ಸೇನಾ ಸಾಮರಸ್ಯ: ರಾವತ್‌ ಸಾಧನೆ ಅನುಸರಣೀಯ
ಸ್ಮರಣೆ
ಸಿ.ಉದಯಭಾಸ್ಕರ್‌
ಭಾರತದ ಮೂರೂ ಸೇನಾದಳಗಳ ಮೊತ್ತಮೊದಲ ಮುಖ್ಯಸ್ಥನಾಗಿ ಮಹತ್ವದ ಜವಾಬ್ದಾರಿ ಹೊತ್ತಿದ್ದ ಅವರು ಸಮನ್ವಯಾಧಿಕಾರಿಯಾಗಿ ಮಿಲಿಟರಿ ಕ್ಷೇತ್ರದಲ್ಲಿ ಅನನ್ಯ ಸಾಧನೆಯನ್ನು ಮಾಡಿದ್ದರು. ಅವರ ಕಾರ್ಯಕ್ಷಮತೆ ಅವಿಸ್ಮರಣೀಯ, ಅದನ್ನು ಮುಂದುವರಿಸಿಕೊಂಡು ಹೋಗಬೇಕಿದೆ.
ಜನರಲ್ ಬಿಪಿನ್ ರಾವತ್ ಅಕಾಲಿಕ ಸಾವು ಇಡೀ ದೇಶವನ್ನು ಆಘಾತಕ್ಕೆ ತಳ್ಳಿದೆ. ಸಂಯುಕ್ತವಾಗಿ ಮಿಲಿಟರಿ ಪಡೆಗಳನ್ನು ಸಂಘಟಿಸುವ ದಿಸೆಯಲ್ಲಿ ಅತಿ ಸೂಕ್ಷ್ಮ ಕಾರ್ಯನೀತಿಗಳು ರೂಪಿತವಾಗುತ್ತಿದ್ದ ಸಂದರ್ಭದಲ್ಲಿಯೇ ಇಂಥದ್ದೊಂದು ಘಟನೆ ಸಂಭಸಿರುವುದು ದುರಂತ.
ಜನರಲ್ ರಾವತ್ ಅವರು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಆಗಿ ಜನವರಿ ೧, ೨೦೨೦ರಲ್ಲಿ ನೇಮಕಗೊಂಡರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೊಂದು ಮಹತ್ವದ ಹೆಜ್ಜೆ. ಅದಕ್ಕೂ ಮೊದಲು, ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯ ಮುಖ್ಯಸ್ಥರು ಪ್ರತ್ಯೇಕವಾಗಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ರಮ ಚಾಲ್ತಿಯಲ್ಲಿತ್ತು. ಹೊಸದಾಗಿ ನೇಮಕವಾಗಿದ್ದ ಸಿಡಿಎಸ್ ಅವರು ಮಿಲಿಟರಿ ಮತ್ತು ಅಧಿಕಾರ ವಲಯದಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿರುತ್ತಾರೆ. ಜತೆಗೆ ಅವರು ಮಿಲಿಟರಿ ಸಂಬಂಧಿತ ಇಲಾಖೆಯ ಕಾರ್ಯದರ್ಶಿಯಾಗಿಯೂ ಆಗಿರುತ್ತಾರೆ. ಈ ಹುದ್ದೆಗೆ ಆರ್ಥಿಕ ವಿಚಾರಗಳ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ದತ್ತವಾಗಿರುವುದು ಇನ್ನೊಂದು ವಿಶೇಷ.
ಏಕಕಾಲದಲ್ಲಿ ಸಿಡಿಎಸ್ ಅವರಿಗೆ ಫೈರ್ ಸ್ಟಾರ್ ಅಧಿಕಾರಿಯ ಮಾನ್ಯತೆ ಕೊಡಲಾಗಿದ್ದು, ಅವರು ಮೂರೂ ನಾ ವಿಭಾಗಗಳ ಮುಖ್ಯಸ್ಥರಷ್ಟೇ ಪ್ರಮುಖರಾಗಿದ್ದು, ವರೆಲ್ಲರನ್ನೂ ಸಂಘಟಿಸಿ ಮುನ್ನಡೆಸುವ ಹೆಚ್ಚುವರಿ ಹೊಣೆ ಗಾರಿಕೆ ಇದೆ. ಸೇನೆಯ ಮೂರೂ ಭಾಗಗಳ ಅಧ್ಯಕ್ಷ ಸ್ಥಾನ ಈ ಸಿಡಿಎಸ್ ಅವರದ್ದಾಗಿರುವುದು ವಿಶೇಷ. ಜತೆಗೆ ಅವರು ದೇಶದ ರಕ್ಷಣಾ ಸಚಿವರಿಗೆ ಪ್ರಧಾನ ಸಲಹೆಗಾರರಾಗಿಯೂ ಕಾರ್ಯನಿರ್ವಸುತ್ತಾರೆ ಮತ್ತು ಆ ಮೂಲಕ ವಾಗಿ ರಾಜಕೀಯ ನಾಯಕತ್ವ ಕ್ಷೇತ್ರದೊಂದಿಗೆ ಏಕೀಕೃತವಾದ ಮಿಲಿಟರಿ ಸಂವಹನಾಧಿಕಾರಿಯಾಗಿಯೂ ಕೆಲಸ ಮಾಡುತ್ತಾರೆ. ಇಲ್ಲಿನ ಶ್ರೇಣೀಕೃತ ಆಡಳಿತ ವ್ಯವಸ್ಥೆಯಲ್ಲಿ ಕೆಲ ಗೊಂದಲಗಳೂ ಸೃಷ್ಟಿಯಾಗಿವೆ.
