ಭಲ್ಲೆಗಳನ್ನು ಉಪಯೋಗಿಸುತ್ತಿದ್ದರು. ಈಗ ಉದ್ದನೆ ಷರಾಯಿ ತೊಡುತ್ತಾರೆ. ಭಲ್ಲೆ ಭರ್ಜಿಗಳ ಬದಲು ಐದಾರು ಗೋಲಿಗಳ ರಿವಾಲ್ವರ್ ಅನ್ನು ಬಳಸುತ್ತಾರೆ. ಹೀಗೆ ಬದುಕಲು ಆರಂಭಿಸಿದರೆ, ಅವರನ್ನು ನಾಗರಿಕರೆಂದು ಕರೆಯಲು ಆರಂಭ ಮಾಡುತ್ತಾರೆ. ಅದಕ್ಕೆ ಮೊದಲು ಅವರು ಅನಾಗರಿಕರು. ನಾಗರಿಕತೆ ಎಂದ ರೇನು ಎಂಬ ಪ್ರಶ್ನೆಗೆ ಗಾಂಧೀಜಿ ತನ್ನ ಹಿಂದ್ ಸ್ವರಾಜ್ ಕೃತಿಯಲ್ಲಿ ಹೇಳುವ ಉತ್ತರದು.
ಯಾಂತ್ರೀಕೃತ ಬದುಕು ಹೀಗೆ ಮುಂದೆ ಸಾಗುತ್ತಿದೆ. ಗಾಂಧಿ ಹೇಳಿದ ನಾಗರಿಕತೆ ಬೆಳೆದಂತೆ ಮಾನವ ಹಕ್ಕುಗಳು ಮರೆಯಾಗುತ್ತಿದೆ. ಮಾನವ ಜೀವಗಳ ನಡುವಿನ ಸಂಬಂಧ ಸಂಕುಚಿತಗೊಳ್ಳುತ್ತಿದೆ. ಮಾನವ ಹಕ್ಕುಗಳ ಎಂಬ ಪದವನ್ನು ಕೇಳಿದಾಕ್ಷಣ ಒಂದಿಷ್ಟು ಸಂಘಟನೆಗಳು ನೆನಪಾಗುತ್ತಿವೆ. ಒಂದಿಷ್ಟು ಹೋರಾ ಟಗಳು ನೆನಪಾಗುತ್ತವೆ. ಒಂದಿಷ್ಟು ಘಟನೆಗಳನ್ನು, ಉದಾಹರಣೆಯನ್ನು ನೀಡಲು ಆರಂಭಿಸುತ್ತೇವೆ. ಯಾಂತ್ರೀಕೃತ ಬದುಕು ಎಂದರೆ ಹೀಗೆಯೇ. ಇದಕ್ಕೆ ನಗರದ ಬದುಕು ಮತ್ತೊಂದಿಷ್ಟು ಕೊಡುಗೆ ನೀಡುತ್ತ ಸಾಗಿತು.
ಮುಂಬಯಿ, ಬೆಂಗಳೂರು, ದುಬಾಯಿ ಎಂದು ಬದುಕು ಕಟ್ಟಿಕೊಳ್ಳಲು ಸಾಗಿದವರು, ಒಂದಿಷ್ಟು ಸಂಬಂಧಗಳಿಗೆ ಅಲ್ಪವಿರಾಮ ಹಾಕಿದರು. ಮದುವೆ ಮುಂಜಿ ಗೆಂದು ವರ್ಷಕ್ಕೊಮ್ಮೆ ಬಂದು ಹೋಗುವುದು ವಾಡಿಕೆಯಾಗಿ ಉಳಿದುಕೊಂಡುಬಿಟ್ಟಿತು. ಗ್ರಾಮೀಣ ಜನರ ಮಾನವೀಯ ಸಂಬಂಧಗಳಿಗೆ ಹೀಗೆ ಬ್ರೇಕ್ ಬಿದ್ದರೆ, ನಗರದ ಬದುಕು ಇನ್ನೊಂದು ರೀತಿ. ನಾಲ್ಕು ಗೋಡೆಗಳ ನಡುವಿನ ಪ್ರಪಂಚ. ಗೋಡೆಯಿಂದ ಆಚೆಗಿನ ಬದುಕು ಯಾರದು ಎಂಬ ಮಾತಿಹಿಯು ಕೆಲವೊಂದು ಸಲ ಇಲ್ಲ. ಹಾಗೇನಾದರೂ ತಿಳಿದರೂ, ಅದು ಮಾನವ ಪ್ರೀತಿಯಾಗಿ ಬೆಳೆಯುವುದು ಕಷ್ಟ ಸಾಧ್ಯ.
