ಸೇನೆಗಷ್ಟೇ ಅಲ್ಲ, ಭಾರತಕ್ಕೇ ಬಲ ರಾವತ್‌
ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
@.
ರಾವತ್‌ರ ಸಾವಿನಲ್ಲಿ ಪಿತೂರಿ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಒಂದೊಮ್ಮೆ ಇದು ನಿಜವಾಗಿದ್ದರೆ ಖಂಡಿತವಾಗಿಯೂ ಆಂತರಿಕ ಶತ್ರುಗಳ ಪಾಲೂ ಅದರಲ್ಲಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ನಾಯಿಗಳು ಸಂತೋಷಪಟ್ಟ ಮಾತ್ರಕ್ಕೆ ಬಿಪಿನ್ ಆತ್ಮಕ್ಕೆ ಚ್ಯುತಿಯಾಗುವುದಿಲ್ಲ.
‘ಜನರಲ್ ಬಿಪಿನ್ ರಾವತ್’1978ರಲ್ಲಿ ಸೈನ್ಯಕ್ಕೆ ಸೇರಿದ ಈ ಮನುಷ್ಯ ತಮ್ಮ ಸೇನಾ ಕಾರ್ಯಗಳಿಂದ ನಿವೃತ್ತಿ ಪಡೆಯಲೇ ಇಲ್ಲ. ಸಾವಿನ ಕಡೆಯ ದಿನದ ವರೆಗೂ ದೇಶಕ್ಕಾಗಿ ಕಾರ್ಯ ನಿರ್ವಹಿಸಿದ ಧೀಮಂತ ನಾಯಕ. ದೇಶದ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನಿಸ್ಸೀಮ.
2015ರಲ್ಲಿ ಮ್ಯಾನ್ಮಾರ್ ಗಡಿಯಲ್ಲಿ ನುಗ್ಗಿ ‘ಸರ್ಜಿಕಲ್ ಸ್ಟ್ರೈಕ್’ ಮೂಲಕ ಉಗ್ರರ ನೆಲೆಗಳನ್ನು ನಾಶಪಡಿಸುವ ದಿಟ್ಟ ಕಾರ್ಯಾಚರಣೆಯ ಮಾಸ್ಟರ್ ಮೈಂಡ್ ಆಗಿದ್ದ ರಾವತ್, ಪಾಕಿಸ್ತಾನದ ಗಡಿಯೊಳಕ್ಕೂ ನುಗ್ಗಿ ಉಗ್ರರ ನೆಲೆಗಳನ್ನು ನಾಶಮಾಡಿ ಸುರಕ್ಷಿತವಾಗಿ ಭಾರತೀಯ ಯೋಧರನ್ನು ಕರೆತರುವಲ್ಲಿ ಯಶಸ್ವಿ ಯಾಗಿದ್ದವರು. ಒಂದು ಕಾಲವಿತ್ತು ಮುಂಬಯಿ ನಗರದ ಬೀದಿ ಬೀದಿಗಳಲ್ಲಿ ಪಾಕಿಸ್ತಾನಿ ಪೋಷಿತ ಭಯೋತ್ಪಾದಕರು ಭಾರತೀಯ ನಾಗರೀಕರನ್ನು ಗುರಿಯಾಗಿಸಿ ಕೊಂಡು ದಾಳಿ ನಡೆಸಿ ನೂರಾರು ಜನರ ಸಾವಿಗೆ ಕಾರಣರಾಗುತ್ತಿದ್ದರು.