ರಕ್ಷಣಾ ಮಂತ್ರಾಲಯದಲ್ಲಿ ಈಗಾಗಲೇ ಒಬ್ಬ ಡಿಫೆನ್ಸ್ ಸೆಕ್ರೆಟರಿ ಇದ್ದಾರೆ. ಆದರೆ ಈ ಹೊಸ ನೇಮಕದ ನಂತರದಲ್ಲಿ ಸಿಡಿಎಸ್ ಅವರು ರಕ್ಷಣಾ ಸಚಿವಾಲಯದ ಡಿಫೆನ್ಸ್ ಸೆಕ್ರೆಟರಿಗಿಂತ ಜ್ಯೇಷ್ಠತೆಯನ್ನು ಹೊಂದಿರುತ್ತಾರೆ. ಹೀಗಾಗಿ ಮೂರೂ ಸೇನಾ ಪ್ರಮುಖರು ಮತ್ತು ರಕ್ಷಣಾ ಕಾರ್ಯದರ್ಶಿಯ ಹುದ್ದೆ ಇರುವಾಗ ಸಿಡಿಎಸ್ ಹುದ್ದೆ ಅಸಂಗತ ಮತ್ತು ಅನಗತ್ಯ ಎಂಬ ಅಭಿಪ್ರಾಯವೂ ಕೇಳಿಬಂದದ್ದಿದೆ. ಸಿಡಿಎಸ್ ಅವರು ಅಧಿಕಾರ ವಸಿಕೊಂಡ ನಂತರದ ಕೆಲವರ್ಷಗಳಲ್ಲಿ ಈ ಎಲ್ಲವಿಚಾರಗಳು ತಿಳಿಯಾಗುತ್ತವೆ ಎಂಬ ನಂಬಿಕೆ ಎಲ್ಲರಲ್ಲಿತ್ತು.
೧೯೯೯ರ ಕಾರ್ಗಿಲ್ ಯುದ್ಧದ ನಂತರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರ ಇದ್ದಾಗ, ಮೂರೂ ಸೇನಾದಳಗಳ ಸಾಮರ್ಥ್ಯ ವೃದ್ಧಿಯ ನಿಟ್ಟಿನಲ್ಲಿ ಕೆಲವೊಂದು ನೀತಿನಿರೂಪಣೆಗಳನ್ನು ಮಾಡಲಾಗಿತ್ತು. ಕೆಲವೊಂದು ಕಾರಣಗಳಿಂದ ಮೂರೂ ಸೇನಾದಳಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಚರ್ಚೆ-ಸಂವಹನ ಗಳಲ್ಲಿಯೇ ಎರಡು ದಶಕಗಳ ಕಾಲ ಕಳೆದುಹೋಯಿತು. ನರೇಂದ್ರ ಮೋದಿಯವರ ನಾಯಕತ್ವದ ಎರಡನೇ ಅವಧಿಯಲ್ಲಿ ಅದು ಜಾರಿಗೆ ಬರುವುದು ಸಾಧ್ಯ ವಾಯ್ತು. ಹೀಗಾಗಿ ಸಿಡಿಎಸ್ ಹುದ್ದೆ ಸ್ಥಾಪಿತವಾದದ್ದು ಒಂದು ಮಹತ್ವದ ನಿರ್ಧಾರವಾಗಿತ್ತು.