ಬದುಕು ಯಂತ್ರದಂತೆ ಸಾಗುತ್ತದೆ ಅಷ್ಟೇ. ಹೀಗಿದ್ದಾನ ಮಾನವ ಹಕ್ಕುಗಳಿಗೆ ಬೆಲೆ ಎಲ್ಲಿ? ನಗರದ ಬದುಕು ಎಂದರೆ ಹಾಗೆಯೇ… ಪೂರ್ಣ ವಿರಾಮ ಇಲ್ಲದ, ವಾಕ್ಯವಾಗಲು ಪರದಾಡುವ, ಅಲ್ಪವಿರಾಮಗಳಿಂದಲೇ ತುಂಬಿಹೋಗಿರುವ ಬದುಕು ಅದು. ಅಂತ್ಯವಿಲ್ಲದ ಹಾದಿ ಅದು. ಬಣ್ಣ ಬಣ್ಣದ ಗಾಳಿಪಟದಂತೆ ಸಾಗುವ ಬದುಕು ಅದು. ಸೂತ್ರ ಹಿಡಿದು ನಿಯಂತ್ರಿಸುತ್ತ, ಸೂತ್ರ ಹರಿದಾಗ ಅಷ್ಟು ಹೊತ್ತು ಆಡಿದ ಆಟವನ್ನು ನೆನೆಯುಯತ್ತ ಬಿದ್ದುಕೊಳ್ಳುವ ಗಾಳಿಪಟದ ಹಾಗೇ ಜೀವನ. ಮುಂಜಾನೆ ಎದ್ದು ಕೆಲಸಕ್ಕೆ ನಡೆದರೆ, ಮತ್ತೆ ಮನೆ ತಲುಪುವುದು ಹೊತ್ತು ಮುಳುಗಿದ ಮೇಲೆಯೇ.
ಹೀಗಿದ್ದಾಗ ಮನುಷ್ಯನ ನಡುವೆ ಸಂಬಂಧ ಬೆಳೆಯುವುದು ಹೇಗೆ ಸಾಧ್ಯ? ಸಂಬಂಧಗಳೇ ಇರದಿದ್ದರೆ ಮಾನವ ಹಕ್ಕುಗಳಿಗೆ ಅರ್ಥವಿದೆಯೇ? ಯಾಂತ್ರಿಕ ಬದುಕಿನ ದೊಡ್ಡ ಪ್ರಶ್ನೆಯೇ ಇದು. ಪ್ರತಿ ಸಲವೂ ಮಾನವ ಹಕ್ಕುಗಳ ನೆನಪಾಗುವುದು, ಅದರ ಶೋಷಣೆ ಆಗುತ್ತಿದೆ ಎಂಬ ವಿಚಾರ ಬಂದಾಗಲೇ. ಗಾಂಧಿ ಹೇಳಿದಂತೆ, ನಾಗರಿಕತೆ ಬೆಳೆದಂತೆಲ್ಲ ಮಾನವನ ಶೋಷಣೆ ಯಾಗುವುದು ಹೆಚ್ಚು. ಮೊದಲು ಸೋಲು ಗೆಲುವು ನಿರ್ಧಾರ ಮಲ್ಲಯುದ್ಧದ ಮೂಲಕ ಮಾಡುತ್ತಿದ್ದರು.