ಅಂತಹ ಸಮಯದಲ್ಲಿಯೂ ಭಾರತೀಯ ಸೇನೆಯು ಉಗ್ರರ ಹೆಡೆಮುರಿ ಕಟ್ಟಲು ಬೇಕಿದ್ದಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸರ್ಕಾರವಿರರಿಲ್ಲ. ಆದರೆ ರಾವತ್ ಹೊಣೆ ಹೊತ್ತ ಮೇಲೆ ಸೈನ್ಯಕ್ಕೆ ಬೇಕಿದ್ದಂತಹ ಸಂಪೂರ್ಣ ಸ್ವಾತಂತ್ರ್ಯ ದೊರಕಿತ್ತು. ಭಾರತದ ತಂಟೆಗೆ ಬಂದರೆ ನಿಮ್ಮ ಗಡಿಯೊಳಗೆ ನುಗ್ಗಿ ಹೊಡೆಯು ತ್ತೇವೆಂಬ ಸ್ಪಷ್ಟ ಸಂದೇಶವನ್ನು ಬಿಪಿನ್ ರಾವತ್ ಶತ್ರುಗಳಿಗೆ ಕಳುಹಿಸಿದ್ದರು. ಸದಾ ನಾಯಿಯಂತೆ ಬೊಗಳುತ್ತಿದ್ದಂತಹ ಪಾಕಿಸ್ತಾನ ಬಾಲ ಮುದರಿ ಕೊಂಡು ಸುಮ್ಮನೆ ಕೂರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಬಿಪಿನ್. ನಮ್ಮ ಪೀಳಿಗೆಯಲ್ಲಿ ಭಾರತೀಯ ಸೈನ್ಯಕ್ಕೆ ಈ ಮಟ್ಟದ ಸ್ವಾತಂತ್ರ್ಯ ಸಿಗುತ್ತದೆಯೆಂದು ಬಹುಶಃ ಯಾರೂ ಅಂದುಕೊಂಡಿರಲಿಲ್ಲ.
ಕೇವಲ ಅಭ್ಯಾಸಗಳಿಗೆ ಸೀಮಿತವಾಗಿದ್ದಂತಹ ಬಂದೂಕುಗಳು ಶತ್ರುಗಳ ತಲೆ ಸೀಳುವಲ್ಲಿ ನಿರತವಾಗುವಂತೆ ಮಾಡಿದ್ದು ಬಿಪಿನ್ ರಾವತ್. ಸದಾ ಹಿಂಬಾಗಿಲಿ ನಿಂದ ಯುದ್ಧ ಮಾಡುವ ಪಾಕಿಸ್ತಾನ 2019ರ ಫೆಬ್ರವರಿಯಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಮೂಲಕ 40 ಸೈನಿಕರನ್ನು ಕೊಂದಿತ್ತು. ಎಂದಿನಂತೆ ಭಾರತವೇನೂ ಭಯೋತ್ಪಾದಕ ದಾಳಿಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದಿಲ್ಲವೆಂದು ಪಾಕಿಸ್ತಾನ ತಿಳಿದಿತ್ತು. ಆದರೆ ಬೆಳಗಿನ ಜಾವದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದ ಉಗ್ರರ ನೆಲೆಗಳ ಮೇಲೆ ವಾಯುಪಡೆಯ ಮೂಲಕ ದಾಳಿ ಮಾಡಲಾ ಗಿತ್ತು. ಈ ಮಹತ್ತರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಸಹ ಮತ್ತದೇ ರಾವತ್.
ತಮ್ಮ ರಾಷ್ಟ್ರಪ್ರೇಮ ಹಾಗೂ ಕರಾರುವಾಕ್ ನಿರ್ಧಾರಗಳ ಮೂಲಕ ಭಾರತೀಯ ಸೇನೆಗೆ ಆನೆಯ ಬಲ ತುಂಬುತ್ತಿದ್ದಂತಹ ರಾವತ್, ಸೈನಿಕರಲ್ಲಿ ಹೊಸ ಹುರುಪನ್ನೇ ತಂದಿದ್ದರು. ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳ ನಡುವಣ ಪ್ರಮುಖ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಿದ್ದರು. ಮುಲಾಜಿಲ್ಲದೆ ನೇರಾನೇರ ಮಾತನಾಡುತ್ತಿದಂತಹ ಅವರು, ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ಎಂದೂ ಸಹ ರಾಜಿಮಾಡಿಕೊಂಡವರಲ್ಲ.
ಭಾರತೀಯ ಸೈನ್ಯವನ್ನು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಉನ್ನತ ಸ್ತರಕ್ಕೆ ಕೊಂಡೊಯ್ದ ಕೀರ್ತಿ ಇವರಿಗೆ ಸಲ್ಲಬೇಕು. ರಷ್ಯಾ ನಿರ್ಮಿತಖ-400ಯುದ್ಧ ಉಪಕರಣ ಖರೀದಿಯಲ್ಲಿ ರಾವತ್ ಪಾತ್ರವಿತ್ತು. ಶತ್ರು ದೇಶದ ಕ್ಷಿಪಣಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಈ ಉಪಕರಣದ ಅವಶ್ಯಕತೆ ಭಾರತಕ್ಕಿ ತ್ತೆಂಬುದರ ಮಹತ್ವವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಈಗಾಗಲೇಖ-400ಯುದ್ಧೋಪಕರಣವು ಭಾರತವನ್ನು ಬಿಡಿ ಬಿಡಿಯಾಗಿತಲುಪುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಅಸೆಂಬ್ಲ್ಡ್ ಸ್ವರೂಪದಲ್ಲಿ ಭಾರತೀಯ ಸೇನೆಗೆ ಅರ್ಪಣೆಯಾಗುವುದರಲ್ಲಿತ್ತು.