ಈ ಹುದ್ದೆಗೆ ನಿಗದಿಯಾಗಿದ್ದ ಹೊಣೆಗಾರಿಕೆಗಳು ವಸ್ತುನಿಷ್ಠವಾಗಿದ್ದವು. ಮೂರೂ ಸೇನಾ ಭಾಗಗಳಲ್ಲಿ ಸಮನ್ವಯ ಸಾಧನೆ, ನೇಮಕ, ತರಬೇತಿ ಮತ್ತು ನಿಯೋಜನೆಯನ್ನು ಸಂಯುಕ್ತವಾಗಿ ಮಾಡುವುದೂ ಸೇರಿದಂತೆ ಯೋಜನೆ, ಅನುಷ್ಠಾನ, ತಂತ್ರಜ್ಞಾನದ ಬಳಕೆ, ಸಂಯುಕ್ತವಾದ ಥಿಯೇಟರ್ ಕಮಾಂಡ್ ಸೇರಿದಂತೆ ಎಲ್ಲ ವಿಚಾರಗಳಲ್ಲಿ ಏಕೀಕರಣ ಸಾಧನೆ ಮಾಡಬೇಕೆಂಬ ನಿಯಮವಿದೆ. ಜತೆಗೆ ಸ್ವದೇಶಿ ತಂತ್ರಜ್ಞಾನದಿಂದ ರೂಪಿತವಾದ ಸಾಧನಗಳ ಬಳಕೆಗೂ ಒತ್ತು ಕೊಡುವ ನಿಟ್ಟಿನಲ್ಲಿ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.
ಇದೊಂದು ಬಗೆಯ ಕಠಿಣ ಸವಾಲು. ಮಿಲಿಟರಿ ಸಂಸ್ಥಾಪನೆಯ ಹಲವು ಸ್ತರಗಳ ಅಂದರೆಶಸಸಜ್ಜಿತ ಯೋಧರು, ಅನ್ಯ ಸಿಬ್ಬಂದಿವರ್ಗ, ಸಂಶೋಧನಾ ವಿಭಾಗ ಹೀಗೆ ಎಲ್ಲ ಕಡೆಯಲ್ಲಿ ಸಮನ್ವಯ ಸಾಽಸುವುದು ಸಣ್ಣಮಾತಲ್ಲ. ಏಕೆಂದರೆ ಮಿಲಿಟರಿಯಲ್ಲಿ ಕೆಲವು ಸಂಗತಿಗಳು ಈಗಲೂ ವಸಾಹತುಶಾಹಿ ಪರಂಪರೆಯ ದಿನಗಳ ಪಡಿಯಚ್ಚಿನಂತೆಯೇ ಕಾರ್ಯನಿರ್ವಸುತ್ತಿವೆ. ಅವುಗಳಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಕಷ್ಟದ ಕೆಲಸವೇ ಸರಿ. ಹೀಗಾಗಿ ರಾವತ್ ಅವರ ಮುಂದೆ ಬೃಹತ್ತಾದ ಸವಾಲುಗಳ ಸರಮಾಲೆಯೇ ಇತ್ತು. ಅವರಲ್ಲಿ ಈ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಬದ್ಧತೆ ಇತ್ತು.
ಭಾರತದ ಮಿಲಿಟರಿಯ ಭೂಸೇನೆ-ವಾಯುದಳ ಮತ್ತು ನೌಕಾದಳದಲ್ಲಿ ನೇಮಕವಾಗಿರುವ ಸಿಬ್ಬಂದಿಯ ಅನುಪಾತ ೨೦:೨:೧ ರ ಲೆಕ್ಕಾಚಾರದಲ್ಲಿದ್ದು ಅದರಲ್ಲಿಯೂ ವಿವಿಧ ಸೇವಾ ವಿಭಾಗಗಳಿವೆ ಮತ್ತು ಅವುಗಳನ್ನು ಮತ್ತೆ ೧೭ ವಿಭಿನ್ನ ಕಮಾಂಡ್‌ಗಳಲ್ಲಿ ವಿಂಗಡಿಸಲಾಗಿದೆ. ಒಟ್ಟಾರೆಯಾಗಿ ಭಾರತದ ಸೇನಾ ಭಾಗದಲ್ಲಿ ಭೂಸೇನೆ ದೊಡ್ಡ ಪ್ರಮಾಣ ದ್ದಾಗಿದ್ದು ಅದರಲ್ಲಿ ೧೨ ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ವ್ಯವಸ್ಥೆಗಳ ಪುನರ್ ಸಂಘಟನೆ ಮತ್ತು ಹೊಸ ಸ್ವರೂಪವನ್ನು ಕೊಡುವ ಕೆಲಸವನ್ನು ರಾವತ್ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಭೌಗೋಳಿಕವಾಗಿ ಬೇರೆ ಬೇರೆ ಕಡೆಗಳಲ್ಲಿ ಹರಿದುಹಂಚಿ ಹೋಗಿರುವ ಮಿಲಿಟರಿ ಕ್ಷೇತ್ರಗಳನ್ನು ಸಂಘಟಿತವಾಗಿ ಥಿಯೇಟರ್ ಕಮಾಂಡ್ ಗಳಾಗಿ ವಿಂಗಡಿಸುವ ಕೆಲಸದಲ್ಲಿ ಅವರು ವ್ಯಸ್ತರಾಗಿದ್ದರು. ಉದಾಹರಣೆಗೆ ಹೇಳಬೇಕೆಂದರೆ ಭಾರತೀಯ ಮಿಲಿಟರಿಗೆ ಪೂರ್ವಭಾಗದಲ್ಲಿ ಮೂರು ಕಮಾಂಡ್‌ಗಳಿವೆ. ಆ ಪೈಕಿ ಭೂಸೇನೆಯ ಕೇಂದ್ರ ಕೋಲ್ಕತಾದಲ್ಲಾದರೆ, ವಾಯುಸೇನೆಯ ಕೇಂದ್ರ ಶಿಲ್ಲಾಂಗ್ ನಲ್ಲಿದೆ.