ಮನುಷ್ಯನ ಜೀವಕ್ಕೆ ಏನೂ ಸಂಚಕಾರ ಇರಲಿಲ್ಲ. ಇಂದು ಮೆನ್ ಗನ್ ಎಂಬ ಯಂತ್ರ ಬಂದು ನಿಂತಿದೆ. ಒಬ್ಬ ಮನುಷ್ಯ ಮರೆಯಲ್ಲಿ ನಿಂತು ಸಾವಿರಾರು ಜನರನ್ನು ಕೊಲ್ಲಬಹುದು. ಇದನ್ನು ನಾಗರಿಕತೆ ಎನ್ನುತ್ತಾರೆ! ಬದುಕುವ ಹಕ್ಕು ಎಂಬ ಮಾನವ ಹಕ್ಕನ್ನು ಯಂತ್ರವೊಂದು ನಿಯಂತ್ರಣ ಮಾಡುವುದಾದರೆ ಮಾನವ ಹಕ್ಕುಗಳು ಉಳಿವುದೇ ಎಂಬ ಗಾಂಧಿ ಪ್ರಶ್ನಿಸುತ್ತ ಸಾಗುತ್ತಾರೆ. ಯಾಂತ್ರಿಕ ಬದುಕಿನಲ್ಲಿ ಮಾನವ ಹಕ್ಕುಗಳು ಮರೆಯಾಗುತ್ತಿವುದರ ಲಕ್ಷಣವೇ ಇದು. ಇಂತಹ ಬದುಕಿಗೆ ಸಣ್ಣದೊಂದು ವಿರಾಮ ನೀಡಿದ್ದು ಕೊರೋನಾ ಎಂಬ ವೈರಸ್.
ನಗರದ ವೈಭವಕ್ಕೆ ಆಸೆ ಪಟ್ಟು ಅತ್ತ ಸಾಗಿದ ಜನರು, ಮತ್ತೆ ಗ್ರಾಮದ ಕಡೆಗೆ ಹೆಜ್ಜೆ ಹಾಕಿದರು. ನಗರದಲ್ಲಿ ಮನೆಯ ಬಾಗಿಲು ತೆಗೆದು ಆಚೆ ಬಾರದ ಪರಿಸ್ಥಿತಿಯಲ್ಲಿ ಇದ್ದವರು, ಹಳ್ಳಿಯತ್ತ ಸಾಗಿದರು. ಯಂತ್ರಗಳ ನಡುವೆ ಬದುಕು ಕಟ್ಟಿಕೊಂಡವರು, ಹಳ್ಳಿಗಳಲ್ಲಿ ಬದುಕಿರುವ ತಮ್ಮ ಹಿರಿಯರ ಜತೆ ಬದುಕು ಕಟ್ಟಿಕೊಳ್ಳಲು ಸಾಗಿದರು. ತಮ್ಮ ಹಳ್ಳಿಗೆ ಕಾಲಿಟ್ಟ ತಕ್ಷಣ ನಿಟ್ಟುಸಿರು ಬಿಟ್ಟ ಮಂದಿ ಹಲವಾರು. ಮಾನವ ಸಂಬಂಧಗಳ ಅರಿವು ಹೆಚ್ಚಿಸಿದ್ದು ಇಂತಹ ಗ್ರಾಮೀಣ ಬದುಕು ಮಾತ್ರ. ಆದರೆ, ಪ್ರತಿ ಸಲವೂ ಹಳ್ಳಿಗೆ ಬರುತ್ತಿದ್ದಾಗ ಸಿಗುತ್ತಿದ್ದ ಅದ್ಧೂರಿ ಸ್ವಾಗತವಂತೂ ಸಿಗಲಿಲ್ಲ.