ಭಾರತೀಯ ವಾಯುಸೇನೆಗೆ ಬಲ ತುಂಬಿದ ‘ರಫೇಲ್’ಯುದ್ಧ ವಿಮಾನದ ಖರೀದಿಯಲ್ಲಿ  ರಾವತ್ ಇದ್ದರು ಎಂದು ಹೇಳಬೇಕಿಲ್ಲ. ಪಾಕಿಸ್ತಾನದ ಮೇಲೆ ವಾಯುದಾಳಿ ಮಾಡಿದ ಸಂದರ್ಭದಲ್ಲಿ 1960 ರ ದಶಕದ ರಷ್ಯಾ ನಿರ್ಮಿತ ‘ಮಿಗ್’ ವಿಮಾನವನ್ನು ಕ್ಯಾಪ್ಟನ್ ‘ಅಭಿನಂದನ್’ ಬಳಸಿದ್ದರು. ಅತ್ತ ಪಾಕಿಸ್ತಾನವು ಅಮೆರಿಕ ನಿರ್ಮಿತ ‘ಊ-16’ ವಿಮಾನದ ಮೂಲಕ ದಾಳಿ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಭಾರತೀಯ ವಾಯುಸೇನೆಯಲ್ಲಿ ಬಳಕೆಯಾಗಬೇಕಿದ್ದಂತಹ ಸ್ವದೇಶೀ ನಿರ್ಮಿತ ‘ತೇಜಸ್’ ಯುದ್ಧ ವಿಮಾನದ ತಯಾರಿ ವಿಳಂಬವಾಗುತ್ತಿದೆಯೆಂಬುದನ್ನು ಅರಿತ್ತಿದ್ದಂತಹ ಬಿಪಿನ್, ತಕ್ಷಣ ದಲ್ಲಿ ವಾಯುಸೇನೆಯನ್ನು ಬಲಗೊಳಿಸಲು ‘ರಫೇಲ್’ ನಂತಹ ಆಧುನಿಕ ಯುದ್ಧ ವಿಮಾನದ ಅವಶ್ಯಕತೆಯನ್ನು ಮನಗೊಂಡಿದ್ದರು.
ಪ್ರತಿ ಪಕ್ಷದವರು ರಫೇಲ್ ಖರೀದಿ ವಿಚಾರದಲ್ಲಿ ಮಿಥ್ಯಾರೋಪ ಮಾಡಿದರೂ ತಲೆ ಕೆಡಿಸಿಕೊಳ್ಳದ ರಾವತ್, ಭಾರತೀಯ ವಾಯುಸೇನೆಯನ್ನು ಬಲಗೊಳಿಸು ವೆಡೆಗೆ ಮಾತ್ರ ತಮ್ಮ ಗಮನ ಹರಿಸಿದ್ದರು. 1962ರ ಚೀನಾ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೈನಿಕರಿಗೆ ಹಿಮಾಲಯದಲ್ಲಿ ಹೋರಾಡಲು ಸರಿಯಾದಂತಹ ಕನಿಷ್ಠ ‘ಶೂ’ಗಳ ವ್ಯವಸ್ಥೆಯಿರಲಿಲ್ಲ. ಅಮೆರಿಕದಿಂದ ಬಂದಿದ್ದಂತಹ ಯುದ್ಧ ಸಲಕರಣೆಗಳನ್ನು ಸೈನಿಕರಿಗೆ ಸರಿಯಾದ ಸಮಯಕ್ಕೆ ತಲುಪಿಸಲು ಕಮ್ಯುನಿಸ್ಟರು ಬಿಟ್ಟಿರಲಿಲ್ಲ. ತಮ್ಮೆದುರಿಗಿನ ಶತ್ರುವನ್ನು ಹೊಡೆಯಲು ಸೈನಿಕರು ಸಾಕಷ್ಟು ದೂರವಾಣಿ ಕರೆಗಳನ್ನು ಮಾಡಬೇಕಿತು. ಆದರೆ ಬಿಪಿನ್ ರಾವತ್ ನೇತೃತ್ವದಲ್ಲಿ ಸೈನಿಕರಿಗೆ ನೀಡಿದಂತಹ ಸ್ವಾತಂತ್ರ್ಯದ ಪರಿಣಾಮ ಇತ್ತೀಚೆಗಷ್ಟೇ ಕಾಲುಕೆದರಿ ಗಡಿಯೊಳಕ್ಕೆ ನುಗ್ಗಿ ಬಂದಿದ್ದ ಚೀನಾ ಸೈನಿಕರನ್ನು ಆಗಿಂದಾಗಲೇಹಿಂದಕ್ಕಟ್ಟಲಾಯಿತು.