ನೌಕಾಪಡೆಯ ಕೇಂದ್ರ ವಿಶಾಖಪಟ್ಟಣದಲ್ಲಿದೆ. ಹೊಸದಾಗಿ ರೂಪಿತವಾಗಬೇಕಿದ್ದ ಚೌಕಟ್ಟಿನಲ್ಲಿ ನೌಕಾಪಡೆಯನ್ನು ಏಕೀಕೃತವಾದ ಒಂದು ಕಡಲಪಡೆಯ ಅಡಿಯಲ್ಲಿ ಸಂಘಟಿಸಬೇಕಾಗಿತ್ತು ಮತ್ತು ವಾಯುಸೇನಾ ಭಾಗಗಳನ್ನು ಕೂಡ ಒಂದೇ ಛತ್ರಿಯಡಿಯಲ್ಲಿ ನಿಯಂತ್ರಿಸುವಂತಾಗಬೇಕಿತ್ತು. ಚೈನಾ ಮತ್ತು ಪಾಕಿಸ್ತಾನಗಳು ಭೂಭಾಗದ ಗಡಿ ಪ್ರದೇಶಗಳಲ್ಲಿ ಆಗಿಂದಾಗ್ಯೆ ಮಾಡುತ್ತಿರುವ ದಾಂಧಲೆಗಳನ್ನು ಹತ್ತಿಕ್ಕಲು ಎರಡು ಥಿಯೇಟರ್ ಕಮಾಂಡ್ ಗಳ ಸ್ಥಾಪನೆಮತ್ತು ಒಟ್ಟಾರೆಯಾಗಿ ಸೇನಾ ಚೌಕಟ್ಟಿಗೆ ಹೊಸ ಸ್ವರೂಪವನ್ನು ಕೊಡುವ ಕೆಲಸ ಪ್ರಗತಿಯಲ್ಲಿತ್ತು.
ಜನರಲ್ ರಾವತ್ ಅವರು ಸೇನಾ ಭಾಗಗಳನ್ನು ಒಟ್ಟುಗೂಡಿಸುವಲ್ಲಿ ತೋರಿದ್ದ ಉತ್ಸುಕತೆ ಮತ್ತು ಮಿಲಿಟರಿಯನ್ನು ಆಧುನೀಕರಿಸುವಲ್ಲಿ ಅವರಿಗಿದ್ದ ಒಳನೋಟ ವಿಶೇಷವಾಗಿತ್ತು. ಇತಿಹಾಸ ಬಿಪಿನ್ ರಾವತ್ ಅವರನ್ನು ಒಬ್ಬ ಶ್ರದ್ಧಾವಂತ ಸೇನಾನಿಯಾಗಿ ಗುರುತಿಸುತ್ತದೆ ಮತ್ತು ಮಿಲಿಟರಿಯನ್ನು ವಿಶೇಷರೀತಿಯಲ್ಲಿಸಜ್ಜುಗೊಳಿಸುವಲ್ಲಿ ಅವರು ಹೊಂದಿದ್ದ ದೂರದೃಷ್ಟಿ ದೀರ್ಘ ಕಾಲ ನೆನಪಿನಲ್ಲಿಯುಳಿಯುತ್ತದೆ. ಅವರು ಪ್ರಾರಂಭಿಸಿದ ಪ್ರಗತಿ ಕಾರ್ಯ ಸಾಽತವಾಗಲಿದೆ.
(ಲೇಖಕರು ನಿವೃತ್ತ ಕೊಮೊಡೋರ್ ಮತ್ತು ಸೊಸೈಟಿ ಫಾರ್ ಪಾಲಿ ಸ್ಟಡೀಸ್‌ನ ನಿರ್ದೇಶಕರು)