ಕೊರೋನಾದ ಭಯ ಒಂದೆಡೆಯಾದರೆ, ಇನ್ನೊಂದೆಡೆ ಹಳ್ಳಿಯಲ್ಲಿಯೇ ಉಳಿದುಬಿಟ್ಟರೆ ಕಷ್ಟ ಎಂಬ ಭಾವನೆ. ಹೀಗೆ ಯಾಂತ್ರಿಕ ಬದುಕು ಮಾನವ ಹಕ್ಕುಗಳನ್ನು ಮರೆಯಾಗಿಸಿ ಬಿಟ್ಟಿವೆ. ಎಲ್ಲೋ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದರೆ ಅದಕ್ಕೆ ಯಾಂತ್ರಿಕ ಬದುಕಿನಲ್ಲಿ ಉತ್ತವಿರಲ್ಲ. ಮನುಷ್ಯ ಸಂಬಂಧ ಸೀಮೀತತೆಯ ಕಡೆಗೆ ಸಾಗುತ್ತಿದ್ದಂತೆ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಲೇ ಇದೆ. ದೇಶಗಳ ನಡುವೆ ನಡೆಯುವ ಯುದ್ಧ, ಲಕ್ಷಾಂತರ ಜನರ ಸಾವು ನೋವಿಗೆ ಕಾರಣವಾಗುತ್ತದೆ ಎಂಬುದರ ಅರಿವು ಇದ್ದರೂ ಯುದ್ಧಕ್ಕಾಗಿ ಹಾತೊರೆಯುವ ರಾಷ್ಟ್ರಗಳು ಇಂದಿಗೂ ಇವೆ.
ನ್ಯೂಕ್ಲಿಯರ್ ಅಸಗಳಿಗೆ ಮನುಷ್ಯ ಬಲಿಯಾಗಬೇಕು ಎಂದರೆ ಮಾನವ ಹಕ್ಕುಗಳಿಗೆ ರಕ್ಷಣೆ ಎಲ್ಲಿದೆ? ಯಂತ್ರ ಮತ್ತು ಮನುಷ್ಯನ ನಡುವಿನ ಗುದ್ದಾಟದಲ್ಲಿ ನಾಶವಾಗುವ ಮಾನವ ಜೀವಗಳಿಗೆ ಬೆಲೆ ಎಲ್ಲಿದೆ? ಪ್ರತಿ ಸಲವೂ ಹಿಂಸಾತ್ಮಾಕ ಘಟನೆಗಳು ನಡೆದಾಗಲೆಲ್ಲ ಮಾನವ ಹಕ್ಕುಗಳ ಕುರಿತಾದ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ. ಆದರೆ ಅದು ತಾತ್ಕಾಲಿಕವಷ್ಟೇ. ಜನಸಾಮಾನ್ಯರು ಬದುಕಿನ ಜಂಜಾಟದಲ್ಲಿ ಮುಳುಗಿ ಹೋಗುತ್ತಾರೆ. ಮನುಷ್ಯರ ನಡುವಿನ ಸಂಬಂಧ ಎಂಬುದು ನಾಟಕೀಯ ಎಂಬಂತೆ ಬಿಂಬಿತವಾಗುತ್ತದೆ.
ಸ್ಪರ್ಧಾ ಜಗತ್ತಿನಲ್ಲಿ ಮನುಷ್ಯ ಸಂಬಂಧಗಳಿಗೆ ಅಲ್ಪವಿರಾಮ ಹಾಕಲಾಗಿದೆ. ಯಾಂತ್ರಿಕ ಬದುಕಿನಲ್ಲಿ ಮನುಷ್ಯ ಯಂತ್ರದಂತೆ ಬದುಕಲು ಆರಂಭಿಸಿದ್ದೇ ಹೆಚ್ಚು. ಅಂತಹ ಬದುಕಿನಲ್ಲಿ ಸಂಬಂಧ ಗಳೇ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವಾಗ ಮಾನವ ಹಕ್ಕುಗಳ ಕುರಿತು ಉಲ್ಲೇಖವಾಗುವುದು ಕಷ್ಟವೇ. ಆಧುನಿಕತೆ ಎಂಬ ಹುಚ್ಚುಕುದುರೆಯ ಏರಿ ಗುತ್ತಿರುವವರು ನಾವೆಲ್ಲ. ಗಾಂಧಿ ಅದನ್ನು ನಾಗರಿಕತೆ ಎಂದು ಕರೆಯುತ್ತಾರೆ. ಗಾಂಧಿ ಹೇಳುವ ಪ್ರಕಾರ ಹಿಂದಿನ ಕಾಲದಲ್ಲಿ ಬಲಾತ್ಕಾರದಿಂದ ಕೆಲಸ ಮಾಡಿಸುತ್ತಿದ್ದರು.