ಗಡಿಯಲ್ಲಿನ ನಮ್ಮವರ ಕಾರ್ಯವೈಖರಿಗೆ ಚೀನಾ ಸೈನ್ಯಬೆಚ್ಚಿಬಿದ್ದಂತಹ ವಿಷಯ ಇಡೀ ಜಗತ್ತಿಗೆ ತಿಳಿದಿದೆ. ‘ದೋಖ್ಲಾಂ’ ವಿಷಯದಲ್ಲಿ ಚೀನಾ ಕ್ಯಾತೆ ತೆಗೆದಾಗ ಭೂತಾನ್ ಪರವಾಗಿ ಭಾರತ ಗಟ್ಟಿಯಾಗಿ ಧ್ವನಿ ಎತ್ತಿತ್ತು,‘ದೋಖ್ಲಾಂ’ ಭೂಭಾಗ ಭಾರತದ ಪಾಲಿಗೆ ಎಷ್ಟು ಮುಖ್ಯವೆಂಬುದು ರಾವತ್‌ಗೆ ತಿಳಿದಿತ್ತು. ಹೀಗಾಗೇಅತ್ಯಂತ ಚಾಣಾಕ್ಷ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಭಾರತೀಯ ಸೈನ್ಯವನ್ನು ಎಲ್ಲಿ ಜಮಾವಣೆ ಮಾಡಿದರೆ ‘ದೋಖ್ಲಾಂ’ಭಾಗ ಸುರಕ್ಷಿತವಾಗಿರುತ್ತದೆ ಯೆಂಬ ಸ್ಪಷ್ಟತೆ ಅವರಿಗಿತ್ತು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆದ ಬೃಹತ್ ಪ್ರಮಾದವೆಂದರೆ ಸಂವಿಧಾನದಲ್ಲಿನ ‘ಪರಿಚ್ಛೇದ 370’. ಇಡೀ ದೇಶಕ್ಕೆ ಒಂದು ಸಂವಿಧಾನವಾದರೆ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಬೇರೆಯದ್ದೇ ಸಂವಿಧಾನವಿತ್ತು. ಏಳು ದಶಕಗಳ ನಂತರ ಈ ಪರಿಚ್ಛೇದವನ್ನು ಸಂವಿಧಾನದಿಂದ ತೆಗೆದುಹಾಕಲು ಕೇಂದ್ರ ಸರಕಾರ ನಿರ್ಧರಿಸಿಯಾಗಿತ್ತು. ಇದು ಜಾರಿಯಾದರೆ ಕಣಿವೆ ರಾಜ್ಯದಲ್ಲಿ ರಕ್ತದ ಕೋಡಿ ಹರಿಯುತ್ತದೆಯೆಂದು ಭಾವಿಸಲಾಗಿತ್ತು. ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾ ದಕರು ಕಣಿವೆ ರಾಜ್ಯದಲ್ಲಿ ಹಲವು ಭೂಗತ ಚಟುವಟಿಕೆಗಳನ್ನು ನಡೆಸಲು ತಯಾರಿ ನಡೆಸುತ್ತಿದ್ದಾರೆಂಬ ಸತ್ಯ ಎಲ್ಲರಿಗೂ ತಿಳಿದಿತ್ತು. ಆದರೆ ಕಣಿವೆ ರಾಜ್ಯದಲ್ಲಿ ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಪರಿಸ್ಥಿತಿಯನ್ನು ಕೈಗೆತ್ತಿಕೊಳ್ಳುವಲ್ಲಿ ಭಾರತೀಯ ಸೈನ್ಯ ಯಶಸ್ವಿಯಾಗಿತ್ತು.