ಈಗ ಹಣದ ಆಸೆಯನ್ನು ತೋರಿಸಿ ಕೆಲಸ ಮಾಡಿಸುತ್ತಿದ್ದಾರೆ. ಮನುಷ್ಯ ಯಂತ್ರಗಳಂತೆ ಕೆಲಸ ಮಾಡುತ್ತಿದ್ದಾನೆ ಅಷ್ಟೇ. ಕನಸಿನಲ್ಲೂ ಕಾಣದಿದ್ದ ರೋಗಗಳೆಲ್ಲ ಇಂದು ಬರುತ್ತಿವೆ. ಅವುಗಳಿಗೆ ಚಿಕಿತ್ಸೆ ನೀಡಲು ವೈದ್ಯರುಗಳ ಸೈನ್ಯವೇ ಸಿದ್ಧವಾಗಿ ನಿಂತಿವೆ. ಇದು ಆಧುನಿಕ ಬದುಕು. ಸಾವಿರಾರು ಜನರ ಮಾಡುತ್ತಿದ್ದ ಕೆಲಸವನ್ನು ಒಂದೇ ಯಂತ್ರ ಮಾಡಲು ಆರಂಭಿಸಿದೆ. ಅದಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ದುಡಿಯುವ ಹಕ್ಕು ಎಂಬ ಒಂದು ಮಾನವ ಹಕ್ಕು ಸದ್ದಿಲ್ಲದೇ ಮರೆಯಾಗಿದೆ. ಯಂತ್ರದ ಸದ್ದಿಗೆ ಮಾನವ ಹಕ್ಕುಗಳು ಮೌನವಾಗಿವೆ.
ನಾವೆಲ್ಲರೂ ಯಾಂತ್ರಿಕ ಬದುಕಿಗೆ ಶರಣಾಗಿದ್ದೇವೆ. ಮನುಷ್ಯರ ನಡುನ ಪ್ರೀತಿ, ಸಂಬಂಧಗಳು ನಿಧಾನವಾಗಿ ಮರೆಯಾಗುತ್ತಿವೆ. ಜಪಾನ್‌ನಂತಹ ಅಭಿವೃದ್ಧಿಯುತ ರಾಷ್ಟ್ರಗಳಲ್ಲಿ ಜನರು ಲೈಂಗಿಕ ಭಾವನೆಗಳನ್ನು ವ್ಯಕ್ತಪಡಿಸಿಕೊಳ್ಳಲು ರೋಬೋಟ್‌ಗಳ ಮೊರೆ ಹೋಗಲು ಆರಂಭಿಸಿದ್ದಾರೆ. ಮಾನವನ ಬದುಕು ಇಷ್ಟೊಂದು ಯಾಂತ್ರಿಕ ಎನಿಸಿಬಿಟ್ಟರೆ, ಮುಂದೊಂದು ದಿನ ಜಗತ್ತು ಯಂತ್ರಮಯವಾಗಿಬಿಡಬಹುದು. ಹಾಗೇನಾದರೂ ಆದಲ್ಲಿ ಮಾನವ ಹಕ್ಕುಗಳು ಎಂಬ ವಿಚಾರ ಕೂಡ ಮಾಯವಾಗಬಹುದು. ಯಾಂತ್ರಿಕ ಬದುಕಿನಿಂದ ಒಂದಿಷ್ಟು ಹೆಜ್ಜೆಗಳನ್ನು ಹೊರಗಿಡು ವುದು ಉತ್ತಮ.
(ಲೇಖಕರು ರಾಜ್ಯಶಾಸ ಉಪನ್ಯಾಸಕ)