ದಿನದ 24 ಘಂಟೆಯೂ ಸಮಾಜಘಾತುಕ ಶಕ್ತಿಗಳ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಭಾರತೀಯ ಸೈನ್ಯದ ಹಿಂದಿನ ಶಕ್ತಿ ರಾವತ್ ಎಂಬುದನ್ನು ಮತ್ತೆ ಹೇಳಬೇಕಿಲ್ಲ.ಸುಮಾರು 300ಕ್ಕೂ ಅಧಿಕ ಉಗ್ರಗಾಮಿಗಳನ್ನು ಕಳೆದೆರಡು ವರ್ಷಗಳಿಂದ ತಟಸ್ಥಗೊಳಿಸರುವ ಭಾರತೀಯ ಸೈನ್ಯ, ಪಾಕಿಸ್ತಾನ ಮೈ ಪರಚಿಕೊಳ್ಳುವಂತೆ ಮಾಡಿದೆ. ಶ್ರೀನಗರ ಜಿಲ್ಲೆಯ ಮತಪೆಟ್ಟಿಗೆಯೊಂದರಲ್ಲಿ ಚುನಾವಣೆ ನಡೆಯಬೇಕಾದರೆ ಉಂಟಾದಂತಹ ಹಿಂಸಾಚಾರದಲ್ಲಿ ಸೈನಿಕರ ವಾಹನದ ಮೇಲೆ ನಿರಂತರವಾಗಿ ಕಲ್ಲುಗಳನ್ನು ತೂರಲಾಗಿತ್ತು. ಕಲ್ಲುತೂರಿದವರ ಮೇಲೆ ಬಂದೂಕು ತೋರಿಸಿದರೆ ನಾಗರೀಕರಿಗೆ ಸಮಸ್ಯೆಯಾಗುತ್ತದೆ.
ಇಲ್ಲವಾದರೆ ಸೈನಿಕರು ಅವರ ಕಲ್ಲಿನೇಟಿಗೆ ಸಿಕ್ಕು ಸಾಯಬೇಕಾಗುತ್ತದೆ. ಎರಡನ್ನೂ ನಿಭಾಯಿಸುವುದು ಕಷ್ಟಸಾಧ್ಯದ ಕೆಲಸವಾಗಿತ್ತು. ಆಗ ಭಾರತೀಯ ಯೋಧನೊಬ್ಬ ಕಲ್ಲು ತೂರುತ್ತಿದ್ದಂತಹ ವ್ಯಕ್ತಿಯೊಬ್ಬನನ್ನು ಸೇನಾ ವಾಹನದ ಮುಂಭಾಗಕ್ಕೆ ಕಟ್ಟಿ ವಾಹನವನ್ನು ಚಲಾಯಿಸಿದ್ದ. ಅತ್ತ ಕಲ್ಲು ತೂರುವವರುಕಲ್ಲನ್ನು ಎಸೆಯಲಾಗದೆ ತೆಪ್ಪಗೆ ಕುಳಿತ್ತಿದ್ದರು. ತುಸುದೂರದ ನಂತರ ಆತನನ್ನು ಕೆಳಗಿಳಿಸಿ ಸೈನಿಕ ಕಲ್ಲು ತೂರುವವರಿಂದ ಬಚಾವಾಗಿ ಬಂದಿದ್ದ. ಈ ವಿಷಯವನ್ನೇ ದೊಡ್ಡದಾಗಿಸಿದ ಮಾನವ ಹಕ್ಕುಗಳ ಆಯೋಗದವರು ಸೈನಿಕನ ಮೇಲೆ ಮುಗಿಬಿದ್ದರು. ಇವರ್ಯಾರಿಗೂ ಸೈನಿಕನ ಜೀವದ ಬಗ್ಗೆ ಚಿಂತೆಯಿರಲಿಲ್ಲ. ಬದಲಾಗಿ ಕಲ್ಲು ತೂರುತ್ತಿದ್ದವನ ಮೇಲೆ ಅನುಕಂಪವಿತ್ತು. ಆದರೆ ಬಿಪಿನ್ ರಾವತ್ ಸೈನಿಕನ ದಿಟ್ಟತನವನ್ನು ಮೆಚ್ಚಿ ಬಹಿರಂಗವಾಗಿ ಆತನ ಕಾರ್ಯವನ್ನುಕೊಂಡಾಡಿದ್ದರು. ಸೈನಿಕರ ಜೀವಗಳಿಗೆ ಬೆಲೆ ನೀಡದ ಎಡಬಿಡಂಗಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದರು.
ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ದೇಶದ್ರೋಹಿಗಳ ವಿರುದ್ಧ ನಿಲ್ಲುವವರ ವಿರುದ್ಧ ಗುಡುಗಿದ್ದರು. ಭಾರತೀಯ ಸೈನ್ಯ ಹಾಗೂ ಸೈನಿಕರೆಂದರೆ ಅವರಿಗೆಎಲ್ಲಿಲ್ಲದ ಪ್ರೀತಿ. ಭಾರತೀಯ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ವಿಷಯಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ಮುಂಚೂಣಿಯಲ್ಲಿದ್ದರು, ಅವರ ಅಕಾಲಿಕ ಮರಣ ಇಡೀ ಭಾರತವನ್ನೇ ದಿಗ್ಭ್ರಮೆಯಲ್ಲಿಡಿಸಿದೆ. ಆಂತರಿಕ ಶತ್ರುಗಳು ಮಾತ್ರ ಅವರ ಸಾವನ್ನು ಸಂಭ್ರಮಿಸುತ್ತಿರುವುದು ಅಂಥವರ ದೀವಾಳಿತನ ತೋರಿಸುತ್ತದೆ. ನ್ಯಾಷನಲ್ ಹೆರಾಲ್ಡ ಪತ್ರಿಕೆಯ ಸಂಪಾದಕಿ ಆಶ್ಲೀನ್ ಮ್ಯಾತ್ಯು ‘ ’ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಸಹ್ಯಕರ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ.
ಕರ್ನಲ್ ಬಲಜಿತ್ ಬಕ್ಷಿ ’        ’ ಎಂದು ಟ್ವೀಟ್ ಮಾಡುವ ಮೂಲಕ ಭಾರತದ ವೀರಪುತ್ರನಿಗೆ ಅವಮಾನ ಮಾಡಿದ್ದಾರೆ, ಜಿಹಾದಿ ಮನಸ್ಥಿತಿಯ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕೆಟ್ಟ ಸಂದೇಶಗಳ ಮೂಲಕ ಮತ್ತೊಮ್ಮೆ ತಾವು ರಾಷ್ಟ್ರ ವಿರೋಧಿಗಳೆಂಬುದನ್ನು ಸಾಬೀತುಪಡಿಸಿzರೆ. ಬಾಹ್ಯ ಶತ್ರುಗಳಿಗಿಂತಲೂ ಆಂತರಿಕ ಶತ್ರುಗಳು ಭಾರತಕ್ಕೆ ಅತ್ಯಂತ ಅಪಾಯಕಾರಿ. ಬಿಪಿನ್ರಾವತ್‌ರ ಸಾವಿನಲ್ಲಿ ಪಿತೂರಿ ಇರಬಹುದೆಂದು ಹಲವರು ಅನುಮಾನ ವ್ಯಕ್ತ ಪಡಿಸಿದ್ದಾರೆ.
ಒಂದೊಮ್ಮೆ ಇದು ನಿಜವಾಗಿದ್ದು ತನಿಖೆಯ ಮೂಲಕ ಇದು ಬಯಲಾದರೆ ಖಂಡಿತವಾಗಿಯೂ ಇಂಥ ಆಂತರಿಕ ಶತ್ರುಗಳ ಪಾಲೂ ಅದರಲ್ಲಿರುವುದನ್ನು ಅಲ್ಲ ಗಳೆಯಲಾಗುವುದಿಲ್ಲ. ಒಂದಷ್ಟು ನಾಯಿಗಳು ಸಂತೋಷಪಟ್ಟ ಮಾತ್ರಕ್ಕೆ ಬಿಪಿನ್ ರಾವತ್‌ರ ಆತ್ಮಕ್ಕೆ ಚ್ಯುತಿಯಾಗುವುದಿಲ್ಲ. ಕೋಟ್ಯಂತರ ಭಾರತೀಯರುಬಿಪಿನ್ ರಾವತ್‌ರ ದೇಶಸೇವೆಯನ್ನು ಶತಮಾನಗಳ ಕಾಲ ಮರೆಯುವುದಿಲ್ಲ.